Tag: Vladimir putin

  • ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ  ಸೇರಿಸಿದ ರಷ್ಯಾ

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿದ ರಷ್ಯಾ

    ಮಾಸ್ಕೋ: ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ (Volodymyr Zelensky) ವಿರುದ್ಧ ರಷ್ಯಾ  (Russia) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

    ಫೆಬ್ರವರಿ 2022 ರಲ್ಲಿ ಉಕ್ರೇನ್‍ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ, ಉಕ್ರೇನ್ ಮತ್ತು ಇತರ ಯುರೋಪಿಯನ್ ರಾಜಕಾರಣಿಗಳ ಬಂಧನಕ್ಕೆ ವಾರಂಟ್‍ಗಳನ್ನು ಹೊರಡಿಸಿದೆ. ಈಗಾಗಲೇ ಎಸ್ಟೋನಿಯಾದ ಪ್ರಧಾನಿ ಕಾಜಾ ಕಲ್ಲಾಸ್, ಲಿಥುವೇನಿಯಾದ ಸಂಸ್ಕೃತಿ ಮಂತ್ರಿ ಮತ್ತು ಹಿಂದಿನ ಲಟ್ವಿಯನ್ ಸಂಸತ್ತಿನ ಸದಸ್ಯರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.

    ಕಳೆದ ವರ್ಷ ಯುದ್ಧಾಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ (Vladimir Putin) ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಬಂಧನದ ವಾರಂಟ್ ಹೊರಡಿಸಿತ್ತು.

    ಇಲ್ಲಿಯವರೆಗೂ ಎರಡು ದೇಶಗಳ ನಡುವಿನ ಯುದ್ಧದಲ್ಲಿ 1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

  • ರಷ್ಯಾಕ್ಕೆ ಮತ್ತೆ ಪುಟಿನ್‌ – ಮುಂದಿರುವ ಸವಾಲುಗಳೇನು?

    ರಷ್ಯಾಕ್ಕೆ ಮತ್ತೆ ಪುಟಿನ್‌ – ಮುಂದಿರುವ ಸವಾಲುಗಳೇನು?

    ಪುಟಿನ್ (Vladimir Putin) ಯಾವುದೇ ಗಂಭೀರ ಸ್ಪರ್ಧೆ ಎದುರಿಸದೇ  ಗೆಲುವು ಸಾಧಿಸಿ, ಮತ್ತೊಮ್ಮೆ ರಷ್ಯಾ (Russia) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗಾಗಲೇ ಸುಮಾರು ಎರಡೂವರೆ ದಶಕಗಳ ಕಾಲ ಆಡಳಿತ ನಡೆಸಿರುವ ಅವರು, ಈ ಬಾರಿಯ ಅಧಿಕಾರ ನಡೆಸುವುದು ಅಷ್ಟೊಂದು ಸಲೀಸಾಗಿಲ್ಲ ಎಂಬ ಚರ್ಚೆಗಳು ಕೇಳಿ ಬರುತ್ತಿದೆ. ಅವರ ಅಧಿಕಾರಕ್ಕೆ ದೇಶ ವಿದೇಶಗಳಿಂದ ಅಪಸ್ವರಗಳು ಎದ್ದಿದೆ. ರಷ್ಯಾಕ್ಕೆ ಇಷ್ಟೇ ಅಲ್ಲದೇ ಹಲವಾರು ಆಂತರಿಕ ಸವಾಲುಗಳು ಸಹ ಎದುರಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಉಕ್ರೇನ್‌ ಯುದ್ಧ, ವ್ಯಾಪಾರ ಸಂಬಂಧ, ನಿರಂಕುಶ ಪ್ರಭುತ್ವಕ್ಕೆ ಬೇಸತ್ತು ವಲಸೆ, ರಾಜಕೀಯ ವಿರೋಧ, ದೇಶದ ಆರ್ಥಿಕತೆ ಕುಸಿತ, ಹೀಗೆ ಹಲವಾರು ಸಮಸ್ಯೆಗಳನ್ನು ರಷ್ಯಾ ಎದುರಿಸುತ್ತಿದೆ.

    ಉಕ್ರೇನ್ ಯುದ್ಧ ಇನ್ನೂ ಹೆಚ್ಚಾಗತ್ತಾ? 

    ರಷ್ಯಾ ಉಕ್ರೇನ್‌ನ ಸುಮಾರು ಐದನೇ ಒಂದು ಭಾಗವನ್ನು ನಿಯಂತ್ರಿಸುತ್ತದೆ. ಉಭಯ ದೇಶಗಳ ನಡುವಿನ ಯುದ್ಧದಲ್ಲಿ ಎರಡೂ ಕಡೆಗಳಲ್ಲೂ ಅಪಾರ ಸಾವು ನೋವುಗಳು ಉಂಟಾಗಿದ್ದು, ಎರಡೂ ದೇಶಗಳಲ್ಲೂ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ತನ್ನ ನೆರೆಹೊರೆಯ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಪುಟಿನ್ 2022 ರಲ್ಲಿ ಆರಂಭಿಸಿದ ಯುದ್ಧ ಭಾರೀ ಸಿಬ್ಬಂದಿ ಸಾವಿಗೆ ಕಾರಣವಾಗಿದೆ. ಅಲ್ಲದೇ ರಷ್ಯಾದ ಸಂಪನ್ಮೂಲಗಳನ್ನು ಬರಿದು ಮಾಡುವತ್ತ ಸಾಗಿದೆ. ಸುಮಾರು 45000 ಕ್ಕೂ ಹೆಚ್ಚು ರಷ್ಯಾ ಸೈನಿಕರು ಈ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಮೆರಿಕ ವರದಿಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಉಲ್ಲೇಖಿಸಿದೆ. ಈಗ ಮತ್ತೆ ಅಧಿಕಾರಕ್ಕೆ ಏರಿದ ಪುಟಿನ್‌ ಈ ಯುದ್ಧವನ್ನು ಕೈಬಿಡುತ್ತಾರಾ? ಮುಂದುವರಿಸುತ್ತಾರಾ ಎಂಬ ಪ್ರಶ್ನೆ ಜಗತ್ತಿನ ಮುಂದಿದೆ.

    ಭಯೋತ್ಪಾದಕ ದಾಳಿಗೂ ಅಂಟಿದ ಶತ್ರು ರಾಷ್ಟ್ರದ ಛಾಯೆ

    ಚುನಾವಣೆ ಮುಗಿದು ತಿಂಗಳು ಕಳೆಯುವ ಮೊದಲೇ ರಷ್ಯಾ ಘೋರ ಭಯೋತ್ಪಾದಕ ದಾಳಿಯನ್ನು ಕಂಡಿದೆ. ದಾಳಿಯಲ್ಲಿ ಸುಮಾರು 150 ಜನ ಸಾವಿಗೀಡಾಗಿದ್ದಾರೆ. ಇದರ ಹೊಣೆಯನ್ನು ಐಸಿಸ್‌ ಹೊತ್ತರೂ, ಇದು ಉಕ್ರೇನ್‌ ಕೃತ್ಯ ಎಂದು ರಷ್ಯಾ ಹೇಳಿಕೊಂಡಿದೆ. ದಾಳಿಯ ಬಗ್ಗೆ ಉಕ್ರೇನ್‌ ಇದು ರಷ್ಯಾದ್ದೇ ಕುತಂತ್ರ ಎಂದು ಪ್ರತ್ಯಾರೋಪ ಮಾಡಿದೆ. ಈ ಆರೋಪಕ್ಕೆ ಪ್ರಮುಖ ಕಾರಣ ಎರಡೂ ವರ್ಷಗಳಿಂದ ಈ ದೇಶಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ಯುದ್ಧ. ಈ ಯುದ್ಧದಿಂದಾಗಿ ಎರಡೂ ದೇಶಗಳ ನಡುವೆ ಉಂಟಾಗಿರುವ ಅಪನಂಬಿಕೆಗಳು. ಇದರೊಂದಿಗೆ ದೇಶದಲ್ಲಿ ತನ್ನನ್ನು ಬೆಂಬಲಿಸುವ ಜನರನ್ನು ಉಕ್ರೇನ್‌ ವಿರುದ್ಧ ತಿರುಗಿಸುವುದು ಈ ಆರೋಪದ ಉದ್ದೇಶವಿರಬಹುದು.

    ‌ಪಾಶ್ಚಿಮಾತ್ಯ ದೇಶಗಳ ನಿರ್ಬಂಧ

    ನಿರ್ಬಂಧಗಳು ಮತ್ತು ನಾರ್ಡ್ ಸ್ಟ್ರೀಮ್ ಗ್ಯಾಸ್ ಪೈಪ್‌ಲೈನ್‌ಗಳ ಸ್ಫೋಟದಿಂದಾಗಿ ರಷ್ಯಾ ತನ್ನ ಲಾಭದಾಯಕ ಯುರೋಪಿಯನ್ ಇಂಧನ ಮಾರುಕಟ್ಟೆಯನ್ನು ಕಳೆದುಕೊಂಡಿದೆ. ಟರ್ಕಿಯ ಹೊಸ ʻಗ್ಯಾಸ್ ಹಬ್ʼಮೂಲಕ ರಷ್ಯಾ ತನ್ನ ಅನಿಲ ರಫ್ತುನ್ನು ಮರುಹೊಂದಿಸಿಕೊಳ್ಳುತ್ತಿದ್ದು, ಇದು ಆರ್ಥಿಕವಾಗಿ ಹೊಡೆತ ಕೊಡುತ್ತಿದೆ.

    ಪರಮಾಣು ಶಸ್ತ್ರಾಸ್ತ್ರಗಳು – ಅಮೆರಿಕದೊಂದಿಗೆ ಶಸ್ತ್ರಾಸ್ತ್ರ ಸ್ಪರ್ಧೆ

    ರಷ್ಯಾ ಮತ್ತು ಅಮೆರಿಕ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಮಿತಿಗೊಳಿಸುವ ಹೊಸ START ಒಪ್ಪಂದವು ಫೆಬ್ರವರಿ 2026 ರಲ್ಲಿ ಮುಕ್ತಾಯಗೊಳ್ಳಲಿದೆ. ಈ ಒಪ್ಪಂದ, ಎರಡೂ ಕಡೆಯವರು ಮಿತಿಯಿಲ್ಲದೆ ತಮ್ಮ ಶಸ್ತ್ರಾಸ್ತ್ರಗಳನ್ನು ವಿಸ್ತರಿಸಬಹುದು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ಒಕ್ಕೂಟವನ್ನು ದುರ್ಬಲಗೊಳಿಸಿದ ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಅಮೆರಿಕವನ್ನು ಸೋಲಿಸಲು ರಷ್ಯಾ ರಕ್ಷಣಾ ವೆಚ್ಚದ ಮೇಲಿನ ಹೂಡಿಕೆ ಹೆಚ್ಚಿಸಬೇಕು ಎಂದು ಪುಟಿನ್ ಹೇಳಿಕೊಂಡಿದ್ದಾರೆ.

    ಬಾಹ್ಯಾಕಾಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಯೋಜಿಸುತ್ತಿದೆ ಎಂಬ ಅಮೆರಿಕ ಸಮರ್ಥನೆಗಳನ್ನು ನಿರಾಕರಿಸುವ ರಷ್ಯಾ ಹಲವಾರು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸುತ್ತಿದೆ. ಇದರಿಂದ ಉಕ್ರೇನ್ ಸೇರಿದಂತೆ ಹಲವು ದೇಶಗಳಿಗೆ ಭದ್ರತೆಯ ಆತಂಕವನ್ನು ಹೆಚ್ಚಿಸಿದೆ.

    ಹಣದುಬ್ಬರ

    ರಷ್ಯಾದಲ್ಲಿ ವಿಶೇಷವಾಗಿ ರಕ್ಷಣಾ ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ಪ್ರದೇಶಗಳಲ್ಲಿ ವೇತನಗಳು ಹೆಚ್ಚುತ್ತಿವೆ. ಜೀವನಮಟ್ಟದಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಲು 2018ರ ಭರವಸೆಯನ್ನು ನೀಡಲು ಪುಟಿನ್ ವಿಫಲರಾಗಿದ್ದಾರೆ ಮತ್ತು ಒಟ್ಟಾರೆಯಾಗಿ ನೈಜ ಆದಾಯವು ಕಳೆದ ದಶಕದಿಂದ ಸ್ಥಗಿತಗೊಂಡಿದೆ. 7.6% ರಷ್ಟಿರುವ ಹಣದುಬ್ಬರವನ್ನು ಕಡಿತಗೊಳಿಸುವುದು ಮತ್ತು ಬಜೆಟ್ ಒತ್ತಡಗಳನ್ನು ಕಡಿಮೆ ಮಾಡುವುದು ಈಗಿನ ಆದ್ಯತೆಗಳಾಗಿವೆ. ಈಗ ರಷ್ಯಾ ಶ್ರೀಮಂತ ವ್ಯಕ್ತಿಗಳಿಗೆ ಹೆಚ್ಚಿನ ತೆರಿಗೆಗಳನ್ನು ವಿಧಿಸಲು ಮುಂದಾಗಿದೆ. 

    ಪುಟಿನ್‌ಗೆ ಪ್ರಬಲ ವಿರೋಧ

    ಪುಟಿನ್‌ ಅವರಿಗೆ ರಷ್ಯಾದಲ್ಲಿ ಪ್ರಬಲ ರಾಜಕೀಯ ವಿರೋಧವಿದೆ. ಈಗ ನಡೆದ ಚುನಾವಣೆಯಲ್ಲಿ ಪುಟಿನ್‌ ಅಕ್ರಮವಾಗಿ ಗೆದ್ದಿದ್ದಾರೆ ಎಂಬ ಕೂಗುಗಳು ಸಹ ದೇಶದಲ್ಲಿ ಕೇಳಿಬಂದಿತ್ತು. ಅಮೆರಿಕ ಸಹ ರಷ್ಯಾ ಚುನಾವಣೆ ಅಕ್ರಮ ಎಂದು ಆರೋಪಿಸಿದೆ. ಇನ್ನೂ ದೇಶದಲ್ಲಿ ಮಾಧ್ಯಮಗಳ ಮೇಲೆ ಪುಟಿನ್‌ ನಿರ್ಬಂಧ ವಿಧಿಸಿದ್ದಾರೆ ಎಂಬ ಆರೋಪವಿದೆ.

    ಇತ್ತೀಚೆಗೆ ಪುಟಿನ್ ಎದುರಾಳಿ ಅಲೆಕ್ಸಿ ನವಲ್ನಿ ಅವರ ನಿಗೂಢ ಸಾವು ಪುಟಿನ್‌ ಅವರ ನಿರಂಕುಶ ಪ್ರಭುತ್ವಕ್ಕೆ ಹಿಡಿದ ಕನ್ನಡಿ ಎಂದು ಟೀಕೆ ವ್ಯಕ್ತವಾಗಿದೆ. ಪುಟಿನ್‌ಗೆ ಸವಾಲಾಗಿದ್ದ ಇತರ ರಾಜಕಾರಣಿ ಬೋರಿಸ್ ನೆಮ್ಟ್ಸೊವ್ ಅವರನ್ನು 2015 ರಲ್ಲಿ ಮಾಸ್ಕೋ ಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇತರ ಭಿನ್ನಮತೀಯರು ಮತ್ತು ಸಂಭಾವ್ಯ ರಾಜಕೀಯ ಸವಾಲುಗಾರರು ಕೂಡ ರಷ್ಯಾದಲ್ಲಿ ಅಥವಾ ಬೇರೆಡೆ ತಮ್ಮ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ.

  • ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್‌ ಆಕ್ರೋಶ

    ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್‌ ಆಕ್ರೋಶ

    ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ (Moscow) ನಡೆದ ಉಗ್ರರ ದಾಳಿಯು ಅನಾಗರಿಕ ಭಯೋತ್ಪಾದಕ ಕೃತ್ಯ (Russia Terror Attack) ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬೇಸರ ಹೊರಹಾಕಿದ್ದಾರೆ.

    ರಕ್ತಸಿಕ್ತ, ಬರ್ಬರ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದಂತೆ ನಾನು ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ದಾಳಿಯಲ್ಲಿ ಅಮಾಯಕರು, ಶಾಂತಿಪ್ರಿಯ ಜನರು ಬಲಿಯಾಗಿದ್ದಾರೆ. ನಾನು ಮಾ.24 ಅನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸುತ್ತೇನೆ ಎಂದು ಪುಟಿನ್ (Vladimir Putin) ದೂರದರ್ಶನದ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

    ದಾಳಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಪ್ರತೀಕಾರ ನೀಡುವುದಾಗಿ ರಷ್ಯಾ ಅಧ್ಯಕ್ಷರು ಪ್ರತಿಜ್ಞೆ ಮಾಡಿದ್ದಾರೆ. ‘ಜನರನ್ನು ಕೊಂದ ಭಯೋತ್ಪಾದಕ ದಾಳಿಯ ಎಲ್ಲಾ ನಾಲ್ಕು ಅಪರಾಧಿಗಳನ್ನು ಬಂಧಿಸಲಾಗಿದೆ. ಭಯೋತ್ಪಾದಕರು, ಕೊಲೆಗಾರರು, ಮಾನವರಲ್ಲದವರು ಪ್ರತೀಕಾರದ ಭವಿಷ್ಯವನ್ನು ಎದುರಿಸುತ್ತಾರೆ. ಹೆಚ್ಚುವರಿ ಭದ್ರತಾ ಕ್ರಮಗಳನ್ನು ದೇಶಾದ್ಯಂತ ಕೈಗೊಳ್ಳಲಾಗಿದೆ’ ಎಂದು ಪುಟಿನ್‌ ಹೇಳಿದ್ದಾರೆ.

    ಮಾಸ್ಕೋದಲ್ಲಿ ನಡೆದ ದಾಳಿಗೂ ಉಕ್ರೇನ್‌ಗೂ ಸಂಬಂಧವಿದೆ. ಬಂಧಿತ ನಾಲ್ವರು ದಾಳಿಕೋರರು ಉಕ್ರೇನ್ ಕಡೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ದಾಳಿಕೋರರನ್ನು ರಷ್ಯಾದಿಂದ ಗಡಿ ದಾಟಿಸಲು ಉಕ್ರೇನಿಯನ್ ಕಡೆಯ ಕೆಲವರು ಸಿದ್ಧತೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ

    ಇಸ್ಲಾಮಿಕ್ ಸ್ಟೇಟ್ (ISIS) ಭೀಕರ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿದೆ. ಆದರೆ ಸಮರ್ಥನೀಯ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.

  • ದಾಖಲೆಯ ಮತಗಳಿಂದ ರಷ್ಯಾ ಅಧ್ಯಕ್ಷ ಪುಟಿನ್ ಗೆಲುವು

    ದಾಖಲೆಯ ಮತಗಳಿಂದ ರಷ್ಯಾ ಅಧ್ಯಕ್ಷ ಪುಟಿನ್ ಗೆಲುವು

    ಮಾಸ್ಕೊ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾನುವಾರ ನಡೆದಿದ್ದ ಚುನಾವಣೆಯಲ್ಲಿ 87.8% ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಅಧಿಕಾರವನ್ನು ಪುನಃ ಭದ್ರಪಡಿಸಿಕೊಂಡಿದ್ದು, ಮುಂದಿನ ಆರು ವರ್ಷಗಳ ಅವಧಿ ಆಡಳಿತ ನಡೆಸಲಿದ್ದಾರೆ.

    ಚುನಾವಣೆ ವೇಳೆ ಪುಟಿನ್ ವಿರುದ್ಧ ಸಾವಿರಾರು ಜನ ಮತದಾನ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಪುಟಿನ್ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ರಷ್ಯಾ ಅಧ್ಯಕ್ಷರಾಗಿ 1999 ರಲ್ಲಿ ಅಧಿಕಾರಕ್ಕೆ ಏರಿದದ್ದರು. ಅಂದಿನಿಂದ ರಷ್ಯಾ ಮೇಲೆ ಅವರು ಹಿಡಿತ ಸಾಧಿಸಿದ್ದಾರೆ. ಪುಟಿನ್ ಪಡೆದ ಮತಗಳು, ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರ ಮನವೊಲಿಕೆಗೆ ಬಗ್ಗದ ಈಶ್ವರಪ್ಪ – ಇಂದಿನ ಮೋದಿ ಕಾರ್ಯಕ್ರಮಕ್ಕೆ ಹೋಗ್ತಾರಾ?

    ರಷ್ಯಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು, ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿಲ್ಲ, ವ್ಲಾಡಿಮಿರ್ ಪುಟಿನ್ ಅವರು ತಮ್ಮ ವಿರೋಧಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಸ್ಪರ್ಧಿಸದಂತೆ ತಡೆದಿರುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಆಕ್ರ್ಟಿಕ್ ಜೈಲಿನಲ್ಲಿ ನಿಧನರಾದ ವ್ಲಾಡಿಮಿರ್ ಪುಟಿನ್ ಅವರ ಪ್ರಬಲ ವಿರೋಧಿ ಅಲೆಕ್ಸಿ ನವಲ್ನಿ ಅವರ ಬೆಂಬಲಿಗರು. ಅವರ ಸಾವಿನ ಬಳಿಕ ಪುಟಿನ್ ಅವರನ್ನು ಭ್ರಷ್ಟ ನಿರಂಕುಶಾಧಿಕಾರಿ ಎಂದು ಟೀಕಿಸಿದ್ದರು. ಜೊತೆಗೆ ಅವರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಪ್ರತಿಭಟನೆಗೆ ಬರುವಂತೆ ರಷ್ಯನ್ನರಿಗೆ ಕರೆ ನೀಡಿದ್ದರು. ಇದೆಲ್ಲದರ ನಡುವೆ ಪುಟಿನ್ ಸುಲಭವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಯಲ್ಲಿ ಕಾಂಗ್ರೆಸ್ ದಾಂಧಲೆ

  • ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರಿಗೆ ವಿಶೇಷ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಕಿಮ್ ಜಾಂಗ್ ಅವರ ವೈಯಕ್ತಿಕ ಬಳಕೆಗಾಗಿ ಈ ಕಾರು ನೀಡಲಾಗಿದೆಯಂತೆ. ಉಡುಗೊರೆ ಸಂಬಂಧ ಕಿಮ್ ಅವರ ಸಹೋದರಿ ಪುಟಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಉಡುಗೊರೆಯು ಇಬ್ಬರು ಉನ್ನತ ನಾಯಕರ ನಡುವಿನ ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ಉಡುಗೊರೆ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ವಿಶ್ವಸಂಸ್ಥೆಯು ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ವಹಿವಾಟುಗಳನ್ನು ನಿಷೇಧಿಸಿದೆ.

    ರಷ್ಯಾ ನಿರ್ಮಿತ ಕಾರನ್ನು ಫೆಬ್ರವರಿ 18 ರಂದು ಕಿಮ್‌ನ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ ಸುದ್ದಿ ಸಂಸ್ಥೆಯೊಂದು ವರಿ ಮಾಡಿದ್ದು, ಆದರೆ ಈ ಕಾರನ್ನು ರಷ್ಯಾದಿಂದ ಕಳುಹಿಸಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಐಷಾರಾಮಿ ಕಾರುಗಳ ಮೇಲಿನ ಕಿಮ್‌ ಒಲವನ್ನು ಪರಿಗಣಿಸಿ ಪುಟಿನ್ ಈ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

    ಕಳೆದ ವರ್ಷ ರಷ್ಯಾಕ್ಕೆ ಭೇಟಿ ನೀಡಿದ್ದ ಕಿಮ್: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಿಮ್ ಜಾಂಗ್ ರೈಲಿನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಕಿಮ್ ಪುಟಿನ್ ಅಧ್ಯಕ್ಷ ಓರಸ್ ಸೆನೆಟ್ ಲಿಮೋಸಿನ್ ಅನ್ನು ಪರಿಶೀಲಿಸಿದರು. ಕಿಮ್ ಜಾಂಗ್ ರಷ್ಯಾಕ್ಕೆ ಭೇಟಿ ನೀಡಿದಾಗಿನಿಂದ ಉಭಯ ದೇಶಗಳ ನಡುವಿನ ವಿನಿಮಯವು ವೇಗವಾಗಿ ಹೆಚ್ಚುತ್ತಿದೆ.

  • ನನ್ನ ಪತಿಯನ್ನ ಕೊಂದಿದ್ದು ಪುಟಿನ್‌ – ಮೃತ ಅಲೆಕ್ಸಿ ನವಲ್ನಿ ಪತ್ನಿ ಕಣ್ಣೀರು!

    ನನ್ನ ಪತಿಯನ್ನ ಕೊಂದಿದ್ದು ಪುಟಿನ್‌ – ಮೃತ ಅಲೆಕ್ಸಿ ನವಲ್ನಿ ಪತ್ನಿ ಕಣ್ಣೀರು!

    ಮಾಸ್ಕೋ: ಅಲೆಕ್ಸಿ ನವಲ್ನಿ (Alexei Navalny) ನಿಗೂಢ ಸಾವಿನ ಕುರಿತು ಅವರ ಪತ್ನಿ ಯೂಲಿಯಾ ನವಲ್ನಾಯಾ, ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವ್ಲಾಡಿಮಿರ್‌ ಪುಟಿನ್‌ (Vladimir Putin) ತನ್ನ ಪತಿಯನ್ನ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಸೋಮವಾರ (ಫೆ.19) ಬಿಡುಗಡೆಯಾದ ವೀಡಿಯೋವೊಂದರಲ್ಲಿ ನವಲ್ನಿ ಪತ್ನಿ ಕಣ್ಣೀರಿಡುತ್ತಲೇ ಮಾತನಾಡಿದ್ದಾರೆ. ಪುಟಿನ್‌ ತನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ನನ್ನ ಪತಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ನವಲ್ನಿ ಮೃತಪಟ್ಟಿದ್ದು ಹೇಗೆ?
    ಪುಟಿನ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಅಲೆಕ್ಸಿ ನಾವಲ್ನಿ ಅವರನ್ನು ಉಗ್ರವಾದದ ಆರೋಪದ ಮೇಲೆ 2021ರಲ್ಲಿ ಜೈಲಿಗಟ್ಟಲಾಗಿತ್ತು. ಮಾಸ್ಕೋದ ಯಮಲೊ ನೆನೆಟ್ಸ್‌ ಪ್ರಾಂತ್ಯದ ಜೈಲಿನಲ್ಲಿದ್ದ ಅಲೆಕ್ಸಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥಗೊಂಡರು. ಜೈಲಿನ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ

    2021ರ ಜನವರಿಯಲ್ಲಿ ಅಲೆಕ್ಸಿ ನಾವಲ್ನಿ ಅವರಿಗೆ ಸೈಬೀರಿಯಾದಲ್ಲಿ ವಿಷ ಪ್ರಾಶನ ಮಾಡಲಾಗಿತ್ತು. ಕೋಮಾಗೆ ಜಾರಿದ್ದ ಅಲೆಕ್ಸಿ ಅವರಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ರಷ್ಯಾಗೆ ಕರೆ ತರಲಾಗಿತ್ತು. ನಂತರ ಪೆರೋಲ್‌ ಉಲ್ಲಂಘಿಸಿದ ಆರೋಪದ ಮೇಲೆ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ನವಲ್ನಿ ಮೃತಪಟ್ಟ ಆರ್ಕ್ಟಿಕ್‌ ಜೈಲು (Arctic Jail) ಮಾಸ್ಕೋದಿಂದ ಈಶಾನ್ಯಕ್ಕೆ 1,200 ಕಿಮೀ ದೂರದಲ್ಲಿದೆ ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು 73ರ ವೃದ್ಧ ಎಡವಟ್ಟು!

    400 ಮಂದಿ ಬಂಧನ:
    ಇತ್ತೀಚೆಗೆ ಅಧ್ಯಕ್ಷ ಪುಟಿನ್ ಕಟ್ಟಾ ವಿರೋಧಿ ಅಲೆಕ್ಸಿ ನವಲ್ನಿ ಅವರು ಜೈಲಿನಲ್ಲಿ ಮೃತಪಟ್ಟ ಬಳಿಕ ರಷ್ಯಾದಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದಿದ್ದ ಸುಮಾರು 400 ಮಂದಿಯನ್ನು ಬಂಧಿಸಲಾಗಿದೆ. ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದಿದ್ದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.

  • ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

    ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

    -‌ ಮೂರೂವರೆ ವರ್ಷದ ಹಿಂದೆ ಏರ್‌ಪೋರ್ಟಲ್ಲಿ ವಿಷ ಪ್ರಾಶನವಾಗಿತ್ತು
    – ಜೈಲಲ್ಲಿದ್ದ ನವಲ್ನಿ ಬಿಡುಗಡೆಗೆ ರಷ್ಯಾ ಸರ್ಕಾರವೇ ಮನವಿ ಮಾಡಿತ್ತು

    ಮಾಸ್ಕೋ: ರಷ್ಯಾದ (Russia) ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ವಿಮರ್ಶಕ ಅಲೆಕ್ಸಿ ನವಲ್ನಿ (Alexei Navalny) (48) ಜೈಲಿನಲ್ಲೇ ಸಾವನ್ನಪ್ಪಿದ್ದಾರೆ. ನವಲ್ನಿ ಜೈಲಿನಲ್ಲಿ 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು.

    ಆರ್ಕ್‌ಟಿಕ್ ಜೈಲು ಕಾಲೊನಿಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಜೈಲಿನಲ್ಲಿ ನಡೆದುಕೊಂಡು ಹೋಗುವಾಗ ನವಲ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಜೈಲಿನಿಂದ ಅಧಿಕೃತ ವಿವರಣೆ ಹೊರಬಿದ್ದಿದೆ. ನವಲ್ನಿ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪತ್ನಿ ಯೂಲಿಯಾ ಹಾಗೂ ಇಬ್ಬರು ಮಕ್ಕಳನ್ನು ನವಲ್ನಿ ಅಗಲಿದ್ದಾರೆ. ಇದನ್ನೂ ಓದಿ: ರಷ್ಯಾದ ಅಧ್ಯಕ್ಷ ಪುಟಿನ್ ವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

    ಯಾರೀತ ಅಲೆಕ್ಸಿ ನವಲ್ನಿ?
    1976ರ ಜೂನ್‌ 4ರಂದು ಹುಟ್ಟಿದ ನವಲ್ನಿ ರಷ್ಯಾದ ವಿಪಕ್ಷದ ಪ್ರಮುಖ ನಾಯಕ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ರಾಜಕೀಯ ಎದುರಾಳಿ. 2021ರ ಫೆಬ್ರವರಿಯಲ್ಲಿ ವಿವಿಧ ಆರೋಪಗಳ ಮೇಲೆ ಬಂಧಿತರಾದ ನವಲ್ನಿಯನ್ನು ಮಾಸ್ಕೋದಿಂದ 235 ಕಿಲೋಮೀಟರ್ ದೂರದಲ್ಲಿರುವ ಮೆಲೆಖೋವ್‌ನಲ್ಲಿ ಜೈಲಿನಲ್ಲಿರಿಸಲಾಗಿತ್ತು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ರಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನವಲ್ನಿ ಅವರನ್ನು ‘ಪುಟಿನ್ ಹೆಚ್ಚು ಭಯಪಡುವ ವ್ಯಕ್ತಿ’ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬಣ್ಣಿಸಿತ್ತು.

    ನವಲ್ನಿ ಜನಪ್ರಿಯ ನಾಯಕ
    ವಕೀಲರಾಗಿದ್ದ ನವಲ್ನಿ 2008ರಿಂದ ರಷ್ಯಾದ ರಾಜಕೀಯದಲ್ಲಿ ಪ್ರಮುಖರಾಗಿದ್ದಾರೆ. ತನ್ನ ಬ್ಲಾಗ್‌ನ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ ಅಲೆಕ್ಸಿ ನವಲ್ನಿ, ಶೀಘ್ರವಾಗಿ ರಷ್ಯಾದ ಪುಟಿನ್ ವಿರೋಧಿ ರಾಜಕೀಯ ಚಳವಳಿಯ ಕೇಂದ್ರ ಬಿಂದುವಾದರು. 2011ರ ರಾಷ್ಟ್ರೀಯ ಸಂಸತ್ತಿನ ಚುನಾವಣೆ ವೇಳೆ ಭುಗಿಲೆದ್ದ ಜನಪ್ರಿಯ ಪ್ರತಿಭಟನೆಗಳಲ್ಲಿ ಅವರು ಜನಪ್ರಿಯ ನಾಯಕರಾಗಿದ್ದರು. ಇದನ್ನೂ ಓದಿ: ರಷ್ಯಾದ ಮಹಿಳೆಯರು 8 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ: ಪುಟಿನ್‌ ಕರೆ

    ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಕಳ್ಳರು ಮತ್ತು ಕಪಟಿಗಳ ಪಕ್ಷ ಎಂದು ಬಣ್ಣಿಸಿದ ನವಲ್ನಿ ಮಾಸ್ಕೋ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದರು. 2017 ರಲ್ಲಿ ರಷ್ಯಾದ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರ ಅಕ್ರಮ ಗಳಿಕೆಯನ್ನು ಬಹಿರಂಗಪಡಿಸುವ ವೀಡಿಯೊವನ್ನು ನವಲ್ನಿ ಬಿಡುಗಡೆ ಮಾಡಿದ ನಂತರ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನದ ವೇಳೆ ಸಾವಿರಾರು ಜನರನ್ನು ಬಂಧಿಸಲಾಯಿತು. 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ವಿರುದ್ಧ ನವಲ್ನಿ ಸ್ಪರ್ಧಿಸಿದ್ದರು. ಪುಟಿನ್ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ. ಹೀಗಾಗಿ ಮತದಾನ ಬಹಿಷ್ಕರಿಸಿ ಎಂದಾಗ ನವಲ್ನಿಯನ್ನು ಬಂಧಿಸಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

    ಮೊದಲು ಮರ ಕದ್ದ ಆರೋಪ!
    ಇದರ ಮಧ್ಯೆ ನವಲ್ನಿಯ ಹತ್ಯಾ ಯತ್ನವೂ ನಡೆಯಿತು. ಇದೆಲ್ಲವನ್ನೂ ನವಲ್ನಿ ಎದುರಿಸಿ ನಿಂತರು. 2013ರಲ್ಲಿ ಕಿರೋವ್‌ನಲ್ಲಿನ ಸರ್ಕಾರಿ ಮರದ ಕಂಪನಿಯಿಂದ ಮರವನ್ನು ಕದ್ದ ಆರೋಪದ ಮೇಲೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಿದರು. ಇದನ್ನೂ ಓದಿ: ಪ್ರೇಯಸಿಯನ್ನೇ ರೇಪ್‌ ಮಾಡಿ, 111 ಬಾರಿ ಇರಿದು ಕೊಂದಿದ್ದ ಪ್ರೇಮಿಯನ್ನ ಬಿಡುಗಡೆಗೊಳಿಸಿದ ಪುಟಿನ್‌

    ಸರ್ಕಾರವೇ ಮಾಡಿತ್ತು ಬಿಡುಗಡೆಗೆ ಮನವಿ!
    ಸುಳ್ಳು ಕೇಸ್‌ ಸೃಷ್ಟಿಸಿ ನವಲ್ನಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಸಾವಿರಾರು ಜನರು ರಷ್ಯಾದ ನಗರ ನಗರಗಳಲ್ಲಿ ಬೀದಿಗಿಳಿದ ಹಿನ್ನೆಲೆಯಲ್ಲಿ ನವಲ್ನಿ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕೆಂದು ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಅಸಾಮಾನ್ಯ ಹೆಜ್ಜೆಯಾಗಿತ್ತು ಮತ್ತು ನವಲ್ನಿ ಜನಪ್ರಿಯತೆ ಎಷ್ಟಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ನಂತರ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.

    ಏರ್‌ಪೋರ್ಟಲ್ಲಿ ಕುಡಿದ ಟೀಯಿಂದ ವಿಷಪ್ರಾಶನ!
    ಸೈಬೀರಿಯಾದಲ್ಲಿ ಚುನಾವಣೆ ಪ್ರಚಾರ ಮಾಡುವಾಗ ನವಲ್ನಿ ವಿಷ ಪ್ರಾಶನಕ್ಕೊಳಗಾದರು. 2020ರ ಆಗಸ್ಟ್‌ 20ರಂದು ಸೈಬೀರಿಯಾದ ಟಾಮ್ಸ್ಕ್‌ ನಗರದ ವಿಮಾನ ನಿಲ್ದಾಣದಲ್ಲಿ ನವಲ್ನಿ ಸೇವಿಸಿದ ಚಹಾಕ್ಕೆ ವಿಷ ಬೆರೆಸಿದ್ದಾರೆ ಎಂದು ಬೆಂಬಲಿಗರು ಶಂಕೆ ವ್ಯಕ್ತಪಡಿಸಿದರು. ವಿಮಾನ ಪ್ರಯಾಣದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನವಲ್ನಿಯನ್ನು ವಿಮಾನ ತುರ್ತು ಭೂಸ್ಪರ್ಶ ಮಾಡಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜರ್ಮನಿಯಲ್ಲಿ ತಜ್ಞರಿಂದ ಚಿಕಿತ್ಸೆ ಪಡೆದ ನಂತರ ಅವರು 2021ರ ಜನವರಿ 17ರಂದು ರಷ್ಯಾಕ್ಕೆ ಮರಳಿದರು. ಆದರೆ ಇದಕ್ಕೂ ಹಿಂದಿನ ಜೈಲುವಾಸದ ಅವಧಿಯಲ್ಲಿ ಪೆರೋಲ್ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿದರು. ಪೆರೋಲ್ ಉಲ್ಲಂಘನೆಗಾಗಿ ಅವರಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದನ್ನೂ ಓದಿ: ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಪುಟಿನ್‌ ಬದ್ಧವೈರಿ!
    ನ್ಯಾಯಾಂಗ ನಿಂದನೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕಾಗಿ ಸಂಗ್ರಹಿಸಿದ 47 ಲಕ್ಷ ಡಾಲರ್ ವಂಚನೆ ಸೇರಿ ವಿವಿಧ ಪ್ರಕರಣಗಳನ್ನು ನವಲ್ನಿ ವಿರುದ್ಧ ದಾಖಲಿಸಲಾಯಿತು. 2022ರಲ್ಲಿ ಈ ಪ್ರಕರಣಗಳಲ್ಲಿ ಅವರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಅವರಿಗೆ 2023ರಲ್ಲಿ ಇನ್ನೂ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಏತನ್ಮಧ್ಯೆ, ನವಲ್ನಿ ಅವರು ವಿಡಿಯೋ ಲಿಂಕ್ ಬಳಸಿ ರಷ್ಯಾದ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಪುಟಿನ್ ನಡೆಸಿದ್ದ ಉಕ್ರೇನ್ ಆಕ್ರಮಣವನ್ನು ಟೀಕಿಸಿದರು.

    ಜೈಲಲ್ಲಿದ್ದರೂ ಜನ ಬೆಂಬಲ ಕಮ್ಮಿಯಾಗಿರಲಿಲ್ಲ!
    ತೀವ್ರ ಬೆನ್ನು ನೋವು ಮತ್ತು ಬಲಗಾಲಿನ ಮರಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ನವಲ್ನಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ನವಾಲ್ನಿ ಬಿಡುಗಡೆಗಾಗಿ ರಷ್ಯಾದಾದ್ಯಂತ ಹೋರಾಟಗಳು ನಡೆದವು. ಬರಹಗಾರರು, ಕಲಾವಿದರು ಮತ್ತು ಹಾಲಿವುಡ್ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬಹಿರಂಗ ಪತ್ರ ಬರೆದು ನವಲ್ನಿ ಅವರಿಗೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ:

  • ರಷ್ಯಾದ ಅಧ್ಯಕ್ಷ ಪುಟಿನ್ ವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

    ರಷ್ಯಾದ ಅಧ್ಯಕ್ಷ ಪುಟಿನ್ ವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

    ಮಾಸ್ಕೋ: ರಷ್ಯಾದ ವಿರೋಧ ಪಕ್ಷದ ನಾಯಕ (Russian Opposition Leader) ಮತ್ತು ರಷ್ಯಾ ಅಧ್ಯಕ್ಷ ಪುಟಿನ್ (Vladimir Putin) ವೈರಿಯಾಗಿದ್ದ ಅಲೆಕ್ಸಿ ನವಲ್ನಿ (Alexei Navalny) ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ನವಲ್ನಿ ವಾಯುವಿಹಾರದ ಬಳಿಕ ಪ್ರಜ್ಞೆ ಕಳೆದುಕೊಂಡರು, ಕೂಡಲೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    ಅಲೆಕ್ಸಿ ನವಲ್ನಿಯವರ ಸಾವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ ಎಂದು ಅವರ ಸಹಾಯಕರಾದ ಕಿರಾ ಯರ್ಮಿಶ್ ಹೇಳಿಕೊಂಡಿದ್ದಾರೆ. ಅಲೆಕ್ಸಿಯ ವಕೀಲರು ಖಾರ್ಪ್‍ಗೆ ಹೋಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಅಲೆಕ್ಸಿ ನವಲ್ನಿಯವರನ್ನು ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಡಿಸೆಂಬರ್‍ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಉತ್ತರದ ಖಾರ್ಪ್‍ನ ಪೋಲಾರ್ ವುಲ್ಫ್‌ನ ಜೈಲಿಗೆ ಅವರನ್ನು ಸ್ಥಳಾಂತರಿಸಲಾಯಿತು. ರಷ್ಯಾದಲ್ಲಿ ಇದನ್ನು ಅತ್ಯಂತ ಕಠಿಣ ಜೈಲು ಎಂದು ಗುರುತಿಸಲಾಗುತ್ತದೆ. ಈ ಜೈಲಿನಲ್ಲಿ ಗಂಭೀರ ಅಪರಾಧಗಳನ್ನು ಎಸಗಿದವರನ್ನು ಇರಿಸಲಾಗುತ್ತದೆ ಎಂಬ ಮಾತಿದೆ.

  • ಮಿತ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ಹರ್ಷಿಸುತ್ತೇವೆ: ಪುಟಿನ್ ಆಹ್ವಾನ

    ಮಿತ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ಹರ್ಷಿಸುತ್ತೇವೆ: ಪುಟಿನ್ ಆಹ್ವಾನ

    ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆಹ್ವಾನಿಸಿದ್ದಾರೆ.

    ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಅವರು ಸದ್ಯ ರಷ್ಯಾ ಪ್ರವಾಸದಲ್ಲಿದ್ದಾರೆ. ಪುಟಿನ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಜೈಶಂಕರ್ ಅವರ ಜೊತೆ ಮಾತನಾಡುತ್ತಾ, ನಮ್ಮ ಆತ್ಮೀಯ ಮಿತ್ರರಾಗಿರುವ ನರೇಂದ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷ ಪಡುತ್ತೇವೆ ಎಂದು ಹೇಳಿದ್ದಾರೆ.

    ನಮಗೆ ಪ್ರಧಾನಿ ಮೋದಿಯವರ (Narendra Modi) ನಿಲುವು ತಿಳಿದಿದೆ. ಅಲ್ಲದೆ ಈ ಬಗ್ಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ನಾನು ಅವರಿಗೆ ಉಕ್ರೇನ್‍ನ ಸ್ಥಿತಿಗತಿಯ ಬಗ್ಗೆ ವಿವರಿಸಿದ್ದೇನೆ. ಸಂಘರ್ಷವಿಲ್ಲದೆ ಶಾಂತಿಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಅವರ ಪ್ರಯತ್ನದ ಬಗ್ಗೆ ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದರು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

    ಮೋದಿಯವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ರಷ್ಯಾದಲ್ಲಿ ಭೇಟಿಯಾಗಲು ನಾವು ಕಾಯುತ್ತಿದ್ದೇವೆ ಎಂದು ದಯವಿಟ್ಟು ಅವರಿಗೆ ತಿಳಿಸಿ. ಹಾಗೆಯೇ ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ನಾವು ಯಶಸ್ಸನ್ನು ಬಯಸುತ್ತೇವೆ ಎಂದು ಪುಟಿನ್ ಅವರು ಜೈಶಂಕರ್ ಗೆ ಹೇಳಿದರು.

    ಮಾತುಕತೆಯ ನಂತರ ಸಚಿವ ಲಾವ್ರೊವ್ ಅವರೊಂದಿಗೆ ಜಂಟಿ ಮಾಧ್ಯಮದಲ್ಲಿ ಕಾಣಿಸಿಕೊಂಡ ಜೈಶಂಕರ್, ಮುಂದಿನ ವರ್ಷ ವಾರ್ಷಿಕ ಶೃಂಗಸಭೆಗಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಭೇಟಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

  • ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮಾಸ್ಕೋ: ಪ್ರಧಾನಿ ಮೋದಿ ಅವರು ಇರುವಾಗ ಭಾರತದ ವಿರುದ್ಧ ಮತ್ತು ಭಾರತೀಯರ ವಿರುದ್ಧ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು ಅಥವಾ ಪ್ರಧಾನಿ ಮೋದಿ (Narendra Modi) ಅವರನ್ನ ಹೆದರಿಸಬಹುದು ಅಂತ ಊಹಿಸೋದಕ್ಕೂ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹಾಡಿ ಹೊಗಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪುಟಿನ್‌ ಮೋದಿ‌ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ National Security) ವಿಚಾರದಲ್ಲಿ ಮೋದಿ ಅವರು ತೆಗೆದುಕೊಳ್ಳುವ ಕಠಿಣ ನಿಲುವುಗಳು ನನಗೆ ಆಗಾಗ್ಗೆ ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತದ ಪ್ರಧಾನಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರೆ. ಮೋದಿ ಅವರ ನೀತಿಯು ದೆಹಲಿ ಮತ್ತು ಮಾಸ್ಕೋ (Moscow) ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದು ಒತ್ತಿ ಹೇಳಿದ್ದಾರೆ.

    ಮೋದಿ ಅವರು ಹೊರಗಿನಿಂದ ಏನಾಗುತ್ತಿದೆ ಎಂಬುದನ್ನೆಲ್ಲಾ ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಚೀನಾ ಸಂಬಂಧಗಳು ನಿರಂತರವಾಗಿ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಮೋದಿ ಅವರ ನೀತಿಯೂ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

    ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್‌ ವರ್ಚುವಲ್‌ನಲ್ಲಿ ಪಾಲ್ಗೊಂಡು ಧನ್ಯವಾದ ಅರ್ಪಿಸಿದ್ದರು. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಈ ಹಿಂದೆ ಮೋದಿ ರಷ್ಯಾ ಭೇಟಿ ನೀಡಿದಾಗ ಹಾಗೂ ವರ್ಚುವಲ್‌ ಸಮಾರಂಭಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಯುದ್ಧವನ್ನು ನಿಲ್ಲಿಸುವಂತೆಯೂ ಮೋದಿ ಮನವಿ ಮಾಡಿದ್ದರು.