Tag: Vokkaliga Meeting

  • 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ

    60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ

    ಬೆಂಗಳೂರು: 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿಯನ್ನು ಹೆಚ್ಚು ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ಒಕ್ಕಲಿಗ ಸಮುದಾಯದ ಸಭೆ ನಿರ್ಣಯ ಮಾಡಿದೆ.

    ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಡಿಕೆಶಿ, ಹೆಚ್‌ಡಿಕೆ, ಡಿವಿಎಸ್, ಶೋಭಾ ಕರಂದ್ಲಾಜೆ, ಅಶೋಕ್ ಸೇರಿದಂತೆ ಸಮುದಾಯದ ನಾಯಕರು, ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.ಇದನ್ನೂ ಓದಿ: ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನ ಕೈಗೊಳ್ಳಲಾಗಿದೆ. ಸಮುದಾಯದ ಜಾತಿಗಣತಿ ಸ್ವಾಗತಿಸುತ್ತೇವೆ ಆದರೆ ತರಾತುರಿಯಲ್ಲಿ ಜಾತಿಗಣತಿ ಬೇಡ, ಮುಂದೂಡಬೇಕು. 15 ದಿನ ಜಾತಿಗಣತಿ ಮಾಡಲು ಸಾಧ್ಯವಿಲ್ಲ, ತೆಲಂಗಾಣ ಮಾದರಿಯಲ್ಲಿ ಜಾಸ್ತಿ ದಿನ ಮಾಡಬೇಕು. ಜಾತಿಗಳಿಗೆ ಕ್ರಿಶ್ಚಿಯನ್ ಸೇರಿಸಿರುವುದನ್ನ ಕೈ ಬಿಡಬೇಕು. ಸಮುದಾಯದ ಎಲ್ಲರೂ ಒಕ್ಕಲಿಗ ಎಂದೇ ಜಾತಿ ಬರೆಸಬೇಕು ಎಂದು ಒಕ್ಕಲಿಗ ಸಮುದಾಯದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

    ಸಭೆ ಬಳಿಕ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಜಾತಿಗಣತಿ ಮುಂದೂಡಿ, ತರಾತುರಿ ಬೇಡ. ಈಗಿರುವ ಕಾಲಮಿತಿ ಸಾಕಾಗಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಒಕ್ಕಲಿಗ ಅಂತಾ ಮೊದಲು ಬರೆಸಬೇಕು. ಅಗತ್ಯ ಇದ್ದರೆ ಉಪಜಾತಿಗಳನ್ನ ಬರೆಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಒಕ್ಕಲಿಗರ ಸಂಘ, ಸ್ವಾಮೀಜಿಗಳಿಂದ ಜಾಗೃತಿ ಮೂಡಿಸುತ್ತೇವೆ. ಯಾವುದೇ ರೀತಿ ನಿರ್ಲಕ್ಷ್ಯ ಮಾಡದೇ ಜಾಗೃತಿಗೆ ಇಳಿಯುತ್ತೇವೆ. ಒಕ್ಕಲಿಗರ ಸಂಘದ ನೌಕರರು ಒಂದೆಡೆ ಸೇರಿದಂತೆ ಎಲ್ಲರೂ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕು: ಸಭೆಯಲ್ಲಿ ಒಕ್ಕೊರಲ ಕೂಗು

  • ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    ಬೆಂಗಳೂರು: ಜಾತಿಗಣತಿ ಗೊಂದಲ ಸಂಬಂಧ ಶನಿವಾರ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮುಖಾಮುಖಿಯಾಗಿದ್ದಾರೆ.

    ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಕೆಶಿ ಮತ್ತು ಹೆಚ್‌ಡಿಕೆ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಡಿಕೆಶಿಗೆ ಕೈಮುಗಿದು ಹೆಚ್‌ಡಿಕೆ ನಮಸ್ಕರಿಸಿದರು. ಡಿಸಿಎಂ ಕೂಡ ಪ್ರತಿಯಾಗಿ ನಮಸ್ಕರಿಸಿದರು. ಬಳಿಕ ಸ್ವಾಮೀಜಿ ಪಕ್ಕದಲ್ಲಿ ಹೆಚ್‌ಡಿಕೆ ಕೂರುವುದಕ್ಕೆ ಜಾಗ ಮಾಡಿಕೊಟ್ಟರು. ಇಬ್ಬರೂ ನಾಯಕರು ಸ್ವಾಮೀಜಿ ಮುಂದೆ ಮಾತನಾಡಿದರು.

    ಜಾತಿಗಣತಿ ಸಂಬಂಧ ಒಕ್ಕಲಿಗರ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿಯನ್ನು ಹೆಚ್ಚು ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಮಾಡಲಾಗಿದೆ.

    ಗಣತಿ ವೇಳೆ ತಮ್ಮ ಸಮುದಾಯದವರು ಒಕ್ಕಲಿಗ ಎಂದೇ ಬರೆಸುವಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಕುಂಚಟಿಗ ಒಕ್ಕಲಿಗ ಪ್ರತ್ಯೇಕ ಗುರುತಿಸಿಕೊಳ್ಳದಂತೆ ತೀರ್ಮಾನಿಸಲಾಗಿದೆ. ಯಾರೇ ಆಗಲಿ ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟು ಇರಲಿ ಎಂದು ತಿಳಿಸಲಾಗಿದೆ. ಸರ್ವೆ ಮುಂದೂಡಿದರೆ ಒಳ್ಳೆಯದು ಎಂದು ಸಭೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.