Tag: vote

  • ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾದ ನವಜೋಡಿ

    ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾದ ನವಜೋಡಿ

    ಯಾದಗಿರಿ: ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಮತದಾನ ಮಹತ್ವದ ತಿಳಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಸಾಕಷ್ಟು ಜಾಗೃತಿ ಸಹ ಮೂಡಿಸುತ್ತಿದೆ. ಆದರೆ ಯಾದಗಿರಿಯಲ್ಲಿ ನವ ವಿವಾಹಿತರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ನಡೆಸಿದ್ದಾರೆ.

    ಮದುವೆ ಸಮಾರಂಭದಲ್ಲಿ ಲೋಕಸಭಾ ಚುನಾವಣೆಯ ಮತದಾನದ, ಮಹತ್ವ ಸಾರುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮವೊಂದು ಇಂದು ಜರುಗಿದೆ. ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಡಗಿ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಗ್ರಾಮದ ಶಿವರಾಜ್ ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಜಾಗೃತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ನವದಂಪತಿ ವೇದಿಕೆ ಮೇಲೆ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂಬ ಬರಹವಿರುವ ಫಲಕ ತೋರಿಸಿ, ನಾವು ಕಡ್ಡಾಯವಾಗಿ ಮತ ಹಾಕುತ್ತೇವೆ ಮತ್ತು ನೀವು ಕೂಡ ಮತ ಹಾಕಬೇಕೆಂದು ಅತಿಥಿಗಳ ಜೊತೆ ಪ್ರಮಾಣವಚನ ಸ್ವೀಕರಿಸಿದರು.

    ಇದೇ ವೇಳೆ ದಂಪತಿಯ ಸಂಬಂಧಿಯೊಬ್ಬರು ಮಾತನಾಡಿ ಮತದಾರರು, ಹಣ ಹಾಗೂ ಹೆಂಡದ ಆಮಿಷಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೇ ಅಂದು ಮತದಾನ ಮಾಡಬೇಕೆಂದು ಮದುವೆಗೆ ಬಂದ ಅತಿಥಿಗಳಿಗೆ ಜಾಗೃತಿ ಸಂದೇಶ ನೀಡಿದರು.

  • ಮದ್ವೆ ನಂತ್ರ ವರ, ವಧುವಿನಿಂದ ಸುಮಲತಾ ಪರ ಮತಯಾಚನೆ

    ಮದ್ವೆ ನಂತ್ರ ವರ, ವಧುವಿನಿಂದ ಸುಮಲತಾ ಪರ ಮತಯಾಚನೆ

    ರಾಮನಗರ: ಹೈ ವೋಲ್ಟೇಜ್ ಮಂಡ್ಯ ಲೋಕಸಭಾ ಚುನಾವಣೆಯ ಕದನದ ಬಿಸಿ ರಾಮನಗರಕ್ಕೂ ಹಬ್ಬಿದೆ. ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಬಳಿಕ ಸುಮಲತಾ ಪರ ಮತಯಾಚನೆ ಮಾಡಿದ್ದಾರೆ.

    ವಧು ರೇಷ್ಮಾ ಹಾಗೂ ವರ ನಾಗರಾಜ್ ಮದುವೆಯಾದ ದಂಪತಿಯಾಗಿದ್ದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಮತಯಾಚಿಸಿದರು. ಕಳೆದ ಶನಿವಾರ ರೇಷ್ಮಾ ಹಾಗೂ ನಾಗರಾಜ್ ರಾಮನಗರ ತಾಲೂಕಿನ ಬಿಡದಿಯ ಎಸ್.ಪಿ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಮದುವೆ ಬಳಿಕ ದಂಪತಿಗಳು ಕಲ್ಯಾಣ ಮಂಟಪದ ಹೊರಗೆ ವೋಟ್ ಫಾರ್ ಸುಮಲತಾ ಎಂದು ಮತಯಾಚಿಸಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆಯ ವರ ನಾಗರಾಜ್ ಹಾಗೂ ವಧು ರೇಷ್ಮಾ ಮದುವೆಯಾದ ಮೇಲೆ ಸುಮಲತಾ ಪರ ವೋಟ್ ಹಾಕುವಂತೆ ಮನವಿ ಮಾಡಿದ್ದಾರೆ.

    ಇದೀಗ ಮದುವೆ ನಂತರ ವರ ಹಾಗೂ ವಧು, ಸುಮಲತಾ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.

  • ತಮ್ಮ ಪಾದಗಳಿಗೆ ನಮಸ್ಕಾರ ದಯವಿಟ್ಟು ವೋಟ್ ಮಾಡಿ: ದರ್ಶನ್ ಮನವಿ

    ತಮ್ಮ ಪಾದಗಳಿಗೆ ನಮಸ್ಕಾರ ದಯವಿಟ್ಟು ವೋಟ್ ಮಾಡಿ: ದರ್ಶನ್ ಮನವಿ

    ಮಂಡ್ಯ: ತಮ್ಮ ಪಾದಗಳಿಗೆ ನಮಸ್ಕಾರ ದಯವಿಟ್ಟು ವೋಟ್ ಮಾಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಜನರಲ್ಲಿ ಮನವಿ ಮಾಡಿಕೊಂಡರು.

    ಇಂದು ಮಂಡ್ಯದಲ್ಲಿ ದರ್ಶನ್ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಅವರು “ಸುಮಲತಾ ಎ ನೆನಪಿರಲಿ” ಅಂತ ಪದೇ ಪದೇ ಒತ್ತಿ ಹೇಳಿದರು. ಅಲ್ಲದೆ ತಮ್ಮ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ ದಯವಿಟ್ಟು ವೋಟ್ ಮಾಡಿ ಎಂದು ದರ್ಶನ್ ಮನವಿ ಮಾಡಿಕೊಂಡರು. ವಯಸ್ಸಾದವರನ್ನು ಕರೆದು ಕೊಂಡು ಹೋಗಿ ಸುಮಲತಾ ಅವರಿಗೆ ವೋಟು ಮಾಡುವಂತೆ ದರ್ಶನ್ ಹೇಳಿದರು. ಪ್ರಚಾರದ ವೇಳೆ ದರ್ಶನ್ ಸ್ಥಳೀಯ ಮುಖಂಡನನ್ನು ಗಾಡಿಗೆ ಹತ್ತಿಸಿಕೊಂಡರು. ಬಳಿಕ ವಿಡಿಯೋ ಕಾಲ್ ಮೂಲಕ ತನ್ನ ಅಭಿಮಾನಿಯ ಜೊತೆ ಮಾತನಾಡಿದರು.

    ದರ್ಶನ್ ಪ್ರಚಾರದ ವೇಳೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಹೆಸರು ಬಳಸಿದರು. ಚಿತ್ರರಂಗದಲ್ಲಿ ಈ ನಾಲ್ಕು ದಿಗ್ಗಜರ ಹೆಸರು ಮರೆಯುವ ಹಾಗಿಲ್ಲ. ಈ ಪಟ್ಟಿಯಲ್ಲಿ ಅಪ್ಪಾಜೀ ಅಂಬರೀಶ್ ಅವರ ಹೆಸರು ಕೂಡ ಇದೆ. ದಯಮಾಡಿ ಅಂಬರೀಶ್ ಅವರಿಗಾಗಿ ಸುಮಮ್ಮನಿಗೆ ವೋಟ್ ಮಾಡಿ ಎಂದು ಕೇಳಿಕೊಂಡರು.

    ಕೆಆರ್‍ಎಸ್ ಅರಳಿಕಟ್ಟೆಗೆ ದರ್ಶನ್ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ದರ್ಶನ್, ರೆಬಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸುಮಲತಾ ಪರ ಪ್ರಚಾರವನ್ನು ಆರಂಭಿಸಿದರು.

  • ಅರ್ಥ ಮಾಡ್ಕೊಳ್ಳಿ, ನಿಮ್ಮ ಕಷ್ಟ-ಸುಖ ಕುಮಾರಣ್ಣ, ದೇವೇಗೌಡ್ರೇ ಕೇಳಬೇಕು- ನಿಖಿಲ್ ಪರ ರೇವಣ್ಣ ಪ್ರಚಾರ

    ಅರ್ಥ ಮಾಡ್ಕೊಳ್ಳಿ, ನಿಮ್ಮ ಕಷ್ಟ-ಸುಖ ಕುಮಾರಣ್ಣ, ದೇವೇಗೌಡ್ರೇ ಕೇಳಬೇಕು- ನಿಖಿಲ್ ಪರ ರೇವಣ್ಣ ಪ್ರಚಾರ

    ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಲೋಕೋಪಯೋಗಿ ಸಚಿವ ಎಚ್‍ಡಿ.ರೇವಣ್ಣ ಅವರು ಚುನಾವಣಾ ಅಖಾಡಕ್ಕಿಳಿದ್ದಾರೆ. ನಿಮ್ಮ ಕಷ್ಟ ಹಾಗೂ ಸುಖವನ್ನು ಕುಮಾರಣ್ಣ ಹಾಗೂ ದೇವೇಗೌಡರೇ ಕೇಳಬೇಕು. ಹೀಗಾಗಿ ಅರ್ಥಮಾಡಿಕೊಂಡು ನಿಖಿಲ್ ಗೆ ವೋಟು ಹಾಕಿ ಎಂದು ಹೇಳಿದ್ದಾರೆ.

    ರೇವಣ್ಣ ಅವರು ಮಂಡ್ಯದ ಕೆ.ಆರ್ ಪೇಟೆಯಲ್ಲಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ತೆರಳಿ ನಿಖಿಲ್ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಮತ್ತು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರ ಮನೆಗೆ ಭೇಟಿ ನೀಡಿದ್ದು, ನಿಖಿಲ್ ಅವರನ್ನು ಬೆಂಬಲಿಸುವಂತೆ ಜೊತೆಗೆ ಅವರ ಪರವಾಗಿ ಮತಯಾಚನೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಅಂಬರೀಶ್ ಅಣ್ಣ ಅವರ ಬಗ್ಗೆ ಮಾತನಾಡಲ್ಲ. ಆದರೆ ಕುಮಾರಣ್ಣ ಅವರಿಗೆ ಚಾಲೆಂಜ್ ಮಾಡಲು ಹೊರಟಿರುವ ಇವರ ಕೊಡುಗೆ ಮಂಡ್ಯ ಜಿಲ್ಲೆಗೆ ಏನಿದೆ ಎಂದು ಸುಮಲತಾಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಾರು 23ರ ನಂತರ ನಾಪತ್ತೆ ಆಗುತ್ತಾರೆ. ನಿಮ್ಮ ಕಷ್ಟ-ಸುಖ ಕುಮಾರಣ್ಣ, ದೇವೇಗೌಡರೇ ಕೇಳಬೇಕು ಅರ್ಥ ಮಾಡಿಕೊಳ್ಳಿ. ನಿಖಿಲ್ ಅವರಿಗೆ ಭಾರೀ ಬಹುಮತಗಳ ಅಂತರದ ಗೆಲುವು ತಂದುಕೊಡಬೇಕು ಎಂದು ಕೈಮುಗಿದು ರೇವಣ್ಣ ಮನವಿ ಮಾಡಿದ್ದಾರೆ.

    ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ಜೊತೆಗೆ ಸಾವಿರಾರು ಕೋಟಿ ಅನುದಾನವನ್ನು ಜಿಲ್ಲೆಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು 6 ಸಾವಿರ ರೈತರಿಗೆ ಕೊಡುತ್ತೇನೆ ಎಂದರು. ಆದರೆ ಇನ್ನೂ ರೈತರ ಅಕೌಂಟ್‍ಗೆ ಹಾಕಿಲ್ಲ. ಇದೇ ಮೋದಿ ಇದ್ದರೆ ಸಂಘರ್ಷ ಆಗುತ್ತದೆ. ಹೀಗಾಗಿ ವೋಟ್ ಕೊಡುವುದಕ್ಕೆ ಜನರಿದ್ದಾರೆ. ನಾವು ಪ್ರಚಾರ ಮಾಡಬೇಕು. ನಾಳೆಯಿಂದ ನೀವೆಲ್ಲರೂ ಒಂದು ತಾಲೂಕಿಗೆ ಗುಂಪಾಗಿ ಹೋಗಿ ಪ್ರಚಾರ ಮಾಡಿ ಎಂದು ಹೇಳಿದ್ದಾರೆ.

  • ವೋಟ್ ಹಾಕದೇ ಮಜಾ ಮಾಡಲು ಗೋಕರ್ಣಕ್ಕೆ ಬಂದ್ರೆ ಹುಷಾರ್

    ವೋಟ್ ಹಾಕದೇ ಮಜಾ ಮಾಡಲು ಗೋಕರ್ಣಕ್ಕೆ ಬಂದ್ರೆ ಹುಷಾರ್

    ಕಾರವಾರ: ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿ ಮತದಾನ ಮಾಡಿ ಎಂದು ಪ್ರಚಾರ ಮಾಡುತ್ತವೆ. ಆದರೆ ಬಹಳಷ್ಟು ಜನರು ಮತದಾನದ ದಿನ ರಜೆ ಸಿಕ್ಕಿತು ಎಂದು ಮತದಾನ ಮಾಡದೇ ಪ್ರವಾಸಕ್ಕೆ ತೆರಳೋದು ಇಲ್ಲವೇ ಮಜಾ ಮಾಡಿಕೊಂಡು ಎಲ್ಲೆಲ್ಲೋ ಇರುತ್ತಾರೆ. ಇಂತವರಿಗಾಗಿ ಹೋಟೆಲ್ ಮಾಲೀಕರೊಬ್ಬರು ತಮ್ಮ ಹೋಟೆಲ್ ನಲ್ಲಿ ಮತದಾನ ಮಾಡದ ಪ್ರವಾಸಿಗರಿಗೆ ಊಟ ನೀಡುವುದಿಲ್ಲ ಎಂದು ಬೋರ್ಡ್ ಹಾಕಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಹೋಟೆಲ್ ಮಾಲೀಕರೊಬ್ಬರು ಈ ರೀತಿ ಬೋರ್ಡ್ ಹಾಕಿದ್ದಾರೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದರೂ ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಜನರಷ್ಟೇ ಅಲ್ಲದೆ ಇಲ್ಲಿನ ಪ್ರಸಿದ್ಧ ಓಂ ಬೀಚ್, ಕುಡ್ಲೆ ಬೀಚ್‍ಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಹೀಗಾಗಿ ರಜೆ ದಿನದಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇದನ್ನೂ ಓದಿ: ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!

    ಕರ್ನಾಟಕದಲ್ಲಿ ಏ.18 ಹಾಗು 23 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಜೆ ಇದ್ದು ಆ ದಿನ ಬಹಳಷ್ಟು ಜನರು ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬರುತ್ತಾರೆ. ಹೀಗಾಗಿ ಇದನ್ನು ಮನಗಂಡ ಇಲ್ಲಿನ ಪೈ ರೆಸ್ಟೋರೆಂಟ್ ಹೋಟೆಲ್‍ನವರು ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದು, ಮತದಾನದ ದಿನ ಮತದಾನ ಮಾಡದೇ ಬರುವ ಪ್ರವಾಸಿಗರಿಗೆ ಯಾವುದೇ ಊಟ, ಉಪಹಾರ ನೀಡದಿರಲು ನಿರ್ಧರಿಸಿದ್ದಾರೆ.

    ಈ ಕುರಿತು ಜಾಗೃತಿ ಪತ್ರ ಮುದ್ರಿಸಿ ಗೋಡೆಗೆ ಅಂಟಿಸಿರುವ ಮಾಲೀಕರು, ಆ ದಿನ ಮತದಾರರು ತಮ್ಮ ಊರಿನಲ್ಲಿಯೇ ಇದ್ದು ಮತದಾನ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಒಂದು ವೇಳೆ ಮತದಾನ ಮಾಡದೇ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದರೇ ಅಂತವರಿಗೆ ಈ ಹೋಟೆಲ್‍ನಲ್ಲಿ ಊಟ ಸಹ ನೀಡದಿರಲು ತೀರ್ಮಾನಿಸಿ ಈ ಮೂಲಕ ಮತದಾನದ ಜಾಗೃತಿ ಮೂಡಿಸುತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಮತದಾನದ ಜಾಗೃತಿಗಾಗಿ ಜಿಲ್ಲಾಡಳಿತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತದಾನ ಮಾಡುವಂತೆ ಜನರಲ್ಲಿ ವಿನಂತಿಸಿಕೊಳ್ಳುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೋಟೆಲ್ ನವರು ಮತದಾನ ಮಾಡದ ಜನರಿಗೆ ಊಟ ನೀಡುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡು ನಾಮಫಲಕ ಹಾಕಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಮತದಾರರಿಗೆ ಬಸ್ ಬರೆ!

    ಮತದಾರರಿಗೆ ಬಸ್ ಬರೆ!

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಭರಾಟೆ ಜೋರಾಗಿರುವಂತೆ ಜನರಿಗೆ ಬಸ್ ದರದ ಬಿಸಿ ತಾಗಿದೆ. ಎಲೆಕ್ಷನ್ ಹಿನ್ನೆಲೆಯಲ್ಲಿ ಮತದಾನದ ಮುನ್ನಾದಿನವಾದ ಏಪ್ರಿಲ್ 17 ಹಾಗೂ ಏಪ್ರಿಲ್ 22 ರಂದು ತಮ್ಮ ತಮ್ಮ ಊರುಗಳಿಗೆ ತೆರಳುವವರು ದುಪ್ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.

    ಈ 2 ದಿನಗಳಂದು ರಾಜಕೀಯ ಮುಖಂಡರು ಈಗಾಗಲೇ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ಡಿಮ್ಯಾಂಡ್ ಕ್ರಿಯೆಟ್ ಆಗಿದ್ದು ಬಸ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.

    ಯಾವ್ಯಾವ ಊರುಗಳಿಗೆ ಎಷ್ಟೆಷ್ಟು ಏರಿಕೆ?:
    ಬೆಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನ ಸಾಮಾನ್ಯ ದರ 900 ಆಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಮುನ್ನಾ ದಿನ ತೆರಳಿದ್ರೆ ಅದರ ದರ 1,500ರೂ.ಗೆ ಏರಿಕೆ ಮಾಡಲಾಗಿದೆ.

    ಬೆಂಗಳೂರಿನಿಂದ ಬೆಳಗಾವಿಗೆ ಪ್ರಸ್ತುತ ಬಸ್ ದರ 1,000 ಆಗಿದ್ದು, ಲೋಕಸಭಾ ಚುನಾವಣೆಯ ಮತದಾನದ ಮುಂದಿನ ದಿನ ತೆರಳಬೇಕಾದ್ರೆ 2000 ರೂ. ಟಿಕೆಟ್ ತೆಗೆದುಕೊಳ್ಳಲೇಬೇಕಾಗಿದೆ. ಹಾಗೆಯೇ ಶಿವಮೊಗ್ಗಕ್ಕೆ ತೆರಳಬೇಕಾದ್ರೆ ಪ್ರಸ್ತುತ ದರ 500 ಆಗೊದೆ. ಆದ್ರೆ ಚುನಾವಣೆ ಮೊದಲನೇ ದಿನ ತೆರಳಬೇಕಾದ್ರೆ 1,200 ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಹುಬ್ಬಳ್ಳಿಗೆ ತೆರಳಲು ಪ್ರಸ್ತುತ ಬಸ್ಸಿನ ದರ 1,000 ಆಗಿದ್ದು, 2,000ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಮೈಸೂರಿಗೆ ಬಸ್ ಟಿಕೆಟ್ ದರ ಪ್ರಸ್ತುತ 300 ಆಗಿದ್ದು, 700ಕ್ಕೆ ಏರಿಸಲಾಗಿದೆ.

    ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ತೆರಳಲುವ ಪ್ರಯಾಣಿಕರಿಗೆ ಬಸ್ ದರ ಏರಿಕೆ ಮಾಡುವ ಮೂಲಕ ಖಾಸಗಿ ಬಸ್ಸುಗಳು ಶಾಕ್ ಕೊಟ್ಟಿದೆ ಎಂದು ಪ್ರಯಾಣಿಕ ರಾಘವೇಂದ್ರ ಹೇಳುತ್ತಾರೆ.

  • ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ಮಂಡ್ಯ: ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ ಎಂದು ಸಚಿವ ಪುಟ್ಟರಾಜು ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ಇಂದು ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನರು ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ವೋಟ್ ಹಾಕುವುದಿಲ್ಲ. ಹಾಗಿದ್ದರೆ ಮೋದಿ ಏಕೆ ಬೀದಿ ಬೀದಿ ಸುತ್ತಬೇಕಿತ್ತು ಎಂದು ಹೇಳುವ ಮೂಲಕ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ನಾವು- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ನಾವೇ ಈಗ ಒಂದಾಗಿದ್ದೇವೆ. ಆದರೆ ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ. ಅವರು ಮಂಡ್ಯದಲ್ಲಿ ಅಭ್ಯರ್ಥಿ ಹಾಕೋದಿಲ್ಲ. ಸ್ವಾಭಿಮಾನವಿರುವ ಮಂಡ್ಯ ಜನ ಬೇರೆಯವರ ಕೈಯಲ್ಲಿ ಹೇಳಿಸಿಕೊಳ್ಳಲ್ಲ ಎಂದರು.

    ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬುದು ಶುದ್ಧ ಸುಳ್ಳು. ಏಕೆಂದರೆ ಅಭಿವೃದ್ಧಿಯೇ ನಮ್ಮ ಅಜೆಂಡಾ. ನಾಮಪತ್ರ ಸಲ್ಲಿಕೆಯಾದ ಮೇಲೆ ತಂತ್ರಗಾರಿಕೆ ಗೊತ್ತಾಗುತ್ತದೆ. ಮಂಡ್ಯ ಜಿಲ್ಲೆಯ ಜನರಿಗೆ ಸ್ವಾಭಿಮಾನದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ನಾನು ಮಲಗಿಕೊಳ್ಳೋದು ಚಿನಕುರಳಿಯಲ್ಲಿ, ಬೆಳಗ್ಗೆ ಎದ್ದು ಗದ್ದೆಗೆ ನೀರು ಕಟ್ಟಿ ಅಲ್ಲಿಯೇ ವಾಕ್ ಮಾಡಿ ಬರುತ್ತೇನೆ. ಇದು ಸ್ವಾಭಿಮಾನ ಅಲ್ಲವೆ ಎಂದು ಪುಟ್ಟರಾಜು ಹೇಳಿದ್ದಾರೆ.

    ಈ ಮೂಲಕ ಸುಮಲತಾ ಅವರು ಬೆಂಗಳೂರಿನಲ್ಲಿ ಇದ್ದುಕೊಂಡು ಸ್ವಾಭಿಮಾನದ ಬಗ್ಗೆ ಮಾತನಾಡುವುದಕ್ಕೆ ಪರೋಕ್ಷವಾಗಿ ಕೆದಕಿದ್ದಾರೆ.

  • ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!

    ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!

    – ಚಿಕ್ಕಮಗ್ಳೂರು ಯುವಕರಿಂದ ಎಚ್ಚರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಪ್ರವಾಸಕ್ಕೆ ಬಂದರೆ ನಿಮ್ಮ ವಾಹನವನ್ನು ಪಂಚರ್ ಮಾಡುತ್ತೇವೆ ಎಂದು ಯುವಕರು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರು ಯುವಕರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಮತದಾನದ ದಿನ ಯುವಕ- ಯುವತಿಯರು ಮೋಜು-ಮಸ್ತಿಗೆ ಎಂದು ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರಿಗೆ ಎಂದು ತೆರಳುತ್ತಾರೆ.

    ಮತದಾನ ದಿನದ ಮೋಜು ಮಾಡುವ ಯುವಕರ ಪ್ಲಾನ್‍ಗೆ ಬ್ರೇಕ್ ಹಾಕಲು ವಾಟ್ಸಾಪ್‍ನಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಆಗುತ್ತಿದೆ. ಏಪ್ರಿಲ್ 18 ಮತ್ತು 23 ರಂದು ಮತದಾನ ಮಾಡಿ. ವೋಟ್ ಹಾಕದೆ ಪ್ರವಾಸಕ್ಕೆ ಬಂದರೆ ತೊಂದರೆ ಕೊಡುತ್ತೇವೆ ಎಂದು ಚಿಕ್ಕಮಗಳೂರು, ಮಡಿಕೇರಿ ಹಾಗೂ ಮೈಸೂರಿನ ಯುವಕರು ಎಚ್ಚರಿಗೆ ನೀಡುತ್ತಿದ್ದಾರೆ.

    ವಾಟ್ಸಾಪ್‍ಗಳಲ್ಲಿ ವಿಶೇಷವಾಗಿ ಬೆಂಗಳೂರಿನ ಜನರನ್ನು ಯುವಕರು ಎಚ್ಚರಿಕೆ ನೀಡುತ್ತಿದ್ದಾರೆ.

  • ಸೆಲ್ಫಿ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕೋದನ್ನು ಮರೀಬೇಡಿ: ಪುನೀತ್ ಅಭಿಮಾನಿಗಳಲ್ಲಿ ಡಿಕೆಶಿ ಮನವಿ

    ಸೆಲ್ಫಿ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕೋದನ್ನು ಮರೀಬೇಡಿ: ಪುನೀತ್ ಅಭಿಮಾನಿಗಳಲ್ಲಿ ಡಿಕೆಶಿ ಮನವಿ

    ಬೆಂಗಳೂರು: “ಸೆಲ್ಫಿ ಬೇಕಿದ್ರೆ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕಲು ಮರೆಯಬೇಡಿ” ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಶುಭಾಶಯ ತಿಳಿಸಲು ಆಗಮಿಸಿದ್ದರು. ಈ ವೇಳೆ ಪುನೀತ್ ನಿವಾಸದ ಬಳಿ ಇದ್ದ ಮನೆಯಲ್ಲಿ ಡಿಕೆ ಶಿವಕುಮಾರ್ ಇರುವುದನ್ನು ನೋಡಿ ಅವರ ಜೊತೆಗೂ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು.

    ಡಿಕೆಶಿ ಮನೆ ಜಗಲಿಯಲ್ಲಿ ನಿಂತುಕೊಂಡಾಗ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದರು. ಈ ವೇಳೆ ಡಿಕೆಶಿ,”ಸೆಲ್ಫಿ ಬೇಕಿದ್ರೆ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕುವುದನ್ನು ಮರೆಯಬೇಡಿ. ಎಲ್ಲರೂ ಒಬ್ಬೊಬ್ಬರೇ ಬಂದು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಿ. ಆದರೆ ನೀವುಗಳು ಈ ಬಾರಿ ವೋಟು ಮಾತ್ರ ಕಾಂಗ್ರೆಸ್ಸಿಗೆ ಹಾಕಬೇಕು ಎಂದು ಮನವಿ ಮಾಡಿದರು.

    ಡಿಕೆಶಿಯ ಮಾತಿಗೆ, ಆಯ್ತು ಸರ್ ಈ ಬಾರಿ ಕಾಂಗ್ರೆಸ್ಸಿಗೆ ನಮ್ಮ ವೋಟು, ಸ್ವಲ್ಪ ಈ ಕಡೆ ತಿರುಗಿ ಎಂದ ಹೇಳಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

  • ರಮ್ಯಾಗೆ ಟಿಕೆಟ್ ಕೊಟ್ಟ ಬೆಂಗ್ಳೂರಿನ ನಿವಾಸಿ

    ರಮ್ಯಾಗೆ ಟಿಕೆಟ್ ಕೊಟ್ಟ ಬೆಂಗ್ಳೂರಿನ ನಿವಾಸಿ

    ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವೋಟ್ ಮಾಡಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಘವೇಂದ್ರ ಅವರು ಮೊದಲಿಗೆ ನೀವು ವೋಟ್ ಹಾಕಿ ಎಂದು ಪತ್ರ ಬರೆದಿದ್ದಾರೆ.

    ಬೆಂಗಳೂರಿನ ನಿವಾಸಿ ರಾಘವೇಂದ್ರ ಈಸಲನಾದರೂ ವೋಟು ಮಾಡಮ್ಮ ತಾಯೇ. ಡೆಲ್ಲಿ ಟು ಮಂಡ್ಯ ನಾನೇ ನಿಮಗೆ ಫ್ಲೈಟ್ ಟಿಕೆಟ್ ಹಾಗೂ ಬಸ್ ಟಿಕೆಟ್ ಕಳುಹಿಸುತ್ತೀನಿ. ಆದರೆ ವೋಟು ಹಾಕುವುದನ್ನು ಮಿಸ್ ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ಮಂಡ್ಯ ಕ್ಷೇತ್ರದ ಮತದಾರರಾಗಿರುವ ನೀವು ಈ ಹಿಂದೆ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆಗೆ ಮತದಾನ ಮಾಡಿಲ್ಲ. ತಾವು ಒಂದು ಪಕ್ಷದ ಉನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದೀರಿ. ಆದರೆ ನೀವೇ ಮತದಾನವನ್ನು ಮರೆತಿರುವುದು ಶೋಚನೀಯವಾಗಿದೆ. ಆದರೂ ನೀವು ಸಾಮಾಜಿಕ ಜಾಲತಾಣಗಲ್ಲಿ ಹೊಸದಾಗಿ ಮತದಾನ ಮಾಡುವರರಿಗೆ ಬೇಗನೇ ನೊಂದಣಿ ಮಾಡಿ ಎಂದು ಸಂದೇಶವನ್ನು ಕಳುಹಿಸಿದ್ದೀರಿ. ಇದು ಹಾಸ್ಯಸ್ಪದವಾಗಿದ್ದು, ಈಗಾಗಲೇ ಜನರು ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯಾದರೂ ನೀವು ಮತ ಚಲಾಯಿಸಿ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಿ. ಅದಕ್ಕಾಗಿ ನಾನು ನಿಮಗೆ ಪ್ರಯಾಣ ದರವನ್ನು ಉಚಿತವಾಗಿ ನೀಡಲು ನಾನು ಸಿದ್ಧ ಎಂದು ಬರೆದಿದ್ದಾರೆ.

    ರಮ್ಯಾ ಟ್ವಿಟ್ಟರ್ ನಲ್ಲಿ” ಹೊಸದಾಗಿ ಮೊದಲ ಬಾರಿಗೆ ಮತದಾನ ಮಾಡುವ ಅರ್ಹತೆ ಯುವ ಮತದಾರರು ಬೇಗ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳಿ. ಸಮಯ ಬೇಗ ಹೋಗುತ್ತಿದೆ. ಭವಿಷ್ಯವೂ ನಿಮ್ಮದಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಹೀಗಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ ರಮ್ಯಾ ಮಾಡಿರುವ ಟ್ವೀಟ್ ನೆಟ್ಟಿಗರು ಕೋಪಗೊಂಡು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದರು.

    ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಮಂಡ್ಯ ಲೋಕಸಭಾ ಉಪಚುನಾವಣೆಯ ಸಮಯದಲ್ಲೂ ರಮ್ಯಾ ಆಗಮಿಸಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದು ಮತದಾನ ಮಾಡಲು ಆಗಮಿಸಿದ ರಮ್ಯಾ ವಿರುದ್ಧ ಮಂಡ್ಯದ ಮಂದಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv