Tag: Volodymyr Zelenskyy

  • ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ತಾವಿರುವ ಸ್ಥಳದ ವಿಳಾಸವನ್ನು ಹಂಚಿಕೊಂಡು ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ ಎಂದು ರಷ್ಯಾಗೆ ತಿರುಗೇಟು ನೀಡಿದ್ದಾರೆ.

    ನಾನು ಬ್ಯಾಂಕೋವಾನಲ್ಲಿರುವ ಕೀವ್‍ನಲ್ಲಿದ್ದು, ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ. ಎನೇ ಆಗಲಿ ನಮ್ಮ ಈ ದೇಶಭಕ್ತಿಯ ಯುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದಾಗಿನಿಂದ, ಉಕ್ರೇನಿಯನ್ ನಾಯಕ ರಷ್ಯಾದ ಹಂತಕರ ಮೂರು ಪ್ರಯತ್ನಗಳಿಂದ ಬದುಕುಳಿದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

    ವೀಡಿಯೋದಲ್ಲಿ ಉಕ್ರೇನಿಯನ್ ಧ್ವಜದಿಂದ ಸುತ್ತುವರೆದಿರುವ ತಮ್ಮ ಮೇಜಿನ ಬಳಿ ಕುಳಿತುಕೊಂಡು ಮಾತನಾಡಿದ ಅವರು, ಇಂದು ರಷ್ಯಾದ ವಿರುದ್ಧದ ನಮ್ಮ ಹೋರಾಟ ನಡೆಯುತ್ತಿರುವುದು ಹನ್ನೆರಡನೇ ದಿನವಾಗಿದೆ. ನಾವೆಲ್ಲರೂ ಈಗ ಯುದ್ಧ ಭೂಮಿಯಲ್ಲಿ ಇದ್ದೇವೆ. ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾನು ರಾಜಧಾನಿ ಕೀವ್‍ನಲ್ಲಿದ್ದು, ನನ್ನ ತಂಡವು ನನ್ನೊಂದಿಗಿದೆ ಎಂದು ಹೇಳಿದರು.

    ರಷ್ಯಾ ವಿರುದ್ಧದ ಯುದ್ಧದ ಸಮಯದಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳ ಸೇವೆಗಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಉಕ್ರೇನ್ ವಿಜಯಶಾಲಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ.

    ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.

  • ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ಕೀವ್: ಉಕ್ರೇನ್ ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ತನ್ನ ದೇಶದಿಂದ ಓಡಿ ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ರಷ್ಯಾದ ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ಝೆಲೆನ್ಸ್ಕಿಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು.

    ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿವಾಸ ಮರಿನ್ಸ್ಕಿ ಪ್ಯಾಲೆಸ್ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇದೀಗ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಝೆಲೆನ್ಸ್ಕಿ ಎಲ್ಲಿದ್ದಾರೆ ಎಂಬುದು.

    ಝೆಲೆನ್ಸ್ಕಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವಿಷಯವನ್ನು ರಷ್ಯಾ ಹೇಳುತ್ತಿದ್ದಂತೆ ಇದನ್ನು ಝೆಲೆನ್ಸ್ಕಿ ಸುಳ್ಳು ಎಂದು ಸಾಬೀತು ಮಾಡಿದ್ದರು. ತಮ್ಮ ನಿವಾಸದ ಮುಂಭಾಗದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾ ಹಾಗೂ ತಾವು ದೇಶವನ್ನು ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಯುದ್ಧ ಪ್ರಾರಂಭವಾಗುತ್ತಿದ್ದಂತೆ ಅಮೆರಿಕ ಉಕ್ರೇನ್ ಅಧ್ಯಕ್ಷನನ್ನು ಸ್ಥಳಾಂತರಿಸಲು ಮುಂದಾಗಿತ್ತು. ಆದರೆ ಅದನ್ನು ಝೆಲೆನ್ಸ್ಕಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ಅಧ್ಯಕ್ಷ ಕೀವ್ ತೊರೆದು ಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ವದಂತಿಯನ್ನು ಉಕ್ರೇನ್ ಸುಳ್ಳು ಎಂದಿದೆ.

    ಝೆಲೆನ್ಸ್ಕಿ ದೇಶವನ್ನು ತೊರೆಯುವ ವರದಿಗಳ ಮಧ್ಯೆ ಉಕ್ರೇನ್‌ನ ಮಾಜಿ ಪ್ರಧಾನಿ ಅಜರೋವ್, ಅಧ್ಯಕ್ಷ ಝೆಲೆನ್ಸ್ಕಿ ಕೀವ್‌ನ ಹೃದಯಭಾಗದಲ್ಲಿರುವ ಬಂಕರ್‌ನಲ್ಲಿರಬಹುದು ಎಂದಿದ್ದಾರೆ. ಏಕೆಂದರೆ ಈ ಬಂಕರ್ ಅಣ್ವಸ್ತ್ರ ದಾಳಿಗೂ ಹಾಳಾಗುವುದಿಲ್ಲ. ಕೀವ್‌ನಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಂಕರ್‌ನಲ್ಲೇ ಅಡಗಿ ಕೂತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಝೆಲೆನ್ಸ್ಕಿ ಶುಕ್ರವಾರ ರಾತ್ರಿ ತನ್ನ ಮೇಲೆ ರಷ್ಯಾ ಮಾರಣಾಂತಿಕ ದಾಳಿ ನಡೆಸಲು ಪ್ರಯತ್ನ ಪಟ್ಟಿದೆ ಎಂದಿದ್ದಾರೆ. ತಮ್ಮ ನಿವಾಸ ಮರಿನ್ಸ್ಕಿ ಅರಮನೆ ಮೇಲೆ ದಾಳಿ ಮಾಡಿರುವ ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದರು. ರಷ್ಯಾ ತನ್ನ ಮೇಲೆ ಮಾಡಿರುವ ದಾಳಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದರು.

    ಝೆಲೆನ್ಸ್ಕಿ ಶನಿವಾರ ಯುಎಸ್ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಸೆನೆಟ್‌ಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಕೀವ್: ಉಕ್ರೇನ್‍ನ ಕೀವ್‍ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ ಎಂದು ಕೇಂದ್ರ ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ.

    ಕೀವ್‍ನಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೂಡಲೆ ಆತನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಗಾಯಾಗೊಂಡಿರುವ ವಿದ್ಯಾರ್ಥಿ ಯಾರು? ಎನ್ನುವ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಪ್ರತಿಯೊಬ್ಬರೂ ಕೀವ್ ತೊರೆಯಬೇಕು ಎಂಬ ಆದ್ಯತೆಯ ಮೇಲೆ ಭಾರತೀಯ ರಾಯಭಾರ ಕಚೇರಿ ಈ ಹಿಂದೆಯೇ ತೆರವುಗೊಳಿಸಿತ್ತು. ಕೆಲವು ದಿನಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಸದಾವನ್ನಪ್ಪಿದ್ದಾರೆ. ಇದೀಗ ಒಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ನಾಗರಿಕ ವಿಮಾನಯಾನ ಸಚಿವಾಲಯದ (ಮೊಸಿಎ) ರಾಜ್ಯ ಸಚಿವ (ಎಂಒಎಸ್) ಜನರಲ್ ವಿ.ಕೆ ಸಿಂಗ್ ಪೋಲೆಂಡ್‍ನ ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿದರು. ಯುದ್ಧದ ಸಂದರ್ಭದಲ್ಲಿ, ಗನ್‍ನಲ್ಲಿರುವ ಬುಲೆಟ್ ಎದುರಿರುವ ಯಾರು, ಧರ್ಮ, ರಾಷ್ಟ್ರೀಯತೆಯನ್ನು ನೋಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ

  • ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಕೀವ್: ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿದೆ. ಸಂಧಾನದ ಮಾತುಕತೆಯ ನಿರೀಕ್ಷೆಗಳು ಸಫಲವಾಗುವಂತೆ ತೋರುತ್ತಿಲ್ಲ.  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್ ಜೊತೆಗಿನ ಸಂಧಾನದ ಮಾತುಕತೆ ಕುರಿತಾಗಿ ವ್ಯಂಗ್ಯವಾಡಿದ್ದಾರೆ.

    ವಿದೇಶಿ ನಾಯಕರು ಮತ್ತು ರಷ್ಯಾದ ಅಧಿಕಾರಿಗಳೊಂದಿಗಿನ ಇತ್ತೀಚಿನ ಸಭೆಗಳಿಗೆ ಪುಟಿನ್ ಬಳಸಿದ ಉದ್ದನೆಯ ಮೇಜಿನ ಬಗ್ಗೆ ಉಕ್ರೇನ್ ಅಧ್ಯಕ್ಷರು ವ್ಯಂಗ್ಯ ಮಾಡಿದ್ದಾರೆ. ಪುಟಿನ್ ನಿಮಗೆ ನಾಯಕರೊಂದಿಗೆ ಹತ್ತಿರ ಕುಳಿತು ಮಾತನಾಡಲು ಭಯವೇ..? ಸಂಧಾನ ಮಾಡಲು ನನ್ನೊಂದಿಗೆ ಕುಳಿತುಕೊಳ್ಳಿ, ಆದರೆ 30 ಮೀಟರ್ ಅಂತರದಲ್ಲಿ ಅಲ್ಲ.. ನಾನೇನು ಕಚ್ಚುವುದಿಲ್ಲ. ಮತ್ತೇಕೆ ನಿಮಗೆ ಭಯ? ಬುಲೆಟ್ ಗಿಂತ ಮಾತು ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

    ಉಕ್ರೇನ್‍ಗೆ ಯುದ್ಧವಿಮಾನಗಳನ್ನು ಒದಗಿಸಬೇಕು. ರಷ್ಯಾ ವಿರುದ್ಧ ಹೋರಾಡಲು ನಮಗೆ ಸಾಕಷ್ಟು ಮಿಲಿಟರಿ ನೆರವು ಬೇಕು ಎಂದು ಪಾಶ್ಚಿಮಾತ್ಯ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

    ರಷ್ಯಾ ಮತ್ತು ಉಕ್ರೇನಿಯನ್ ಮಾತುಕತೆಗಳ ನಡುವಿನ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಯ ನಿರೀಕ್ಷೆಗಳು ಭರವಸೆಯಂತೆ ತೋರುತ್ತಿಲ್ಲ. ಯಾವುದೇ ಪದಗಳು ಗುಂಡುಗಳಿಗಿಂತ ಹೆಚ್ಚು ಮುಖ್ಯ. ಉಕ್ರೇನ್‍ಗೆ ಬೆಂಬಲ ನೀಡಲು ಜಗತ್ತು ತುಂಬಾ ನಿಧಾನವಾಗಿದೆ ಎಂದು ಅವರು ಹೇಳಿದರು.

  • ಖಾರ್ಕಿವ್ ಶೆಲ್ ದಾಳಿ ಯುದ್ಧಾಪರಾಧ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಮಂಗಳವಾರ ನಡೆದ ರಷ್ಯಾದ ಶೆಲ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಈ ದಾಳಿಯನ್ನು ಯುದ್ಧಾಪರಾಧ ಎಂದು ಕರೆದಿದ್ದಾರೆ.

    ಖಾರ್ಕಿವ್‍ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಯನ್ನು ಯುದ್ಧಾಪರಾಧ ಎಂದು ವಿರೋಧಿಸಿದ ಝೆಲೆನ್ಸ್ಕಿ ಉಕ್ರೇನ್‍ನ ರಾಜಧಾನಿ ಕೀವ್ ಅನ್ನು ರಕ್ಷಿಸುವುದು ರಷ್ಯಾ ಪಡೆಯ ಪ್ರಮುಖ ಆದ್ಯತೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

    ಖಾರ್ಕಿವ್ ಮೇಲಿನ ದಾಳಿ ಯುದ್ಧಾಪರಾಧ. ಖಾರ್ಕಿವ್ ಹಾಗೂ ಕೀವ್, ರಷ್ಯಾದ ಮುಖ್ಯ ಗುರಿಯಾಗಿದೆ. ಇದೀಗ ಖಾರ್ಕಿವ್‍ನಲ್ಲಿ ಘಟಿಸಿರುವ ದುರಂತದಂತೆ ರಾಜಧಾನಿಯಲ್ಲೂ ದಾಳಿ ನಡೆಸುವುದು ರಷ್ಯಾದ ಗುರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಮಂಗಳವಾರ ಖಾರ್ಕಿವ್‍ನಲ್ಲಿರುವ ಸರ್ಕಾರಿ ಪ್ರಧಾನ ಕಛೇರಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಭಾರೀ ಹಾನಿಯನ್ನು ಮಾಡಿದೆ. ಶೆಲ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸೇರಿದಂತೆ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    2ನೇ ಮಹಾಯುದ್ಧದ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‍ನ ಖಾರ್ಕಿವ್ ಹಾಗೂ ಕೀವ್ ನಗರಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿ 1 ವಾರದಿಂದ ದೇಶಾದ್ಯಂತ ದಾಳಿ ನಡೆಸುತ್ತಿದೆ.

  • ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಉಕ್ರೇನ್

    ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಉಕ್ರೇನ್

    ಕೀವ್: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.

    ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಸೇರ್ಪಡೆ ಸಹಿ ಹಾಕಿದ್ದಾರೆ ಎಂದು ಉಕ್ರೇನ್‍ನ ಪಾರ್ಲಿಮೆಂಟ್‍ನಲ್ಲಿ ಘೋಷಣೆ ಮಾಡಲಾಯಿತು. ಈ ಮೂಲಕ ರಷ್ಯಾ ತೀವ್ರ ವಿರೋಧದ ನಡುವೆ ಯುರೋಪಿಯನ್ ಒಕ್ಕೂಟಕ್ಕೆ ಸೇರುವ ನಿರ್ಧಾರವನ್ನು ಝೆಲೆನ್ಸ್ಕಿ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?

    ಉಕ್ರೇನ್‍ಗೆ ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿ ಯುದ್ಧ ಸಾರಿತ್ತು. ಇದೀಗ ರಷ್ಯಾ, ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್‍ಗೆ ಸದಸ್ಯತ್ವಕ್ಕೆ ಅರ್ಜಿ ಹಾಕಿರುವುದು ರಷ್ಯಾವನ್ನು ಇನ್ನಷ್ಟು ಕೆರಳಿಸಿದೆ. ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರಬಾರದರು ಎಂದು ರಷ್ಯಾ ಪಟ್ಟು ಹಿಡಿದಿತ್ತು. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

  • ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

    ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

    ಕೀವ್: ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.

    400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ ಹಿಂದೆ ಆಫ್ರಿಕಾದಿಂದ ಸೈನಿಕರಿಗೆ ಆರ್ಥಿಕ ಸಹಾಯ ಮಾಡಿ ಅದಕ್ಕೆ ಪ್ರತಿಫಲವಾಗಿ ಝೆಲೆನ್ಸ್ಕಿಯ ಶಿರಚ್ಛೇದ ಮಾಡಲು ಆದೇಶಿಸಿತ್ತು.

    ವ್ಯಾಗ್ನರ್ ಗ್ರೂಪ್‍ನ ಚಟುವಟಿಕೆಗಳ ಜ್ಞಾನವಿರುವ ಮೂಲವೊಂದು 2,000 ಮತ್ತು 4,000 ಕೂಲಿ ಸೈನಿಕರು ಜನವರಿಯಲ್ಲಿ ಉಕ್ರೇನ್‍ಗೆ ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದು, ಕೆಲವರನ್ನು ದೇಶದ ಪೂರ್ವದಲ್ಲಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‍ನ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಯಿತು. ಆದರೆ 400 ಸೈನಿಕರು ಝೆಲೆನ್‍ಸ್ಕಿಯನ್ನು ಹತ್ಯೆಗೈಯಲು ಬೆಲಾರಸ್‍ನಿಂದ ಕೈವ್‍ಗೆ ತೆರಳಿದ್ದರು.

    ಈ ಗುಂಪು ಉಕ್ರೇನ್‍ನ ಅಧ್ಯಕ್ಷ ಹಾಗೂ ಅವರ ಸಹೋದ್ಯೋಗಿಗಳು ಇರುವ ಸ್ಥಳವನ್ನು ತಮ್ಮ ಫೋನ್‍ಗಳ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಅವರು ಯಾವ ಸಮಯದಲ್ಲಿ ಎಲ್ಲಿ ಇರುತ್ತಾರೆ ಎಂಬ ವಿವರಗಳನ್ನೆಲ್ಲಾ ತಿಳಿದುಕೊಳ್ಳುತ್ತಿತ್ತು. ಇದನ್ನೂ ಓದಿ: ಉಕ್ರೇನ್‍ಗಡಿಗೆ ತಲುಪಿದ್ದರು ಭಾರತಕ್ಕೆ ಬರಲಾಗದೆ ಪರದಾಡುತ್ತಿರುವ ರಾಯಚೂರು ವಿದ್ಯಾರ್ಥಿಗಳು

    ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತನಾಡಿ, ರಷ್ಯಾದ ಟಾರ್ಗೆಟ್ ನಂಬರ್ ಒನ್ ನಾನಾಗಿದ್ದೇನೆ. ರಷ್ಯಾದ ವಿಶೇಷ ಪಡೆಗಳು ಹತ್ಯೆ ಮಾಡಲು ಸಂಚು ಮಾಡುತ್ತೀವೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

  • ಉಕ್ರೇನ್‍ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ

    ಉಕ್ರೇನ್‍ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ

    ಟೋಕಿಯೋ: 5ನೇ ದಿನವೂ ಸತತವಾಗಿ ರಷ್ಯಾ ಸೈನಿಕರು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರವ ಉಕ್ರೇನ್‍ಗೆ (ukraine)  ಜಪಾನ್ ಉದ್ಯಮಿ 65 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ.

    ಹಿಂಸಾಚಾರಕ್ಕೆ ಬಲಿಯಾದ ಉಕ್ರೇನ್ ಜನರಿಗೆ ಸಹಾಯ ಮಾಡಲು  1 ಬಿಲಿಯನ್ (8.7 ಮಿಲಿಯನ್ ಅಮೇರಿಕನ್ ಡಾಲರ್) ಹಣವನ್ನು ದೇಣಿಗೆ ನೀಡಿ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ (Volodymyr Zelenskyy) ಅವರಿಗೆ ಉದ್ಯಮಿ ಹಿರೋಚಿ ಮಿಕಿತಾನಿ  (hiroshi  Mikitani) ಅವರು ಪತ್ರ ಬರೆದಿದ್ದಾರೆ. ಮಿಕಿತಾನಿ ಅವರು 2019ರಲ್ಲಿ ಕೈವ್‍ಗೆ ಭೇಟಿ ನೀಡಿದಾ ಝೆಲೆನ್ಸ್ಕಿಯನ್ನು ಭೇಟಿಯಾಗಿದ್ದರು. ನನ್ನ ಆಲೋಚನೆಗಳು ನಿಮ್ಮೊಂದಿಗೆ ಮತ್ತು ಉಕ್ರೇನ್ ಜನರೊಂದಿಗೆ ಇವೆ ಎಂದು ಮಿಕಿತಾನಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?: ನನ್ನೆಲ್ಲಾ ಪ್ರಾರ್ಥನೆಗಳು ಉಕ್ರೇನ್ ದೇಶದ ಜನರ ಕುರಿತಾಗಿ ಇರಲಿದೆ. ಶಾಂತಿಯುತ ದೇಶ ಹಾಗೂ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಉಕ್ರೇನ್‍ನ್ನು ನ್ಯಾಯಸಮ್ಮತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಎದುರಾದ ದೊಡ್ಡ ಸವಾಲೆಂದು ನಾನು ನಂಬುತ್ತೇನೆ. ರಷ್ಯಾ ಮತ್ತು ಉಕ್ರೇನ್ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಸಿಕೊಳ್ಳಬಹುದು. ಉಕ್ರೇನ್ ಜನರು ಆದಷ್ಟು ಬೇಗ ಮತ್ತೆ ಶಾಂತಿಯ ನಿರಾಳತೆಯನ್ನು ಹೊಂದಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಮಿಕಿತಾನಿ ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಉಕ್ರೇನ್‍ನ ಮೇಲೆ ರಷ್ಯಾ ದೇಶ ಮಾಡಿರುವ ಆಕ್ರಮಣವನ್ನು ವಿಶ್ವದ ಪ್ರಮುಖ ದೇಶಗಳು ಖಂಡಿಸಿವೆ. ಇದರ ಬೆನ್ನಲ್ಲಿಯೇ ರಷ್ಯಾವನ್ನು ವಿಶ್ವದಲ್ಲಿ ಏಕಾಂಗಿಯಾಗಿರುವ ಪ್ರಕ್ರಿಯೆಗಳೂ ನಡೆದಿದ್ದು, ಎಲ್ಲಾ ರೀತಿಯ ಆರ್ಥಿಕ ದಿಗ್ಭಂದನಗಳನ್ನು ರಷ್ಯಾದ ಮೇಲೆ ಹೇರಿದೆ.