Tag: vote

  • ಕರ್ನಾಟಕದಲ್ಲಿ 50.93% ವೋಟಿಂಗ್‌ – ಎಂದಿನಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನ

    ಕರ್ನಾಟಕದಲ್ಲಿ 50.93% ವೋಟಿಂಗ್‌ – ಎಂದಿನಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನ

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಧ್ಯಾಹ್ನ 3 ಗಂಟೆಯ ವೇಳೆಗೆ 50.93% ಮತದಾನ (Vote) ನಡೆದಿದೆ. ಬೆಂಗಳೂರಿನ (Bengaluru) 4 ಕ್ಷೇತ್ರ ಹೊರತು ಪಡಿಸಿದ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ 50% ಗಡಿ ದಾಟಿದೆ.

    ಬೆಂಗಳೂರು ಗ್ರಾಮೀಣ 49.62%, ಬೆಂಗಳೂರು ಉತ್ತರ 41.12%, ಬೆಂಗಳೂರು ಕೇಂದ್ರ 40.10%, ಬೆಂಗಳೂರು ದಕ್ಷಿಣ 40.77% ಮತದಾನ ದಾಖಲಾಗಿದೆ. ಇದನ್ನೂ ಓದಿ: ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ

    ದಕ್ಷಿಣ ಕನ್ನಡದಲ್ಲಿ 58.76%, ಉಡುಪಿ- ಚಿಕ್ಕಮಗಳೂರು 57.49% ಮತದಾನ ನಡೆದಿದೆ. ಆರಂಭದಿಂದಲೂ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿಯಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ.

    ಮಧ್ಯಾಹ್ನವಾದ ಕಾರಣ ಮತಗಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು, ಸಂಜೆಯಾಗುತ್ತಿದ್ದಂತೆ ಮತದಾನ ಮತ್ತಷ್ಟು ಬಿರುಸುಗೊಳ್ಳಲಿದೆ.

  • ಮನೆಯಲ್ಲಿ ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದ ವೃದ್ಧೆ

    ಮನೆಯಲ್ಲಿ ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದ ವೃದ್ಧೆ

    ಉಡುಪಿ: ಮನೆಯಲ್ಲಿ ಮತದಾನ (Vote) ಮಾಡಿ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆ (Old Woman) ಮೃತಪಟ್ಟ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ.

    ಪಿ.ಯಶೋಧಾ ನಾರಾಯಣ ಉಪಾಧ್ಯ (83) ಮೃತಪಟ್ಟ ಹಿರಿಯ ಮಹಿಳೆ. ಉಡುಪಿ ಜಿಲ್ಲೆಯ ಬ್ರಹ್ಮಾವರ (Bramhavar) ತಾಲೂಕಿನ ಸಾಸ್ತಾನ ಪಾಂಡೇಶ್ವರ ನಿವಾಸಿಯಾಗಿರುವ ಯಶೋಧಾ, ಚಡಗರ ಅಗ್ರಹಾರದ ನಿವಾಸಿಯಾಗಿದ್ದಾರೆ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿರುವ ಅವರು, ತನ್ನ ಜೀವನದಲ್ಲಿ ಎಲ್ಲಾ ಚುನಾವಣೆಗಳಲ್ಲೂ ತಪ್ಪದೆ ಹಕ್ಕು ಚಲಾಯಿಸಿದ್ದಾರೆ. ಇದನ್ನೂ ಓದಿ: ಡಿ.ಕೆ.ಸುರೇಶ್‌ ಆಪ್ತನ ಮನೆ ಮೇಲೆ ಐಟಿ ದಾಳಿ

    ಈ ಬಾರಿ ಹಿರಿಯ ನಾಗರಿಕರ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು. ಬೆಳಗ್ಗೆಯಿಂದ ಕೊಂಚ ಎದೆನೋವು ಇತ್ತು ಎಂದು ಮನೆಯವರ ಬಳಿ ಹೇಳಿಕೊಂಡಿದ್ದರು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳುವುದಾಗಿ ಹೇಳಿದ್ದ ಮಹಿಳೆ ಯಶೋಧಾ ಅವರನ್ನು ಮತ ಪ್ರಕ್ರಿಯೆ ಮುಗಿದ ಮೇಲೆ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ಕೊತ್ವಾಲ್ ಬ್ರದರ್ಸ್ ‘ಆ ದಿನಗಳ’ ಗೂಂಡಾಗಿರಿ ಮುಂದುವರೆಸಿದ್ದಾರೆ: ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ

    ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋಧಮ್ಮ ಕೊನೆಯುಸಿರೆಳೆದಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚುನಾವಣಾ ಪ್ರಕ್ರಿಯೆ ತನ್ಮ ಹಕ್ಕು ಚಲಾಯಿಸಬೇಕೆಂಬ ಆಸೆಯನ್ನು ಪೂರ್ತಿಗೊಳಿಸಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ: ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ‌ಮಾಡಿದ್ದೇನೆ: ಈಶ್ವರಪ್ಪ

  • ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ- ವಿಧಾನಸೌಧದಲ್ಲಿ ಸಿದ್ಧತೆ ಹೇಗಿದೆ?

    ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ- ವಿಧಾನಸೌಧದಲ್ಲಿ ಸಿದ್ಧತೆ ಹೇಗಿದೆ?

    ಬೆಂಗಳೂರು: ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ ನಡೆಯಲಿದೆ. ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

    ಮೂರು ಪಕ್ಷಗಳಿಗೂ ರಾಜ್ಯಸಭೆ ಚುನಾವಣೆ (Rajyasabha Election) ಅಗ್ನಿ ಪರೀಕ್ಷೆ ಎದುರಾಗಿದೆ. 3 ಪಕ್ಷಗಳಿಗೆ ಅಡ್ಡ ಮತದಾನದ ಭೀತಿ ಶುರುವಾಗಿದೆ. 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 223 ಶಾಸಕರಿಂದ ಮತದಾನ ಆಗಲಿದೆ. ಇದನ್ನೂ ಓದಿ: ಕುತೂಹಲ ಘಟ್ಟದಲ್ಲಿ ರಾಜ್ಯಸಭಾ ಚುನಾವಣೆ – ನಂಬರ್‌ ಗೇಮ್‌ ಹೇಗಿದೆ? ಕಾಂಗ್ರೆಸ್‌, ದೋಸ್ತಿಗಳ ಲೆಕ್ಕಾಚಾರ ಏನು?

    ಸಿದ್ಧತೆ ಹೇಗಿದೆ..?: ಮತದಾನಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಬಿಗಿ ಭದ್ರತೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮತದಾನ ಕೊಠಡಿ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಮತದಾನ ಕೊಠಡಿಯೊಳಗೆ ಏಜೆಂಟ್ ಗಳಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಗುತ್ತಿದೆ. ಶಾಸಕರು ತಮ್ಮ ಪಕ್ಷದ ಏಜೆಂಟರಿಗೆ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಮತದಾನ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ಮತದಾನ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್  ಮಾಡಿಕೊಳ್ಳಲಾಗುತ್ತದೆ.

    ಅಖಾಡದಲ್ಲಿ ಯಾರೆಲ್ಲಾ ಇದ್ದಾರೆ..?: ರಾಜ್ಯಸಭೆ ಅಖಾಡದಲ್ಲಿ ಕಾಂಗ್ರೆಸ್‍ನಿಂದ (Congress) ಅಜಯ್ ಮಾಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಸ್ಪರ್ಧೆ ಮಾಡ್ತಿದ್ದಾರೆ. ಬಿಜೆಪಿಯಿಂದ (BJP) ನಾರಾಯಣಸಾ ಬಾಂಡಗೆ ಸ್ಪರ್ಧೆ ಮಾಡ್ತಿದ್ದು, 5ನೇ ಅಭ್ಯರ್ಥಿಯಾಗಿ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ. ಮತಗಳ ಆಧಾರದಲ್ಲಿ ಕಾಂಗ್ರೆಸ್‍ಗೆ 3 ಸ್ಥಾನ, ಬಿಜೆಪಿಗೆ 1 ಸ್ಥಾನ ಬರುವುದು ಖಚಿತ ಎನ್ನಲಾಗಿದೆ. ಆದ್ರೆ ಕಾಂಗ್ರೆಸ್‍ನಲ್ಲಿ ಅಡ್ಡ ಮತದಾನವಾದರೆ ಮೈತ್ರಿ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ಶುರುವಾಗಿದೆ.‌

    ಹೋಟೆಲ್‌ನಲ್ಲಿ ತಂಗಿದ್ದ ಶಾಸಕರು: ಇತ್ತ ರಾಜ್ಯ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಿಲ್ಟನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಶಾಸಕಾಂಗ ಸಭೆ ಮುಗಿಸಿ ಕೆಲ ಶಾಸಕರು ರಾತ್ರಿಯೇ ಮನೆಗೆ ತೆರಳಿದ್ದು, ಇಂದು ಬೆಳಗ್ಗೆ ಹಿಲ್ಟನ್ ಹೋಟೆಲ್ ಗೆ ವಾಪಾಸ್ ಆಗುತ್ತಿದ್ದಾರೆ. ಬೆಳಗ್ಗಿನ ಉಪಹಾರದ ನಂತರ ಬಸ್ ಮುಖಾಂತರ ಶಾಸಕರು ವಿಧಾನಸೌಧಕ್ಕೆ ತೆರಳಲಿದ್ದಾರೆ.

  • Rajya Sabha Elections: 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27 ರಂದು ಚುನಾವಣೆ

    Rajya Sabha Elections: 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27 ರಂದು ಚುನಾವಣೆ

    – ಏ. 2ಕ್ಕೆ ಕರ್ನಾಟಕದ ನಾಲ್ಕು ಸದಸ್ಯರ ಅವಧಿ ಮುಕ್ತಾಯ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗವು (Election Commission Of India) 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಇಂದು ದಿನಾಂಕವನ್ನು ಪ್ರಕಟಿಸಿದೆ.

    ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. 56 ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2024 ರಲ್ಲಿ ಅವರ ನಿವೃತ್ತಿಯ ಮೇಲೆ ಮುಕ್ತಾಯಗೊಳ್ಳಲಿದೆ. ಕರ್ನಾಟಕ ಸೇರಿ ಒಟ್ಟು 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ 2ರಂದು ಮುಗಿಯಲಿದ್ದರೆ, ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಏಪ್ರಿಲ್‌ 3ರಂದು ನಿವೃತ್ತರಾಗಲಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಜಿ.ಸಿ ಚಂದ್ರಶೇಖರ್, ಎಲ್ ಹನುಮಂತಯ್ಯ, ನಾಸೀರ್ ಹುಸೇನ್, ರಾಜೀವ್ ಚಂದ್ರಶೇಖರ್ ಅವರ ಅವಧಿ ಅಂತ್ಯವಾಗಲಿದೆ.

    ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಚುನಾವಣೆಗೆ ಫೆ.8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆ.15 ಕೊನೆಯ ದಿನವಾಗಿದೆ. ಫೆ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 27 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ನಡುವೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

    ಚುನಾವಣೆ ನಡೆಯುವ ಸ್ಥಾನಗಳ ಸಂಖ್ಯೆ: ಆಂಧ್ರಪ್ರದೇಶ: 3, ಬಿಹಾರ್:‌ 6, ಛತ್ತೀಸ್‌ಗಢ: 1, ಗುಜರಾತ್‌: 4, ಹರಿಯಾಣ: 1, ಹಿಮಾಚಲಪ್ರದೇಶ: 1, ಕರ್ನಾಟಕ: 4, ಮಧ್ಯಪ್ರದೇಶ: 5, ಮಹಾರಾಷ್ಟ್ರ: 6, ತೆಲಂಗಾಣ: 3, ಉತ್ತರಪ್ರದೇಶ: 10, ಉತ್ತರಾಖಂಡ್:‌ 1, ಪಶ್ಚಿಮಬಂಗಾಳ: 5, ಒಡಿಶಾ: 3, ರಾಜಸ್ಥಾನ: 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

  • ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ಬೆಂಗಳೂರು: ತೆಲಂಗಾಣದಲ್ಲಿ (Telangana) ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ (Code Of Conduct) ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

    ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಜಾಹೀರಾತಿನ (Advertising) ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ (Congress) ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಅವರು ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:  3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲಾ: ಸಿ.ಟಿ ರವಿ

    ನಾವು ಪತ್ರಿಕೆ ಹಾಗೂ ಮ್ಯಾಗಜಿನ್‌ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳಿಗೆ 2 ಸಾವಿರ ಕೋಟಿ ಅನುದಾನ: ಡಿಕೆಶಿ

    ನಿಗಮ ಮಂಡಳಿ ನೇಮಕ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಕೂಡ ಸಭೆ ಮಾಡಿ ಪಟ್ಟಿಯನ್ನು ದೆಹಲಿಗೆ ರವಾನಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ

  • ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಬೆಂಗಳೂರು: ಈ ಬಾರಿ ವಿಧಾನಸಭೆಯಲ್ಲಿ ಜೆಡಿಎಸ್‌ಗೆ (JDS) ಸೋಲು ಆಗಿದ್ದು ಮುಸ್ಲಿಂ ಮತಗಳಿಂದ (Muslim Vote) ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಮುಸ್ಲಿಮರಿಂದ ಜೆಡಿಎಸ್‌ಗೆ ಸೋಲು ಆಗಿಲ್ಲ. ಈ ಬಾರಿ ಹಳ್ಳಿಗಾಡಿನ ಜನ ಜೆಡಿಎಸ್ ಬಿಟ್ಟು ಹೋದರು. ಕಳೆದ ಬಾರಿ 38 ಸೀಟು ಬಂದಿದ್ದಾಗ ಒಂದು ಮುಸ್ಲಿಂ ವೋಟ್ ಬಂದಿರಲಿಲ್ಲ. ಈಗ 13% ಮುಸ್ಲಿಂ ವೋಟ್ ಬಂದಿದ್ದರು 19 ಸೀಟು ಮಾತ್ರ ಬಂದಿದೆ. ಹಾಗಾದರೆ 20 ಸೀಟು ಯಾವುವು? ಯಾವ ವೋಟ್ ಜೆಡಿಎಸ್ ಬಿಟ್ಟು ಹೋಯ್ತು? ಇದರ ಬಗ್ಗೆ ಚರ್ಚೆ ಆಗಬೇಕು ಎಂದರು.

    ಕಳೆದ ಬಾರಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ 22 ಸಾವಿರ ವೋಟ್‌ನಿಂದ ಗೆದ್ದಿದ್ದರು. ಒಂದೇ ಒಂದು ಮುಸ್ಲಿಮರ ವೋಟ್ ಬಿದ್ದಿರಲಿಲ್ಲ. ಈ ಬಾರಿ ನಿಖಿಲ್‌ಗೆ 3400 ಮುಸ್ಲಿಮರ ವೋಟ್ ಬಿದ್ದಿದ್ದರೂ ಸೋತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗ್ರಾಮಾಂತರದಲ್ಲಿ ಕಡಿಮೆ ಆದಾಗ ನಗರದಲ್ಲಿ ಕೊಟ್ಟಿದ್ದಾರೆ. ಕೆಲವು ಬಾರಿ ಸಮುದಾಯದವರು ಮತ ಕೊಡ್ತಾರೆ. ದಲಿತರು, ಕುರುಬರು ಕೊಟ್ಟಿಲ್ಲ. ಇದನ್ನು ಹೇಳೋದು ಸರಿಯಲ್ಲ. ಬಿಟ್ಟು ಹೋದ ಮತ ಹೇಗೆ ವಾಪಸ್ ಪಡೆಯಬೇಕು ಎಂಬುದನ್ನು ನೋಡಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿ ಸ್ಥಾಪನೆಗೆ ಮುಸ್ಲಿಂ ಸಂಘಗಳ ಪ್ರವಾಸ- ಸಿಎಂ ಇಬ್ರಾಹಿಂ

    ಈಗ ಜನ ಕಾಂಗ್ರೆಸ್‌ಗೆ ಮತ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದಾರೆ. ಡಿಕೆ ಶಿವಕುಮಾರ್ ನೋಡಿ ಮತ ಕೊಟ್ಟರು. ಈಗ ನಂಬಿಕೆ ದ್ರೋಹ ಆಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವರಿಗೇ ಗೊತ್ತಿರಲಿಲ್ಲ ಇಷ್ಟು ಮತ ಬರುತ್ತೆ ಅಂತ. ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಡದೇ ನಮ್ಮ ವಿರುದ್ಧ ಹೋರಾಡಿದರು. ಅದು ಸಮಸ್ಯೆ ಆಯ್ತು. 27 ಕಡೆ ಮೋದಿ ಹೋದರು. ಜೆಡಿಎಸ್ ಬಲ ಇರೋ ಕಡೆ ಮೋದಿ ಹೋಗಿ ಅವರ ತಲೆ ಮೇಲೆ ಅವರೇ ಕಲ್ಲು ಹಾಕಿಕೊಂಡರು. ಈಗ ನಮ್ಮನ್ನು ದೂರಿದ್ರೆ ಪ್ರಯೋಜನ ಏನು? ಎಂದು ಬಿಜೆಪಿ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಐ ಲವ್ ಮೋದಿ : ಸಿಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

    ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

    – ರಕ್ಷಣೆ ಕೇಳಿ ಈಶ್ವರಪ್ಪ ಕಾಲಿಗೆ ಬಿದ್ದ ಹರೀಶ್

    ಶಿವಮೊಗ್ಗ: ಬಿಜೆಪಿಗೆ ವೋಟ್ ಹಾಕಿದೆ ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ (Shivamogga) ದ ಸೋಮಿನಕೊಪ್ಪ ಬಡಾವಣೆಯಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

    ಆಟೋ ಚಾಲಕ ಹರೀಶ್ ರಾವ್ (Auto Driver Harish Rao) ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಯಾರಿಗೆ ವೋಟ್ ಹಾಕಿದೆ ಎಂದು ದುಷ್ಕರ್ಮಿಗಳು ಹರೀಶ್‍ನನ್ನು ಕೇಳಿದ್ದಾರೆ. ಈ ವೇಳೆ ಆತ ಬಿಜೆಪಿಗೆ ಎಂದಿದ್ದಾನೆ. ಇದೇ ಕಾರಣಕ್ಕೆ ಹರೀಶ್‍ಗೆ ಹಿಗ್ಗಾಮುಗ್ ಥಳಿಸಿದ ದುಷ್ಕರ್ಮಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ರಾಡ್ ನಿಂದ ಆಟೋ ಗಾಜು ಜಖಂಗೊಳಿಸಿ, ಮೇಲ್ಭಾಗದ ಶೀಟ್ ಅನ್ನು ಹರಿದು ಹಾಕಿದ್ದಾರೆ.

    ಸೋಮಿನಕೊಪ್ಪ ನಿವಾಸಿಗಳಾಗಿರುವ ಡಬ್ಬ ಅಲಿಯಾಸ್ ನಜ್ರು, ಇಡ್ಲಿ ಅಲಿಯಾಸ್ ಅಬ್ರಾರ್ ಹಾಗೂ ಮತ್ತೊಬ್ಬ ಯುವಕ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾರೆ. ಎಸ್.ಪಿ. ಕಚೇರಿಗೆ ಆಟೋ ಚಾಲಕ ಹರೀಶ್ ರಾವ್ ಕಣ್ಣೀರಿಡುತ್ತಾ ಆಗಮಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ: ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

    ದೂರು ನೀಡಲು ಬಂದ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (K S Eshwarappa) ಕೂಡ ಎಸ್ ಪಿ ಕಚೇರಿಯಲ್ಲಿ ಎದುರಾಗಿದ್ದು, ಈ ವೇಳೆ ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆ ನೀಡುವಂತೆ ಕೋರಿದ್ದಾರೆ. ತಕ್ಷಣವೇ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ, ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಹಾಗೂ ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪರಿಹಾರವಾಗಿ 20 ಸಾವಿರ ರೂ. ಹಣವನ್ನು ನೀಡಿದ್ದಾರೆ.

  • ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರೂ!

    ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರೂ!

    ಬೆಂಗಳೂರು: ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ತೀರ ಕಡಿಮೆಯಿದ್ದರೂ, ಹಕ್ಕು ಚಲಾವಣೆಯಲ್ಲಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಒಂದು ಕೈ ಮುಂದಿದ್ದಾರೆ. ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗ್‌ ಆಗಿದ್ದಾರೆ.

    ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮಹಿಳೆಯರಿಂದಲೇ ಹೆಚ್ಚು ಮತ ಚಲಾವಣೆ ಆಗಿದೆ ಎಂದು ಅಂಕಿಅಂಶದಿಂದ ತಿಳಿದು ಬಂದಿದೆ. ಇದನ್ನೂ ಓದಿ: 25 ದಿನಗಳಲ್ಲಿ 4.12 ಲಕ್ಷ ಕೇಸ್, 22.89 ಕೋಟಿ ದಂಡ – ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್

    ಈ ಆರು ಜಿಲ್ಲೆಗಳ ಪೈಕಿ ಯಾವ ಜಿಲ್ಲೆಯಲ್ಲಿ ಪುರುಷರು ಹಾಗೂ ಮಹಿಳೆಯರು ಎಷ್ಟು ಮತದಾನ ಮಾಡಿದ್ದಾರೆ? ಈ ಎರಡೂ ವರ್ಗದವರಿಗೆ ಇರುವ ಮತಗಳ ಅಂತರ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

    ಯಾವ ಜಿಲ್ಲೆಯಲ್ಲಿ ಎಷ್ಟು ಮತ; ಅಂತರ?
    ಉಡುಪಿ – 45,755 ಅಂತರ (ಪುರುಷರ ಮತದಾನ – 3,86,361, ಮಹಿಳೆಯರ ಮತದಾನ -4,32,116)
    ದಕ್ಷಿಣ ಕನ್ನಡ – 35,589 (ಪುರುಷರ ಮತದಾನ – 6,61,368, ಮಹಿಳೆಯರ ಮತದಾನ – 6,96,957)
    ಕೊಡಗು – 3,333 (ಪುರುಷರ ಮತದಾನ – 1,68,843, ಮಹಿಳೆಯರ ಮತದಾನ – 1,72,176)
    ರಾಮನಗರ – 3,032 (ಪುರುಷರ ಮತದಾನ – 3,83,152, ಮಹಿಳೆಯರ ಮತದಾನ – 3,86,184)
    ಮಂಡ್ಯ – 2,822 (ಪುರುಷರ ಮತದಾನ – 6,46,227, ಮಹಿಳೆಯರ ಮತದಾನ – 6,49,049)
    ಚಾಮರಾಜನಗರ – 487 (ಪುರುಷರ ಮತದಾನ – 3,50,738, ಮಹಿಳೆಯರ ಮತದಾನ – 3,51,225) ಇದನ್ನೂ ಓದಿ: ಬೆಂಗ್ಳೂರಿನ 4 ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್- 1,500 ಪೊಲೀಸರ ನಿಯೋಜನೆ

  • ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಹಾಸನ: ವಿಧಾನಸಭಾ ಚುನಾವಣೆ (Assembly Election) ದಿನವೇ ತನ್ನ ಮದುವೆಯಿದ್ದರೂ ವರನೊಬ್ಬ (Groom) ಮದುವೆ ಮುಗಿಸಿಕೊಂಡು ಬಂದು ಮತ ಚಲಾಯಿಸಿ (Vote) ಮತಾಭಿಮಾನ ಮೆರೆದಿರುವ ಘಟನೆ ಹಾಸನ (Hassana) ಜಿಲ್ಲೆಯಲ್ಲಿ ನಡೆದಿದೆ.

    ನವ ವಿವಾಹಿತ ರೋಹಿತ್ ಧರ್ಮಸ್ಥಳದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ – ತುಂತುರು ಮಳೆಯಲ್ಲೇ ಮತಗಟ್ಟೆಗೆ ಬಂದ ಮತದಾರ

    ರೋಹಿತ್ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ. ಬುಧವಾರ ನಂದಿನಿ ಜೊತೆ ವಿವಾಹವಾದ ರೋಹಿತ್ ತಕ್ಷಣವೇ ಸಕಲೇಶಪುರಕ್ಕೆ ವಾಪಸಾಗಿ ಮತ ಚಲಾಯಿಸಿದ್ದಾರೆ. ನವವಿವಾಹಿತನ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  • Karnataka Election 2023 : ಅಮೆರಿಕದಿಂದ ಬಂದು ಮತ ಹಾಕಿದ ಯುವತಿ

    Karnataka Election 2023 : ಅಮೆರಿಕದಿಂದ ಬಂದು ಮತ ಹಾಕಿದ ಯುವತಿ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಅಮೆರಿಕದಿಂದ (America) ಬಂದ ಯುವತಿಯೊಬ್ಬಳು ಬೆಂಗಳೂರಿನಲ್ಲಿ (Bengaluru) ಮತ (Vote) ಚಲಾಯಿಸಿದ್ದಾಳೆ.

    ಬಸವನಗುಡಿ ಕ್ಷೇತ್ರದ ಮೇಘನಾ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದಾರೆ. ಇಂದಿನ ಮತದಾನಕ್ಕೆಂದು ಅಮೆರಿಕದಿಂದ ಬಂದಿರುವ ಮೇಘನಾ ಬಸವನಗುಡಿಯಲ್ಲಿ ಮತ ಚಲಾವಣೆ ಮಾಡಿದರು. ಅದಾದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಭಾರತದ ಪ್ರಜೆಯಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ವೋಟ್ ಮಾಡಲು ಅಮೆರಿಕದಿಂದ ಬಂದಿದ್ದೇನೆ. ಇದು ನನ್ನ ಎರಡನೇ ಬಾರಿಯ ಮತದಾನವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮತದಾನ ಮಾಡಿ ಆಟೋ ಓಡಿಸಿದ ಡಿಕೆಶಿ

    ಅಭಿವೃದ್ಧಿ ಮಾಡಿಲ್ಲ ಎಂದು ದೋಷಿಸುವುದಕ್ಕೂ ಮೊದಲು ನಮ್ಮ ಕೆಲಸವನ್ನು ನಾವು ಮಾಡಬೇಕು. ಆಗ ಅವರು ಅವರ ಕೆಲಸವನ್ನು ಮಾಡುತ್ತಾರೆ. ರಜಾ ಇದೆ ಎಂದು ಸುತ್ತಾಡಲು ಹೋಗುವುದಕ್ಕೂ ಮೊದಲು ವೋಟ್ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸಿಗೆ ಹಿಡಿದಿದ್ದ ವ್ಯಕ್ತಿ ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾವಣೆ