ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದ ಕುಸಿಯುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ 3,00,000 ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದು ದಿ ಇಂಡಿಪೆಂಡೆಂಟ್ ವರದಿ ತಿಳಿಸಿದೆ.
ದೇಶದ ಅನೇಕ ಜನಾಂಗದವರು ನಾಲ್ಕು ಅಥವಾ ಐದಕ್ಕಿಂತ ಹೆಚ್ಚಿನ ಮಕ್ಕಳಿದ್ದ ಸುಭದ್ರ ಕುಟುಂಬ ವ್ಯವಸ್ಥೆ ಹೊಂದಿದ್ದರು. ನಮ್ಮ ಅಜ್ಜಿ, ಮುತ್ತಜ್ಜಿಯರು 7, 8 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು ಎಂದು ಪುಟಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್ ಆರೋಪ
ನಾವು ಈ ಅತ್ಯುತ್ತಮ ಸಂಪ್ರದಾಯಗಳನ್ನು ಸಂರಕ್ಷಿಸೋಣ, ಪುನರುಜ್ಜೀವನಗೊಳಿಸೋಣ. ದೊಡ್ಡ ಕುಟುಂಬಗಳು ರೂಢಿಯಾಗಬೇಕು. ಎಲ್ಲಾ ರಷ್ಯಾದ ಜನರಿಗೆ ಇದು ಜೀವನ ವಿಧಾನವಾಗಿದೆ. ಕುಟುಂಬವು ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ. ಇದು ಆಧ್ಯಾತ್ಮಿಕ ವಿದ್ಯಮಾನವಾಗಿದೆ. ನೈತಿಕತೆಯ ಮೂಲವಾಗಿದೆ ಎಂದಿದ್ದಾರೆ.
ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ರಷ್ಯಾದ ಜನಸಂಖ್ಯೆ ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಇದು ರಷ್ಯಾದ ಭವಿಷ್ಯ ಹಾಗೂ ಸಹಸ್ರಮಾನ, ಶಾಶ್ವತವಾದ ರಷ್ಯಾಕ್ಕಾಗಿ ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ವಿಧಿಸಿದ ನಿರ್ಬಂಧಗಳಿಂದಾಗಿ ರಷ್ಯಾವು ತೀವ್ರವಾದ ಉದ್ಯೋಗಿಗಳ ಕೊರತೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಮಂದಗತಿಗೆ ಸಾಕ್ಷಿಯಾಗಿದೆ. ಜನವರಿ 1, 2023 ರಂದು ರಷ್ಯಾದ ಜನಸಂಖ್ಯೆಯು 14.64 ಕೋಟಿ ಇತ್ತು. ಪುಟಿನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಜನಸಂಖ್ಯೆಯು 1990 ರ ಅಂಕಿ ಅಂಶಕ್ಕಿಂತ ಕಡಿಮೆಯಾಗಿದೆ.
ಮಾಸ್ಕೋ: ಪ್ರೇಯಸಿ (Lover) ಮೇಲೆ ಅತ್ಯಾಚಾರಗೈದು, 111 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪ್ರೇಮಿಯೊಬ್ಬನನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ.
ಯುವಕನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ (Russia Military) ಸೇರಿ ಹೋರಾಟ ಮಾಡಲು ನಿರ್ಧರಿಸಿದ ನಂತರ ವ್ಲಾಡಿಮಿರ್ ಪುಟಿನ್, ಆತನ ಅಪರಾಧವನ್ನ ಕ್ಷಮಿಸಿದ್ದಾರೆ. ವ್ಲಾಡಿಸ್ಲಾವ್ ಕಾನ್ಯುಸ್ ಎಂಬಾತ ತನ್ನ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬಾಕೆಯನ್ನು ಕ್ರೂರವಾಗಿ ಕೊಂದು 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆತ ಸೇನೆಗೆ ಸೇರಲು ಬಯಸಿದ್ದರಿಂದ ಶಿಕ್ಷೆ ಅವಧಿಗೆ ಒಂದು ವರ್ಷ ಮುಂಚಿತವಾಗಿಯೇ ಅಪರಾಧಿಯನ್ನ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಐಸ್‍ಲ್ಯಾಂಡ್‍ನಲ್ಲಿ 800 ಬಾರಿ ಕಂಪಿಸಿದ ಭೂಮಿ – ತುರ್ತು ಪರಿಸ್ಥಿತಿ ಘೋಷಣೆ
ಕ್ಯಾನ್ಸನ್ ತನ್ನ ಗೆಳತಿಗೆ ಸತತ ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದ. ಅಷ್ಟು ಸಾಲದ್ದಕ್ಕೆ 111 ಬಾರಿ ಚಾಕುವಿನಿಂದ ಇರಿದಿದ್ದ, ನಂತ್ರ ಕೇಬಲ್ ವಯರ್‌ನಿಂದ ಕತ್ತು ಹಿಸುಕಿ ಕೊಂದಿದ್ದ. ಆಕೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಲು ಸಾಕಷ್ಟು ಬಾರಿ ಕರೆ ಮಾಡಿದ್ದರು. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಆತನನ್ನ ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಆತ ಮಿಲಿಟರಿಗೆ ಸೇರಲು ಬಯಸಿದ್ದರಿಂದ ಆತನ ತಪ್ಪುಗಳನ್ನ ಕ್ಷಮಿಸಿ ಬಿಡುಗಡೆ ಮಾಡಲಾಗಿದೆ. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರು ವಿಷಯವನ್ನು ಖಚಿತಪಡಿಸಿದ್ದಾರೆ.
ವೆರಾ ಪೆಖ್ಟೆಲೆವಾ ಅವರ ತಾಯಿ ಒಕ್ಸಾನಾ, ಕ್ಯಾನ್ಸನ್ ಶಸ್ತ್ರಾಸ್ತ್ರ ಹಿಡಿದು, ಮಿಲಿಟರಿ ಸಮವಸ್ತ್ರದಲ್ಲಿ ನಿಂತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗು ಸಮಾಧಿಯಲ್ಲಿ ಕೊಳೆಯುತ್ತಿದೆ. ಆದ್ರೆ ನನ್ನ ಮಗುವನ್ನು ಕೊಂದ ಆರೋಪಿ ಹೊರಗಿದ್ದಾನೆ. ಇದು ನಿಜಕ್ಕೂ ನನಗೆ ಅತೀವ ನೋವನ್ನುಂಟುಮಾಡಿದೆ. ನನ್ನ ಜೀವನದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ಇನ್ಮುಂದೆ ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪುಟಿನ್ ಅವರ ಕ್ರಮ ನನ್ನನ್ನು ಸಂಪೂರ್ಣವಾಗಿ ಮುಗಿಸಿದೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ
ಅಪರಾಧಿ ಕ್ಯಾನ್ಸನ್‌ನನ್ನ ಬಿಡುಗಡೆ ಮಾಡಿದ ಬಳಿಕ ಉಕ್ರೇನ್ ಗಡಿಯಲ್ಲಿರುವ ದಕ್ಷಿಣ ರಷ್ಯಾದ ರೋಸ್ಟೊವ್‌ಗೆ ವರ್ಗಾಯಿಸಲಾಗಿದೆ ಎಂಬುದಾಗಿ ಜೈಲು ಅಧಿಕಾರಿಗಳು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರಿಗೆ ವಿಷಯ ಖಚಿತಪಡಿಸಿದ್ದಾರೆ. ಆ ನಂತರ ನವೆಂಬರ್ 3 ರಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯಿಂದ ಆರೋಪಿ ಬಿಡುಗಡೆಗೊಳಿಸಿದ ಆದೇಶ ಪತ್ರವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಿನಕ್ಕೆ 4 ಗಂಟೆ ಕದನ ವಿರಾಮ – ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಪುಟಿನ್ ದೇಹವನ್ನು ಡಬಲ್ ಮಾಡಲಾಗಿದೆ ಎಂಬ ಆರೋಪಗಳನ್ನು ಕ್ರೆಮ್ಲಿನ್ (Kremlin) ತಳ್ಳಿಹಾಕಿದ್ದು, ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.
ಪುಟಿನ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎನ್ನುತ್ತಿರುವುದು ಶುದ್ಧ ಸುಳ್ಳು. ಇದಕ್ಕೆ ನಗಬೇಕೋ ಅಳಬೇಕೋ ಎಂಬುದೇ ತಿಳಿಯುತ್ತಿಲ್ಲ. ಬೇರೆ ಯಾವುದೇ ಪ್ರತಿಕ್ರಿಯೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಪೆಸ್ಕೋವ್ ಹೇಳಿದ್ದಾರೆ. ಇದನ್ನೂ ಓದಿ: ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?
ಪುಟಿನ್ ಅಕ್ಟೋಬರ್ 7ರಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರಂತರವಾಗಿ ಸಾರ್ವಜನಿಕ ಸಭೆಗಳು ಹಾಗೂ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಹಲವು ಕಾರ್ಯಕ್ರಮಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ಇತ್ತೀಚೆಗೆ ಚೀನಾಗೆ ಭೇಟಿ ನೀಡಿ ಬರುತ್ತಿದ್ದಾಗಲೂ ರಷ್ಯಾದ ಎರಡು ನಗರಗಳಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿಯೂ ನಡೆದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಪುಟಿನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯ ಸ್ತಂಭನ – ಭದ್ರತಾ ಸಿಬ್ಬಂದಿ ಹೇಳಿದ್ದೇನು?
ಎಸ್‌ವಿಆರ್ ವರದಿ ಮಾಡಿದ್ದೇನು?
ಭಾನುವಾರ ಸಂಜೆ ವ್ಲಾಡಿಮಿರ್ ಪುಟಿನ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ವ್ಲಾಡಿಮಿರ್ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಪುಟಿನ್ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತ್ತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದ್ದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ವರದಿ ಮಾಡಿತ್ತು.
ಮಾಸ್ಕೋ: ಕಳೆದ ವರ್ಷದಿಂದ ಉಕ್ರೇನ್ ವಿರುದ್ಧ ಯುದ್ಧ (Ukraine War) ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಈ ನಡುವೆ ಪುಟಿನ್ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದು ಕಂಡುಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ‘ಜನರಲ್ SVR’ ಅನ್ನು ಉಲ್ಲೇಖಿಸಿ ವರದಿಯಾಗಿದೆ. ಜನರಲ್ ಎಸ್‌ವಿಆರ್ ಟೆಲಿಗ್ರಾಮ್ ಚಾಲನೆಲ್ ಅನ್ನು ಕ್ರೆಮ್ಲಿನ್‌ನ್ ನಿವೃತ್ತ ಅಧಿಕಾರಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಿದ್ದು ಹೊರಳಾಡುತ್ತಿದ್ದ ಪುಟಿನ್: ಬಹುಶಃ, ಪುಟಿನ್ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು (Putin Doctors) ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?
ಸದ್ಯ ಮೂಲಗಳು ವ್ಲಾಡಿಮಿರ್ ಪುಟಿನ್ ಪ್ರತಿರೂಪ ಸಭೆ ಸಮಾರಂಭದಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳುತ್ತಿವೆ. ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಕ್ರೆಮ್ಲಿನ್ ಮತ್ತೆ ಮತ್ತೆ ಪುಟಿನ್ ಆರೋಗ್ಯವಾಗಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ. ಇದನ್ನೂ ಓದಿ: ಪುಟಿನ್ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ
ಕೀವ್/ಮಾಸ್ಕೋ: 2022ರ ಫೆಬ್ರವರಿ 24ರಂದು ಆರಂಭವಾದ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಸದ್ದು ಮಾಡುತ್ತಲೇ ಇದೆ. ಯುದ್ಧ ಆರಂಭವಾಗಿ ವರ್ಷ ಕಳೆದರೂ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡರೂ, ವಿಶ್ವದ ಅನೇಕ ರಾಷ್ಟ್ರಗಳು ಶಾಂತಿ ಕಾಪಾಡುವಂತೆ ಸಲಹೆ ನೀಡಿದರೂ ಡೋಂಟ್‌ಕೇರ್ ಎನ್ನುವಂತೆ ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನ ಮುಂದುವರಿಸಿದೆ.
ಗುರುವಾರವೂ ಸಹ ರಷ್ಯಾ ಸೇನೆಯು ಉಕ್ರೇನ್‌ನ ಖಾರ್ಕೀವ್ ಪೂರ್ವ ಪ್ರದೇಶದ ದಿನಸಿ ಅಂಗಡಿ ಹಾಗೂ ಕೆಫೆಯೊಂದರ ಮೇಲೆ ದಾಳಿ (Russian Rocket Strike) ನಡೆಸಿದ್ದು, ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಗ್ರೋಜಾ ಗ್ರಾಮದಲ್ಲಿ ಮಧ್ಯಾಹ್ನ 1:15ರ (ಭಾರತೀಯ ಕಾಲಮಾನ) ವೇಳೆಗೆ ದಾಳಿ ನಡೆದಿರುವುದಾಗಿ ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ತಿಳಿಸಿದ್ದಾರೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodimir Zelensky) ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ
ರಷ್ಯಾ ಸೇನೆ ನಡೆಸಿದ ರಾಕೆಟ್ ದಾಳಿಯಲ್ಲಿ ಗುರುವಾರ ಉಕ್ರೇನಿನ 49 ಮಂದಿ ಸಾವನ್ನಪ್ಪಿದ್ದಾರೆ. ಇದು ರಷ್ಯಾದ ಉದ್ದೇಶಿದ ಭಯೋತ್ಪಾದಕ ದಾಳಿ ಎಂದು ಉಕ್ರೇನಿಯನ್ ಪ್ರಾಸಿಕ್ಯೂಟರ್ ಜನರಲ್ ಆರೋಪಿಸಿದ್ದಾರೆ. ಘಟನೆ ನಂತರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: 2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು
ಮಾಸ್ಕೋ: ಉತ್ತರ ಕೊರಿಯಾದ (North Korea )ನಾಯಕ ಕಿಮ್ ಜಾಂಗ್ ಉನ್ (Kim Jong Un) ಮಂಗಳವಾರ ತಮ್ಮ ಖಾಸಗಿ ರೈಲಿನ ಮುಖಾಂತರ ರಷ್ಯಾಗೆ (Russia) ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಿಮ್ ಭಾನುವಾರ ತನ್ನ ಖಾಸಗಿ ರೈಲಿನಲ್ಲಿ ಪ್ಯೋಂಗ್ಯಾಂಗ್‌ನಿಂದ ರಷ್ಯಾಗೆ ಪ್ರಯಾಣ ಬೆಳೆಸಿದ್ದಾರೆ. ಉನ್ನತ ಶಸ್ತ್ರಾಸ್ತ್ರ, ಮಿಲಿಟರಿ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರೊಂದಿಗೆ ಅವರು ರಷ್ಯಾ ತಲುಪಿದ್ದಾರೆ.
ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ ಕಿಮ್ ಈ ವಾರದ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಲಿದ್ದಾರೆ. ಪುಟಿನ್ ಅವರೊಂದಿಗೆ ಸಮಗ್ರ ಚರ್ಚೆಗಾಗಿ ಕಿಮ್ ರಷ್ಯಾಗೆ ಭೇಟಿ ನೀಡಿದ್ದಾರೆ.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ, ಪ್ರದೇಶದ ಪರಿಸ್ಥಿತಿ ಮತ್ತು ಜಾಗತಿಕ ರಂಗದಲ್ಲಿ ಚರ್ಚಿಸಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಎರಡು ನಿಯೋಗಗಳ ನಡುವೆ ಮಾತುಕತೆ ನಡೆಯಲಿದ್ದು, ಅದರ ನಂತರ ಅಗತ್ಯವಿದ್ದರೆ ನಾಯಕರು ಸಂವಹನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಹೈವೋಲ್ಟೇಜ್ ಸಭೆ
ಉತ್ತರ ಕೊರಿಯಾದ ನಾಯಕ ವಿದೇಶ ಪ್ರಯಣ ಕೈಗೊಳ್ಳುವುದು ಅತ್ಯಂತ ವಿರಳ. ತನ್ನ 12 ವರ್ಷಗಳ ಅಧಿಕಾರದಲ್ಲಿ ಕಿಮ್ ಜಾಂಗ್ ಉನ್ ಕೇವಲ 7 ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ 4 ಬಾರಿ ತನ್ನ ರಾಜಕೀಯ ಮಿತ್ರ ರಾಷ್ಟ್ರ ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ 4 ವರ್ಷಗಳ ಬಳಿಕ ಕಿಮ್ ಜಾಂಗ್ ಉನ್‌ನ ಮೊದಲ ಪ್ರವಾಸ ಇದಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?
ನವದೆಹಲಿ: ಚೀನಾ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಮುಂದಿನ ವಾರ ಭಾರತದಲ್ಲಿ (India) ನಡೆಯಲಿರುವ ಜಿ20 ಶೃಂಗಸಭೆಯಿಂದ (G20 Summit) ಹೊರಗುಳಿಯುವ ಸಾಧ್ಯತೆ ಇದೆಯೆಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಜಿನ್‌ಪಿಂಗ್ ಬದಲು ಚೀನಾದ ಪ್ರತಿನಿಧಿಯಾಗಿ ಲಿ ಕಿಯಾಂಗ್ ಅವರು ಭಾಗವಹಿಸುವ ನಿರೀಕ್ಷೆಯಿದೆ.
ಕೆಲ ದಿನಗಳ ಹಿಂದಷ್ಟೇ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir putin) ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತಮ್ಮ ಮೇಲೆ ವಾರಂಟ್ ಹೊರಡಿಸಿರುವ ಹಿನ್ನೆಲೆ ಜಿ20 ಶೃಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಬದಲು ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋವ್ ಅವರನ್ನು ಕಳುಹಿಸುವುದಾಗಿ ಘೋಷಿಸಿದ್ದಾರೆ.
ಅದು 2022, ಫೆಬ್ರವರಿ 24ರ ಸಂದರ್ಭ. ಇಡೀ ಜಗತ್ತೇ ಬೆಚ್ಚಿ ಬೀಳುವಂತಹ ಘೋಷಣೆಯೊಂದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Volodymyr Zelensky) ಮಾಡಿದರು. ಉಕ್ರೇನ್ ಮೇಲೆ ಯುದ್ಧ ನಡೆಸುವುದಾಗಿ ಘೋಷಿಸಿ ಬಿಟ್ಟರು. ಎರಡು ಮಹಾಯುದ್ಧಗಳ ಭೀಕರತೆಗೆ ನಲುಗಿ ಶಾಂತಿಯ ಮಂತ್ರ ಜಪಿಸುತ್ತಿದ್ದ ವಿಶ್ವಕ್ಕೆ, ಈ ಘೋಷಣೆ ನಿಜಕ್ಕೂ ನುಂಗಲಾರದ ತುತ್ತಾಯಿತು. ವಿಶ್ವಯುದ್ಧಗಳಿಂದಾದ ಸಾವು-ನೋವು, ಆರ್ಥಿಕ ಪ್ರಕ್ಷುಬ್ಧತೆ, ದೇಶ ದೇಶಗಳ ನಡುವಿನ ಕಂದಕ, ವೈಮನಸ್ಸಿನ ಗಾಯದ ಗುರುತು ಇನ್ನೂ ಮಾಡಿಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ ಪುಟಿನ್ (Vladimir Putin) ನಿರ್ಧಾರ ಭೂವಾಸಿಗಳಿಗೆ ಮತ್ತೆ ಸಂಕಷ್ಟ ತಂದಿಟ್ಟಿದೆ.
ಉಕ್ರೇನ್ ಮೇಲೆ ರಷ್ಯಾ (Ukraine-Russia) ನಡೆಸುತ್ತಿರುವ ಯುದ್ಧಕ್ಕೆ 18 ತಿಂಗಳು ತುಂಬಿದೆ. ರಷ್ಯಾದ ಆಕ್ರಮಣದಿಂದ ಹತ್ತಾರು ಸಾವಿರ ಜನರ ಮಾರಣಹೋಮವಾಗಿದೆ. ಲಕ್ಷಾಂತರ ಜನರು ಗಂಟುಮೂಟೆ ಕಟ್ಟಿಕೊಂಡು ನೆಲೆ ಇಲ್ಲದಂತೆ ಅಲೆಮಾರಿಗಳಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಪ್ರಪಂಚದಾದ್ಯಂತ ಆರ್ಥಿಕ ಪ್ರಕ್ಷುಬ್ಧತೆ ತಲೆದೋರಿದೆ. 2ನೇ ಮಹಾಯುದ್ಧದ (World War 2) ನಂತರ ಯೂರೋಪ್‌ನಲ್ಲಿ ಎಂದೂ ಕಂಡಿರದ ಮಟ್ಟದಲ್ಲಿ ಅಪಾರ ಸಾವು-ನೋವು ಈ ಯುದ್ಧದಲ್ಲಿ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?
ಎರಡನೇ ಮಹಾಯುದ್ಧದ ಭೀಕರತೆ
1939ರಿಂದ 1945 ರ ವರೆಗೆ ನಡೆದ ಜಾಗತಿಕ ಅನೇಕ ದೇಶಗಳನ್ನೊಳಗೊಂಡ ಯುದ್ಧ ಎರಡನೇ ಮಹಾಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆದ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ (ಜರ್ಮನಿ, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ) ಹಾಗೂ ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಬರೋಬ್ಬರಿ 70 ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ್ದ ಈ ಯುದ್ಧದಲ್ಲಿ 6 ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮನುಕುಲದ ಇತಿಹಾಸದಲ್ಲೇ ಇದು ಅತಿ ಹೆಚ್ಚು ಸಾವು-ನೋವಾದ ಯುದ್ಧ.
ಯುದ್ಧದಿಂದ ರಷ್ಯಾ ಮತ್ತು ಉಕ್ರೇನ್ ಎರಡೂ ರಾಷ್ಟ್ರಗಳಲ್ಲಿ ಎಷ್ಟು ಸಾವು-ನೋವಾಗಿದೆ? ಯುದ್ಧದಲ್ಲಿ ಮನೆ ಕಳೆದುಕೊಂಡು ಎಷ್ಟು ಜನ ವಲಸೆ ಹೋಗಿದ್ದಾರೆ? ಉಕ್ರೇನ್ ಹಾಗೂ ರಷ್ಯಾದ ಮೇಲೆ ಯುದ್ಧ ಯಾವ ರೀತಿಯ ಪರಿಣಾಮ ಬೀರಿದೆ? ಈ ಯುದ್ಧದಿಂದ ಜಾಗತಿಕವಾಗಿ ಉಂಟಾದ ಬಿಕ್ಕಟ್ಟೇನು? ಉಕ್ರೇನ್‌ಗೆ ಒದಗಿ ಬಂದ ನೆರವು ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದವರೆಷ್ಟು?
ಎರಡನೆಯ ಮಹಾಯುದ್ಧದ ನಂತರ ಯೂರೋಪ್‌ನಲ್ಲಿ ಕಂಡುಬರದ ಮಟ್ಟದಲ್ಲಿ ಈ ಯುದ್ಧವು ಸಾವನ್ನು ಉಂಟುಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಪ್ರಕಾರ, ಜುಲೈ ಅಂತ್ಯದ ವೇಳೆಗೆ 9,000 ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. 16,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವಾಗಿದೆ. ಆ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಯುದ್ಧದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆ ಎರಡೂ ಸೇರಿ 5,00,000 ದಷ್ಟಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ
1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಬೆಂಬಲಿಸುವ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಂಕಿಅಂಶದಲ್ಲಿ ಹೆಚ್ಚಿನ ಸಂಖ್ಯೆಯನ್ನು ತೋರಿಸಲಾಗಿದೆ. ಪ್ರಚಾರಕ್ಕಾಗಿ ಯುಎಸ್ ಹೀಗೆ ಮಾಡುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಆರೋಪಿಸಿದ್ದಾರೆ.
ಸ್ಥಳಾಂತರ ಆದವರೆಷ್ಟು?
2022 ರ ಆಕ್ರಮಣದಿಂದ, ಲಕ್ಷಾಂತರ ಉಕ್ರೇನಿಯನ್ನರು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 4.1 ಕೋಟಿಯಷ್ಟು ಜನಸಂಖ್ಯೆಯನ್ನು ಉಕ್ರೇನ್ ರಾಷ್ಟ್ರ ಹೊಂದಿದೆ. 1.7 ಕೋಟಿಯಷ್ಟು ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ. 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ನಿರಾಶ್ರಿತರು ಯೂರೋಪ್‌ನಾದ್ಯಂತ ಆಶ್ರಯ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ಪರಿಸ್ಥಿತಿ ಹೇಗಿದೆ?
ಯುದ್ಧ ಪ್ರಾರಂಭವಾದಾಗಿನಿಂದಲೂ ರಷ್ಯಾವು ಉಕ್ರೇನ್‌ನ 11 ಪ್ರತಿಶತದಷ್ಟು ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಈ ಭೂಪ್ರದೇಶದ ಅಮೆರಿಕದ ರಾಜ್ಯಗಳಾದ ಮೆಸ್ಸಾಚುಸೆಟ್ಸ್, ನ್ಯೂ ಹ್ಯಾಂಪ್‌ಶೈರ್ ಮತ್ತು ಕನೆಕ್ಟಿಕಟ್‌ಗೆ ಸಮಾನವಾಗಿದೆ ಎಂದು ಹಾರ್ವರ್ಡ್ ಕೆನಡಿ ಸ್ಕೂಲ್‌ನಲ್ಲಿರುವ ಬೆಲ್ಫರ್ ಸೆಂಟರ್ ವರದಿಯಲ್ಲಿ ತಿಳಿಸಿದೆ. 2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. ಒಟ್ಟಾರೆ ರಷ್ಯಾ ಈಗ ಉಕ್ರೇನ್‌ನ ಸುಮಾರು 17.5% ಭೂಭಾಗವನ್ನು ನಿಯಂತ್ರಿಸುತ್ತಿದೆ. ಇದು ಸುಮಾರು 41,000 ಚದರ ಮೈಲಿಗಳು (106,000 ಚದರ ಕಿಮೀ) ಇದೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್
ಉಕ್ರೇನ್ ತನ್ನ ಕರಾವಳಿಯ ಒಂದು ಭಾಗವನ್ನು ಕಳೆದುಕೊಂಡಿದೆ. ಅದರ ಆರ್ಥಿಕತೆಯು ದುರ್ಬಲಗೊಂಡಿದೆ. ಹೋರಾಟದಿಂದ ಕೆಲವು ನಗರಗಳು ಪಾಳುಭೂಮಿಗಳಾಗಿ ಮಾರ್ಪಟ್ಟಿವೆ. ಉಕ್ರೇನ್‌ನ ಆರ್ಥಿಕತೆಯು 2022 ರಲ್ಲಿ 30% ರಷ್ಟು ಕುಸಿತ ಕಂಡಿದೆ. ಈ ವರ್ಷ 1% ರಿಂದ 3% ರಷ್ಟು ಬೆಳೆಯುವ ಮುನ್ಸೂಚನೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವಿಶ್ಲೇಷಿಸಿದೆ.
ರಷ್ಯಾದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ?
ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧದ ಅಸ್ತ್ರವನ್ನು ಹೂಡಿವೆ. ಇದರಿಂದ ರಷ್ಯಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ರಷ್ಯಾವು ಮಿಲಿಟರಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇದರಿಂದ ಇತರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. 2022 ರಲ್ಲಿ ರಷ್ಯಾ ಆರ್ಥಿಕತೆಯು 2.1% ನಷ್ಟು ಕುಸಿತ ಕಂಡಿತ್ತು. ಈ ವರ್ಷ 1.5% ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಮಾಡಿದೆ.
ಯುದ್ಧದ ಮಧ್ಯಾವಧಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ನಿರ್ಗಮನ, ಮಾನವ ಬಂಡವಾಳದ ನಷ್ಟ, ಜಾಗತಿಕ ಹಣಕಾಸು ಮಾರುಕಟ್ಟೆಗಳಿಂದ ಸಂಪರ್ಕ ಕಡಿತದಿಂದ ರಷ್ಯಾದ ಆರ್ಥಿಕತೆಯು ಕುಂಠಿತಗೊಂಡಿದೆ ಎಂದು IMF ವಕ್ತಾರ ಜೂಲಿ ಕೊಜಾಕ್ ಕಳೆದ ತಿಂಗಳು ಹೇಳಿದ್ದರು. ಈ ಅವಧಿಯಲ್ಲಿ ರಷ್ಯಾದಲ್ಲಿ ಉತ್ಪಾದನೆಯು ಯುದ್ಧ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ 7 ಪ್ರತಿಶತದಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ರಷ್ಯಾ ತನ್ನ 2023 ರ ರಕ್ಷಣಾ ವೆಚ್ಚದ ಗುರಿಯನ್ನು 100 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೊಂದಿದೆ. ಎಲ್ಲಾ ಸಾರ್ವಜನಿಕ ವೆಚ್ಚದ ಮೂರನೇ ಒಂದು ಭಾಗವನ್ನು ಮಿಲಿಟರಿಗಾಗಿಯೇ ವಿನಿಯೋಗಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
ಜಾಗತಿಕ ಹಣದುಬ್ಬರ, ಆಹಾರ ಬಿಕ್ಕಟ್ಟು
ರಷ್ಯಾದ ಆಕ್ರಮಣ ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳು ಗೊಬ್ಬರ, ಗೋಧಿ, ಲೋಹಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಯಿತು. ಈ ಯುದ್ಧವು ಹಣದುಬ್ಬರದ ಅಲೆ ಮತ್ತು ಜಾಗತಿಕ ಆಹಾರ ಬಿಕ್ಕಟ್ಟನ್ನು ಉತ್ತೇಜಿಸಿತು. ಸೌದಿ ಅರೇಬಿಯಾದ ನಂತರ ರಷ್ಯಾ ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ. ಅಷ್ಟೇ ಅಲ್ಲ ನೈಸರ್ಗಿಕ ಅನಿಲ, ಗೋಧಿ, ಸಾರಜನಕ ಗೊಬ್ಬರ ಮತ್ತು ಪಲ್ಲಾಡಿಯಂನ ರಫ್ತುದಾರ ಕೂಡ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಸ್ವಲ್ಪ ಕಾಲದ ನಂತರ, ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ದಾಖಲೆಗಳನ್ನೂ ಮೀರಿ ಗರಿಷ್ಠ ಮಟ್ಟಕ್ಕೆ ಏರಿತು.
ಪಾಶ್ಚಾತ್ಯ ರಾಷ್ಟ್ರಗಳಿಂದ ಉಕ್ರೇನ್‌ಗೆ ಒದಗಿಬಂದ ನೆರವು
ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ಇದುವರೆಗೆ 43 ಶತಕೋಟಿಗೂ ಹೆಚ್ಚು ಡಾಲರ್ ಭದ್ರತಾ ನೆರವನ್ನು ನೀಡಿದೆ. ಇದರಲ್ಲಿ ಸ್ಟಿಂಗರ್ ವಿಮಾನ-ವಿರೋಧಿ ವ್ಯವಸ್ಥೆಗಳು, ಜಾವೆಲಿನ್ ಆಂಟಿ-ಆರ್ಮರ್ ಸಿಸ್ಟಮ್‌ಗಳು, 155mm ಹೊವಿಟ್ಜರ್‌ಗಳು ಮತ್ತು ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ದಾಳಿಯಿಂದ ರಕ್ಷಿಸುವ ಉಪಕರಣಗಳು ಸೇರಿವೆ. ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಒಕ್ಕೂಟ, ಬ್ರಿಟನ್, ಜರ್ಮನಿ ಮತ್ತು ಜಪಾನ್ ದೇಶಗಳು ಉಕ್ರೇನ್‌ಗೆ ಅಪಾರ ಬೆಂಬಲ ನೀಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದರಿಂದ ಯುದ್ಧ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ರಷ್ಯಾ ಆರೋಪಿಸಿದೆ.
ಮಾಸ್ಕೋ: ಯುದ್ಧ ಅಪರಾಧಗಳ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ ವಾರಂಟ್ ಹೊರಡಿಸಿರುವ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತದಲ್ಲಿ (India) ನಡೆಯಲಿರುವ ಜಿ20 ಸಭೆಯಲ್ಲಿ (G20 Summit) ಭಾಗಿಯಾಗದಿರಲು ನಿರ್ಧರಿಸಿದ್ದಾರೆ ಎಂದು ಕ್ರೆಮ್ಲಿನ್ ಶುಕ್ರವಾರ ತಿಳಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣದ ವೇಳೆ ಅವರ ಬಂಧನ ಸಾಧ್ಯತೆ ಹಿನ್ನೆಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದೇ ಭೀತಿ ಹಿನ್ನೆಲೆ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಅವರು ವೀಡಿಯೋ ಲಿಂಕ್ ಮೂಲಕ ಭಾಗವಹಿಸಿದರು. ಇದನ್ನೂ ಓದಿ: ಆನ್‍ಲೈನ್ ಬೆಟ್ಟಿಂಗ್- ಮಾಧ್ಯಮಗಳಿಗೆ ಕೇಂದ್ರ ಖಡಕ್ ಸೂಚನೆ
ಜಿ20 ಶೃಂಗಸಭೆಯು ಸೆಪ್ಟೆಂಬರ್ 9 ರಿಂದ 10 ರವರೆಗೆ ಭಾರತದಲ್ಲಿ ನಡೆಯಲಿದ್ದು, ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಮಾಡಲಾಗುತ್ತದೆ. ಈ ವೇಳೆ ಎಲ್ಲ ದೇಶದ ನಾಯಕರು ಇರುವುದು ವಾಡಿಕೆ. ಆದಾಗ್ಯೂ ಸಭೆಯಿಂದ ದೂರ ಉಳಿಯಲು ಪುಟಿನ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ
ಮಾಸ್ಕೋ: `ಸೆಕ್ಸ್ ತಂಪಾಗಿದೆ, ಆದ್ರೆ ಪುಟಿನ್ (Vladimir Putin) ಹತ್ಯೆ ಇನ್ನೂ ಉತ್ತಮವಾಗಿದೆ’ ಎನ್ನುವ ಬರಹ ಹೊಂದಿದ ಫೋಟೋ ಟ್ವೀಟ್ ಮಾಡಿದ್ದಕ್ಕೆ ಮಹಿಳೆಯೊಬ್ಬಳಿಗೆ ಭಾರೀ ದಂಡ ವಿಧಿಸಿರುವ ಘಟನೆ ರಷ್ಯಾದಲ್ಲಿ (Russia) ನಡೆದಿದೆ.
`ಸೆಕ್ಸ್ ಇಸ್ ಕೂಲ್, ಬಟ್ ಪುಟಿನ್ಸ್ ಡೆತ್ ಇಸ್ ಬೆಟರ್’ ಆಕ್ಷೇಪಾರ್ಹ ಬರಹ ಹೊಂದಿದ್ದ ಕ್ಯಾರಿ ಬ್ಯಾಗ್ ಫೋಟೋವನ್ನ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಅಲೆಕ್ಸಾಂಡ್ರಾ ಎಂಬ ರಷ್ಯಾದ ಮಹಿಳೆಗೆ 30 ಸಾವಿರ ರುಬೆಲ್ಸ್ (ಅಂದಾಜು 25 ಸಾವಿರ ರೂ.) ದಂಡ ವಿಧಿಸಲಾಗಿದೆ.
⚡️In Krasnodar, a girl was fined 30 thousand rubles for a bag with the inscription "Sex is cool, but Putin's death is better" 👀 pic.twitter.com/CoFb644r5o
ಕಳೆದ ಜೂನ್ 28ರಂದು ಅಲೆಕ್ಸಾಂಡ್ರಾಳನ್ನ ಆಂತರಿಕ ವ್ಯವಹಾರಗಳ ಸಚಿವಾಲಯದ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಕೆಯ ಇನ್ಸ್ಟಾಗ್ರಾಮ್ ಖಾತೆಯನ್ನ ಪರಿಶೀಲಿಸಿದಾಗ ಪುಟಿನ್ ವಿರುದ್ಧ ಹಾಕಲಾದ ಈ ಪೋಸ್ಟ್ನೊಂದಿಗೆ `ಯುದ್ಧ ಬೇಡ’ ಎಂಬ ಸಂದೇಶ ಹೊಂದಿರುವ ಬರಹಗಳೂ ಇದ್ದವು. ಅಲ್ಲದೇ ನಿರಂತರವಾಗಿ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸುವಂತೆ ಬರಹಗಳನ್ನ ಹಂಚಿಕೊಂಡಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್
ವಿಚಾರಣೆ ಸಂದರ್ಭದಲ್ಲಿ ಆಕೆಯ ಕೈ ತೋಳುಗಳ ಮೇಲೆ ಹಾಕಿಸಿಕೊಂಡಿದ್ದ ಅಚ್ಚೆ ಗುರುತುಗಳನ್ನು ಪರಿಶೀಲಿಸುವ ಜೊತೆಗೆ ಅಧಿಕಾರಿಗಳು ಅದರ ಫೋಟೋಗಳನ್ನೂ ತೆಗೆದುಕೊಂಡಿದ್ದರು. ಆಕೆಯನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಳಪಡಿಸಿದಾಗ ಲೈಂಗಿಕ ಸಂಬಂಧಗಳ ಪ್ರಚಾರ ಹಾಗೂ ಮಾನಹಾನಿ ಆರೋಪದ ಮೇಲೆ ಅಲ್ಲಿಯೂ ಆಕೆಗೆ 2 ಸಾವಿರ ಡಾಲರ್ (1.65 ಲಕ್ಷ ರೂ.) ದಂಡ ವಿಧಿಸಲಾಯಿತು.