Tag: vote

  • ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮಂಡ್ಯ: ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರು ಮೊಬೈಲ್ ಟಾರ್ಚ್ ಲೈಟ್ ಸಹಾಯದಿಂದ ಮತದಾನ ಮಾಡಿದ್ದಾರೆ.

    ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಅಂಬರೀಶ್ ಹಾಗೂ ಡಿ.ಸಿ.ತಮ್ಮಣ್ಣ ಸ್ವಗ್ರಾಮಕ್ಕೆ ಭೇಟಿ ನೀಡಿ ಮತದಾನವನ್ನು ಮಾಡಿದರು. ಈ ವೇಳೆ ವಿವಿ ಪ್ಯಾಟ್ ಬಳಿ ನಿಂತು ಏನೋ ಇಲ್ಲಿ ಕತ್ತಲೆ ಎಂದು ಬೆಂಬಲಿಗರಿಗೆ ಹೇಳಿದರು. ಬಳಿಕ ಬೆಂಬಲಿಗರು ಮೊಬೈಲ್ ಟಾರ್ಚ್ ವ್ಯವಸ್ಥೆ ಮಾಡಿದರು. ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಅಂಬರೀಶ್ ವೋಟ್ ಮಾಡಿದರು.

    ಮತಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಿ ಉಪಚುನಾವಣೆಯ ಫಲಿತಾಂಶ ಕುರಿತು ಈ ಚುನಾವಣೆ ಸರಿಯಿಲ್ಲ. ಮೂರು ಮೂರು ದಿನಕ್ಕೆ ಚುನಾವಣೆ 13 ದಿನಕ್ಕೆ ಕಳೆದುಹೋಗುತ್ತದೆ. ಮತ್ತೆ ಓಡಾಡಬೇಕು. 5 ಕ್ಷೇತ್ರದಲ್ಲಿ ಐದು ಕ್ಷೇತ್ರ ಗೆಲ್ಲುತ್ತೇವೆ ಎಂದರು. ಈ ವೇಳೆ ರಾಮನಗರದಲ್ಲಾದ ಬೆಳವಣಿಗೆಗಳಿಗೆ ಅದು ಸರಿಯಾದುದ್ದಲ್ಲ. ಆದರೆ ಒಳಗಡೆ ಏನೇನೂ ಮಾತುಕತೆಗಳು ನಡೆದಿದೆಯೋ ಯಾರಿಗೂ ಗೊತ್ತಿಲ್ಲ. ಮನಸ್ತಾಪ ಇರಬಹುದು ಅಥವಾ ಬೇರೆ ರೀತಿಯ ವ್ಯವಹಾರ ಇರಬಹುದು ಅಷ್ಟೇ ಎಂದರು.

    ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಆಳ್ವಿಕೆ ಮಾಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಜ್ಯದಲ್ಲೇ ಜೆಡಿಎಸ್, ಕಾಂಗ್ರೆಸ್ ಆಳ್ವಿಕೆಯಲ್ಲಿದೆ ಇನ್ನೂ ಮಂಡ್ಯದಲ್ಲಿ ಆಗೋದಿಲ್ಲವೇ ಈ ಬಾರಿ ದಾಖಲೆಯ ಅಂತರದಲ್ಲಿ ಶಿವರಾಮೇಗೌಡರು ಗೆಲ್ಲಲೇಬೇಕು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಿಎಂ ಮಾತಿಗೆ ಒಪ್ಪಿ ಮತದಾನ ಬಹಿಷ್ಕಾರ ಹಿಂಪಡೆದ ತಾಲೂಕು ಕುರುಬರ ಸಂಘ

    ಮಾಜಿ ಸಿಎಂ ಮಾತಿಗೆ ಒಪ್ಪಿ ಮತದಾನ ಬಹಿಷ್ಕಾರ ಹಿಂಪಡೆದ ತಾಲೂಕು ಕುರುಬರ ಸಂಘ

    ಮೈಸೂರು: ಮತದಾನ ಬಹಿಷ್ಕಾರವನ್ನು ಮಾಡಿದ್ದ ಕೆಆರ್ ನಗರದ ಕುರುಬರ ಸಂಘದವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪಿ ಮತದಾನ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.

    ಈ ಬಗ್ಗೆ ಕುರುಬರ ಸಂಘದ ಮುಖ್ಯಸ್ಥ ಶಿವಣ್ಣ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಈ ತಾಲೂಕಿಗೆ ಆಯ್ಕೆಯಾಗಿರುವ ಸಚಿವರಾದ ಸಾರಾ ಮಹೇಶ್ ಅವರು ಧೋರಣೆಯನ್ನು ತಮ್ಮ ಮಾಧ್ಯಮದ ಮುಂದೆ ಎರಡು ದಿನಗಳ ಹಿಂದೆ ಇಟ್ಟಿದ್ದೆವು. ಆ ಧೋರಣೆಯನ್ನು ನಮ್ಮ ತಾಲೂಕಿನ ಹಳ್ಳಿ ಯಾವ ಮಟ್ಟಿನಲ್ಲಿ ಇದೆ ಎಂಬುದು ಗೊತ್ತಿದೆ. ಆದರೆ ನಾವು ಬಹಿಷ್ಕಾರ ಮಾಡಿದ್ದು ನಿಜ. ಅದೇ ರೀತಿ ನಮ್ಮ ಸಂಘ ಮತ್ತು ಸಂಸ್ಥೆ ಸನ್ನದ್ಧರಾಗಿದ್ದೆವು. ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕ ಮಾಡಿ ನಮ್ಮ ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿ ಈ ಬಹಿಷ್ಕಾರ ಮಾಡಬೇಡಿ. ಚುನಾವಣೆ ಮುಗಿದ ಮೇಲೆ ಸಮಸ್ಯೆ ಬಗೆಹರಿಸುತ್ತೇನೆ. ಇಂದು ಮತದಾನ ಮಾಡಿ ಅಂತ ಕೇಳಿಕೊಂಡರು ಅಂದ್ರು.

    ಅದೇ ರೀತಿ ಕಾಂಗ್ರೆಸ್ ಮುಖಂಡರಾದ ದೊಡ್ಡ ಶಾಮಗೌಡರು ಕೂಡ ನಮ್ಮ ಸಂಘವನ್ನು ಕರೆದು ಮನವೊಲಿಸುವ ಕೆಲಸವನ್ನು ಮಾಡಿದರು. ಸಚಿವ ಸಾ.ರಾ. ಮಹೇಶ್ ನಡವಳಿಕೆ ಬಗ್ಗೆ ಹಾಗೂ ಅವರು ನಮ್ಮನ್ನು ತುಂಬಾ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದಾಗ ಎಲ್ಲಾ ವಿಷಯಗಳು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಭಿವೃದ್ಧಿ ಮಾಡಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಭರವಸೆ ಕೊಟ್ಟಿದ್ದಾರೆ. ಈ ಒಂದು ಆದೇಶದ ಮೇರೆಗೆ ಬಹಿಷ್ಕಾರವನ್ನು ವಾಪಸ್ಸು ಪಡೆದಿದ್ದೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿಯಲ್ಲಿ ಝಣ.. ಝಣ ಕಾಂಚಾಣ

    ಬಳ್ಳಾರಿಯಲ್ಲಿ ಝಣ.. ಝಣ ಕಾಂಚಾಣ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆ ಗೆಲ್ಲಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಯಕರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪರಿಗೆ ಮತ ಹಾಕುವಂತೆ ಮತದಾರರಿಗೆ ಹಣವನ್ನು ಹಂಚಲಾಗುತ್ತಿದೆ ಎನ್ನಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಿದ್ದಲಿಂಗಪ್ಪ ಚೌಕಿ ಬಳಿ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಮತದಾರರಿಗೆ ಒಂದು ಮತಕ್ಕೆ ನೂರು ರೂಪಾಯಿಯಂತೆ ಹಣ ನೀಡುತ್ತಿದ್ದು, ಹಣ ಹಂಚಿಕೆಗೂ ಮುನ್ನ ಮತದಾರರ ವೋಟರ್ ಸ್ಲಿಪ್ ನೋಡಿ ಟೋಕನ್ ನೀಡಿ ಬೇರೆಡೆ ಪ್ರತಿ ಮತಕ್ಕೆ ನೂರು ರೂಪಾಯಿ ಹಣ ಹಂಚುತ್ತಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

    ಮತದಾರರು ಸಹ ತಮ್ಮ ವೋಟರ್ ಸ್ಲಿಪ್ ಕೊಟ್ಟು ಪ್ರತಿ ವೋಟಿಗೆ ನೂರು ರೂಪಾಯಿ ಹಣ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿದೆ. ಕಳೆದೆರಡು ದಿನಗಳಿಂದ ಹಗಲು ರಾತ್ರಿಯೆನ್ನದೇ ಹಣ ಹಂಚಿಕೆ ಮಾಡುತ್ತಿದ್ದರೂ ಚುನಾವಣಾಧಿಕಾರಿಗಳು ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಪರಿಣಾಮ ಹಣದ ಹೊಳೆ ಎಲ್ಲೆಡೆ ಜೋರಾಗಿ ಹರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಮುಸ್ಲಿಮರಿಂದ ಅನಿತಾ ಕುಮಾರಸ್ವಾಮಿಗೆ ಫುಲ್ ಕ್ಲಾಸ್ – ವಿಡಿಯೋ ನೋಡಿ

    ರಾಮನಗರದಲ್ಲಿ ಮುಸ್ಲಿಮರಿಂದ ಅನಿತಾ ಕುಮಾರಸ್ವಾಮಿಗೆ ಫುಲ್ ಕ್ಲಾಸ್ – ವಿಡಿಯೋ ನೋಡಿ

    ರಾಮನಗರ: ರಾಮನಗರ ಟೌನ್ ನಲ್ಲಿ ಪ್ರಚಾರದ ಸಮಯದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಮುಸ್ಲಿಂ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಾಮನಗರದ ಗೀತಾಮಂದಿರ ಬಡಾವಣೆಯ ದರ್ಗಾ ಬಳಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆ ಮುಸ್ಲಿಮರು ಮೂಲಭೂತ ಸೌಕರ್ಯ, ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯಿಂದ ಆಕ್ರೋಶಗೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ನಮಗೆ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ. ಆದರೆ ನೀವು ಚುನಾವಣೆ ಬಂದಾಗ ಬರುತ್ತೀರಿ ಆಮೇಲೆ ಈ ಕಡೆ ಮುಖ ಕೂಡಾ ಹಾಕಲ್ಲ. ನಮ್ಮ ಪ್ರದೇಶಕ್ಕೆ ಸಮಸ್ಯೆ ನೋಡಲು ಬನ್ನಿ. ಮೊದಲು ನಮ್ಮ ಸಮಸ್ಯೆಯನ್ನು ನೀವು ಬಗೆಹರಿಸಿ. ಆಮೇಲೆ ನೀವು ವೋಟ್ ಕೇಳಿ ಎಂದು ಸಾರ್ವಜನಿಕರು ಗರಂ ಆಗಿಯೇ ಪ್ರಶ್ನೆ ಮಾಡಿದ್ದಾರೆ.

    ಸಾರ್ವಜನಿಕರ ಮಾತಿನಿಂದ ಅನಿತಾ ಕುಮಾರಸ್ವಾಮಿ ಅವರು ಇರಿಸು ಮುರಿಸಿಗೆ ಒಳಗಾಗಿ ಕೆಲಹೊತ್ತು ಏನೂ ಮಾತನಾಡದೇ ನಿಂತಿದ್ದರು. ಕಡೆಗೆ ಸ್ಥಳೀಯ ನಗರಸಭೆ ಸದಸ್ಯರಿಂದ ಸಮಾಧಾನ ಮಾಡುವ ಯತ್ನ ಮಾಡಿಸಿದ ಬಳಿಕ ಹಾಗೆ ಅನಿತಾ ಕುಮಾರಸ್ವಾಮಿ ಮುಂದೆ ಸಾಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಂಸದೆಗಾಗಿ ಮಂಡ್ಯ ಜನತೆ ಆಗ್ರಹ!

    ಮಾಜಿ ಸಂಸದೆಗಾಗಿ ಮಂಡ್ಯ ಜನತೆ ಆಗ್ರಹ!

    ಮಂಡ್ಯ: ನಗರಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಮಾಜಿ ಸಂಸದೆ ರಮ್ಯಾ ಅವರು ಮತದಾನ ಮಾಡಲು ಬರಲೇಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ನಗರಸಭೆ ಚುನಾವಣೆಗೆ ಮತ ಹಾಕಲು ಬರದಿದ್ರೆ ನೀವು ಕೂಡ ಮತ ಕೇಳಬೇಡಿ ಎಂದು ಮಂಡ್ಯ ಜನತೆ ಮಾಜಿ ಸಂಸದೆ ರಮ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಇಂದು ನಗರಸಭೆಗೆ ಚುನಾವಣೆ ನಡೆಯಲಿದ್ದು 11ನೇ ವಾರ್ಡ್‍ನಲ್ಲಿ ರಮ್ಯಾ ಮತದಾನ ಮಾಡಬೇಕಿದೆ. ರಮ್ಯಾ ಮತದಾನ ಮಾಡದಿದ್ರೆ ಮತ ಕೇಳುವ ಹಕ್ಕು ನಿಮಗಿಲ್ಲ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.

    ಅಲ್ಲದೇ ಮಂಡ್ಯ ನಗರಸಭೆ ಚುನಾವಣೆಗೆ ಓಟ್ ಹಾಕಲು ಬರದಿದ್ರೆ ಇನ್ನು ಮುಂದೆ ನೀವು ಕೂಡ ಓಟ್ ಕೇಳಬೇಡಿ. ಕಳೆದ ಬಾರಿ ವಿಧಾನಸಭೆ ಚುನಾಣೆಯಲ್ಲಿ ಮಂಡ್ಯದ ವಿದ್ಯಾನಗರದ ಮತಗಟ್ಟೆ ಸಂಖ್ಯೆ 168 ರಲ್ಲಿ ರಮ್ಯಾ ಮತದಾನ ಮಾಡಬೇಕಿತ್ತು. ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 420 ರಲ್ಲಿದ್ದ ರಮ್ಯಾ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಇಂದು ಮಂಡ್ಯ ನಗರಸಭೆ ಚುನಾವಣೆ ನಡೆಯುತ್ತಿದ್ದು 11 ನೇ ವಾರ್ಡ್‍ನಲ್ಲಿ ರಮ್ಯಾ ಮತದಾನ ಮಾಡಬೇಕಿದೆ.

    ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನ ಎಂದಿದ್ದು, ಕ್ರಮಸಂಖ್ಯೆ 671 ಆಗಿದೆ. ವೇಣುಗೋಪಾಲ ದೇವಸ್ಥಾನದ ಎದುರು ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಮ್ಯಾ ಮತದಾನ ಮಾಡಬೇಕಿದೆ. ಒಂದು ವರ್ಷ ಎಂಟು ತಿಂಗಳಿಂದ ಮಂಡ್ಯ ಕಡೆ ತಲೆ ಹಾಕದ ರಮ್ಯಾ, ನಗರಸಭೆ ಚುನಾವಣೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು. ಇಲ್ಲದಿದ್ರೆ ಅವರು ಚುನಾವಣೆಗೆ ನಿಂತು ನಮ್ಮನ್ನು ಮತ ಕೇಳಬಾರದು. ಅಷ್ಟೇ ಅಲ್ಲ ಚುನಾವಣಾ ಆಯೋಗ ಮತದಾನ ಮಾಡದವರ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ರದ್ದುಗೊಳಿಸುವ ಕಾನೂನು ತರಬೇಕು ಎಂದು, ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮತದಾರರ ಪಟ್ಟಿಯಲ್ಲಿ ಸನ್ನಿಯ ಹಾಟ್ ಫೋಟೋ!

    ಮತದಾರರ ಪಟ್ಟಿಯಲ್ಲಿ ಸನ್ನಿಯ ಹಾಟ್ ಫೋಟೋ!

    -ಸನ್ನಿ ಜೊತೆ ಗಿಳಿ, ಆನೆ ಫೋಟೋ

    ಲಕ್ನೋ: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಬಾಲಿವುಡ್ ಮಾದಕ ಚೆಲುವೆಯ ಫೋಟೋ ಮುದ್ರಣಗೊಂಡಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಜನರ ಭಾವಚಿತ್ರದ ಬದಲಾಗಿ ಗಿಳಿ, ಆನೆ, ಜಿಂಕೆ ಇತರೆ ಪ್ರಾಣಿ ಪಕ್ಷಿಗಳ ಫೋಟೋಗಳು ಕೂಡ ಮುದ್ರಣಗೊಂಡಿವೆ.

    ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಡಾಟಾ ಎಂಟ್ರಿ ಆಪರೇಟರ್ ವಿಷ್ಣುದೇವ್ ವರ್ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತದಾರರ ಪಟ್ಟಿಯ ಪರಿಶೀಲನೆ ನಡೆಸುವ ವೇಳೆ ಈ ಎಡವಟ್ಟು ಬೆಳಕಿಗೆ ಬಂದಿದೆ.

    ಮತದಾರರ ಪಟ್ಟಿಯಲ್ಲಿ ಎಲ್ಲ ಮಾಹಿತಿ ಸರಿಯಾಗಿದ್ದು, ಫೋಟೋಗಳು ಮಾತ್ರ ಅದಲು ಬದಲುಗೊಂಡಿವೆ. ವಿವೇಕಾನಂದ ಕಾಲೋನಿ ನಿವಾಸಿ ದುರ್ಗಾವತಿ ಎಂಬ ಮಹಿಳೆಯ ಫೋಟೋದಲ್ಲಿ ಸನ್ನಿ ಲಿಯೋನ್ ಚಿತ್ರ ಪ್ರಿಂಟ್ ಆಗಿದೆ. ಕುನ್ವಾರ್ ಅಂಕುರ್ ಸಿಂಗ್ ಎಂಬ ಹೆಸರಿನ ಮುಂದೆ ಜಿಂಕೆ, ಮಾಜಿ ಸಚಿವ ನಾರದ್ ರೈ ಹೆಸರಿನ ಮುಂದೆ ಆನೆಯ ಫೋಟೋ ಹಾಕಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಚುನಾವಣಾಧಿಕಾರಿ ಮನೋಜ್ ಕುಮಾರ್ ಸಿಂಘಾಲ್, ಸಾರ್ವಜನಿಕರಿಗೆ ಮತದಾರರ ಚೀಟಿ ವಿತರಣೆ ಮೊದಲೇ ಎಡವಟ್ಟು ಬೆಳಕಿಗೆ ಬಂದಿದೆ. ಡೇಟಾ ಆಪರೇಟರ್ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಕರ್ತವ್ಯಲೋಪವೆಸಗಿದ ಅಧಿಕಾರಿಗಳು ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀವು ವೋಟ್ ಹಾಕಿಲ್ಲ, ನಿಮ್ಗೆ ನೀರು ಬಿಡಲ್ಲ- ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪ

    ನೀವು ವೋಟ್ ಹಾಕಿಲ್ಲ, ನಿಮ್ಗೆ ನೀರು ಬಿಡಲ್ಲ- ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: ಪಕ್ಷಕ್ಕೆ ವೋಟ್ ಹಾಕಿಲ್ಲ. ಹೀಗಾಗಿ ನೀರು ಬಿಡಬೇಡಿ ಎಂದಿದ್ದಾರೆ ಅನ್ನೋ ಗಂಭೀರ ಆರೋಪವೊಂದು ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕನ ವಿರುದ್ಧ ಕೇಳಿಬಂದಿದೆ.

    ಯಶವಂತಪುರ ಶಾಸಕ ಎಸ್.ಟಿ ಸೋಮ್ ಶೇಖರ್ ವಿರುದ್ಧ ಈ ಆರೋಪ ಕೇಳಿಬರುತ್ತಿದೆ. ಹೇರೋಹಳ್ಳಿ ವಾರ್ಡ್ ಏರಿಯಾದ ಜನ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡಿಲ್ಲ. ಹೀಗಾಗಿ ಆ ಏರಿಯಾಗೆ ನೀರು ಬಿಡಬೇಡಿ ಅಂತ ಶಾಸಕರು ಕಾರ್ಪೋರೇಟರ್ ರಾಜಣ್ಣಗೆ ತಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಹೆರೋಹಳ್ಳಿ ವಾರ್ಡ್ ನ ಏಕದಂತ ಬಡಾವಣೆಗೆ ಕಳೆದು ಐದು ತಿಂಗಳಿಂದ ನೀರಿನ ಪೂರೈಕೆ ಇಲ್ಲ. ಈ ಬಡಾವಣೆಯ ಜನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಶಾಸಕ ಎಸ್.ಟಿ ಸೋಮ್ ಶೇಖರ್ ಮತ್ತು ಕಾಂಗ್ರೆಸ್ ಕಾರ್ಪೋರೇಟರ್ ನೀರು ಬಿಡುತ್ತಿಲ್ಲ ಎಂದು ಈ ಭಾಗದ ಜನರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.

    ಈ ಆರೋಪ ಕೇಳಿ ಬರುತ್ತಿದ್ದಂತೆಯೇ ಕಾರ್ಪೋರೇಟರ್ ರಾಜಣ್ಣ ಇದನ್ನು ತಳ್ಳಿ ಹಾಕಿದ್ದು, ಈ ಭಾಗದಲ್ಲಿ ಇರುವ ಬಿಜೆಪಿ ಮತ್ತು ಜೆಡಿಎಸ್ ಅವರು ಸುಮ್ ಸುಮ್ನೆ ಆರೋಪ ಮಾಡುತ್ತಿದ್ದಾರೆ. ನನಗೆ ನಮ್ಮ ಶಾಸಕರು ಬೈದಿಲ್ಲ. ನಮ್ಮ ಆತ್ಮಾವಲೋಕನ ಸಭೆಯಲ್ಲಿ ಜನರಿಗೆ ಸ್ಪಂದಿಸು ಅಂತಾ ಹೇಳಿದ್ದಾರೆ. ಆದ್ರೆ ಇದನ್ನು ರಾಜಕೀಯ ಲೀಡರ್ ಗಳು ತಪ್ಪು ಅರ್ಥ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಈ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ನಾಲ್ಕು ತಿಂಗಳಿನಿಂದಲೂ ನೀರಿಲ್ಲ. ಕಾವೇರಿ ಪೈಪ್ ಅಳವಡಿಸಲಾಗುತ್ತಿದೆ. ಅದಕ್ಕೆ ಹದಿನೈದು ದಿನಕ್ಕೊಮ್ಮೆ ನಾನೇ ಟ್ಯಾಂಕರ್ ಮೂಲಕ ನೀರನ್ನ ಏರಿಯಾಗಳಿಗೆ ಪೂರೈಕೆ ಮಾಡುತ್ತಿದ್ದೇನೆ. ಆದರೆ ಸರಿಯಾಗಿ ಟ್ಯಾಂಕರ್ ಗಳಲ್ಲಿ ನೀರು ಬರುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ ಅಂತ ಕಾರ್ಪೋರೇಟರ್ ಹೇಳಿದ್ದಾರೆ.

    ಕಳೆದ ಚುನಾವಣೆಯಲ್ಲಿ ಹೆರೋಹಳ್ಳಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಅವರಿಗೆ 183 ಮತ, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರಿಗೆ 399 ಮತ ಹಾಗೂ ಬಿಜೆಪಿಯ ಅಭ್ಯರ್ಥಿ ಜಗ್ಗೇಶ್‍ಗೆ 129 ವೋಟ್ ಬಿದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಜನ ವೋಟ್ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಕಡಿಮೆ ಮತ ಬಿದ್ದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಲಂಡನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಲು ನನ್ನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

    ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೇಶ ಹೊರಡಿಸಿದೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ್ದು, ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ತಿಳಿಸಿದ್ದಾರೆ.

    ಬ್ರಿಟಿಷ್ ಫಾರ್ಮುಲಾ ಒನ್ ರೇಸ್ ವೇಳೆ ಪಾಲ್ಗೊಂಡಿದ್ದ ಮಲ್ಯ ಅವರನ್ನು ಮಾಧ್ಯಮವೊಂದು ಮಾತನಾಡಿಸಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ಭಾರತದ 13 ಬ್ಯಾಂಕ್ ಗಳ ಸಾಲ ಮರುಪಾವತಿಗಾಗಿ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶದಿಂದ ನನ್ನನ್ನು ಇಂಗ್ಲೆಂಡ್ ನಿಂದ ಭಾರತಕ್ಕೆ ಕರೆತರಲು ಯತ್ನಿಸುತ್ತಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ರೀತಿ ಮಾಡಿದರೆ ಮತಗಳು ಹೆಚ್ಚಿಗೆ ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದು ಆರೋಪಿಸಿದರು.

    ಇಂಗ್ಲೆಂಡಿನಲ್ಲಿರುವ ನನ್ನ ಆಸ್ತಿಯ ವಿವರಗಳ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನಲ್ಲಿ ಕೆಲವೊಂದು ಕಾರುಗಳು, ಚಿನ್ನಾಭರಣಗಳು ಇವೆ. ಅದನ್ನು ವಶಕ್ಕೆ ಪಡೆಯಲು ನೀವು ನನ್ನ ಮನೆಗೆ ಬರಬೇಕಿಲ್ಲ. ದಿನಾಂಕ, ಸಮಯ ಹಾಗೂ ಸ್ಥಳವನ್ನು ತಿಳಿಸಿದರೆ ನಾನೇ ಅವುಗಳನ್ನು ತಮ್ಮ ವಶಕ್ಕೆ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

    ನನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಮಾತ್ರ ಬ್ಯಾಂಕ್‍ಗಳು ವಶಕ್ಕೆ ಪಡೆಯಬಹುದೇ ಹೊರತು ಇತರೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ವಿಜಯ ಮಲ್ಯ ಇಂಗ್ಲೆಂಡಿನಲ್ಲಿರುವ ಬೆಲೆ ಬಾಳುವ ಆಸ್ತಿಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಳ್ಳದೇ ಕುಟುಂಬ ಸದಸ್ಯರ ಹೆಸರಿನಲ್ಲಿರಿಸಿದ್ದಾರೆ.

  • ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ತುಮಕೂರು: ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ. ಅನುಭವವೇ ಮುಖ್ಯ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಜಿಲ್ಲೆಯ ಕ್ಯಾತ್ಸಂದ್ರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್, ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಅವರ ಉದಾಹರಣೆ ನೀಡುವ ಮೂಲಕ ಅನುಭವೇ ಎಲ್ಲವನ್ನು ಕಲಿಸಿಕೊಡುತ್ತದೆ ಅಂದ್ರು.

    ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಹಾಕಿಲ್ಲ. ನಾನು ಇಂಗ್ಲಿಷ್ ಶಾಲೆಯಲ್ಲಿ ಓದಿದ್ದೇನೆ. ಹಾಗಾಗಿ ಕನ್ನಡ ಓದು ಸರಿಯಾಗಿ ಬಂದಿಲ್ಲದೆ ಇಂಗಿಷ್‍ನಲ್ಲಿ ಪ್ರಮಾಣ ವಚನ ಮಾಡಿದೆ. ಇದರಿಂದ ರಾಜ್ಯದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಮಾಡಿದ್ರೆ ನನಗೆ ಗಲ್ಲು ಶಿಕ್ಷೆ ಕೊಡಲಿ ಅಥವಾ ದೇಶದ್ರೋಹಿ ಎನ್ನಲಿ ಎಂದರು.

    ಮಂತ್ರಿ ಸ್ಥಾನದ ಅನುಭವ ನನಗಿಲ್ಲ. ಹೀಗಾಗಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಐತಿಹಾಸಿಕ ದಾಖಲೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮಾತು ಕೇಳ್ತಾರೆ ಎಂಬ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳೋದ್ರಲ್ಲಿ ತಪ್ಪಿಲ್ಲ. ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು. ಯಾಕಂದ್ರೆ ಅವರು ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

  • ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 25,492 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮತ್ತು ನಿರ್ದೇಶಕ ಹುಚ್ಚವೆಂಕಟ್ ಅವರು 764 ಮತಗಳನ್ನು ಮಾತ್ರ ಪಡೆದಿದ್ದಾರೆ. 15 ಅಭ್ಯರ್ಥಿಗಳಿದ್ದ ಕಣದಲ್ಲಿ ಹುಚ್ಚ ವೆಂಕಟ್  ಗಳಿಸಿದ್ದ ಮತಗಳಿಗಿಂತ ನೋಟಾಗೆ ಹೆಚ್ಚು ವೋಟು ಬಿದ್ದಿದೆ.

    2,724 ನೋಟಾ ವೋಟು ಚಲಾವಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ನೋಟಾಗೆ ಹೆಚ್ಚಿನ ವೋಟು ಬಿದ್ದಿದೆ. ಆರ್ ಆರ್ ನಗರದಲ್ಲಿ ಒಟ್ಟು 2,56,447 ಮತಗಳಿದ್ದವು, ಅದರಲ್ಲಿ ಮೂರು ಪೋಸ್ಟಲ್ ಮತಗಳು ತಿರಸ್ಕೃತಗೊಂಡಿತ್ತು.

    ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1,08,064 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ 82,572 ಮತಗಳಳನ್ನು ಗಳಿಸಿದ್ದಾರೆ. ಇನ್ನು ಜೆಡಿಎಸ್‍ನ ರಾಮಚಂದ್ರ ಅವರು 60,360 ಮತಗಳು ಪಡೆದುಕೊಂಡಿದ್ದಾರೆ.