Tag: Vladimir putin

  • ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

    ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

    ಮಾಸ್ಕೋ: ಉಕ್ರೇನ್ (Ukrain) ದೇಶದೊಂದಿಗೆ ಸುದೀರ್ಘ ಹೋರಾಟವನ್ನು ನಡೆಸುವ ಸಲುವಾಗಿ ರಷ್ಯಾ (Russia) ದೇಶವು ಈ ವರ್ಷ 4 ಲಕ್ಷ ಗುತ್ತಿಗೆ ಸೈನಿಕರನ್ನು ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

    ಉಕ್ರೇನ್ ಮುಂಬರುವ ತಿಂಗಳುಗಳಲ್ಲಿ ಯುರೋಪ್ (Europe) ಮತ್ತು ಯುಎಸ್‌ನಲ್ಲಿ (US) ತರಬೇತಿಯಿಂದ ಹೊಸ ಪಡೆಗಳೊಂದಿಗೆ ಮತ್ತು ಹೊಸದಾಗಿ ಸರಬರಾಜು ಮಾಡಿದ ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪ್ರತಿದಾಳಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇದನ್ನೂ ಓದಿ: ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ 

    ತನ್ನ ಶ್ರೇಣಿಯನ್ನು ತುಂಬಿಸಲು ಮತ್ತು ವಿಸ್ತರಿಸಲು, ರಷ್ಯಾ ಈಗಾಗಲೇ ಗುತ್ತಿಗೆ ಸೈನಿಕರಿಗೆ ನೇಮಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಸೈನಿಕರು ವೇತನಕ್ಕಾಗಿ ಹಲವಾರು ವರ್ಷಗಳವರೆಗೆ ಸೇವೆ ಸಲ್ಲಿಸುತ್ತಾರೆ. ಪ್ರಾದೇಶಿಕ ಅಧಿಕಾರಿಗಳಿಗೆ ನೇಮಕಾತಿಗಾಗಿ ಕೋಟಾಗಳನ್ನು ನೀಡಲಾಗಿದ್ದು, ಡ್ರಾಫ್ಟ್ ಬೋರ್ಡ್‌ಗಳಿಗೆ ಬರಲು ಸಂಭಾವ್ಯ ಸ್ವಯಂಸೇವಕರಿಗೆ ಸಮನ್ಸ್ ನೀಡುತ್ತಿದ್ದಾರೆ. ಆರಂಭದಲ್ಲಿ ಅಧಿಕಾರಿಗಳು, ಅನುಭವಿಗಳು ಮತ್ತು ಗ್ರಾಮೀಣ ನಿವಾಸಿಗಳನ್ನು ಗುರಿಯಾಗಿಸಿಕೊಂಡು ನೇಮಕಾತಿಯನ್ನು ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ಆದರೆ ಈ ವರ್ಷ 4 ಲಕ್ಷ ಗುತ್ತಿಗೆ ಸೈನಿಕರನ್ನು ಆಕರ್ಷಿಸುವ ಗುರಿಯು ಅವಾಸ್ತವಿಕವಾಗಿದೆ. 2022ರ ಫೆಬ್ರವರಿ 24 ರಂದು ಆಕ್ರಮಣವನ್ನು ಪ್ರಾರಂಭಿಸುವ ಮೊದಲು ರಷ್ಯಾ ಹೊಂದಿದ್ದ ವೃತ್ತಿಪರ ಪಡೆಗಳ ಒಟ್ಟು ಸಂಖ್ಯೆಗೆ ಇದು ಸರಿಸುಮಾರು ಸಮಾನವಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ 

    ರಕ್ಷಣಾ ಸಚಿವ (Defence Minister) ಸೆರ್ಗೆಯ್ ಶೋಯಿಗು (Sergei Shoigu) ಡಿಸೆಂಬರ್‌ನಲ್ಲಿ ರಷ್ಯಾ ಒಪ್ಪಂದದ ಸೈನಿಕರ ಸಂಖ್ಯೆಯನ್ನು 2023ರ ಅಂತ್ಯದ ವೇಳೆಗೆ 5,21,000 ಕ್ಕೆ ಹೆಚ್ಚಿಸುವುದಾಗಿ ಹೇಳಿದರು. ಇದು ಆಕ್ರಮಣದ ಮೊದಲು 4,05,000 ಆಗಿತ್ತು. ಈ ಪಡೆಗಳು ವಿಶಿಷ್ಟವಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತವೆ. ಇದನ್ನೂ ಓದಿ: ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಿ iPhone-14 ಖರೀದಿಸಿದ 12ರ ಬಾಲಕಿ

    ಕಳೆದ ವರ್ಷದ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾದ ಮಿಲಿಟರಿಯ (Military) ಗಾತ್ರವನ್ನು ಪ್ರಸ್ತುತ 1.15 ಮಿಲಿಯನ್‌ನಿಂದ 1.5 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯನ್ನು ಅನುಮೋದಿಸಿದರು. ಈ ಯೋಜನೆಯು 2026ರ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

  • ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ನಡೆದ ಮಕ್ಕಳ ಅಪಹರಣ ಹಾಗೂ ಯುದ್ಧ ಅಪರಾಧಗಳ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ವಾರೆಂಟ್ ಹೊರಡಿಸಿದೆ.

    ನ್ಯಾಯಾಲಯವು ತನ್ನ ವಾರೆಂಟ್‌ನಲ್ಲಿ, ಉಕ್ರೇನಿನಿಂದ ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡುವ ಮತ್ತು ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ (War Crimes) ಪುಟಿನ್ ಜವಾಬ್ದಾರಿಯಾಗಿದ್ದಾರೆ. ಜನರನ್ನು ಕಾನೂನು ಬಾಹಿರವಾಗಿ ವರ್ಗಾಯಿಸಿರುವುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ಹೇಳಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ರಷ್ಯಾದ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನೂ ಬಂಧಿಸಲು ವಾರೆಂಟ್ ಹೊರಡಿಸಿದೆ. ಆದರೆ ಈ ಆರೋಪವನ್ನು ಮಾಸ್ಕೋ ತಳ್ಳಿಹಾಕಿದೆ. ರಷ್ಯಾದ ಸೇನಾಪಡೆಗಳು ದೌರ್ಜನ್ಯ ಎಸಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಉತ್ತರ ಕೊರಿಯಾ ಕೇವಲ 33 ಸೆಕೆಂಡ್‌ಗಳಲ್ಲಿ ಅಮೆರಿಕವನ್ನ ನಾಶ ಮಾಡುತ್ತೆ – ಚೀನಾ ತಜ್ಞರ ಸ್ಫೋಟಕ ಹೇಳಿಕೆ

  • ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಮಾಸ್ಕೋ: ರಷ್ಯಾದ ಕೋವಿಡ್-19 ಲಸಿಕೆ (Covid Vaccine) ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಕರಿಸಿದ ವಿಜ್ಞಾನಿ (Russian Scientist) ಆಂಡ್ರೆ ಬೊಟಿಕೋವ್ ಅವರನ್ನ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಮಾಸ್ಕೋದ ಅಪಾರ್ಟ್ಮೆಂಟ್‌ನಲ್ಲಿ ಅವರನ್ನ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.

    ಬೊಟಿಕೋವ್ (47) ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    Vladimir Putin

    ಕೊಲೆಯು ಕೌಟುಂಬಿಕ ಸಂಘರ್ಷದ ಕಾರಣಗಳಿಂದ ನಡೆದಿದೆ ಎನ್ನಲಾಗಿದ್ದು, 29 ವರ್ಷದ ವ್ಯಕ್ತಿಯು ಬೊಟಿಕೋವ್ ಕತ್ತಿಗೆ ಬೆಲ್ಟ್‌ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ ಆರೋಪಿಯೇ ಸ್ವತಃ ಇದನ್ನ ಒಪ್ಪಿಕೊಂಡಿದ್ದಾನೆ. ಆರೋಪಿ ಈ ಹಿಂದೆಯೂ ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

    2020 ರಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು. 2021 ರಲ್ಲಿ ಕೋವಿಡ್ ಲಸಿಕೆಯಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನೀಡಿ ಗೌರವಿಸಿದ್ದರು.

  • ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಕೀವ್: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭವಿಷ್ಯ ನುಡಿದಿದ್ದಾರೆ.

    ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್‌ನ ‘ಇಯರ್’ (Year) ಹೆಸರಿನ ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

    ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಇದನ್ನೂ ಓದಿ: ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

    ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

  • ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ಯುದ್ಧದ ಸ್ಥಿತಿ ನಿರ್ಮಾಣವಾಗಲು ಪಾಶ್ಚಿಮಾತ್ಯರೇ ಕಾರಣ. ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಅವರೇ. ಅದರಿಂದ ಸಂತ್ರಸ್ತರಾದವರು, ಎಲ್ಲದಕ್ಕೂ ಪಾಶ್ಚಿಮಾತ್ಯ ಗುಂಪೇ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪರೋಕ್ಷವಾಗಿ ಅಮೆರಿಕಾವನ್ನ ದೂಷಿಸಿದ್ದಾರೆ.

    ಅಮೆರಿಕ (USA) ಅಧ್ಯಕ್ಷ ಜೋ ಬೈಡನ್ (Joe Biden) ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಉಕ್ರೇನ್ ಮೇಲಿನ ಸಮರ ಶುರುವಾಗಿ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ರಷ್ಯಾ ಅಸೆಂಬ್ಲಿಯಲ್ಲಿ ಮಾತನಾಡಿದ ಪುಟಿನ್, ಪಾಶ್ಚಿಮಾತ್ಯರು ಸ್ಥಳೀಯ ಬಿಕ್ಕಟ್ಟನ್ನು ಜಾಗತಿಕ ಸಂಘರ್ಷವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಲಿದ್ದೇವೆ. ರಾಷ್ಟ್ರದ ಉಳಿಯುವಿಕೆಯ ಕುರಿತಾಗಿ ನಾವು ಮಾತನಾಡುತ್ತಿದ್ದೇವೆ ಎಂದು ಪುಟಿನ್ ಎಚ್ಚರಿಸಿದ್ದಾರೆ.

    ಉಕ್ರೇನ್ ಜೊತೆಗೆ ಯುದ್ಧ ತಡೆಯಲು ರಷ್ಯಾ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಶಾಂತಿಯುತ ಮಾತುಕತೆಯನ್ನೂ ನಡೆಸುತ್ತಿದೆ. ಆದ್ರೆ ನಮ್ಮ ಬೆನ್ನ ಹಿಂದೆಯೇ ನಿಂತು ಅನೇಕ ತಂತ್ರಗಳನ್ನು ಎಣೆಯಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಸಹೋದರ-ಸಹೋದರಿ ಕುರಿತು ಅಶ್ಲೀಲ ಪ್ರಶ್ನೆ; ಪಾಕ್‌ ವಿವಿ ವಿರುದ್ಧ ಆಕ್ರೋಶ

    ಪಾಶ್ಚಿಮಾತ್ಯರು ಜಗತ್ತಿನಾದ್ಯಂತ ಗೊಂದಲ ಮತ್ತು ಯುದ್ಧವನ್ನು ಬಿತ್ತುವ ಕೆಲಸ ಮಾಡಿದರು. ಪಾಶ್ಚಿಮಾತ್ಯರ ಬೆಂಬಲ ಪಡೆದ ಉಕ್ರೇನ್ ಕ್ರಿಮಿಯಾ ಮೇಲೆ ಆಕ್ರಮಣಕ್ಕೆ ಯೋಜನೆ ರೂಪಿಸಿತ್ತು. ಪಾಶ್ಚಿಮಾತ್ಯರು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೇನೆಯ ದೃಷ್ಟಿಯಲ್ಲಿ ಉಕ್ರೇನ್‌ನ್ನು ವಶಕ್ಕೆ ಪಡೆದರು. ಕೀವ್ ಪ್ರಭುತ್ವದಲ್ಲಿ ಸ್ವತಃ ಉಕ್ರೇನ್ ಜನರೇ ಒತ್ತೆಯಾಳುಗಳಾದರು ಎಂದು ಪುಟಿನ್ ಹೇಳಿದ್ದಾರೆ.

    Joe Biden 2

    1991ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯಾದ ದಿನಗಳಿಂದಲೂ ಉಕ್ರೇನ್ ಬಿಕ್ಕಟ್ಟು ಮುಂದುವರಿದಿದೆ. ಯುದ್ಧದ ಆರಂಭದಿಂದ ಈವರೆಗೂ ರಷ್ಯಾದ ಪಡೆಗಳು ಪ್ರಮುಖವಾಗಿ ಮೂರು ಬಾರಿ ಯುದ್ಧ ಭೂಮಿಯಿಂದ ಹಿಂದಕ್ಕೆ ಮರಳಿವೆ. ಆದರೆ ಈಗಲೂ ಉಕ್ರೇನ್‌ನ 5ನೇ ಒಂದು ಭಾಗದಷ್ಟು ಪ್ರದೇಶವು ರಷ್ಯಾ ನಿಯಂತ್ರಣದಲ್ಲಿದೆ. ಯುದ್ಧದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ

    ಇದೀಗ ವಾಷಿಂಗ್ಟನ್‌ನಲ್ಲಿ ಕೆಲವು ಮಂದಿ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಹಾಗಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹಾಗೂ ನ್ಯೂಕ್ಲಿಯರ್ ಕಾರ್ಪೊರೇಷನ್ ಸಹ ರಷ್ಯಾದ ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಲು ಸಜ್ಜಾಗಬೇಕಿದೆ. ರಷ್ಯಾ-ಅಮೆರಿಕ ನಡುವಿನ ಶಸ್ತ್ರಾಸ್ತ್ರಗಳ ನಿಯಂತ್ರಣ ಒಪ್ಪಂದದಿಂದ (START-ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ) ರಷ್ಯಾ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿದೆ ಎಂದು ಹೇಳಿದ್ದಾರೆ.

    ಹೊಸ ಸ್ಟಾರ್ಟ್ ಒಪ್ಪಂದಕ್ಕೆ 2010ರಲ್ಲಿ ಸಹಿ ಮಾಡಲಾಗಿತ್ತು. 2011ರಲ್ಲಿ ಒಪ್ಪಂದ ಜಾರಿಗೆ ಬಂದಿತು. 2021ರಲ್ಲಿ ಜೋ ಬೈಡನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ 5 ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಒಪ್ಪಂದವು ಅಮೆರಿಕ ಮತ್ತು ರಷ್ಯಾ ನಿಯೋಜಿಸಬಹುದಾದ ಪರಮಾಣು ಸಿಡಿತಲೆಗಳ ಸಂಖ್ಯೆ, ಜಲಾಂತರ್ಗಾಮಿ ಕ್ಷಿಪಣಿಗಳು ಹಾಗೂ ಬಾಂಬರ್‌ಗಳನ್ನು ಮಿತಿಗೊಳಿಸುತ್ತದೆ.

    ತಜ್ಞರ ಪ್ರಕಾರ ಸುಮಾರು 6,000 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿರುವ ರಷ್ಯಾವು ವಿಶ್ವದಲ್ಲೇ ಅತಿ ದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶವಾಗಿದೆ. ಆದ್ರೆ ಅಮೆರಿಕ ಭೂಮಿ ಗ್ರಹವನ್ನ ಹಲವು ಬಾರಿ ನಾಶಮಾಡಲು ಸಾಧ್ಯವಾಗುವಂತ ವಿಶ್ವದ ಶೇ.90 ರಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

    ಒಂದು ದಿನದ ಹಿಂದೆಯಷ್ಟೇ ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ರಕ್ಷಣೆಗೆ ಭಾರೀ ಶಸ್ತ್ರಾಸ್ತ್ರಗಳ ನೆರವು ನೀಡುವುದಾಗಿ ಶ್ವೇತಭವನದ ಹೇಳಿಕೆಯಲ್ಲಿ ಘೋಷಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಟ್ಟಡದ 16ನೇ ಮಹಡಿಯಿಂದ ಬಿದ್ದು ವ್ಲಾಡಿಮಿರ್‌ ಪುಟಿನ್‌ ಆಪ್ತೆ ಸಾವು!

    ಕಟ್ಟಡದ 16ನೇ ಮಹಡಿಯಿಂದ ಬಿದ್ದು ವ್ಲಾಡಿಮಿರ್‌ ಪುಟಿನ್‌ ಆಪ್ತೆ ಸಾವು!

    ಮಾಸ್ಕೋ: ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕಟ್ಟಡದ 16 ಮಹಡಿಯಿಂದ ಕೆಳಗೆ ಬಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಆಪ್ತೆ ಹಾಗೂ ರಷ್ಯಾದ (Russia) ರಕ್ಷಣಾ ಸಚಿವಾಲಯದ ಹಣಕಾಸು ಬೆಂಬಲ ವಿಭಾಗದ ಮುಖ್ಯಸ್ಥೆ ಮರೀನಾ ಯಾಂಕಿನಾ (Marina Yankina) ಸಾವನ್ನಪ್ಪಿದ್ದಾರೆ.

    ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇಂಟ್ ಪೀಟರ್ಸ್‌ಬರ್ಗ್‌ನ ಕಲಿನಿನ್ಸ್ಕಿ ಪ್ರದೇಶದ ವಸತಿ ಸಂಕೀರ್ಣದ ಪಾದಚಾರಿ ಮಾರ್ಗದಲ್ಲಿ ಮರೀನಾ ಯಾಂಕಿನಾ (58) ಅವರ ಮೃತದೇಹ ಕಂಡು ನೆರೆಹೊರೆಯವರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಿಮ್ ಜಾಂಗ್ ಉನ್ ಮಗಳ ಹೆಸರನ್ನು ಉತ್ತರ ಕೊರಿಯಾದ ಯಾರೂ ತಮ್ಮ ಮಕ್ಕಳಿಗೆ ಇಡುವಂತಿಲ್ಲ!

    ಉಕ್ರೇನ್‌ ವಿರುದ್ಧ ಪುಟಿನ್ ಸಾರಿದ ಯುದ್ಧಕ್ಕೆ ಹಣಕಾಸು ನಿರ್ವಹಿಸುವಲ್ಲಿ ಮರೀನಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಷ್ಯಾದ ಐದು ಭೌಗೋಳಿಕ ಬೆಟಾಲಿಯನ್‌ಗಳಲ್ಲಿ ಒಂದಾದ ವೆಸ್ಟರ್ನ್ ಮಿಲಿಟರಿ ಡಿಸ್ಟ್ರಿಕ್ಟ್‌ನ ಹಣಕಾಸು ನಿರ್ದೇಶಕರಾಗಿದ್ದರು.

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿದ ನಂತರ ರಷ್ಯಾದ ಅನೇಕ ಪ್ರಮುಖರು ಸಾವಿಗೀಡಾಗಿದ್ದಾರೆ. ಅವರ ಪೈಕಿ ಮರೀನಾ ಯಾಂಕಿನಾ ಕೂಡ ಒಬ್ಬರು. ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ವಜಾಗೊಂಡಿದ್ದ ರಷ್ಯಾದ ಜನರಲ್ ಮೇಜರ್ ಜನರಲ್ ವ್ಲಾಡಿಮಿರ್ ಮಕರೋವ್ ಅವರು ಅನುಮಾನಾಸ್ಪದ ಸಾವನ್ನಪ್ಪಿದ್ದರು. ಇದಾದ ಕೆಲವು ದಿನಗಳ ನಂತರ ಮರೀನಾ ಸಾವಿನ ಸುದ್ದಿ ವರದಿಯಾಗಿದೆ. ಇದನ್ನೂ ಓದಿ: Missile Traceː ರಷ್ಯಾದ 6 ಬಲೂನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Missile Traceː ರಷ್ಯಾದ 6 ಬಲೂನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ

    Missile Traceː ರಷ್ಯಾದ 6 ಬಲೂನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ

    ಕೀವ್: ಉಕ್ರೇನ್ (Ukraine) ರಾಜಧಾನಿಯ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ (Russia) 6 ಸ್ಪೈ ಬಲೂನ್‌ಗಳನ್ನು (Balloons) ಉಕ್ರೇನ್ ಸೇನೆ ಹೊಡೆದುರುಳಿಸಿದೆ.

    ಬಲೂನ್‌ನಿಂದ ವಿಚಕ್ಷಣ ಸಾಧನಗಳು ಹೊರಬರುತ್ತಿದ್ದವು. ಇದರಿಂದ ಉಕ್ರೇನ್ ಸೇನೆ (Ukraine Military) ಎಚ್ಚರಿಕೆ ನೀಡಿದ ಹೊರತಾಗಿಯೂ ಬಲೂನ್‌ಗಳು ರಾಜಧಾನಿಯ ಮೇಲೆ ಹಾರಾಟ ನಡೆಸುತ್ತಿದ್ದವು. ಹಾಗಾಗಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    ಉಕ್ರೇನ್ ವಾಯುನೆಲೆಯ ಮೇಲೆ ದಾಳಿ ಮಾಡುವುದು ಈ ಬಲೂನ್ ಹಾರಾಟದ ಹಿಂದಿನ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ರಷ್ಯಾ ತನ್ನ ಡ್ರೋನ್‌ಗಳ (Drone) ದಾಸ್ತಾನನ್ನು ರಕ್ಷಿಸುವ ಸಲುವಾಗಿ ಮುಂದಿನ ದಾಳಿಯಲ್ಲಿ ಬಲೂನ್‌ಗಳನ್ನು ಬಳಸಬಹುದು ಎಂದು ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಈ ಹಿಂದೆಯೇ ಹೇಳಿದ್ದರು. ಅದರಂತೆ ರಷ್ಯಾ ಒರ್ಲಾನ್-10 (Orlan-10 Drone) ನಂತಹ ಡ್ರೋನ್‌ಗಳನ್ನು ಈಗ ಮಿತವಾಗಿ ಬಳಸುತ್ತಿದೆ ಎಂದು ಹೇಳಲಾಗಿದೆ.

    ಇತ್ತೀಚೆಗಷ್ಟೇ ಅಮೆರಿಕದ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್‌ವೊಂದನ್ನು ಅಮೆರಿಕ ಫೈಟರ್ ಜೆಟ್‌ಗಳು ಹೊಡೆದುರುಳಿಸಿದ್ದವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿಯಿಂದ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಸಾಧ್ಯ: ಅಮೆರಿಕ

    ಮೋದಿಯಿಂದ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಸಾಧ್ಯ: ಅಮೆರಿಕ

    ವಾಷಿಂಗ್ಟನ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ (Russia Ukraine War) ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಸಾಧ್ಯ ಎಂದು ಅಮೆರಿಕ (USA) ಹೇಳಿದೆ.

    ಯುದ್ಧ ನಿಲ್ಲಿಸಲು ರಷ್ಯಾಗೆ (Russia) ಇನ್ನೂ ಸಮಯವಿದೆ. ಆದ್ರೆ ಯುದ್ಧ ನಿಲ್ಲಿಸುವಂತೆ ರಷ್ಯಾ ಮನವೊಲಿಸುವ ಕಾರ್ಯವನ್ನು ಭಾರತದ ಪ್ರಧಾನ ಮೋದಿ ಕೈಗೊಂಡರೆ ನಾವು ಸ್ವಾಗತಿಸುತ್ತೇವೆ. ಪ್ರಧಾನಿ ಮೋದಿ ಕೈಗೊಳ್ಳಲು ಸಿದ್ಧರಿರುವ ಯಾವುದೇ ಪ್ರಯತ್ನಗಳ ಬಗ್ಗೆ ಮಾತನಾಡಲು ನಾವು ಮುಕ್ತರಾಗಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬೆ ಹೇಳಿದ್ದಾರೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋದಲ್ಲಿ (Moscow) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಅಮೆರಿಕದ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಜಿತ್ ದೋವಲ್ (Ajit Doval), ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದರು. ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ್ದರು. ಸಭೆಯಲ್ಲಿ ದೋವಲ್ ಅವರು ಭಯೋತ್ಪಾದನೆಯನ್ನು ರಫ್ತು ಮಾಡಲು ಅಫ್ಘಾನ್ ಪ್ರದೇಶವನ್ನು ಬಳಸಲು ಯಾವುದೇ ದೇಶವನ್ನು ಅನುಮತಿಸಬಾರದು. ಅಗತ್ಯವಿರುವ ಸಮಯದಲ್ಲಿ ಭಾರತ ಎಂದಿಗೂ ಅಫ್ಘಾನ್ ಜನರನ್ನು ಕೈಬಿಡುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: 

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಷ್ಯಾಗೆ ದೋವಲ್‌ ಭೇಟಿ – ಪುಟಿನ್‌ ಜೊತೆ ಚರ್ಚೆ

    ರಷ್ಯಾಗೆ ದೋವಲ್‌ ಭೇಟಿ – ಪುಟಿನ್‌ ಜೊತೆ ಚರ್ಚೆ

    ಮಾಸ್ಕೋ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (NSA Ajit Doval) ಮತ್ತು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಗುರುವಾರ ಮಾಸ್ಕೋದಲ್ಲಿ (Moscow) ಭೇಟಿಯಾಗಿ ದ್ವಿಪಕ್ಷೀಯ ಚರ್ಚೆ ನಡೆಸಿದರು.

    ಅಜಿತ್ ದೋವಲ್ ಅವರು ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

    ಬುಧವಾರ ದೋವಲ್ ಅವರು ರಷ್ಯಾ ಆಯೋಜಿಸಿದ್ದ ಅಫ್ಘಾನಿಸ್ತಾನದ (Afghanistan) ಭದ್ರತಾ ಮಂಡಳಿಗಳು/ಎನ್‌ಎಸ್‌ಎಗಳ ಕಾರ್ಯದರ್ಶಿಗಳ ಐದನೇ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ದೋವಲ್ ಅವರು ಭಯೋತ್ಪಾದನೆಯನ್ನು ರಫ್ತು ಮಾಡಲು ಅಫ್ಘಾನ್ ಪ್ರದೇಶವನ್ನು ಬಳಸಲು ಯಾವುದೇ ದೇಶವನ್ನು ಅನುಮತಿಸಬಾರದು. ಅಗತ್ಯವಿರುವ ಸಮಯದಲ್ಲಿ ಭಾರತದ ಎಂದಿಗೂ ಅಫ್ಘಾನ್‌ ಜನರನ್ನು ಕೈಬಿಡುವುದಿಲ್ಲ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    ರಷ್ಯಾ ಮತ್ತು ಭಾರತವಲ್ಲದೆ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಚೀನಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ನವದೆಹಲಿಯಲ್ಲಿ ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಗೆ ವಾರಗಳ ಮುಂಚೆಯೇ ದೋವಲ್ ಮಾಸ್ಕೋಗೆ ಭೇಟಿ ನೀಡಿದ್ದಾರೆ. ಮಾರ್ಚ್ 1 ಮತ್ತು 2 ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

    ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರಷ್ಯಾಕ್ಕೆ ಭೇಟಿ ನೀಡಿದ ಮೂರು ತಿಂಗಳ ನಂತರ ದೋವಲ್‌ ಭೇಟಿ ನೀಡಿದ್ದಾರೆ.

    ಉಕ್ರೇನ್‌ ಮೇಲೆ ಯುದ್ಧ ಸಾರಿದ ಹೊರತಾಗಿಯೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಗಟ್ಟಿಯಾಗಿ ಉಳಿದಿವೆ. ಪಾಶ್ಚಿಮಾತ್ಯ ದೇಶಗಳ ವಿರೋಧದ ನಡುವೆಯೂ ರಷ್ಯಾದ ಕಚ್ಚಾ ತೈಲದ ಆಮದು ಗಣನೀಯವಾಗಿ ಹೆಚ್ಚಾಗುತ್ತಿದೆ.

    ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಭಾರತ ಆಗ್ರಹಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಲಂಡನ್: ಬ್ರಿಟನ್ (Britain) ಅನ್ನು ಹೊಡೆದುರುಳಿಸಲು ಕ್ಷಿಪಣಿಯನ್ನು ಕಳುಹಿಸಬಲ್ಲೆ ಎಂದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ಬಾರಿ ಹೇಳಿಕೆ ನೀಡಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಹೇಳಿಕೊಂಡಿದ್ದಾರೆ.

    ಈ ವಿಚಾರ ಬಿಬಿಸಿಯ ‘ಪುಟಿನ್ ವಿ ದಿ ವೆಸ್ಟ್’ ಹೆಸರಿನ 3 ಭಾಗಗಳ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಜಾನ್ಸನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಾಗ, ಬ್ರಿಟನ್ ಅನ್ನು ಹೊಡೆದುರುಳಿಸಲು ಒಂದೇ ನಿಮಿಷ ಸಾಕು. ನಾವು ಕ್ಷಿಪಣಿ ಕಳುಹಿಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ತಾನಿಯರ ಅಟ್ಟಹಾಸ – ತ್ರಿವರ್ಣಧ್ವಜ ಹಿಡಿದ ಭಾರತೀಯರ ಮೇಲೆ ದಾಳಿ

    ಜಾನ್ಸನ್ ಪುಟಿನ್ ಅವರ ಹೇಳಿಕೆಯನ್ನು ಬೆದರಿಕೆ ಎಂದು ಪರಿಗಣಿಸದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಬೆಂಬಲಿಸಿದ್ದಾರೆ. ಪುಟಿನ್ ಒಂದು ಬಾರಿ ನನಗೆ ಬೆದರಿಕೆ ಹಾಕಿದ್ದರು. ಬೋರಿಸ್, ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಕ್ಷಿಪಣಿ ದಾಳಿ ಮಾಡಿದರೆ ಕೇವಲ 1 ನಿಮಿಷ ಸಾಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

    ಪುಟಿನ್ ಅತ್ಯಂತ ಶಾಂತ ಸ್ವರದಿಂದಲೇ ಈ ಹೇಳಿಕೆಯನ್ನು ನೀಡಿದ್ದರು ಎಂದು ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k