Tag: vote

  • ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಅಮೂಲ್ಯ ಜಗದೀಶ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

    ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಬಿಇಟಿ ಕಾನ್ವೆಂಟ್ ಸ್ಕೂಲ್ ನಲ್ಲಿ ಮತದಾನ ಮಾಡುವುದಕ್ಕೆ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂದಿದ್ದರು. ರಾಮಚಂದ್ರ ಜೊತೆ ಮಗ ಜಗದೀಶ್, ಸೊಸೆ ಅಮೂಲ್ಯ ಹಾಗು ಕುಟುಂಬ ವರ್ಗದವರು ಬಂದು ಮತದಾನ ಮಾಡಿದ್ದಾರೆ.

    ಮದುವೆ ಆದಮೇಲೆ ಇದೇ ಮೊದಲ ಬಾರಿಗೆ ಪತಿ ಜಗದೀಶ್ ಜೊತೆ ಬಂದು ನಟಿ ಅಮೂಲ್ಯ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅಮೂಲ್ಯ ಜಗದೀಶ್, ಇದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವೇ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಒಂದೇ ವೇಳೆ ನಾವು ಅದನ್ನು ಉಪಯೋಗಿಸಿಕೊಳ್ಳಲಿಲ್ಲ ಅಂದರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಪರಿಸ್ಥಿತಿ ಬರುತ್ತವೆ. ಹಾಗಾಗಿ ನಮ್ಮ ಹಕ್ಕನ್ನು ನಾವೇ ಯಾರಿಗೂ ಬಿಟ್ಟುಕೊಡದೆ ನಾವೇ ಮತದಾನ ಮಾಡೋಣ. ಆದ್ದರಿಂದ ಒಬ್ಬ ಒಳ್ಳೆ ವ್ಯಕ್ತಿಯನ್ನು ಶಾಸಕರಾಗಿ ಆರ್ ಆರ್ ನಗರಕ್ಕೆ ಆಯ್ಕೆ ಮಾಡಿ. ಎಲ್ಲರೂ ವೋಟ್ ಮಾಡಿ ಎಂದು ಹೇಳಿದ್ದಾರೆ.

    ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

  • ಮತದಾನಕ್ಕೆ ಬಂದಾಗ ಒಬ್ಬರಿಗೊಬ್ಬರು ನೋಡ್ಕೊಂಡ್ರು- ಹಳೆಯ ಲವ್ ನೆನಪಾಗಿ ಆತ್ಮಹತ್ಯೆಗೆ ಶರಣಾದ ಮಾಜಿ ಪ್ರೇಮಿಗಳು!

    ಮತದಾನಕ್ಕೆ ಬಂದಾಗ ಒಬ್ಬರಿಗೊಬ್ಬರು ನೋಡ್ಕೊಂಡ್ರು- ಹಳೆಯ ಲವ್ ನೆನಪಾಗಿ ಆತ್ಮಹತ್ಯೆಗೆ ಶರಣಾದ ಮಾಜಿ ಪ್ರೇಮಿಗಳು!

    ಕೋಲಾರ: ಮೇ 12ರಂದು ಮತದಾನ ಮಾಡಿದ ನಂತರ ಇಬ್ಬರು ಹಳೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿಯ ಕಾಮಸೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೃಷ್ಣ ರೆಡ್ಡಿ(24) ಹಾಗೂ ಸುಜಾತ(22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕಾಮಸೇನಹಳ್ಳಿಯ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಮೃತ ದೇಹಗಳು ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಕೃಷ್ಣ ಹಾಗೂ ಸುಜಾತ 5 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮನೆಯಲ್ಲಿ ಇವರ ಪ್ರೀತಿಗೆ ಅನುಮತಿ ನೀಡಿರಲಿಲ್ಲ. ಬಳಿಕ ಸುಜಾತ ಕೆಲವು ವರ್ಷಗಳ ಹಿಂದೆ ಬೇರೆಯವರ ಜೊತೆ ಮದುವೆಯಾಗಿದ್ದಳು. ಇನ್ನೂ ಕೃಷ್ಣ ಕೂಡ ನಾಲ್ಕು ತಿಂಗಳ ಹಿಂದೆ ಬೇರೊಬ್ಬರ ಜೊತೆ ಮದುವೆಯಾಗಿದ್ದನು.

    ಸುಜಾತಗೆ ಮದುವೆಯಾಗಿ ಮಕ್ಕಳಿದ್ದು, ಕೃಷ್ಣ ರೆಡ್ಡಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಈ ಇಬ್ಬರು ಹಳೆ ಪ್ರೇಮಿಗಳಾಗಿದ್ದು, ಮೇ 12ರಂದು ಮತದಾನ ಮಾಡಲು ಸುಜಾತ ಬಂದಿದ್ದಳು. ಆಗ ಪ್ರಿಯಕರನೊಂದಿಗೆ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಇನ್ನು ನಂಗಲಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗದಗ – ಮೂರು ಕ್ಷೇತ್ರದಲ್ಲಿ ಅರಳಿತು ಕಮಲ

    ಗದಗ – ಮೂರು ಕ್ಷೇತ್ರದಲ್ಲಿ ಅರಳಿತು ಕಮಲ

    ಗದಗ: ವಿಧಾನಸಭಾ ಚುನಾವಣೆಯ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

    ಗದಗ ಜಿಲ್ಲೆ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಿದ್ದು, 3 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದೆ.

    ಗದಗದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ ಪಾಟೀಲ್ 77,699 ಮತಗಳನ್ನು ಪಡೆದು 1,850 ಮತಗಳ ಅಂತರದಿಂದ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಅನಿಲ್ ಮೆಣಸಿನಕಾಯಿ(75,849) ರನ್ನು ಸೋಲಿಸಿದ್ದಾರೆ.

    ರೋಣ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ 83,735 ಮತಗಳನ್ನು ಪಡೆದು 7,334 ಮತಗಳಿಂದ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಆದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್ ಪಾಟೀಲ್ 76,401 ಮತಗಳನ್ನು ಪಡೆದರು.

    ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ್ 73,045 ಮತಗಳನ್ನು ಪಡೆದು 7,979 ಅಂತರದಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ. ಪ್ರತಿಸ್ಪರ್ಧಿ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ 65,066 ಮತಗಳನ್ನು ಪಡೆದಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಶಿರಹಟ್ಟಿಯಲ್ಲಿ 91,967 ಮತಗಳನ್ನು ಪಡೆಯುವುದರ ಮೂಲಕ 29,993 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 61,974 ಮತಗಳಿಂದ ಸೋಲನ್ನಪ್ಪಿದ್ದಾರೆ.

  • ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಮತದಾನದ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದ್ರಲ್ಲಿ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಕೂಡ ಒಬ್ಬರಾಗಿದ್ದಾರೆ.

    ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದು, ನಂಬರ್ ಒನ್ ಸಿಟಿಜನ್ ಅಂತ ಲೇವಡಿ ಮಾಡಿದ್ದಾರೆ. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದಾರೆ.

  • ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಗದಗ: ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿಯಾಗಿ 8 ಜನರಿಗೆ ಗಾಯ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ನರಗುಂದ ಹೊರವಲಯದಲ್ಲಿ ಈ ಅಪಘಾತ ನಡೆದಿದೆ.

    ಮತದಾರರು ಬೆಳಗಾವಿಯಿಂದ ನರಗುಂದ ಮಾರ್ಗವಾಗಿ ಕೊಂಗವಾಡ ಗ್ರಾಮಕ್ಕೆ ಹೊರಟ್ಟಿದ್ದರು. ಈ ವೇಳೆ ಟಂಟಂ ವಾಹನ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ 5 ಜನ ಮಹಿಳೆಯರು, 3 ಜನ ಪುರುಷರು ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, 3 ಜನ ಗಂಭೀರ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಮೈಸೂರು: ಮತದಾನದ ಹಕ್ಕಿನಿಂದ ಹಾಸ್ಯನಟ ಚಿಕ್ಕಣ್ಣ ವಂಚಿತರಾಗಿದ್ದಾರೆ.

    ಚಿಕ್ಕಣ್ಣ ಮೈಸೂರಿನ ಬಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಾಗಿದ್ದರು. ಅಲ್ಲದೇ ಹುಟ್ಟೂರಿನಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡಿದ್ದರು. ಮತದಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೂ ಕೂಡ ಆಗಮಿಸಿದ್ದರು.

    ಚಿಕ್ಕಣ್ಣ ಇಂದು ಮತಗಟ್ಟೆಗೆ ಭೇಟಿ ನೀಡಿದಾಗ ತನ್ನ ಹೆಸರಿನ ಮೇಲೆ ಡಿಲೀಟ್ ಎಂದು ಉಲ್ಲೇಖಿಸಿದ್ದಾರೆ. ವಾಸವಿಲ್ಲದ ಕಾರಣ ಡಿಲೀಟ್ ಆಗಿದೆ ಎಂದು ಮತಗಟ್ಟೆ ಸಿಬ್ಬಂದಿಗಳು ಸಬೂಬು ಹೇಳಿದ್ದಾರೆ. ಅಲ್ಲದೇ ಗ್ರಾಮದ ಹಲವರ ಹೆಸರನ್ನು ಡಿಲೀಟ್ ಮಾಡಿರುವ ಬಗ್ಗೆ ಆರೋಪಿಸಿದ್ದಾರೆ.

    ಕೊನೆಗೂ ಚಿಕ್ಕಣ ತಮ್ಮ ಮತದಾನ ಮಾಡದೆ ವಾಪಸ್ ಆಗಿದ್ದಾರೆ. ಚಿಕ್ಕಣ್ಣ ಮತದಾನಕ್ಕಾಗಿಯೇ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದರು ಆದರೆ ಈಗ ಬೇಸರದಿಂದ ವಾಪಸ್ ಆಗಿದ್ದಾರೆ.

  • ಮತ ಚಲಾಯಿಸಿ ಹಾಡು ಹಾಡಿದ ಚಂದನ್ ಶೆಟ್ಟಿ!

    ಮತ ಚಲಾಯಿಸಿ ಹಾಡು ಹಾಡಿದ ಚಂದನ್ ಶೆಟ್ಟಿ!

    ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಪರ್ ಹಾಗೂ ಬಿಗ್ ಬಾಸ್-5ರ ವಿಜೇತ ಚಂದನ್ ಶೆಟ್ಟಿ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಜೊತೆ ಬಂದು ಮತ ಚಲಾಯಿಸಿದ್ದಾರೆ.

    ಚಂದನ್ ಶೆಟ್ಟಿ ಮತ ಚಲಾಯಿಸಿ ಬಂದ ಕೂಡಲೇ ಅವರನ್ನು ಪುಟ್ಟ ಮಕ್ಕಳು ಆಗಮಿಸಿದ್ದರು. ಮಕ್ಕಳು ಚಂದನ್ ಶೆಟ್ಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಂತರ ಚಂದನ್ ಶೆಟ್ಟಿ ಮಕ್ಕಳ ಮೂಲಕ ಮತ ಚಲಾಯಿಸಿ ಎಂಬ ಜಾಗೃತಿ ಮೂಡಿಸಿದರು.

    ಮತದಾನ ನಮ್ಮೆಲ್ಲರ ಹಕ್ಕು. ನಾವು ಪ್ರಜೆ ಎಂದು ಪ್ರೂವ್ ಮಾಡಿಕೊಳ್ಳಲು ಒಳ್ಳೆಯ ದಿನ. ನಾವು ಪ್ರಜೆಯಾಗಿದ್ದಕ್ಕೂ ಸಾರ್ಥಕವಾಗೋ ದಿನ. ನೀವು ಕೂಡ ಮತಚಲಾಯಿಸಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ ಎಂದು ಚಂದನ್ ಶೆಟ್ಟಿ ಹೇಳಿದರು.

    ಚಂದನ್ ಶೆಟ್ಟಿ ಕೊನೆಯಲ್ಲಿ ತಮ್ಮ ರ‍್ಯಾಪ್ ಸಾಂಗ್ ಮೂಲಕ ಎಲ್ಲರಿಗೂ ಮತದಾನದ ಜಾಗೃತಿ ಮೂಡಿಸಿದ್ದಾರೆ. “ವೋಟ್ ಮಾಡಬೇಕು ನಾವು ವೋಟ್ ಮಾಡಬೇಕು” ಎಂದು ಸಾಂಗ್ ಹೇಳುವ ಮೂಲಕ ಚಂದನ್ ಮತದಾನದ ಜಾಗೃತಿ ಮೂಡಿಸಿದರು.

  • ಮತಗಟ್ಟೆಯ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಆಕ್ರೋಶ ಹೊರಹಾಕಿದ ವೃದ್ಧೆ!

    ಮತಗಟ್ಟೆಯ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಆಕ್ರೋಶ ಹೊರಹಾಕಿದ ವೃದ್ಧೆ!

    ಹಾವೇರಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ವೃದ್ಧೆಯ ಆಕ್ರೋಶ ವ್ಯಕ್ತಪಡಿಸಿ, ಮತದಾನ ಮಾಡಿ ಮತಗಟ್ಟೆಯ ಮುಂದೆ ಸೀಮೆ ಎಣ್ಣೆ ಸುರಿದುಕೊಂಡ ಘಟನೆ ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ನಡೆದಿದೆ.

    ಪಾರ್ವತೆಮ್ಮ 60 ವರ್ಷ ಸೀಮೆಎಣ್ಣೆ ಸುರಿದುಕೊಂಡ ವೃದ್ಧೆ. ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ವೃದ್ಧೆಯನ್ನ ಸಮಾಧಾನ ಪಡಿಸಿದ ಮನೆಯ ಸಮಸ್ಯೆ ಹಾಗೂ ಮನೆ ಕೊಡಿಸುವ ಭರವಸೆ ಕೊಟ್ಟು ಆಕೆಯನ್ನು ಕಳುಹಿಸಿದ್ದಾರೆ. ಸದ್ಯ ಪಾರ್ವತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಕೊಡಗು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ.

    ಸ್ಮಿತಾ ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಮತಗಟ್ಟಿ ಸಂಖ್ಯೆ 131 ಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮದುಮಗಳಂತೆ ಅಲಂಕರಿಸಿ ಮತಗಟ್ಟೆಗೆ ಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

    ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಮಂಗಳೂರಿನಲ್ಲೂ ಕೂಡ ವಧುವೊಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

    7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜೊತೆ ಮಾರಿಯಾ ಮದುವೆ ನಡೆಯಲಿದೆ. ಒಟ್ಟಿನಲ್ಲಿ ವಿಯೋಲಾ ಹಾಗೂ ಸ್ಮಿತಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.

  • ವೋಟ್ ಹಾಕೋಕೆ ಊರಿಗೆ ಹೊರಟಿದ್ದೀರಾ?- ಮಾಮೂಲಿಗಿಂತ ಡಬಲ್ ದುಡ್ಡು ಇಟ್ಕೊಳ್ಳಿ

    ವೋಟ್ ಹಾಕೋಕೆ ಊರಿಗೆ ಹೊರಟಿದ್ದೀರಾ?- ಮಾಮೂಲಿಗಿಂತ ಡಬಲ್ ದುಡ್ಡು ಇಟ್ಕೊಳ್ಳಿ

    ಬೆಂಗಳೂರು: ಶನಿವಾರ ರಾಜ್ಯಾದ್ಯಂತ ವಿಧಾಸಭಾ ಚುನಾವಣೆ ಇರೋ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಸ್ವಂತ ಊರಿನಿಂದ ದೂರದಲ್ಲಿರುವ ಮತದಾರರು ತಮ್ಮ ಊರಿಗೆ ತೆರಳಬೇಕು ಅಂತಾ ಪ್ಲಾನ್ ಮಾಡಿದ್ದರೆ, ಜೇಬಿನಲ್ಲಿ ಮಾಮೂಲಿಗಿಂತ ಡಬಲ್ ಹಣ ಇಟ್ಟುಕೊಂಡು ಪ್ರಯಾಣಿಸಿ. ಕಾರಣ ಖಾಸಗಿ ಬಸ್‍ಗಳ ಪ್ರಯಾಣ ದರ ದುಪ್ಪಟ್ಟು ಆಗಿದೆ. ಚುನಾವಣಾ ಕಾರ್ಯಕ್ಕಾಗಿ 4,000 ಬಿಎಂಟಿಸಿ ಬಸ್‍ಗಳನ್ನು ನಿಯೋಜನೆ ಮಾಡಲಾಗಿದೆ.

    ಚುನಾವಣಾ ಕೆಲಸಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್ ಗಳು ಬುಕ್ ಆಗಿವೆ. ಸಾಮಾನ್ಯವಾಗಿ ದಿನನಿತ್ಯ ಸಂಚರಿಸುವ ಬಸ್‍ಗಳಿಂತ ಕಡಿಮೆ ಸಂಖ್ಯೆಯಲ್ಲಿ ಬಸ್ ಲಭ್ಯವಾಗಲಿವೆ. ಸಾರಿಗೆ ಬಸ್‍ಗಳ ಸಂಖ್ಯೆ ಕಡಿಮೆ ಇರುವ ಕಾರಣ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ತಮ್ಮ ವಾಹನಗಳಿಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಪ್ರಯಾಣ ದರವನ್ನು ಮಾಲೀಕರು ಡಬಲ್, ತ್ರಿಬಲ್ ಮಾಡಿಕೊಂಡಿದ್ದಾರೆ.

    ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ 600 ರೂ. ದಿಂದ 800 ರೂ.ವರೆಗೂ ಟಿಕೆಟ್ ಸಿಗುತ್ತೆ. ಇಂದು ಅದೇ ಬೆಲೆಯ ಒಂದು ಸೀಟ್‍ಗೆ 1800 ರೂ. ಏರಿಕೆ ಮಾಡಲಾಗಿದೆ. ಇತ್ತ 500 ರಿಂದ 700ರೂ. ಬೆಂಗಳೂರಿನಿಂದ ಮಂಗಳೂರಿಗಿದ್ದ ಬಸ್ ಚಾರ್ಜ್ 1,500 ರೂ.ವರೆಗೂ ತಲುಪಿದೆ. ಇದೇ ರೀತಿಯಾಗಿ ಎಲ್ಲ ಮಾರ್ಗಗಳ ಪ್ರಯಾಣ ದರ ಬೇಡಿಕೆಗೆ ತಕ್ಕಂತೆ ಏರಿಕೆ ಮಾಡಲಾಗಿದೆ.