ಬೆಂಗಳೂರು: ಮತಗಳ್ಳತನ ವಿಚಾರ ವಿಧಾನ ಪರಿಷತ್‌ನಲ್ಲೂ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ (B K Hariprasad) ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು.
ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ನ (ಇವಿಎಂ) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಮತಕಳವು ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು. ಪಾರದರ್ಶಕ ಚುನಾವಣಾ ವ್ಯವಸ್ಥೆ ಜಾರಿಗೆ ತರುವ ಮೂಲಕ ಈ ಅಕ್ರಮವನ್ನು ತಡೆಗಟ್ಟಬೇಕು. ಹೀಗೆಂದು ವೋಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಸದಸ್ಯರೊಂದಿಗೆ ಎದ್ದೇಳು ಕರ್ನಾಟಕ ಸಂಘಟನೆ ಆಯೋಜಿಸಿದ್ದ ದುಂಡುಮೇಜಿನ ಸಂವಾದದಲ್ಲಿ ಮೂಡಿಬಂದ ಅಭಿಪ್ರಾಯ. ಇದನ್ನೂ ಓದಿ: ಬಾಗಲಕೋಟೆಯ ತೋಟಗಾರಿಕೆ ವಿವಿ ಮುಚ್ಚೋದಿಲ್ಲ- ಚೆಲುವರಾಯಸ್ವಾಮಿ
2024ರಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ನಡೆದಾಗ ಸಂಜೆ 5 ಗಂಟೆಗೆ 58.22% ರಷ್ಟು ಮತದಾನವಾಗಿತ್ತು. ಆದರೆ 66.05% ರಷ್ಟು ಮತದಾನವಾಗಿದೆ ಎಂದು ಮಧ್ಯರಾತ್ರಿ ಘೋಷಿಸಲಾಯಿತು. ಹೆಚ್ಚುವರಿಯಾಗಿ 48 ಲಕ್ಷ ಮತಗಳು ಎಲ್ಲಿಂದ ಸೇರ್ಪಡೆಯಾದವು ಎನ್ನುವುದು ಸಂವಾದದಲ್ಲಿ ಕಂಡುಬಂದ ಪ್ರಶ್ನೆಯಾಗಿರುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಅಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು 3 ಸಾವಿರದ ಮತಗಳ ಅಂತರದಿಂದ 25 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. 5 ಸಾವಿರ ಮತಗಳ ಅಂತರದಿಂದ 39 ಕ್ಷೇತ್ರಗಳಲ್ಲಿ 10 ಸಾವಿರ ಮತಗಳ ಅಂತರದಿಂದ 69 ಕ್ಷೇತ್ರಗಳಲ್ಲಿ ರಾತ್ರೋರಾತ್ರಿ ಗೆಲವು ಪಡೆದಿರುವುದನ್ನು ಪ್ರತಿಪಾದಿಸಿರುತ್ತಾರೆ. ಲೋಕಸಭೆ ಚುನಾವಣೆಗೆ ಹೋಲಿಸಿದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಮತದಾರರ ಸಂಖ್ಯೆ ಹೆಚ್ಚಳದ ಬಗ್ಗೆ ಚುನಾವಣಾಧಿಕಾರಿಗಳು ಉತ್ತರಿಸಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನ | ಧಾರಾಕಾರ ಮಳೆಗೆ ಶಾಲೆಯ ಗೋಡೆ ಕುಸಿತ – ರಜೆಯಿಂದಾಗಿ ತಪ್ಪಿದ ಅನಾಹುತ
ಇದೇ ರೀತಿ ಮುಂಬರುವ ಬಿಹಾರದ ಚುನಾವಣೆಯಲ್ಲಿ ನಡೆಯಲಿದೆ ಎನ್ನುವ ಆತಂಕ ಎದುರಾಗಿದೆ. ಬಿಜೆಪಿ ಮತ್ತು ಅದರ ಮೈತ್ರಿಯನ್ನು ಬೆಂಬಲಿಸದ ಸಮುದಾಯಗಳ ಮತದಾರರನ್ನೇ ಮತದಾರರ ಪಟ್ಟಿಯಿಂದ ಬಿಜೆಪಿ ತೆಗೆದುಹಾಕುತ್ತಿದೆ ಎಂದು ಆರೋಪಿಸಿರುತ್ತಾರೆ. ಚುನಾವಣಾ ಆಯೋಗದ ಕ್ರಮವನ್ನು ಸದನ ಖಂಡಿಸಬೇಕು. ಈ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಧಾರವಾಡ: 2004 ರಿಂದ 2025 ರವರೆಗೆ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.
ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿದೆ. 65 ಲಕ್ಷ ಮತಗಳು ಬಿಹಾರನಲ್ಲಿ (Bihar) ಎಸ್‌ಐಆರ್ ಮುಖಾಂತರ ಡಿಲಿಟ್ ಆಗಿವೆ. ಬಿಹಾರದಲ್ಲಿ 8 ಕೋಟಿ ಜನಸಂಖ್ಯೆ ಇದೆ. ಅಲ್ಲಿ 65 ಲಕ್ಷ ಮತ ಡಿಲೀಟ್ ಮಾಡಿದ್ದಾರೆ. ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇವೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಭಾರತೀಯರ ಹಕ್ಕಿಗಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಅವರು ಬಂದು ಮಾತನಾಡೋದು ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್ ಆರೋಪ
ನಮ್ಮ ಕಾಲದಲ್ಲಿ 25 ದಿನಗಳಲ್ಲಿ ಚುನಾವಣೆ ಮುಗಿಸುತ್ತಿದ್ದೆವು. ಇವರ ಕಾಲದಲ್ಲಿ 90 ದಿನಗಳವರೆಗೆ ಚುನಾವಣೆ ನಡೆಯುತ್ತಿವೆ. 2004 ರಿಂದ 2025 ರಲ್ಲಿ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ. ಒಂದು ಡಿಜಿಟಲ್ ಫಾರ್ಮೆಟ್‌ನಲ್ಲಿ ಮತದಾರರ ಪಟ್ಟಿ ಸಿದ್ಧ ಮಾಡಲು ಆಗುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪುಗಳನ್ಮು ಮುಚ್ಚಿ ಹಾಕಿಕೊಳ್ಳೋದು ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ 85% ರಷ್ಟು ಬಿಎ ಪದವೀಧರ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಯಾವುದೋ ಒಂದು ಮಹಿಳೆಗೆ 35 ವಯಸ್ಸಿಗೆ, ಇವರು ಮತದಾರ ಪಟ್ಟಿಯಲ್ಲಿ 124 ವಯಸ್ಸು ತೋರಿಸಿದ್ದಾರೆ. ನಾವು ಚುಣಾವಣೆ ಆಯೋಗದ ಕಡೆ ಬೆರಳು ಮಾಡಿ ತೋರಿಸಿದ್ರೆ ಬಿಜೆಪಿಯವರು ಯಾಕೆ ಮಧ್ಯೆ ಬರುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ
ಚುನಾವಣಾ ಆಯೋಗ (Election Commission) ತಪ್ಪು ಮಾಡಿದೆ ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ದಾಖಲಾತಿಗಳನ್ನು ನೀಡಬೇಕು. ರಾಹುಲ್ ಗಾಂಧಿ ಅವರು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಟೀಕೆ ಮಾಡಿದ್ರೆ, ಅದನ್ನೇ ಇವರು ಟೀಕೆ ಮಾಡುತ್ತಾರೆ. ಸುಪ್ರೀಂಕೋರ್ಟ್ಗೆ ಹೋಗಿ ಚುನಾವಣಾ ಆಯೋಗದವರು 65 ಲಕ್ಷ ವೋಟ್ ಡಿಲೀಟ್ ಆಗಿರುವ ಮಾಹಿತಿಯನ್ನು ನಿಮಗೂ ಕೊಡೋದಿಲ್ಲ ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಇವತ್ತು ಸುಪ್ರೀಂಕೋರ್ಟ್ 65 ಲಕ್ಷ ಮತ ಡಿಲೀಟ್ ಆದ ಮಾಹಿತಿ 15 ದಿನಗಳೊಳಗಾಗಿ ಕೊಡಿ ಎಂದು ಕೇಳಿದೆ. ಇದು ಭಾರತ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಗೆದ್ದಿರುವ ಮಾರ್ಜಿನ್ ನೋಡಿದ್ರೆ ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ಚುನಾವಣಾ ಆಯೋಗಕ್ಕೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಬಿಜೆಪಿ ಅವರೇ ಉತ್ತರ ಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್
ಮಹಾರಾಷ್ಟ್ರದಲ್ಲಿ (Maharashtra) ಲೋಕಸಭಾ ಚುನಾವಣೆ ವೇಳೆ 32 ಲಕ್ಷ ಮತ ಸೇರ್ಪಡೆ ಆದವು, ವಿಧಾನಸಭೆಯಲ್ಲಿ 42 ಲಕ್ಷ ಮತ ಸೇರ್ಪಡೆ ಆದವು. 6 ತಿಂಗಳಲ್ಲಿ 42 ಲಕ್ಷ ಮತ ಹೆಚ್ಚಾದವು. ಇವರ ಲೆಕ್ಕದ ಪ್ರಕಾರ 5 ವರ್ಷದಲ್ಲಿ 2 ಕೋಟಿ ಮತ ಹೆಚ್ಚಾಗಬೇಕು. ಬಿಹಾರದಲ್ಲಿ ಇದನ್ನೇ ಡಿಲೀಟ್ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಮತ ಹೆಚ್ಚಳ ಮಾಡಿಲ್ಲ ಎಂದು ಹೇಳಿದ್ದಾರೆ.
ಮೋದಿ ಅವರು ನಾವು ಅದನ್ನ ಮಾಡುತ್ತೇವೆ ಇದನ್ನ ಮಾಡುತ್ತೇವೆ ಎಂದು ಹೇಳುತ್ತಾರೆ. ನಾವು ಹೋಗೋಕಿಂತ ಮುಂಚೆ ಡ್ರೋಣ್ ಹೋಗುತ್ತೆ ಅಂತಾರೆ. ಮೆ ಕಬಿ ನಹಿ ಜಾವೂಂಗಾ, ಮೆ ಜಾನೆಸೆ ಪೆಹಲೆ ಡ್ರೋಣ್ ಜಾಕೆ ಆಯೇಗಾ ಅಂತಾರೆ. ಸ್ಯಾಟ್‌ಲೈಟ್ ಟೆಕ್ನಾಲಾಜಿ ಬಳಸಿ ರಸ್ತೆ ಮಾಡುತ್ತೇವೆ ಎಂದಿದ್ದರು. ಮೊದಲು ಡಿಜಿಟಲ್ ಆಗಿ ಒಂದು ವೋಟರ್ ಲಿಸ್ಟ್ ಕೊಡಿ ಸಾಕು. ನಮಗೂ ನಿಮ್ಮ ಆಟ ನೋಡಿ ಸಾಕಾಗಿದೆ ಎಂದಿದ್ದಾರೆ.
– ರಾಹುಲ್ ಗಾಂಧಿ ಮುಂದೆ 5 ಪ್ರಶ್ನೆಯಿಟ್ಟ ಜೆಡಿಎಸ್ – ಕಾಂಗ್ರೆಸ್ 136 ಕ್ಷೇತ್ರ ಗೆದ್ದಿದೆ, ಹಾಗಾದ್ರೆ ಮತಗಳ್ಳತನದಿಂದ ಗೆದ್ದಿದ್ಯಾ?
ಬೆಂಗಳೂರು: ಮತಗಳ್ಳತನ ಮಾಡಿರುವುದೇ ಕಾಂಗ್ರೆಸ್ (Congress) ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ (H M Ramesh Gowda) ಅವರು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಮುಂದೆ 5 ಪ್ರಶ್ನೆಗಳನ್ನಿಟ್ಟಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಕೂಡ ಅವರಿಗೆ ಐದು ಪ್ರಶ್ನೆ ಕೇಳುತ್ತದೆ. ನೈತಿಕತೆ ಇದ್ದರೆ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ
ಜೆಡಿಎಸ್‌ನ ಐದು ಪ್ರಶ್ನೆಗಳಾವುವು?
1. ನೀವು ಚುನಾವಣಾ ಆಯೋಗಕ್ಕೆ ಉತ್ತರ ಕೊಡುವುದಕ್ಕೆ ಹೆದರುತ್ತಿರುವುದು ಯಾಕೆ?
2. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಗಿಫ್ಟ್ ಕೂಪನ್ ಹಂಚಿ ಗೆದ್ದಿದ್ದೀರಿ. ಇದು ಮತಗಳ್ಳತನ ಅಲ್ಲವೇ?
3. ಗೃಹಲಕ್ಷ್ಮೀ ಗ್ಯಾರಂಟಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತೀರಿ. ಚುನಾವಣೆ ಬಂದ ಕೂಡಲೇ ನಾಲ್ಕೈದು ತಿಂಗಳ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತೀರಿ. ನಿಯಮಿತವಾಗಿ ಪ್ರತೀ ತಿಂಗಳು ಜಮೆ ಮಾಡುತ್ತಿಲ್ಲ, ಯಾಕೆ? ಇದು ಚುನಾವಣಾ ಅಕ್ರಮ ಅಲ್ಲವೇ?
4. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಲೋಕಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿಲ್ಲವೇ? ಆಗಿಲ್ಲದಿದ್ರೆ ಮತಗಳ್ಳರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ ಯಾಕೆ?
5. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ನಿಮ್ಮ ಶಾಸಕರು ಗೆದ್ದಿದ್ದಾರೆ. ಹಾಗಿದ್ದರೆ ಅವರೂ ಮತಗಳ್ಳತನ ಮಾಡಿಯೇ ಗೆಲುವು ಸಾಧಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ಎಂಬುದನ್ನು ಮರೆತಿದ್ದಾರೆ. ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಮಾತನಾಡಬೇಕೇ ಹೊರತು ಹಾದಿ ಬೀದಿಯಲ್ಲಿ ರಂಪ ಮಾಡಬಾರದು. ಬೆಂಗಳೂರಿಗೆ ಬಂದು ಅವರದ್ದೇ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಆಡಳಿತ ತಂತ್ರವನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ಪ್ರಹಸನ ನಡೆಸಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದ್ದೇವು. ಆದರೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ ನಾವು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದೂರುವ ಕೆಲಸ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಇದೆಲ್ಲಾ ಮಾತಾಡಬಹುದಲ್ವ? ಅಲ್ಲಿ ಸಮಯ ಹಾಳು ಮಾಡಿ, ಹಾದಿಬೀದಿಯಲ್ಲಿ ಮಾತಾಡೋದು ಯಾಕೆ? ಅವರಿಗೆ ಕೇವಲ ಬಿಹಾರ ಚುನಾವಣೆಯಲ್ಲಿ ಜನರ ಗಮನ ಬೇರೆಡೆಗೆ ಸೆಳೆದು ಮತ ಗಳಿಕೆ ಮಾಡುವ ಏಕೈಕ ದುರುದ್ದೇಶದಿಂದ ಆಯೋಗದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಹಾರದಲ್ಲಿ ಸೋಲುವ ಹತಾಶೆ ಅವರನ್ನು ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್
ರಾಹುಲ್ ಗಾಂಧಿ ಲೆಕ್ಕ ಸುಳ್ಳು
ರಾಹುಲ್ ಗಾಂಧಿ ಅಸತ್ಯದ ಮಾಹಿತಿ ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ತಮ್ಮ ಪಕ್ಷ ಮತಗಳ್ಳತನದಲ್ಲಿ ತೊಡಗಿತ್ತು ಎಂಬುದನ್ನು ಮರೆಮಾಚುವ ದುರುದ್ದೇಶದಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಾಟಕ ಆಡುತ್ತಿದ್ದಾರೆ. ಶಿವಾಜಿನಗರ, ಸರ್ವಜ್ಞನಗರ ಸೇರಿದಂತೆ ನಗರದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳ್ಳತನ ಮಾಡಿದೆ. ಅದಕ್ಕೆ ದಾಖಲೆಗಳು ಇವೆ ಎಂದು ಕೆಲ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಗೆದ್ದಿರುವ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ತಾವು ಅಂತಹ ತಪ್ಪು ಮಾಡಿ ಆಯೋಗದ ಮೇಲೆ ಆರೋಪ ಮಾಡುತ್ತಿದೆ ಕಾಂಗ್ರೆಸ್. ಈ ದಾಖಲೆಗಳ ಬಗ್ಗೆ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ನಾಯಕರು ಮಾತನಾಡಬೇಕು. ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಚರ್ಚೆಗೆ ಬರಲಿ, ನಾನು ತಯಾರಿದ್ದೇನೆ ಎಂದು ಸವಾಲೆಸಿದ್ದಾರೆ.
* ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುವುದು ಮೂರ್ಖತನ * ಬೆಂಗಳೂರಲ್ಲಿ ಚುನಾವಣಾ ಆಯೋಗ ಕರೆದರೂ ತೆರಳದ ರಾಹುಲ್ ಗಾಂಧಿ * ರಾಹುಲ್ ಗಾಂಧಿ ಅವರದ್ದು ʻಹಿಟ್ & ರನ್ ಕೇಸ್ʼ
ನವದೆಹಲಿ: ʻಕುಣಿಯಲು ಬಾರದವರು ನೆಲ ಡೊಂಕುʼ ಅಂದರಂತೆ. ರಾಹುಲ್ ಗಾಂಧಿಯವರು (Rahul Gandhi) ಅದೇ ವರ್ತನೆ ತೋರುತ್ತಿದ್ದಾರೆ. ಚುನಾವಣಾ ಆಯೋಗದಂತಹ ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುವ ಇವರದ್ದು ಮೂರ್ಖತನ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಕರೆದರೂ ಹೋಗಿಲ್ಲ. ಬೆಂಗಳೂರಲ್ಲೇ ಇದ್ದರೂ ಭೇಟಿ ನೀಡಿಲ್ಲ. ತಮ್ಮ ಪರವಾಗಿ ಬೇರೆಬ್ಬೊರನ್ನು ಕಳಿಸಿಕೊಡುವುದಾಗಿ ಹೇಳಿದ್ದೇಕೆ? ಎಂದು ಪ್ರಶ್ನಿಸಿದರು.
ಬೆಂಗಳೂರು ಫ್ರೀಡಂ ಪಾರ್ಕ್‌ಗೂ ಚುನಾವಣಾ ಆಯೋಗದ ಕಚೇರಿಗೆ ಐದೇ ನಿಮಿಷದ ಹಾದಿ. ನಡೆದೇ ಹೋಗಬಹುದು. ಹಾಗಿದ್ದರೂ ರಾಹುಲ್ ಗಾಂಧಿ ಹೋಗಿ ದಾಖಲೆಗಳನ್ನು ಒದಗಿಸಿಲ್ಲ. ಬೇರೊಬ್ಬರನ್ನು ಕಳಿಸುವುದಾಗಿ ಹೇಳಿದ್ದಾರೆ. ಆರೋಪ ಮಾಡುವ ತಾವು ಬೇರೆಯವರನ್ನು ಕಳಿಸುವುದೆಂದರೆ ಏನರ್ಥ? ಇದವರ ಸುಳ್ಳು ಆರೋಪಗಳನ್ನು ಸಾಬೀತುಪಡಿಸುತ್ತದೆ ಎಂದರು.
ರಾಹುಲ್ ಗಾಂಧಿ ಹಿಟ್ & ರನ್ ಕೇಸ್: ರಾಹುಲ್ ಗಾಂಧಿ ಅವರದ್ದು ಒಂದು ರೀತಿ ಹಿಟ್ & ರನ್ ಕೇಸ್ ಇದ್ದಂತೆ. ಮನಬಂದಂತೆ ಮಾತನಾಡುತ್ತಾರೆ. ಉತ್ತರ ಕೇಳಿದರೆ ನಾಪತ್ತೆಯಾಗುತ್ತಾರೆ. ಯಾವುದೇ ಪ್ರಕರಣ ಸಹ ದಾಖಲಿಸುವುದಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಸಂಬಂಧಿತ ಎಲ್ಲಾ ಆರೋಪಗಳಿಗೆ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗ ಹೇಳಿದೆ. ಆದರೆ ಈವರೆಗೂ ಸಲ್ಲಿಸಿಲ್ಲ. ಎಲ್ಲಾ ಬೋಗಸ್ ಆರೋಪಗಳಾಗಿದ್ದಕ್ಕಾಗಿ ಬೆಂಗಳೂರಲ್ಲಿ ಖುದ್ದು ಆಹ್ವಾನಿಸಿದರೂ ಹಾಜರಾಗಿಲ್ಲ ಎಂದು ಕಿಡಿಕಾರಿದರು.
ಯಾರೋ ಬರೆದು ಕೊಟ್ಟದ್ದನ್ನು ಓದ್ತಾರೆ: ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟದ್ದನ್ನು ಓದುತ್ತಾರೆ. ರಿಪಿಟ್ ಕೇಳಿದರೆ ತಡಬಡಿಸುತ್ತಾರೆ. ಇವರೊಬ್ಬ ಬೇಜವಾಬ್ದಾರಿ ರಾಜಕಾರಣಿ. ಗಂಭೀರತೆ ಎನ್ನುವುದೇ ಇಲ್ಲ. ಹತಾಶೆ, ನಿರಾಶೆಯಿಂದ ಏನೇನೋ ಮನಬಂದಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಕೋರ್ಟ್‌ಗೂ ಹೋಗಿಲ್ಲ: ಇವಿಎಂ ದೋಷ ಎಂದಾಯಿತು. ಈಗ ಚುನಾವಣಾ ಆಯೋಗದ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ದಾಖಲೆ ಸಹಿತ ಕೋರ್ಟ್‌ಗೂ ಹೋಗುವುದಿಲ್ಲ, ಹಾಗೇ ಬಾಯಿಗೆ ಬಂದಂತೆ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಸಿಸಿ ಟಿವಿ ದೃಶ್ಯ ಕೇಳುತ್ತಿದ್ದಾರೆ. ಆದರೆ, ಸಿಸಿ ಟಿವಿ ದೃಶ್ಯ ಸಂಗ್ರಹ ಸಹಜವಾಗಿ 45 ದಿನ ಮಾತ್ರವಿರುತ್ತದೆ. ಈಗ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಒಂದೂ ಆಕ್ಷೇಪಣೆ ಸಲ್ಲಿಸಿಲ್ಲ: ಕರ್ನಾಟಕದಲ್ಲಿ 2024ರಲ್ಲಿ ನಡೆದ ಚುನಾವಣೆ ವೇಳೆ ಒಟ್ಟು 9 ಲಕ್ಷ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಒಂದೇ ಒಂದು ಎಲೆಕ್ಷೆನ್ ಪಿಟಿಶನ್ ಸಲ್ಲಿಕೆಯಾಗಿಲ್ಲ. ಮತಪಟ್ಟಿ, ಮತದಾನದಲ್ಲಿ ಲೋಪವಾಗಿದ್ದರೆ ಏಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಬಿಎಲ್‌ಎಗಳು ಕತ್ತೆ ಕಾಯ್ತಿದ್ರಾ?: ಯಾವುದೇ ಚುನಾವಣೆ ಇರಲಿ ಸಾಮಾನ್ಯವಾಗಿ ಬಿಎಲ್‌ಎಗಳು ಎಲ್ಲಾ ಕಡೆ ಹೋಗಿ ಕೆಲಸ ಮಾಡಿದ್ದಾರೆ. 2024ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮಹದೇವಪುರದಲ್ಲಿ ಲೋಪ ಕಂಡುಬಂದಿದ್ದರೆ ಏಕೆ ಗಮನಕ್ಕೆ ತರಲಿಲ್ಲ? ಕಾಂಗ್ರೆಸ್‌ನ ಬಿಎಲ್‌ಎಗಳು ಏನು ಕತ್ತೆ ಕಾಯುತ್ತಾ ಇದ್ದರಾ? ಎಂದು ವಾಗ್ದಾಳಿ ನಡೆಸಿದರು.
ಅಭ್ಯರ್ಥಿ ನಿದ್ದೆ ಮಾಡುತ್ತಿದ್ದರಾ?: ಚುನಾವಣಾ ಆಯೋಗ ಮತದಾರರ ಕರಡು ಪ್ರತಿಯನ್ನು ಅಭ್ಯರ್ಥಿಗಳು ಮತ್ತು ಜಿಲ್ಲಾ ಮಟ್ಟದ, ರಾಜ್ಯಮಟ್ಟದಲ್ಲಿ ಎಲ್ಲಾ ಪಾರ್ಟಿಗಳಿಗೂ ಕೊಟ್ಟಿರುತ್ತದೆ. ಆಗೇಕೆ ನೋಡಲಿಲ್ಲ. ಫಲಿತಾಂಶ ಬಂದ ತಕ್ಷಣ ಬೆಂಗಳೂರು ಸೆಂಟ್ರಲ್ ಎಲೆಕ್ಷೆನ್ ಪಿಟಿಷನ್ ಏಕೆ ಫೈಲ್ ಮಾಡಲಿಲ್ಲ? ಅಭ್ಯರ್ಥಿ ಏನು ನಿದ್ದೆ ಮಾಡುತ್ತಿದ್ದರಾ? ಅಥವಾ ರಾಹುಲ್ ಗಾಂಧಿ ರೀತಿ ಬೇರೆ ಲೋಕ, ಬೇರೆ ದೇಶದಲ್ಲಿ ಇದ್ದರಾ? ಎಂದು ಅಸಮಾಧಾನ ಹೊರಹಾಕಿದರು.
ನಾನೂ ಬೂತ್ ಏಜೆಂಟ್ ಆಗಿ ಕೆಲಸ ಮಾಡಿದ್ದೇನೆ. ಮತಪಟ್ಟಿಗೆ ಸಹಿ ಮಾಡಿಕೊಡಬೇಕು. ಲೋಪವಿದ್ದರೆ ಆಗೇಕೆ ಮಾಡಿ ಕೊಟ್ಟಿರಿ? ಬೆಂಗಳೂರು ಸೆಂಟ್ರಲ್‌ನ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಲೀಡ್ ಬಂದಿದೆ. 6ನೇ ಬೂತ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಇನ್ನು, ಶಿರಸಿ ವಿಧಾನಸಭಾ ಕ್ಷೇತ್ರ ಬಿಜೆಪಿಯದ್ದು. ಅಲ್ಲಿ ನಾವು ಸೋತಿದ್ದೇವೆ. ಹಾಗಾದರೆ ಅಲ್ಲಿಯೂ ಇವಿಎಂ, ಆಯೋಗ ಸರಿ ಇಲ್ಲವೇ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಚುನಾವಣೆ ಬಳಿಕ 70 ಲಕ್ಷ ವೋಟರ್ ಸೇರ್ಪಡೆಯಾಗಿದ್ದಾರೆ ಎಂದರು. ಆಮೇಲೆ 1 ಕೋಟಿ ಎಂದರು. ಹೀಗೆ ದಿನೇದಿನೇ ಮನಸೋ ಇಚ್ಛೆ ಹೇಳಿಕೆ ನೀಡತೊಡಗಿದ್ದಾರೆ ರಾಹುಲ್ ಗಾಂಧಿ. ಸಂಶಯಪಟ್ಟ ಇವರಿಗೆ ಆಯೋಗ 40 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ಸಾಮಾನ್ಯವೆಂದು ಸ್ಪಷ್ಟಪಡಿಸಿತು. ಆದರೂ ರಾಹುಲ್ ಗಾಂಧಿ ಈಗಲೂ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.
ಯಾವಾಗ ಎಷ್ಟು ಸೇರ್ಪಡೆ: 2004 ಮತ್ತು 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲೇ ಹೆಚ್ಚು ಹೊಸ ಮತದಾರರ ಸೇರ್ಪಡೆಯಾಗಿದೆ. 2024ರಲ್ಲಿ ಶೇ.4.7, 2009ರಲ್ಲಿ ಶೇ.4.1ರಷ್ಟು ಹೆಚ್ಚಿನ ಮತದಾರರ ಸೇರ್ಪಡೆ ಆಗಿದೆ. 2014ರಲ್ಲಿ ಶೇ.3.4ರಷ್ಟು ಆಗಿದೆ. ಇನ್ನು ಎನ್‌ಡಿಎ ಕಾಲದಲ್ಲಿ ಶೇ.4.4ರಷ್ಟು ಹೊಸ ಮತದಾರರ ಸೇರ್ಪಡೆಯಾಗಿದೆ. ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಹೊಸ ಮತದಾರರ ಹೆಚ್ಚು ಸೇರ್ಪಡೆಯಾದಾಗ ಆಗೆಲ್ಲ ಇವರೇ ಗೆದ್ದಿದ್ದಾರೆ ಎಂದು ತಿರುಗೇಟು ನೀಡಿದರು.
ಲೂಟ್ ದುಖಾನ್-ಜೂಟ್ ದುಖಾನ್: ರಾಹುಲ್ ಗಾಂಧಿಯವರ ಮನಸ್ಥಿತಿ ಹೇಗಿದೆ ಎಂದರೆ, ತಮ್ಮ ಸರ್ಕಾರವಿದ್ದಾಗ ʻಲೂಟ್ ದುಖಾನ್ʼ, ಚುನಾವಣೆ ವೇಳೆ ʻಮೊಹಬತ್ ಕಾ ದುಖಾನ್ʼ, ಸೋತ ಮೇಲೆ ʻಜೂಟ್ ಕಾ ದುಖಾನ್ʼ ಎನ್ನುವಂತಿದೆ. ಇವರಿಗೆ ಯಾವುದೇ ಸಂವಿಧಾನಿಕ ಸಂಸ್ಥೆಗಳ ಮೇಲೆ ಕನಿಷ್ಠ ಗೌರವವಿಲ್ಲ ಎಂದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪತ್ರಿಕೆ ಬಂದ್ ಮಾಡಿ, ಟಿವಿ ಬಂದ್, ಕಿಶೋರ್ ಕುಮಾರ್ ಹಾಡು ಬಂದ್ ಮಾಡಿ, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿ, ಜಯಪ್ರಕಾಶ್ ನಾರಾಯಣ ಅವರ ಆರೋಗ್ಯ ಹದಗೆಡುವಂತೆ ಮಾಡಿದ ಈ ಕಾಂಗ್ರೆಸ್ಸಿಗರು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಮತಗಳ್ಳತನ ಆರೋಪ; ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರು – ಅಂತರ ಕಾಯ್ದುಕೊಂಡ ರಾಗಾ
ಬೆಂಗಳೂರು: ಮನೆ ನಂ.35ರಲ್ಲಿ 80 ಮಂದಿ ವಾಸವಾಗಿದ್ದರು ಎಂಬ ರಾಹುಲ್ ಗಾಂಧಿ (Rahul Gandhi) ಆರೋಪಕ್ಕೆ ಮನೆ ಮಾಲೀಕ ಪ್ರತಿಕ್ರಿಯಿಸಿದ್ದು, 10*15 ಅಡಿಯಲ್ಲಿ ಎಷ್ಟು ಜನ ಇರೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಬೆಳ್ಳಂದೂರಿನ ಮನೆ ಮಾಲೀಕ ಜಯರಾಮ್ ರೆಡ್ಡಿ, ನಾನು ಬಿಜೆಪಿ ಕಾರ್ಯಕರ್ತನಲ್ಲ. ನನ್ನ ಮಕ್ಕಳಿಗೂ ಇಂಥದ್ದೇ ಪಕ್ಷಕ್ಕೆ ವೋಟ್ ಹಾಕಿ ಎಂದು ಹೇಳಿಲ್ಲ. ಯಾರಾದರೂ ಬಂದು ಪರಿಶೀಲನೆ ಮಾಡಲಿ. ಮುನಿರೆಡ್ಡಿ ಗಾರ್ಡನ್‍ನ ಮನೆ ನಂಬರ್ 35 ನನ್ನದೇ. ಕಳೆದ 15 ವರ್ಷಗಳಿಂದ ಬಾಡಿಗೆಗೆ ಕೊಡುತ್ತಿದ್ದೇನೆ. ಎಲ್ರೂ ಹಿಂದಿ ಹುಡುಗರು. ಮೂರು ಜನರ ಮೇಲೆ ನಾನು ಬಾಡಿಗೆಗೆ ಕೊಡಲ್ಲ. 10*10ನ ರೂಮ್‍ನಲ್ಲಿ 80 ಜನಕ್ಕೆ ಬಾಡಿಗೆಗೆ ಕೊಡೋಕೆ ಆಗುತ್ತಾ? ಕಾಂಗ್ರೆಸ್ (Congress) ನಾಯಕರು ಮಾಡಿರುವ ಆರೋಪ ಸುಳ್ಳು. ಅಲ್ಲಿ ಅಷ್ಟು ಜನ ವಾಸ ಮಾಡೋಕೆ ಆಗಲ್ಲ. ಅರವಿಂದ್ ಲಿಂಬಾವಳಿ ಹೇಳಿದ್ದು ಸರಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ: ರಾಹುಲ್ ಗಾಂಧಿ ಆರೋಪಕ್ಕೆ ದಾಖಲೆ ಸಮೇತ ಲಿಂಬಾವಳಿ ತಿರುಗೇಟು
ಬಾಡಿಗೆಗೆ ಇದ್ದವರು ಕೋವಿಡ್ ವೇಳೆ ಎಲ್ಲರೂ ಅವರವರ ಊರಿನ ಕಡೆ ಹೋದರು. ಅಲ್ಲಿ ಈಗ ಮತ ಚಲಾಯಿಸುವವರು ಮೂವರು ಇದ್ದಾರೆ. 80 ಜನ ಎಲ್ಲಿಂದ ಬಂದಿದ್ದಾರೆ? 80 ಮಂದಿಗೆ ನಾವು ಮನೆ ಕೊಡೋಕೆ ಆಗುತ್ತಾ? ಗಾರ್ಡನ್ ಕೆಲಸ, ಸೆಕ್ಯೂರಿಟಿ ಕೆಲಸ ಅಂತಾ ಬಾಡಿಗೆ ಮನೆಗೆ ಬರ್ತಾರೆ. ಪರ್ಮನೆಂಟ್ ಆಗಿ ಇರೋರು 2ವರ್ಷದವರೆಗೆ ಮನೆಯಲ್ಲಿ ಇರ್ತಾರೆ ಎಂದಿದ್ದಾರೆ.
ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಮತಗಳ್ಳತನ (Vote Fraud) ಆಗಿರುವುದು ತಿಳಿದುಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನೂ ಕರ್ನಾಟಕದಲ್ಲಿ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಸಮಾವೇಶದಲ್ಲಿ ಇಂದು (ಆ.8) ಪಾಲ್ಗೊಂಡಿದ್ದರು. ಇದನ್ನೂ ಓದಿ: ಮತಗಳ್ಳತನ ಆರೋಪ; ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರು – ಅಂತರ ಕಾಯ್ದುಕೊಂಡ ರಾಗಾ
ಸಮಾವೇಶದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರದಲ್ಲಿ ಮತಗಳ್ಳತನ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆಯ ಮಹಾದೇವಪುರದಲ್ಲಿ 1,00,250 ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಮಹಾದೇವಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಸಕ್ರಮ ಚುನಾವಣೆ ನಡೆದಿದೆ. ರಾಹುಲ್ ಗಾಂಧಿ ಆರೋಪಗಳು ನಿರಾಧಾರ, ಸತ್ಯಕ್ಕೆ ದೂರ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಮಾಡಿರುವ ಐದು ಹಂತದ ಮತಗಳ್ಳತನ ಹಾಗೂ ಏಳು ಉದಾಹರಣೆಗಳಿಗೂ ಲಿಂಬಾವಳಿ ದಾಖಲೆ ಸಹಿತ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಆರೋಪ 1: ಡುಪ್ಲಿಕೇಟ್ ಮತದಾರರ ಸಂಖ್ಯೆ 11,965
ಉತ್ತರ – ಗುರುಕಿರೀತ್ ಸಿಂಗ್ ದಾಂಗ್ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ಕಡೆ ಕಾಣಿಸಿಕೊಂಡಿದೆ. 3 ಕಡೆ ಹೆಸರು ರದ್ದತಿಗೆ ಅವರು ಕೋರಿದ್ದಾರೆ.
ಲಕ್ನೋದ ಆದಿತ್ಯ ಶ್ರೀವಾಸ್ತವ್ ಹೆಸರು ಲಕ್ನೋದಲ್ಲಿ ಸೇರ್ಪಡೆಯಾಗಿತ್ತು. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು.
ವಾರಣಾಸಿಯ ವಿನೋದ್ ಸಿಂಗ್ ಬೆಂಗಳೂರಿನ ಮಾರಥಹಳ್ಳಿಯಲ್ಲಿದ್ರು. ಈಗ ಮನೆ ಖರೀದಿಸಿದ್ದಾರೆ. 513 ಬೂತ್‌ಗೆ ಮನೆ ಬದಲಾಯಿಸಿ ವೋಟ್ ಹಾಕಿದ್ದಾರೆ. ವೋಟರ್ ಲಿಸ್ಟ್ ನಿಯಮದ ಪ್ರಕಾರ ಬದಲಾಯಿಸಿಕೊಂಡಿದ್ದಾರೆ. ಇವರು ವಾರಣಾಸಿಯಲ್ಲಿ ಮತ ಹಾಕಿಲ್ಲ, ಹಾಕಿದ್ರೆ ಪ್ರೂವ್ ಮಾಡಿ
ಆರೋಪ 2: ಒಂದೇ ವಿಳಾಸದ 10,452 ಬಲ್ಕ್ ಮತದಾರರು
ಉತ್ತರ – ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಆಯೋಗದವರು ಸೇರಿಸಿಲ್ಲ. ಒಂದೇ ಮನೆ ನಂಬರ್ 35 ಅಂತ ಇದೆ. ಇಲ್ಲಿ 80 ವೋಟರ್ಸ್ ಇದ್ದಾರೆ ಅಂದಿದ್ದಾರೆ. ಬಲ್ಕ್ ವೋಟರ್ಸ್ ಬಿಟಿಎಂ ಲೇಔಟ್‌ನಲ್ಲೂ ಇದ್ದಾರೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ.
ಆರೋಪ 3: 40,009 ನಕಲಿ ವಿಳಾಸಗಳು ಮತ್ತು ಅಸಿಂಧು ಮತಗಳು
ಉತ್ತರ – ನಮ್ಮ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮನೆ ವಿಳಾಸದ ಜಾಗದಲ್ಲಿ ಜೀರೋ ಇದೆ ಅಂತ ಅಂದಿದ್ದಾರೆ. ಸಿಎಂ ಅವರ ವರುಣಾ ಕ್ಷೇತ್ರದಲ್ಲಿ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ವರುಣಾದ ವಾರ್ಡ್ ನಂಬರ್ 8 ರಲ್ಲಿ ವಿಳಾಸ ಜಾಗದಲ್ಲಿ ಜೀರೋ ಅಂತ ಇದೆ. ನಮ್ಮಲ್ಲಿ ಇದು ತಪ್ಪಾಗಿದ್ರೆ, ಸಿದ್ದರಾಮಯ್ಯ ಕ್ಷೇತ್ರದ್ದೂ ತಪ್ಪೇ ಅಲ್ಲವಾ? ಸಂಡೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲೂ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ಇದು ಒಂದು ಎರರ್, ಸರಿಪಡಿಸುವ ಹೊಣೆ ಆಯೋಗದ್ದು. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ
ಆರೋಪ 4: ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692
ಉತ್ತರ – ಶಕುನ್ ರಾಣಿಯಯವರು 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅದನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ.
ಆರೋಪ 5: ನಕಲಿ ಫೋಟೋಗಳು 4,132
ಉತ್ತರ – ಅಪ್‌ಲೋಡ್ ಮಾಡುವಾಗ ಫೋಟೋಗಳು ಹಾಗೆ ಬಂದಿವೆ. ಮಂಡೂರಿನ ಬೂತ್ ನಂಬರ್ 5 ರಲ್ಲಿ ಈ ಮತದಾರರು ಇದ್ದಾರೆ. ಫೋಟೋ ಸರಿಯಿಲ್ಲ ಅಂದ್ರೆ ವೋಟರ್ ಕಾರ್ಡ್ ಒಂದೇ ನೋಡಲ್ಲ, ಬೇರೆ ಗುರುತು ಚೀಟಿ ನೋಡಿಯೇ ವೋಟ್ ಹಾಕೋಕೆ ಅವಕಾಶ ಕೊಡೋದು ಎಂದು ಅರವಿಂದ್ ಲಿಂಬಾವಳಿ ಉತ್ತರಿಸಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.