Tag: Volodymyr Zelenskyy

  • ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಕೀವ್: ಉಕ್ರೇನ್‌ನ ಬುಚಾ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಕ್ಷಮಿಸಲಾಗದವು. ಆದರೂ ಉಕ್ರೇನ್ ಮತ್ತು ರಷ್ಯಾ ಮಾತುಕತೆ ಮುಂದುವರಿಸುವಂತಹ ಕಠಿಣ ಆಯ್ಕೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

    ಉಕ್ರೇನ್ ಅಧ್ಯಕ್ಷ ಮಂಗಳವಾರ ಯುದ್ಧವನ್ನು ಕೊನೆಗೊಳಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸುವುದನ್ನು ಬಿಟ್ಟು ಉಕ್ರೇನ್‌ಗೆ ಬೇರೆ ಯಾವುದೇ ದಾರಿಯಿಲ್ಲ. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ಮಾತುಕತೆ ನಡೆಸಲು ಒಪ್ಪುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು- ಅಧಿಕಾರ ವಹಿಸಿಕೊಂಡ ಒಂದೇ ದಿನಕ್ಕೆ ಹಣಕಾಸು ಸಚಿವ ರಾಜೀನಾಮೆ

    ಉಕ್ರೇನ್‌ನ ಬುಚಾ ನಗರದಲ್ಲಿ ಇದೀಗ ರಷ್ಯಾವನ್ನು ಕ್ಷಮಿಸಲಾರದಂತಹ ಹತ್ಯಾಕಾಂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು

    ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ನಗರಗಳಲ್ಲಿ ಇತ್ತೀಚೆಗೆ ನೂರಾರು ಶವಗಳು ಬೀದಿ ಬೀದಿಗಳಲ್ಲಿ ಕಂಡುಬಂದಿದ್ದು ಈ ಮೂಲಕ ರಷ್ಯಾ ಸೈನಿಕರ ಕ್ರೂರತೆ ಬಯಲಾಗಿದೆ. ಜನರ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

  • ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿಗೆ ಪ್ರಯತ್ನ – ವಿಫಲವಾದ ರಷ್ಯಾ

    ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿಗೆ ಪ್ರಯತ್ನ – ವಿಫಲವಾದ ರಷ್ಯಾ

    ಕೀವ್: ರಷ್ಯಾ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಪ್ರಯತ್ನಪಟ್ಟಿದ್ದು, ಈ ಬಾರಿಯೂ ಝೆಲೆನ್ಸ್ಕಿ ಪಾರಾಗಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ.

    ರಷ್ಯಾದ ವಿಶೇಷ ಪಡೆಯ ನೇತೃತ್ವದ 25 ಸೈನಿಕರ ಗುಂಪನ್ನು ಉಕ್ರೇನ್ ಅಧಿಕಾರಿಗಳು ಸ್ಲೋವಾಕಿಯಾ-ಹಂಗೇರಿ ಗಡಿಯ ಬಳಿ ವಶಪಡಿಸಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷನ ಮೇಲೆ ದಾಳಿ ನಡೆಸುವುದೇ ಈ ಗುಂಪಿನ ಗುರಿಯಾಗಿತ್ತು ಎಂದು ಕೀವ್ ಪೋಸ್ಟ್ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಗುಂಡಿನ ದಾಳಿ – 19 ಜನರ ಸಾವು

    ಕಳೆದ ಬಾರಿ ರಷ್ಯಾ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ನಿವಾಸದ ಬಳಿಯಲ್ಲಿ ಬಾಂಬುಗಳ ದಾಳಿ ನಡೆಸಿತ್ತು. ಆ ಸಂದರ್ಭ ಝೆಲೆನ್ಸ್ಕಿ ಪ್ರಾಣಾಪಾಯದಿಂದ ಪಾರಾಗಿದ್ದು, ರಷ್ಯಾ ತನ್ನನ್ನು ಸೆರೆಹಿಡಿಯುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯ ಮಾಡಿದ್ದರು. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

     

  • ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

    ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

    ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರ ಜೊತೆ ನಡೆಸಿದ ಸಂದರ್ಶನವನ್ನು ಪ್ರಕಟಿಸದಂತೆ ರಷ್ಯಾ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.

    ರಷ್ಯಾ ಹೇಳಿದ್ದೇನು?: ಉಕ್ರೇನ್ ನಾಯಕನ ಸಂದರ್ಶನ ನಡೆಸಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ರಷ್ಯಾದ ಸಂವಹನ ಕಾವಲುಪಡೆ ತಿಳಿಸಿದೆ. ರಷ್ಯಾದ ಹಲವು ಸಂಸ್ಥೆಗಳು ಝೆಲೆನ್‍ಸ್ಕಿ ಸಂದರ್ಶನ ನಡೆಸಿವೆ. ಈ ಸಂದರ್ಶನಗಳು ಪ್ರಕಟವಾಗದಂತೆ ತಡೆಯುವ ಅಗತ್ಯವಿದೆ ಎಂದು ಕಾವಲುಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

    ಫೆಬ್ರವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‍ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ಕಂಡರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯವೇ?: ಉಕ್ರೇನ್ ಅಧ್ಯಕ್ಷ

    ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕರ್‌ಗಳು ಉಕ್ರೇನ್‍ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ. ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ ಉಕ್ರೇನ್‍ಗೆ ಯುದ್ಧ ಟ್ಯಾಂಕರ್‌ಗಳು , ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಮನವಿ ಮಾಡಿದ್ದರು.

  • ರಷ್ಯಾ ಕಂಡರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯವೇ?: ಉಕ್ರೇನ್ ಅಧ್ಯಕ್ಷ

    ರಷ್ಯಾ ಕಂಡರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯವೇ?: ಉಕ್ರೇನ್ ಅಧ್ಯಕ್ಷ

    ಕೀವ್: ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಮನವಿ ಮಾಡಿ, ರಷ್ಯಾ ಬಗ್ಗೆ ಭಯವಿದೆಯೇ ಎಂದೂ ಪ್ರಶ್ನಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೊ ಸಂದೇಶದಲ್ಲಿ ಏನಿದೆ?: ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ ಉಕ್ರೇನ್‍ಗೆ ಯುದ್ಧ ಟ್ಯಾಂಕರ್‌ಗಳು, ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ. ನಮ್ಮ ಪಾಲುದಾರ ರಾಷ್ಟ್ರಗಳು ಯಾವೆಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿವೆಯೋ, ಯಾವೆಲ್ಲ ಶಸ್ತ್ರಾಸ್ತ್ರಗಳು ಧೂಳು ಹಿಡಿಯುತ್ತಿವೆಯೋ ಅವು ಉಕ್ರೆನ್‍ಗಾಗಿ ಮಾತ್ರವಲ್ಲ, ಇಡೀ ಯುರೋಪಿನ ಸ್ವಾತಂತ್ರ್ಯಕ್ಕಾಗಿ ಅಗತ್ಯವಾಗಿದೆ ಎಂದಿದ್ದಾರೆ.

    ಶಸ್ತ್ರಾಸ್ತ್ರ ನೀಡುವಂತೆ ಮನವಿ: ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕ್‍ಗಳು ಉಕ್ರೇನ್‍ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ. ನಾವು ಈಗಾಗಲೇ 31 ದಿನಗಳಿಂದ ಕಾಯುತ್ತಿದ್ದೇವೆ. ಯೂರೋ ಅಟ್ಲಾಂಟಿಕ್ ಸಮುದಾಯದ ಉಸ್ತುವಾರಿ ಯಾರು? ಇತರರಿಗೆ ಬೆದರಿಕೆಯೊಡ್ಡುತ್ತಾ ಈಗಲೂ ರಷ್ಯಾವೇ ಉಸ್ತುವಾರಿಯಾಗಿ ಮುಂದುವರಿದಿದೆಯೇ?. ಪೂರ್ವ ಯುರೋಪ್‍ನಲ್ಲಿರುವ ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಇನ್ನೂ ಉಕ್ರೇನ್‍ಗೆ ರವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಫೆಬ್ರವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‍ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

  • ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಕೀವ್: ಮಾಸ್ಕೋದಲ್ಲಿ ಉಕ್ರೇನ್ ಪ್ರಶ್ನೆಗೆ ಅಂತಿಮ ಪರಿಹಾರದ ಯೋಜನೆಗಳು ನಡೆಯುತ್ತಿವೆ. ಇದು 2ನೇ ಮಹಾಯುದ್ಧದ ಸಮಯದಲ್ಲಿ ಯಹೂದಿಗಳ ನರಮೇಧದ ನಾಜಿ ಯೋಜನೆಯನ್ನು ಉಲ್ಲೇಖಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

    ರಷ್ಯಾದ ಆಕ್ರಮಣದ ಕುರಿತು ಇಸ್ರೇಲ್‍ನ ಸಂಸತ್ತಿನಲ್ಲಿ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಜನರು, ರಾಜ್ಯ, ಸಂಸ್ಕೃತಿ ಸಂಪೂರ್ಣ ವಿನಾಶವಾಗಿದೆ. ಇದರಿಂದಾಗಿ 2ನೇ ಮಹಾಯುದ್ಧಕ್ಕೆ ಉಕ್ರೇನ್‍ನ ದಾಳಿಯನ್ನು ಹೋಲಿಸುವ ಸಂಪೂರ್ಣ ಹಕ್ಕು ನನಗಿದೆ ಎಂದರು.

    ಉಕ್ರೇನ್‍ನ ಜನರ ಪ್ರಸ್ತುತ ಪರಿಸ್ಥಿತಿಯನ್ನು 2ನೇ ಮಹಾಯುದ್ಧದಲ್ಲಿ ಯಹೂದಿಗಳ ನರಮೇಧ ಆದಂತೆ ಆಗಿದೆ ಎಂದ ಅವರು, ನಮ್ಮ ಹಾಗೂ ನಿಮ್ಮ ಬೆದರಿಕೆ ಒಂದೇ ಆಗಿದೆ. ಇದರಿಂದಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎನ್ನುವ ಸಮಯ ಬಂದಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    80 ವರ್ಷಗಳ ಹಿಂದೆ ಯಹೂದಿಗಳನ್ನು ಉಳಿಸಲು ಉಕ್ರೇನ್ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದ ನೀತಿವಂತ ಜನರು ಈಗ ಉಕ್ರೇನ್‍ನೊಂದಿಗೆ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ

    ಅಂತಾರಾಷ್ಟ್ರೀಯ ನಾಯಕರನ್ನು ಆಕರ್ಷಿಸಲು ಝೆಲೆನ್ಸ್ಕಿ ಐತಿಹಾಸಿಕ ದುರಂತಗಳನ್ನು ಆಹ್ವಾನಿಸಿದ್ದು ಇದೇ ಮೊದಲಲ್ಲ. ಅವರು ಪರ್ಲ್ ಹಾರ್ಬರ್ ಮತ್ತು ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ಸ್ಮರಿಸಿ ಇತರೆ ದೇಶಗಳಿಗೂ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರು.

  • ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ಕೀವ್: ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣಾ ಮಂಡಳಿ ರಷ್ಯಾದ ಪರವಾಗಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದೆ. ಇದೀಗ ಉಕ್ರೇನ್‌ನಲ್ಲಿ ಸಮರ ಕಾನೂನು ಜಾರಿಗೊಳಿಸಲಾಗಿದೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾದೊಂದಿಗೆ ಸಂಬಂಧ ಹೊಂದಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ್ದಾರೆ. 4.41 ಕೋಟಿ ಜನಸಂಖ್ಯೆ ಇರುವ ಉಕ್ರೇನ್‌ನಲ್ಲಿ 450 ಸಂಸತ್ ಸ್ಥಾನಗಳಲ್ಲಿ 44 ಸ್ಥಾನಗಳನ್ನು ರಷ್ಯಾಗೆ ಬೆಂಬಲ ನೀಡುತ್ತಿದ್ದ ರಾಜಕೀಯ ಪಕ್ಷದವರೇ ಪಡೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ 

    ಭಾನುವಾರ ವೀಡಿಯೋ ಸಂದೇಶವನ್ನು ಕಳುಹಿಸಿದ ಉಕ್ರೇನ್ ಅಧ್ಯಕ್ಷ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಮಟ್ಟದ ಯುದ್ಧವನ್ನೇ ನಡೆಸಿದೆ. ಈ ಯುದ್ಧಕ್ಕೆ ನಮ್ಮ ದೇಶದ ಒಳಗಡೆಯೇ ಕೆಲವು ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಿರುವುದು ಗಮನಕ್ಕೆ ಬಂದಿದೆ. ರಷ್ಯಾದೊಂದಿಗೆ ಸಂಬಂಧವನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಸಮರ ಕಾನೂನಿನ ಅವಧಿಗೆ ಅಮಾನತುಗೊಳಿಸಲಾಗುವುದು ಎಂದಿದ್ದಾರೆ.ಇದನ್ನೂ ಓದಿ: 98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

     

  • ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಕೀವ್: ಉಕ್ರೇನ್‍ನಲ್ಲಿ ಯುದ್ಧ ನಿಲ್ಲದಿದ್ದರೇ ಎಲ್ಲವೂ ಯುರೋಪ್‍ನ ವಿರುದ್ಧ ಹೋಗುತ್ತದೆ. ಆದ್ದರಿಂದ ಉಕ್ರೇನ್‍ಗೆ ಸಹಾಯ ಮಾಡುವುದರ ಮೂಲಕ ನಿಮಗೆ ಸಹಾಯ ಮಾಡಿಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದರು.

    ಯೂರೋಪ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕೋ ಪಡೆಗಳು ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಷ್ಯಾದ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಹೆಚ್ಚಿನ ಶಸ್ತ್ರಸ್ತ್ರಗಳ ಅಗತ್ಯವಿದೆ ಎಂದು ಮನವಿ ಮಾಡಿದರು.

    ಪಾಶ್ಚಿಮಾತ್ಯ ರಾಷ್ಟ್ರಗಳು ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರೆ ಆಧುನಿಕ ತಂತ್ರಾಂಶಗಳನ್ನು ಉಕ್ರೇನ್‍ನ ಮಿಲಿಟರಿ ವೇಗವಾಗಿ ಬಳಸುತ್ತಿದೆ. ಇದರಿಂದಾಗಿ ಕೀವ್‍ನಲ್ಲಿ ರಷ್ಯಾ ಮತ್ತು ಉಕ್ರೇನ್‍ನ ಹೋರಾಟ ತೀವ್ರವಾಗಿದೆ ಎಂದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ರಷ್ಯಾದ ಬಾಂಬ್ ದಾಳಿಯಿಂದಾಗಿ ಅಪಾರ್ಟ್‍ಮೆಂಟ್‍ಗಳು ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೂ ದಾಳಿನಡೆಯುತ್ತಿದೆ. ದಿನೇ ದಿನೇ ರಷ್ಯಾ ದಾಳಿಗೆ ನಾಗರಿಕರು ಸಾವನ್ನಪ್ಪಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಇಡೀ ನಗರವೇ ಯುದ್ಧದಿಂದ ಕೋಲಾಹಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

  • ಪ್ರಾರ್ಥನಾ ಮಂದಿರದ ಮೇಲೂ ಕ್ಷಿಪಣಿ, ಬಾಂಬ್ ದಾಳಿ – ಕೀವ್ ವಶಕ್ಕೆ ರಷ್ಯಾ ಹರಸಾಹಸ

    ಪ್ರಾರ್ಥನಾ ಮಂದಿರದ ಮೇಲೂ ಕ್ಷಿಪಣಿ, ಬಾಂಬ್ ದಾಳಿ – ಕೀವ್ ವಶಕ್ಕೆ ರಷ್ಯಾ ಹರಸಾಹಸ

    ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ದಾಳಿ 18ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‍ನ ಪ್ರಾರ್ಥನಾ ಮಂದಿರಗಳನ್ನು ಬಿಡದೆ ರಷ್ಯಾ ದಾಳಿ ಮುಂದುವರಿಸಿದೆ.

    ರಷ್ಯಾ ಮಿಲಿಟರಿ ಪಡೆ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ 4 ಕಿ.ಮೀ ದೂರದಲ್ಲಿ ಇದ್ದು ಕೀವ್ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಉಕ್ರೇನ್‍ನ ಕೀವ್ ಮತ್ತು ಖಾರ್ಕಿವ್ ನಗರದಲ್ಲಿ ಘನಘೋರ ಯುದ್ಧ ಆಗುತ್ತಿದ್ದು, ರಷ್ಯಾದ ಕ್ಷಿಪಣಿ, ಬಾಂಬ್ ದಾಳಿಗೆ ನಗರಗಳು ಹೊತ್ತಿ ಉರಿಯುತ್ತಿದೆ. ಇನ್ನೊಂದೆಡೆ ಮರಿಯುಪೋಲ್‍ನಲ್ಲಿ ರಷ್ಯಾದ ದಾಳಿಗೆ ಸಿಕ್ಕ ಸಿಕ್ಕಲ್ಲಿ ರಕ್ತಪಾತವಾಗುತ್ತಿದೆ. ಕೀವ್ ನಗರಕ್ಕೆ ಮತ್ತಷ್ಟು ಹತ್ತಿರವಾದ ರಷ್ಯಾ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಲಗ್ಗೆ ಇಟ್ಟಿದೆ. ಈಗಾಗಲೇ ಎರಡು ಕಡೆಯ ನೂರಾರು ಯುದ್ಧ ಟ್ಯಾಂಕರ್‌ಗಳು ಉಡೀಸ್ ಆಗಿದೆ. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಉಕ್ರೇನ್‍ನಲ್ಲಿರುವ ಪ್ರಾರ್ಥನಾ ಮಂದಿಗಳನ್ನು ಬಿಡದಂತೆ ರಷ್ಯಾ ದಾಳಿ ಮುಂದುವರಿಸಿದ್ದು, ಉಕ್ರೇನ್‍ನ ಜನರನ್ನು ಸ್ಥಳಾಂತರಿಸುವ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ರಷ್ಯಾ ಸೇನೆ ಗುಂಡಿನ ಮಳೆ ಸುರಿಸಿದೆ. ದಾಳಿಯಲ್ಲಿ 7 ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಉಕ್ರೇನ್‍ನ ಗುಪ್ತಚರ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇತ್ತ ಉಕ್ರೇನ್ ಪ್ರತಿರೋಧ ಮತ್ತಷ್ಟು ತೀವ್ರಗೊಳಿಸಿದ್ದು, ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಖೆರ್ಸನ್ ಬಳಿಯ ಒಬ್ಲಾಸ್ಟ್ ಸಮೀಪ ಹೆಲಿಕಾಫ್ಟರ್ ಧ್ವಂಸವಾಗಿದೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ರಷ್ಯಾ ದಾಳಿಗೆ ಉಕ್ರೇನ್ ಪ್ರತಿರೋಧ ಒಡ್ಡುತ್ತಿರುವ ನಡುವೆಯೂ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆಗೆ ಸಿದ್ಧ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಪುನರುಚ್ಚರಿಸಿದ್ದಾರೆ. ನಾವು ಮಾತುಕತೆಗೆ ಸಿದ್ಧ ಆದರೆ ನಾವು ತಿಳಿಸುವ ಸ್ಥಳಕ್ಕೆ ಪುಟಿನ್ ಬಂದರೆ ಮಾತ್ರ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ಈಗಾಗಲೇ ಯುದ್ಧ ಪ್ರಾರಂಭವಾದಗಿನಿಂದ ಉಕ್ರೇನ್‍ನ 1,300ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧ ನಿಲ್ಲಿಸಲು ನಾವು ಸಿದ್ಧರಿದ್ದೇವೆ ಪುಟಿನ್ ಜೊತೆ ಮಾತುಕತೆಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮಧ್ಯಸ್ಥಿಕೆ ವಹಿಸುವಂತೆ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.

  • ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮಂದುವರೆಸಿದೆ. ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್ ಮಂದಿ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉದ್ವೀಗ್ನ ಪರಿಸ್ಥಿತಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ (Volodymyr Zelenskyy) ರಷ್ಯಾ ಯೋಧರ ತಾಯಂದಿರ ಬಳಿ ಮನವಿ ಮಾಡಿದ್ದಾರೆ.

    ಬಲವಂತಕ್ಕೆ ಒಳಗಾಗಿ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿರುವ ತಾಯಂದಿರಿಗೆ ನಾನು ಇದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಯುದ್ಧಕ್ಕೆ ಕಳುಹಿಸಬೇಡಿ. ನಮ್ಮ ದೇಶದ ಮೇಲೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸದಂತೆ ನಿಮ್ಮ ಮಕ್ಕಳನ್ನು ತಡೆಯಿರಿ ಎಂದು ಟೆಲಿಗ್ರಾಮ್‍ನಲ್ಲಿ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ ಝೆಲೆನ್‍ಸ್ಕಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ನಿಮ್ಮ ಮಗ ಎಲ್ಲಿದ್ದಾನೆ? ಎಂಬುದನ್ನು ಖಾತರಿ ಮಾಡಿಕೊಳ್ಳಿ. ಮಗನನ್ನು ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಬಹುದೆಂಬ ಸಣ್ಣದೊಂದು ಅನುಮಾನವಿದ್ದರೂ, ಸಹ ಅವನನ್ನು ಕೊಲ್ಲುವುದು, ಸೆರೆಹಿಡಿಯುವುದನ್ನು ತಡೆಯಲು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಂದು  ಹೇಳಿದ್ದಾರೆ.

    ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‍ನಲ್ಲಿ ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್-ರಷ್ಯಾ ನಡುವೆ ಘನಘೋರ ಯುದ್ಧ ಮುಂದುವರಿದಿದೆ. ಈ ಮಧ್ಯೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‌ನಲ್ಲಿ  ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಇದೇ ವೇಳೆ, ಕ್ರೆಮ್ಲಿನ್ ಆಧಾರಹಿತ ಆರೋಪಗಳನ್ನು ಅಮೆರಿಕ ಸೇರಿ ಹಲವು ದೇಶಗಳು ಖಂಡಿಸಿವೆ. ಆರೋಪ- ಪ್ರತ್ಯಾರೋಪಗಳ ನಡುವೆ ಉಕ್ರೇನ್‍ನ ಪ್ರಯೋಗಶಾಲೆಗಳಲ್ಲಿ ಇರುವ ತೀವ್ರ ಅಪಾಯ ಉಂಟು ಮಾಡುವ ಅಂಟುರೋಗಗಳ ಕ್ರಿಮಿಗಳನ್ನು ನಾಶಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.

    ರಷ್ಯಾ ದಾಳಿಯಿಂದ ಲ್ಯಾಬ್‍ಗಳು ಧ್ವಂಸವಾಗಿ, ಸಾಂಕ್ರಾಮಿಕ ರೋಗ ಹರಡಬಲ್ಲ ಕ್ರಿಮಿಗಳು ಹೊರಗೆ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಜನ-ಜಾನುವಾರುಗಳ ಮೇಲೆ ಈ ಕ್ರಿಮಿಗಳ ಪ್ರಭಾವ ಕಡಿಮೆ ಮಾಡುವ ಸಲುವಾಗಿ ಉಕ್ರೇನ್‍ನ ಹಲವು ಲ್ಯಾಬ್‍ಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದವು.