Tag: Volume

  • ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

    ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

    ಕೋಲಾರ: ಟಿವಿ ವ್ಯಾಲ್ಯೂಮ್ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.

    ಟಿವಿ ವ್ಯಾಲ್ಯೂಮ್ ಜಾಸ್ತಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದ ಮಹಿಳೆ ಹಾಗೂ ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಇನ್ನೂ ಈ ಗಲಾಟೆಯು ಮನೆಯ ಬಳಿ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರ ಎದುರೇ ವ್ಯಕ್ತಿಯಿಂದ ಹಲ್ಲೆಗೆ ಯತ್ನ ನಡೆದಿದೆ.

    ಕೋಲಾರ ನಗರದ ಪಿಸಿ ಬಡಾವಣೆಯಲ್ಲಿ ಕಳೆದ 2 ದಿನಗಳ ಹಿಂದೆ ಈ ಗಲಾಟೆ ನಡೆದಿದ್ದು, ಪರಸ್ಪರ ದೂರು ಪ್ರತಿ ದೂರು ದಾಖಲಾಗಿದೆ. ಇನ್ನೂ ಇದೆ 22 ರಂದು ಪಿ.ಸಿ ಬಡವಾಣೆಯ ರೋಹಿತ್ ಮನೆಯಲ್ಲಿ ಟಿವಿ ವ್ಯಾಲ್ಯೂಮ್ ಹೆಚ್ಚಾಗಿದ್ದನ್ನು ಪಕ್ಕದ ಮನೆಯ ಮಂಜುಳಾ ಎಂಬವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

    ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್‍ಗೂ ಹಾನಿ ಮಾಡಿರುವ ರೋಹಿತ್ ವೀಡಿಯೋ ಸದ್ಯ ವೈರಲ್ ಆಗಿದೆ. ರೋಹಿತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಲ್ಲೆ ಮಾಡಿದ್ದಾನೆ. ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಹಲ್ಲೆಗೆ ಯತ್ನ ನಡೆಸಿರುವ ವೀಡಿಯೋ ಕೂಡ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

    ಕೋಲಾರ ನಗರ ಠಾಣೆ ಪೊಲೀಸರು ರೋಗಿತ್ ಹಾಗೂ ಪತ್ನಿ ದಿವ್ಯಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಂಜುಳಾ ಹಾಗೂ ತಂದೆ-ತಾಯಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮೈತ್ರಿ ಸರ್ಕಾರದ ಸಂಪುಟಕ್ಕೆ ಪಕ್ಷೇತರ ಶಾಸಕರ ಎಂಟ್ರಿ

    ಮೈತ್ರಿ ಸರ್ಕಾರದ ಸಂಪುಟಕ್ಕೆ ಪಕ್ಷೇತರ ಶಾಸಕರ ಎಂಟ್ರಿ

    ಬೆಂಗಳೂರು: ಹಲವು ಗೊಂದಲಗಳ ನಡುವೆ ಮೈತ್ರಿ ಸಂಪುಟಕ್ಕೆ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಎಂಟ್ರಿ ಪಡೆದಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಇಬ್ಬರು ಶಾಸಕರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಇಂದು ಮತ್ತೊಮ್ಮೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಪದ ಗ್ರಹಣ ಕಾರ್ಯಕ್ರಮದಲ್ಲಿ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಸಚಿವರಾದ ಜಮೀರ್ ಅಹ್ಮದ್, ಡಿ.ಕೆ.ಶಿವಕುಮಾರ್ ಬಂಡೆಪ್ಪ ಕಾಶೆಂಪುರ್ ಮತ್ತು ಎಂ.ಬಿ.ಪಾಟೀಲ್ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ಮಾನ ಕೊಟ್ರೇ ಏನ್ ತಪ್ಪಿದೆ. ಯಾವ ಅಸಮಾಧಾನವೂ ನಮ್ಮೊಳಗಿಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇವೆ. ಪಕ್ಷ ಉಳಿಸಲು ಸ್ಥಿರತೆ ಕಾಪಾಡಲು ಎಲ್ಲರ ಒಮ್ಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಏಕಮುಖ ತೀರ್ಮಾನ ಅಲ್ಲ. ಹೊಸಬರಿಗೆ ಖಾತೆ ಹಂಚಿಕೆ ವಿಚಾರ ದ ಬಗ್ಗೆ ಮುಖಂಡರು ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದಂತೆ ನಾವು ನಡೆಯುತ್ತೇವೆ ಎಂದು ಹೇಳುವ ಶಾಸಕ ಸುಧಾಕರ್ ಹೇಳಿಕೆಗೆ ಟಾಂಗ್ ನೀಡಿದರು.

  • ಎಲ್ಲವೂ ಹಳೆಯದು, ಹೊಸದೇನಿಲ್ಲ, ಹೊರಟು ಹೋಗಿ – ಮಾಧ್ಯಮಗಳ ಮೇಲೆ ಮಾಜಿ ಸಿಎಂ ಗರಂ

    ಎಲ್ಲವೂ ಹಳೆಯದು, ಹೊಸದೇನಿಲ್ಲ, ಹೊರಟು ಹೋಗಿ – ಮಾಧ್ಯಮಗಳ ಮೇಲೆ ಮಾಜಿ ಸಿಎಂ ಗರಂ

    ಬಾಗಲಕೋಟೆ: ಕಾಂಗ್ರೆಸ್ ಜೆಡಿಎಸ್ ಸರ್ಕಾರದಲ್ಲಿನ ಅಸಮಾಧಾನ ಕುರಿತ ಪ್ರಶ್ನೆಯನ್ನು ಕೇಳಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ.

    ಬಾದಾಮಿ ಕ್ಷೇತ್ರದಲ್ಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರಿಗೆ ಮಾಧ್ಯಮದವರು ಪಕ್ಷದಲ್ಲಿನ ಅಸಮಾಧಾನ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ “ನೋ ರಿಯಾಕ್ಷನ್” ಎಂದು ಉತ್ತರಿಸಿ ಕೈ ಮುಗಿದರು.

    ಈ ವೇಳೆ ಪತ್ರಕರ್ತರು ಮತ್ತೊಮ್ಮೆ ಹೈಕಮಾಂಡ್ ದೆಹಲಿಗೆ ಬರುವಂತೆ ಬರಲು ನಿಮಗೆ ಬುಲಾವ್ ಬಂದಿದ್ಯಾ ಎಂದು ಮರು ಪ್ರಶ್ನೆ ಹಾಕಿದಾಗ ಸಿದ್ದರಾಮಯ್ಯ, ಕ್ಷೇತ್ರದಲ್ಲಿ ಇನ್ನು ಎರಡು ದಿನ ಪ್ರವಾಸ ಮಾಡುವುದಾಗಿ ನಾನೇ ಹೇಳುತ್ತಿದ್ದೇನೆ. ಆದರೂ ನೀವು ಪದೇ ಪದೇ ಅದೇ ಪ್ರಶ್ನೆ ಮಾಡುತ್ತೀರಿ. ಎಲ್ಲವೂ ಹಳೆಯದು, ಹೊಸದೇನಿಲ್ಲ ನೀವು ಹೊರಟು ಹೋಗಿ. ನಾನು ದೆಹಲಿಗೂ ಹೋಗಲ್ಲ, ಎಲ್ಲಿಗೂ ಹೋಗಲ್ಲ. ನಾಳೆ, ನಾಡಿದ್ದು ಇಲ್ಲಿಯೇ ಇದ್ದು ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಗರಂ ಆಗಿಯೇ ಉತ್ತರಿಸಿದರು.

    ಕ್ಷೇತ್ರ ಪ್ರವಾಸದ ಮೂರನೇ ದಿನದಂದು ಹಲವು ಗ್ರಾಮಗಳಿಗೆ ಭೇಟಿ ನೀಡಿದ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಸ್ಥಾನ ನೀಡುವುದಾಗಿ ತಿಳಿಸಿದರು. ಈ ವೇಳೆ ಕ್ಷೇತ್ರದ ಜನತೆ ಕುರಿತು ಮಾತನಾಡಿದ ಅವರು, ನಾನು ದೂರ ಊರಿನವನೆಂದು ಯಾರೂ ಭಾವಿಸಿಕೊಳ್ಳಬೇಡಿ, ಬಾದಾಮಿಯಲ್ಲೇ ಮನೆ ಹಾಗೂ ಕಛೇರಿ ಮಾಡುತ್ತೇನೆ. ಯಾರೂ ಸಂಕೋಚ ಪಟ್ಟುಕೊಳ್ಳದೇ, ಓಟ್ ಹಾಕಿದವರು ಹಾಕದೇ ಇರುವವರು ಸಹ ಬರಬಹುದು ಎಂದರು.

    ಪ್ರವಾಸದ ಮಧ್ಯೆಯೇ ವಿಜಯಪುರದ ಹಲವು ಕುರುಬ ಸಮಾಜದ ಮುಖಂಡರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶುಕ್ರವಾರವೂ ಸಹ ಹಲವು ಮುಖಂಡರು ಬಾದಾಮಿಗೆ ಆಗಮಿಸಿ ಸಿದ್ದರಾಮಯ್ಯ ಅವರು ವಾಸ್ತವ್ಯ ಮಾಡಿದ್ದ ಹೋಟೆಲ್ ನಲ್ಲೇ ಚರ್ಚೆ ನಡೆಸಿದ್ದರು. ಇಂದು ಕಾರಿನಲ್ಲಿ ಪ್ರಯಾಣಿಸುವಾಗ ಸಿದ್ದರಾಮಯ್ಯ ಹೆಚ್ಚಾಗಿ ಮೊಬೈಲ್ ಫೋನ್ ಮೂಲಕ ಸಂಭಾಷಣೆಯಲ್ಲೇ ನಿರತರಾಗಿದ್ದರು.