ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ನ ಪ್ರಮುಖ ಸಲಹೆಗಾರ ರಾಜೀನಾಮೆ ನೀಡಿ, ರಷ್ಯಾವನ್ನು ತೊರೆದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ದಿನೇ ದಿನೇ ಹೆಚ್ಚುತ್ತಿದ್ದು, ವಿಶ್ವದಾದ್ಯಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ವಿರುದ್ಧ ಆಕ್ರೋಶವನ್ನು ಪಡೆಸುತ್ತಿದ್ದಾರೆ. ಇದೀಗ ಈ ವಿರೋಧದ ಕಾವು ರಷ್ಯಾ ಸರ್ಕಾರದಲ್ಲೇ ಹಬ್ಬಿದ್ದು ಪುಟಿನ್‍ನ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆಯನ್ನು ನೀಡಿದ್ದಾರೆ.
ಅನಾಟೊಲಿ ಚುಬೈಸ್ ಸುಸ್ಥಿರ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಬಂಧಕ್ಕಾಗಿ ಕ್ರೆಮ್ಲಿನ್‍ನ ವಿಶೇಷ ಪ್ರತಿನಿಧಿಯಾಗಿದ್ದರು. ಆದರೆ ರಷ್ಯಾ, ಉಕ್ರೇನ್‍ನ ಮೇಲೆ ದಾಳಿ ನಡೆಸುತ್ತಿರುವುದರಿಂದ ಪುಟಿನ್ ಮೇಲೆ ಚುಬೈಸ್ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಯನ್ನು ನೀಡಿದ್ದಾರೆ. ಇದನ್ನೂ ಓದಿ: ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್
ಚುಬೈಸ್ ರಾಜೀನಾಮೆಯನ್ನು ನೀಡುವುದರ ಜೊತೆಗೆ ರಷ್ಯಾವನ್ನು ತೊರೆದಿದ್ದಾರೆ. ಸದ್ಯ ಟರ್ಕಿಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ಚುಬೈಸ್ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ಸರ್ಕಾರ ದೃಢಪಡಿಸಿದರು. ಆದರೆ ಚುಬೈಸ್ ರಷ್ಯಾವನ್ನು ತೊರೆದಿರುವ ಬಗ್ಗೆ ಇನ್ನೂ ದೃಢಿಕರಿಸಿಲ್ಲ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ
ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದಲ್ಲ ಒಂದು ವಿಷಯದಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಆಡಳಿತ ಹಾಗೂ ಯುದ್ಧ ತಂತ್ರಗಾರಿಕೆ ಅಷ್ಟೇ ಅಲ್ಲ, ಪುಟಿನ್ ತಮ್ಮ ಜೀವನ ಶೈಲಿಯಲ್ಲೂ ಕುತೂಹಲಕಾರಿ ವ್ಯಕ್ತಿತ್ವದವರು.
ಯುದ್ಧದ ಕಾರಣದಿಂದಾಗಿ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಪುಟಿನ್ ಗುರುತಿಸಿಕೊಂಡಿದ್ದಾರೆ. ಅವರು ದಶಕಗಳಿಂದ ರಷ್ಯಾದಲ್ಲಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಮಾತ್ರ ಪುಟಿನ್ ಮೇಲೆ ಎಚ್ಚರಿಕೆ ಕಣ್ಣಿಟ್ಟಿದ್ದಾರೆ. 21 ನೇ ಶತಮಾನದಲ್ಲಿ ಉಕ್ರೇನ್ ಮೇಲೆ ಯುದ್ಧವನ್ನು ಪ್ರಾರಂಭಿಸುವ ಪುಟಿನ್ ನಿರ್ಧಾರವು ಕೆಲವು ಅನುಭವಿ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರನ್ನು ಸಹ ಚಕಿತರನ್ನಾಗಿಸಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್ ಗರ್ಲ್‌ಫ್ರೆಂಡ್- ಯಾರೀಕೆ?
ತಮ್ಮ ವ್ಯಕ್ತಿತ್ವ ಹಾಗೂ ನಿರ್ಧಾರಗಳ ಮೂಲಕವೇ ಜಗತ್ತನ್ನು ಚಕಿತಗೊಳಿಸುವ ಪುಟಿನ್ ಎಷ್ಟು ಶ್ರೀಮಂತರು ಗೊತ್ತೆ? ಅವರ ಜೀವನಶೈಲಿ ಹೇಗಿದೆ ಎಂದು ತಿಳಿದಿದೆಯೇ?
ಫಾರ್ಚೂನ್ ಪ್ರಕಾರ ಪುಟಿನ್ ವಾರ್ಷಿಕ 1.06 ಕೋಟಿ ರೂ. (1,40,000 ಯುಎಸ್ ಡಾಲರ್) ವೇತನವನ್ನು ಗಳಿಸುತ್ತಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿದೆ. ಅವರು ಸಾರ್ವಜನಿಕವಾಗಿ ಘೋಷಿಸಿದ ಆಸ್ತಿಗಳಲ್ಲಿ 800 ಚದರಡಿ ಅಪಾರ್ಟ್‌ಮೆಂಟ್, ಟ್ರೇಲರ್ ಮತ್ತು ಮೂರು ಕಾರುಗಳು ಸೇರಿವೆ ಎಂದು ವರದಿ ತಿಳಿಸಿದೆ.
ಆದರೆ ಪುಟಿನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಹೂಡಿಕೆ ಮತ್ತು ಆಸ್ತಿ ನಿರ್ವಹಣಾ ಕಂಪನಿ ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ 2017 ರಲ್ಲಿ ಪುಟಿನ್ ಅವರ ವೈಯಕ್ತಿಕ ಸಂಪತ್ತು 200 ಬಿಲಿಯನ್ ಡಾಲರ್ ಎಂದು ತಿಳಿಸಿದೆ.
ಐಷಾರಾಮಿ ವಾಚ್‌ಗಳು
ಪುಟಿನ್ ಐಷಾರಾಮಿ ಕೈಗಡಿಯಾರಗಳನ್ನು ಧರಿಸುತ್ತಾರೆ. 4.57 ಕೋಟಿ ರೂ. ಮೌಲ್ಯದ ಪಾಟೆಕ್ ಫಿಲಿಪ್ ಹಾಗೂ 3.81 ಕೋಟಿ ರೂ. ಮೌಲ್ಯದ ಲ್ಯಾಂಗ್ ಮತ್ತು ಸೊಹ್ನ್ ಟೂಬೊಗ್ರಾಫ್ ವಾಚ್‌ಗಳನ್ನು ಹಾಕುತ್ತಾರೆ.
ಹತ್ತು ವರ್ಷಗಳ ಹಿಂದೆ ಎಬಿಸಿ ನ್ಯೂಸ್, ರಷ್ಯಾದ ವಿರೋಧ ಗುಂಪು ಸಾಲಿಡಾರಿಟಿ ಬಿಡುಗಡೆ ಮಾಡಿದ ವೀಡಿಯೋವನ್ನು ಆಧರಿಸಿ ವರದಿಯೊಂದನ್ನು ಮಾಡಿತ್ತು. ಅದರಲ್ಲಿ ಪುಟಿನ್ 5.33 ಕೋಟಿ ರೂ. ಮೌಲ್ಯದ ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದಾರೆಂದು. ಅಂದರೆ ಅವರ ಅಧಿಕೃತ ಸಂಬಳದ ಆರು ಪಟ್ಟು ಬೆಲೆ ಆ ವಾಚ್‌ನದ್ದು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ
ಕಪ್ಪು ಸಮುದ್ರ ದಂಡೆಯಲ್ಲಿ ಮಹಲು
ಪುಟಿನ್, ಕಪ್ಪು ಸಮುದ್ರದ ದಂಡೆಯಲ್ಲಿರುವ 1,90,000 ಚದರಡಿ ಮಹಲಿನ ಮಾಲೀಕ. ಈ ಬಂಗಲೆಯಲ್ಲಿ ಅಮೃತಶಿಲೆಯ ಈಜುಕೊಳ, ಸ್ಪಾ, ಆಂಫಿಥಿಯೇಟರ್, ಅತ್ಯಾಧುನಿಕ ಐಸ್ ಹಾಕಿ ರಿಂಕ್, ವೇಗಾಸ್ ಶೈಲಿಯ ಕ್ಯಾಸಿನೊ ಮತ್ತು ರಾತ್ರಿ ಕ್ಲಬ್. ನೂರಾರು ಡಾಲರ್ ಮೌಲ್ಯದ ವೈನ್‌ಗಳಿರುವ ಬಾರ್ ಹೊಂದಿದೆ.
ಶ್ರೀಮಂತ ಪುಟಿನ್ ಅವರ ಮಹಲಿನ ಚಿತ್ರಗಳನ್ನು ಈ ಹಿಂದೆ ರಷ್ಯಾದ ವಿರೋಧ ಪಕ್ಷದ ನಾಯಕರು ಬಿಡುಗಡೆ ಮಾಡಿದ್ದರು. ಅದನ್ನು ʼಪುಟಿನ್ ಕಂಟ್ರಿ ಕಾಟೇಜ್ʼ ಎಂದು ಕರೆದಿದ್ದರು. 3.81 ಕೋಟಿ ಮೌಲ್ಯದ ಊಟದ ಕೋಣೆಯ ಪೀಠೋಪಕರಣಗಳು, 41.17 ಲಕ್ಷ ರೂ. ಮೌಲ್ಯದ ಬಾರ್ ಟೇಬಲ್, ಅಲಂಕಾರಿಕ 64,809 ರೂ. ಇಟಾಲಿಯನ್ ಟಾಯ್ಲೆಟ್ ಬ್ರಷ್‌ಗಳು ಮತ್ತು 95,308 ರೂ. ಮೌಲ್ಯದ ಟಾಯ್ಲೆಟ್ ಪೇಪರ್ ಹೋಲ್ಡರ್‌ಗಳೊಂದಿಗೆ ಅಲಂಕರಿಸಿದ ಸ್ನಾನಗೃಹ ಈ ಮಹಲಿನಲ್ಲಿದೆ. ಇದನ್ನೂ ಓದಿ:ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
ವಿಮಾನದಲ್ಲಿ ಚಿನ್ನದ ಶೌಚಾಲಯ
ಕಪ್ಪು ಸಮುದ್ರದ ಮಹಲು ಹೊರತುಪಡಿಸಿಯೂ, 69 ವರ್ಷ ವಯಸ್ಸಿನ ರಷ್ಯಾ ಅಧ್ಯಕ್ಷ ಪುಟಿನ್ ಅವರು 19 ಇತರೆ ಮನೆಗಳು, 700 ಕಾರುಗಳು, 58 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮಾಲೀಕರಾಗಿದ್ದಾರೆ. ಈ ವಿಮಾನಗಳಲ್ಲಿ ಒಂದು ʻದಿ ಫ್ಲೈಯಿಂಗ್ ಕ್ರೆಮ್ಲಿನ್ʼ ಅನ್ನು ಬಹುಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಚಿನ್ನದಿಂದ ಮಾಡಿದ ಶೌಚಾಲಯವನ್ನು ವಿಮಾನ ಹೊಂದಿದೆ.
ಮಾಸ್ಕೊ: ಉಕ್ರೇನ್ ಮೇಲಿನ ರಷ್ಯಾ ಯುದ್ಧದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರೇಯಸಿ ಹೆಸರು ಹೆಚ್ಚು ಸುದ್ದಿಯಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಪುಟಿನ್ ಅವರ ಗರ್ಲ್‌ಫ್ರೆಂಡ್ ತನ್ನ ಮೂವರು ಮಕ್ಕಳೊಂದಿಗೆ ಸ್ವಿಟ್ಜರ್‌ಲೆಂಡಿನ ಪ್ರಸಿದ್ಧ ವಿಲ್ಲಾವೊಂದರಲ್ಲಿ ಅಡಗಿಕೊಂಡಿದ್ದಾರೆ. ಅವರು ದೇಶದಿಂದ ಹೊರಹಾಕಬೇಕು ಎಂದು ಸ್ವಿಟ್ಜರ್‌ಲೆಂಡ್‌ಗೆ ಅನೇಕ ಮಂದಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ
ರಷ್ಯಾ, ಉಕ್ರೇನ್, ಬೆಲಾರಸ್‌ನ ಅನೇಕರು ಸ್ವಿಟ್ಜರ್‌ಲೆಂಡ್‌ಗೆ ಈ ಒತ್ತಾಯ ಮಾಡಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಸುಮಾರು 50,000ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.
ಜಿಮ್ನಾಸ್ಟಿಕ್ ಒಲಿಂಪಿಕ್ ಚಿನ್ನ ಪದಕ ವಿಜೇತೆ 38 ವರ್ಷದ ಅಲೀನಾ ಕಬೇವಾ ಅವರೇ ಪುಟಿನ್ ಅವರ ಪ್ರೇಯಸಿ ಎಂದು ಹೇಳಲಾಗಿದೆ. ಆದರೆ ರಷ್ಯಾ ಅಧ್ಯಕ್ಷ ಪುಟಿನ್, ಅಲೀನಾ ಅವರನ್ನು ತನ್ನ ಪ್ರೇಯಸಿ ಎಂದು ಎಲ್ಲಿಯೂ ಅಧಿಕೃತವಾಗಿ ಪರಿಚಯಿಸಿಕೊಂಡಿಲ್ಲ. ಇದನ್ನೂ ಓದಿ:ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
ಪ್ರಸ್ತುತ ಯುದ್ಧದ ಹೊರತಾಗಿಯೂ ಸ್ವಿಟ್ಜರ್‌ಲೆಂಡ್, ಪುಟಿನ್ ಆಡಳಿತದ ಸಹಚರರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ ಎಂದು ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ಅರ್ಜಿ ಬರೆದು ಪೋಸ್ಟ್ ಮಾಡಲಾಗಿದೆ.
ಉಕ್ರೇನ್ ಮೇಲಿನ ಯುದ್ಧದ ಸಂದರ್ಭದಲ್ಲೇ ಅಲೀನಾ ಅವರನ್ನು ಸ್ವಿಟ್ಜರ್‌ಲೆಂಡ್‌ಗೆ ಕಳುಹಿಸಲಾಗಿದೆ. ಈಕೆ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಏಳು ವರ್ಷಗಳಿಂದ ಪ್ರಮುಖ ಕ್ರೆಮ್ಲಿನ್ ಪರ ಮಾಧ್ಯಮ ಸಮೂಹದ ನ್ಯಾಷನಲ್ ಮೀಡಿಯಾ ಗ್ರೂಪ್ ನಿರ್ದೇಶಕರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಲೀನಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ ನಡೆದ ಡಿವೈನ್ ಗ್ರೇಸ್ ರಿದಮಿಕ್ ಜಿಮ್ನಾಸ್ಟಿಕ್ ಟೂರ್ನಮೆಂಟ್‌ನಲ್ಲಿ ಅವರು ಕೊನೆಯ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಇವರು 2004ರ ಒಲಿಂಪಿಕ್ಸ್‌ನಲ್ಲಿ ರಿದಮಿಕ್ ಜಿಮ್ನಾಸ್ಟಿಕ್‌ನಲ್ಲಿ ಚಿನ್ನ ಗೆದ್ದಿದ್ದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ
ರಷ್ಯಾದ ರಾಜಕೀಯ, ಮಾಧ್ಯಮ ಮತ್ತು ಮಾಜಿ ಅಥ್ಲೀಟ್ ಅಲೀನಾ ಕಬೇವಾ ನಿಮ್ಮ ದೇಶದಲ್ಲಿ ರಷ್ಯಾದ ಒಕ್ಕೂಟದ ಮೇಲೆ ವಿಧಿಸಲಾದ ನಿರ್ಬಂಧಗಳ ಪರಿಣಾಮಗಳನ್ನು ಮರೆಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಉಕ್ರೇನ್ ಮೇಲಿನ ಯುದ್ಧ ನಿರ್ಣಯದಲ್ಲಿ ತಟಸ್ಥ ಧೋರಣೆ ಹೊಂದಿರುವ ಸ್ವಿಟ್ಜರ್‌ಲೆಂಡ್ ತನ್ನ ನಿಯಮವನ್ನು ಉಲ್ಲಂಘಿಸಿದೆ. ಕೂಡಲೇ ಅವರನ್ನು ದೇಶದಿಂದ ಹೊರಹಾಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.
ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ನೀಡುವ ಸ್ಟೀರಾಯ್ಡ್ ಚಿಕಿತ್ಸೆಯಿಂದ ಉಂಟಾಗುವ `ರಾಯ್ಡ್ ರೇಜ್’ನಿಂದ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಯುಕೆ ಮತ್ತು ಯುಎಸ್ ಅನ್ನು ಒಳಗೊಂಡಿರುವ ಐದು ದೇಶಗಳ ಗುಪ್ತಚರ ಒಕ್ಕೂಟ ರಷ್ಯಾದ ಮೂಲಗಳನ್ನು ಆಧರಿಸಿ ಡೈಲಿ ಮೇಲ್ ವರದಿ ಪ್ರಕಟಿಸಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಕೀವ್: ಭೀಕರ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೆ ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರುವಂತೆ ಕರೆ ನೀಡಿದ್ದಾರೆ.
ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾತುಕತೆ ನಡೆಸಿ ಪರಿಹರಿಸಲು ಝೆಲೆನ್ಸ್ಕಿ, ಪುಟಿನ್‌ಗೆ ಆಫರ್ ನೀಡಿದ್ದು, ಇದರಲ್ಲಿ ಮಧ್ಯವರ್ತಿಯಾಗಿ ಮಾತುಕತೆ ಮುನ್ನಡೆಸಲು ಝೆಲೆನ್ಸ್ಕಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮನವಿಯಿಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ
ವರದಿಗಳ ಪ್ರಕಾರ ಝೆಲೆನ್ಸ್ಕಿ ಸಂಘರ್ಷವನ್ನು ಪರಿಹರಿಸಲು ರಷ್ಯಾ ಅಥವಾ ಉಕ್ರೇನ್‌ನಲ್ಲಿ ಮಾತುಕತೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ನಾನು ಇಸ್ರೇಲ್‌ನ ಜೆರುಸಲೇಮ್ ಅನ್ನು ಆಯ್ದುಕೊಂಡಿದ್ದೇನೆ. ಎರಡು ಶತ್ರು ರಾಷ್ಟ್ರಗಳ ಮಾತುಕತೆಗೆ ಮಧ್ಯವರ್ತಿಯಾಗಲು ಬೆನೆಟ್‌ಗೆ ತಿಳಿಸಿದ್ದೇನೆ ಎಂದಿದ್ದಾರೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಉಕ್ರೇನ್‌ನ ಅತೀ ಹೆಚ್ಚು ಜನಸಂಖ್ಯೆಯಿರುವ ನಗರ ಮೆಲಿಟೊಪೊಲ್ ಅನ್ನು ಶನಿವಾರ ವಶಪಡಿಸಿಕೊಂಡಿದೆ. ರಷ್ಯಾ ಉಕ್ರೇನ್‌ನ ನಾಗರಿಕರ ಮೇಲೂ ದಾಳಿ ನಡೆಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ದಾಳಿ 18ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‍ನ ಪ್ರಾರ್ಥನಾ ಮಂದಿರಗಳನ್ನು ಬಿಡದೆ ರಷ್ಯಾ ದಾಳಿ ಮುಂದುವರಿಸಿದೆ.
ರಷ್ಯಾ ಮಿಲಿಟರಿ ಪಡೆ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ 4 ಕಿ.ಮೀ ದೂರದಲ್ಲಿ ಇದ್ದು ಕೀವ್ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಉಕ್ರೇನ್‍ನ ಕೀವ್ ಮತ್ತು ಖಾರ್ಕಿವ್ ನಗರದಲ್ಲಿ ಘನಘೋರ ಯುದ್ಧ ಆಗುತ್ತಿದ್ದು, ರಷ್ಯಾದ ಕ್ಷಿಪಣಿ, ಬಾಂಬ್ ದಾಳಿಗೆ ನಗರಗಳು ಹೊತ್ತಿ ಉರಿಯುತ್ತಿದೆ. ಇನ್ನೊಂದೆಡೆ ಮರಿಯುಪೋಲ್‍ನಲ್ಲಿ ರಷ್ಯಾದ ದಾಳಿಗೆ ಸಿಕ್ಕ ಸಿಕ್ಕಲ್ಲಿ ರಕ್ತಪಾತವಾಗುತ್ತಿದೆ. ಕೀವ್ ನಗರಕ್ಕೆ ಮತ್ತಷ್ಟು ಹತ್ತಿರವಾದ ರಷ್ಯಾ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಲಗ್ಗೆ ಇಟ್ಟಿದೆ. ಈಗಾಗಲೇ ಎರಡು ಕಡೆಯ ನೂರಾರು ಯುದ್ಧ ಟ್ಯಾಂಕರ್‌ಗಳು ಉಡೀಸ್ ಆಗಿದೆ. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್
ಉಕ್ರೇನ್‍ನಲ್ಲಿರುವ ಪ್ರಾರ್ಥನಾ ಮಂದಿಗಳನ್ನು ಬಿಡದಂತೆ ರಷ್ಯಾ ದಾಳಿ ಮುಂದುವರಿಸಿದ್ದು, ಉಕ್ರೇನ್‍ನ ಜನರನ್ನು ಸ್ಥಳಾಂತರಿಸುವ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ರಷ್ಯಾ ಸೇನೆ ಗುಂಡಿನ ಮಳೆ ಸುರಿಸಿದೆ. ದಾಳಿಯಲ್ಲಿ 7 ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಉಕ್ರೇನ್‍ನ ಗುಪ್ತಚರ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇತ್ತ ಉಕ್ರೇನ್ ಪ್ರತಿರೋಧ ಮತ್ತಷ್ಟು ತೀವ್ರಗೊಳಿಸಿದ್ದು, ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಖೆರ್ಸನ್ ಬಳಿಯ ಒಬ್ಲಾಸ್ಟ್ ಸಮೀಪ ಹೆಲಿಕಾಫ್ಟರ್ ಧ್ವಂಸವಾಗಿದೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್
There are no reports of any casualties, including U.S. military personnel, from the Iranian attack on Erbil. Information Bureau, citing Kurdistan's health minister and U.S. officials. pic.twitter.com/GGB7yzKLr7
ರಷ್ಯಾ ದಾಳಿಗೆ ಉಕ್ರೇನ್ ಪ್ರತಿರೋಧ ಒಡ್ಡುತ್ತಿರುವ ನಡುವೆಯೂ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆಗೆ ಸಿದ್ಧ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಪುನರುಚ್ಚರಿಸಿದ್ದಾರೆ. ನಾವು ಮಾತುಕತೆಗೆ ಸಿದ್ಧ ಆದರೆ ನಾವು ತಿಳಿಸುವ ಸ್ಥಳಕ್ಕೆ ಪುಟಿನ್ ಬಂದರೆ ಮಾತ್ರ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?
ಈಗಾಗಲೇ ಯುದ್ಧ ಪ್ರಾರಂಭವಾದಗಿನಿಂದ ಉಕ್ರೇನ್‍ನ 1,300ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧ ನಿಲ್ಲಿಸಲು ನಾವು ಸಿದ್ಧರಿದ್ದೇವೆ ಪುಟಿನ್ ಜೊತೆ ಮಾತುಕತೆಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮಧ್ಯಸ್ಥಿಕೆ ವಹಿಸುವಂತೆ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.
ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ತಾವಿರುವ ಸ್ಥಳದ ವಿಳಾಸವನ್ನು ಹಂಚಿಕೊಂಡು ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ ಎಂದು ರಷ್ಯಾಗೆ ತಿರುಗೇಟು ನೀಡಿದ್ದಾರೆ.
ನಾನು ಬ್ಯಾಂಕೋವಾನಲ್ಲಿರುವ ಕೀವ್‍ನಲ್ಲಿದ್ದು, ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ. ಎನೇ ಆಗಲಿ ನಮ್ಮ ಈ ದೇಶಭಕ್ತಿಯ ಯುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಉಕ್ರೇನಿಯನ್ ಧ್ವಜದಿಂದ ಸುತ್ತುವರೆದಿರುವ ತಮ್ಮ ಮೇಜಿನ ಬಳಿ ಕುಳಿತುಕೊಂಡು ಮಾತನಾಡಿದ ಅವರು, ಇಂದು ರಷ್ಯಾದ ವಿರುದ್ಧದ ನಮ್ಮ ಹೋರಾಟ ನಡೆಯುತ್ತಿರುವುದು ಹನ್ನೆರಡನೇ ದಿನವಾಗಿದೆ. ನಾವೆಲ್ಲರೂ ಈಗ ಯುದ್ಧ ಭೂಮಿಯಲ್ಲಿ ಇದ್ದೇವೆ. ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾನು ರಾಜಧಾನಿ ಕೀವ್‍ನಲ್ಲಿದ್ದು, ನನ್ನ ತಂಡವು ನನ್ನೊಂದಿಗಿದೆ ಎಂದು ಹೇಳಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ.
ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.
ಮಾಸ್ಕೋ: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಟಾಪ್‍ಲೆಸ್ (Topless protest) ಆಗಿ ಪ್ರತಿಭಟನೆ ನಡೆಸುವ ಮೂಲಕವಾಗಿ ಗಮನ ಸೆಳೆದಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಪ್ಯಾರಿಸ್‍ನ (Paris) ಐಫೆಲ್ ಟವರ್‌ನ ಮುಂದೆ ಅನೇಕ ಮಹಿಳೆಯರು ಟಾಪ್‍ಲೆಸ್ ಆಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿದ್ದಾರೆ ಮತ್ತು ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದಾರೆ. ಸ್ಟಾಪ್ ವಾರ್ ಪುಟಿನ್ ಯುದ್ಧದ ವಿರುದ್ಧ ಸ್ತ್ರೀವಾದಿಗಳು, ಸ್ಲಾವಾ ಉಕ್ರೇನಿ ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ದೇಹದ ಮೇಲೆ ಬರೆದುಕೊಂಡಿದ್ದಾರೆ. ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್ ಸ್ವಾವಲಂಬನೆಯತ್ತ ಹೆಜ್ಜೆ
ಯುದ್ಧ ಆರಂಭವಾದಂದಿನಿಂದಲೂ ದಿನವೂ ಒಂದಲ್ಲ ಒಂದು ಪಶ್ಚಿಮದ ದೇಶಗಳು, ವಿವಿಧ ಸರ್ಕಾರಗಳು ಮತ್ತು ಸಂಸ್ಥೆಗಳು ಒಂದರ ನಂತರ ಒಂದರಂತೆ ರಷ್ಯಾಗೆ ವಿವಿಧ ರೀತಿಯಲ್ಲಿ ನಿರ್ಬಂಧ ಹೇರುವ ಮೂಲಕ ಬಹಿಷ್ಕರಿಸಲು ಆರಂಭಿಸಿವೆ. ಯಾವ ಬಹಿಷ್ಕಾರವೂ ರಷ್ಯಾವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ರಷ್ಯಾ ವಿರುದ್ಧ ಪ್ಯಾರಿಸ್‍ನಲ್ಲಿನ ಮಹಿಳೆಯರ ಈ ಟಾಪ್‍ಲೆಸ್ ಪ್ರತಿಭಟನೆಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಈ ಮಹಿಳೆಯರು ಯುದ್ಧಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಮಾಸ್ಕೋ: ಉಕ್ರೇನ್ ರಾಜ್ಯತ್ವ(ಸ್ಟೇಟ್‌ಹುಡ್) ಅಪಾಯದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರವಾದ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ದೇಶದವರು ಈಗ ಏನು ಮಾಡುತ್ತಿದ್ದಾರೋ ಅದನ್ನು ಮುಂದುವರಿಸಿದರೆ ದೇಶವಾಗಿ ಉಳಿಯವುದು ಅನುಮಾನ. ಹಾಗೆ ಏನಾದರೂ ಆದರೆ ಉಕ್ರೇನಿಗರೇ ಕಾರಣ ಎಂದು ಪುಟಿನ್ ಹೇಳಿಕೆ ನೀಡಿದ್ದಾರೆ.
ಈ ಮೊದಲು ಈಗಿರುವ ಉಕ್ರೇನ್ ಸರ್ಕಾರವನ್ನು ಪತನಗೊಳಿಸಿ ತನ್ನ ಕೈಗೊಂಬೆ ವ್ಯಕ್ತಿಯನ್ನು ನೇಮಿಸುವ ಮೂಲಕ ಹೊಸ ಸರ್ಕಾರ ಸ್ಥಾಪನೆಗೆ ಪುಟಿನ್ ಮುಂದಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಹೊಸ ಹೇಳಿಕೆಯಿಂದ ಉಕ್ರೇನ್ ದೇಶವನ್ನೇ ಪುಟಿನ್ ಸಂಪೂರ್ಣವಾಗಿ ಕೈವಶ ಮಾಡುವ ಭೀತಿ ಎದುರಾಗಿದೆ.
ಈಗಾಗಲೇ ಶಸ್ತ್ರಾಸ್ತ್ರ ಗೋದಾಮುಗಳು, ಯುದ್ಧಸಾಮಗ್ರಿ ಡಿಪೋಗಳು, ವಾಯುಯಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಉಕ್ರೇನ್‌ನ ಪ್ರಮುಖ ಮಿಲಿಟರಿ ಮೂಲಸೌಕರ್ಯವನ್ನು ನಾಶಪಡಿಸುವ ಕಾರ್ಯಾಚರಣೆಯನ್ನು ರಷ್ಯಾ ಪ್ರಾಯೋಗಿಕವಾಗಿ ಪೂರ್ಣಗೊಳಿಸಿದೆ ಎಂದು ಪುಟಿನ್ ಹೇಳಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ
ಉಕ್ರೇನ್ ದೇಶದ ಈ ಸ್ಥಿತಿಗೆ ಅಲ್ಲಿನ ನಾಯಕತ್ವವೇ ಕಾರಣ. ಪಾಶ್ಚಾತ್ಯ ದೇಶಗಳು ನಿರ್ಬಂಧ ನಮ್ಮ ಮೇಲೆ ಯುದ್ಧ ಸಾರಿದಂತೆ. ರಷ್ಯಾದ ಪಡೆಗಳು ತಮಗೆ ನಿಯೋಜಿಸಲಾದ ಕಾರ್ಯಗಳನ್ನು ಪೂರೈಸುತ್ತವೆ ಮತ್ತು ಉಕ್ರೇನ್‌ನಲ್ಲಿ ಕಾರ್ಯಾಚರಣೆಯು ಯೋಜನೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
ರಷ್ಯಾದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಅಗತ್ಯವಿಲ್ಲ. ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರ್ಧಾರ ಕಷ್ಟವಾಗಿತ್ತು ಎಂದರು.
ಲಂಡನ್: ಉಕ್ರೇನ್ ವಿರುದ್ಧದ ರಷ್ಯಾ ಅಜಾಗರೂಕ ಕಾರ್ಯಾಚರಣೆಯು ಇಡೀ ಯೂರೋಪ್ ಭದ್ರತೆಗೆ ಕೊಟ್ಟ ಹೊಡೆತವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರ ಅಜಾಗರೂಕ ಕ್ರಮಗಳು ಈಗ ನೇರವಾಗಿ ಯುರೋಪ್‌ನ ಸುರಕ್ಷತೆಗೆ ಬೆದರಿಕೆ ಹಾಕಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಅಗತ್ಯವಿದೆ ಎಂದು ಜಾನ್ಸನ್ ಆಶಯ ವ್ಯಕ್ತಪಡಿಸಿದ್ದಾರೆ.
ನ್ಯಾಟೋ ಒಕ್ಕೂಟಕ್ಕೆ ಸೇರುವ ಉಕ್ರೇನ್ ನಿರ್ಧಾರವನ್ನು ವಿರೋಧಿಸಿ ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ನಡೆಸುತ್ತಿದೆ. ಆದರೆ ಯೂರೋಪ್ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ, ಸಾಮಾನ್ಯ ಸಭೆಯಲ್ಲಿ ಬ್ರಿಟನ್ ಸೇರಿದಂತೆ 141 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು