Tag: vote

  • ವೋಟ್ ಮಾಡದೆ ಟ್ರೋಲ್ ಆದ ಕಿಲಾಡಿ ಅಕ್ಷಯ್ ಕುಮಾರ್

    ವೋಟ್ ಮಾಡದೆ ಟ್ರೋಲ್ ಆದ ಕಿಲಾಡಿ ಅಕ್ಷಯ್ ಕುಮಾರ್

    ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೋಮವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ.

    ಸೋಮವಾರ ಮಹರಾಷ್ಟ್ರದಲ್ಲಿ 4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಿತು. ಈ ವೇಳೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬ, ರಣ್‍ವೀರ್ ಸಿಂಗ್ ಸೇರಿದಂತೆ ಹಲವು ತಾರೆಯರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಆದರೆ ನಟ ಅಕ್ಷಯ್ ಮತ ಹಾಕಲಿಲ್ಲ. ಇದೀಗ ಈ ವಿಷಯಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

    ದೇಶಭಕ್ತ ಅಕ್ಷಯ್ ಕುಮಾರ್ ಹೊರತುಪಡಿಸಿ ಶಾರೂಕ್, ಸಲ್ಮಾನ್, ಅಮೀರ್ ಹಾಗೂ ಟ್ವಿಂಕಲ್ ಖನ್ನಾ ಎಲ್ಲರೂ ವೋಟ್ ಹಾಕಿದ್ದಾರೆ. ಅಕ್ಷಯ್ ಕೆನೆಡಾ ದೇಶದ ನಾಗರಿಕ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬಾಲಿವುಡ್‍ನ ದೊಡ್ಡ ದೇಶಭಕ್ತ ತನ್ನ ಮತ ಚಲಾಯಿಸಿಲ್ಲ ಎಂದು ಮತ್ತೊಬ್ಬರು ಟ್ರೋಲ್ ಮಾಡಿದ್ದಾರೆ.

    ಇತ್ತೀಚೆಗೆ ಅಕ್ಷಯ್, ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರು. ಬಳಿಕ ತಮ್ಮ ಟ್ವಿಟ್ಟರಿನಲ್ಲಿ, “ಇಡೀ ದೇಶ ಚುನಾವಣೆ ಹಾಗೂ ರಾಜಕೀಯದ ಬಗ್ಗೆ ಮಾತನಾಡುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಾಜಕೀಯ ವಿಷಯ ಚರ್ಚೆ ಮಾಡದೆ ಕೇವಲ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದರು.

    ಮತದಾನ ಮಾಡದ್ದು ಯಾಕೆ?
    ದೇಶಕ್ಕಾಗಿ ಮತ ಹಾಕಿ ಎಂದು ಅಕ್ಷಯ್ ಕುಮಾರ್ ಜನತೆಯಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ಅಕ್ಷಯ್ ಕುಮಾರ್ ಅವರು ಭಾರತೀಯ ನಾಗರಿಕರಲ್ಲ. ಅವರು ಕೆನಡಾದ ಪಾಸ್‍ಪೋರ್ಟ್ ಹೊಂದಿದ್ದು, ಅವರು ಕೆನಡಾದ ನಾಗರಿಕರಾಗಿದ್ದಾರೆ. ಹೀಗಾಗಿ ಅಕ್ಷಯ್ ಮತದಾನ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

  • ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರಾ..? ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ..? ಈ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿದಿರುವ ನಾಲ್ಕು ಹಂತಗಳು ಉತ್ತರ ನೀಡಲಿದೆ. ಈಗಾಗ್ಲೇ 543 ಕ್ಷೇತ್ರಗಳ ಪೈಕಿ 303 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. 240 ಲೋಕಸಭಾ ಕ್ಷೇತ್ರಗಳಿಗಷ್ಟೇ ಮತದಾನ ಬಾಕಿಯಿದೆ. ಇಂದು 72 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ.

    ಇಂದು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಲೋಕ ಕದನಕ್ಕೆ ಚಾಲನೆ ಸಿಗಲಿದ್ದು, ಒಡಿಶಾ, ಮಹಾರಾಷ್ಟ್ರದಲ್ಲಿ ಮತದಾನ ಮುಕ್ತಾಯವಾಗಲಿದೆ. ಮಹಾರಾಷ್ಟ್ರ-17, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 13, ಪಶ್ಚಿಮ ಬಂಗಾಳ-8, ಮಧ್ಯ ಪ್ರದೇಶ ಮತ್ತು ಓಡಿಶಾಗಳಲ್ಲಿ ತಲಾ 6, ಬಿಹಾರ-5, ಜಾರ್ಖಂಡ್-3 ಹಾಗೂ ಜಮ್ಮು & ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

    ಕನ್ನಯ್ಯ ಕುಮಾರ್, ಊರ್ಮಿಳಾ ಮಾಂತೋಡ್ಕರ್, ಮಿಲಿಂದ್ ದಿಯೋರಾ, ಅಖಿಲೇಶ್ ಸಿಂಗ್, ಮನೇಕಾ ಗಾಂಧಿ ಸೇರಿ 961 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇವತ್ತಿಂದ ಮತದಾನ ಆಗುತ್ತಿರುವ ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಈ ಕ್ಷೇತ್ರಗಳನ್ನು ಮತ್ತೆ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

  • ಟಿಎಂಸಿಗೆ ಮತ ಹಾಕದ್ದಕ್ಕೆ ಪತ್ನಿಯ ಬಾಯಿಗೆ ಆ್ಯಸಿಡ್ ಹಾಕ್ದ!

    ಟಿಎಂಸಿಗೆ ಮತ ಹಾಕದ್ದಕ್ಕೆ ಪತ್ನಿಯ ಬಾಯಿಗೆ ಆ್ಯಸಿಡ್ ಹಾಕ್ದ!

    ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದ್ದಕ್ಕೆ ಪತಿಯೊಬ್ಬ ಪತ್ನಿಯ ಬಾಯಿಗೆ ಆ್ಯಸಿಡ್ ಹಾಕಿ ದೌರ್ಜನ್ಯ ಎಸಗಿದ್ದಾನೆ.

    ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಟಿಎಂಸಿ ಕಾರ್ಯಕರ್ತನಾಗಿದ್ದು ಆಡಳಿತರೂಢ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದ. ಆದರೆ ಪತ್ನಿ ಅನ್ಸುರಾ ಬಿಬಿ ಟಿಎಂಸಿಗೆ ಮತ ಹಾಕದ್ದಕ್ಕೆ ಬಾಯಿಗೆ ಆ್ಯಸಿಡ್ ಹಾಕಿ ಹೊಡೆದಿದ್ದಾನೆ.

    ಮುರ್ಷಿದಾಬಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅನ್ಸುರಾಳನ್ನು ದಾಖಲಿಸಲಾಗಿದೆ. ಶ್ವಾಸನಾಳ ಸುಟ್ಟು ಹೋಗಿದ್ದು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ತಂದೆ ತಲೆಕೂದಲು ಎಳೆದು ಹೊಡೆದು ನಂತರ ತಾಯಿಯ ಬಾಯಿಗೆ ಆ್ಯಸಿಡ್ ಹಾಕಿದ್ದಾನೆ ಎಂದು ಮಗ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಏಪ್ರಿಲ್ 23 ಮಂಗಳವಾರ ಮಧ್ಯಾಹ್ನ ವೋಟ್ ಹಾಕಿ ಪತ್ನಿ ಮನೆಗೆ ಬಂದಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಪತಿ ಬಾಯಿಗೆ ಆ್ಯಸಿಡ್ ಹಾಕಿದ್ದಾನೆ.

  • ಮತಗಟ್ಟೆಯ ಒಳಗಡೆ ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಡ

    ಮತಗಟ್ಟೆಯ ಒಳಗಡೆ ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಡ

    ಬಾಗಲಕೋಟೆ: ಮತಗಟ್ಟೆ ಒಳಗೆ ಹೋಗಿದ್ದ ಕಾರ್ಯಕರ್ತರು ಕಾಂಗ್ರೆಸ್‍ಗೆ ಮತ ಹಾಕುವಂತೆ ಮತದಾರರಿಗೆ ಒತ್ತಾಯ ಮಾಡಿದ ಘಟನೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.

    ಗುಳೇದಗುಡ್ಡದ ಮತಗಟ್ಟೆ ಸಂಖ್ಯೆ 25 ರಲ್ಲಿ ಮತದಾನ ಪ್ರಕ್ರಿಯೆ ನಡೆಯುತಿತ್ತು. ಈ ವೇಳೆ ಅಲ್ಲಿಗೆ ಬಂದ ಕೆಲ ಕಾರ್ಯಕರ್ತರು ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಾಯಿಸಿದರು. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಬಾಗಲಕೋಟೆ ನಗರದ ಪಂಕಾ ಮಸಿದಿ ಬಳಿ ಮತಗಟ್ಟೆ 2ರಲ್ಲಿ ಮತಚಲಾಯಿಸುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಗಲಾಟೆಯಾಗಿತ್ತು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಮೂಲಕ ಎರಡೂ ಪಕ್ಷದ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಮತದಾನ ಪ್ರಕ್ರಿಯೆ ಯತಾಸ್ಥಿತಿಯಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದೆ.

  • ಕರ್ತವ್ಯದ ವೇಳೆ ಬಸ್ ನಿಲ್ಲಿಸಿ ಚಾಲಕನಿಂದ ವೋಟ್!

    ಕರ್ತವ್ಯದ ವೇಳೆ ಬಸ್ ನಿಲ್ಲಿಸಿ ಚಾಲಕನಿಂದ ವೋಟ್!

    ಕಾರವಾರ: ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲರೂ ತಮ್ಮ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಹೀಗೆಯೇ ಕಾರವಾರದ ಬಸ್ ಚಾಲಕರೊಬ್ಬರು ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಮತ ಹಾಕಿದ್ದಾರೆ.

    ಶಿರಸಿ ಡಿಪೋದ ಚಾಲಕ ಇಬ್ರಾಹಿಂ ಶೇಖ್ ಬಸ್ ನಿಲ್ಲಿಸಿ ಮತದಾನ ಮಾಡಿದ್ದಾರೆ. ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿರುವ 93ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿ ನಂತರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಏಪ್ರಿಲ್ 18 ಮೊದಲ ಹಂತದ ಚುನಾವಣೆಯ ವೇಳೆ ದಕ್ಷಿಣ ಕನ್ನಡದ ಬಸ್ ಚಾಲಕರೊಬ್ಬರು ಇದೇ ರೀತಿ ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಮತ ಹಾಕಿದ್ದರು. ಜಯರಾಜ್ ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಜಯರಾಜ್ ಶೆಟ್ಟಿ ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ತಮ್ಮ ಬೂತ್ ಹತ್ತಿರ ಬಂದಾಗ ಬಸ್ ನಿಲ್ಲಿಸಿ, ಓಡಿಕೊಂಡು ಹೋಗಿ ಮತ ಹಾಕಿ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಮತದಾನ ಮಾಡಲು ಲಂಡನ್‍ನಿಂದ ಆಗಮಿಸಿದ ರೆಡ್ಡಿ ಪುತ್ರ

    ಮತದಾನ ಮಾಡಲು ಲಂಡನ್‍ನಿಂದ ಆಗಮಿಸಿದ ರೆಡ್ಡಿ ಪುತ್ರ

    ಬಳ್ಳಾರಿ: ಮತದಾನ ಮಾಡಲು ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಲಂಡನ್‍ನಿಂದ ಆಗಮಿಸಿದ್ದಾರೆ.

    ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ, ಪುತ್ರಿ ಬ್ರಹ್ಮಿಣಿ ಹಾಗೂ ಮಗ ಕಿರೀಟಿ ಬಳ್ಳಾರಿಯ ಬೂತ್ 5 ಗೆ ಆಗಮಿಸಿ ಮತದಾನ ಮಾಡಿದ್ದಾರೆ. ಕಿರೀಟಿಯ ಮೊದಲ ಮತದಾನ ಆಗಿರುವುದರಿಂದ ಅವರು ಮತ ಚಲಾಯಿಸಲು ಲಂಡನ್‍ನಿಂದ ಆಗಮಿಸಿದ್ದಾರೆ. ರೆಡ್ಡಿ ಮಾವ ಪರಮೇಶ್ವರ ರೆಡ್ಡಿ ಹಾಗೂ ಅತ್ತೆ ನಾಗಲಕ್ಷಮ್ಮ ಅವರು ಕೂಡ ಮತದಾನ ಮಾಡಿದ್ದಾರೆ.

    ಬಳ್ಳಾರಿಯಲ್ಲಿ ಮತದಾನದ ನಂತರ ಮಾತನಾಡಿದ ಕಿರೀಟಿ, ಮತದಾನ ಮಾಡಲೆಂದು ನಾನು ಲಂಡನ್‍ನಿಂದ ಆಗಮಿಸಿದ್ದೇನೆ. ನನಗೆ ಇದು ಮೊದಲ ಮತ ಆಗಿರುವುದರಿಂದ ತುಂಬಾ ಖುಷಿಯಾಗಿದೆ. ನನ್ನ ತಂದೆ ಜೊತೆಗೆ ಇಲ್ಲದಿರುವುದು ಅಷ್ಟೇ ದುಃಖ ಸಹ ಆಗಿದೆ. ನಾನು ಲಂಡನ್‍ನಲ್ಲಿ ರಾಜಕೀಯ ಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನಗೆ ಮುಂದೆ ಅವಕಾಶ ಸಿಕ್ಕರೆ ರಾಜಕೀಯಕ್ಕೆ ಬರುವೆ. ಆದರೆ ಸದ್ಯಕ್ಕೆ ನನ್ನ ಆಯ್ಕೆ ಚಿತ್ರರಂಗ. ಹಾಗಾಗಿ ನಾನು ಮೊದಲು ಚಿತ್ರರಂಗದಲ್ಲಿ ನಟನೆಯ ನಂತರ ರಾಜಕೀಯದ ಬಗ್ಗೆ ಚಿಂತಿಸುವೆ ಎಂದು ಹೇಳಿದರು.

    ಬಳ್ಳಾರಿಯಲ್ಲಿ ಮತಚಲಾಯಿಸುವ ಹಕ್ಕು ಈ ಬಾರಿಯೂ ಜನಾರ್ದನ ರೆಡ್ಡಿಗೆ ಸಿಕ್ಕಿಲ್ಲ. ಈ ಮೂಲಕ ಈ ಬಾರಿಯೂ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಎಂಟ್ರಿ ಮಾಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಮಧ್ಯೆ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಲಿಲ್ಲ. ಹೀಗಾಗಿ ಅವರು ಬಳ್ಳಾರಿಯಲ್ಲಿ ಈ ಬಾರಿಯೂ ಮತದಾನ ಮಾಡಲ್ಲ ಎನ್ನಲಾಗಿದೆ.

    ಜನಾರ್ದನರೆಡ್ಡಿ ಗದಗ್‍ನಲ್ಲಿ ಮತದಾನಕ್ಕೆ ನೋಂದಣಿ ಮಾಡಿಸಿರುವುದು ಕೂಡ ರದ್ದಾಗಿದೆ. ಈ ಎಲ್ಲಾ ಕಾರಣಗಳಿಂದ ರೆಡ್ಡಿಗೆ ಸದ್ಯ ಎಲ್ಲೂ ಮತದಾನ ಮಾಡುವ ಹಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಜನಾರ್ದನ ರೆಡ್ಡಿ ಮತ ಚಲಾಯಿಸಿರಲಿಲ್ಲ.

  • ಮತ ಚಲಾವಣೆಗೆ ಹೊರಟ ಹಾಸ್ಟೆಲ್ ವಿದ್ಯಾರ್ಥಿಯರನ್ನು ತಡೆದ ಕೈ ಕಾರ್ಯಕರ್ತರು

    ಮತ ಚಲಾವಣೆಗೆ ಹೊರಟ ಹಾಸ್ಟೆಲ್ ವಿದ್ಯಾರ್ಥಿಯರನ್ನು ತಡೆದ ಕೈ ಕಾರ್ಯಕರ್ತರು

    ಬಾಗಲಕೋಟೆ: ಮತ ಚಲಾವಣೆಗೆ ಹೊರಟ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು ಬಾಗಲಕೋಟೆಯ ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು 124 ಹಾಗೂ 125 ಮತಗಟ್ಟೆಯಲ್ಲಿ ಮತ ಚಲಾಯಿಸಲು ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ತಡೆದಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯಾವ ಊರಿನವರು ಇಲ್ಯಾಕೆ ವೋಟ್ ಹಾಕುತ್ತಿದ್ದೀರಿ ಎಂದು ಆವಾಜ್ ಹಾಕಿದ್ದಾರೆ. ವೋಟರ್ ಐಡಿ ಇದೆ ಎಂದರೂ ಕೈ ಕಾರ್ಯಕರ್ತರು ಮತ ಚಲಾಯಿಸಲು ಆಕ್ಷೇಪ ಎತ್ತಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಡ್ರೆಸ್ ಹೇಳಿ, ಯಾವ ಊರು ಎಂದು ಆವಾಜ್ ಹಾಕಿದ್ದಾರೆ. ಸ್ಥಳದಲ್ಲಿ ಮಾತಿನ ಚಕಮಕಿ ಕೂಡ ನಡೆದಿದೆ. ಬಿಜೆಪಿಯವರು ಪರ ಊರಿನ ವಿದ್ಯಾರ್ಥಿಗಳಿಗೆ ವೋಟರ್ ಐಡಿ ರಚಿಸಿ ಕೊಟ್ಟು ಇಲ್ಲಿ ವೋಟ್ ಹಾಕಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

  • ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌‌ರಿಂದ ನೀತಿ ಸಂಹಿತೆ ಉಲ್ಲಂಘನೆ

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌‌ರಿಂದ ನೀತಿ ಸಂಹಿತೆ ಉಲ್ಲಂಘನೆ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮತಗಟ್ಟೆಯ ಒಳಗಡೆ ಮತಯಾಚಣೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

    ಬೆಳಗಾವಿಯ ಹಿಂಡಲಗಾ 60ರ ಮತಗಟ್ಟೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತನ್ನ ತಾಯಿ, ಪುತ್ರ ಮತ್ತು ಸಹೋದರನ ಜೊತೆಗೆ ಬಂದು ಮತದಾನ ಮಾಡಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದ ಬಳಿಕ ಮತಗಟ್ಟೆ ಆವರಣದಲ್ಲಿ ಮತದಾರರಿಗೆ ಕೈಮುಗಿದು ಇದೊಂದು ಬಾರಿ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಮತಗಟ್ಟೆಯ ಆವರಣದ ಒಳಗಡೆ ಮತಯಾಚನೆ ಮಾಡುವಂತಿಲ್ಲ. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮತಯಾಚನೆ ಮಾಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

  • ವಿದ್ಯಾರ್ಥಿನಿ ಸಾವು ಪ್ರಕರಣ- ಕಪ್ಪು ಬಟ್ಟೆ ಧರಿಸಿ ಯುವಕರಿಂದ ಮತದಾನ

    ವಿದ್ಯಾರ್ಥಿನಿ ಸಾವು ಪ್ರಕರಣ- ಕಪ್ಪು ಬಟ್ಟೆ ಧರಿಸಿ ಯುವಕರಿಂದ ಮತದಾನ

    ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಯುವಕರು ಕಪ್ಪು ಬಟ್ಟೆ ಧರಿಸಿ ಮತದಾನ ಮಾಡುತ್ತಿದ್ದಾರೆ.

    ರಾಯಚೂರಿನ ಶಕ್ತಿನಗರದಲ್ಲಿ ವಿದ್ಯಾರ್ಥಿನಿ ಸಾವಿನ ನ್ಯಾಯಕ್ಕೆ ಯುವಕರು ಆಗ್ರಹಿಸುತ್ತಿದ್ದಾರೆ. ಶಕ್ತಿನಗರದ ಡಿಎವಿ ಪಬ್ಲಿಕ್ ಶಾಲೆಯಲ್ಲಿನ ಮತಗಟ್ಟೆ ಮುಂದೆ ಯುವಕರು ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತಿದ್ದಾರೆ.

    ಸಿಐಡಿ ತನಿಖೆ ಬದಲು ಸಿಬಿಐಗೆ ತನಿಖೆ ವಹಿಸಲು ಆಗ್ರಹಿಸುತ್ತಿದ್ದಾರೆ. ಮತದಾನ ಬಹಿಷ್ಕಾರ ಮಾಡುವುದು ಸರಿಯಲ್ಲ ಎಂದು ಮತದಾನ ಮಾಡುತ್ತಿದ್ದೇವೆ ಎಂದು ಕಪ್ಪು ಬಟ್ಟೆ ಧರಿಸಿ ಬಂದಿರುವ ಯುವಕರು ಹೇಳಿದ್ದಾರೆ.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮೃತ ವಿದ್ಯಾರ್ಥಿನಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ವಿದ್ಯಾರ್ಥಿನಿ ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ವಿದ್ಯಾರ್ಥಿನಿ ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

  • ಈ ಬಾರಿಯೂ ಮತದಾನದ ಅವಕಾಶ ಕಳೆದುಕೊಂಡ್ರು ಜನಾರ್ದನ ರೆಡ್ಡಿ!

    ಈ ಬಾರಿಯೂ ಮತದಾನದ ಅವಕಾಶ ಕಳೆದುಕೊಂಡ್ರು ಜನಾರ್ದನ ರೆಡ್ಡಿ!

    ಬಳ್ಳಾರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

    ಬಳ್ಳಾರಿಯಲ್ಲಿ ಮತಚಲಾಯಿಸುವ ಹಕ್ಕು ಈ ಬಾರಿಯೂ ಜನಾರ್ದನ ರೆಡ್ಡಿಗೆ ಇಲ್ಲ. ಈ ಮೂಲಕ ಲೋಕಸಭಾ  ಚುನಾವಣೆಯಲ್ಲಿ  ಕೂಡ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಎಂಟ್ರಿ ಮಾಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಮಧ್ಯೆ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಲಿಲ್ಲ. ಹೀಗಾಗಿ ಅವರು ಬಳ್ಳಾರಿಯಲ್ಲಿ ಈ ಬಾರಿಯೂ ಮತದಾನ ಮಾಡಲ್ಲ ಎನ್ನಲಾಗಿದೆ.

    ಜನಾರ್ದನ ರೆಡ್ಡಿ ಮಗನಿಗೆ ಇದು ಮೊದಲ ಮತದಾನವಾಗಿದೆ. ಹೀಗಾಗಿ ಪತ್ನಿ, ಮಗ ಹಾಗೂ ಕುಟುಂಬಸ್ಥರು ಇಂದು ಬಳ್ಳಾರಿಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜನಾರ್ದನರೆಡ್ಡಿ ಗದಗ್‍ನಲ್ಲಿ ಮತದಾನಕ್ಕೆ ನೋಂದಣಿ ಮಾಡಿಸಿರುವುದು ಕೂಡ ರದ್ದಾಗಿದೆ. ಈ ಎಲ್ಲಾ ಕಾರಣಗಳಿಂದ ರೆಡ್ಡಿಗೆ ಸದ್ಯ ಎಲ್ಲೂ ಮತದಾನ ಮಾಡುವ ಹಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಜನಾರ್ದನ ರೆಡ್ಡಿ ಮತಚಲಾಯಿಸಿರಲಿಲ್ಲ.