Tag: volombo

  • ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    – ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್

    ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 8 ಮಂದಿ ಕನ್ನಡಿಗರು ದಾರುಣವಾಗಿ ಮೃತಪಟ್ಟಿದ್ದಾರೆ. ಇದೀಗ ಅದರಲ್ಲಿ ಒಟ್ಟು ಐವರ  ಮೃತದೇಹ ಬೆಂಗಳೂರಿಗೆ ರವಾನೆಯಾಗಿದೆ.

    ಯುಎಲ್-173 ಶ್ರೀಲಂಕಾ ಏರ್ ಲೈನ್ಸ್ ವಿಮಾನದಲ್ಲಿ ನಾಲ್ವರ ಮೃತದೇಹ ಶಿಫ್ಟ್ ಮಾಡಲಾಗಿದ್ದು, ತಡರಾತ್ರಿ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನವಾಗಿದೆ. ಇದೇ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಇ.ಕೃಷ್ಣಪ್ಪ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.

    ನೆಲಮಂಗಲ, ಕಾಚನಹಳ್ಳಿ ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಲಕ್ಷ್ಮೀ ನಾರಾಯಣ, ಶಿವಕುಮಾರ್, ದಾಸರಹಳ್ಳಿಯ ರಂಗಪ್ಪ ಈ ನಾಲ್ವರ ಮೃತದೇಹಗಳು ಶ್ರೀಲಂಕಾದಿಂದ ರವಾನೆಯಾಗಿದೆ. ರಂಗಪ್ಪ ಮೃತದೇಹ ದಾಸರಹಳ್ಳಿಯ ಚೊಕ್ಕಸಂದ್ರದ ನಿವಾಸಕ್ಕೆ ರವಾನೆಯಾಗಿದೆ. ಉಳಿದ ಮೂವರ ಮೃತದೇಹಗಳನ್ನು ನೆಲಮಂಗಲದ ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಶಿವಕುಮಾರ್ ಮೃತದೇಹಗಳನ್ನು ನೆಲಮಂಗಲದ ಜ್ಯೂನಿಯರ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುವ ಸಾಧ್ಯತೆ ಇದೆ.

    ಬಿಟಿಎಂ ಲೇಔಟ್‍ನ ನಾಗರಾಜ್ ರೆಡ್ಡಿ ಮೃತದೇಹ ಕೂಡ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ರವಾನೆಯಾಗಿದೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ 11.30ಕ್ಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯ್ತು. ನಾಗರಾಜ್ ರೆಡ್ಡಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ಬಳಿಕ ಅಂತ್ಯ ಸಂಸ್ಕಾರ ನೆರವೇರಲಿದೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ಬರುತ್ತಿದ್ದಂತೆಯೇ ಗೃಹಸಚಿವ ಎಂ.ಬಿ ಪಾಟೀಲ್ ದರ್ಶನ ಪಡೆದ್ರು. ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದ್ರು. ಬಳಿಕ ಮಾತನಾಡಿ, ಘಟನೆಯಿಂದ ತುಂಬಾ ನೋವಾಗಿದೆ. ಇಂತಹ ಕೃತ್ಯಗಳು ನಡೆಯಬಾರದಿತ್ತು. ಆದ್ರೂ ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ನೆಲಮಂಗಲ ಶಾಸಕ ಶ್ರೀನಿವಾಸ್ ಮಾತನಾಡಿ, ಘಟನೆಯಲ್ಲಿ ಮೃತಪಟ್ಟವರೆಲ್ಲರೂ ನಮ್ಮ ಆಪ್ತರೇ ಆಗಿದ್ದು, ತೀರಾ ನೋವಾಗಿದೆ ಅಂದ್ರು. ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ, ಏಳೂ ಮೃತದೇಹಗಳ ರವಾನೆಗೆ ಎಲ್ಲಾ ಪ್ರಕ್ರಿಯೆ ಮುಕ್ತಾಯವಾಗಿದೆ. ಕಳೆಬರಹ ಪತ್ತೆಗೆ ಸ್ವಲ್ಪ ಸಮಯ ಹಿಡೀತು. ಫೋಟೋ ನೋಡಿ ದೇಹ ಗುರುತು ಪತ್ತೆ ಹಚ್ಚಿದೆವು. ದುರಾದೃಷ್ಟವಶಾತ್ ಏಳೂ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್
    ಜೆಡಿಎಸ್ ಮುಖಂಡ, ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿಯ ಮಾರೇಗೌಡ ಹಾಗೂ ನೆಲಮಂಗಲ ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಈ ಮೂವರ ಮೃತದೇಹಗಳು ಇಂದು ಮಧ್ಯಾಹ್ನ ಬೆಂಗಳೂರಿಗೆ ಶಿಫ್ಟ್ ಆಗಲಿದೆ ಎನ್ನಲಾಗಿದೆ.

  • ಕಣ್ಣೆದುರೇ 20-50 ಜನರ ಸಾವು ಕಂಡು ಭಯವಾಯ್ತು: ಕರಾಳ ಅನುಭವ ಹಂಚಿಕೊಂಡ ಉದ್ಯಮಿ

    ಕಣ್ಣೆದುರೇ 20-50 ಜನರ ಸಾವು ಕಂಡು ಭಯವಾಯ್ತು: ಕರಾಳ ಅನುಭವ ಹಂಚಿಕೊಂಡ ಉದ್ಯಮಿ

    ಚಿಕ್ಕಬಳ್ಳಾಪುರ: ನಾವು ತಿಂಡಿ ತಿನ್ನಲೆಂದು ಮೂರು ಜನ ಹೋಗಿದ್ದೆವು. ನಮ್ಮ ಪಕ್ಕದಲ್ಲೆ ಇಂಡೋನೇಷ್ಯಾ ದಂಪತಿ ಇದ್ದರು. ಈ ವೇಳೆ ಬಾಂಬ್ ಬ್ಲಾಸ್ಟ್ ಆಗಿದ್ದು ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗೆ ಕಣ್ಣೆದುರೇ 30-50 ಜನರ ಸಾವು ಕಂಡು ಭಯವಾಯಿತು ಎಂದು ಬೆಂಗಳೂರಿನ ಉದ್ಯಮಿ ಸುರೇಂದ್ರ ಬಾಬು ಹೇಳಿದ್ದಾರೆ.

    ಸರಣಿ ಬಾಂಬ್ ಬ್ಲಾಸ್ಟ್ ಬಳಿಕ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಶಾಂಗ್ರೀಲಾ ಹೋಟೆಲ್‍ನಲ್ಲಿ 8:55 ರ ಸುಮಾರಿಗೆ ದೊಡ್ಡ ಶಬ್ಧ ಆಯ್ತು. ಆ ಶಬ್ಧವನ್ನು ಊಹೆ ಮಾಡೋಕು ಸಾಧ್ಯವಿಲ್ಲ. ನಾವು ತಿಂಡಿ ತಿನ್ನೋಕೆ ಎಂದು ಮೂರು ಜನ ಹೋಗಿದ್ದೆವು. ನಮ್ಮ ಪಕ್ಕದಲ್ಲೆ ಇಂಡೋನೆಷ್ಯಾ ದಂಪತಿ ಇದ್ದರು. ನಮ್ಮ ಕಣ್ಣೆದುರೇ ಸಾವು ನೋಡಿ ಭಯವಾಯ್ತು. ಅಲ್ಲದೆ ಕಣ್ಣೆದುರೇ 30-50 ಜನ ಹೆಣವಾದ್ರು ಎಂದು ಅವರು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು.

    ಹೊಟೆಲ್ ಶಾಂಗ್ರೀಲಾ ಡೈನಿಂಗ್ ಹಾಲ್ ನಲ್ಲಿ ನಮ್ಮ ಅದೃಷ್ಟಕ್ಕೆ ಪಿಲ್ಲರ್ ಅಡ್ಡ ಇದ್ದ ಕಾರಣ ನಾವು ಬದುಕಿ ಉಳಿದೆವು. ಸಾಕಷ್ಟು ಜನ ನಮ್ಮ ಕಣ್ಣೆದುರೇ ನರಳಿ ನರಳಿ ಜೀವಬಿಟ್ಟರು. ನನ್ನ ಮೊಬೈಲ್ ಕೂಡ ಅಲ್ಲೇ ಹಾಳಾಯ್ತು. ದೇವರ ದಯೆ ನಮ್ಮ ಜೀವ ಉಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

    ಇದೇ ವೇಳೆ ಬಸವನಗುಡಿ ಮೂಲದ ವೈದ್ಯ ಗುಪ್ತಾ ಮಾತನಾಡಿ, ನಾವಿದ್ದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಘಟನೆ ನಂತರ ಶ್ರೀಲಂಕಾದಲ್ಲಿ ಕರ್ಫ್ಯೂ  ಜಾರಿ ಅಗಿತ್ತು. ಏರ್ ಪೋರ್ಟ್ ನಲ್ಲೂ ಸಹ ಭಾರೀ ಬಂದೋಬಸ್ತ್ ಹಾಗೂ ಚೆಕ್ಕಿಂಗ್ ಕೂಡ ಮಾಡಿದ್ರು. ಕೊನೆಗೆ ಸೇಫ್ ಅಗಿ ಬೆಂಗಳೂರಿಗೆ ಬಂದಿಳಿದವು ಎಂದು ಘಟನೆ ಬಗ್ಗೆ ಹಂಚಿಕೊಂಡರು.

    ಸುರೇಂದ್ರಬಾಬು ಹಾಗೂ ಅವರ ಐವರು ಸ್ನೇಹಿತರು ಬೆಂಗಳೂರಿನಲ್ಲಿ ರಿಯಲ್‍ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಇವರು ಮೂಲತ ಆಂಧ್ರದ ಅನಂತಪುರ ಜಿಲ್ಲೆಯವರಾಗಿದ್ದು, ಸದ್ಯ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಕಳೆದ ಐದು ದಿನಗಳ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಇದನ್ನೂ ಓದಿ: ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

    https://www.youtube.com/watch?v=dtZ6oo788Zg