Tag: Volleyball

  • ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಬೆಂಗಳೂರು: ನಗರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ  (Sports Authority of India) ವಿಲಕ್ಷಣ ಘಟನೆಯೊಂದು ನಡೆದಿದೆ. ಆಟಗಾರ್ತಿಯೊಬ್ಬರು ಸ್ನಾನ ಮಾಡುವಾಗ ಇನ್ನೋರ್ವ ಆಟಗಾರ್ತಿ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ.

    ಟೇಕ್ವಾಂಡೋ (Tekwando) ಪ್ಲೇಯರ್ ಒಬ್ಬರು ಸ್ನಾನಕ್ಕೆ ತೆರಳಿದ್ದಾಗ ಇನ್ನೋರ್ವ ವಾಲಿಬಾಲ್ (Volleyball) ಆಟಗಾರ್ತಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾಳೆ. ಮೊಬೈಲ್ ನೋಡಿ ಗಾಬರಿಗೊಂಡ ಆಟಗಾರ್ತಿ ಪ್ರಶ್ನೆ ಮಾಡಿದ್ದಾಳೆ. ಬಳಿಕ ರೆಕಾರ್ಡ್ ಮಾಡಿದ್ದ ಮೊಬೈಲ್‍ನ್ನು ಒಡೆದು ಹಾಕಿದ್ದಾಳೆ. ಈ ಬಗ್ಗೆ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್

    ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಆರೋಪಿಯ ವಿರುದ್ಧ ಸೆಕ್ಷನ್ 354, 201, 66ಸಿ ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪೊಲೀಸರು ರೆಕಾರ್ಡ್ ಮಾಡಿದ ಮೊಬೈಲ್‍ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ

  • ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಸೋಮವಾರ ಜಲಂಧರ್‌ನ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಆಟವನ್ನು ಆಡಿದ್ದಾರೆ.

    Bhagwant Mann

    ಎರಡು ತಿಂಗಳ ಕಾಲ ನಡೆಯುವ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಭಗವಂತ್ ಮಾನ್ ಅವರು ಸುಮಾರು 10-15 ನಿಮಿಷಗಳ ಕಾಲ ಕ್ರೀಡಾಪಟುಗಳೊಂದಿಗೆ ವಾಲಿಬಾಲ್ ಪಂದ್ಯವನ್ನು ಆಡಿದ್ದಾರೆ. ನೆಟ್‍ನಲ್ಲಿ ತಾವೂ ಕೂಡ ವಾಲಿಬಾಲ್ ಸರ್ವ್ ಮಾಡಿ ಆಟದ ಕೌಶಲ್ಯ ಮೆರೆದಿದ್ದಾರೆ. ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ

    ವಾಲಿಬಾಲ್ ಅಂಕಣದ ಹೊರಗೆ ಭದ್ರತಾ ಸಿಬ್ಬಂದಿ ನಿಂತಿದ್ದರು. ಈ ವೇಳೆ ಟ್ರ್ಯಾಕ್‍ಸೂಟ್ ಮತ್ತು ಕ್ಯಾಪ್ ಧರಿಸಿ ಮೈದಾನಕ್ಕೆ ಇಳಿದ ಭಗವಂತ್ ಮಾನ್ ಅವರು ಎದುರಾಳಿಗಳು ನೀಡಿದ ಪಾಸ್ ಅನ್ನು ಒಂದೇ ಕೈಯಿಂದ ತಡೆದು ನಿಲ್ಲಿಸಿದ್ದು ಅಲ್ಲಿದ್ದವರಿಗೆ ಬೆರಗು ಮೂಡಿಸಿದೆ. ಭಗವಂತ್ ಮಾನ್ ಅವರು ಕೇವಲ ಆಟವಷ್ಟೇ ಅಲ್ಲ. ತಮ್ಮ ತಂಡಕ್ಕೆ ಅಂಕವನ್ನು ಸಹ ತಂದು ಕೊಟ್ಟಿದ್ದಾರೆ. ಇದನ್ನೂ ಓದಿ: ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್‌ ಪ್ರಸ್ತಾವ

    ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸುವ ಮುನ್ನ ಮಾತನಾಡಿದ ಅವರು, ನಾಲ್ಕು ಲಕ್ಷಕ್ಕೂ ಹೆಚ್ಚು ಆಟಗಾರರು 28 ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯಮಟ್ಟದ ವಿಜೇತರಿಗೆ ಒಟ್ಟು 6 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಬಾರಿಯ ಕ್ರೀಡಾಕೂಟಗಳು ರಾಜ್ಯದ ಕ್ರೀಡಾ ಕ್ಯಾಲೆಂಡರ್‌ನಲ್ಲಿ ವಾರ್ಷಿಕ ವೈಶಿಷ್ಟ್ಯವಾಗಲಿದೆ. ಪಂಜಾಬ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಂತೋಷವಾಗಿರುವುದನ್ನು ಕಂಡು ನಾನು ಹರ್ಷಗೊಂಡಿದ್ದೇನೆ. ರಾಜ್ಯ ಸರ್ಕಾರವು ರಾಜ್ಯಾದ್ಯಂತ ಕ್ರೀಡೆಯನ್ನು ಉತ್ತೇಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಯುವಕರ ಸಾಮರ್ಥ್ಯವನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    ಬೆಂಗಳೂರು: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಆಟಗಾರರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಹಾಗೂ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮಹಾಪೌರರು ಎಸ್.ಹರೀಶ್ ಸನ್ಮಾನಿಸಿದರು.

    ಪಶ್ಚಿಮ ಬಂಗಾಳದ ಬುದ್ರ್ವಾನ್‍ನಲ್ಲಿ ನಡೆದ ಜ್ಯೂನಿಯರ್ ವಾಲಿಬಾಲ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದಿದೆ. ತಮಿಳುನಾಡಿನ ವಿರುದ್ಧ ನಡೆದ ಪೈನಲ್ ಪಂದ್ಯದಲ್ಲಿ 3-1 ರಲ್ಲಿ ಪರಾಭವಗೊಳ್ಳುವ ಮೂಲಕ ಕರ್ನಾಟಕ ತಂಡ ಬೆಳ್ಳಿ ಪದಕ ಪಡೆದಿದೆ. ಇದನ್ನೂ ಓದಿ: ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕಡೆಯ ನಿಮಿಷದ ಹೋರಾಟದಲ್ಲಿ ಟೈ ಮಾಡಿಕೊಂಡ ಬುಲ್ಸ್

    ಆಟಗಾರರನ್ಡಾನು ಪ್ರಶಂಸಿದ ನಾರಾಯಣಗೌಡ, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮಹಿಳೆಯರ ತಂಡ 8ನೇ ಸ್ಥಾನ ಪಡೆದಿದೆ. ಬುದ್ರ್ವಾನ್ ನಲ್ಲಿ ನಡೆದ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‍ಶಿಪ್ ನಲ್ಲಿ ಪಾಲ್ಗೊಂಡು ಕರ್ನಾಟಕದ ಆಟಗಾರರು ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ ತಂಡ ಫೈನಲ್ ಪಂದ್ಯದಲ್ಲಿ ಸ್ವಲ್ಪ ಹಿನ್ನಡೆಯಿಂದ ಚಿನ್ನದ ಪದಕ ತಪ್ಪಿದೆ. ಆದರೆ, ಮುಂದಿನ ಟೂರ್ನಿಯಲ್ಲಿ ನಮ್ಮ ಕರ್ನಾಟಕ ತಂಡ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ. ನಮ್ಮ ವಾಲಿಬಾಲ್ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

  • ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ಗಿಳಿಗಳು ಮಾತನಾಡುವುದು, ಹಾಡು ಹೇಳುವುದನ್ನು ಕೇಳಿದ್ದೀರಿ ಮತ್ತು ನೋಡಿದ್ದೀರಿ ಆದರೆ ಇಲ್ಲಿ ಗಿಳಿಗಳು ವಾಲಿಬಾಲ್ ಆಟ ಆಡುತ್ತವೆ ಎಂದು ಹೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಆದರು ಇದು ಸತ್ಯ.

    ಹೌದು. ಹಸಿರು ಮತ್ತು ಹಳದಿ ಬಣ್ಣದ ಮುದ್ದು ಗಿಳಿಗಳು ಎರಡು ತಂಡಗಳಾಗಿ ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟ ಪಕ್ಷಿಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ಬದಿಯಲ್ಲಿ ಹಸಿರು ಬಣ್ಣದ ಗಿಳಿಯ ತಂಡ ಇನ್ನೊಂದು ಕಡೆ ಹಳದಿ ಬಣ್ಣದ ಗಿಳಿಗಳ ತಂಡವನ್ನಾಗಿ ಮಾಡಲಾಗುತ್ತದೆ. ನಂತರ ಇವುಗಳ ಮಧ್ಯೆ ಒಂದು ಪುಟ್ಟ ನೆಟ್ ಕಟ್ಟಿ ಆಟವಾಡಲು ಬಿಡುತ್ತಾರೆ. ಆಗ ಗಿಳಿಗಳು ಕಾಳುಗಳನ್ನು ಹೆಕ್ಕುತ್ತಾ ಪುಟ್ಟ ಬಾಲ್ ಅನ್ನು ನೆಟ್ ನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸ್ ಮಾಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಆಟವಾಡುತ್ತಿರುವ ಈ ಮುದ್ದಾದ ಗಿಳಿಗಳ ವಿಡಿಯೋ ಹರಿದಾಡುತ್ತಿದೆ.

  • ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಐಜಾಲ್: ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೂ, ಇದರ ಮಧ್ಯೆಯೇ ಬ್ರೇಕ್ ತೆಗೆದುಕೊಂಡು ವಾಲಿಬಾಲ್ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಿಜೋರಾಂನ ಮ್ಯಾಸ್ಕಾಟ್‍ನಲ್ಲಿ ಈ ಘಟನೆ ನಡೆದಿದ್ದು, ನಿಂಗ್ಲುನ್ ಹಂಘಲ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂಲವಾಗಿ ಇದನ್ನು ಲಿಂಡಾ ಚಕ್ಚುವಾಕ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟುಕುಮ್ ಮಾವಿಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಅವರು ಈ ವಿಡಿಯೋದಲ್ಲಿ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಹಂಘಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಾಲ್ವೆಂಟ್ಲುವಾಂಗಿ ಅವರು ವಾಲಿಬಾಲ್ ಆಟವಾಡುತ್ತಿದ್ದರು. ಆಗ ಚಿಕ್ಕ ವಿರಾಮ ತೆಗೆದುಕೊಂಡು ಪ್ಲೇಯರ್ಸ್ ಕ್ಯಾಂಪ್ ಬಳಿ 7 ತಿಂಗಳ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು ಎಂದು ಹೊಗಳಿದ್ದಾರೆ.

    ಪೋಸ್ಟ್ ನ ಮಾಹಿತಿ ಪ್ರಕಾರ 2019ರ ಮಿಜೋರಾಂ ರಾಜ್ಯ ಮಟ್ಟದ ಆಟಗಳು ಮ್ಯಾಸ್ಕಾಟ್‍ನಲ್ಲಿ ನಡೆಯುತ್ತಿದ್ದವು. ಈ ವೇಳೆ ಲಾಲ್ವೆಂಟ್ಲುವಾಂಗಿ ಅವರು ತಮ್ಮ ಮಗುವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರೋತ್ಸಾಹ ನೀಡಲು ಮೀಜೊರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಲಾಲ್ವೆಂಟ್ಲುವಾಂಗಿ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು ಎಂದು ಫೇಸ್ಬುಕ್ ಪೋಸ್ಟಿನಲ್ಲಿ ಬರೆಯಲಾಗಿದೆ.

    ಈ ಪೋಸ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಲ್ವೆಂಟ್ಲುವಾಂಗಿ ಅವರು ಕ್ರೀಡಾಪಟುವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಾಯಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ತಾಯಿ ಎಂದರೆ ತಾಯಿ, ಸದಾ ಮಕ್ಕಳ ಸೇವೆಯಲ್ಲಿಯೇ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಜಮ್ಮು ಕಾಶ್ಮೀರದಲ್ಲಿ ಸೈನಿಕರ ಜೊತೆ ಧೋನಿ ವಾಲಿಬಾಲ್-ವಿಡಿಯೋ ನೋಡಿ

    ಜಮ್ಮು ಕಾಶ್ಮೀರದಲ್ಲಿ ಸೈನಿಕರ ಜೊತೆ ಧೋನಿ ವಾಲಿಬಾಲ್-ವಿಡಿಯೋ ನೋಡಿ

    ಶ್ರೀನಗರ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಸೈನಿಕರ ಜೊತೆ ವಾಲಿಬಾಲ್ ಆಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಶ್ವಕಪ್ ಬಳಿಕ ಕ್ರಿಕೆಟ್‍ನಿಂದ 2 ತಿಂಗಳು ರಜೆ ಪಡೆದಿರುವ ಧೋನಿ ಅವರು, 106ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್ ಪ್ಯಾರಾ ಕಮಾಂಡೋ ಯುನಿಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಅವರು ಪ್ರದೇಶಿಕ ಸೇನಾ ಬೆಟಾಲಿಯನ್ ಯೋಧರೊಂದಿಗೆ ವಾಲಿಬಾಲ್ ಆಡಿದ್ದಾರೆ.

    ಈ ಹಿಂದೆ ಎಂಎಸ್ ಧೋನಿ ಸೇನಾ ಸಮವಸ್ತ್ರದಲ್ಲಿ ಕ್ರಿಕೆಟ್ ಬ್ಯಾಟ್‍ಗೆ ಸಹಿ ಹಾಕುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಗಸ್ಟ್ 15 ರವರೆಗೆ ವಿಕ್ಟರ್ ಫೋರ್ಸ್‍ ನ ಭಾಗವಾಗಿ ಎಂ.ಎಸ್.ಧೋನಿ ಕಾಶ್ಮೀರ ಕಣಿವೆಯಲ್ಲಿರುವ ಘಟಕದೊಂದಿಗೆ ಇರಲಿದ್ದಾರೆ. ಅಧಿಕಾರಿಗಳ ಕೋರಿಕೆಯಂತೆ ಮತ್ತು ಸೇನಾ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದಂತೆ ಎಂ.ಎಸ್.ಧೋನಿ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ಮಾಡುತ್ತಿದ್ದಾರೆ.

    ವಿಶ್ವಕಪ್ ಬಳಿಕ ಸೇನೆ ಸೇರಿದ ಧೋನಿ ಆರಂಭದ ಮೂರು ದಿನ ಸೇನೆಯ ಪ್ರಾಥಮಿಕ ತರಬೇತಿಯನ್ನು ಪಡೆದಿದ್ದರು. ಈ ವೇಳೆ ಸೇನೆಯ ಬಗ್ಗೆ ಮಾಹಿತಿ, ಫೈರಿಂಗ್ ಸಹ ಹೇಳಿಕೊಡಲಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸದಿಂದ ರಜೆ ಪಡೆದುಕೊಂಡಿರುವ ಧೋನಿ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿಯ ಸ್ವತಂತ್ರ್ಯ ದಿನಾಚರಣೆಯನ್ನು ಧೋನಿ ಸೈನಿಕರೊಂದಿಗೆ ಆಚರಿಸಲಿದ್ದಾರೆ.

    ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು. ಧೋನಿ 2020 ರ ಫೆಬ್ರವರಿಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆ ಮುಂದಿನ ವರ್ಷದ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ ಎಂದು ಹೇಳಲಾಗಿದೆ.

  • ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಬೆಂಗಳೂರು: ವಾಲಿಬಾಲ್ ಆಡುವಾಗ ಸ್ನೇಹಿತರ ಜೊತೆ ಗಲಾಟೆ ನಡೆದ ವೇಳೆ ಸ್ನೇಹಿತರು ಹೊಡೆದರು ಎಂಬ ಕಾರಣಕ್ಕೆ ಮನನೊಂದಿದ್ದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಮುರಳಿ (21) ನೇಣಿಗೆ ಶರಣಾದ ಯುವಕ. ಮುರಳಿ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದವನಾಗಿದ್ದು, ಕೆ. ಸತ್ಯವಾರ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಶನಿವಾರ ಸಂಜೆ ವಾಲಿಬಾಲ್ ಆಡುವ ವೇಳೆ ಸ್ನೇಹಿತರು ಬೈದಿದ್ದಾರೆ.

    ಇದರಿಂದ ಮನನೊಂದ ಮುರಳಿ ಗ್ರಾಮದ ಹೊರಭಾಗದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿ ದೊರೆತಿದ್ದು, ಇದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ಚಿಕ್ಕಮಗಳೂರು: ಈ ಹಿಂದೆ ಕಬಡ್ಡಿ, ವಾಲಿಬಾಲ್ ಆಡುವ ಮೂಲಕ ಜನರನ್ನು ಮನರಂಜಿಸಿದ್ದ ಶಾಸಕ ಸಿ.ಟಿ ರವಿ, ಇದೀಗ ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ತಾಗಿ ಸ್ಟೆಪ್ ಹಾಕೋ ಮೂಲಕ ಡ್ಯಾನ್ಸ್ ಗೂ ಸೈ ಎಂದಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರೊಂದಿಗೆ ವೇದಿಕೆ ಮೇಲೆಯೇರಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಬಳಿಕ ಸಿಟಿ ರವಿ ವೇದಿಕೆಯೇರಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ ಟಿ ರವಿ ಅವರು ಗ್ರಾಮ ಸಭೆಯ ಬಳಿಕ ಚಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳೀಯ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ-ಫೋಟೋಗಳಲ್ಲಿ ನೋಡಿ

    ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ದರು. ಶಾಸಕರು ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ದರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ದರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಅಂತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು.

    ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದ್ದರು.