Tag: volvo bus

  • ಪ್ರತಿಷ್ಠಿತ ಐಶಾರಾಮಿ ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವರು!

    ಪ್ರತಿಷ್ಠಿತ ಐಶಾರಾಮಿ ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವರು!

    ಬೆಂಗಳೂರು: ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣರವರು ಬ್ರೇಕ್ ಹಾಕಿದ್ದಾರೆ.

    ವೋಲ್ವೋ ಬಸ್‍ಗಳ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಎನ್‍ಇಕೆಎಸ್‍ಆರ್ ಟಿಸಿ, ಎನ್‍ಡಬ್ಲ್ಯೂಕೆಎಸ್‍ಆರ್ ಟಿಸಿಯ ನಿಗಮಗಳಿಗೆ ಸಾರಿಗೆ ಇಲಾಖೆ ತಣ್ಣೀರು ಎರಚಿದ್ದು, ಸಾರಿಗೆ ಸಂಸ್ಥೆಯವರು ಹೊಸ ಬಸ್ ಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವರು ಬ್ರೇಕ್ ಹಾಕುವ ಮೂಲಕ ವೋಲ್ವೋ ಕಂಪೆನಿಗೆ ಬಿಗ್ ಶಾಕ್ ನೀಡಿದ್ದಾರೆ.

    ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದು, ನಗರ ಸಾರಿಗೆಗೆ ವೋಲ್ವೋ ಬಸ್ ಖರೀದಿ ಮಾಡೋ ಹಾಗಿಲ್ಲ ಹಾಗೂ ದುಬಾರಿ ಬೆಲೆ ಬಸ್ ಖರೀದಿ ಪ್ರಸ್ತಾವನೆ ನನ್ನ ಮುಂದೆ ತರಬೇಡಿ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಚಿವರ ಈ ಖಡಕ್ ನಿರ್ಧಾರವು ವೋಲ್ವೋ ಕಂಪೆನಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಈ ವೇಳೆ ಮಾತನಾಡಿದ ಸಚಿವರು, ವೋಲ್ವೋ ಬಸ್ ನಿರ್ವಹಣೆ ದುಬಾರಿಯಾಗಿದ್ದು, ಮೈಲೇಜ್ ಸಹ ಕಡಿಮೆ ನೀಡುತ್ತದೆ. ಆದ್ದರಿಂದ ಹೊಸ ವೋಲ್ವೋ ಬಸ್ ಖರೀದಿ ನಿಲ್ಲಿಸಿದ್ದೇನೆ. ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಗಳು ಐಷಾರಾಮಿ ಬಸ್ ಗಳಿಂದ ಕೈ ಸುಟ್ಟುಕೊಂಡಿವೆ ಎಂದು ತಿಳಿಸಿದರು.

    ವೋಲ್ವೋ ಬಸ್ ಖರೀದಿಯಿಂದ ಅಧಿಕಾರಿಗಳು ದುಡ್ಡು ಮಾಡುತ್ತಾರೆಯೇ ಹೊರತು, ಸಂಸ್ಥೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ ಅವರು 1 ಕೋಟಿ ಬೆಲೆಯ ಬಸ್‍ಗಳು ಬೇಡ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ: KSRTC ವೋಲ್ವೋ, ದುರ್ಗಾಂಬ ಬಸ್ ಡಿಕ್ಕಿಯಾಗಿ ಇಬ್ಬರ ಸಾವು

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ: KSRTC ವೋಲ್ವೋ, ದುರ್ಗಾಂಬ ಬಸ್ ಡಿಕ್ಕಿಯಾಗಿ ಇಬ್ಬರ ಸಾವು

    ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಹೆದ್ದುರ್ಗ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.

    ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಎಸ್‍ಆರ್‍ಟಿಸಿ ವೋಲ್ವೋ ಬಸ್ ಮತ್ತು ದುರ್ಗಾಂಬಾ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 27 ವರ್ಷದ ಫಾತೀಮಾ, 54 ವರ್ಷದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಆಲೂರು, ಸಕಲೇಶಪುರ ಪೊಲೀಸರು ಭೇಟಿ ನೀಡಿದ್ದು, ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

  • ಕೆಟ್ಟು ನಿಂತಿದ್ದ ಕ್ಯಾಂಟರ್ ಗೆ ವೋಲ್ವೋ ಬಸ್ ಡಿಕ್ಕಿ- ಬಸ್ ಚಾಲಕ ದುರ್ಮರಣ

    ಕೆಟ್ಟು ನಿಂತಿದ್ದ ಕ್ಯಾಂಟರ್ ಗೆ ವೋಲ್ವೋ ಬಸ್ ಡಿಕ್ಕಿ- ಬಸ್ ಚಾಲಕ ದುರ್ಮರಣ

    ಚಿಕ್ಕಬಳ್ಳಾಪುರ: ಕೆಟ್ಟು ನಿಂತಿದ್ದ ಕ್ಯಾಂಟರ್ ಗೆ ಹಿಂದಿನಿಂದ ವೋಲ್ವೋ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಚಾಲಕ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಆರೂರು ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿ ಚಾಲಕನನ್ನು ಕಲ್ಲಪ್ಪ(45) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಸದ್ಯ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ವೋಲ್ವೋ ಬಸ್ ಬೆಂಗಳೂರಿನಿಂದ ಹೈದರಾಬಾದ್ ಕಡೆ ಸಂಚರಿಸುತ್ತಿತ್ತು ಎಂಬುದಾಗಿ ತಿಳಿದುಬಂದಿದೆ. ದಟ್ಟ ಮಂಜು ಆವರಿಸಿದ್ದ ಹಿನ್ನಲೆಯಲ್ಲಿ ಸರಿಯಾಗಿ ದಾರಿ ಕಾಣದೆ ನಿಂತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

    ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಸ್‍ನಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ- ಫೋಟೋ ಕ್ಲಿಕ್ಕಿಸಿ ದೂರು ನೀಡಿದ 30 ನಿಮಿಷದಲ್ಲಿ ಕಾಮುಕ ಅರೆಸ್ಟ್

    ಬಸ್‍ನಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ- ಫೋಟೋ ಕ್ಲಿಕ್ಕಿಸಿ ದೂರು ನೀಡಿದ 30 ನಿಮಿಷದಲ್ಲಿ ಕಾಮುಕ ಅರೆಸ್ಟ್

    ಬೆಂಗಳೂರು: ಚಲಿಸುತ್ತಿದ್ದ ಬಸ್‍ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಫೋಟೋ ಕ್ಲಿಕ್ಕಿಸಿ ಮಹಿಳಾ ಟೆಕ್ಕಿ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

    47 ವರ್ಷದ ಮಧುಸೂದನ್ ರಾವ್ ಬಂಧಿತ ಆರೋಪಿ. ಚಲಿಸುತ್ತಿದ್ದ ವೋಲ್ವೋ ಬಸ್‍ನಲ್ಲಿ ಆರೋಪಿ ಬೆಂಗಳೂರಿನ ಇಬ್ಬಲೂರು ರಿಂಗ್‍ರೋಡ್ ಬಳಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಬಸ್‍ನಲ್ಲಿಯೇ ಆತನ ಫೋಟೋ ತೆಗೆದು ಬೆಳ್ಳಂದೂರು ಇನ್ಸ್‍ಪೆಕ್ಟರ್‍ಗೆ ನೋ ಯುವರ್ ಪೊಲೀಸ್ ಸ್ಟೇಷನ್ ಆ್ಯಪ್ ಮೂಲಕ ಮಾಹಿತಿ ರವಾನಿಸಿದ್ದಾರೆ.

    ಮಾಃಇತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಬಸ್ ಅಡ್ಡ ನಿಲ್ಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಬುಧವಾರ ನಡೆದಿದ್ದು, ಮಹಿಳೆ ವೋಲ್ವೋ ಬಸ್ ನಲ್ಲಿ ಹೈದರಾಬಾದ್‍ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

  • ಬಸ್ ರಿಪೇರಿ ಮಾಡಿ ಬೆಂಗಳೂರಿಗರ ಪ್ರಶಂಸೆಗೆ ಪಾತ್ರರಾದ್ರು ಈ ಸಂಚಾರಿ ಪೇದೆ

    ಬೆಂಗಳೂರು: ಸಂಚಾರಿ ಪೊಲೀಸ್ ಪೇದೆಯೊಬ್ಬರು ಕೆಟ್ಟು ನಿಂತಿದ್ದ ವೋಲ್ವೊ ಬಸ್ ರಿಪೇರಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಮಡಿವಾಳ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಮಡಿವಾಳ ಟು ಹೊಸೂರು ಮಾರ್ಗವಾಗಿ ಚಲಿಸುತ್ತಿದ್ದ ವೋಲ್ವೊ ಬಸ್ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಿತ್ತು. ಬಸ್ ಕೆಟ್ಟು ನಿಂತ ಪರಿಣಾಮ ಹೊಸೂರ್ ರೋಡ್‍ನಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿತ್ತು.

    ಈ ವೇಳೆ ಕರ್ತವ್ಯದಲ್ಲಿದ್ದ ಮಡಿವಾಳ ಸಂಚಾರಿ ಠಾಣೆಯ ಪೊಲೀಸ್ ಪೇದೆ ರಾಜಿಸಾಬ್ ಘಂಟಿ ಅರ್ಧ ಗಂಟೆಯಲ್ಲೇ ಬಸ್ ರಿಪೇರಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಘಟನೆ ಕಂಡವರಿಂದ ರಾಜಿಸಾಬ್ ಘಂಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

    ವಿಜೇಂದ್ರ ಡಿಟಿ ಅವರು ಫೇಸ್‍ಬುಕ್‍ನಲ್ಲಿ ರಾಜಿಸಾಬ್ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ.
    “ಈ ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ಮಡಿವಾಳ ಟ್ರಾಫಿಕ್ ಪೊಲೀಸ್ ರಾಜಿಸಾಬ್. ಹೊಸೂರು ರೋಡ್ ಸಮೀಪದ ಮಡಿವಾಳ ಬ್ರಿಡ್ಜ್ ಬಳಿ ಕೆಟ್ಟು ನಿಂತಿದ್ದ ನಗರ ಸಾರಿಗೆ ವೋಲ್ವೋವನ್ನು ತಕ್ಷಣವೇ ಸರಿಪಡಿಸಿ, ಟ್ರಾಫಿಕ್ ಸರಿ ದಾರಿಗೆ ತಂದು ಸಾರ್ವಜನಿಕರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವುದನ್ನು ತಪ್ಪಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದರು. ನಾ ಕಂಡಂತೆ ಇಂತಹ ಸಮಾಜಮುಖಿ ಕೆಲಸಗಳನ್ನು ಇವರು ತುಂಬ ಮಾಡಿದ್ದಾರೆ, ಇಂತಹವರಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಗುರುತಿಸಿ ಅವರಿಗೆ ಅಭಿನಂದಿಸಬೇಕು.”