ಮಾಸ್ಕೋ: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ಉಕ್ರೇನ್ ಯುದ್ಧ ಸಂಬಂಧ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತಿಳಿಸಿದ್ದಾರೆ.
ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್ ಟ್ರಂಪ್ ಅವರೊಂದಿಗೆ ಎಂದಾದರೂ ಚರ್ಚೆ ನಡೆಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಉಕ್ರೇನ್ (Ukraine) ಒಪ್ಪಂದದ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್ ಭಾಗವತ್
ನಾನು ಟ್ರಂಪ್ ಅವರನ್ನು ಯಾವಾಗ ಭೇಟಿಯಾಗಲಿದ್ದೇನೆ ಎಂಬುದು ತಿಳಿದಿಲ್ಲ. ಅವರು ಕೂಡ ಯಾವುದಕ್ಕೂ ಖಚಿತಪಡಿಸಿಲ್ಲ. ಕಳೆದ 4 ವರ್ಷಗಳಿಂದ ಅವರ ಜೊತೆ ಮಾತುಕತೆ ನಡೆಸಿಲ್ಲ. ಆದರೆ ಯಾವಾಗ ಬೇಕಾದರೂ ಭೇಟಿಯಾಗಲು ಸಿದ್ಧವಿದ್ದೇನೆ, ಜೊತೆಗೆ ಉಕ್ರೇನ್ ಯುದ್ಧದ ಸಂಬಂದು ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಸ್ಕೋ: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು (Russian Ministry of Health) ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.
ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಈ ಕ್ಯಾನ್ಸರ್ ಲಸಿಕೆಯನ್ನು (Cancer Vaccine) ಉಚಿತವಾಗಿ ನೀಡಲಾಗುವುದು ಎಂದಿರುವ ಆಂಡ್ರೇ, ರಷ್ಯಾದ ಈ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿದ್ದಾರೆ. ಅಲ್ಲದೇ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಿಸಿದ್ದಾರೆ.
mRNA ಲಸಿಕೆ ಅಂದ್ರೆ ಏನು?
mRNA ಅಥವಾ ಮೆಸೆಂಜರ್ ಆರ್‌ಎನ್‌ಎ ಎಂಬುದು ಮಾನವನ ಆನುವಂಶಿಕ ಸಂಕೇತದ ಒಂದು ಸಣ್ಣ ಭಾಗವಾಗಿದೆ. ಇದು ನಮ್ಮ ಜೀವಕೋಶಗಳಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾವು ನಮ್ಮ ದೇಹವನ್ನು ಆಕ್ರಮಿಸಿದಾಗ, ಅದರ ವಿರುದ್ಧ ಹೋರಾಡಲು ಸಹಾಯಕವಾಗುವ ಪ್ರೋಟೀನ್‌ಗಳನ್ನು ಉತ್ಪಾದಿಸಲು mRNA ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಲಸಿಕೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅಗತ್ಯವಾದ ಪ್ರೋಟೀನ್‌ಗಳನ್ನು ಪಡೆಯುತ್ತವೆ, ಪ್ರತಿಕಾಯ (ಆಂಟಿಬಾಡಿ) ರೂಪುಗೊಳ್ಳುತ್ತವೆ. ಇದರೊಂದಿಗೆ ರೋಗನಿರೋಧಕ ಶಕ್ತಿತಯೂ ಬಲಗೊಳ್ಳುತ್ತದೆ. ಕ್ಯಾನ್ಸರ್ ಲಸಿಕೆಯು mRNA ತಂತ್ರಜ್ಞಾನ ಆಧರಿಸಿದ ಮೊದಲ ಲಸಿಕೆಯಾಗಿದೆ. ಇದನ್ನೂ ಓದಿ: ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!
ಭಾರತದಲ್ಲಿ ಕ್ಯಾನ್ಸರ್ ಸ್ಥಿತಿ ಹೇಗಿದೆ?
2022ರಲ್ಲಿ ಭಾರತದಲ್ಲಿ 14.13 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿತ್ತು. ಈ ಪೈಕಿ 7.22 ಲಕ್ಷ ಮಹಿಳೆಯರು, 6.91 ಲಕ್ಷ ಪುರುಷರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. 2022ರಲ್ಲಿ 9.16 ಲಕ್ಷ ರೋಗಿಗಳು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಬಳಿಕ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಶೇ.12 ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂದಾಜಿಸಿರುವುದಾಗಿ ವರದಿಯಾಗಿತ್ತು.
ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿಯ ಮಾಹಿತಿ ಪ್ರಕಾರ, ಸ್ತನ, ಪ್ರಾಸ್ಟೇಟ್ ಮತ್ತು ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯು 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸ್ತನ, ಬಾಯಿ, ಗರ್ಭಕೋಶ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ವರದಿ ಹೇಳಿದೆ.
ಮಾಸ್ಕೋ: ಮೇಕ್ ಇನ್ ಇಂಡಿಯಾ (Make in India) ಮೂಲಕ ಸಣ್ಣ ಮತ್ತು ದೊಡ್ಡ ಗಾತ್ರದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡುತ್ತಿದೆ ಎಂದು ಭಾರತ ಸರ್ಕಾರ ಹಾಗೂ ನಾಯಕತ್ವವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶ್ಲಾಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧತೆಯನ್ನು ನಡೆಸಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.
ಭಾರತೀಯ ನಾಯಕತ್ವದಿಂದಾಗಿ ಭಾರತ (India) ಸರ್ಕಾರವು ಸ್ಥಿರವಾದ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಜೊತೆಗೆ ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.
ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್‌ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ‍್ಯಾಂಡ್‌ಗಳು ಯಶಸ್ಸು ಗಳಿಸಿದೆ. ಇದು ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಇನ್ನೂ ಕೃಷಿಯಲ್ಲಿ ತಯಾರಕರ ಮತ್ತು ಉತ್ಪಾದಕರ ಸಂಖ್ಯೆಯು ಬೆಳೆಯುತ್ತಲೇ ಇದೆ. 1988ರಲ್ಲಿ, ಸೋವಿಯತ್ ಒಕ್ಕೂಟವು ಯುಎಸ್‌ಡಿ 35 ಶತಕೋಟಿಗೆ ಧಾನ್ಯವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ, ಯುಎಸ್‌ಡಿ 66 ಶತಕೋಟಿಯಷ್ಟು ಧಾನ್ಯವನ್ನು ರಫ್ತು ಮಾಡಿದ್ದೇವೆ. ಇದು ನಮ್ಮ ರೈತರ ಅರ್ಹತೆಯಾಗಿದೆ. ರಷ್ಯಾ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿ, ಹೈಟೆಕ್ ಸೇರಿದಂತೆ, ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಅವಕಾಶಗಳನ್ನು ವಿಸ್ತರಿಸುವ ತೀವ್ರ ಅವಶ್ಯಕತೆಯಿದೆ ಎಂದರು.
ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದರು.ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – NIAಯಿಂದ 16 ಕಡೆ ದಾಳಿ
ಮಾಸ್ಕೋ: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಜರ್ಮನಿಯ ಮಾಜಿ ಚಾನ್ಸೆಲರ್ (Germany ex- chancellor) ಎಂಜೆಲಾ ಮರ್ಕೆಲ್ (Angela Merkel) ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
2007 ರಲ್ಲಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು (Dog) ಅವರೊಂದಿಗೆ ಸಭೆಗೆ ಕರೆತಂದಾಗ ನಾನು ಅವರನ್ನು ಹೆದರಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ತಿಳಿಸಿದರು.
ಕಝಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ಮಾತನಾಡಿದ ಅವರು, ಅವರು ನಾಯಿಗೆ ಹೆದರುತ್ತಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ನಾನು ಮತ್ತೊಮ್ಮೆ ಮಾಧ್ಯಮದ ಮೂಲಕ ಎಂಜೆಲಾ ಮರ್ಕೆಲ್ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಮತ್ತೆ ರಷ್ಯಾಗೆ ಬನ್ನಿ. ಈ ಭೇಟಿಯ ಸಂದರ್ಭದಲ್ಲಿ ನಾನು ಈ ರೀತಿ ವರ್ತಿಸುವುದಿಲ್ಲ ಎಂದು ಹೇಳಿದರು.
ಈಗ ಕ್ಷಮೆ ಕೇಳಿದ್ದು ಯಾಕೆ?
ಎಂಜೆಲಾ ಮರ್ಕೆಲ್ ಅವರ ಆತ್ಮಚರಿತ್ರೆ ಮಂಗಳವಾರ (ನ.26) ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ನನಗೆ ಇರುಸು ಮುರುಸು ಮಾಡಲೆಂದೇ ಪುಟಿನ್ ನಾಯಿ ತಂದಿದ್ದರು ಎಂದು ಬರೆದಿದ್ದರು.
ಪುಟಿನ್ ಕೆಲವೊಮ್ಮೆ ಸಾಕುಪ್ರಾಣಿಗಳನ್ನು ವಿದೇಶಿ ಅತಿಥಿಗಳ ಜೊತೆಗಿನ ಸಭೆಗೆ ಕರೆತರುವುದು ನನಗೆ ತಿಳಿದಿತ್ತು. ನಾನು ನಾಯಿಗೆ ಹೆದರುವ ಕಾರಣ ಪುಟಿನ್ ಜೊತೆಗಿನ ಸಭೆಗೆ ನಾಯಿ ತರದಂತೆ ನಾನು ಹೇಳಿದ್ದೆ. ಹೀಗಿದ್ದರೂ ನಾಯಿಯನ್ನು ತರಲಾಗಿತ್ತು. ನಾನು ನಾಯಿಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಪಕ್ಕದಲ್ಲೇ ನಾಯಿ ಸಂಚರಿಸುತ್ತಿದ್ದಾಗ ನನಗೆ ಭಯವಾಗುತ್ತಿತ್ತು. ಪುಟಿನ್ ಮುಖಭಾವವನ್ನು ಗಮನಿಸಿದಾಗ ಅವರು ನನ್ನ ಸ್ಥಿತಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಬರೆದಿದ್ದಾರೆ.
2007 ರಲ್ಲಿ ಎಂಜೆಲಾ ಮರ್ಕೆಲ್ ಅವರನ್ನು ಪುಟಿನ್ ಅವರು ರಷ್ಯಾದ ಸೋಚಿಯಲ್ಲಿರುವ ತಮ್ಮ ಬೇಸಿಗೆಯ ನಿವಾಸದಲ್ಲಿ ಭೇಟಿಯಾದರು. ಈ ಭೇಟಿಯ ವೇಳೆ ಪುಟಿನ್ ಅವರು ನಾಯಿಯನ್ನು ಕರೆ ತಂದಿದ್ದರು. ಸಭೆಗೆ ನಾಯಿ ತಂದಿದ್ದರಿಂದ ಮರ್ಕೆಲ್ ಭಯಗೊಂಡಿದ್ದರು. ಅಷ್ಟೇ ಅಲ್ಲದೇ ಮರ್ಕೆಲ್ ಅಹಿತಕರವಾಗಿ ಕಾಣುವಂತೆ ಫೋಟೋ ತೆಗೆಯಲಾಗಿತ್ತು.
ಎಂಜೆಲಾ ಮರ್ಕೆಲ್ 22 ನವೆಂಬರ್ 2005 ರಿಂದ 8 ಡಿಸೆಂಬರ್ 2021 ರವರೆಗೆ ಜರ್ಮನಿಯ ಚಾನ್ಸೆಲರ್ ಆಗಿದ್ದರು . ಇಷ್ಟು ದೀರ್ಘ ಅವಧಿವರೆಗೆ ಚಾನ್ಸೆಲರ್ ಆಗಿದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಂಜೆಲಾ ಮರ್ಕೆಲ್ ಪಾತ್ರವಾಗಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರಿಗೆ ನಾಯಿಗಳು ಪ್ರಾಣಿಗಳೆಂದರೆ ಇಷ್ಟ. ಹಿಂದೆ ಹಲವಾರು ಬಾರಿ ವಿಶ್ವದ ನಾಯಕರ ಜೊತೆಗಿನ ಭೇಟಿ ಸಂದರ್ಭದಲ್ಲಿ ನಾಯಿಗಳನ್ನು ಕರೆ ತಂದಿದ್ದರು.
ಮಾಸ್ಕೋ/ಕೈವ್: ರಷ್ಯಾದ (Russia) ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಒಪ್ಪಿಗೆ ನೀಡಿದ ಬೆನ್ನಲ್ಲೇ ಉಕ್ರೇನ್ (Ukraine) ಅಮೆರಿಕ ನಿರ್ಮಿತ ಕ್ಷಿಪಣಿಗಳಿಂದ (American Missiles) ದಾಳಿ ನಡೆಸಿದೆ. ಒಟ್ಟು 6 ಬ್ಲಾಲಿಸ್ಟಿಕ್ ಕ್ಷಿಪಣಿಗಳನ್ನು ತನ್ನ ಮೇಲೆ ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.
ಉಕ್ರೇನ್ ಗಡಿಯಿಂದ ಸುಮಾರು 130 ಕಿಮೀ ದೂರದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಕರಾಚೆವ್ ನಗರದಲ್ಲಿರುವ ರಷ್ಯಾದ ಮಿಲಿಟರಿ ಸೌಲಭ್ಯ ಗುರಿಯಾಗಿಸಿ ಈ ದಾಳಿ ನಡೆದಿದೆ. ರಷ್ಯಾ ಸೇನೆಯನ್ನ ಗುರಿಯಾಗಿಸಿ ಉಕ್ರೇನ್ ಇದೇ ಮೊದಲ ಬಾರಿಗೆ ಈ ATACMS ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ ಮಾಡಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಉಕ್ರೇನ್ ಹೇಳಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.
1,000 ದಿನಗಳಲ್ಲಿ 10 ಲಕ್ಷ ಮಂದಿ ಸಾವು:
2022ರ ಫೆಬ್ರವರಿ 24ರಂದು ಶುರುವಾದ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಬರೋಬ್ಬರಿ ಒಂದು ಸಾವಿರ ದಿನಗಳನ್ನು ಪೂರೈಸಿದೆ. ಈ ಘನಘೋರ ಯುದ್ಧದಲ್ಲಿ ಈವರೆಗೂ ಅಂದಾಜು 10 ಲಕ್ಷ ಮಂದಿ ಬಲಿ ಆಗಿದ್ದಾರೆ. ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್ ಜನಸಂಖ್ಯೆ ಶೇ.25ರಷ್ಟು ಮಂದಿ ಇಲ್ಲವಾಗಿದ್ದಾರೆ. ರಷ್ಯಾ ಜನಸಂಖ್ಯೆಯೂ ಇಳಿಮುಖವಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್
ಉಕ್ರೇನ್‌ನ 40 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. 60 ಲಕ್ಷ ಮಂದಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಷ್ಟೆಲ್ಲಾ ಆದ್ರೂ ಈ ಭೀಕರ ಯುದ್ಧ ನಿಲ್ಲುವಂತೆ ಕಾಣ್ತಿಲ್ಲ. ಇದು ಯುರೋಪ್ ಇತರೆಡೆಗಳಿಗೂ ಹಬ್ಬುವ ಆತಂಕವಿದೆ. ರಷ್ಯಾ ದಾಳಿ ನಡೆಸಬಹುದು.. ಔಷಧಿ, ಬೇಬಿ ಫುಡ್ ಸ್ಟಾಕ್ ಮಾಡಿಕೊಳ್ಳಿ ಎಂದು ನ್ಯಾಟೋ ಕೂಟ ಅಲರ್ಟ್ ಮಾಡಿದೆ.
ಈ ಹೊತ್ತಲ್ಲೇ ಅಣ್ವಸ್ತ್ರಗಳ ಬಳಕೆಗೆ ಅನುಮತಿಸುವ ನಿಯಮಗಳನ್ನು ಸರಳೀಕರಿಸುವ ಕಡತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಹಾಕಿದ್ದಾರೆ. ಅಂದ ಹಾಗೇ, ಜನವರಿ ಆರಂಭದಲ್ಲಿ ಪುಟಿನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ..ಆದ್ರೆ, ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದೆ. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ
ಮಾಸ್ಕೋ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ನಿರ್ದಿಷ್ಟ ದಿನಾಂಕ ಪ್ರಕಟಿಸಲು ರಷ್ಯಾ ಸಕಲ ಸಿದ್ಧತೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ನಾವು ಅವರ ಭೇಟಿಯ ನಿಖರವಾದ ದಿನಾಂಕಗಳನ್ನು ತಿಳಿಸುತ್ತೇವೆ. ಪ್ರಧಾನಿ ಮೋದಿಯವರು (Narendra Modi) ರಷ್ಯಾಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈಗ ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ನಮ್ಮ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ,
ಉಕ್ರೇನ್‌ನಲ್ಲಿ ಮೇಲಿನ ಯುದ್ಧಾಪರಾಧಗಳಿಗಾಗಿ ಪುಟಿನ್‌ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಜಾರಿ ಮಾಡಿದೆ. ಇದಾದ ಬಳಿಕ ICCಯು ಪುಟಿನ್ ಮತ್ತು ಮಕ್ಕಳ ಹಕ್ಕುಗಳ ರಷ್ಯಾದ ಕಮಿಷನರ್ ಮಾರಿಯಾ ಲ್ವೋವಾ-ಬೆಲೋವಾ ಇಬ್ಬರ ವಿರುದ್ಧವೂ ಯುದ್ಧ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಿತು.
ನ್ಯಾಯಾಲಯದ ಬೈಂಡಿಂಗ್ ಒಪ್ಪಂದದ ಅಡಿಯಲ್ಲಿ ICC ವಾರಂಟ್ ಹೊರಡಿಸಲಾಗಿದೆ. ಈ ಇಬ್ಬರು ICC ಯ ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡಿದರೆ ಅವರನ್ನು ಬಂಧಿಸಬೇಕು ಎಂಬ ಕಾನೂನಿದೆ. ಆದಾಗ್ಯೂ, ಭಾರತವು ಈ ಒಪ್ಪಂದಕೆ ಸಹಿ ಮಾಡಿಲ್ಲ.
ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಗುಂಪಿನ ನಾಯಕರ ವಾರ್ಷಿಕ ಶೃಂಗಸಭೆಗಾಗಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿದ್ದರು. ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದರು.
ಮಾಸ್ಕೋ: 2ನೇ ವಿಶ್ವ ಮಹಾಯುದ್ಧದ ನಂತರ ಅತಿಹೆಚ್ಚು ಸಾವು-ನೋವು ಕಂಡ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಬರೋಬ್ಬರಿ 1,000 ದಿನಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೊಸ ಪರಮಾಣು ನೀತಿಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಎಚ್ಚರಿಕೆ ನೀಡಿದ್ದಾರೆ.
2022ರ ಫ್ರೆಬ್ರವರಿ 24ರಂದು ಶುರುವಾದ ಯುದ್ಧ 1,000 ದಿನಗಳನ್ನು ಪೂರೈಸುತ್ತಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಪುಟಿನ್ ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ (Nuclear Deterrent Policy) ಸಹಿ ಹಾಕಿದ್ದು, ಪರಮಾಣು ಶಕ್ತಿ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ನಡೆಸುವ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.
ಅನಿವಾರ್ಯತೆ ಬಂದ್ರೆ ಯೋಚಿಸಲ್ಲ:
ಇದೇ ವೇಳೆ ಕ್ರೆಮ್ಲಿನ್ (Kremlin) ಉಕ್ರೇನ್ ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಕೈವ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲದಿಂದ ಸಂಘರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿದ್ದಾರೆ.
ಅಮೆರಿಕ ಉಕ್ರೇನ್‌ಗೆ ಹೇಳಿದ್ದೇನು?
ರಷ್ಯಾ-ಉಕ್ರೇನ್ (Russia- Ukraine) ಯುದ್ಧ ನಿಲ್ಲಿಸುತ್ತೇನೆಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರ ಹೊರತಾಗಿಯೂ ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್ – ಭಾರತದಲ್ಲಿ ಏನಾಗ್ತಿದೆ?
ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್ ನಡೆಸುವ ಸಾಧ್ಯತೆಯಿದೆ. ಇದಕ್ಕೆ ಜೋ ಬೈಡನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.
120 ಕ್ಷಿಪಣಿಗಳಿಂದ ದಾಳಿ:
ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?
– ಊಟಕ್ಕೆ ವಿರಾಮದಂತೆ ಕೆಲಸದ ಕಚೇರಿಯಲ್ಲಿ ಲೈಂಗಿಕತೆಗೂ ಸಿಗುತ್ತಾ ವಿರಾಮ?
ರಷ್ಯಾದಲ್ಲಿ (Russia) ಕುಸಿಯುತ್ತಿರುವ ಜನಸಂಖ್ಯೆ ಹೆಚ್ಚಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನೇತೃತ್ವದ ಸರ್ಕಾರ ‘ಸೆಕ್ಸ್ ಸಚಿವಾಲಯ’ (Ministry Of Sex) ಸ್ಥಾಪನೆಗೆ ಚಿಂತನೆ ನಡೆಸಿದೆ. ಪುಟಿನ್ ಆಪ್ತೆ ಹಾಗೂ ರಷ್ಯಾ ಸರ್ಕಾರದ ಕುಟುಂಬ ಸಂರಕ್ಷಣೆ ಸಂಸದೀಯ ಸಮಿತಿ ಅಧ್ಯಕ್ಷೆ ನಿನಾ ಆಸ್ಟೇನಿಯಾ ಎಂಬುವರು ಈ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಪರಿಶೀಲಿಸುತ್ತಿದ್ದಾರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೌದು. ಕೆಲ ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಜನರಲ್ಲಿ ಮನವಿ ಮಾಡಿದ್ದರು, 2 ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವಂತಹ ಹೊಸ ಕಾನೂನು ರೂಪಿಸುವುದಾಗಿಯೂ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪೂರ್ವಜರು 16 ಬಗೆಯ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುವ ಬದಲಾಗಿ ʻ16 ಮಕ್ಕಳನ್ನು ಹೊಂದುವಂತೆ ಆಶೀರ್ವದಿಸಬೇಕಾದ ಅನಿವಾರ್ಯತೆ ಇದೆʼ ಎಂದು ಜನಸಂಖ್ಯೆ ಹೆಚ್ಚಳದ ಬಗ್ಗೆ ಹೇಳಿದ್ದರು.
ಇನ್ನೂ ಜನಸಂಖ್ಯೆ ನಿಯಂತ್ರಿಸಲು ಚೀನಾ, 80ರ ದಶಕದಲ್ಲಿ ‘ಒಂದು ಮಗುವಿನ ನೀತಿ’ಯನ್ನು ಜಾರಿಗೆ ತಂದಿತ್ತು. ಆದ್ರೆ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿ, ʻಎರಡು ಮಗು’ ಮತ್ತು ನಂತರ ‘ಮೂರು ಮಗು’ ನೀತಿಯನ್ನು ಜಾರಿಗೆ ತರಲಾಯಿತು. ಇದೀಗ ಹೆಚ್ಚುಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿರುವ ಚೀನಾ, ಹೆಚ್ಚು ಮದುವೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಯುವಕ-ಯುವತಿಯರು ಪ್ರೀತಿಯಲ್ಲಿ ತೊಡಗುವಂತೆ ಮಾಡಲು ಕಾಲೇಜುಗಳಲ್ಲಿ ವಿಶೇಷ ಕೋರ್ಸ್ ಸಹ ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: 75 ಕೋಟಿ ಮೌಲ್ಯದ ಚಾಪರ್‌ನಲ್ಲಿ ಸೆಕ್ಸ್ ಮಾಡುತ್ತಲೇ ಸಿಕ್ಕಿಬಿದ್ದ ಬ್ರಿಟನ್ ಸೈನಿಕರು
ಇದೀಗ ಜನಸಂಖ್ಯಾ ಸಮಸ್ಯೆ ಭಾರತ ಮಾತ್ರವಲ್ಲ, ಇಡೀ ವಿಶ್ವವನ್ನು ಕಾಡತ್ತಿದೆ. ರಷ್ಯಾದಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ. ಕಳೆದ 3 ವರ್ಷದಿಂದ ನಡೆಯುತ್ತಿರುವ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದು, ಜನಸಂಖ್ಯೆ ಇಳಿಕೆಯ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಹೀಗಾಗಿ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಈಗಾಗಲೇ ಸರ್ಕಾರ ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದೆ. ಆ ಪ್ರಯತ್ನವನ್ನು ತೀವ್ರಗೊಳಿಸಲು ಗ್ಲಾವ್ ಎಂಬ ಪಿಆರ್ ಏಜೆನ್ಸಿಯು ಸರ್ಕಾರಕ್ಕೆ ‘ಸೆಕ್ಸ್ ಸಚಿವಾಲಯ’ ಸ್ಥಾಪಿಸುವ ಸಲಹೆ ನೀಡಿದೆ. ಅದಕ್ಕಾಗಿ ʻಕೆಲಸದ ಸ್ಥಳದಲ್ಲಿ ಸೆಕ್ಸ್ʼ ಎನ್ನುವ ಯೋಜನೆಯನ್ನೂ ಪ್ರಸ್ತಾಪಿಸಲಾಗಿದೆ. ಈ ಯೋಜನೆ ಪ್ರಕಾರ, ಜಸನರು ಕಚೇರಿಯಲ್ಲಿ ಊಟ ಅಥವಾ ಕಾಫಿ, ಟೀಗೆ ವಿರಾಮ ತೆಗೆದುಕೊಂಡಂತೆ ಸೆಕ್ಸ್ ಮಾಡುವುದಕ್ಕೂ ಸಮಯ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ರಷ್ಯಾ ಈ ಕ್ರಮ ಕೈಗೊಂಡಿದ್ದೇಕೆ? ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳು ಜನಸಂಖ್ಯೆ ಹೆಚ್ಚಳಕ್ಕೆ ಒತ್ತು ನೀಡುತ್ತಿರುವುದಕ್ಕೆ ಎಂಬುದನ್ನು ಮುಂದೆ ತಿಳಿಯೋಣ…
ಜನಸಂಖ್ಯೆ ಹೆಚ್ಚಳಕ್ಕೆ ಏಕೆ ಒತ್ತು?
ಸುಮಾರು 50 ವರ್ಷಗಳ ಹಿಂದೆ, ಲೇಖಕ ಮತ್ತು ಅರ್ಥಶಾಸ್ತ್ರಜ್ಞ ಪಾಲ್ ಎಲ್ರಿಚ್ ತಮ್ಮ ʻಜನಸಂಖ್ಯಾ ಸ್ಫೋಟ’ ಎಂಬ ಪುಸ್ತಕದಲ್ಲಿ ಮುಂದೊಂದು ದಿನ ಜನಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ ಜನರು ಹಸಿವಿನಿಂದ ಸಾಯುತ್ತಾರೆ ಮತ್ತು ಭೂಮಿಯು ಸತ್ತವರ ಗ್ರಹವಾಗುತ್ತದೆ ಎಂದು ಉಲ್ಲೇಖಿಸಿದ್ದರು. ಇದು ಇಡೀ ವಿಶ್ವವನ್ನು ಚಿಂತೆಗೀಡುಮಾಡಿತ್ತು. ಆದ್ರೆ ಈಗ ಇದಕ್ಕೆ ತದ್ವಿರುದ್ಧವಾದಂತಿದೆ. ಅದಕ್ಕಾಗಿ ವೃದ್ಧರ ಸಂಖ್ಯೆಯನ್ನು ಕಡಿಮೆಗೊಳಿಸಲು ಹಾಗೂ ಫಲವತ್ತತೆಯ ದರವನ್ನು ಹೆಚ್ಚಿಸಲು ಸರ್ಕಾರಗಳು ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೊಡಗಿವೆ, ಅದಕ್ಕಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದ ಮೇಲೆ ಗುಂಡಿನ ದಾಳಿ – ಕಿಡಿಗೇಡಿಗಳಿಗೆ ಶೋಧ
2100ರ ವೇಳೆಗೆ ಏನಾಗುತ್ತದೆ?
ಪ್ರಸಕ್ತ ವರ್ಷ ಜುಲೈನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆ ವರದಿಯೊಂದು 2100ರ ಇಸವಿ ವರೆಗೆ ಜನಸಂಖ್ಯೆಯನ್ನು ಅಂದಾಜಿಸಲಾಗಿದೆ. 1990ಕ್ಕೆ ಹೋಲಿಸಿದ್ರೆ ಮಹಿಳೆಯರು ಈಗ ಕಡಿಮೆ ಮಕ್ಕಳನ್ನು ಹೊಂದುತ್ತಿದ್ದಾರೆ. 2080ರ ವೇಳೆಗೆ ಭೂಮಿಯ ಮೇಲಿನ ಜನಸಂಖ್ಯೆಯು 10 ಶತಕೋಟಿ ದಾಟುತ್ತದೆ. ನಂತರ ಕಡಿಮೆಯಾಗಲು ಶುರುವಾಗುತ್ತದೆ. ಇದರೊಂದಿಗೆ ವಾಷಿಂಗ್ಟನ್ ವಿಶ್ವವಿದ್ಯಾಲಯ ಅಧ್ಯಯನ ವರದಿಯೊಂದನ್ನ ಬಿಡುಗಡೆ ಮಾಡಿದ್ದು, ಜನಸಂಖ್ಯೆಯ ಬಗ್ಗೆ ಉಲ್ಲೇಖ ಮಾಡಿದೆ. 1950 ರಿಂದ 2021ರವರೆಗಿನ 204 ದೇಶಗಳ ಫಲವತ್ತತೆ ದರ ವಿಶ್ಲೇಷಿಸಿದೆ. 2080ರ ವೇಳೆಗೆ ಜನಸಂಖ್ಯೆಯು ಹೆಚ್ಚಳವಾಗಿ ಮತ್ತು 2100ರ ವೇಳೆಗೆ ಮತ್ತೆ ಇಳಿಕೆಯಾಗುವತ್ತ ಸಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?
ಭಾರತದಲ್ಲಿ ಏನಾಗುತ್ತದೆ?
ಸದ್ಯ ವೃದ್ಧರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿಲ್ಲ ಎಂಬುದನ್ನು ವರದಿಗಳು ತೋರಿಸಿವೆ. ʻಇಂಡಿಯಾ ಏಜಿಂಗ್ ರಿಪೋರ್ಟ್-2023ʼರ ಪ್ರಕಾರ, ದೇಶದಲ್ಲಿ 2025ರ ವೇಳೆಗೆ 60 ವರ್ಷ ಮೇಲ್ಪಟ್ಟ ವದ್ಧರ ಸಂಖ್ಯೆಯು 20.8% ರಷ್ಟು ಇರಲಿದೆ. 2050ರ ವೇಳೆಗೆ ಭಾರತದಲ್ಲಿ ವೃದ್ಧರ ಸಂಖ್ಯೆ 34.7 ಕೋಟಿ ಎಂದು ಅಂದಾಜಿಸಲಾಗಿದೆ, 2100ರ ವೇಳೆ ಈ ಸಂಖ್ಯೆ ಭಾರತದ ಶೇ.36ಕ್ಕೆ ತಲುಪುತ್ತದೆ. ಅದೇ ಸಮಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಜನರ ಜನಸಂಖ್ಯೆಯು ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಒಟ್ಟಾರೆ ಜನಸಂಖ್ಯೆ ದೃಷ್ಟಿಯಿಂದ ನೋಡುವುದಾದ್ರೆ 2050ರ ವರೆಗೆ ಭಾರತದ ಜನಸಂಖ್ಯೆಯು 18% ರಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ಪಾಲು ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?
ಇತ್ತೀಚೆಗೆ ಪ್ರಪಂಚದ ಬಹುತೇಕ ದೇಶಗಳಂತೆ ಭಾರತದಲ್ಲಿಯೂ ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನಲಾಗಿದೆ. 1950ರ ದಶಕದಲ್ಲಿ ಭಾರತದಲ್ಲಿ ಪ್ರತಿ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಎನ್‌ಟಿಐ ಆಯೋಗ ವರದಿ ಹೇಳುತ್ತದೆ. 2000ನೇ ಇಸವಿ ಹೊತ್ತಿಗೆ ಈ ಫಲವತ್ತತೆಯ ದರವು 3.4ಕ್ಕೆ ಇಳಿಕೆಯಾಗಿದೆ. 2019-21ರ ನಡುವೆ ನಡೆದ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಭಾರತದಲ್ಲಿ ಫಲವತ್ತತೆಯ ಪ್ರಮಾಣ ಶೇ.2ಕ್ಕೆ ಇಳಿದಿದೆ. ಅಂದ್ರೆ ಈಗ ಭಾರತೀಯ ಮಹಿಳೆಯರು ಸರಾಸರಿ 2 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 2050ರ ವೇಳೆಗೆ ಇದರ ಸರಾಸರಿಯು 1.7ಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.
ಯಾವ ಯಾವ ದೇಶಗಳಲ್ಲಿ ಏನಾಗುತ್ತಿದೆ?
ಬ್ರಿಟಿಷ್ ಪತ್ರಿಕೆ ʻದಿ ಗಾರ್ಡಿಯನ್ʼ ವರದಿಯ ಪ್ರಕಾರ, ತೈವಾನ್‌ನಲ್ಲಿ ಫಲವತ್ತತೆ ಪ್ರಮಾಣ 0.85, ಜಪಾನ್‌ನಲ್ಲಿ 1.21, ಗ್ರೀಸ್‌ನಲ್ಲಿ 1.26, ದಕ್ಷಿಣ ಕೊರಿಯಾದಲ್ಲಿ 0.72 ತಲುಪಿದೆ. ಇದರಿಂದ 2100 ವೇಳೆಗೆ ಇಲ್ಲಿಇನ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡದೇ ಇದ್ದದ್ದು, ಹೆಚ್ಚಿನ ಮಹಿಳೆಯರು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿರುವುದು, ಕುಟುಂಬ ಯೋಜನೆಗಿಂತ ವೃತ್ತಿಯ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಹಾಗೂ ಗರ್ಭನಿರೋಧಕ ಮಾತ್ರೆ ಮತ್ತು ಕಾಂಡೋಮ್ ಬಳಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.
ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿ ಯಾವ ರೀತಿ ಏರಿಳಿತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ (Donald Trump) ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸದಂತೆ ಒತ್ತಾಯಿಸಿದ್ದಾರೆಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ವಿರುದ್ಧದ ಚುನಾವಣಾ ವಿಜಯದ ಕೆಲವೇ ದಿನಗಳ ನಂತರ ಟ್ರಂಪ್, ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಿಂದ ಪುಟಿನ್‌ಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದ್ದಾರೆ. ಇದನ್ನೂ ಓದಿ: ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ
ಉಕ್ರೇನ್‌ನ ಯುದ್ಧದ ನಿರ್ಣಯವನ್ನು ಶೀಘ್ರದಲ್ಲೇ ಚರ್ಚಿಸಲು ಹೆಚ್ಚಿನ ಮಾತುಕತೆಗೆ ಆಸಕ್ತಿ ಹೊಂದಿದ್ದೇವೆಂದು ಪುಟಿನ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂದು ಎಂಬುದು ಟ್ರಂಪ್ ಒತ್ತಾಯವಾಗಿತ್ತು.
ಮಾಸ್ಕೋ: ಎರಡನೇ ಬಾರಿಗೆ ಅಮೆರಿಕದ ಶ್ವೇತಭವನದ ಗದ್ದುಗೆ ಏರಿದ ಡೊನಾಲ್ಡ್ ಟ್ರಂಪ್‌ಗೆ (Donald Trump) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಭಾಶಯ ತಿಳಿಸಿದ್ದಾರೆ.
ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ನೀವು ಮುಕ್ತರಾಗಿದ್ದೀರಾ ಎಂಬ ಪ್ರಶ್ನೆಗೆ, ರಷ್ಯಾದ ನಾಯಕ ‘ಹೌದು, ನಾನು ಸಿದ್ಧ’ ಎಂದು ಉತ್ತರಿಸಿದ್ದಾರೆ.
ಬುಧವಾರ ಬೆಳಗ್ಗೆಯಿಂದ ಬಹುಶಃ 70 ವಿಶ್ವ ನಾಯಕರೊಂದಿಗೆ ಮಾತನಾಡಿದ್ದೇನೆ. ಆದರೆ, ಪುಟಿನ್ ಅವರೊಂದಿಗೆ ಮಾತನಾಡಲಿಲ್ಲ. ಅವರು ಹ್ಯಾರಿಸ್ ಗೆಲ್ಲಲು ಬಯಸುತ್ತಾರೆ ಎಂದು ನಗು ಬೀರುತ್ತಾ ಟ್ರಂಪ್ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾದ ಟ್ರಂಪ್
ಅಮೆರಿಕದ ತನಿಖಾ ವರದಿಗಾರ ಬಾಬ್ ವುಡ್‌ವರ್ಡ್ ಅವರ ಹೊಸ ಪುಸ್ತಕದಲ್ಲಿ, ಜೋ ಬೈಡೆನ್ ಅವರ ಅಧ್ಯಕ್ಷತೆಯಲ್ಲಿ ಟ್ರಂಪ್ ಮತ್ತು ಪುಟಿನ್ ಏಳು ಬಾರಿ ಮಾತನಾಡಿರಬಹುದು ಎಂದು ಪ್ರತಿಪಾದಿಸಿದ್ದಾರೆ. ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಪ್ರಚಾರವನ್ನು ಹೆಚ್ಚಿಸಲು ಮಾಸ್ಕೋ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿತ್ತು ಎಂಬ ಆರೋಪಗಳೂ ಇವೆ.