Tag: Vokkaliga

  • ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    • ಹೊಸ ಜಾತಿ ಸೇರ್ಪಡೆ ಮಾಡಿರುವುದು ಸರಿ ಇಲ್ಲ: ನಂಜಾವಧೂತ ಶ್ರೀ
    • ಅಗತ್ಯವಿದ್ರೆ ಮಾತ್ರ ಉಪಜಾತಿ ಬರೆಸಿ: ನಿಶ್ಚಲಾನಂದ ಶ್ರೀ

    ಬೆಂಗಳೂರು: ತರಾತುರಿ ಜಾತಿಗಣತಿ (Caste Census) ಹಾಗೂ ಜಾತಿಗಳ ಜೊತೆ ಕ್ರಿಶ್ಚಿಯನ್ ದರ್ಮ ಸೇರಿಸುವುದು ಬೇಡ ಎಂದು ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಒಕ್ಕಲಿಗ ಸಮುದಾಯದ ಸಭೆ (Vokkaliga) ಬಳಿಕ ಅವರು ಮಾತನಾಡಿದರು. ಈ ವೇಳೆ, ಸಮೀಕ್ಷೆ ಮುಂದೂಡಬೇಕು, ಕಾಲಮಿತಿ ಹೆಚ್ಚು ಮಾಡಿ ಸಮೀಕ್ಷೆ ನಡೆಸಬೇಕು. ನಾವು ಕೂಡ ಸಮೀಕ್ಷೆ ಸ್ವಾಗತಿಸುತ್ತೇವೆ, ಕೆಲ ನ್ಯೂನತೆ ಸರಿಪಡಿಸಬೇಕು. ಕ್ರಿಶ್ಚಿಯನ್, ಜೈನ ಈ ರೀತಿ ಧರ್ಮಗಳ ಜಾತಿಗಳಿಗೆ ಸೇರಿಸುವುದು ಸರಿ ಇಲ್ಲ ಎಂದು ಅವರು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    15 ದಿನಗಳ ಕಾಲ ಸಮೀಕ್ಷೆ ಮಾಡಲು ಹೊರಟಿದ್ದಾರೆ. ಅದರಲ್ಲಿ, 9 ದಿನಗಳು ನವರಾತ್ರಿ, ಎಲ್ಲರೂ ಶ್ರದ್ಧೆಯಿಂದ ಆಚರಣೆ ಮಾಡ್ತಾರೆ. ಹೀಗಾಗಿ ಸಮೀಕ್ಷೆಯಿಂದ ಯಾವ ಮಟ್ಟಕ್ಕೆ ಪೂರ್ಣ ಆಗುತ್ತೆ. ರಜೆಯ ಕಾರಣ ಎಲ್ಲರೂ ಅವರವರ ಊರಿಗೆ ಹೋಗ್ತಾರೆ. ಸಮೀಕ್ಷೆಯ ಸದ್ದುದ್ದೇಶ ಅರ್ಥಪೂರ್ಣ ಆಗಬೇಕು. ಎಲ್ಲರೂ ಒಕ್ಕಲಿಗ ಎಂದು ಬರೆಸಬೇಕು. ಕೋಡ್ ಎ 1545 ಎಂದು ಬರೆಸಬೇಕು. ಜಾತಿಗಣತಿ ಮುಂದೂಡಿ ಅನ್ನೋದು ನಮ್ಮ ನಿರ್ಣಯ, ಸರ್ಕಾರ ಸ್ಪಂದಿಸುವ ಭರವಸೆ ಇದೆ ಎಂದರು.

    ಇದೇ ವೇಳೆ ಧರ್ಮ ಸೇರಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಸರಿ ಇಲ್ಲ. ಇದು ಮುಂದೆ ಮುಸ್ಲಿಂ ಒಕ್ಕಲಿಗ, ಮುಸ್ಲಿಂ ಲಿಂಗಾಯತ ಅಂದ್ರೆ ಹೇಗೆ? ಮುಸ್ಲಿಂ ಹಿಂದೂ ಅಂತಾ ಮಾಡಿದ್ರೆ.? ಇದನ್ನ ಸಹಿಸಲು ಆಗಲ್ಲ.

    ಇನ್ನು ಸಭೆ ಬಳಿಕ ಮಾತನಾಡಿದ ನಂಜಾವಧೂತ ಸ್ವಾಮೀಜಿ (Nanjavadhutha Swamiji), ಈ ಹಿಂದೆ ಮರುಸಮೀಕ್ಷೆಗೆ ಒತ್ತಾಯಿಸಿದ್ದೆವು. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಹೊಸ ಗಣತಿ ಮಾಡ್ತಿದ್ದಾರೆ. ಅದಕ್ಕೆ ನಮ್ಮವರ ತಕಾರರು ಇಲ್ಲ. ಆದ್ರೆ ಧರ್ಮದ ಹೆಸರು ತಳುಕು ಹಾಕುವುದು, ಹೊಸ ಜಾತಿ ಹಾಕಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಯಾವುದೇ ಪ್ರಕ್ರಿಯೆ ನಡೆಯದೇ ಹೊಸ ಜಾತಿ ಸೇರ್ಪಡೆ ಮಾಡಿರುವುದು ಸರಿ ಇಲ್ಲ ಎಂದು ಕಿಡಿಕಾರಿದರು.

    ಕೃಷಿ ಚಟುವಟಿಕೆಗಳು, ಸಾಲು ಸಾಲು ಹಬ್ಬ, ಪಿತೃಪಕ್ಷ ಎಲ್ಲರೂ ಒಂದೇ ದಿನ ಆಚರಣೆ ಮಾಡಲ್ಲ. 9 ದಿನಗಳ ನವರಾತ್ರಿ ಇರುತ್ತೆ, ಸ್ವಾಮೀಜಿಗಳು ಪೂಜೆಯಲ್ಲಿ ಇರ್ತಾರೆ. ಆಯೋಗದ್ದು ಅವಸರದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ನಿರ್ಧಾರ ಏಕಪಕ್ಷೀಯ. ತರಾತುರಿಯಲ್ಲಿ ಜಾತಿಗಣತಿಗೆ ಮುಂದಾಗಿದೆ. ಏಳೂವರೆ ಕೋಟಿ ಜನರ ಸಮೀಕ್ಷೆಯನ್ನ 15 ದಿನದಲ್ಲಿ ಹೇಗೆ ಪೂರ್ಣಗೊಳಿಸ್ತೀರಾ? ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಸಮೀಕ್ಷೆಯನ್ನ ಮುಂದೂಡಬೇಕು. ನಮಗೆ ಭಯ ಇಲ್ಲ, ಆದರೆ ಕಾಲಾವಕಾಶ ಕೊಡಿ ಎಂದರು.

    ಸಭೆ ಬಳಿಕ ನಿಶ್ಚಲಾನಂದ ಸ್ವಾಮೀಜಿಗಳು (Nischalananda Sri) ಮಾತನಾಡಿ, ಜಾತಿಗಣತಿಯನ್ನ ಸ್ವಾಗತಿಸುತ್ತೇವೆ. ಆದರೆ ಕೃಷಿ, ದಸರಾ ಕೆಲಸ ಇದೆ, ತರಾತುರಿಯಲ್ಲಿ ಜಾತಿಗಣತಿ ಮಾಡಬಾರದು. ಕನಿಷ್ಠ 60 ದಿನ ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ. ಅಲ್ಲದೇ ಒಕ್ಕಲಿಗ ಮೊದಲು ಬರೆಸಬೇಕು, ಅಗತ್ಯ ಇದ್ರೆ ಉಪಜಾತಿ ಬರೆಸಬೇಕು ಅಂತಾ ನಿರ್ಣಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

  • ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕು: ಸಭೆಯಲ್ಲಿ ಒಕ್ಕೊರಲ ಕೂಗು

    ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕು: ಸಭೆಯಲ್ಲಿ ಒಕ್ಕೊರಲ ಕೂಗು

    ಬೆಂಗಳೂರು: ಜಾತಿಗಣತಿ (Caste Census) ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ (Vokkaliga) ಎಂದು ಬರೆಸಬೇಕು ಎಂದು ಒಕ್ಕಲಿಗ ಸಮುದಾಯದ ಸಭೆಯಲ್ಲಿ ಒಕ್ಕೊರಲ ಕೂಗು ಕೇಳಿಬಂದಿದೆ.

    ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದಸ್ವಾಮಿಗಳ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಜಾತಿಗಣತಿ ಜಾಗೃತಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ, ಹೆಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಡಿವಿ ಸದಾನಂದಗೌಡ, ಆರ್ ಅಶೋಕ್, ಚಲುವರಾಯಸ್ವಾಮಿ, ಅಶ್ವಥ್ ನಾರಾಯಣ್, ನಿಖಿಲ್ ಕುಮಾರಸ್ವಾಮಿ, ಎಂ.ಸಿ.ಸುಧಾಕರ್, ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಮಠಾಧೀಶರು ಭಾಗಿಯಾಗಿದ್ದಾರೆ. ಅಲ್ಲದೇ ಒಕ್ಕಲಿಗ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಮಾಜಿ ಶಾಸಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; JDS ಮುಖಂಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿ ಬಿಡಿಎ ವಶಕ್ಕೆ

    ಸಮೀಕ್ಷೆ ಗೊಂದಲ, ಒಕ್ಕಲಿಗರ ಉಪ ಜಾತಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಒಕ್ಕಲಿಗರನ್ನ ಏನೆಂದು ಉಲ್ಲೇಖಿಸಬೇಕು ಎಂದು ಸಮಾಲೋಚನೆ ನಡೆಸಲಾಗುತ್ತಿದೆ. ಸಭೆ ಬಳಿಕ ಶ್ರೀಗಳು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜಾತಿ ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕು? ಒಕ್ಕಲಿಗ ಸಮುದಾಯಲ್ಲಿ ಉಪಜಾತಿಗಳಿವೆ. ಜಾತಿ ಕಲಂನಲ್ಲಿ ಏನೆಂದು ನಮೂದು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಮಂಗಳವಾರ ವಿದ್ಯುತ್ ವ್ಯತ್ಯಯ – ಎಲ್ಲೆಲ್ಲಿ ಕರೆಂಟ್ ಇರಲ್ಲ?

    ಇನ್ನು ಸಭೆಗೂ ಮುನ್ನ ಹೆಚ್‌ಡಿಕೆ ಹಾಗೂ ಡಿಕೆಶಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಸ್ವಾಮೀಜಿಗಳ ಜೊತೆಯಲ್ಲೇ ಇಬ್ಬರೂ ವೇದಿಕೆಗೆ ಆಗಮಿಸಿದರು. ಸ್ವಾಮೀಜಿ ಅಕ್ಕಪಕ್ಕದಲ್ಲಿ ಕುಳಿತರೂ ಡಿಕೆಶಿ ಹಾಗೂ ಹೆಚ್‌ಡಿಕೆ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. ಇದನ್ನೂ ಓದಿ: ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ, ಜನರೇ ಬರೆಸಿದ್ದಾರೆ: ಶಿವರಾಜ ತಂಗಡಗಿ

  • ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಬೆಂಗಳೂರು: ಜಾತಿ ಗಣತಿ (Caste Census) ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಕೋಲಾಹಲವೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ವಿಶೇಷ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

    ಸಂಪುಟ ಸಭೆಯಲ್ಲಿ ಲಿಂಗಾಯತ (Lingayat) ಹಾಗೂ ಒಕ್ಕಲಿಗ (Vokkaliga) ಸಚಿವರ ತೀವ್ರ ಆಕ್ಷೇಪದಿಂದಾಗಿ, ಮೇ 2ಕ್ಕೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಚಿವರ ಅಭಿಪ್ರಾಯವನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಿಎಂ ಸಿದ್ದರಾಮಯ್ಯ ಬರವಣಿಗೆ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸಿದ್ದಾರೆ.

    ಸಂಪುಟ ಸಭೆಯಲ್ಲಿ ಏರುಧ್ವನಿಯಲ್ಲೇ ಜಾತಿಗಣತಿ ವರದಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ (Mallikarjun) ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಗಟ್ಟಿಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

     

    ಸಂಪುಟ ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಒಕ್ಕಲಿಗ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು.  ಈ ಮಧ್ಯೆ ಸಂಪುಟ ಸಭೆಗೆ 11 ಪುಟಗಳ ಟಿಪ್ಪಣಿ ಸಲ್ಲಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಾರ್ಖಂಡ್‌ನಲ್ಲಿ ಒಬಿಸಿ ಮೀಸಲಾತಿ 77%, ತಮಿಳುನಾಡಲ್ಲಿ 69% ಇದ್ದು, ಇಲ್ಲೂ ಕೂಡ ಮೀಸಲಾತಿ (Reservation) ಪ್ರಮಾಣವನ್ನು 32%ರಿಂದ 51%ಕ್ಕೆ ಏರಿಸುವಂತೆ ಟಿಪ್ಪಣಿ ಸಲ್ಲಿಸಿದೆ.ಇವತ್ತಿನ ಸಂಪುಟ ಸಭೆಗೆ ಪೂರ್ವಾನುಮತಿ ಪಡೆದು ಸಚಿವರಾದ ದಿನೇಶ್‌ಗುಂಡೂರಾವ್ ಹಾಗೂ ವೆಂಕಟೇಶ್ ಗೈರಾಗಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

     

    ಸಂಪುಟ ಸಭೆಯಲ್ಲಿ ಲಿಂಗಾಯತರ ವಾದವೇನು?
    ಜಾತಿಗಣತಿ ವರದಿಯಲ್ಲಿ ನಮ್ಮ ಸಮುದಾಯ 11% ಅಂತಿದೆ. 1990ರಲ್ಲೇ ಚಿನ್ನಪ್ಪರೆಡ್ಡಿ ಆಯೋಗ 17% ಅಂತ ವರದಿ ಕೊಟ್ಟಿದೆ. ಎಲ್ಲಾ ಉಪಜಾತಿಗಳು ಸೇರಿದ್ರೆ ನಮ್ಮ ಸಮುದಾಯದ ಸಂಖ್ಯೆ 22% ರಷ್ಟಿದೆ. ನಮ್ಮ ಜನಸಂಖ್ಯೆ 11% ಎಂಬ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಮೊದಲು ಈ ದೋಷವನ್ನು ಸರಿಪಡಿಸಿ. ಆಮೇಲೆ ವರದಿ ಬಿಡುಗಡೆ ಮಾಡಿ.

    ಒಕ್ಕಲಿಗ ಸಚಿವರ ವಾದವೇನು?
    ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್‌ಗಳಲ್ಲಿ ಗುರುತಿಸಲಾಗಿದೆ. ಈಗಿರುವ ಅಂಕಿ ಅಂಶ ಒಪ್ಪಲು ಸಾಧ್ಯವಿಲ್ಲ. ಎಲ್ಲಾ ವರ್ಗಗಳಲ್ಲಿರೋ ಸಮುದಾಯವನ್ನು ಒಟ್ಟಿಗೆ ಸೇರಿಸಿ. ದೋಷ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಮರು ಸಮೀಕ್ಷೆ ಮಾಡಿ.

    ದಲಿತ, ಅಲ್ಪಸಂಖ್ಯಾತ ಸಚಿವರುಗಳ ವಾದವೇನು?
    ಜಾತಿಗಣತಿಯಿಂದ ಹಿಂದೆ ಸರಿಯೋದು ಬೇಡ. ಹೈಕಮಾಂಡ್ ಆಜ್ಞೆಯಂತೆ ನಡೆದುಕೊಂಡು ಜಾತಿಗಣತಿ ವರದಿ ಜಾರಿಯಾಗಲೇಬೇಕು. ನಮ್ಮ ಪ್ರಣಾಳಿಕೆಯಲ್ಲೇ ಜಾತಿಗಣತಿ ಪ್ರಸ್ತಾಪವಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಅಗತ್ಯವಿದ್ರೆ ಅಧ್ಯಯನ ಸಮಿತಿ ರಚಿಸಿ, ಪರಾಮರ್ಶಿಸಿ.

  • ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ

    ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ

    – ಕರ್ನಾಟಕ ಬಂದ್ ಮಾದರಿ ಹೋರಾಟಕ್ಕೂ ನಿರ್ಧಾರ
    – ರಾಜ್ಯದಲ್ಲಿ ಒಕ್ಕಲಿಗರ ಒಟ್ಟು ಜನಸಂಖ್ಯೆ 61,58,352

    ಬೆಂಗಳೂರು: ಜಾತಿ ಜೇನುಗೂಡಿಗೆ ಕೈ ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಜಾತಿ ಗಣತಿ (Caste Census) ವರದಿ ಬಿಸಿತುಪ್ಪವಾಗಿ ಪರಿಣಮಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ವರದಿ ಬಹಿರಂಗವಾಗುತ್ತಿದ್ದಂತೆ ಎಲ್ಲೆಲ್ಲೂ ಕೋಲಾಹಲ ಎದ್ದಿದೆ.

    ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಗುರಿಯಾಗಿದ್ದಾರೆ. ಅದರಲ್ಲೂ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯ (Vokkaliga community) ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಒಕ್ಕಲಿಗರು ಜಾತಿ ಗಣತಿ ವಿರುದ್ಧ ದಂಗೆ ಏಳುವ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ

    ಇವತ್ತು ಸಭೆ ಸೇರಿದ ಒಕ್ಕಲಿಗ ಸಂಘದ ಪದಾಧಿಕಾರಿಗಳು, ಕರ್ನಾಟಕ ಬಂದ್ (Karnataka B ರೀತಿಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರವೇ ಪತನವಾಗಲಿದೆ. ಹೊಸದಾಗಿ ಸರ್ವೆ ಮಾಡದಿದ್ದರೆ, ನಾವೇ 100 ಕೋಟಿ ರೂ. ಖರ್ಚು ಮಾಡಿ ಜನಗಣತಿ ಮಾಡುತ್ತೇವೆ ಎಂದು ಸವಾಲು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಶೀಘ್ರವೇ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀಗಳ ಜೊತೆ ಚರ್ಚಿಸಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಿದ್ಧಾರೆ. ಇದನ್ನೂ ಓದಿ: National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಜಾತಿಗಣತಿಯನ್ನು ವಿರೋಧಿಸಿರೋ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದೇನೂ ಜಾತಿಗಣತಿಯೋ, ದ್ವೇಷಗಣತಿಯೋ..? ದರ ಏರಿಕೆ, ಭ್ರಷ್ಟಾಚಾರ ಮುಜುಗರದಿಂದ ಮುಖ ಮುಚ್ಚಿಕೊಳ್ಳೋಕೆ ರೂಪಿಸಿದ ಸಂಚಿದು ಅಂತ ಕಿಡಿಕಾರಿದ್ದಾರೆ.

    ಒಕ್ಕಲಿಗ ಜಾತಿ ಗಣತಿ
    ಒಕ್ಕಲಿಗರ ಒಟ್ಟು ಜನಸಂಖ್ಯೆ- 61,58,352
    * ಒಕ್ಕಲಿಗ – 40,04,830,
    * ರೆಡ್ಡಿ ಒಕ್ಕಲಿಗ- 4,15,382
    * ಕುಂಚಿಟಿಗ ಒಕ್ಕಲಿಗ- 1,95,499
    * ವಕ್ಕಲ್ ಒಕ್ಕಲಿಗ- 1,88,508
    * ಗೌಡ ಒಕ್ಕಲಿಗ- 1,84,479
    * ಗಂಗಡ್ಕರ್ ಒಕ್ಕಲಿಗ- 82,589
    * ಕುಂಚಿಟಿಗ ಒಕ್ಕಲಿಗ- 41,188
    * ದಾಸ್ ಒಕ್ಕಲಿಗ- 17,961
    * ಮರಸು ಒಕ್ಕಲಿಗ- 3,859

  • ಒಕ್ಕಲಿಗ ನಾಯಕತ್ವಕ್ಕಾಗಿ ಚಿಲ್ರೆ ಕೆಲ್ಸ ಮಾಡಿದ್ರೆ ಆಗಲ್ಲ: ಡಿವಿಎಸ್‌

    ಒಕ್ಕಲಿಗ ನಾಯಕತ್ವಕ್ಕಾಗಿ ಚಿಲ್ರೆ ಕೆಲ್ಸ ಮಾಡಿದ್ರೆ ಆಗಲ್ಲ: ಡಿವಿಎಸ್‌

    – ರಾಜಕೀಯ ಲಾಭಕ್ಕಾಗಿ ಪೆನ್‌ಡ್ರೈವ್‌ ರಿಲೀಸ್‌ ಮಾಡಿದ್ದಾರೆ
    – ವಿಲನ್‌ ಯಾರು ಅನ್ನೋದು ಕೊನೆಯಲ್ಲಿ ಗೊತ್ತಾಗುತ್ತೆ

    ಬೆಂಗಳೂರು: ಬಹಳ ವರ್ಷಗಳಿಂದ ಒಕ್ಕಲಿಗ (Vokkaliga) ನಾಯಕತ್ವಕ್ಕಾಗಿ ಸಂಘರ್ಷ ನಡೆಯುತ್ತಿದೆ. ಒಕ್ಕಲಿಗ ನಾಯಕತ್ವ ವಹಿಸಿಕೊಳ್ಳಲು ಈ ಚಿಲ್ಲರೆ ಕೆಲಸ ಮಾಡಿದರೆ ಆಗುವುದಿಲ್ಲ ಎಂದು ಸಂಸದ ಡಿವಿ ಸದಾನಂದ ಗೌಡ (DV Sadananda gowda) ಹೇಳಿದ್ದಾರೆ.

    ಪ್ರಜ್ವಲ್‌ ರೇವಣ್ಣ (Prajwal Revanna) ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೆನ್‌ಡ್ರೈವ್, ಸಿಡಿ ಬಿಡುವಂಥ ನೀಚ ಕೆಲಸದಿಂದ ಯಾರೂ ಒಕ್ಕಲಿಗ ನಾಯಕರಾಗುವುದಿಲ್ಲ. ರಾಜಕೀಯ ಲಾಭಕ್ಕಾಗಿ ಎಷ್ಟೋ ಮನೆಗಳನ್ನು ಪೆನ್‌ಡ್ರೈವ್ ರಿಲೀಸ್ ಮಾಡಿ ಹಾಳು ಮಾಡಿದ್ದಾರೆ. ದೇವರು ಇದ್ದಾನೋ ಇಲ್ವೋ ಅನ್ನುವಷ್ಟರ ಮಟ್ಟಿಗೆ ಸಂತ್ರಸ್ತರ ವಿಚಾರದಲ್ಲಿ ಕೆಟ್ಟ ಬೆಳವಣಿಗೆ ಆಗಿದೆ. ಪ್ರಜ್ವಲ್ ಪರಾರಿಯಲ್ಲಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಇದೆ ಎಂದು ದೂರಿದರು.

    ಸಾವಿರಾರು ಪೆನ್‌ಡ್ರೈವ್‌ಗಳಿವೆ. ಇಷ್ಟೆಲ್ಲ ಮಾಡಲು ಎಷ್ಟು ಸಮಯ, ಎಷ್ಟು ಹಣ ಬೇಕಾಗುತ್ತೆ? ಕಳೆದ ಆರು ತಿಂಗಳಿನಿಂದ ಈ ಪೆನ್‌ಡ್ರೈವ್ ಸಿದ್ಧತೆ ನಡೆಯುತ್ತಿರಬಹುದು. ಪ್ರಜ್ವಲ್ ಪ್ರಕರಣದಲ್ಲಿ ಸೂಕ್ತ ತನಿಖೆಯಾಗಿ ಸತ್ಯ ಹೊರಗೆ ಬರಬೇಕು. ಪ್ರಕರಣದಲ್ಲಿ ರಾಜಕೀಯ ಪ್ರವೇಶವಾಗಿದೆ ಎಂದರು.

    ಯಾವುದೇ ಸಂದರ್ಭದಲ್ಲೂ ಇಷ್ಟು ದೊಡ್ಡ ಗಂಭೀರ ಆರೋಪ ಯಾರ ಮೇಲೂ ಬಂದಿರಲಿಲ್ಲ. ಆರೋಪ ಬಂದಾಗಲೇ ವಿದೇಶಕ್ಕೆ ಪ್ರಜ್ವಲ್ ಹೋಗಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ಮೇಲೆ ಸಂಶಯವಿದೆ. ಹಾಗಂತ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿ ಬಲಿಪಶು ಮಾಡುವ ಕೆಲಸ ಆಗುತ್ತಿದೆ. ಒಬ್ಬ ರಾಜಕಾರಣಿಯನ್ನು ಬಲಿಪಶು ಮಾಡುವ ಅತ್ಯಂತ ನೀಚ ಕೆಲಸ ಅಂದ್ರೆ ಸಿಡಿ, ಪೆನ್‌ಡ್ರೈವ್ ಬಿಡುವುದು. ಯಾರು ಪೆನ್‌ಡ್ರೈವ್ ರಿಲೀಸ್ ಮಾಡಿದ್ದಾರೋ ಅವರನ್ನ ಹಿಡಿದು ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಸಿಡಿ, ಪೆನ್‌ಡ್ರೈವ್ ಡೈನಮೈಟ್ ಇದ್ದಂತೆ. ಪರದೆಯ ಹಿಂದೆ ಸಿಎಂ, ಡಿಸಿಎಂ ಇದ್ದಾರೆ. ರಿಮೋಟ್ ಕಂಟ್ರೋಲ್‌ ಮೂಲಕ ಎಲ್ಲವನ್ನೂ ಅವರು ನಿಯಂತ್ರಿಸುತ್ತಿದ್ದಾರೆ. ಒಂದು ಮಟ್ಟಿಗೆ ಪ್ರಜ್ವಲ್ ಪ್ರಕರಣ ಬಿಜೆಪಿಗೆ ಮುಜುಗರ ತಂದು ಡ್ಯಾಮೇಜ್‌ ಆಗಿತ್ತು. ಇವತ್ತು ಆ ಡ್ಯಾಮೇಜ್ ಬೌನ್ಸ್ ಬ್ಯಾಕ್ ಆಗಿದೆ ಎಂದು ಹೇಳಿದರು.

     

    ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಶಿವಕುಮಾರ್‌ (DK Shivakumar) ಮಧ್ಯೆ ಮೊದಲಿಂದಲೂ ಸಂಘರ್ಷ ಇದೆ. ಇಬ್ಬರೂ ನಾವು ಜೋಡೆತ್ತುಗಳು ಎನ್ನುತ್ತಿದ್ದರು. ಜೋಡೆತ್ತುಗಳು ಪರಸ್ಪರ ಹಾಯುವುದನ್ನೂ ನೋಡಿದ್ದೇವೆ. ಇಬ್ಬರೂ ಕಥಾ ನಾಯಕ ಅಂದುಕೊಂಡಿದ್ದಾರೆ. ಆದರೆ ಕಥಾನಾಯಕನಷ್ಟೇ ಬಲಿಷ್ಟ ವಿಲನ್ ಇರುತ್ತಾನೆ. ಆದರೆ ವಿಲನ್ ಯಾರು ಅಂತ ಆರಂಭದಲ್ಲಿ ಗೊತ್ತಾಗುವುದಿಲ್ಲ. ಕೊನೆಗೆ ವಿಲನ್‌ ಯಾರು ಅನ್ನೋದು ಗೊತ್ತಾಗುತ್ತದೆ ಎಂದರು.

    ಲೋಕಸಭೆ ಚುನಾವಣೆಯಲ್ಲಿ (Lok Sabha Election) ನಮ್ಮ ಪರ ವಾತಾವರಣ ಇದೆ. ಕಳೆದ ಹತ್ತು ವರ್ಷಗಳಿಂದ ನಿರಂತರ ಕೆಲಸ ಮಾಡಿದ್ದೇವೆ, ಕಾರ್ಯಕ್ರಮ ಮಾಡಿದ್ದೇವೆ. ಕಾಂಗ್ರೆಸ್‌ನವರಲ್ಲಿ ಫೋರ್ಸ್ ಇಲ್ಲ. ಕಾಂಗ್ರೆಸ್‌ನವರು ಹಗಲಲ್ಲಿ ಚುನಾವಣೆ ಮಾಡುವುದಿಲ್ಲ. ಅವರದ್ದು ಏನಿದ್ದರೂ ರಾತ್ರಿ ಚುನಾವಣೆ ಮಾತ್ರ. ಅವರು ರಾತ್ರಿ ಹೋಗಿ ಯಾರ್ಯಾರಿಗೆ ಪೆಟ್ಟಿಗೆ ಕೊಡಬೇಕೋ ಅಂತ ರಾತ್ರಿ ರಾಜಕಾರಣ ಮಾಡುತ್ತಾರೆ. ನಾವು ಸಾಧನೆಗಳ ಮೂಲಕ ನಿರಂತರವಾಗಿ ಜನರ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

     

  • ಶುಕ್ರವಾರ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ

    ಶುಕ್ರವಾರ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ

    ಬೆಂಗಳೂರು: ರಾಜ್ಯದಲ್ಲಿ ಜಾತಿ ಜನಗಣತಿ (Caste Census) ವರದಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಇದೇ ಶುಕ್ರವಾರ ಹಿಂದುಳಿದ ವರ್ಗಗಳ ಆಯೋಗ (Backward Classes Commission) ಜಾತಿ ಜನಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

    ಈ ಜಾತಿ ಜನಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ (Intelligence Bureau) ಎಚ್ಚರಿಸಿದೆ.ಇದನ್ನೂ ಓದಿ: ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಒಪ್ಪಬಾರದು: ಒಕ್ಕಲಿಗರ ಸಭೆಯಲ್ಲಿ ನಿರ್ಣಯ

     

     

    ಇದರ ಸಾಧಕ ಭಾದಕಗಳ ವಿವರಗಳನ್ನು ಗುಪ್ತಚರ ಇಲಾಖೆ ಸಿಎಂಗೆ ವರದಿ ಸಲ್ಲಿಸಿದೆ. ಇದರಲ್ಲಿ ವರದಿಗೆ ಪ್ರಬಲ ಲಿಂಗಾಯತ (Lingayat), ಒಕ್ಕಲಿಗ (Vokkaliga) ಸಮುದಾಯಗಳಿಂದ ತೀವ್ರ ವಿರೋಧ ಬರಲಿದೆ. ಪ್ರತಿಭಟನೆಗಳು ತೀವ್ರಗೊಳ್ಳಲಿದ್ದು, ಇದಕ್ಕೆ ಕೆಲ ಕಾಂಗ್ರೆಸ್ (Congress) ಮುಖಂಡರೂ ಕೈಜೋಡಿಸಬಹುದು. ಪಕ್ಷದೊಳಗೂ ಬಿರುಕು ಸೃಷ್ಟಿಯಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

    ಸಮುದಾಯವಾರು ಭಿನ್ನಾಭಿಪ್ರಾಯ, ಸಂಘರ್ಷಕ್ಕೂ ಕಾರಣವಾಗಬಹುದು. ಒಬಿಸಿ ವರ್ಗಗಳು ಕಾಂಗ್ರೆಸ್ ಕಡೆ ಮುಖ ಮಾಡಬಹುದು. ಆದರೆ ಲಿಂಗಾಯತ ಸಮುದಾಯ ವಿಮುಖರಾಗಬಹುದು. ಒಕ್ಕಲಿಗ ಸಮುದಾಯ ಕೂಡ ಧ್ರುವೀಕರಣ ಆಗಬಹುದು. ಗ್ಯಾರಂಟಿಗಳ ಲಾಭ ದಕ್ಕದೇ ಹೋಗಬಹುದು ಎಂದು ಗುಪ್ತಚರ ವರದಿ ತಿಳಿಸಿದೆ ಎನ್ನಲಾಗಿದೆ.

     

  • ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಒಪ್ಪಬಾರದು: ಒಕ್ಕಲಿಗರ ಸಭೆಯಲ್ಲಿ ನಿರ್ಣಯ

    ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಒಪ್ಪಬಾರದು: ಒಕ್ಕಲಿಗರ ಸಭೆಯಲ್ಲಿ ನಿರ್ಣಯ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಜಾತಿ ಗಣತಿ ರೂಪದಲ್ಲಿ ಅಸಲಿ ಸವಾಲು ಈಗ ಶುರುವಾಗಿದೆ. ಕರ್ನಾಟಕದಲ್ಲಿ ಜಾತಿ ಗಣತಿ (Caste Survey) ಮಂಡನೆಗೆ ಪ್ರಬಲ ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಲಿಂಗಾಯತ – ಒಕ್ಕಲಿಗ ಸಮುದಾಯಗಳು (Lingayat Vokkaliga Community) ಆಕ್ಷೇಪ ವ್ಯಕ್ತವಾಗುತ್ತಿದೆ.

    ಹೊಸದಾಗಿ ಜಾತಿಗಣತಿ ನಡೆಸಬೇಕೆಂದು ಆದಿಚುಂಚನಗಿರಿ ಶ್ರೀಗಳು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ನಿರ್ಮಲಾನಂದನಾಥ ಶ್ರೀ, ನಂಜಾವದೂತ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ಸಮುದಾಯದ ಚಿಂತನ ಮಂಥನ ಸಭೆ ನಡೆದಿದೆ. ಸಭೆಯಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    ಕಾಂತರಾಜು ವರದಿ (Kantharaju Report) ವಿರೋಧಿಸಿ ಈ ಸಭೆಯಲ್ಲಿ 8 ಅಂಶಗಳ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತಾಡಿದ ನಿರ್ಮಲಾನಂದ ಶ್ರೀ, ಜಾತಿ ಜನಗಣತಿ ವಾಸ್ತವ ನೆಲೆಗಟ್ಟಿನಲ್ಲಿ ವರದಿ ತಯಾರಾಗಿಲ್ಲ.ಸಾಕಷ್ಟು ದೋಷಗಳಿದ್ದು, ಜಾತಿ ಜನಗಣತಿ ಬಿಡುಗಡೆ ಮಾಡಬೇಕಾದರೆ ಹೊಸದಾಗಿ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಸರ್ಕಾರದ ಭಾಗವಾಗಿರುವ ಡಿಸಿಎಂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ ಸ್ವಾಮೀಜಿಗಳು ಮಾತನಾಡುತ್ತಾರೆ ಎಂದು ಹೇಳಿ ಹೊರಟರು.

    ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸಹ ಜಾತಿಗಣತಿಯಲ್ಲಿ ಲೋಪ ಇದೆ, ಒಪ್ಪಲು ಸಾಧ್ಯವಿಲ್ಲ ಎಂದರೆ ಸಚಿವರಾದ ಚಲುವರಾಯಸ್ವಾಮಿ, ಜಾತಿ ಗಣತಿಯಲ್ಲಿ ಲೋಪ ಇದೆ, ಸರಿಪಡಿಸಲು ಸಿಎಂ ಗಮನಕ್ಕೆ ತರುತ್ತೇವೆ ಎಂದರು.

     

    ಒಕ್ಕಲಿಗರ ಸಂಘದ ಸಭೆಯ ನಿರ್ಣಯ ಏನು?
    – ಯಾವ ಕಾರಣಕ್ಕೂ ಕಾಂತರಾಜು ಕಮಿಟಿ ವರದಿ ಒಪ್ಪಬಾರದು. ಜಾತಿ ಜನಗಣತಿ ಮಾಡುವುದಾದರೆ ಹೊಸದಾಗಿ ಜಾತಿ ಆಧಾರಿತವಾಗಿ ಮಾಡಲಿ
    – ಕಾಂತರಾಜು ವರದಿಯನ್ನು ಶೈಕ್ಷಣಿಕ, ಸಾಮಾಜಿಕ ಗಣತಿ ಅಂತ ಮಾತ್ರ ಒಪ್ಪಬಹುದು. ಸರ್ಕಾರ ಸಮಯದಾಯದ ಜೊತೆ ಮಾತನಾಡುವುದಾದ್ರೆ ಶ್ರೀಗಳ ಸಮ್ಮುಖದಲ್ಲಿ ಸಭೆ ನಡೆಸಲಿ.
    – ಕಾಂಗ್ರೆಸ್‌ನ ಒಕ್ಕಲಿಗ ಶಾಸಕರು ಹಾಗೂ ಸಚಿವರು ಸರ್ಕಾರದ ಮಟ್ಟದಲ್ಲಿ ವಿರೋಧಿಸಬೇಕು. ಯಾವುದೇ ಪಕ್ಷ ಇರಲಿ ಸಮುದಾಯದ ಎಲ್ಲಾ ಶಾಸಕರು, ಸಂಸದರು ಒಂದಾಗಬೇಕು.
    – ಜಾತಿ ಗಣತಿ ಅಂಕಿ ಅಂಶ ಬಿಡುಗಡೆ ಮಾಡುವುದಾದರೆ ಮೊದಲು ಸಮುದಾಯದ ಗಮನಕ್ಕೆ ತರಬೇಕು. ಹೋರಾಟ ಅನಿವಾರ್ಯವಾದರೆ ಪಕ್ಷಾತೀತವಾಗಿ ಎಲ್ಲರೂ ಸಮುದಾಯದ ಪರ ನಿಲ್ಲಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ

    6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ

    ಬೆಂಗಳೂರು: ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ಹೊಸಕೋಟೆ (Hoskote) ಶಾಸಕ ಶರತ್ ಬಚ್ಚೇಗೌಡ (Sharath Bache Gowda) ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತೀ ಹೆಚ್ಚು ಮತಗಳನ್ನು ಹೊಂದಿರುವ ಸಮುದಾಯವೆಂದರೆ ಅದು ಒಕ್ಕಲಿಗ (Vokkaliga) ಸಮುದಾಯ. ಈ ಸಮುದಾಯ 45 ಸಾವಿರ ಮತಗಳನ್ನು ಹೊಂದಿದೆ. ಹೀಗಾಗಿ ಈ ಮತಗಳನ್ನು ಗಟ್ಟಿಗೊಳಿಸುವ ಸಲುವಾಗಿ ಶಾಸಕ ಶರತ್ ಒಕ್ಕಲಿಗರ ಸಂಘಕ್ಕೆ 6 ಕೋಟಿ ರೂ. ಮೌಲ್ಯದ ಜಮೀನನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಇದನ್ನೂ ಓದಿ ಸಾವರ್ಕರ್, ಅಂಬೇಡ್ಕರ್ ಸಿದ್ಧಾಂತದ ನಡುವೆ ಚುನಾವಣೆ: ಬಿ.ಕೆ ಹರಿಪ್ರಸಾದ್

    ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶಾಸಕ ಶರತ್ ಭರವಸೆ ನೀಡಿದ್ದರು. ಇದೀಗ ನುಡಿದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯ ಸಂಘದ ಹೆಸರಿಗೆ ಬರೆದು ಕೊಟ್ಟಿದ್ದಾರೆ.

    ದಾನ ಮಾಡಿರುವ ಜಮೀನಿನಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.ಇದನ್ನೂ ಓದಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ- ಸುನಿಲ್‌ಗೆ ಮುತಾಲಿಕ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್

    ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್

    ಬೆಂಗಳೂರು: ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರಿಗಾಗಿ (Panchamasali Lingayats and Vokkaligas) ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಪ್ರತ್ಯೇಕ ಮೀಸಲಾತಿಗೆ (Reservation) ಹೈಕೋರ್ಟ್ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದ ಪ್ರವರ್ಗ 2ಸಿ, 2ಡಿ ಮೀಸಲಾತಿಗೆ ಹೈಕೋರ್ಟ್ (High Court) ತಡೆ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ.

    ಡಿಸೆಂಬರ್ 29ರ ಸಂಪುಟ ಸಭೆಯಲ್ಲಿ ಕೈಗೊಂಡ ಮೀಸಲಾತಿ ನಿರ್ಧಾರ ಪ್ರಶ್ನಿಸಿ ರಾಘವೇಂದ್ರ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿ ಪಿಐಎಲ್ ದಾಖಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.

    court order law

    ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಯೋಗ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಸರ್ಕಾರ ಈ ವರದಿ ಪರಿಶೀಲಿಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತಂದರು.

    ಹೈಕೋರ್ಟ್ ನೀಡಿದ ತಡೆಯಾಜ್ಞೆ ಆದೇಶ ಸರ್ಕಾರವನ್ನು ಬೀಸೋ ದೊಣ್ಣೆಯಿಂದ ಪಾರು ಮಾಡಿದೆ ಎಂದೇ ಹೇಳಬಹುದು. ಯಾಕಂದ್ರೆ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಹೀಗಾಗಿ ಮೀಸಲಾತಿ ಯಾವ ರೀತಿ ಹಂಚಿಕೆ ಆಗುತ್ತೆ ಎಂಬುದರ ಕಲ್ಪನೆ ಯಾರಲ್ಲೂ ಇಲ್ಲ. ಒಂದೊಮ್ಮೆ ಅಧಿಸೂಚನೆ ಪ್ರಕಟವಾಗಿದ್ದರೆ ಭಾರೀ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇತ್ತು. ಇದನ್ನೂ ಓದಿ: ಸುಮಲತಾ ಅಂಬರೀಶ್‌ಗೆ ಬಿಜೆಪಿ ಪಕ್ಷ ಸೇರ್ಪಡೆ ಆಹ್ವಾನ ನೀಡಿದ್ದೇವೆ: ಅಶ್ವಥ್ ನಾರಾಯಣ

    ಈಗಾಗಲೇ ಪಂಚಮಸಾಲಿ ಸಮುದಾಯ ತಗಾದೆ ತೆಗೆದಿತ್ತು. ನಮ್ಮನ್ನು 2ಎಗೆ ಸೇರಿಸಬೇಕೆಂದು ಬೇಡಿಕೆ ಇಟ್ಟು, ಇವತ್ತಿಗೆ ಗಡುವು ಕೂಡ ನೀಡಿತ್ತು. 2ಎ ಮೀಸಲಾತಿ ಕೊಡದಿದ್ದರೆ ಜನವರಿ 13ರಿಂದ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯಸ್ವಾಮೀಜಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಬೆಂಗಳೂರು: ಕರಾವಳಿ ಮೂಲದವರಾದ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇದೀಗ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿದೆ.

    ರಾಜ್ಯ ರಾಜಕೀಯದಿಂದ ಕೇಂದ್ರ ಸಚಿವರಾಗುವ ಮಟ್ಟಿಗೆ ಬೆಳೆದಿರುವ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಪ್ರಸ್ತುತ ಇರುವ ಸರ್ ನೇಮ್ ‘ಕರಂದ್ಲಾಜೆ’ ಬದಲಿಗೆ ‘ಗೌಡ’ ಸೇರಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದ್ದು, ಮುಂದೆ ಅವರ ಹೆಸರು ‘ಶೋಭಾ ಗೌಡ’ (Shobha Gowda) ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೇರಳ, ತಮಿಳುನಾಡಿನಲ್ಲೂ PFI ಬ್ಯಾನ್

    ಹೆಸರು ಬದಲಾವಣೆ ಯಾಕೆ..?:
    ಇದೀಗ ಯಾಕೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಹೆಸರು ಬದಲಾವಣೆಗೆ ಜ್ಯೋತಿಷಿಗಳ ಸಲಹೆಯೋ? ಸಂಖ್ಯಾಶಾಸ್ತ್ರವೋ? ಅಥವಾ ದೆಹಲಿ ಮೂಲದ ನಾಯಕರ ಸಲಹೆಯೋ ಎಂಬ ಅನುಮಾನವು ಇದೆ. ಬಿಜೆಪಿಯಲ್ಲಿ (BJP) ಒಂದು ವರ್ಗದ ಪ್ರಕಾರ 2023ರ ಚುನಾವಣೆಗೆ ತಯಾರಿ ನಡೆಸಿ ಶೋಭಾ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.  ಇದನ್ನೂ ಓದಿ: PFI ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗ್ತಿದೆ: ಆರಗ ಜ್ಞಾನೇಂದ್ರ

    ಚುನಾವಣಾ ವರ್ಷ ಆಗಿರುವುದರಿಂದಾಗಿ ಈಗಾಗಲೇ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್ ಏನಾದರೂ ಹಾಕಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಶೋಭಾ ಕರಂದ್ಲಾಜೆ ತಂದೆ ದಿವಂಗತ ಮೋನಪ್ಪ ಗೌಡ ಆದರೆ ಶೋಭಾ ಈವರೆಗೆ ತಮ್ಮ ಸರ್ ನೇಮ್ ಆಗಿ ಕರಂದ್ಲಾಜೆ ಬಳಸುತ್ತಿದ್ದರು. ಇದೀಗ ಕರಂದ್ಲಾಜೆ ಬದಲಿಗೆ ಗೌಡ ಸೇರಿಸಿ 2023ರ ಚುನಾವಣಾ ಅಖಾಡದಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಫ್ಯಾಕ್ಟರ್, ಕರಾವಳಿ ಭಾಗದಲ್ಲಿ ಹಿಂದುತ್ವ ಫ್ಯಾಕ್ಟರ್‌ಗೆ ಕೈ ಹಾಕಿದ್ಯಾ ಬಿಜೆಪಿ ಹೈಕಮಾಂಡ್ ಎಂಬ ಅನುಮಾನ ಮೂಡಿದೆ.

    ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರ ಅಧಿಕಾರವಧಿ ಅಂತ್ಯಗೊಂಡಿದೆ. ಇದೀಗ ಮುಂದಿನ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಶೋಭಾ ಕರಂದ್ಲಾಜೆ ಕೂಡ ಇದ್ದು, ಹೀಗಾಗಿ ಹೆಸರು ಬದಲಾವಣೆಯೊಂದಿಗೆ ಸಿ.ಟಿ ರವಿ (C.T Ravi) ಅವರ ಪ್ರಬಲ ಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ. ಇದೀಗ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಸಿ.ಟಿ ರವಿ ಹಾಗೂ ಶೋಭಾ ಒಕ್ಕಲಿಗರು (Vokkaliga). ಇದೀಗ ಇವರಿಬ್ಬರಲ್ಲಿ ಒಬ್ಬರಿಗೆ ಮಹತ್ವದ ಸ್ಥಾನ ನೀಡಿ ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಶೋಭಾ ಅವರಿಗೆ ಉನ್ನತ ಸ್ಥಾನಮಾನ ನೀಡಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ಹೆಸರಿನೊಂದಿಗೆ ಒಕ್ಕಲಿಗರ ಮತ ಸೆಳೆಯುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಹಾಕಿಕೊಂಡಂತಿದೆ. ಇದರೊಂದಿಗೆ ಈಗಾಗಲೇ ಕಾಂಗ್ರೆಸ್‍ನಲ್ಲಿ ಒಕ್ಕಲಿಗ ನಾಯಕರಾಗಿ ಡಿ.ಕೆ ಶಿವಕುಮಾರ್ (D.K Shivakumar) ಕಾಣಿಸಿಕೊಂಡರೆ, ಜೆಡಿಎಸ್‍ನಲ್ಲಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಪ್ರಬಲರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಜೆಪಿಯಿಂದ ಶೋಭಾ ಕರಂದ್ಲಾಜೆಯನ್ನು ಒಕ್ಕಲಿಗ ನಾಯಕಿಯಾಗಿ ಮಾಡಿ ಕಾಂಗ್ರೆಸ್ (Congress), ಜೆಡಿಎಸ್‍ಗೆ (JDS) ಟಕ್ಕರ್ ನೀಡಲು ಬಿಜೆಪಿ ಹೈಕಮಾಂಡ್ ಚಿಂತಿಸಿದಂತಿದೆ.

    ಈ ನಡುವೆ ಶೋಭಾ ಕರಂದ್ಲಾಜೆ ಆಪ್ತ ವಲಯ ಹೆಸರು ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದೆ. ಹಾಗಾದ್ರೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ನಿಜಕ್ಕೂ ಮುಂದಾಗಿದ್ದಾರಾ? ಅಥವಾ ಬಿಜೆಪಿಯೊಳಗಿನ ಆಂತರಿಕ ರಾಜಕೀಯ ರೆಕ್ಕೆಪುಕ್ಕನಾ? ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]