ಮಾಸ್ಕೋ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ ಎಂದು ಉಕ್ರೇನ್ ಮೇಲಿನ ರಷ್ಯಾ ಯುದ್ಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದರು.
ಮಂಗಳವಾರ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಪುಟಿನ್ ಅವರನ್ನು ಭೇಟಿಯಾದರು. ಉಭಯ ನಾಯಕರು ಪರಸ್ಪರ ಆಲಿಂಗಿಸಿಕೊಂಡರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಒಳಗೊಂಡಿರುವ ದೇಶಗಳ ಅನೌಪಚಾರಿಕ ಗುಂಪಿನ ಶೃಂಗಸಭೆಯು ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿದೆ.
ಬ್ರಿಕ್ಸ್ ಗುಂಪಿನ ಯಶಸ್ಸನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಅನೇಕ ಇತರ ರಾಷ್ಟ್ರಗಳು ಅದರಲ್ಲಿ ಸೇರಲು ಬಯಸುತ್ತವೆ ಎಂದು ಇದೇ ವೇಳೆ ತಿಳಿಸಿದರು.
ನಾವು ರಷ್ಯಾ-ಉಕ್ರೇನ್ ಸಮಸ್ಯೆ ವಿಚಾರವಾಗಿ ಎಲ್ಲಾ ಕಡೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವು. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿಯನ್ನು ತರುವುದಕ್ಕೆ ಸಹಾಯ ಮಾಡಲು ಭಾರತ ಯಾವಾಗಲೂ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅವರ ಎರಡನೇ ರಷ್ಯಾ ಭೇಟಿಯಾಗಿದೆ. ಅವರು 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜುಲೈನಲ್ಲಿ ಮಾಸ್ಕೋಗೆ ಹೋಗಿದ್ದರು. ಅಲ್ಲಿ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಅನ್ನು ಮೋದಿ ಪಡೆದಿದ್ದರು.
ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಮಾಸ್ಕೋದ ಭದ್ರತಾ ಮಂಡಳಿಯ ಉನ್ನತ ಅಧಿಕಾರಿಗಳ ತುರ್ತು ಸಭೆಗೆ ಕರೆದಿದ್ದಾರೆ.
ಹೌದು. ರಷ್ಯಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಕ್ರೂಸ್ ಕ್ಷಿಪಣಿಗಳಿಂದ ದಾಳಿ (Cruise Missile Attack) ನಡೆಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ (Ukraine) ಬೆಂಬಲ ನೀಡಿವೆ ಎಂಬ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪುಟಿನ್ ಕೂಡಲೇ ಭದ್ರತಾ ಮಂಡಳಿಯ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಮಿಸೈಲ್ ದಾಳಿ ತಡೆಗಟ್ಟುವಿಕೆಯ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವಾರ ಯುಕೆ ತನ್ನ ʻಸ್ಟಾರ್ಮ್ ಶ್ಯಾಡೋʼ ಕ್ರೂಸ್ ಕ್ಷಿಪಣಿಯನ್ನು ರಷ್ಯಾ ಮೇಲೆ ಪ್ರಯೋಗಿಸುವ ಯೋಜನೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿತ್ತು. ಈ ಮಧ್ಯೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಲು ವಾಷಿಂಗ್ಟನ್ ಡಿಸಿಗೆ ಹಾರಿದ್ದರು. ರಷ್ಯಾದ ಮೇಲೆ ಉಕ್ರೇನ್ ಶಸ್ತ್ರಾಸ್ತ್ರಗಳ ಬಳಕೆ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಸಹ ವರದಿಗಳು ಉಲ್ಲೇಖಿಸಿದ್ದವು.
ರಷ್ಯಾ ಉಕ್ರೇನ್ ಯುದ್ಧ ಕೆಲ ದಿನಗಳ ಮಟ್ಟಿಗೆ ತಣ್ಣಗಾಗಿತ್ತು. ಆದ್ರೆ ಮೂರು ತಿಂಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ 100 ಕ್ಷಿಪಣಿ, 100 ಅಟ್ಯಾಕಿಂಗ್ ಡ್ರೋನ್‌ಗಳಿಂದ ಏಕಾಏಕಿ ದಾಳಿ ನಡೆಸಿದ ನಂತರ ಮತ್ತೆ ಧಗಧಗ ಶುರುವಾಯಿತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಸಹ ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್ ಡ್ರೋನ್ʼ ಅಸ್ತ್ರ ಪ್ರಯೋಗಿಸಿ ಪ್ರತೀಕಾರದ ದಾಳಿ ನಡೆಸಿತ್ತು. ಇದೀಗ ಮತ್ತೆ ರಷ್ಯಾ ವಿರುದ್ಧ ಸಿಡಿದೇಳುತ್ತಿದೆ ಎಂದು ತಿಳಿದುಬಂದಿದೆ.
ನವದೆಹಲಿ: ರಷ್ಯಾ ಆಕ್ರಮಣದ ಬಳಿಕ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ತಿಂಗಳ ಅಂತ್ಯಕ್ಕೆ ಭೇಟಿ ನೀಡಲಿದ್ದಾರೆ.
ರಷ್ಯಾ (Russia) ಜೊತೆಗಿನ ಯುದ್ಧದ ನಂತರ ಉಕ್ರೇನ್‌ಗೆ (Ukraine) ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಆ.22 ಅಥವಾ ಆ.23 ರಂದು ಮೋದಿ ಉಕ್ರೇನ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಉಕ್ರೇನ್ ಭೇಟಿಯನ್ನು ವಿದೇಶಾಂಗ ಸಚಿವಾಲಯ (External Affairs Ministry) ಅಧಿಕೃತವಾಗಿ ತಿಳಿಸಿದ್ದು ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಪ್ರವಾಸದ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.ಇದನ್ನೂ ಓದಿ: ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ
ಮಾಸ್ಕೋದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾದ ಸುಮಾರು ಒಂದು ತಿಂಗಳ ನಂತರ ಉಕ್ರೇನ್‌ಗೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್‌ಗೆ ಭೇಟಿ ನೀಡಿದ ಬಳಿಕ ಮೋದಿ ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಪುಟಿನ್ ಅವರ ಆಹ್ವಾನದ ಮೇರೆಗೆ ಜುಲೈ 8 ರಂದು ಎರಡು ದಿನಗಳ ಭೇಟಿಗಾಗಿ ಮಾಸ್ಕೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು.ಇದನ್ನೂ ಓದಿ: ವಯನಾಡು ದುರಂತ ಹೇಗಾಯ್ತು? – ಭಯಾನಕ ಜಲಪ್ರಳಯದ ಸಿಸಿಟಿವಿ ದೃಶ್ಯ ನೋಡಿ
ಭೇಟಿ ವೇಳೆ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಗೌರವವನ್ನು ಪುಟಿನ್ ನೀಡಿ ಗೌರವಿಸಿದ್ದರು.
ನವದೆಹಲಿ/ ಮಾಸ್ಕೋ: ಚುನಾವಣೆ ಸಂದರ್ಭದಲ್ಲಿ ಹತ್ತು ವರ್ಷದ ಆಡಳಿತ ಟ್ರೇಲರ್ ಎಂದು ಹೇಳಿದ್ದೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಬೆಳೆಯಲಿದ್ದೇವೆ. ಸೆಮಿ ಕಂಡಕ್ಟರ್‌ನಿಂದ ಹಿಡಿದು ಗ್ರೀನ್ ಎನರ್ಜಿವರೆಗೂ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ. ವಿಶ್ವದ ಹೊಸ ಅಧ್ಯಾಯವನ್ನು ನಾವು ಬರೆಯಲಿದ್ದೇವೆ ಎಂದು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ. ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ರಷ್ಯಾ (Russia) ಪ್ರವಾಸದಲ್ಲಿರುವ ಮೋದಿ ಮಾಸ್ಕೋದಲ್ಲಿ (Moscow) ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇಂದು ಭಾರತ ಜಾಗತಿಕವಾಗಿ ಮೂರನೇ ದೊಡ್ಡ ಸ್ಟಾರ್ಟ್ಅಪ್ ಇಕೋ ಸಿಸ್ಟಮ್ ಹೊಂದಿದೆ. 2014ರಲ್ಲಿ ಮೊದಲ ಬಾರಿಗೆ ನನಗೆ ಸೇವೆ ಮಾಡುವ ಅವಕಾಶ ಸಿಕ್ಕಿತು. ಆಗ ಬಹಳ ವಿರಳ ಪ್ರಮಾಣದಲ್ಲಿ ಸ್ಟಾರ್ಟ್ಅಪ್‌ಗಳಿದ್ದವು. ಇಂದು ಲಕ್ಷಾಂತರ ಸ್ಟಾರ್ಟ್ಅಪ್‌ಗಳಿದೆ. ಭಾರತೀಯ ಯುವಕರ ಸಾಮರ್ಥ್ಯ ಕಂಡು ವಿಶ್ವವೂ ಆಕರ್ಷಿತಗೊಂಡಿದೆ ಎಂದರು.
ವಿಶ್ವದ ಜನರು ಭಾರತಕ್ಕೆ ಬಂದು ಈ ದೇಶ ಬದಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಭಾರತ ಜಿ20 ಅಂತಹ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಭಾರತ ಕಳೆದ ಹತ್ತು ವರ್ಷದಲ್ಲಿ ವಿಮಾನ ನಿಲ್ದಾಣ ಎರಡು ಪಟ್ಟು ಹೆಚ್ಚಿಸಿದೆ. ಹತ್ತು ವರ್ಷಗಳಲ್ಲಿ 40 ಸಾವಿರ ಕಿ.ಮೀಗೂ ಅಧಿಕ ರೈಲ್ವೆಲೈನ್ ವಿದ್ಯುಧೀಕರಣ ಮಾಡಿದೆ. ಈಗ ಭಾರತದ ಶಕ್ತಿ ಎಲ್ಲರಿಗೂ ತಿಳಿಯುತ್ತಿದೆ ಎಂದು ಹೇಳಿದರು.
ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ದೊಡ್ಡ ಶಕ್ತಿಯಾಗಿದೆ. ಎಲ್1 ಪಾಯಿಂಟ್‌ನಿಂದ ಭಾರತ ಸೂರ್ಯನ ಅಧ್ಯಯನ ಮಾಡುತ್ತಿದೆ. ಭಾರತ ವಿಶ್ವದ ಅತಿ ಎತ್ತರದ ರೈಲ್ವೆಬ್ರಿಡ್ಜ್ ಹೊಂದಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 140 ಕೋಟಿ ಜನರ ಸಾಮರ್ಥ್ಯದ ಮೇಲೆ ಮತ್ತು ಅನಿವಾಸಿ ಭಾರತೀಯರ ಮೇಲೆ ನಂಬಿಕೆ ಇರಿಸಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
140 ಕೋಟಿ ಭಾರತೀಯರನ್ನು ಕೋವಿಡ್ ಸಂಕಷ್ಟದಿಂದ ಹೊರ ತಂದಿದೆ. ಸಂಕಷ್ಟದ ಸಂದರ್ಭದಲ್ಲೂ ಆರ್ಥಿಕತೆಯನ್ನು ಸಧೃಡವಾಗಿಟ್ಟಿದೆ. ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಹೆಲ್ತ್ ಮಿಷನ್. ಇದೆಲ್ಲವೂ 140 ಕೋಟಿ ಜನರಿಂದ ಸಾಧ್ಯವಾಗಿದೆ. ಅವರು ಕನಸು ಕಾಣುತ್ತಾರೆ, ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾರೆ. ಜನರ ಈ ಬದಲಾವಣೆ ಅವರ ವಿಶ್ವಾಸದಲ್ಲಿ ಕಾಣುತ್ತಿದೆ ಎಂದರು.
ಕ್ರೀಡೆಯಲ್ಲೂ ನಮ್ಮ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್‌ಗೆ ಅತ್ಯುತ್ತಮ ತಂಡ ಕಳುಹಿಸಲಾಗಿದೆ. ಅವರು ಹೇಗೆ ಪ್ರದರ್ಶನ ಮಾಡಲಿದ್ದಾರೆ ನೀವೂ ನೋಡಿ. ಇದೇ ಆತ್ಮ ವಿಶ್ವಾಸ ಭಾರತದ ಯುವ ಶಕ್ತಿ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲು 15% ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗಲಿದೆ. ಮುಂದಿನ ಹತ್ತು ವರ್ಷ ಅತ್ಯಂತ ವೇಗವಾಗಿ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಷ್ಯಾದಲ್ಲಿರುವ ಜನರು ಭಾರತ-ರಷ್ಯಾ ಸಂಬಂಧ ಹೆಚ್ಚುಸುತ್ತಿದ್ದೀರಿ. ರಷ್ಯಾ-ಭಾರತದ ನಡುವಿನ ಸಂಬಂಧವನ್ನು ಕಾಪಾಡಲಾಗುತ್ತಿದೆ. ರಷ್ಯಾ ಭಾರತದ ಸುಖ-ದುಃಖದ ಜೊತೆಗಾರ. ಇದನ್ನು ಸ್ನೇಹ ಎನ್ನುತ್ತಾರೆ. ಈ ಸಂಬಂಧ ಪರಸ್ಪರ ಸ್ನೇಹ ಮತ್ತು ಗೌರವದಿಂದ ಬೆಳೆದಿದೆ. ಭಾರತದ ಯಶಸ್ವಿ ಸಂಬಂಧಕ್ಕೆ ಅಧ್ಯಕ್ಷ ಪುಟಿನ್ ಕಾರಣ. ಕಳೆದ ಹತ್ತು ವರ್ಷದಲ್ಲಿ ನಾನು ಅವರನ್ನು 17 ಬಾರಿ ಭೇಟಿಯಾಗಿದ್ದೇನೆ. ಯುದ್ಧದ ಅವಧಿಯಲ್ಲಿ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾಗ ಭಾರತಕ್ಕೆ ಪುಟಿನ್ ಸಹಾಯ ಮಾಡಿದರು ಎಂದು ನುಡಿದರು.
ಎಲ್ಲಾ ರಾಷ್ಟ್ರೀಯ ಹಬ್ಬಗಳು, ಭಾರತೀಯ ಹಬ್ಬಗಳನ್ನು ಅದ್ಧೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ಮುಂದೆ ಆಗಸ್ಟ್ 15 ಕೂಡಾ ಅದ್ಧೂರಿಯಾಗಿ ಆಚರಿಸಬೇಕು. ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಸಕ್ತಿಯಿಂದ ರಷ್ಯನ್ನರು ಭಾಗಿಯಾಗಿದ್ದರು. ನಮ್ಮ ಆಚರಣೆಯಲ್ಲಿ ಮುಕ್ತವಾಗಿ ಭಾಗಿಯಾಗುತ್ತಾರೆ. ರಷ್ಯಾದಲ್ಲಿ ಎರಡು ಹೊಸ ಕೌನ್ಸಿಲೇಟ್ ತೆರೆಯುತ್ತೇವೆ. ಇದರಿಂದ ಪ್ರಯಾಣ ಮತ್ತು ವ್ಯಾಪಾರಕ್ಕೆ ಹೆಚ್ಚು ಸಹಕಾರವಾಗಲಿದೆ ಎಂದು ಮೋದಿ ತಿಳಿಸಿದರು.
ಮಾಸ್ಕೋ: ರಷ್ಯಾ (Russia) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ತಮ್ಮ ದೇಶದ ಸೇನೆಯಲ್ಲಿ ಕೆಲಸ ಮಾಡುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡುವಂತೆ ಚರ್ಚಿಸಿದ್ದಾರೆ. ಚರ್ಚೆಯ ಬಳಿಕ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ರಷ್ಯಾ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಪ್ರವಾಸಕ್ಕಾಗಿ ರಷ್ಯಾಕ್ಕೆ ತೆರಳಿರುವ ಮೋದಿ, ಸೋಮವಾರ ಸಂಜೆ ಪುಟಿನ್ ಆಯೋಜಿಸಿದ್ದ ಔತಣಕೂಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ಅವರನ್ನು ಭಾರತಕ್ಕೆ ಕಳಿಸಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದ್ದಾರೆ. ಮೋದಿಯವರ ಈ ಬೇಡಿಕೆಗೆ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: 22ನೇ ಶೃಂಗಸಭೆ – ರಷ್ಯಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
ಔತಣಕೂಟದಲ್ಲಿ, ಪುಟಿನ್ ಅವರು 3 ಬಾರಿಗೆ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಮೋದಿಯವರನ್ನು ಅಭಿನಂದಿಸಿದರು. ಭಾರತದ ಆರ್ಥಿಕತೆಯ ಏರುತ್ತಿರುವ ಸ್ಥಾನಮಾನದ ಬಗ್ಗೆ ಚರ್ಚಿಸಿದ್ದಾರೆ.
ಸುಮಾರು 24ಕ್ಕೂ ಹೆಚ್ಚು ಭಾರತೀಯರು ಹೆಚ್ಚಿನ ಸಂಬಳದ ಉದ್ಯೋಗದ ಆಸೆಗೆ ಏಜೆಂಟ್‍ಗಳಿಂದ ಮೋಸ ಹೋಗಿದ್ದಾರೆ. ಬಳಿಕ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ವಿಚಾರವಾಗಿ, ಭಾರತೀಯ ತನಿಖಾ ಸಂಸ್ಥೆಗಳು ಕೂಡ ದಾಳಿ ನಡೆಸಿ ಭಾರತೀಯರನ್ನು ರಷ್ಯಾಕ್ಕೆ ಸಾಗಿಸುವ ಜಾಲವನ್ನು ಭೇದಿಸಿವೆ. ದಾಳಿಯ ಸಮಯದಲ್ಲಿ, ಈ ಸಂಸ್ಥೆಗಳು ಕನಿಷ್ಠ 35 ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿವೆ ಎಂದು ತಿಳಿದುಬಂದಿದೆ. ಆದರೂ ಅವರೆಲ್ಲರೂ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಅಧಿಕೃತ ನಿವಾಸದಲ್ಲಿ ‘ಖಾಸಗಿ ಔತಣಕೂಟ’ದ ಸಂದರ್ಭದಲ್ಲಿ, ಭಾರತದ ಜನರಿಗೆ ಸೇವೆ ಸಲ್ಲಿಸುವುದು ತಮ್ಮ ಏಕೈಕ ಗುರಿ ಎಂದು ಹೇಳಿದ್ದಾರೆ.
ನೀವು ನಿಮ್ಮ ಇಡೀ ಜೀವನವನ್ನು ಭಾರತೀಯ ಜನರ ಸೇವೆಗೆ ಮುಡಿಪಾಗಿಟ್ಟಿದ್ದೀರಿ. ಜನರು ಅದನ್ನು ಅನುಭವಿಸುತ್ತಾರೆ ಎಂದು ರಷ್ಯಾದ (Russia) ಅಧ್ಯಕ್ಷರು ಪ್ರಧಾನಿಗೆ ತಿಳಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ನೀವು ಹೇಳಿದ್ದು ಸರಿ. ನನಗೆ ಒಂದೇ ಗುರಿ ಇದೆ. ನನ್ನ ದೇಶ, ಭಾರತದ ಜನರು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 22ನೇ ಶೃಂಗಸಭೆ – ರಷ್ಯಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಪುಟಿನ್ ಅವರು, ಖಾಸಗಿ ಔತಣಕೂಟಕ್ಕಾಗಿ ನೊವೊ-ಒಗರಿಯೋವೊದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು. ಈ ವೇಳೆ ಪುಟಿನ್, ಗೌರವಾನ್ವಿತ ಪ್ರಧಾನ ಮಂತ್ರಿ! ಆತ್ಮೀಯ ಸ್ನೇಹಿತ! ಮತ್ತೊಮ್ಮೆ ಶುಭ ಮಧ್ಯಾಹ್ನ, ನಿಮ್ಮನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ನಾವು ನಾಳೆ ಅಧಿಕೃತ ಸಂಭಾಷಣೆಗಳನ್ನು ನಡೆಸುತ್ತೇವೆ. ಆದರೆ ಇಂದು ಈ ಮನೆಯ ವಾತಾವರಣದಲ್ಲಿ ನಾವು ಬಹುಶಃ ಶಾಂತವಾಗಿ ಮಾತನಾಡಬಹುದು ಎಂದು ಮೋದಿಗೆ ತಿಳಿಸಿದ್ದಾರೆ.
ಮೂರನೇ ಅವಧಿಗೆ ಪ್ರಧಾನಿಯಾದ ಮೋದಿ ಅವರನ್ನು ಪುಟಿನ್ ಅಭಿನಂದಿಸಿದ್ದಾರೆ. ನೀವು ಪ್ರಧಾನಿಯಾಗಿ ಮತ್ತೆ ಆಯ್ಕೆಯಾಗಿರುವುದಕ್ಕೆ ಮೊದಲು ನಿಮ್ಮನ್ನು ಅಭಿನಂದಿಸುತ್ತೇನೆ. ಇದು ಆಕಸ್ಮಿಕವಲ್ಲ ಎಂದು ನಾನು ಭಾವಿಸುತ್ತೇನೆ. ನೀವು ತುಂಬಾ ಶಕ್ತಿಯುತ ವ್ಯಕ್ತಿಯಾಗಿದ್ದೀರಿ. ಭಾರತ ಮತ್ತು ಭಾರತೀಯ ಜನರ ಹಿತಾಸಕ್ತಿಗಳಲ್ಲಿ ಫಲಿತಾಂಶಗಳನ್ನು ಸಾಧಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ. ಭಾರತವು ಆರ್ಥಿಕತೆಯ ವಿಷಯದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಬಹುಶಃ ಈಗ ಇದು ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ದೇಶವಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮಿಡತೆ, ರೇಷ್ಮೆ ಹುಳು ಸೇರಿ 16 ಬಗೆಯ ಕೀಟ ಸೇವನೆಗೆ ಸಿಂಗಾಪುರ ಸರ್ಕಾರ ಅನುಮತಿ
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮನೆಯಲ್ಲಿ ಸ್ನೇಹಿತನನ್ನು ಭೇಟಿಯಾಗುವುದು ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಿಮ್ಮ ಮನೆಗೆ ಆಹ್ವಾನಿಸಿದ್ದೀರಿ. ಅಂತಹ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಮಾಸ್ಕೋ: ಉತ್ತರ ಪ್ರದೇಶದ (Uttar Pradesh) ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ ಘಟನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಸಂತಾಪ ಸೂಚಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಭವಿಸಿದ ದುರಂತದ ಕುರಿತು ತೀವ್ರ ಸಂತಾಪ ಸೂಚಿಸಿರುವ ರಷ್ಯಾ, ಎಕ್ಸ್‌ನಲ್ಲಿ ತನ್ನ ಸಂದೇಶವನ್ನು ಹಂಚಿಕೊಂಡಿದೆ. ಅದರಂತೆ ಜಪಾನ್ ಪ್ರಧಾನಿ ಕಿಶಿದಾ ಅವರು ಸಹ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಜಪಾನ್‍ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮಣ್ಣು ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ ಕಾರ್ಮಿಕ ದುರ್ಮರಣ
ಉತ್ತರ ಪ್ರದೇಶದ ಹತ್ರಾಸ್ (Hathras) ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಂಗಳವಾರ (ಜು.2) ಕಾಲ್ತುಳಿತ ಸಂಭವಿಸಿತ್ತು. ಕೇವಲ 80,000 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರಿದ್ದ ಪರಿಣಾಮ ಈ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಇಲ್ಲಿಯವರೆಗೂ 121 ಜನ ಸಾವಿಗೀಡಾಗಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜುಲೈ 8 ರಂದು ರಷ್ಯಾಗೆ (Russia) ಭೇಟಿ ನೀಡಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಜೊತೆ ಮಾತುಕತೆ ನಡೆಸಲಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ರಕ್ಷಣೆ, ತೈಲ, ಅನಿಲ ಮತ್ತು ಇತರ ಭಾರತೀಯ ಕಾರ್ಯತಂತ್ರದ ಹಿತಾಸಕ್ತಿಗಳ ಕುರಿತು ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ (US Presidential Election) ನಡೆಯಲು ಕೆಲವೇ ತಿಂಗಳು ಬಾಕಿ ಇರುವಾಗ ಮೋದಿ ರಷ್ಯಾಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ. ಇದನ್ನೂ ಓದಿ: ಇಷ್ಟೆಲ್ಲಾ ಅವಮಾನ ಆದ್ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ ಅನ್ಸುತ್ತೆ: ಆರ್.ಅಶೋಕ್
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಲವಾರು ಸಂದರ್ಭಗಳಲ್ಲಿ ಭೇಟಿ ಮಾಡಿದ್ದರು. 2022 ರಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಕೊನೆಯ ಬಾರಿಗೆ ರಷ್ಯಾದ ಅಧ್ಯಕ್ಷರನ್ನು ಭೇಟಿಯಾಗಿದ್ದರು.
– ಕಿಮ್ ಭೇಟಿಯಾಗಿದ್ಯಾಕೆ ಪುಟಿನ್? – ಉತ್ತರ ಕೊರಿಯಾ, ರಷ್ಯಾ ನಡುವೆ ಆದ ಒಪ್ಪಂದವೇನು?
24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ (North Korea) ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇನ್ನಷ್ಟು ಬಲ ಭೀಮನಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ (Ukraine) ಮೇಲೆ ಯುದ್ಧ ಸಾರಿದಾಗ, ಹತ್ತಾರು ದೇಶಗಳ ನ್ಯಾಟೊ ಒಕ್ಕೂಟವೇ ತಿರುಗಿಬಿದ್ದರೂ ಎದೆಗುಂದದೇ ರಷ್ಯಾ ಏಕಾಂಗಿ ಹೋರಾಟ ನಡೆಸಿತ್ತು. ಆಗ ರಷ್ಯಾ ಬೆಂಬಲಕ್ಕೆ ನಿಂತ ರಾಷ್ಟ್ರ ಉತ್ತರ ಕೊರಿಯಾ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಅಗತ್ಯ ಶಸ್ತ್ರಾಸ್ತ್ರ ನೆರವು ನೀಡಿ ಹೆಗಲು ಕೊಟ್ಟಿತ್ತು. ಈಗ ತನ್ನ ಆಪದ್ಭಾಂಧವ ರಾಷ್ಟ್ರಕ್ಕೆ ಪುಟಿನ್ ಭೇಟಿ ಕೊಟ್ಟರು. ಕೊರಿಯಾ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅಷ್ಟೇ ಖುಷಿಯಿಂದ ಬರಮಾಡಿಕೊಂಡರು. ಉಭಯ ದೇಶಗಳ ನಾಯಕರು ಪರಸ್ಪರ ಹ್ಯಾಂಡ್‌ಶೇಕ್ ಮಾಡಿದರು. ನೆನಪಿನ ಕಾಣಿಕೆಗಳ ವಿನಿಮಯವಾಯಿತು. ಸಶಸ್ತ್ರ ನೆರವು ಒಪ್ಪಂದಕ್ಕೆ ಸಹಿ ಹಾಕಿದರು. ದಶಕಗಳ ನಂತರ ರಷ್ಯಾ ಅಧ್ಯಕ್ಷನ ಆ ಒಂದು ಭೇಟಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ.
ರಷ್ಯಾವಾಗಲಿ ಅಥವಾ ಉಕ್ರೇನ್ ಆಗಲಿ ಹೊರಗಡೆಯಿಂದ ಸಶಸ್ತ್ರ ಆಕ್ರಮಣವನ್ನು ಎದುರಿಸಿದರೆ ಪರಸ್ಪರರು ತಕ್ಷಣದ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಪುಟಿನ್ ಮತ್ತು ಕಿಮ್ ಸಹಿ ಹಾಕಿದ್ದಾರೆ. ಜೊತೆಗೆ ಉತ್ತರ ಕೊರಿಯಾಗೆ ಸಶಸ್ತ್ರಗಳನ್ನು ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷರು ಒಪ್ಪಂದದಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳು ಒಪ್ಪಂದವು ಅಮೆರಿಕಗೆ ಆತಂಕ ಮೂಡಿಸಿದೆ. ರಷ್ಯಾ-ಕೊರಿಯಾ ನಡುವಿನ ಈ ಒಪ್ಪಂದ ಈಗ ಏಕೆ ಮಹತ್ವದ್ದು? ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ
ರಷ್ಯಾ-ಉ.ಕೊರಿಯಾ ಸ್ನೇಹದ ಒಂದು ಹಿನ್ನೋಟ
ಎರಡನೆಯ ಮಹಾಯುದ್ಧದ ನಂತರ, ಹಿಂದಿನ ಸೋವಿಯತ್ ಒಕ್ಕೂಟವು ಕೊರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಸ್ಥಾಪಿಸಲು ಬಯಸಿತು. ಕೊರಿಯನ್ ಯುದ್ಧದ ಸಮಯದಲ್ಲಿ ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್‌ಗೆ ಗಮನಾರ್ಹ ಮಿಲಿಟರಿ ಸಹಾಯವನ್ನು ನೀಡಿತು. ಯುದ್ಧಗಳು ಕೊನೆಗೊಂಡ ನಂತರ ಯುಎಸ್ಎಸ್ಆರ್, ಚೀನಾದೊಂದಿಗೆ ಕಮ್ಯುನಿಸ್ಟ್ ಉತ್ತರಕ್ಕೆ ಗಮನಾರ್ಹ ಮಿಲಿಟರಿ ಮತ್ತು ಇತರ ಸಹಾಯವನ್ನು ಒದಗಿಸಿತು. 1961 ರಲ್ಲಿ ಉಭಯ ರಾಷ್ಟ್ರಗಳು ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಿದವು. ರಷ್ಯಾ-ಉತ್ತರ ಕೊರಿಯಾ ಸ್ನೇಹ, ಸಹಕಾರ ಮತ್ತು ಪರಸ್ಪರ ಸಹಾಯದ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಇತ್ತೀಚಿನ ಒಪ್ಪಂದದಂತೆ ಪರಸ್ಪರ ರಕ್ಷಣಾ ಒಪ್ಪಂದವನ್ನು ಹೊಂದಿದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಈ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಪರಿಣಾಮವಾಗಿ ಸಂಬಂಧಗಳು ತಾತ್ಕಾಲಿಕವಾಗಿ ಹದಗೆಟ್ಟವು.
ಹೀಗಿದ್ದರೂ, 2000 ರ ದಶಕದ ಆರಂಭದಿಂದಲೂ ಪುಟಿನ್ ಆಡಳಿತದ ರಷ್ಯಾವು ಕಿಮ್ ಸರ್ವಾಧಿಕಾರದ ಉತ್ತರ ಕೊರಿಯಾಕ್ಕೆ ಹತ್ತಿರವಾಗಿದೆ. 2022 ರಲ್ಲಿ ಉಕ್ರೇನ್ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಕ್ಕೆ ರಷ್ಯಾ ಗುರಿಯಾಯಿತು. ಆಗ ರಷ್ಯಾಗೆ ಬೆಂಬಲವಾಗಿ ನಿಂತಿದ್ದು ಉತ್ತರ ಕೊರಿಯಾ. ರಷ್ಯಾ ಮತ್ತು ಉತ್ತರ ಕೊರಿಯಾವು ಪಾಶ್ಚಿಮಾತ್ಯ ಉದಾರವಾದಿ ಕ್ರಮದ ವಿರುದ್ಧ ಒಟ್ಟಾಗಿ ಈಗಲೂ ನಿಂತಿವೆ. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!
ಈಗಿನ ಒಪ್ಪಂದ ಏನು?
ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಒಪ್ಪಂದವು ಪರಸ್ಪರ ಮಿಲಿಟರಿ ಬೆಂಬಲ ಮತ್ತು ತಾಂತ್ರಿಕ ನೆರವು ನೀಡುವುದು. ಪರಸ್ಪರ ರಕ್ಷಣಾ ನಿಬಂಧನೆಗಳು ಈ ಒಪ್ಪಂದದಲ್ಲಿ ನಿರ್ಣಾಯಕವಾಗಿದೆ. ಉದಾಹರಣೆಗೆ, ಉತ್ತರ ಕೊರಿಯಾ ಮೇಲೆ ಬೇರೊಂದು ರಾಷ್ಟ್ರ ಸಶಸ್ತ್ರ ಆಕ್ರಮಣ ನಡೆಸಿದರೆ ರಷ್ಯಾ ತಕ್ಷಣ ಕೊರಿಯಾಗೆ ಮಿಲಿಟರಿ ರಕ್ಷಣೆ ನೀಡುತ್ತದೆ. ಅದೇ ರೀತಿ, ರಷ್ಯಾ ಮೇಲೆ ಬೇರೊಂದು ರಾಷ್ಟ್ರ ಆಕ್ರಮಣ ಮಾಡಿದರೆ ಉತ್ತರ ಕೊರಿಯಾ ತಕ್ಷಣದ ಮಿಲಿಟರಿ ನೆರವು ನೀಡಬೇಕು. ಇದು ಉಭಯ ರಾಷ್ಟ್ರಗಳ ನಡುವೆ ಆಗಿರುವ ಪ್ರಮುಖ ಒಪ್ಪಂದ. ಇಬ್ಬರ ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ 1961 ರ ಒಪ್ಪಂದವನ್ನು ಪ್ರತಿಧ್ವನಿಸುತ್ತದೆ ಎಂದು ಕೌನ್ಸಿಲ್ ಫಾರ್ ಫಾರಿನ್ ರಿಲೇಶನ್ಸ್‌ನಲ್ಲಿ ಕೊರಿಯಾ ಅಧ್ಯಯನಕಾರ ಫೆಲೋ ಸ್ಯೂ ಮಿ ಟೆರ್ರಿ ತಿಳಿಸಿದ್ದಾರೆ.
ಜಪಾನ್-ದಕ್ಷಿಣ ಕೊರಿಯಾಗೆ ನಡುಕ
ರಷ್ಯಾ ಮತ್ತು ಉತ್ತರ ಕೊರಿಯಾ ಮಿಲಿಟರಿ ಒಪ್ಪಂದದಿಂದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ನಡುಕ ಹುಟ್ಟಿದೆ. ಈ ಒಪ್ಪಂದವು ತಮಗೆ ನೇರ ಭದ್ರತಾ ಬೆದರಿಕೆ ಎಂದು ಎರಡೂ ರಾಷ್ಟ್ರಗಳು ಭಾವಿಸಿದಂತಿದೆ. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಮಿಲಿಟರಿ ಸಾಮರ್ಥ್ಯದ ಬಗ್ಗೆ ಎರಡೂ ದೇಶಗಳು ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ತಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸುವ ಮತ್ತು ಭದ್ರತಾ ನೀತಿಗಳನ್ನು ಪರಾಮರ್ಶಿಸುವ ಕಡೆಗೆ ಮತ್ತೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಜಪಾನ್ ಈಗಾಗಲೇ ತನ್ನ ದೀರ್ಘಕಾಲದ ಶಾಂತಿವಾದಿ ವಿದೇಶಾಂಗ ನೀತಿಯಿಂದ ದೂರ ಸರಿದಿದೆ. ತನ್ನ ಮಿಲಿಟರಿ ಶಕ್ತಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಇತ್ತ ದಕ್ಷಿಣ ಕೊರಿಯಾ ತನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ವಿಚಾರವನ್ನು ಈಗ ಪರಿಗಣಿಸುವುದಾಗಿ ಹೇಳಿದೆ. ಇದು ಇಲ್ಲಿಯವರೆಗೆ ಅದನ್ನು ವಿರೋಧಿಸಿತ್ತು. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ
ರಷ್ಯಾ-ಉತ್ತರ ಕೊರಿಯಾ ಒಪ್ಪಂದವು ಇತರೆಡೆಗಳಲ್ಲಿ, ವಿಶೇಷವಾಗಿ ಇರಾನ್‌ನೊಂದಿಗೆ ಇದೇ ರೀತಿಯ ಪಾಲುದಾರಿಕೆಯನ್ನು ಪ್ರೋತ್ಸಾಹಿಸಬಹುದು. ಪಾಶ್ಚಿಮಾತ್ಯರಿಗೆ ಇವುಗಳು ದೊಡ್ಡ ಬೆದರಿಕೆ ನೀಡುವುದು ಗ್ಯಾರಂಟಿ. ಉತ್ತರ ಕೊರಿಯಾದ ಸಾಂಪ್ರದಾಯಿಕ ಮಿತ್ರ ಚೀನಾ. ಒಪ್ಪಂದವು ಏಷ್ಯಾದಲ್ಲಿ ಪಾಶ್ಚಿಮಾತ್ಯ ವಿರೋಧಿ ಭದ್ರಕೋಟೆಯನ್ನು ಬಲಪಡಿಸುತ್ತದೆ. ಆದರೆ, ಉತ್ತರ ಕೊರಿಯಾದೊಂದಿಗೆ ರಷ್ಯಾದ ಮಿಲಿಟರಿ ಸಹಯೋಗದ ಬಗ್ಗೆ ಚೀನಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ಒಪ್ಪಂದವು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಮೇಲೆ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸಬಹುದು.
ನ್ಯಾಟೊ ಎದೆಯಲ್ಲಿ ಢವಢವ
ದಕ್ಷಿಣ ಕೊರಿಯಾ ಮತ್ತು ಜಪಾನ್ ಈಗ ಯುನೈಟೆಡ್ ಸ್ಟೇಟ್ಸ್ ಜೊತೆಗಿನ ತಮ್ಮ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಈಗಾಗಲೇ ತನ್ನ ಮಿತ್ರರಾಷ್ಟ್ರಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕೂಡ, ರಷ್ಯಾ-ಉತ್ತರ ಕೊರಿಯಾ ಒಪ್ಪಂದದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ‘ಈ ಒಪ್ಪಂದ ಜಾಗತಿಕ ಭದ್ರತೆಗೆ ಅಪಾಯಕಾರಿ ಮತ್ತು ಹೆಚ್ಚಿದ ಪರಮಾಣು ಬಳಕೆಯ ಸಾಧ್ಯತೆಯನ್ನು ಎತ್ತಿ ತೋರುತ್ತಿದೆ. ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ಸರ್ವಾಧಿಕಾರಿ ಶಕ್ತಿಗಳು ಹೆಚ್ಚೆಚ್ಚು ಪಡೆಗಳನ್ನು ಸೇರುತ್ತಿವೆ. ಪರಸ್ಪರ ಬೆಂಬಲಿಸುತ್ತಿವೆ’ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್!
ರಷ್ಯಾ-ಉಕ್ರೇನ್ ಯುದ್ಧದ ಮೆಲುಕು
ಉತ್ತರ ಕೊರಿಯಾ ಜೊತೆಗಿನ ರಷ್ಯಾ ಒಪ್ಪಂದಕ್ಕೆ ಉಕ್ರೇನ್ ಮೇಲಿನ ಯುದ್ಧವೂ ಒಂದು ಕಾರಣ. ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಸ್ತುತ ಬಿಕ್ಕಟ್ಟಿಗೆ ಮುಖ್ಯ ಕಾರಣ ನ್ಯಾಟೊ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ). ಇದು ಯುಎಸ್, ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 30 ದೇಶಗಳ ಗುಂಪುಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಉಕ್ರೇನ್ ನ್ಯಾಟೊ ಸಂಸ್ಥೆಗೆ ಸೇರಲು ಬಯಸಿತ್ತು. NATO ಕೂಡ ಉಕ್ರೇನ್ ಅನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿತ್ತು. ಆದರೆ ಉಕ್ರೇನ್ ನಿರ್ಧಾರಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿತ್ತು. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಉಕ್ರೇನ್ ಕೇಳದೇ ನ್ಯಾಟೊ ಸೇರಲು ಮುಂದಾಯಿತು. ಇದರ ಪರಿಣಾಮದಿಂದ ರಷ್ಯಾ ಯುದ್ಧವನ್ನು ಎದುರಿಸಬೇಕಾಯಿತು.
ಉಕ್ರೇನ್ ನ್ಯಾಟೊ ಸೇರಲು ಪುಟಿನ್ ವಿರೋಧ ಯಾಕೆ?
ಉಕ್ರೇನ್ NATOದಲ್ಲಿ ತನ್ನ ಸದಸ್ಯ ಸ್ಥಾನ ಪಡೆಯಲು ರಷ್ಯಾ ಬಯಸುವುದಿಲ್ಲ. ಏಕೆಂದರೆ NATO ಸದಸ್ಯ ರಾಷ್ಟ್ರವು ಯಾವುದೇ ಬಾಹ್ಯ ದಾಳಿಯ ಸಂದರ್ಭದಲ್ಲಿ ಎಲ್ಲಾ ಸದಸ್ಯರ ಸಾಮೂಹಿಕ ಬೆಂಬಲಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ ಉಕ್ರೇನ್ ಅನ್ನು NATOದಲ್ಲಿ ಸದಸ್ಯನಾಗಲು ರಷ್ಯಾ ಒಪ್ಪುತ್ತಿಲ್ಲ. ಉಕ್ರೇನ್ ನ್ಯಾಟೊ ಸೇರಿದರೆ ಅದರ ಒಕ್ಕೂಟ ರಾಷ್ಟ್ರಗಳ ಸೇನೆಯು, ಉಕ್ರೇನ್‌ನ ಗಡಿಯಲ್ಲಿ ಪಡೆಗಳನ್ನು ನಿಯೋಜಿಸುತ್ತವೆ. ಉಕ್ರೇನ್ ಮತ್ತು ರಷ್ಯಾ ಗಡಿಗೆ ನ್ಯಾಟೊ ಒಕ್ಕೂಟ ರಾಷ್ಟ್ರಗಳ ಸೇನೆ ನಿಯೋಜನೆ ಸಾಧ್ಯವಾಗಬಾರದು ಎಂಬುದು ಪುಟಿನ್ ನಿಲುವು. ಹೀಗಾಗಿ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!
ಸಿಯೋಲ್: 24 ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ. ರಾಜಧಾನಿ ಪ್ಯೊಂಗ್ಯಾಂಗ್ ಕಿಮ್ ಇಲ್ ಸುಂಗ್ ಸ್ಕ್ವೇರ್‌ನಲ್ಲಿ ಉತ್ತರ ಕೊರಿಯಾ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un) ಬುಧವಾರ ಪುಟಿನ್‌ಗೆ ಭವ್ಯ ಸ್ವಾಗತ ಕೋರಲಾಯಿತು.
ಉಕ್ರೇನ್ ಮೇಲಿನ ಯುದ್ಧದ ಸಂದರ್ಭದಲ್ಲಿ ರಷ್ಯಾದ ನಿಲುವಿಗೆ ಸ್ಥಿರ ಮತ್ತು ಅಚಲ ಬೆಂಬಲವನ್ನು ನಾವು ಹೆಚ್ಚು ಪ್ರಶಂಸಿಸುತ್ತೇವೆ ಎಂದು ಕಿಮ್ ಅವರಿಗೆ ಪುಟಿನ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ಪ್ರಾಬಲ್ಯದ, ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಮಾಸ್ಕೋ ಹೋರಾಡುತ್ತಿದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಪುಟಿನ್ ಬುಧವಾರ ಮುಂಜಾನೆ ಪ್ಯೊಂಗ್ಯಾಂಗ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕಿಮ್ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು. ನಂತರ ಪ್ಯೊಂಗ್ಯಾಂಗ್‌ನಲ್ಲಿರುವ ರಾಜ್ಯ ಅತಿಥಿ ಗೃಹಕ್ಕೆ ಇಬ್ಬರೂ ನಾಯಕರು ತೆರಳಿದರು. ಪುಟಿನ್ ಈ ಭೇಟಿಯು ಉಭಯ ದೇಶಗಳ ದಶಕಗಳ ಸಂಬಂಧಗಳನ್ನು ಮರುರೂಪಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ