ಜೈಲಿನಲ್ಲಿರುವ ಕ್ರೆಮ್ಲಿನ್ ವಿಮರ್ಶಕ ಹಾಗೂ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ. ಪುಟಿನ್ ಅವರನ್ನು ʼನಿಸ್ಸಂಶಯವಾಗಿ ಹುಚ್ಚು ತ್ಸಾರ್ʼ ಎಂದು ಕರೆದಿರುವ ನಾವೆಲ್ನಿ, ರಷ್ಯನ್ನರು ಯುದ್ಧವನ್ನು ಬೆಂಬಲಿಸುವುದಿಲ್ಲ ಎಂದು ಜಗತ್ತಿಗೆ ಹೇಳಬೇಕು ಎಂದು ಕರೆ ನೀಡಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್ ಮೇಲೆ ತಮ್ಮ ದಾಳಿಯನ್ನು ವಿಸ್ತರಿಸುತ್ತಿರುವಂತೆ, ಬ್ಯಾಕ್ ಹೋಮ್ ಪ್ರದರ್ಶನಕಾರರು ಯುದ್ಧವನ್ನು ಖಂಡಿಸುವ ಪೋಸ್ಟರ್‌ಗಳನ್ನು ಹಿಡಿದು ‘ಯುದ್ಧ ಬೇಡ’ ಎಂದು ಘೋಷಣೆ ಕೂಗುತ್ತಾ ನಗರಗಳಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಸ್ವತಂತ್ರ ಮೇಲ್ವಿಚಾರಣಾ ಗ್ರೂಪ್ OVD-ಇನ್ಫೋ ಪ್ರಕಾರ, ರಷ್ಯಾದಲ್ಲಿ ಒಟ್ಟು 7,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ
ಪುಟಿನ್ ಅವರ ವಿರೋಧಿಗಳಲ್ಲಿ ಪ್ರಮುಖರಾದ ನಾವೆಲ್ನಿ ಅವರು ಜರ್ಮನಿಯಿಂದ ಹಿಂದಿರುಗಿದ ನಂತರ ಕಳೆದ ವರ್ಷ ಜೈಲಿನಲ್ಲಿದ್ದಾರೆ. ಶಾಂತಿ ಸ್ಥಾಪನೆಗಾಗಿ ನಾವು ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ಪುಟಿನ್ ವಿರುದ್ಧ ರಷ್ಯನ್ನರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪುಟಿನ್ ನಡೆಗೆ ರಷ್ಯಾ ತಾರಾಗಣ, ಕ್ರೀಡಾಪಟುಗಳು, ಚಿಂತಕರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ
ನಾನು ಯುಎಸ್‌ಎಸ್‌ಆರ್‌ನವನು. ನಾನು ಹುಟ್ಟಿದ್ದೇ ಇಲ್ಲಿ. ಬಾಲ್ಯದಿಂದಲೂ ಈ ನೆಲದಲ್ಲಿ ಆಡಿ ಬೆಳೆದಿದ್ದೇನೆ. ಶಾಂತಿಗಾಗಿ ಬೀದಿಗಿಳಿದು ಹೋರಾಡಲು ಕರೆ ನೀಡುತ್ತೇನೆ. ಆದರೆ ಪುಟಿನ್ ರಷ್ಯಾದವನಲ್ಲ ಎಂದು ನಾವೆಲ್ನಿ ತಿಳಿಸಿದ್ದಾರೆ.
ನವದೆಹಲಿ: ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 2ನೇ ಬಾರಿ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.
ಉಭಯ ದೇಶಗಳ ನಾಯಕರು ಉಕ್ರೇನ್‌ನಲ್ಲಿನ ಸಧ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ರಷ್ಯಾ ಭೀಕರ ದಾಳಿಗೆ ತುತ್ತಾಗಿರುವ ಉಕ್ರೇನ್‌ನ ಪ್ರಮುಖ ನಗರವೂ ಆದ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಪುಟಿನ್ ತಪ್ಪು ಹೆಜ್ಜೆಗಳು – ರಷ್ಯಾ ಹಿನ್ನಡೆಗೆ ಕಾರಣ ಏನು?
ಉಕ್ರೇನ್‌ನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರಿಗೆ ಮೋದಿ ಮನವರಿಕೆ ಮಾಡಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ವಿಚಾರವಾಗಿ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯದಿಂದ ಭಾರತ ತಟಸ್ಥವಾಗಿ ಉಳಿದಿದೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
ಭಾರತದ ನಿಲುವಿನಿಂದಾಗಿ ಉಕ್ರೇನ್ ಮತ್ತು ರಷ್ಯಾದ ಸೈನಿಕರು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಉಕ್ರೇನ್‌ನಲ್ಲಿ ಸಿಲುಕಿದ್ದವರಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಸುರಕ್ಷಿತ ಸ್ಥಳಾಂತರ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ.
ವಾಷಿಂಗ್ಟನ್: ರಷ್ಯಾಕ್ಕೆ ವಾಯುಮಾರ್ಗವನ್ನು ಮುಚ್ಚಿದ ಅಮೆರಿಕ, ಪುಟಿನ್ ಅವರ ಕ್ರಮಗಳು ಪೂರ್ವಯೋಜಿತವಾಗಿದ್ದು, ಅಪ್ರಚೋದಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದರು.
ಮಾಧ್ಯಮಗಳ ಜೊತೆ ಮಾತನಾಡುತ್ತಾ ಉಕ್ರೇನ್‍ನ ಮೇಲೆ ಕೈಗೊಂಡ ಪುಟಿನ್‍ನ ಕ್ರಮಗಳನ್ನು ಖಂಡಿಸಿದರು. ಪುಟಿನ್ ಪಶ್ಚಿಮ ಹಾಗೂ ನ್ಯಾಟೋ ಒಕ್ಕೂಟಗಳು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿರುವುದು ತಪ್ಪು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.
ತಮ್ಮ ದೇಶವು ಯುಎಸ್ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸುತ್ತದೆ. ಅಮೆರಿಕ ಹಾಗೂ ನಮ್ಮ ಮಿತ್ರ ರಾಷ್ಟ್ರಗಳು ಒಗ್ಗಟ್ಟಿನ ಬಲದಿಂದ ನ್ಯಾಟೋ ಪ್ರದೇಶದ ಪ್ರತೀ ಇಂಚನ್ನು ರಕ್ಷಿಸುತ್ತಿದೆ. ಉಕ್ರೇನ್‍ನವರು ಧೈರ್ಯದಿಂದ ಹೋರಾಡುತ್ತಿದ್ದಾರೆ ಎಂದರು.
ಉಕ್ರೇನ್ ನೆಲದಲ್ಲಿ ಅಮೆರಿಕದ ಪಡೆಗಳು ರಷ್ಯಾದೊಂದಿಗೆ ತೊಡಗಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಪಡೆಗಳು ಉಕ್ರೇನ್‍ಗಾಗಿ ಹೋರಾಡುತ್ತಿಲ್ಲ. ಆದರೆ ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಮತ್ತು ಪುಟಿನ್ ಪಶ್ಚಿಮಕ್ಕೆ ಚಲಿಸುವುದನ್ನು ತಡೆಯಲು ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ರಕ್ಷಿಸಲು ಸಿದ್ಧಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಕ್ರೇನ್‍ಗೆ ಮುಂದಿನ ಕೆಲವು ದಿನಗಳು, ವಾರಗಳು ಮತ್ತು ತಿಂಗಳುಗಳು ಕಠಿಣವಾಗಿರುತ್ತವೆ. ಪುಟಿನ್ ಕೈವ್ ಅನ್ನು ಟ್ಯಾಂಕ್‍ಗಳೊಂದಿಗೆ ಸುತ್ತಬಹುದು. ಆದರೆ ಅವರು ಎಂದಿಗೂ ಉಕ್ರೇನಿನ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ:ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ
ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಈ ಯುದ್ಧದ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Vladimir Putin) ಅವರು ಪಡೆದುಕೊಂಡಿದ್ದ ಟೇಕ್ವಾಂಡೋ ಬ್ಲ್ಯಾಕ್ (black belt) ಬೆಲ್ಟ್‌ನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.
ಟ್ವೀಟ್‍ನಲ್ಲಿ ಏನಿದೆ?: ಉಕ್ರೇನ್‍ನಲ್ಲಿ ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿಯನ್ನು ವಿಶ್ವ ಟೇಕ್ವಾಂಡೋ ಬಲವಾಗಿ ಖಂಡಿಸುತ್ತದೆ. ವಿಶ್ವ ಟೇಕ್ವಾಂಡೋ ದೃಷ್ಟಿಕೋನದಲ್ಲಿ ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾಗಿದೆ. ಗೌರವ ಮತ್ತು ಸಹಿಷ್ಣುತೆ ಹೊಂದಿರುವ ವಿಶ್ವ ಟೇಕ್ವಾಂಡೋ ಮೌಲ್ಯಗಳಿಗೆ ಇದು ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಮೂಲಕವಾಗಿ ನವೆಂಬರ್ 2013ರಲ್ಲಿ ವಾಡ್ಲಿಮಿರ್ ಪುಟಿನ್ ಅವರಿಗೆ ನೀಡಲಾಗಿದ್ದ 9ನೇ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಮೂಲಕವಾಗಿ ತಿಳಿಸಿದೆ.
World Taekwondo strongly condemns the brutal attacks on innocent lives in Ukraine, which go against the World Taekwondo vision of “Peace is More Precious than Triumph” and the World Taekwondo values of respect and tolerance.#PeaceIsMorePreciousThanTriumphhttps://t.co/nVTdxDdl2I
ಪುಟಿನ್ ಕ್ರೀಡಾ ಆಸಕ್ತಿ: ಪುಟಿನ್ 11ನೇ ವಯಸ್ಸಿನಲ್ಲಿ ಸ್ಯಾಂಬೊದಲ್ಲಿ ತೊಡಗಿಕೊಂಡರು. ನಂತರ 13ನೇ ವಯಸ್ಸಿನಲ್ಲಿ ಜೂಡೋದಲ್ಲಿ ಆಸಕ್ತಿ ಹೊಂದಿದ್ದರು. ನಂತರ ಸದಾ ಒಂದಲ್ಲ ಒಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಕರಾಟೆ ಬ್ಲ್ಯಾಕ್ ಬೆಲ್ಟ್ ಆಗಿರುವ ಪುಟಿನ್ ಅಂತರಾಷ್ಟ್ರೀಯ ಜುಡೋ ಫೆಡರೇಶನ್ ಗೌರವಾಧ್ಯಕ್ಷ ಸ್ಥಾನದಲ್ಲಿದ್ದರು. ಇದು ವಿಶ್ವದ ಕರಾಟೆ ಪಟುಗಳು ಅತ್ಯಂತ ಗೌರವದಿಂದ ಕಾಣುವ ಹುದ್ದೆಯಾಗಿತ್ತು. ಆದರೆ ಇದೀಗ ರಷ್ಯಾ ಉಕ್ರೇನ್ ಮೇಲೆ ಮಾಡಿರುವ ದಾಳಿಯಿಂದಾಗಿ ಉಕ್ರೇನ್ ಅಧ್ಯಕ್ಷರು ಈ ಪದವಿಯನ್ನು ಕಳೆದುಕೊಂಡಿದ್ದಾರೆ.
ರಷ್ಯಾಗೆ ಕ್ರೀಡಾ ಜಗತ್ತಿನಿಂದ ಬಹಿಷ್ಕಾರ: ಇದಿಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ ಒಗ್ಗಟ್ಟಿನಿಂದ, ಯಾವುದೇ ರಷ್ಯನ್ ಅಥವಾ ಬೆಲರೂಸಿಯನ್ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಈವೆಂಟ್‍ಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ ಅಥವಾ ನುಡಿಸಲಾಗುವುದಿಲ್ಲ. ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಯೂನಿಯನ್ ರಷ್ಯಾ ಮತ್ತು ಬೆಲಾರಸ್‍ನಲ್ಲಿ ಟೇಕ್ವಾಂಡೋ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.
ವಾಷಿಂಗ್ಟನ್: ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಿನ್ನೆಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಪುಟಿನ್‍ನ ಬುದ್ಧಿವಂತಿಕೆಯಿಂದ ಸಮಸ್ಯೆಯಾಗುತ್ತಿಲ್ಲ. ಆದರೆ ಅಮೆರಿಕ ಅಧ್ಯಕ್ಷ ದೌರ್ಬಲ್ಯವೇ ಈ ಅನಾಹುತಕ್ಕೆ ಕಾರಣವಾಗಿದೆ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ತಿಳಿದಿರುವಂತೆ ನಮ್ಮ ಚುನಾವಣೆಯನ್ನು ಸರಿಯಾಗಿ ನಡೆಸಿದ್ದರೆ ಮತ್ತು ನಾನು ಅಧ್ಯಕ್ಷನಾಗಿದ್ದರೆ ಈ ದುರಂತ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದರು.
ಅಮೆರಿಕವು ಪ್ರಬಲ ಅಧ್ಯಕ್ಷರನ್ನು ಹೊಂದಿದ್ದರೆ ಜಗತ್ತು ಯಾವಾಗಲೂ ಸುರಕ್ಷಿತವಾಗಿರುತ್ತದೆ. ದುರ್ಬಲ ಅಮೆರಿಕದ ಅಧ್ಯಕ್ಷರಿಂದ ಜಗತ್ತು ಯಾವಾಗಲೂ ಅಪಾಯದಲ್ಲಿದೆ. ಉಕ್ರೇನ್ ರಾಜಧಾನಿ ಕೀವ್‍ನ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಬಿಡೆನ್‍ನ ದೌರ್ಬಲ್ಯ ತೋರುತ್ತಿದೆ ಎಂದು ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ರಷ್ಯಾದ ದಾಳಿಯನ್ನು ಖಂಡಿಸಿದ ಅವರು, ಉಕ್ರೇನ್ ಮೇಲೆ ರಷ್ಯಾದ ದಾಳಿ ಭಯಾನಕವಾಗಿದೆ. ಇದು ಎಂದಿಗೂ ಸಂಭವಿಸದ ದೌರ್ಜನ್ಯವಾಗಿದೆ. ಉಕ್ರೇನ್‍ನ ಜನರ ಸುರಕ್ಷತೆಗಾಗಿ ನಾವು ಪ್ರಾರ್ಥಿಸುತ್ತೇವೆ ಎಂದ ಅವರು, ಉಕ್ರೇನಿಯನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ ಹೋರಾಟವನ್ನು ಶ್ಲಾಘಿಸಿದರು. ಇದನ್ನೂ ಓದಿ:ಮುದ್ದಿನ ನಾಯಿ ಇಲ್ಲದೆ ಬರುವುದಿಲ್ಲ- ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿ
ಮಾಸ್ಕೋ: ರಷ್ಯಾ ಒಕ್ಕೂಟದ ವಿಶೇಷ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಮತ್ತು ಅವರ ನಿಷ್ಕಲ್ಮಶ ಸೇವೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.
ಮಾಸ್ಕೋ ಕ್ರೆಮ್ಲಿನ್‍ನಲ್ಲಿ ಮಾತನಾಡಿದ ಅವರು, ನಾನು ವಿಶೇಷ ಕಾರ್ಯಾಚರಣೆ ಪಡೆಗಳ ಕಮಾಂಡ್, ಸಿಬ್ಬಂದಿಗೆ, ರಷ್ಯಾದ ಜನತೆ ಮತ್ತು ನಮ್ಮ ಮಹಾನ್ ಮಾತೃಭೂಮಿಗೆ ಅವರು ಮಾಡಿದ ನಿಷ್ಕಲ್ಮಶ ಸೇವೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಅಂದಿನಿಂದ ರಷ್ಯಾದ ಪಡೆಗಳು ಉಕ್ರೇನ್‍ನಾದ್ಯಂತ ಮಿಲಿಟರಿ ನೆಲೆಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ. ಇದೀಗ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಒಳ ನುಗ್ಗಲು ದಾರಿ ಹುಡುಕುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು
ಇದೀಗ ರಷ್ಯಾದ ಪಡೆ ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಗೊಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ಕೈವ್‍ನ ನೈಋತ್ಯದ ಉಕ್ರೇನಿಯನ್ ಪಟ್ಟಣವಾದ ವಾಸಿಲ್ಕಿವ್‍ಗೆ ಅಪ್ಪಳಿಸಿ ತೈಲ ಟರ್ಮಿನಲ್ ಸುಟ್ಟು ಹಾಕಲಾಗಿದೆ.
ಭಾನುವಾರ ರಷ್ಯಾ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಕ್ಸ್‍ವನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಹೆನಿಚೆಸ್ಕ್ ಪಟ್ಟಣ ಮತ್ತು ಖೆರ್ಸನ್ ಬಳಿಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ನವದೆಹಲಿ: ರಷ್ಯಾ-ಉಕ್ರೇನ್ ಮೇಲೆ ಯುದ್ಧ ಆರಂಭಿಸುತ್ತಿದ್ದಂತೆ ಭಾರತ ಮಧ್ಯಪ್ರವೇಶಿಸಬೇಕೆಂಬ ಮಾತು ಕೇಳಿಬರುತ್ತಿತ್ತು. ಇದೀಗ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಇಂದು ರಾತ್ರಿ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಅರಂಭಿಸುತ್ತಿದ್ದಂತೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಿ ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
ಇದಲ್ಲದೇ ವಿಶ್ವದ ಹಲವು ದೇಶಗಳೂ ಕೂಡ ಭಾರತ ಮಧ್ಯಪ್ರವೇಶಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಭಾರತದ ಪ್ರಧಾನಿ ಮೋದಿ ಮಾತುಕತೆ ನಡೆಸಿದರೆ ಯುದ್ಧ ನಿಲ್ಲಿಸಬಹುದೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
Our plans (of special military operation) in Ukraine do not include occupying Ukrainian territory. We will aim at demilitarization and denazification of Ukraine : Russian President Vladimir Putin in his address pic.twitter.com/YZLh3PWQw3
ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ ಎಂದು ಹೇಳಿರುವ ಅವರು, ಈ ವಿಚಾರವಾಗಿ ಯಾರಾದರೂ ಮಧ್ಯಪ್ರವೇಶಿಸಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ್ದಾರೆ.
Anyone who tries to interfere with us, or even more so, to create threats for our country & our people, must know that Russia’s response will be immediate and will lead you to such consequences as you have never before experienced in your history: Russian President Vladimir Putin pic.twitter.com/xSCWPTByWv
ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪುಟಿನ್ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ ʻಯಾವುದೇ ಉತ್ತರವಿಲ್ಲ, ಕೇವಲ ಮೌನʼ ಎಂದು ತಿಳಿಸಿದ್ದಾರೆ. ಮಾಸ್ಕೋ ಈಗ ಉಕ್ರೇನ್‌ನ ಗಡಿಯ ಬಳಿ ಸುಮಾರು 2,00,000 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 200 ಶಾಸಕರಿಗೆ iPhone ಗಿಫ್ಟ್ ಕೊಟ್ಟ ರಾಜಸ್ಥಾನ ಸರ್ಕಾರ – ವಾಪಸ್ ಕೊಟ್ಟ ಬಿಜೆಪಿ
ರಷ್ಯಾ ಬಂಡುಕೋರರ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ರಷ್ಯಾ ಮುಂದಾಗಿದೆ. ಆದರೆ ಇದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಮಾತುಕತೆಯೂ ವಿಫಲವಾಯಿತು. ಇದಾದ ಬಳಿಕ ಈಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ.
ಮಾಸ್ಕೋ: ಕಾಲುಕೆರೆದು ಕದನಕ್ಕೆ ಸಜ್ಜಾಗಿರುವ ರಷ್ಯಾ, ಇದೀಗ ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿ ಘೋಷಣೆ ಹೊರಡಿಸಿದೆ.
ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ದೋನೆಟ್ಸ್‍ಕೋ, ಲುಹಾನ್ಸ್‍ಕೋ ಪ್ರಾಂತ್ಯಗಳನ್ನು ಎರಡು ಪ್ರತ್ಯೇಕ ದೇಶಗಳೆಂದು ಗುರುತಿಸಿ ಪುಟಿನ್ ಆದೇಶ ಹೊರಡಿಸಿದ್ದಾರೆ. ಹೊಸ ದೇಶಗಳಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ರಷ್ಯಾದ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಉಕ್ರೇನ್ ಅಸ್ತಿತ್ವವನ್ನೇ ಪ್ರಶ್ನಿಸಿ ಯುರೋಪ್ ದೇಶಗಳಿಗೆ ಪುಟಿನ್ ಭಯ ಹುಟ್ಟಿಸಿದ್ದಾರೆ.
ನಾವು ಶಾಂತಿಯನ್ನು ಬಯಸುತ್ತೇವೆ. ಒಂದಿಂಚೂ ಭಾಗವನ್ನು ಇತರರು ಆಕ್ರಮಿಸಲು ಬಿಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ರಷ್ಯಾ ನೋಡುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಜೆಲೆನ್ ಸ್ಕೀ ಗುಡುಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ
ರಷ್ಯಾದ ನಡೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ರಷ್ಯಾ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ, ಆಸ್ಟ್ರೇಲಿಯಾ ತೀವ್ರವಾಗಿ ಖಂಡಿಸಿವೆ. ಉಕ್ರೇನ್‍ನಿಂದ ಬೇರ್ಪಟ್ಟ 2 ಪ್ರಾಂತ್ಯಗಳಿಗೆ ಆರ್ಥಿಕ ನಿರ್ಬಂಧ ಹೇರಿ ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟದ ಹಲವು ದೇಶಗಳು ಶಾಕ್ ನೀಡಿವೆ.
ಸರಕು, ಸೇವೆ, ತಂತ್ರಜ್ಞಾನಗಳನ್ನು ಯಾವುದೇ ರೂಪದಲ್ಲಿಯೂ ಸರಬರಾಜು ಮಾಡಬಾರದೆಂದು ನಿರ್ಧರಿಸಿದೆ. ರಷ್ಯಾ ಮೇಲೆಯೂ ಕಠಿಣ ನಿರ್ಬಂಧಕ್ಕೆ ಅಮೆರಿಕಾ ಚಿಂತನೆ ನಡೆಸಿದೆ. ಈ ಮಧ್ಯೆ ಉಕ್ರೇನ್ ವಿಚಾರದಲ್ಲಿ ಎಲ್ಲಾ ದೇಶಗಳು ಸಂಯಮ ಪಾಲಿಸಬೇಕೆಂದು ಭಾರತ ಕರೆ ನೀಡಿದೆ. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ
ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ, ಈ ಕೂಡಲೇ ಉಕ್ರೇನ್ ತೊರೆಯುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಉಕ್ರೇನ್‍ನಲ್ಲಿರುವ ಭಾರತೀಯರನ್ನು ಕರೆತರಲು ಇಂದು ಬೆಳಗ್ಗೆ ಏರ್ ಇಂಡಿಯಾ ವಿಮಾನವೊಂದು ದೆಹಲಿಯಲ್ಲಿ ಟೇಕ್ ಆಫ್ ಆಗಿದೆ. ಇನ್ನಷ್ಟು ವಿಮಾನಗಳನ್ನು ಕಳಿಸುವುದಾಗಿ ತಿಳಿಸಿದೆ.
ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ. ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚೆ ನಡೆಸಿದ್ದಾರೆ.
ಶೃಂಗಸಭೆ ಬಳಿಕ ಶಸ್ತ್ರಾಸ್ತ್ರ, ವಾಣಿಜ್ಯ, ವಿದೇಶಾಂಗ ವ್ಯವಹಾರ ಸೇರಿದಂತೆ 10ಕ್ಕೂ ಹೆಚ್ಚು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ತಿಂಗಳಿನಿಂದಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಸರಬರಾಜು ಪೂರೈಕೆ ಪ್ರಾರಂಭವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಉ.ಪ್ರ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮತಾಂತರ
ಈ ನಡುವೆ ಕೋವಿಡ್-19 ಸವಾಲುಗಳ ನಡುವೆ ಭಾರತ ಹಾಗೂ ರಷ್ಯಾ ದೇಶಗಳ ಸಂಬಂಧ ಮುಂದುವರಿಕೆ ಬಗ್ಗೆ ಚರ್ಚೆ ನಡೆಸಿದ್ದು, ಎರಡು ದೇಶಗಳು ಕೂಡ ಭಯೋತ್ಪಾದನೆಯ ವಿರುದ್ಧ ಪ್ರಬಲವಾಗಿ ಹೋರಾಡುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಈಗಿರುವ ಹೂಡಿಕೆಯೊಂದಿಗೆ ಭಾರತದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ರಷ್ಯಾ ಮುಂದಾಗಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಉಭಯ ರಾಷ್ಟ್ರಗಳು ಒಂದಾಗಿ ಉನ್ನತ ತಂತ್ರಜ್ಞಾನಗಳ ಅಭಿವೃದ್ದಿಗೆ ಶ್ರಮಿಸೋಣ ಎಂದು ಪುಟಿನ್ ತಿಳಿಸಿದ್ದು, ಈ ಬಾಂಧವ್ಯ ಮುಂದೆಯು ಇದೇ ರೀತಿ ಮುಂದುವರಿಯಲಿ ಎಂದು ಮೋದಿ ಜೊತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಇನ್ನು ಮುಂದೆ ಕಣ್ಣೀರು ಹಾಕಲ್ಲ: ಎಚ್‍ಡಿಕೆ
#WATCH | New Delhi: PM Narendra Modi sees off Russian President Vladimir Putin after holding talks with him
ಏನಿದು ಎಸ್-400 ಏರ್ ಟ್ರಯಂಫ್?
ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮಥ್ರ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮಥ್ರ್ಯ ಈ ಎಸ್-400 ಟ್ರಯಂಫ್‍ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.
ಹೇಗೆ ಕೆಲಸ ಮಾಡುತ್ತೆ?
ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದ್ದು, ಇದೀಗ ಸುಸಜ್ಜಿತವಾಗಿ ರೂಪುಗೊಂಡಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತಕ್ಕೆ ಅಗತ್ಯ ಏಕೆ?
ಪಾಕ್ ಬಳಿ ಇರುವ ಫೈಟರ್ ಜೆಟ್, ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.
ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. 2017ರಲ್ಲಿ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿತ್ತು.
ಒಪ್ಪಂದದ ಉದ್ದೇಶ ಏನು?
ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ 2018ರಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ ಅಥವಾ ಜನವರಿಯಲ್ಲಿ ಭಾರತಕ್ಕೆ ಎಸ್-400 ಕ್ಷಿಪಣಿ ತಲುಪುವ ನಿರೀಕ್ಷೆ ಇದೆ. ಈ ಮೂಲಕ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ. ಇದನ್ನೂ ಓದಿ: ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ
ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಚೀನಾ ಮತ್ತು ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಭಾರತಕ್ಕೆ ಸಿಗಲಿದೆ.