Tag: Voice dubbing

  • Adheera is back in action – ಕೆಜಿಎಫ್ 2ಗೆ ವಾಯ್ಸ್ ಕೊಟ್ಟ ಸಂಜಯ್ ದತ್

    Adheera is back in action – ಕೆಜಿಎಫ್ 2ಗೆ ವಾಯ್ಸ್ ಕೊಟ್ಟ ಸಂಜಯ್ ದತ್

    ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರು ಕೆಜಿಎಫ್-2 ಸಿನಿಮಾಕ್ಕೆ ವಾಯ್ಸ್ ಡಬ್ಬಿಂಗ್ ನೀಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಇದೇ 2022ರ ಏಪ್ರಿಲ್ 14ರಂದು ತೆರೆ ಮೇಲೆ ಬರಲು ಸಿದ್ಧವಾಗಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸಂಜಯ್ ದತ್ ಅವರು ಕೆಜಿಎಫ್- 2 ಸಿನಿಮಾಕ್ಕೆ ವಾಯ್ಸ್ ಡಬ್ಬಿಂಗ್ ನೀಡಿರುವ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಪ್ರಶಾಂತ್ ನೀಲ್ ಜೊತೆಗೆ ಕಾಣಿಸಿಕೊಂಡಿರುವ ಸಂಜಯ್ ದತ್ ಅವರು, ಅಧೀರಾ ಇಸ್ ಬ್ಯಾಕ್ ಇನ್ ಆ್ಯಕ್ಷನ್. ಕೆಜಿಎಫ್-2 ಡಬ್ಬಿಂಗ್ ಸೆಷನ್ ಮುಗಿದಿದೆ ಮತ್ತು 2020ರ ಏಪ್ರಿಲ್ 14ರಂದು ಮೇಲೆ ಬರಲಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫೆಬ್ರವರಿ 24ಕ್ಕೆ ತೆರೆ ಮೇಲೆ ವಿಕ್ರಾಂತ್ ರೋಣ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ಕೆಜಿಎಫ್-2 ಸಿನಿಮಾವನ್ನು ನಿರ್ದೇಶಿಸಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕೆಜಿಎಫ್-2 ಸಿನಿಮಾ 2018 ರ ಬ್ಲಾಕ್‍ಬಸ್ಟರ್ ಹಿಟ್ ಸಿನಿಮಾವಾದ ಕೆಜಿಎಫ್ ಭಾಗ-1ರ ಮುಂದುವರಿದ ಭಾಗವಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯಶ್ ಅಭಿನಯಿಸಿದ್ದು, ಪ್ರಮುಖ ಪಾತ್ರದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ಸೇರಿದಂತೆ ಹಲವಾರು ಮಂದಿ ಅಭಿನಯಿಸಿದ್ದಾರೆ.

    ಕೆಜಿಎಫ್-2 ಸಿನಿಮಾ ಕನ್ನಡ ಸೇರಿದಂತೆ ಏಕಕಾಲದಲ್ಲಿ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

  • ಅದ್ಭುತ ಅನುಭವ, ನೂತನ ಪಾತ್ರ: ಸುದೀಪ್

    ಅದ್ಭುತ ಅನುಭವ, ನೂತನ ಪಾತ್ರ: ಸುದೀಪ್

    ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ವಾಯ್ಸ್ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಸಿನಿಮಾಕ್ಕೆ ವಾಯ್ಸ್ ಡಬ್ಬಿಂಗ್ ಆರಂಭಿಸಿರುವುದ ಬಗ್ಗೆ ತಿಳಿಸಿದ್ದ ಸುದೀಪ್, ಇದೀಗ ಚಿತ್ರದ ವಾಯ್ಸ್ ಡಬ್ಬಿಂಗ್ ಮುಗಿದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಸುದೀಪ್, ವಿಕ್ರಾಂತ್ ರೋಣ ವಾಯ್ಸ್ ಡಬ್ಬಿಂಗ್‍ನನ್ನು ಮುಗಿಸಿದೆ. ಅದ್ಭುತವಾದ ಅನುಭವ, ನೂತನ ಪಾತ್ರ. 3ಡಿ ಆವೃತ್ತಿಯಲ್ಲಿರುವ ಕೆಲವು ಸ್ಯಾಂಪಲ್‍ಗಳನ್ನು ನೋಡಿದೆ. ವಿಆರ್ ಪ್ರಪಂಚದಲ್ಲಿ ನೋಡಿ ರೋಮಾಂಚನವಾಯಿತು. ಇದೀಗ ಸಾಂಗ್ ಶೂಟಿಂಗ್‍ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ಕೆ.ಮಂಜು ಬಂಡವಾಳ ಹೂಡಿದ್ದಾರೆ. ತ್ರಿಡಿ ಟೆಕ್ನಾಲಜಿಯಲ್ಲಿ ಮೂಡಿ ಬರುತ್ತಿರುವ ದೊಡ್ಡ ಬಜೆಟ್‍ನ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ವಿಶೇಷವೆಂದರೆ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ವಾಯ್ಸ್ ಡಬ್ ನೀಡುತ್ತಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಡಬ್ಬಿಂಗ್ ಶುರು ಮಾಡಿದ ನಟ ಕಿಚ್ಚ

     

    View this post on Instagram

     

    A post shared by KicchaSudeepa (@kichchasudeepa)

  • ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್

    ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಮಾಳವಿಕ ಅವಿನಾಶ್ ಚಿತ್ರಕ್ಕೆ ವಾಯ್ಸ್ ಡಬ್ಬಿಂಗ್ ನೀಡುವ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಾಕಿ ಇತ್ತು. ಇದೀಗ 50 ದಿನಗಳು ಕಳೆದ ಬಳಿಕ ಕೆಜಿಎಫ್ ಸಿನಿಮಾದಲ್ಲಿ ಸುದ್ದಿ ಮಾಧ್ಯಮವೊಂದರ ಮುಖ್ಯ ಸಂಪಾದಕಿ ದೀಪಾ ಹೆಗ್ಡೆ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಮಾಳವಿಕ ಅವಿನಾಶ್ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ನೀಡುತ್ತಿರುವ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೊಗಳು ವೈರಲ್ ಆಗುತ್ತಿದೆ.

    ಬೆಂಗಳೂರಿನ ಡಬ್ಬಿಂಗ್ ಸ್ಟುಡಿಯೋನಲ್ಲಿ ಮಾಳವಿಕರವರು ವಾಯ್ಸ್ ಡಬ್ಬಿಂಗ್ ನೀಡುತ್ತಿರುವ ಕೆಲವು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಜೀವನವು ಸಾಮಾನ್ಯ ಸ್ಥಿತಿಗೆ ಬರದೇ ಇರಬಹುದು. ಆದರೆ ಅದರ ಕೆಲವು ಹೋಲಿಕೆ, 50 ದಿನಗಳ ನಂತರ ಕೆಲಸ.. ಎಂದು ಮಾಳವಿಕ ಅವಿನಾಶ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟ ಸಂಜಯ್ ದತ್, ಶ್ರೀನಿಧಿ, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕ ಅವಿನಾಶ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

     

    View this post on Instagram

     

    A post shared by Malavika Avinash (@malavikaavinash)

  • ಅಣ್ಣಾವ್ರನ್ನ ಫಾಲೋ ಮಾಡ್ತಿದ್ದಾರಾ ಯಶ್?

    ಅಣ್ಣಾವ್ರನ್ನ ಫಾಲೋ ಮಾಡ್ತಿದ್ದಾರಾ ಯಶ್?

    ಬೆಂಗಳೂರು: ಸ್ಯಾಂಡಲ್‍ವುಡ್ ವರನಟ ಡಾ.ರಾಜ್ ಕುಮಾರ್‍ರವರು ಸಾಗುತ್ತಿದ್ದ ಹಾದಿಯನ್ನೇ ರಾಕಿಂಗ್ ಸ್ಟಾರ್ ಯಶ್ ಅನುಸರಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಗಾಂಧೀನಗರದ ಗಲ್ಲಿಯೊಳಗೆ ಇದೀಗ ಹರಿದಾಡುತ್ತಿದೆ.

    ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಸದ್ಯ ಸಿನಿಮಾಕ್ಕೆ ರಾಕಿಂಗ್ ಸ್ಟಾರ್ ಯಶ್ ವಾಯ್ಸ್ ಡಬ್ಬಿಂಗ್ ನೀಡಲು ಆರಂಭಿಸಿದ್ದಾರೆ. ಇತ್ತೀಚೆಗೆ ಯಶ್ ಹಾಗೂ ಪ್ರಶಾಂತ್ ನೀಲ್ ವಾಯ್ಸ್ ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ಹೌದು ನಟ ಯಶ್ ಡಬ್ಬಿಂಗ್ ವಿಚಾರದಲ್ಲಿ ಡಾ.ರಾಜ್ ಕುಮಾರ್‍ರನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಸಿನಿಮಾದ ರಾಕಿ ಬಾಯ್ ಪಾತ್ರಕ್ಕೆ ವಾಯ್ಸ್ ಡಬ್ ನೀಡಲು ಯಶ್ ಆಕಾಶ್ ಸ್ಟುಡಿಯೋಗೆ ಬೆಳಗ್ಗೆ 6 ಗಂಟೆಗೆ ಹೋಗಿ 9ರವರೆಗೂ ತಮ್ಮ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರಂತೆ. ಬೆಳಗಿನ ವಾತಾವರಣದಲ್ಲಿ ಬೇಸ್ ವಾಯ್ಸ್ ಹೊರಬರುತ್ತದೆ. ಇದರಿಂದ ಧ್ವನಿ ಉತ್ತಮವಾಗಿ ಕೇಳಿಬರುತ್ತದೆ ಎಂಬ ಕಾರಣಕ್ಕೆ ಯಶ್ ಬೆಳಗಿನ ಜಾವ ಪಾತ್ರಕ್ಕೆ ವಾಯ್ಸ್ ಡಬ್ ನೀಡುತ್ತಿದ್ದಾರಂತೆ.

    ಈ ಮುನ್ನ ಗಾನ ಗಂಧರ್ವ ಡಾ. ರಾಜ್ ಕುಮಾರ್ ಕೂಡ ಬೆಳಗಿನ ಜಾವವೇ ಹಾಡುಗಳ ರೆಕಾರ್ಡಿಂಗ್‍ನನ್ನು ಹೆಚ್ಚಾಗಿ ಮಾಡುತ್ತಿದ್ದರಂತೆ. ಹಾಗಾಗಿ ಇಂದಿಗೂ ಡಾ.ರಾಜ್ ಕುಮಾರ್ ಧ್ವನಿ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿದೆ ಎಂದೇ ಹೇಳಬಹುದು.

    ಕೆಜಿಎಫ್- 2 ಸಿನಿಮಾದಲ್ಲಿ ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಅಭಿನಯಿಸಿದ್ದು, ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಸಂಜಾಯ್‍ದತ್, ರವೀನಾ ಟಂಡನ್, ಪ್ರಕಾಶ್ ರೈ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಅಲ್ಲದೆ ಕೇಜಿಎಫ್-2 ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಜುಲೈ 16ರಂದು ಬಿಡುಗಡೆಗೊಳ್ಳುತ್ತಿದೆ.

  • ಕೆಜಿಎಫ್ -2 ಹಿಂದಿಗೆ ವಾಯ್ಸ್ ಡಬ್ ನೀಡಲಿದ್ದಾರಾ ಯಶ್?

    ಕೆಜಿಎಫ್ -2 ಹಿಂದಿಗೆ ವಾಯ್ಸ್ ಡಬ್ ನೀಡಲಿದ್ದಾರಾ ಯಶ್?

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿರುವ ಕೆಜಿಎಫ್ ಚಾಪ್ಟರ್ 2ಗೆ ಯಶ್ ಅವರೇ ಹಿಂದಿಗೆ ವಾಯ್ಸ್ ನೀಡುವ ಸಾಧ್ಯತೆಯಿದೆ.

    ಈ ವರ್ಷದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2. ರಾಕಿಂಗ್ ಸ್ಟಾರ್ ಯಶ್ ಮತ್ತೆ ನಟಿ ಶ್ರೀ ನಿಧಿ ಜೊತೆ ರಾಕಿಂಗ್ ಆಗಿ ಬಿಗ್ ಸ್ಕ್ರೀನ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇನ್ನೂ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದು, ಕೆಜಿಎಫ್-2 ಸಿನಿಮಾವನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಬಿಡುಗಡೆಗೊಳ್ಳುತ್ತಿದೆ. ಎಲ್ಲ ನಟರೂ ತಮ್ಮ ಸಿನಿಮಾಗಳಿಗೆ ಧ್ವನಿ ಕೊಡಿಸಲು ಡಬ್ಬಿಂಗ್ ಆರ್ಟಿಸ್ಟ್‍ಗಳ ಸಾಲುಗಳನ್ನೇ ಹೊಂದಿರುತ್ತಾರೆ. ಆದರೆ ಯಶ್ ಈ ವಿಚಾರವಾಗಿ ಎಲ್ಲ ನಟರಿಗಿಂತಲೂ ವಿಭಿನ್ನವಾಗಿ ಯೋಚಿಸಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ದಕ್ಷಿಣ ಭಾರತದ ಸ್ಟಾರ್ ನಟರ ಹಿಂದಿ ಸಿನಿಮಾಗಳಿಗೆ ಡಬ್ಬಿಂಗ್ ಕಲಾವಿದರು ಧ್ವನಿ ನೀಡುತ್ತಿದ್ದಾರೆ. ಆದರೆ ಯಶ್ ಈ ಬಾರಿ ತಮ್ಮ ಪಾತ್ರಕ್ಕೆ ತಾವೇ ನೀಡಲಿದ್ದಾರೆ ಎಂದು ವರದಿಯಾಗಿದೆ.

    ಜನವರಿ 29ರಂದು ಟ್ವಿಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಸಿನಿಮಾ 2021ರ ಜುಲೈ 16ಕ್ಕೆ ಸಿನಿಮಾ ಬಿಗ್ ಸ್ಕ್ರೀನ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ಚಿತ್ರದ ಮುಖ್ಯಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರ ಎಂಬ ಪಾತ್ರದಲ್ಲಿ ಮಿಂಚಲಿದ್ದು, ಜೊತೆಗೆ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಬಾಲಿವುಡ್ ನಟ ಸಂಜಯ್ ದತ್ ಮತ್ತು ರವೀನಾ ಜೊತೆ ಕೆಲಸ ಮಾಡಿರುವ ಅನುಭವ ಹಂಚಿಕೊಂಡಿರುವ ಯಶ್, ಇಬ್ಬರ ಜೊತೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು. ಸಂಜಯ್ ಸರ್ ವೃತ್ತಿಪರ ಆಲೋಚನೆ ಮತ್ತು ಪರಿಶ್ರಮಕ್ಕೆ ಉದಾಹರಣೆಯಾಗಿದ್ದಾರೆ. ಅವರು ಆರೋಗ್ಯ ಸ್ಥಿತಿಯನ್ನು ಲೆಕ್ಕಿಸದೇ ತಮ್ಮ ಪಾತ್ರ ಮತ್ತು ಸಿನಿಮಾ ಕುರಿತಂತೆ ತೋರಿಸಿದ ಉತ್ಸಾಹ ಬಹಳ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

    ರವೀನಾ ಮ್ಯಾಮ್ ಕೂಡ ಬಹುಮುಖ ಪ್ರತಿಭೆ ಹೊಂದಿರುವಂತಹ ಉತ್ತಮ ನಟಿ. ಅವರದ್ದು ರೋಮಾಂಚಕ ವ್ಯಕ್ತಿತ್ವ. ಇಬ್ಬರು ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿದ್ದು ನನಗೆ ಅದ್ಭುತ ಹಾಗೂ ಖುಷಿ ಅನುಭವ ತಂದಿದೆ ಎಂದು ಯಶ್ ತಿಳಿಸಿದ್ದಾರೆ.