Tag: Volume Extension

  • ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ರೆ ನಮ್ಗೆ ಈ ಸ್ಥಿತಿ ಬರ್ತಿರಲಿಲ್ಲ: ಈಶ್ವರಪ್ಪ

    ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ರೆ ನಮ್ಗೆ ಈ ಸ್ಥಿತಿ ಬರ್ತಿರಲಿಲ್ಲ: ಈಶ್ವರಪ್ಪ

    – ವಿಧಾನ ಪರಿಷತ್‍ನವರು ಬಂದ್ರೆ ಭಯ ಆಗುತ್ತಪ್ಪ!
    – ದೆಹಲಿಯಿಂದ ಒಳ್ಳೆ ಸುದ್ದಿ ಬರುತ್ತೆ

    ಧಾರವಾಡ: ಸಿಎಂ ದೆಹಲಿಗೆ ಹೋಗಿದ್ದು ಯಾಕೆ ಅಂತಾ ನನಗೆ ಗೊತ್ತಿಲ್ಲ, ಆದರೆ ದೆಹಲಿಯಿಂದ ಖಂಡಿತ ಒಳ್ಳೇ ಸುದ್ದಿ ಬರುತ್ತೆ. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರು ಒಳ್ಳೆ ತೀರ್ಮಾನ ಮಾಡಿ ಕಳಿಸುತ್ತಾರೆ, ಕರ್ನಾಟಕ ರಾಜ್ಯಕ್ಕೆ ಏನು ಒಳ್ಳೆದಾಗಬೇಕೋ ಅದನ್ನೇ ಮಾಡಿ ಕಳುಹಿಸುತ್ತಾರೆ ಎಂದು ಸಿಎಂ ದೆಹಲಿಗೆ ಹೋಗಿರುವ ಕುರಿತಾಗಿ ಹೇಳಿದ್ದಾರೆ.

    ಪಕ್ಷಕ್ಕೆ ಬಂದವರ ಋಣ ತೀರಿಸಬೇಕು: ಎಲ್ಲ ಶಾಸಕರಿಗೂ ಮಂತ್ರಿ ಆಗುವ ಬಯಕೆ ಇರುತ್ತೆ, ಆದರೆ ಅದಕ್ಕೊಂದು ಲಿಮಿಟ್ ಇದೆ ಅಲ್ವಾ. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ, ಜೆಡಿಎಸ್, ಕಾಂಗ್ರೆಸ್‍ನಿಂದ ಅನೇಕರು ಬಂದಿದ್ದಾರೆ, ಅವರ ಋಣ ತೀರಿಸಬೇಕಿದೆ. ಯಾರು ಪಕ್ಷಕ್ಕೆ ಬಂದಿದ್ದಾರೋ ಅವರೆಲ್ಲ ಈಗ ಬಿಜೆಪಿ ಕಾರ್ಯಕರ್ತರಾಗಿದ್ದಾರೆ, ಅವರು ಹೊರಗಿನಿಂದ ಬಂದವರು ಅಂತಾ ನಮಗೂ ಅನಿಸುತ್ತಿಲ್ಲ, ಅವರ ಬಗ್ಗೆ ಕೇಂದ್ರದ ನಾಯಕರು ಒಳ್ಳೇ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

    ಸಂಕ್ರಾಂತಿ ಬಳಿಕ ಬದಲಾವಣೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಬೆಳಗ್ಗೆ ಯತ್ನಾಳರನ್ನು ನಾನು ಕೇಳಿದ್ದೇನೆ, ಲಿಂಗಾಯತ ಸಮಾಜದ ಮೀಸಲಾತಿ ವಿಚಾರವಾಗಿ ಅವರು ಮಾತನಾಡಿದ್ದಾರಂತೆ, ಅವರ ಈ ಹೇಳಿಕೆ ಬೇರೆ ವಿಚಾರವಾಗಿದೆ ಅಂತಾ ನನ್ನ ಜೊತೆ ಮಾತನಾಡಿದ್ದಾರೆ. ಇನ್ನು ಯತ್ನಾಳರ ಹಿಂದಿನ ಹೇಳಿಕೆಗಳ ವಿಚಾರವಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ. ಶಿಸ್ತು ಕ್ರಮಕ್ಕೆ ಕೇಂದ್ರಕ್ಕೂ ಕಳುಹಿಸಿದ್ದಾರೆ, ಕೇಂದ್ರದ ಶಿಸ್ತು ಸಮಿತಿ ಏನ ಕ್ರಮ ಕೈಗೊಳ್ಳುತ್ತದೆಯೋ ನೋಡಬೇಕಿದೆ ಎಂದು ತಿಳಿಸಿದರು.

    ನಮಗೆ ಭಯ ಆಗುತ್ತಪ್ಪ: ಎಂಎಲ್‍ಎ ಶಾಲೆ ದತ್ತು ಯೋಜನೆ ಬೇಗ ಸದುಪಯೋಗ ಪಡಿಸಿಕೊಳ್ಳಿ, ಇಲ್ಲದೇ ಹೋದಲ್ಲಿ ಅವರು ಗುಡಿ ಗೋಪುರಕ್ಕೆ ಹಣ ಕೊಡ್ತಾರೆ. ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐಗೆ ಈಶ್ವರಪ್ಪ ಸೂಚನೆ ನೀಡಿದ್ದಾರೆ. ಶಾಸಕರ ಕೈಯಲ್ಲಿನ ದುಡ್ಡು ಬೇಗ ಬಳಸಿಕೊಳ್ಳಿ, ಗುಡಿ ಗೋಪುರದಲ್ಲಿ ವೋಟ್ ಇರುತ್ತೇ. ಹಳ್ಳಿಯ ದೇವಸ್ಥಾನಕ್ಕೆ ದುಡ್ಡು ಕೊಟ್ಟರೆ 200-300 ವೋಟ್ ಸಿಗುತ್ತೆ, ಶಾಲೆಗೆ ಕೊಟ್ಟರೇ ವೋಟ್ ಎಲ್ಲಿ ಸಿಗುತ್ತೆ, ಬೇಗ ದತ್ತು ಯೋಜನೆ ಬಳಸಿಕೊಳ್ಳಿ, ಸಂಕೋಚ ಇಲ್ಲದೇ ಶಾಲೆಗಾಗಿ ಎಂಎಲ್‍ಎಗಳ ಕಡೆ ಹಣ ಕೇಳಿ ಎಂದರು. ಇದೇ ವೇಳೆ ಸಭೆಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರಗೆ ನೋಡಿ ವಿಧಾನ ಪರಿಷತ್‍ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ ಎಂದು ಈಶ್ವರಪ್ಪ ಹೇಳಿದ್ದಾರೆ.

  • ಅಧಿವೇಶನಕ್ಕೆ ಮಿನಿಸ್ಟರ್ ಆಗಿ ಎಂಟ್ರಿ ಕೊಡ್ತೀನಿ: ಮಹೇಶ್ ಕುಮಟಳ್ಳಿ ವಿಶ್ವಾಸ

    ಅಧಿವೇಶನಕ್ಕೆ ಮಿನಿಸ್ಟರ್ ಆಗಿ ಎಂಟ್ರಿ ಕೊಡ್ತೀನಿ: ಮಹೇಶ್ ಕುಮಟಳ್ಳಿ ವಿಶ್ವಾಸ

    ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಈ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಲ್ಲಿ ಎದೆ ಬಡಿತ ಹೆಚ್ಚಾಗಿದೆ. ನಿನ್ನೆ ಬೆಳಗಾವಿಯಲ್ಲಿ ಎಲ್ಲ ಗೆದ್ದವರನ್ನೂ ಸಚಿವರಾಗಿ ಮಾಡ್ತೀವಿ ಅಂದಿದ್ದ ಯಡಿಯೂರಪ್ಪ ಹೇಳಿಕೆಯಿಂದ ಮಿತ್ರಮಂಡಳಿ ತಂಡ ಸಚಿವರಾಗುವ ಕನಸು ಕಾಣಲಾರಂಭಿಸಿದೆ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಚಿವನಾಗಿ ಬಜೆಟ್ ಅಧಿವೇಶನಕ್ಕೆ ಎಂಟ್ರಿ ಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶಾಸಕರ ಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತಾಡಿದ ಮಹೇಶ್ ಕುಮಟಳ್ಳಿ, ಸಚಿವನಾಗಲು ನನಗೇನೂ ಗಡಿಬಿಡಿ ಇಲ್ಲ. ಆದ್ರೆ ನನ್ನನ್ನು ಸಚಿವನಾಗಿ ಮಾಡಿದರೆ ಅದಕ್ಕೆ ತಕ್ಕಂತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ನನ್ನ ಸಾಮಥ್ರ್ಯ ಮೀರಿ ಕೆಲಸ ಮಾಡ್ತೇನೆ. ಮುಂಬರುವ ಬಜೆಟ್ ಅಧಿವೇಶನಕ್ಕೆ ಸಚಿವನಾಗಿಯೇ ಎಂಟ್ರಿ ಕೊಡ್ತೇನೆ ಅಂದ್ರು. ಇನ್ನು ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮಾಡ್ತೇನೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ, ಇದರಲ್ಲಿ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ಕುಮಟಳ್ಳಿ ಹೇಳಿದರು. ಇದನ್ನೂ ಓದಿ: ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

    ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಹೇಶ್ ಕುಮಟಳ್ಳಿ ಒತ್ತಾಯಿಸಿದ್ರು. ಬೆಳಗಾವಿಗೆ ಮತ್ತೊಂದು ಡಿಸಿಎಂ ಸ್ಥಾನ ಕೊಟ್ರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಕೊಡಬೇಕು ಅನ್ನೋದು ನಮ್ಮ ಆಗ್ರಹವೂ ಇದೆ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಸವದಿ ಜೊತೆ ರಮೇಶ್ ಜಾರಕಿಹೊಳಿಯವರಿಗೂ ಡಿಸಿಎಂ ಸ್ಥಾನ ಕೊಟ್ಟರೆ ಅದೊಂದು ಐತಿಹಾಸಿಕ ಆಗಲಿದೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡೋದು ಇತಿಹಾಸ ಎಂದು ಮಹೇಶ್ ಕುಮಟಳ್ಳಿ ಹೇಳಿದರು. ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿ ಶಾಸಕರಾಗಿ ಮಾಡಿದ್ರು. ಹಿರಿಯರಾದ ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ವಿಶ್ವನಾಥ್ ಅವರಿಗೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ವಿಶ್ವನಾಥ್ ಅವರನ್ನೂ ನಮ್ಮ ಜೊತೆಗೆ ಸಚಿವರಾಗಿ ಮಾಡಲಿ ಎಂಬ ಆಸೆ ಇದೆ ಎಂದು ಇದೇ ವೇಳೆ ವಿಶ್ವನಾಥ್ ಅವರಿಗೂ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಮಹೇಶ್ ಕುಮಟಳ್ಳಿ ಒತ್ತಾಯಿಸಿದರು. ಇದನ್ನೂ ಓದಿ: ದೆಹಲಿ ಭೇಟಿಗೂ ಮುನ್ನ ಬಿಎಸ್‍ವೈಗೆ ಶಾಕ್-ಇಂದು ಹೈಕಮಾಂಡ್ ಭೇಟಿ ಅನುಮಾನ