Tag: Vladimir putin

  • ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ.. ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ

    ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ.. ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ

    – ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ನಿಷೇಧಿಸುವ ಕಾನೂನಿಗೆ ಪುಟಿನ್‌ ಸಹಿ

    ಮಾಸ್ಕೋ: ರಷ್ಯಾ (Russia) ದೇಶದಲ್ಲಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ (Gender Reassignment Surgery) ಮಾಡಿಸುವುದನ್ನು ನಿಷೇಧಿಸುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಸಹಿ ಹಾಕಿದ್ದಾರೆ.

    ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳನ್ನು ಕಾನೂನುಬಾಹಿರಗೊಳಿಸುವ ಕಾನೂನಿಗೆ ಇದು ಪೂರಕವಾಗಿದೆ. ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಪರಿಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೆಯೇ ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನೀಲಿ ಬಣ್ಣದ ಜೀನ್ಸ್‌ ಬ್ಯಾನ್‌, ಆತ್ಮಹತ್ಯೆಗೈದ್ರೆ ಕುಟುಂಬಕ್ಕೆ ಶಿಕ್ಷೆ – ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು

    ಕಾನೂನಿನ ಮುಖ್ಯ ಗುರಿಯು, ರಷ್ಯಾ ಸಮಾಜದ ಸಾಂವಿಧಾನಿಕ ನೈತಿಕ ತತ್ವಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು. ದೇಶದ ಜನರ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವುದಾಗಿದೆ ಎನ್ನಲಾಗಿದೆ.

    ಈ ಕಾನೂನು ಅಂಗೀಕಾರವಾದ ದಿನದಿಂದಲೇ ಜಾರಿಗೆ ಬರುತ್ತದೆ. ಈಗಾಗಲೇ ಲಿಂಗ ಬದಲಾಯಿಸಿಕೊಂಡಿರುವವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೂರು ತಿಂಗಳು ಸೂರ್ಯ ಉದಯಿಸದ ಊರಿಗೆ, ಸೂರ್ಯನನ್ನು ತಂದ ಕಥೆ!

    ರಷ್ಯಾದಲ್ಲಿ ಹೊಸ LGBTQ ವಿರೋಧಿ ಕಾನೂನುಗಳ ಭಾಗವಾಗಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ತೃತೀಯಲಿಂಗಿಗಳಿಗೆ ಎಲ್ಲಾ ವೈದ್ಯಕೀಯ ಸಹಾಯವನ್ನು ನಿಷೇಧಿಸುವ ಹೊಸ ಕಾನೂನನ್ನು ರಷ್ಯಾದ ಸ್ಟೇಟ್ ಡುಮಾ ಅಥವಾ ಸಂಸತ್ತಿನ ಕೆಳಮನೆಯು ಜು.14 ರಂದು ಅನುಮೋದಿಸಿತು.

    ರಷ್ಯಾದಲ್ಲಿನ ಇತ್ತೀಚಿನ ಕಾನೂನು ಬೆಳವಣಿಗೆಗಳು LGBTQ ಸಮುದಾಯದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿವೆ. ದೇಶದ ನಿಯಮಗಳ ಬಿಗಿಗೊಳಿಸುವಿಕೆ ಮತ್ತು ತೃತೀಯಲಿಂಗಿಗಳ ಹಕ್ಕುಗಳ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆ ಭಾರತದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬಣ್ಣಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು, 2014ರಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಬಿತ್ತಿದ್ದರು. ಇದು ಭಾರತದ ಆರ್ಥಿಕತೆಯ ಮೇಲೆ ಯಶಸ್ವಿ ಪರಿಣಾಮವನ್ನು ಬೀರಿದೆ. ಭಾರತದ ಉತ್ತಮ ನಾಯಕ ಮತ್ತು ರಷ್ಯಾದ ಉತ್ತಮ ಸ್ನೇಹಿತ ನರೇಂದ್ರ ಮೋದಿಯವರಿಂದ ಇದು ಸಾಧ್ಯವಾಗಿದೆ ಎಂದು ಅವರು ಹೊಗಳಿದ್ದಾರೆ. ರಷ್ಯಾದಲ್ಲಿ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತದ ಈ ವಿಚಾರವನ್ನು ಅವರು ಚರ್ಚಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್‌ ಇತ್ತೀಚೆಗೆ ಮಾತನಾಡಿ, ರಷ್ಯಾ ಮತ್ತು ಭಾರತದ ಪಾಲುದಾರಿಕೆ ವಿಶ್ವಕ್ಕೆ ಬಲವನ್ನು ತೋರಿಸಿದೆ. ಇದರಿಂದಾಗಿ ಜಗತ್ತಿನಲ್ಲಿ ಎರಡೂ ದೇಶಗಳು ಬಲವಾಗಿ ಬೆಳೆಯುತ್ತಿವೆ ಎಂದಿದ್ದರು. ಆದರೆ ರಷ್ಯಾದ ಬಗ್ಗೆ ಪ್ರತಿದಿನ ಜಾಗತಿಕ ಮಟ್ಟದಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅಲ್ಲದೇ ರಷ್ಯಾ ಮತ್ತು ಭಾರತದ ಸಂಬಂಧವನ್ನು ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಆಷಾಢ ಸಂಭ್ರಮ – 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

    ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

    ಮಾಸ್ಕೋ: ರಷ್ಯಾ (Russia) ದಂಗೆ ಮಾತುಕತೆ ಮೂಲಕವೇ ದಮನವಾಗಿದೆ. ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆ ಪರಿಣಾಮ ಮಾರ್ಗ ಮಧ್ಯೆಯೇ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈ ಬಿಟ್ಟಿದ್ದಾನೆ.

    ಮಾಸ್ಕೋ ಸನಿಹಕ್ಕೆ ಬಂದಿದ್ದ ವಾಗ್ನರ್‌ಗಳಿಗೆ (Wagner Private Army) ವಾಪಸ್ ಉಕ್ರೇನ್‌ಗೆ ಮರಳುವಂತೆ ಸೂಚಿಲಾಗಿದೆ. ದೇಶದ್ರೋಹದ ಶಿಕ್ಷೆಯಿಂದ ಪಾರು ಮಾಡುವ ಭರವಸೆಯನ್ನು ಬೆಲಾರಸ್ ಅಧ್ಯಕ್ಷ ನೀಡಿದ್ದಾರೆ. ಭಾರೀ ದಂಗೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ರಷ್ಯಾ ಈಗ ನಿಟ್ಟುಸಿರು ಬಿಟ್ಟಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಪುಟಿನ್‌ ಆಪ್ತ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಖಾಸಗಿ ಸೈನ್ಯ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ನಂತರ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್‌ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಆಡಿಯೋ ಸಂದೇಶ ರವಾನಿಸಿರುವ ಪ್ರಿಗೋಜಿನ್‌, ರಕ್ತ ಚೆಲ್ಲುವ ಅಪಾಯದ ಕಾರಣ ಹೋರಾಟಗಾರರು ದಂಗೆ ನಿಲ್ಲಿಸಿ ಹಿಂತಿರುಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಉಕ್ರೇನ್‌ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್‌ ನೀಡಿದ್ದ. ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಗೆ ಮುಂದಾಗಿತ್ತು. ಇದನ್ನೂ ಓದಿ: ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

  • ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಮಾಸ್ಕೋ: ಉಕ್ರೇನ್ ದೇಶವನ್ನು ಯುದ್ಧಭೂಮಿಯಲ್ಲಿ ಮಣಿಸಲಾಗದೇ ಕಳೆದೊಂದು ವರ್ಷದಿಂದ ಒದ್ದಾಡುತ್ತಿರುವ ರಷ್ಯಾಗೆ (Russia) ಈಗ ಮನೆಯಲ್ಲಿಯೇ ಬೆಂಕಿ ಬಿದ್ದಿದೆ. ಅಂತರ್ಯುದ್ಧ ಶುರುವಾಗಿದೆ. ಪುಟಿನ್ ಪಾಲಿಗೆ ಅವರ ಪರಮಾಪ್ತ ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ಕಂಟಕವಾಗುತ್ತಿದ್ದಾನೆ. ತನ್ನ ಅಧೀನದ ವಾಗ್ನರ್ ಬಾಡಿಗೆ ಸೇನೆಯನ್ನು ಪುಟಿನ್ (Vladimir Putin) ಸರ್ಕಾರದ ವಿರುದ್ಧ ಛೂ ಬಿಟ್ಟಿದ್ದು, ದಂಗೆಗೆ ಕಾರಣವಾಗಿದ್ದಾನೆ.

    ವಾಗ್ನರ್ ಸೇನೆ (Wagner Mercenary Group) ದಕ್ಷಿಣ ರಷ್ಯಾದ ರೋಸ್ತೋವ್ ನಗರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇಡೀ ನಗರದಲ್ಲಿ ವಾಗ್ನರ್ ಸೇನೆಯ ಯುದ್ಧ ಟ್ಯಾಂಕ್‌ಗಳು ಸಂಚರಿಸುತ್ತಿವೆ. ಇದೀಗ ವಾಗ್ನರ್ ಪಡೆ ಮಾಸ್ಕೋ ಕಡೆ ಹೆಜ್ಜೆ ಇಟ್ಟಿದೆ. ಇದನ್ನು ತಡೆಯಲು ರಷ್ಯಾ ಸೇನೆ ಮುಂದಾಗಿದ್ದು, ವಾಗ್ನರ್ ಪಡೆಗಳ ಮೇಲೆ ವಾಯು ದಾಳಿ ನಡೆಸುತ್ತಿದೆ. ಇದಕ್ಕೆ ವಾಗ್ನರ್ ಪಡೆಗಳು ತಿರುಗೇಟು ನೀಡುತ್ತಿವೆ. ರಷ್ಯಾದ ಹಲವು ಸೇನಾ ಕಾಪ್ಟರ್‌ಗಳು ನಾಶವಾಗಿವೆ. ವಾಗ್ನರ್ ಪಡೆ ಹತ್ತಿಕ್ಕಲು ರಷ್ಯಾ ಸೇನೆ ತಮ್ಮದೇ ದೇಶದ ವರ‍್ನೇಜ್ ತೈಲಾಗಾರದ ಮೇಲೆ ಬಾಂಬ್ ದಾಳಿ ನಡೆಸಿದೆ. ದೊಡ್ಡ ಮಟ್ಟದಲ್ಲಿ ಬೆಂಕಿಯ ಜ್ವಾಲೆಗಳು ಎದ್ದಿವೆ. ಗುಂಡಿನ ಚಕಮಕಿ, ಬಾಂಬ್ ದಾಳಿಗಳು ಮುಂದುವರೆದಿವೆ. ಅಷ್ಟಕ್ಕೂ, ರಷ್ಯಾದ ಪುಟಿನ್ ಸರ್ಕಾರಕ್ಕೆ ಕಂಟಕವಾಗಿರುವ ವಾಗ್ನರ್ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಯಾರು? ಏನಿದು ವಾಗ್ನರ್ ಗ್ರೂಪ್? ಇದನ್ನೂ ಓದಿ: ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಯಾರು ಈ ಪ್ರಿಗೋಜಿನ್?
    ಪ್ರಿಗೋಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಪರಮಾಪ್ತ. ಅಂತರಂಗದ ಗೆಳೆಯ. ಪುಟಿನ್ ಪಾಲಿನ ಅಡುಗೆ ಭಟ್ಟ ಹಾಗೂ ಫುಡ್ ಕಂಟ್ರಾಕ್ಟರ್. ಈತ 1980ರಲ್ಲಿ ದರೋಡೆ ಕೇಸಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. 1990ರಲ್ಲಿ ಪುಟಿನ್‌ಗೆ ಪ್ರಿಗೋಜಿನ್ ಪರಿಚಯವಾದ. 2000ರಲ್ಲಿ ಪುಟಿನ್ ಅಧ್ಯಕ್ಷರಾಗುತ್ತಲೇ ಪ್ರಿಗೋಜಿನ್ ವಾಣಿಜ್ಯ ವ್ಯವಹಾರ ವಿಸ್ತರಿಸಿದ. 2001ರಿಂದ ನಿರಂತರವಾಗಿ ಪುಟಿನ್ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡ.

    ರಷ್ಯಾದ ಸೇನೆ, ಶಾಲೆಗಳ ಫುಡ್ ಕಂಟ್ರಾಕ್ಟ್‌ಗಳೆಲ್ಲಾ ಪ್ರಿಗೋಜಿನ್ ಹಿಡಿತದಲ್ಲಿವೆ. 2014ರಲ್ಲಿ ವಾಗ್ನರ್ ಪಿಎಂಸಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ. ಕ್ರಿಮಿಯಾ ಆಕ್ರಮಣದಲ್ಲಿ ಲಿಟಲ್ ಗ್ರೀನ್‌ಮ್ಯಾನ್ ರೂಪದಲ್ಲಿ ವಾಗ್ನರ್ ಹಸ್ತ. 2016ರಲ್ಲಿ ಪ್ರಿಗೋಜಿನ್ ಮೇಲೆ ಅಮೆರಿಕಾ ಹಲವು ನಿರ್ಬಂಧಗಳನ್ನು ಹೇರಿತು. 2016ರ ಅಮೆರಿಕಾ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಿಗೋಜಿನ್ ಪ್ರಚಾರ ಮಾಡಿಸಿದ್ದ. ಅಮೆರಿಕಾದ ಎಫ್‌ಬಿಐನಿಂದ ಪ್ರಿಗೋಜಿನ್ ತಲೆಗೆ 2.50 ಲಕ್ಷ ಡಾಲರ್ ರಿವಾರ್ಡ್ ಘೋಷಿಸಲಾಗಿತ್ತು. ವಾಗ್ನರ್ ಸೇನಾಧಿಪತಿಯಯಾಗಿ ಮತ್ತಷ್ಟು ಬಲಿಷ್ಠವಾಗಿ ಪ್ರಿಗೋಜಿನ್ ಬೆಳೆದ. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಕದನದ ಬಗ್ಗೆ ಪ್ರಿಗೋಜಿನ್ ಹೇಳೋದೇನು?
    ತಮ್ಮ ವಿಚಾರದಲ್ಲಿ ಪುಟಿನ್ ಎಡವುತ್ತಿದ್ದಾರೆ. ನಾವು ದೇಶದ್ರೋಹಿಗಳಲ್ಲ, ದೇಶಭಕ್ತರು. ನಾವ್ಯಾರಿಗೂ ದ್ರೋಹ ಮಾಡಿಲ್ಲ. ನಮ್ಮಲ್ಲಿ ಯಾರು ಕೂಡ ಶರಣಾಗಲ್ಲ. ಈ ದೇಶ ಭ್ರಷ್ಟಾಚಾರ, ಸುಳ್ಳುಗಳಿಂದ ಹಾಳಾಗಬಾರದು. ಅದಕ್ಕಾಗಿಯೇ ಈ ಕದನ. ಇದು ಸೇನಾ ದಂಗೆಯಲ್ಲ. ನ್ಯಾಯಕ್ಕಾಗಿ ನಡೆಸುತ್ತಿರುವ ಮಾರ್ಚ್ ಎಂದು ಪ್ರಿಗೋಜಿನ್ ಸ್ಪಷ್ಟಪಡಿಸಿದ್ದಾನೆ.

    ವ್ಯಾಗ್ನರ್‌ ಪಡೆ ಎಂದರೇನು?
    ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ.  ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.

  • ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಮಾಸ್ಕೋ: ಉಕ್ರೇನ್‌ (Ukraine ) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಆಪ್ತನೇ ಈಗ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್‌ ನೀಡಿದ್ದಾನೆ.

    ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಯ ಎಚ್ಚರಿಕೆ ನೀಡಿದೆ.

    ತನ್ನ ಸೇನೆಯ ಮೇಲೆಯೇ ದಾಳಿ ಮಾಡುತ್ತಿರುವ ರಷ್ಯಾ ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ. ರಷ್ಯಾ ಸೇನಾ ನಾಯಕತ್ವವನ್ನೇ ಅಂತ್ಯಗೊಳಿಸಲು ಯಾವುದೇ ಕ್ರಮಕ್ಕೂ ನಾನು ಸಿದ್ಧನಿದ್ದೇನೆ ಎಂದು ಯೆವ್ಗೆನಿ ಪ್ರಿಗೋಜಿನ್ ಶಪಥ ಮಾಡಿದ್ದಾನೆ.  ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಆಶೀರ್ವಾದ ಪಡೆದ ಅಮೆರಿಕ ಗಾಯಕಿ

    ವ್ಯಾಗ್ನರ್‌ ಪಡೆ ಎಂದರೇನು?
    ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ.  ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.

    ತಿರುಗಿ ಬಿದ್ದಿದ್ದು ಯಾಕೆ?
    ಈ ವರ್ಷದ ಜನವರಿಯಲ್ಲಿ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು ತಯಾರಿಸುವ ಪಟ್ಟಣವಾದ ಸೊಲೆಡಾರ್ ಅನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ಗೆದ್ದ ಶ್ರೇಯಸ್ಸು ವಿಚಾರವಾಗಿ ವ್ಯಾಗ್ನರ್‌ ಪಡೆ ಮತ್ತು ರಷ್ಯಾ ಸೇನೆಯ ಬಗ್ಗೆ ಕಿತ್ತಾಟ ನಡೆಯುತ್ತಿತ್ತು. ಯೆವ್ಗೆನಿ ಪ್ರಿಗೋಜಿನ್ ಇದರ ಕ್ರೆಡಿಟ್‌ ನಮಗೆ ಸಿಗಬೇಕು ಎಂದು ಹೇಳಿದ್ದ.

    ನಂತರದ ದಿನಗಳಲ್ಲಿ ರಷ್ಯಾ ಸೇನೆ ನಮಗೆ ಸರಿಯಾಗಿ ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ಕಿಡಿಕಾರಿದ್ದ. ಅಷ್ಟೇ ಅಲ್ಲದೇ ರಷ್ಯಾದ ಮಿಲಿಟರಿ ನಾಯಕರು ಸರಿಯಾಗಿ ಸೇನೆಯನ್ನು ಮುನ್ನಡೆಸುತ್ತಿಲ್ಲ ಎಂದು ದೂರಿದ್ದ. ಮಿಲಿಟರಿ ನಾಯಕರ ಕುರಿತಾಗಿ ಈತನ ಹೇಳಿಕೆಯ ಬಗ್ಗೆ ತಿಳಿದಿದ್ದರೂ ಪುಟಿನ್‌ ತಲೆಕೆಡಿಸಿಕೊಂಡಿರಲಿಲ್ಲ. ಈ ಕಿತ್ತಾಟ ಜಾಸ್ತಿ ಆಗಿದ್ದು, ಇಂದು ರಷ್ಯಾ ಸೇನೆ ತನ್ನ ಪಡೆಗಳನ್ನು ಗುರಿಯಾಗಿಸಿ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ಯೆವ್ಗೆನಿ ಪ್ರಿಗೋಜಿನ್ ಸಿಟ್ಟಾಗಿ ದಾಳಿ ಮಾಡಿ ರಷ್ಯಾ ಸೇನಾ ಮುಖ್ಯಸ್ಥರನ್ನು ಕೆಳಗೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

     

    ಈಗ ರಷ್ಯಾದಲ್ಲಿ ಏನಾಗುತ್ತಿದೆ?
    ವ್ಯಾಗ್ನರ್ ಗುಂಪಿನ ಮುಖ್ಯಸ್ಥ  ಪ್ರಿಗೋಜಿನ್ ಮಾಸ್ಕೋ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಕ್ಸ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರೋಸ್ಟೊವ್‌ನಲ್ಲಿ ಮನೆಗಳಿಂದ ಹೊರಬರಬೇಡಿ ಎಂದು ಜನರಲ್ಲಿ ರಷ್ಯಾ ಅಧಿಕಾರಿಗಳು ಕೇಳಿದ್ದಾರೆ.

  • ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    – ಹಿರೋಷಿಮಾ, ನಾಗಸಾಕಿ ಅಣ್ವಸ್ತ್ರಕ್ಕಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿ ರಷ್ಯಾದ ಅಣ್ವಸ್ತ್ರ

    ಮಾಸ್ಕೋ: ಉಕ್ರೇನ್ (Ukranine) ಮೇಲೆ ವರ್ಷದಿಂದ ಯುದ್ಧ ಮಾಡುತ್ತಿರುವ ರಷ್ಯಾ (Russia) ಇದೀಗ ತನ್ನ ಮೊದಲ ಬ್ಯಾಚ್‌ನ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬೆಲಾರಸ್‌ಗೆ (Belarus) ಕಳುಹಿಸಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಕ್ರವಾರ ತಿಳಿಸಿದ್ದಾರೆ. ಈ ವಿಚಾರ ದೃಢವಾಗುತ್ತಲೇ ಇಡೀ ಜಗತ್ತಿಗೆ ಭೀತಿ ಉಂಟಾಗಿದೆ.

    ಸೆಂಟ್ ಪೀಟರ್ಸ್ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿರುವ ಪುಟಿನ್, ಈ ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸುವ ಗುರಿಯಿದೆ. ಇದು ರಷ್ಯಾ ಹಾಗೂ ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುತ್ತಿರೋ ಎಲ್ಲಾ ವಿರೋಧಿಗಳಿಗೂ ತಿರುಗೇಟಿನ ಕ್ರಮವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರದ ಬಳಕೆ ಮಾಡುತ್ತದೋ ಎಂಬ ಪ್ರಶ್ನೆಗೆ ಕಾರಣವಾಗಿದೆ ಮಾತ್ರವಲ್ಲದೇ ಜಗತ್ತಿನ ನಿದ್ದೆಗೆಡಿಸಿದಂತಾಗಿದೆ.

    ಈ ವಾರ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು, ನಾವು ರಷ್ಯಾದಿಂದ ಬಾಂಬ್‌ಗಳು ಹಾಗೂ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಳಸಲಾಗಿದ್ದ ಅಣ್ವಸ್ತ್ರಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ಆರಂಭವಾಗಿ ವರ್ಷವೇ ಕಳೆದಿದೆ. ಯುದ್ಧ ಇನ್ನೇನು 500ನೇ ದಿನ ಪೂರೈಸಲಿದೆ. ಅಮೆರಿಕ ಈ ಯುದ್ಧದ ಬಗ್ಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಇದೀಗ ರಷ್ಯಾ ನೇರವಾಗಿ ಅಣ್ವಸ್ತ್ರವನ್ನೇ ತನ್ನ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕಳುಹಿಸಿ ಕೊಟ್ಟಿದೆ. ಬೆಲಾರಸ್‌ನ ಗಡಿಯಿಂದ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಕೇವಲ 200 ಕಿ.ಮೀ ದೂರವಿದೆ. ಇದೀಗ ರಷ್ಯಾ ನೇರವಾಗಿ ಕೀವ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

  • ಪುಟಿನ್‌ನ ನಿಜವಾದ ತಾಯಿ ಎಂದಿದ್ದಾಕೆ ನಿಧನ

    ಪುಟಿನ್‌ನ ನಿಜವಾದ ತಾಯಿ ಎಂದಿದ್ದಾಕೆ ನಿಧನ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ರಹಸ್ಯ ತಾಯಿ (Secret Mother) ಎಂದು ಹಲವು ವರ್ಷಗಳಿಂದ ಹೇಳಿಕೊಂಡಿದ್ದ ವೃದ್ಧೆ ತನ್ನ 97ನೇ ವಯಸ್ಸಿನಲ್ಲಿ ನಿಧನರಾಗಿರುವುದು ಬಹಿರಂಗವಾಗಿದೆ.

    ವೆರಾ ಪುಟಿನಾ (Vera Putina) ಹಲವು ವರ್ಷಗಳಿಂದ ರಷ್ಯಾದ (Russia) ಅಧ್ಯಕ್ಷ ತನ್ನ ಮಗನೆಂದು ಹೇಳಿಕೊಂಡಿದ್ದರು. ಆಕೆ ಒಬ್ಬ ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಪುಟಿನ್ ಜನಿಸಿದ್ದರು. ಆಕೆ ತನ್ನ ಮಗನ ಚಿತ್ರಗಳನ್ನು ತೋರಿಸಿದ್ದರೂ ಸಹ 70 ವರ್ಷದ ರಷ್ಯಾದ ನಾಯಕ ಇದನ್ನು ಸಾರ್ವಜನಿಕವಾಗಿ ಎಂದೂ ಒಪ್ಪಿಕೊಂಡಿರಲಿಲ್ಲ.

    ಹಿಂದಿನ ಸೋವಿಯತ್ ರಾಜ್ಯವಾದ ಜಾರ್ಜಿಯಾದಲ್ಲಿನ ಅತ್ಯಂತ ಬಡ ಹಳ್ಳಿಯಾದ ಮೆಟೆಖಿಯಲ್ಲಿ ವೆರಾ ವಾಸಿಸುತ್ತಿದ್ದರು. ಪುಟಿನ್ ಕೇವಲ 10 ವರ್ಷದವರಾಗಿದ್ದಾಗ ಅವರನ್ನು ಓಚಿಯೋರ್‌ನಲ್ಲಿರುವ ತನ್ನ ಅಜ್ಜಿಯ ಬಳಿಗೆ ಕಳುಹಿಸಿದ ನಂತರ ಆತ ತನ್ನನ್ನು ಎಂದೂ ಕ್ಷಮಿಸದೇ ದೂರವಾಗಿದ್ದಾಗಿ ವೆರಾ ಹೇಳಿಕೊಂಡಿದ್ದರು. ಇದನ್ನೂ ಓದಿ: ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

    ಈ ವಿಚಾರವನ್ನು ವೆರಾ 1999 ರಲ್ಲಿ ಬಹರಂಗಪಡಿಸಿದ್ದರು. ಆದರೂ ಪುಟಿನ್ ತಮ್ಮ ಆತ್ಮಚರಿತ್ರೆಯಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮರಿಯಾ ಹಾಗೂ ತಂದೆ ವ್ಲಾಡಿಮಿರ್ ಪುಟಿನ್‌ಗೆ ಜನಿಸಿ, ಅವರೊಂದಿಗೆ ಬೆಳೆದಿರುವುದಾಗಿ ಬರೆದಿದ್ದಾರೆ. 1990ರ ದಶಕದಲ್ಲಿ ಪೋಷಕರಿಬ್ಬರೂ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

  • Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    ಮಾಸ್ಕೋ/ಕೀವ್‌: ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ (Russia-Ukraine Wa) ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ.

    ಉಕ್ರೇನ್‌ ಸಹ ರಷ್ಯಾಗೆ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದೆ. ಈ ಬಾರಿ ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಯತ್ನಿಸಿದ್ದು, ಪುಟಿನ್‌ ನಿವಾಸದ ಮೇಲೆ ಎರಡು ಡ್ರೋನ್‌ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ. ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾಪಡೆಗಳು ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದ್ದು, ಈ ದಾಳಿ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ದೂರಿದೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

    ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಎರಡು ಶಸ್ತ್ರಾಸ್ತ್ರ ತುಂಬಿದ ಡ್ರೋನ್‌ಗಳಿಂದ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಪುಟಿನ್‌ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ. ಉಕ್ರೇನ್‌ನಿಂದ ಈ ದಾಳಿ ನಡೆದಿದೆ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಮೇ 9 ರಂದು ರಷ್ಯಾ ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ್‌ ಹಾಕಲು ಈ ದಾಳಿ ನಡೆದಿದೆ. ಖಂಡಿತವಾಗಿಯೂ ಇದಕ್ಕೆ ಪ್ರತಿದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 5 ಮಕ್ಕಳು ಸೇರಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿಯಾಗಿ ಉಕ್ರೇನ್‌ ಸಾಳಿ ನಡೆಸಿದೆ ಎಂಬ ಆರೋಪಗಳೂ ಕೇಳಿಬಂದಿವೆ.

  • ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    ಕೈವ್: ಪೂರ್ವ ಉಕ್ರೇನ್ (East Ukrain) ನಗರದ ಸ್ಲೋವಿಯನ್ಸ್ಕ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ಕ್ಷಿಪಣಿ ದಾಳಿ (Attack) ನಡೆಸಿದ ಹಿನ್ನೆಲೆ 8 ಜನರು ಸಾವನ್ನಪ್ಪಿದ್ದು, 21 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಗರದ ಮೇಲೆ ಏಳು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, S-300 ಕ್ಷಿಪಣಿಗಳು, 10 ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ ಇತರೆ ಸೈಟ್‌ಗಳನ್ನು ಧ್ವಂಸ ಮಾಡಿವೆ. ಇದರಿಂದಾಗಿ ಕಟ್ಟಡಗಳ ಮಹಡಿಗಳು ಕುಸಿದಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದವರಿಗಾಗಿ ರಕ್ಷಣಾ ತಂಡವು ಶೋಧ ನಡೆಸುತ್ತಿದೆ. ಇದನ್ನೂ ಓದಿ: ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ 

    ಶುಕ್ರವಾರ ಸಂಜೆ ತುರ್ತು ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಅವಶೇಷಗಳನ್ನು ಹೊರತೆಗೆಯುವ ವೇಳೆ 2 ವರ್ಷದ ಮಗುವೊಂದು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಮಗುವನ್ನು ಅವಶೇಷಗಳ ಮಧ್ಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: BBC Documentary Controversy: ಗುಜರಾತ್‌ ಗಲಭೆಯ ಬಗ್ಗೆ ಎಲೋನ್‌ ಮಸ್ಕ್‌ ಹೇಳಿದ್ದೇನು? 

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಾಗರಿಕರನ್ನು ಸೈನ್ಯಕ್ಕೆ ಸಜ್ಜುಗೊಳಿಸುವ ಸಲುವಾಗಿ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ದೇಶದಿಂದ ಪಲಾಯನ ಮಾಡುವುದನ್ನು ನಿರ್ಬಂಧಿಸಿದ ನಂತರ ಈ ದಾಳಿ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ – 100ಕ್ಕೂ ಅಧಿಕ ಜನ ಬಲಿ

  • ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಮಾಸ್ಕೋ: ಕಳೆದ ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ (Russia Ukraine War) ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವರದಿ ಬಿಡುಗಡೆಯಾಗಿದ್ದು, ಪುಟಿನ್‌ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಹೇಳಲಾಗಿದೆ.

    ಪುಟಿನ್‌ಗೆ ಅತಿಯಾದ ತಲೆನೋವು, ದೃಷ್ಟಿ ಮಂಜಾಗುವುದು ಹಾಗೂ ನಾಲಿಗೆಯಲ್ಲಿ ಮರಗಟ್ಟುವಿಕೆ ಉಂಟಾಗುತ್ತಿದೆ ಎಂದು ವೈದ್ಯರು (Doctors) ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಪುಟಿನ್‌ ಈಗಾಗಲೇ ಬಲಗೈ ಮತ್ತು ಬಲಗಾಲಿನ ಭಾಗಶಃ ಸ್ವಾಧೀನ ಕಳೆದುಕೊಳ್ಳುತ್ತಿದ್ದಾರೆ, ಅವರಿಗೆ ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ರೆ ಕ್ರೆಮ್ಲಿನ್‌ ಮತ್ತು ರಷ್ಯಾದ ಆರೋಗ್ಯ ಸಚಿವರು ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಈ ಹಿಂದೆಯೇ ವೈದ್ಯರು ಕೌನ್ಸಿಲಿಂಗ್‌ ಮಾಡಿ‌, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಪುಟಿನ್‌ ವಿಶ್ರಾಂತಿ ಪಡೆಯಲು ನಿರಾಕರಿಸಿ, ಉಕ್ರೇನ್‌ ವಿರುದ್ಧ ಯುದ್ಧದ ಬೆಳವಣಿಗೆಯಲ್ಲಿ ತೊಡಗಿಕೊಂಡರು. ಅವರು ಕೊಂಚ ಸುಧಾರಿಸಿಕೊಳ್ಳುತ್ತಿದ್ದಂತೆಯೇ ವೈದ್ಯರ ಆರೈಕೆ ಬಗ್ಗೆ ನಿರ್ಲಕ್ಷ್ಯ ತೋರಿದರು ಎಂದು‌ ತಿಳಿಸಿದ್ದಾರೆ.

    ಪುಟಿನ್‌ ಕ್ಯಾನ್ಸರ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿ ಕಳೆದ ವರ್ಷವೇ ಹೇಳಿತ್ತು. ಅಲ್ಲದೇ ಹೆಚ್ಚೆಂದರೆ ಪುಟಿನ್‌ ಇನ್ನು 3 ವರ್ಷಗಳ ಕಾಲ ಬದುಕಬಹುದು ಎಂದು ತಿಳಿಸಿತ್ತು.