Tag: volvo bus

  • ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ KSRTC ಗುಡ್‌ನ್ಯೂಸ್ – ಮೊದಲ ಬಾರಿಗೆ ಶಬರಿಮಲೆಗೆ ವೋಲ್ವೋ ಬಸ್ ಸಂಚಾರ

    ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ KSRTC ಗುಡ್‌ನ್ಯೂಸ್ – ಮೊದಲ ಬಾರಿಗೆ ಶಬರಿಮಲೆಗೆ ವೋಲ್ವೋ ಬಸ್ ಸಂಚಾರ

    – ನ.29ರಿಂದ ಬೆಂಗಳೂರು ಟು ಶಬರಿಮಲೆ ಬಸ್ ಸಂಚಾರ

    ಬೆಂಗಳೂರು: ಶಬರಿಮಲೆ (Sabarimala) ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕೆಎಸ್‌ಆರ್‌ಟಿಸಿ (KSRTC) ಗುಡ್‌ನ್ಯೂಸ್ ಕೊಟ್ಟಿದೆ. ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿಯಿಂದ ಶಬರಿಮಲೆಗೆ ವೋಲ್ವೋ ಬಸ್ (Volvo Bus) ಸಂಚರಿಸಲಿದೆ.

    ಇದೇ ನವೆಂಬರ್ 29ರಿಂದ ಬೆಂಗಳೂರಿನಿಂದ ಶಬರಿಮಲೆಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತಾದಿಗಳು ತೆರಳುವ ಸೀಸನ್ ಇದಾಗಿದ್ದರಿಂದ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಿಂದ (Bengaluru) ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ಇದನ್ನೂ ಓದಿ: ರಝಾಕರ್‌ಗಳಿಂದಲೇ ಖರ್ಗೆ ತಾಯಿ, ಸಹೋದರಿಯ ಹತ್ಯೆಯಾದರೂ ಮುಸ್ಲಿಮರ ಮತಕ್ಕಾಗಿ ಬಾಯಿ ಬಿಡುತ್ತಿಲ್ಲ: ಯೋಗಿ ತಿರುಗೇಟು

    ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್‌ಗೆ 1,750 ರೂ. ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ನಿಗದಿ ಮಾಡಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್‌ನಿಂದ ಶಾಂತಿನಗರಕ್ಕೆ ವೋಲ್ವೋ ಬಸ್ ಸಂಚಾರ ಮಾಡಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಇದನ್ನೂ ಓದಿ: ಮದ್ಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಮನೆಯಿಂದ 1.5 ಕೋಟಿ ದೋಚಿದ್ದ ದಂಪತಿ

  • ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ

    ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ

    ಗದಗ: ವೋಲ್ವೋ ಬಸ್ ಪುನಃ ಆರಂಭಿಸುವಂತೆ ಟೀಂ ಇಂಡಿಯಾದ(Team India) ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ (Sunil Joshi) ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

    ಬೆಂಗಳೂರಿನಿಂದ (Bengaluru) ಗದಗ ನಗರಕ್ಕೆ ವೋಲ್ವೋ ಬಸ್ (Volvo Bus) ಸೇವೆಯನ್ನು ಪುನರಾರಂಭಗೊಳಿಸುವಂತೆಸಿಎಂ ಸಿದ್ದರಾಮಯ್ಯ (CM Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ (H. K. Patil ) ಅವರಿಗೆ ಎಕ್ಸ್ನಲ್ಲಿ ಟ್ಯಾಗ್ ಮಾಡುವ ಮೂಲಕ ಜೋಷಿ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:

    ಬೆಂಗಳೂರಿನಿಂದ ಗದಗಕ್ಕೆ (Gadag) ಹೋಗುವ ವೋಲ್ವೋ ಬಸ್ ಸೇವೆಯನ್ನು ರದ್ದುಗೊಳಿಸಲಾಗಿದೆ ಮತ್ತು ಇದಕ್ಕೆ ಯಾವುದೇ ವಿವರ ನೀಡಲಾಗಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಈ ವಿಷಯದಲ್ಲಿ ತಕ್ಷಣವೇ ಚರ್ಚಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರುಮಾಡಿ ಎಂದು ವಿನಂತಿಯಿಂದ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:

    2023ರ ಜನವರಿ 9 ರಂದು ಸಾರಿಗೆ ಸಚಿವರಾಗಿದ್ದ ಶ್ರೀರಾಮಲು ಅವರು ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಸಂಜೆ 6.15ಕ್ಕೆ ಗದಗ ತಲುಪುತ್ತಿತ್ತು. ಆದರೆ ಈಗ ಈ ಬಸ್ಸು ಸೇವೆಯನ್ನು ರದ್ದುಗೊಳಿಸಲಾಗಿದೆ. ಬಸ್ ಸೇವೆ ರದ್ದಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

  • ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ

    ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್ (BMTC Volvo Bus) ಪಲ್ಟಿ ಹೊಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Airport) ಹೆಚ್‍ಎಸ್‍ಆರ್ ಲೇಔಟ್ (HSR Layout) ಕಡೆ ಬಿಎಂಟಿಸಿ ವೋಲ್ವೋ ಬಸ್ (ನಂಬರ್ KA 57 f 0237) ಬರುತ್ತಿತ್ತು. ಆದರೆಪ್ಯಾಲೇಸ್ ಗುಟ್ಟಹಳ್ಳಿ ಫ್ಲೈಓವರ್ ಹತ್ತುವಾಗ ಬಸ್ ಪಲ್ಟಿಯಾಗಿದೆ.

    ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡಿದೆ. ಬಸ್ ಸೈಡ್ ಗೆ ಹಾಕುವಷ್ಟರಲ್ಲಿ ಡಿವೈಡರ್ ಗೆ ಹೊಡೆದು ಪಲ್ಟಿಯಾಗಿದೆ. ಅವಘಡದ ವೇಳೆ ಚಾಲಕ ನಿರ್ವಾಹಕ ಸೇರಿ 13 ಮಂದಿ ಬಸ್ಸಿನಲ್ಲಿದ್ದರು. ಘಟನೆಯಿಂದ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ತಲೆಗೆ ಪೆಟ್ಟು ಬಿದ್ದಿದೆ. ಇದನ್ನೂ ಓದಿ: 2 ತಿಂಗಳಲ್ಲಿ 9 ಬಾರಿ ಹಾವು ಕಡಿದ್ರೂ ಬಾಲಕ ಆರೋಗ್ಯ!

    ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಿಂದಾಗಿ ಪ್ಯಾಲೇಸ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ತಡರಾತ್ರಿವರೆಗೆ ಆಗಿದ್ದ ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೋಲ್ವೋ ಬಸ್‌ಗಳನ್ನು ಅಂತರ್ ಜಿಲ್ಲೆ ವಿಸ್ತರಣೆಗೆ ಬಿಎಂಟಿಸಿ ಮೆಗಾ ಪ್ಲಾನ್

    ವೋಲ್ವೋ ಬಸ್‌ಗಳನ್ನು ಅಂತರ್ ಜಿಲ್ಲೆ ವಿಸ್ತರಣೆಗೆ ಬಿಎಂಟಿಸಿ ಮೆಗಾ ಪ್ಲಾನ್

    ಬೆಂಗಳೂರು: ಬಿಎಂಟಿಸಿಯ (BMTC) ವೋಲ್ವೋ ಬಸ್‌ಗಳನ್ನು (Volvo Bus) ಅಂತರ್ ಜಿಲ್ಲೆ ವಿಸ್ತರಣೆಗೆ ಬಿಎಂಟಿಸಿ ಮೆಗಾ ಪ್ಲಾನ್ ಮಾಡುತ್ತಿದೆ. ರಾಜ್ಯದ 5 ಜಿಲ್ಲೆಗಳಿಗೆ ಬಿಎಂಟಿಸಿ ವ್ಯಾಪ್ತಿ ವಿಸ್ತರಣೆಗೆ ಯೋಚನೆ ಮಾಡಿದ್ದು, ಕೋಲಾರ, ಕನಕಪುರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಓಡಿಸಲು ಅನುಮತಿಗಾಗಿ ಬಿಎಂಟಿಸಿ ಎಂಡಿ ಸತ್ಯವತಿಯಿಂದ ಕೆಎಸ್‌ಆರ್‌ಟಿಸಿ (KSRTC) ಎಂಡಿಗೆ ಪತ್ರ ಬರೆಯಲಾಗಿದೆ.

    ತುಕ್ಕು ಹಿಡಿಯುತ್ತಿರುವ ವೋಲ್ವೋ ಬಸ್‌ಗಳ ಕಾಯಕಲ್ಪಕ್ಕೆ ಹೊರಜಿಲ್ಲೆಗೂ ಬಿಎಂಟಿಸಿ ಕಾರ್ಯಾಚರಣೆ ಪ್ಲಾನ್ ಇದಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರಕ್ಕೆ ಬಸ್ ಸಂಚಾರ ನಡೆಸಲು ಕೆಎಸ್‌ಆರ್‌ಟಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಇದರ ನಡುವೆ ಕೋಲಾರ, ತುಮಕೂರು, ರಾಮನಗರ, ಕನಕಪುರ, ಚಿಕ್ಕಬಳ್ಳಾಪುರಕ್ಕೆ ಬಸ್ ಓಡಾಟಕ್ಕೆ ಅವಕಾಶ ಕೋರಿ ಕೆಎಸ್‌ಆರ್‌ಟಿಸಿ ಎಂಡಿಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ದಟ್ಟ ಮಂಜಿನ ನಡುವೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

    ಅಂತರ್ ಜಿಲ್ಲೆ ವ್ಯಾಪ್ತಿ ವಿಸ್ತರಣೆಗೆ ಕಾರಣ:
    – ಕಳೆದ ಎರಡೂವರೆ ವರ್ಷದಿಂದ 400 ಕ್ಕೂ ಹೆಚ್ಚು ವೋಲ್ವೋ ಬಸ್‌ಗಳು ಬೇಡಿಕೆಯಿಲ್ಲದೆ ನಿಂತಲ್ಲೆ ನಿಂತಿವೆ.
    – ಬಿಎಂಟಿಸಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಣೆಯಿಂದ ಭಾರೀ ನಷ್ಟವಾಗುತ್ತಿದ್ದು, ಬೆಂಗಳೂರು ಬಿಟ್ಟು ಹೊರಜಿಲ್ಲೆಗೆ ಓಡಿಸಲು ನಿರ್ಧರಿಸಲಾಗಿದೆ.
    – ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ದರ್ಬಾರ್ ಹೆಚ್ಚಿದೆ.
    – ಮುಳುಗುವ ಹಡಗಿನಂತಾದ ಬಿಎಂಟಿಸಿಯನ್ನು ಮೇಲೆತ್ತಲು ಅಧಿಕಾರಿಗಳು ಈ ಹೊಸ ನಿರ್ಧಾರ ಮಾಡಿದ್ದಾರೆ.
    – ಈ 5 ಜಿಲ್ಲೆಗಳು ಬೆಂಗಳೂರು ಸಮೀಪದಲ್ಲಿರುವ ಕಾರಣ ಬಿಎಂಟಿಸಿ ಬಸ್‌ಗೆ ಭಾರೀ ಬೇಡಿಕೆಯಿದೆ.
    – ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಎಂಟಿಸಿ 25 ಕಿ.ಮೀ ಅನುಮತಿ ಮಾತ್ರ ಪಡೆದಿದೆ.
    – ಅನುಮತಿಯಿಲ್ಲದಿದ್ದರೂ ಬಿಎಂಟಿಸಿ ನಿಗಮ ಹಗ್ಗಜಗ್ಗಾಟ ಮಾಡುತ್ತಿದೆ. ಇದನ್ನೂ ಓದಿ: ಮಾಜಿ ಶಿಕ್ಷಣ ಹಾಗೂ ಸಕ್ಕರೆ ಖಾತೆ ಸಚಿವ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    ಬೆಂಗಳೂರು: ಬಿಎಂಟಿಸಿ ಸಂಸ್ಥೆಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ. ಇದಕ್ಕೆ ಈಗ ವೋಲ್ವೋ ಬಸ್ಸುಗಳು ಸೇರ್ಪಡೆಯಾಗುತ್ತಿವೆ. ಪ್ರಯಾಣಿಕರ ಕೊರತೆಯಿಂದ ನಷ್ಟದ ಹಾದಿಯಲ್ಲಿದ್ದ ವೋಲ್ವೋ ಈಗ ಐಟಿ-ಬಿಟಿ ಕಂಪನಿಗಳಿಗೂ ಬೇಡವಾಗಿದೆ. ಉತ್ತರ ಕರ್ನಾಟಕಕ್ಕಾದ್ರೂ ಬಸ್ಸುಗಳ ಶಿಫ್ಟ್ ಮಾಡೋ ಸಾರಿಗೆ ಸಚಿವರ ಯೋಚನೆಗೂ ಬ್ರೇಕ್ ಬಿದ್ದಿದೆ.

    ಕಳೆದ ಎರಡೂವರೆ ವರ್ಷದಿಂದ ನಿಂತಲ್ಲೇ ನಿಂತ ವೋಲ್ವೋ ಬಸ್ಸುಗಳಲ್ಲಿ 850 ಬಸ್ಸುಗಳ ಪೈಕಿ ಕೇವಲ 200 ಬಸ್ ಮಾತ್ರ ನಿತ್ಯ ಸಂಚಾರ ಮಾಡುತ್ತಿವೆ. ಉಳಿದವು ಡಿಪೋನಲ್ಲೇ ಧೂಳು ಹಿಡಿಯುತ್ತಿವೆ. ಈಗ ವೋಲ್ವೋ 650 ಬಸ್ಸುಗಳು ಸಾರಿಗೆ ಸಚಿವರಿಗೇ ಸವಾಲಾಗಿವೆ. ಈ ವೋಲ್ವೋ ಬಸ್‌ಗಳನ್ನ ಉತ್ತರ ಕರ್ನಾಟಕ್ಕೆ ಹಸ್ತಾಂತರಿಸೋ ಯೋಜನೆಯೂ ಸಾರಿಗೆ ಇಲಾಖೆಗೆ ಇತ್ತು. ಆದರೆ ಈಗ ಅದೂ ಸಹ ವಿಫಲವಾಗಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಏಕೆಂದರೆ ರೋಡ್ ಕ್ಲಿಯರೆನ್ಸ್ ಕಡಿಮೆ ಇರೋ ಕಾರಣ ಉತ್ತರ ಕರ್ನಾಟಕಕ್ಕೆ ಈ ಬಸ್ಸುಗಳು ಹೊಂದಿಕೆಯಾಗ್ತಿಲ್ಲ. ಇತ್ತ ಬೆಂಗಳೂರಿನಲ್ಲೂ ಈ ಬಸ್ಸುಗಳ ಸಂಚಾರ ಸಾಧ್ಯವಾಗ್ತಿಲ್ಲ. ವೋಲ್ವೋ ಬಸ್ಸುಗಳು ಇದ್ದೂ ಇಲ್ಲದಂತಾಗಿವೆ. ವೋಲ್ವೋಗೆ ಜನರ ಡಿಮ್ಯಾಂಡ್ ತುಂಬಾ ಕಡಿಮೆಯಾಗಿದೆ. ಏರ್‌ಪೋರ್ಟ್ ರಸ್ತೆಯನ್ನ ಹೊರತುಪಡಿಸಿದ್ರೇ ಉಳಿದ ಕಡೆ ವೋಲ್ವೋ ನೋಡುವುದೇ ಅಪರೂಪವಾಗಿದೆ. ಹೀಗಾಗಿ ಶೀಘ್ರದಲ್ಲಿ ಎಲ್ಲಾ 650 ವೋಲ್ವೋಗಳು ಗುಜರಿ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಇತ್ತ 2ನೇ ಹಂತದಲ್ಲಿ ರಸ್ತೆಗಿಳಿಯುತ್ತಿರೋ 300 ಎಲೆಕ್ಟ್ರಿಕ್‌ ಬಸ್‌ಗಳು ಸಹ ವೋಲ್ವೋ ಬಸ್ಸುಗಳನ್ನ ಮೂಲೆಗುಂಪು ಮಾಡೋದು ಗ್ಯಾರೆಂಟಿ ಎನ್ನುವಂತಾಗಿದೆ. ಈ ಹಿಂದೆ ಐಟಿಬಿಟಿ ಕಂಪನಿಗಳಿಂದ ಬೇಡಿಕೆ ಬಂದ್ರೆ ಸಾರಿಗೆ ಇಲಾಖೆಯಿಂದ ವೋಲ್ವೋ ಬಸ್ ನೀಡಲಾಗ್ತಿತ್ತು. ಆದರೆ ಕೊರೊನಾ ನಂತರ ಬಸ್ಸುಗಳನ್ನ ಕೇಳುವವರೇ ಇಲ್ಲದಂತಾಗಿತ್ತು. ಈಗ ಐಟಿಬಿಟಿ ಕಂಪನಿಗಳು ವೋಲ್ವೋ ಬಸ್ ಬೇಡ ಎಲೆಕ್ಟ್ರಿಕ್‌ ಬಸ್ ಬೇಕು ಎನ್ನುತ್ತಿವೆ. ಈ ಹಿನ್ನಲೆ ಸದ್ಯ ಡಿಪೋದಲ್ಲಿ ನಿಂತಿರೋ 650 ವೋಲ್ವೋ ಬಸ್ಸುಗಳು ಸ್ಕ್ರಾಪ್‌ ಆಗೋ ಸಾಧ್ಯತೆ ಹೆಚ್ಚಾಗುತ್ತಿದೆ.

    ಒಂದು ಕಡೆ ಸಚಿವರ ಉತ್ತರ ಕರ್ನಾಟಕ ವೋಲ್ವೋ ಬಸ್ ಶಿಫ್ಟ್ ಪ್ಲ್ಯಾನ್‌ ಆಗಿದೆ. ಹೀಗಾಗಿ ಸಾರಿಗೆ ಇಲಾಖೆಗೆ ತಲೆ ನೋವಾದ ಬಿಎಂಟಿಸಿಯ ನೂರಾರು ವೋಲ್ವೋ ಬಸ್ಸುಗಳು. ರೋಡಿಗಿಳಿಸಿದ್ರೆ ಪ್ರಯಾಣಿಕರು ಬರ್ತಿಲ್ಲ, ನಿಲ್ಲಿಸಿದ್ರೆ ಕೋಟ್ಯಾಂತರ ರೂಪಾಯಿ ವೆಚ್ಚ. ಬಳಕೆಯಾಗದೇ ಸ್ಕ್ರಾಪ್‌ ಆಗಿಬಿಡುತ್ತಾ ಎನ್ನುವ ಚಿಂತೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

    ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮಧ್ಯಾಹ್ನ ಬೆಂಗಳೂರಿಗೆ ತಡೆರಹಿತ ಐರಾವತ ವೋಲ್ವೊ ಮತ್ತು ಹೈದರಾಬಾದ್‍ಗೆ ಸಂಜೆ ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

    ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ ದೂರದ ಸ್ಥಳಗಳಿಗೆ ಜನರ ಓಡಾಟ ಹೆಚ್ಚಾಗುವ ನಿರೀಕ್ಷೆ ಇದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಸೋಮವಾರದಿಂದ ಹುಬ್ಬಳ್ಳಿ ಯಿಂದ ಬೆಂಗಳೂರಿಗೆ ಮಧ್ಯಾಹ್ನದ ಸಮಯದಲ್ಲಿ ತಡೆರಹಿತ ಐರಾವತ ವೋಲ್ವೋ ಹಾಗೂ ಹೈದರಾಬಾದ್‍ಗೆ ಸಂಜೆ ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ ಗಳು ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇದನ್ನೂ ಓದಿ: ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

    ಬೆಂಗಳೂರಿಗೆ ತೆರಳುವ ತಡೆರಹಿತ ಐರಾವತ ಬಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 1ಕ್ಕೆ ಹೊರಡುತ್ತದೆ. ಸಂಜೆ 7-30ಕ್ಕೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 3ಕ್ಕೆ ಬಿಟ್ಟು ರಾತ್ರಿ 9-30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 730. ನಿಗದಿಪಡಿಸಲಾಗಿದೆ.

    ಈ ಮೊದಲು ಹುಬ್ಬಳ್ಳಿಯಿಂದ ಮಧ್ಯಾಹ್ನ 3ಕ್ಕೆಹೊರಡುತ್ತಿತ್ತು. ರಾತ್ರಿ 9-30ಕ್ಕೆ ಬೆಂಗಳೂರಿಗೆ ತಲುಪಬೇಕಾಗಿತ್ತು. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಹಳ ತಡವಾಗಿ ಅಂದರೆ 10 ಗಂಟೆಯ ನಂತರ ತಲುಪುತ್ತಿತ್ತು. ಇದರಿಂದ ಬಸ್ ಇಳಿದ ನಂತರ ಪ್ರಯಾಣಿಕರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿ ಮನೆ ತಲುಪಲು ಅನಾನುಕೂಲವಾಗಿತ್ತು. ಅದ್ದರಿಂದ ಹುಬ್ಬಳ್ಳಿ ಬಿಡುವ ಸಮಯ ಬದಲಾವಣೆಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಅದರಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

    ಹೈದರಾಬಾದ್‍ಗೆ ತೆರಳುವ ನಾನ್ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ಸಂಜೆ 7-35 ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ6-35 ಕ್ಕೆ ಹೈದರಾಬಾದ್ ತಲುಪುತ್ತದೆ. ಹೈದರಾಬಾದ್ ನಿಂದ ಸಂಜೆ 7-15 ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 6-15ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 910 ನಿಗದಿಪಡಿಸಲಾಗಿದೆ. ಇದರೊಂದಿಗೆ ಈಗಾಗಲೆ ಹುಬ್ಬಳ್ಳಿಯಿಂದ ಹೈದರಾಬಾದ್‍ಗೆ ಸಂಜೆ 7ಕ್ಕೆ ಹೊರಡುವ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಸಹ ಮುಂದುವರೆಯಲಿದೆ. ಇದನ್ನೂ ಓದಿ:ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ

    ಈ ಬಸ್ ಗಳಿಗೆ www.ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅಥವಾ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಕೌಂಟರ್ ನಲ್ಲಿ ಹಾಗೂ ಪ್ರಾಂಚೈಸಿ ಕೇಂದ್ರಗಳಲ್ಲಿ ಮುಂಗಡ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿಗೆ ನಾಲ್ಕು ಅಥವ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್ ನಲ್ಲಿ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೇ ಮುಂಗಡ ಬುಕ್ಕಿಂಗ್ ಮಾಡಿದರೆ ಬರುವಾಗಿನ ಪ್ರಯಾಣ ದ ಮೂಲ ಟಿಕೆಟ್ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

  • ಸೋಮವಾರದಿಂದ ರಸ್ತೆಗಿಳಿಯಲಿವೆ ವೋಲ್ವೋ ಬಸ್‍ಗಳು- ಎಲ್ಲಿಂದ ಎಲ್ಲಿಗೆ ಸಂಚಾರ?

    ಸೋಮವಾರದಿಂದ ರಸ್ತೆಗಿಳಿಯಲಿವೆ ವೋಲ್ವೋ ಬಸ್‍ಗಳು- ಎಲ್ಲಿಂದ ಎಲ್ಲಿಗೆ ಸಂಚಾರ?

    ಬೆಂಗಳೂರು: ಸೋಮವಾರದಿಂದ ವೋಲ್ವೋ ಬಸ್‍ಗಳು ರಸ್ತೆಗಿಳಿಯಲಿದ್ದು, 8 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.

    ವೋಲ್ವೋ ಬಸ್‍ಗಳ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರವೇ ಅನುಮತಿ ಸಿಕ್ಕಿತ್ತು. ಆದರೆ ಎಲ್ಲಿ ಎಸಿ ಬಸ್‍ಗಳನ್ನ ಓಡಿಸಬೇಕು ಎನ್ನುವ ಬಗ್ಗೆ ಬಿಎಂಟಿಸಿಯಿಂದ ಚಿಂತನೆ ನಡೆದಿತ್ತು. ಸದ್ಯ ಸಾರಿಗೆ ಇಲಾಖೆಯ ಮಾರ್ಗದರ್ಶನದ ಪ್ರಕಾರ ವಿಮಾನ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಬಸ್‍ಗಳು ಸಂಚರಿಸಲಿದ್ದು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗಲಿದೆ.

    ಸುಮಾರು 800ಕ್ಕೂ ಹೆಚ್ಚು ಎಸಿ, ವೋಲ್ವೋ ಬಸ್‍ಗಳು ಲಾಕ್‍ಡೌನ್ ಆದಾಗಿನಿಂದ ನಿಂತಲ್ಲೇ ನಿಂತಿದ್ದವು. ಈ ಪೈಕಿ ಮೊದಲಿಗೆ 75 ಬಸ್‍ಗಳನ್ನು ರಸ್ತೆಗಿಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

    ಎಲ್ಲಿಂದ ಎಲ್ಲಿಗೆ ಸಂಚಾರ?
    ಮೆಜೆಸ್ಟಿಕ್ – ಹೊಸಕೋಟೆ
    ಮೆಜೆಸ್ಟಿಕ್ – ಕಾಡುಗೋಡಿ
    ಮೆಜೆಸ್ಟಿಕ್ – ಸರ್ಜಾಪುರ
    ಮೆಜೆಸ್ಟಿಕ್ – ಅತ್ತಿಬೆಲೆ
    ಹೆಬ್ಬಾಳ – ಬನಶಂಕರಿ
    ಹೆಬ್ಬಾಳ – ಸಿಲ್ಕ್ ಬೋರ್ಡ್
    ಬನಶಂಖರಿ – ಐಟಿಪಿಎಲ್
    ಎಲೆಕ್ಟ್ರಾನಿಕ್ ಸಿಟಿ – ಐಟಿಪಿಎಲ್

  • ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ವೋಲ್ವೋ ಬಸ್‍ನ ಚಾಲಕಿಯಾದ ಬಿಎಂಟಿಸಿ ಎಂಡಿ ಶಿಖಾ

    ಬೆಂಗಳೂರು: ಬಿಎಂಟಿಸಿ ಎಂಡಿ, ಮಹಿಳಾ ಐಎಎಸ್ ಅಧಿಕಾರಿ ಶಿಖಾ ವೋಲ್ವೋ ಬಸ್‍ನ ಚಾಲಕರಾಗಿದ್ದಾರೆ.

    ಶಿಖಾ ಅವರು ಡಿಪೋವೊಂದರಲ್ಲಿ ಹೊಸ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ಟೆಸ್ಟ್ ಡ್ರೈವ್ ತಾವೇ ಮಾಡಿ ಬಸ್ಸಿಗೆ ಸರ್ಟಿಫಿಕೇಟ್ ನೀಡಿದ್ದಾರೆ. ಶಿಖಾ ಬಸ್ ಚಲಾಯಿಸುವ ವಿಡಿಯೋ ಈಗ ಎಲ್ಲರ ಹುಬ್ಬೇರಿಸಿದೆ. ಖಡಕ್ ಅಧಿಕಾರಿ ಶಿಖಾ ಬಸ್ ಚಲಾಯಿಸುವ ದೃಶ್ಯ ಕಂಡು ಅಧಿಕಾರಿಗಳು ಸಿಬ್ಬಂದಿಗಳೇ ದಂಗಾಗಿದ್ದಾರೆ. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಖಾಲಿ ರೋಡ್‍ನಲ್ಲಿ ಶಿಖಾ ಅವರು ಸುಮಾರು ಹೊತ್ತು ಬಸ್ ಚಲಾಯಿಸಿದ್ದಾರೆ. ಕೆಲವರು ಶಿಖಾ ಡ್ರೈವಿಂಗ್‍ಗೆ ಖುಷಿ ಪಟ್ಟು ಏನ್ ಡ್ರೈವಿಂಗ್ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು, “ಅಲ್ಲಾ ಮೊನ್ನೆ ರೇಣುಕಾಚಾರ್ಯ ಕೆಎಸ್‍ಆರ್ ಟಿಸಿ ಬಸ್ ಓಡಿಸಿದಾಗ ಕಾಯ್ದೆ ಪ್ರಕಾರ ಹಿಂಗೆಲ್ಲ ಬಸ್ ಓಡಿಸುವ ಹಾಗಿಲ್ಲ ಎಂದು ರೂಲ್ಸ್ ಮಾತಾನಾಡುತ್ತಿದ್ರೂ ಜೊತೆಗೆ ರೇಣುಕಾಚಾರ್ಯ ವಿರುದ್ಧ ದೂರು ಕೊಡುವುದಕ್ಕೆ ರೆಡಿಯಾಗಿದ್ದರು. ಆದರೆ ಈಗ ಶಿಖಾ ಹೇಗೆ ಬಸ್ ಚಲಾಯಿಸುತ್ತಾರೆ” ಎಂದು ಪ್ರಶ್ನಿಸುತ್ತಿದ್ದಾರೆ.

    ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಶಾಸಕಾ ರೇಣುಕಾಚಾರ್ಯ ಕೆಎಸ್‍ಆರ್‍ಟಿಸಿ ಡ್ರೈವರ್ ಡ್ರೆಸ್ ಹಾಕಿಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು

  • ಕೆಟ್ಟು ನಿಂತ ವೋಲ್ವೋ ಬಸ್- ಚಾರ್ಮಾಡಿಯಲ್ಲಿ ಮಧ್ಯರಾತ್ರಿ ಟ್ರಾಫಿಕ್ ಜಾಮ್

    ಕೆಟ್ಟು ನಿಂತ ವೋಲ್ವೋ ಬಸ್- ಚಾರ್ಮಾಡಿಯಲ್ಲಿ ಮಧ್ಯರಾತ್ರಿ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯ ಚಾರ್ಮಾಡಿ ಘಾಟಿನಲ್ಲಿ ವೋಲ್ವೋ ಬಸ್ ಕೆಟ್ಟು ನಿಂತ ಪರಿಣಾಮ ಸಂಚಾರ ಬಂದ್ ಆಗಿದೆ. ಮಧ್ಯರಾತ್ರಿ 12ರಿಂದ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಚಾರ್ಮಾಡಿಯಿಂದ ಅಣ್ಣಪ್ಪಸ್ವಾಮಿ ದೇವಾಲಯದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ.

    ವಾಹನಗಳು ಸುಮಾರು 10 ಕಿ.ಮೀ ಸಾಲುಗಟ್ಟಿ ನಿಂತಿದ್ದು, ಚಾರ್ಮಾಡಿಯಲ್ಲಿ ಭಾರೀ ವಾಹನಗಳ ನಿಷೇಧವಿದ್ದರೂ, ಘನ ವಾಹನಗಳು ಸಂಚರಿಸುತ್ತಿದೆ. ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೂ ಭಾರೀ ವಾಹನಗಳು ಚಾರ್ಮಾಡಿ ಘಾಟಿನಲ್ಲಿ ಸಂಚಾರ ಮಾಡುತ್ತಿದೆ.

    ಕೆಲವು ದಿನಗಳ ಹಿಂದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 5 ಕಿ.ಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿತ್ತು. ಲಾರಿ ಕೆಟ್ಟು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು, ಕೊಟ್ಟಿಗೆಹಾರದ ಬಳಿ ವಾಹನಗಳು ವಾಪಸ್ ತೆರಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕರಿಗೆ ಶಾಕ್

    ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕರಿಗೆ ಶಾಕ್

    ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲಾಗಿದ್ದು, ಡಿಸೇಲ್ ದರ ಏರಿಕೆ ಹಿನ್ನೆಲೆಯಲ್ಲಿ ವೋಲ್ವೋ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ.

    ಜುಲೈ 1 ರಿಂದ ಹಂತ ಸಂಖ್ಯೆ 7 ರಿಂದ 25 ರವರೆಗೆ ಮಾತ್ರ ಹಂತವಾರು ಬಸ್ ಪ್ರಯಾಣ ದರ 3.45% ರಿಂದ 26% ರವರೆಗೆ ಹೆಚ್ಚಳವಾಗಲಿದ್ದು, ಸರಾಸರಿ 16.89 ರಷ್ಟು ಏರಿಕೆ ಕಾಣಲಿದೆ. ನಾಳೆಯಿಂದಲೇ ನಗರದ ಸುಮಾರು 700 ವೋಲ್ವೋ ಬಸ್ಸುಗಳಿಗೆ ದರ ಅನ್ವಯವಾಗಲಿದೆ.

    2018 ವರ್ಷದ ಮೊದಲ ದಿನವೇ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣ ದರ ಕಡಿಮೆ ಮಾಡುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿತ್ತು. ಈ ವೇಳೆ ವಜ್ರ ಪ್ರಯಾಣ ದರಗಳನ್ನು 5% ರಿಂದ 37% ರವರೆಗೆ ಸರಾಸರಿ 29 ರಷ್ಟು ಕಡಿಮೆಗೊಳಿಸಿ ಪರಿಷ್ಕರಿಸಲಾಗಿತ್ತು. ನಿರಂತರವಾಗಿ ಏರಿಕೆಯಾಗುತ್ತಿರುವ ಡೀಸೆಲ್ ದರ, ತುಟ್ಟಿಭತ್ಯೆ ಹೆಚ್ಚಳ, ಸಿಬ್ಬಂದಿ ಹಾಗೂ ಕಾರ್ಯಾಚರಣೆ ವೆಚ್ಚದಲ್ಲಿಯೂ ಏರಿಕೆಯಾಗಿದ್ದರಿಂದ ಈ ಕ್ರಮಕ್ಕೆ ಮುಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಈ ಹಿಂದೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ಬಸ್ ಟಿಕೆಟ್ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಸಭೆಯಲ್ಲಿ ಬಸ್ ದರ ಏರಿಸುವ ಬದಲು ಸಾರಿಗೆ ಸಂಸ್ಥೆಗಳಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.