Tag: Vladimir putin

  • ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    ಮಾಸ್ಕೋ: ಆಸ್ಪತ್ರೆಯ ಕಿಟಕಿಯಿಂದ ಬಿದ್ದು ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ರವಿಲ್‌ ಮಗನೋವ್‌ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಅಧ್ಯಕ್ಷ ರವಿಲ್ ಮಗನೋವ್ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಇಂಧನ ಸಂಸ್ಥೆ ಲುಕೋಯಿಲ್ ಗುರುವಾರ ತಿಳಿಸಿತ್ತು. ಇದನ್ನೂ ಓದಿ: ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರವಿಲ್ ಮಗನೋವ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ವಿಷಾದಿಸುತ್ತೇವೆ ಎಂದು ಲುಕೋಯಿಲ್ ಸಂಸ್ಥೆ ಸಂತಾಪ ಸೂಚಿಸಿದೆ.

    ಫೆಬ್ರವರಿಯಲ್ಲಿ ರಷ್ಯಾ ತನ್ನ ಸೈನ್ಯವನ್ನು ಉಕ್ರೇನ್‌ಗೆ ಕಳುಹಿಸಿ ದಾಳಿ ನಡೆಸಲಾರಂಭಿಸಿತು. ಈ ದಾಳಿಗೆ ಪಾಶ್ಚಿಮಾತ್ಯ ಅನೇಕ ರಾಷ್ಟ್ರಗಳು ಸೇರಿದಂತೆ ರಷ್ಯಾ ಶಾಂತಿಪ್ರಿಯರು ವಿರೋಧ ವ್ಯಕ್ತಪಡಿಸಿದರು. ದಾಳಿ ಕೊನೆಗೊಳಿಸಲು ಕರೆ ನೀಡಿದ ಕೆಲವು ಪ್ರಮುಖ ರಷ್ಯಾದ ಕಂಪನಿಗಳಲ್ಲಿ ಲುಕೋಯಿಲ್ ಕೂಡ ಒಂದಾಗಿದೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

    ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯ ಆರನೇ ಮಹಡಿಯ ಕಿಟಕಿಯಿಂದ ಹೊರಗೆ ಬಿದ್ದು ಮಗನೋವ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಮಗನೋವ್ 1954 ರಲ್ಲಿ ಜನಿಸಿದರು. ಅವರು 1993 ರಿಂದ ಲುಕೋಯಿಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2020ರಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

    ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ʼಪುಟಿನ್‌ ಬ್ರೈನ್‌ʼ ಎಂದೇ ಹೆಸರಾಗಿದ್ದ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ ಡುಗಿನ್‌ ಬೆಂಬಲಿಗರಾಗಿದ್ದರು. ಡುಗಿನ್‌ ಅವರನ್ನು ಹತ್ಯೆಗೆ ಟಾರ್ಗೆಟ್‌ ಮಾಡಲಾಗಿತ್ತು. ಆದರೆ ಸ್ಫೋಟಕ್ಕೆ ಕೆಲವು ಕ್ಷಣಗಳ ಮುಂಚೆ ಡುಗಿನ್‌ ಅವರ ಕಾರನ್ನು ಪುತ್ರಿ ಪಡೆದುಕೊಂಡಿದ್ದರು. ನಂತರ ಕಾರ್‌ ಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    1992 ರಲ್ಲಿ ಜನಿಸಿದ ಡೇರಿಯಾ ಡುಗಿನಾ, ಮಾಸ್ಕೋದ ಹೊರವಲಯದಲ್ಲಿ ಸುಮಾರು 40 ಕಿಲೋಮೀಟರ್ ದೂರದಲ್ಲಿದ್ದ ಬೊಲ್ಶಿ ವೈಝೋಮಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ತನ್ನ ಟೊಯೊಟಾ ಲ್ಯಾಂಡ್ ಕ್ರೂಸರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ್ದಾಳೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

    ಡುಗಿನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    ಡೇರಿಯಾ ಡುಗಿನಾ ತಂದೆ ಅಲೆಗ್ಸಾಂಡರ್‌ ಡುಗಿನ್‌ ಅವರು ‌ʻಪುಟಿನ್‌ ಬ್ರೈನ್ʼ (ಪುಟಿನ್‌ ಮಿದುಳು) ಎಂದೇ ಹೆಸರಾದವರು. ರಷ್ಯಾ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಡುಗಿನ್‌ ನಿರಂತರವಾಗಿ ಪ್ರತಿಪಾದಿಸುತ್ತಿದ್ದವರು. ಉಕ್ರೇನ್‌ನಲ್ಲಿ ಮಾಸ್ಕೋದ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.

    ಉಕ್ರೇನಿಯನ್ ಆಡಳಿತ ಭಯೋತ್ಪಾದಕರು ಅಲೆಕ್ಸಾಂಡರ್ ಡುಗಿನ್ ಅವರ ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅವರ ಮಗಳು ಬಲಿಯಾಗಿದ್ದಾಳೆ ಎಂದು ಡಿಎನ್‌ಆರ್‌ ಮುಖ್ಯಸ್ಥ ಡೆನಿಸ್ ಪುಶಿಲಿನ್ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ

    ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ

    ಮಾಸ್ಕೋ: ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.

    ಪುಟಿನ್ ಈ ಕುರಿತು ಟ್ವೀಟ್ ಮಾಡಿದ್ದು, ನಾವು ಭಾರತದೊಂದಿಗಿನ ವಿಶೇಷ ಸವಲತ್ತುಗಳ ಕಾರ್ಯತಂತ್ರದ ಪಾಲುದಾರಿಕೆಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ರಾಷ್ಟ್ರದ ಮುಖ್ಯಸ್ಥರಾಗಿ ನಿಮ್ಮ ಚಟುವಟಿಕೆಗಳು ನಮ್ಮ ಸ್ನೇಹಪರ ರಾಷ್ಟ್ರಗಳ ಪ್ರಯೋಜನಕ್ಕಾಗಿ ಮತ್ತು ಬಲವಾದ ಅಂತರರಾಷ್ಟ್ರೀಯ ಸ್ಥಿರತೆ, ಭದ್ರತೆಯ ಹಿತಾಸಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ರಷ್ಯಾ-ಭಾರತದ ರಾಜಕೀಯ ಮಾತುಕತೆ ಮತ್ತು ಉತ್ಪಾದಕ ಸಹಕಾರದ ಮತ್ತಷ್ಟು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲ 

    ಒಡಿಶಾದ ಮಯೂರ್‍ಭಂಜ್ ಜಿಲ್ಲೆಯವರಾದ ಮುರ್ಮು ಅವರು, ಸಂಸದರು ಮತ್ತು ಶಾಸಕರ ಮತಗಳ ಎಣಿಕೆಯಲ್ಲಿ 64 ಪ್ರತಿಶತಕ್ಕೂ ಹೆಚ್ಚು ಮಾನ್ಯ ಮತಗಳನ್ನು ಪಡೆದ ನಂತರ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ.

    ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾಗುವ ಮೂಲಕ ಇತಿಹಾಸವನ್ನು ಬರೆದರು. ಮುರ್ಮು ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಉನ್ನತ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

    ಮುರ್ಮು ಅವರು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್ 

    Live Tv
    [brid partner=56869869 player=32851 video=960834 autoplay=true]

  • ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಮಾಸ್ಕೋ: ರಷ್ಯಾದ ಸೇನೆ ಪ್ರಮುಖ ಉಕ್ರೇನಿಯನ್ ನಗರವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಎಲ್ಲ ಉಕ್ರೇನಿಯನ್ನರಿಗೆ ರಷ್ಯಾದ ಪೌರತ್ವವನ್ನು ಪಡೆಯುವ ವೇಗದ ವಿಧಾನವನ್ನು ವಿಸ್ತರಿಸಿದರು.

    ಈ ಯೋಜನೆಯೂ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ಮೇಲೆ ಮಾಸ್ಕೋದ ಪ್ರಭಾವವನ್ನು ಬಲಪಡಿಸುವ ಮತ್ತೊಂದು ಪ್ರಯತ್ನವಾಗಿದೆ. ಇಲ್ಲಿವರೆಗೂ ಉಕ್ರೇನ್‍ನ ಪ್ರತ್ಯೇಕತಾವಾದಿ ಪೂರ್ವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶದ ನಿವಾಸಿಗಳು, ಹಾಗೆಯೇ ದಕ್ಷಿಣದ ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶದ ನಿವಾಸಿಗಳು ಮತ್ತು ಈಗ ರಷ್ಯಾದ ನಿಯಂತ್ರಣದಲ್ಲಿರುವ ಹೆಚ್ಚಿನ ಭಾಗದ ಜನರು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಪುಟಿನ್ ಅವರು ಇದರ ವಿಧಾನವನ್ನು ವೇಗವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ 

    ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕ್ಲುಬಾ ಅವರು ಪಾಸ್‍ಪೋರ್ಟ್ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಉಕ್ರೇನ್‍ನಲ್ಲಿರುವ ನಿವಾಸಿಗಳಿಗೂ ಅನ್ವಯಿಸುತ್ತದೆ.

    ನಮ್ಮ ರಾಜ್ಯದ ಆಕ್ರಮಿತ ಪ್ರದೇಶಗಳ ನಿವಾಸಿಗಳ ಕುತ್ತಿಗೆಗೆ ಕುಣಿಕೆಯನ್ನು ಬಿಗಿಗೊಳಿಸಲು ಪಾಸ್‍ಪೋರ್ಟ್‍ಗಳನ್ನು ನೀಡಲು ರಷ್ಯಾ ಸರಳೀಕೃತ ವಿಧಾನವನ್ನು ಬಳಸುತ್ತಿದೆ. ಆಕ್ರಮಿತ ಆಡಳಿತಗಳು ಮತ್ತು ರಷ್ಯಾದ ಆಕ್ರಮಣಕಾರಿ ಸೈನ್ಯದ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು ಉಕ್ರೇನ್‍ನ ವಿದೇಶಿ ಸಚಿವಾಲಯ ಹೇಳಿಕೆಯಲ್ಲಿ ಸೇರಿಸಿದೆ.

    2019 ರ ನಡುವೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ದ 7,20,000 ಜನರಲ್ಲಿ ಸುಮಾರು 18% ಜನರು ರಷ್ಯಾದ ಪಾಸ್‍ಪೋರ್ಟ್‍ಗಳನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ:  ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ 

    Live Tv
    [brid partner=56869869 player=32851 video=960834 autoplay=true]

  • ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಿಳೆಯಾಗಿದ್ದರೆ, ಉಕ್ರೇನ್ ಮೇಲೆ ಯುದ್ಧವನ್ನು ಘೊಷಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.

    ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಾನ್ಸನ್, ಪುಟಿನ್‌ಗೆ ಒಬ್ಬ ಮಹಿಳೆಗೆ ಇರುವ ಮನಸ್ಥಿತಿ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಆತ ಮಹಿಳೆಯಾಗಿದ್ದರೆ, ಖಂಡಿತವಾಗಿಯೂ ಈ ರೀತಿ ಆಕ್ರಮಣ, ಹಿಂಸಾಚಾರದ ಹುಚ್ಚುತನವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆ – ಇಲ್ಲಿಯವರೆಗೆ 1.83 ಲಕ್ಷ ನೋಂದಣಿ

    ಉಕ್ರೇನ್ ಮೇಲೆ ಪುಟಿನ್ ಅವರ ಆಕ್ರಮಣ ವಿಷಕಾರಿ ಪುರುಷತ್ವದ ಪರಿಪೂರ್ಣ ಉದಾಹರಣೆಯಾಗಿದೆ. ಪ್ರಪಂಚದಾದ್ಯಂತ ಮಹಿಳೆಯರಿಗೆ ಅಧಿಕಾರಗಳಲ್ಲಿ ಉತ್ತಮ ಸ್ಥಾನಗಳನ್ನು ನೀಡುವಂತೆ ಬೋರಿಸ್ ಜಾನ್ಸನ್ ಕರೆ ನೀಡಿದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ

    ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಜನರು ಕೊನೆಗೊಳಿಸಬೇಕೆಂದು ಬಯಸುತ್ತಾರೆ. ಆದರೆ ಯಾವುದೇ ಒಪ್ಪಂದಗಳಿಲ್ಲದೇ ಪುಟಿನ್ ಶಾಂತಿಯುತ ಮಾತುಕತೆಗೆ ಮುಂದಾಗುತ್ತಿಲ್ಲ. ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು. ಮಾಸ್ಕೊದೊಂದಿಗೆ ಶಾಂತಿಯುತ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

    Live Tv

  • ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲವು ದಿನಗಳಿಂದ ಆರೋಗ್ಯದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸದೊಂದು ವೀಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ.

    ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಸ್ಥಿರವಾಗಿ ನಿಲ್ಲಲು ಹೆಣಗಾಡಿದ್ದಾರೆ. ತಮ್ಮ ಕಾಲುಗಳು ನಡುಗುತ್ತಿದ್ದಂತೆ ವೇದಿಕೆಯ ಡಯಾಸ್ ಅನ್ನು ಹಿಡಿದು, ಹಿಂದೆ-ಮುಂದೆ ತೂಗಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

    ಚಲನಚಿತ್ರ ನಿರ್ಮಾಪಕಿ ನಿಕಿತಾ ಮಿಖೈಲೋವ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಪುಟಿನ್ ಅಸಹಜವಾಗಿ ವರ್ತಿಸಿದ್ದಾರೆ. ಭಾಷಣ ಮಾಡುವ ಸಂದರ್ಭ ಅಸ್ಥಿರವಾಗಿ ನಿಂತಿರುವ ವೀಡಿಯೋ ವೈರಲ್ ಆಗುತ್ತಿದ್ದು, ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಜಿಜ್ಞಾಸೆ ಉಂಟುಮಾಡಿದೆ.

    ಕೆಲವು ದಿನಗಳ ಹಿಂದೆ ಪುಟಿನ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದು, ಅವರು ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿತ್ತು. ಪುಟಿನ್‌ಗೆ 69 ವರ್ಷ ಆಗಿದ್ದು, ಅವರ ಕಣ್ಣಿನ ದೃಷ್ಟಿಯೂ ಗಂಭೀರವಾಗಿ ಹದಗೆಟ್ಟಿದೆ ಹಾಗೂ ಬೆರಳುಗಳು ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿತ್ತು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ಪುಟಿನ್ ಅವರ ಹದಗೆಡುತ್ತಿರುವ ಆರೋಗ್ಯದ ಕಾರಣ ವೈದ್ಯರು ಸಾರ್ವಜನಿಕವಾಗಿ ಹೆಚ್ಚು ಸಮಯ ಕಾಣಿಸಿಕೊಳ್ಳದಂತೆ ಹೇಳಿರುವುದಾಗಿ ತಿಳಿದುಬಂದಿದೆ.

    Live Tv

  • ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯದ ಸುದ್ದಿ ಜಗತ್ತಿನ ಪ್ರಮುಖ ಚರ್ಚಾ ವಿಚಾರಗಳಲ್ಲಿ ಒಂದಾಗಿದೆ. ಪುಟಿನ್‌ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿದೇಶಿ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ.

    ಪುಟಿನ್‌ ಆರೋಗ್ಯದ ವಿಚಾರವಾಗಿ ಫಾಕ್ಸ್‌ ಸುದ್ದಿ ಸಂಸ್ಥೆ ಈಚೆಗೆ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಪುಟಿನ್‌ ಆರೋಗ್ಯದ ಗುಟ್ಟು ರಟ್ಟಾಗದಿರಲಿ ಎಂಬ ಕಾರಣಕ್ಕೆ ಅವರ ಮಲ, ಮೂತ್ರವನ್ನು ಅಂಗರಕ್ಷಕರೇ ಸಂಗ್ರಹಿಸಿ ಅದಕ್ಕೂ ರಕ್ಷಣೆ ನೀಡುತ್ತಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಇದನ್ನೂ ಓದಿ: ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    putin

    ಬ್ರೀಫ್‌ಕೇಸ್‌ನಲ್ಲಿ ಮಲ, ಮೂತ್ರ ಸಂಗ್ರಹ
    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿದೇಶಿ ಪ್ರವಾಸದಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯು ವಿದೇಶಿ ಗುಪ್ತಚರ ಸೇವೆಗಳ ಕೈಗೆ ಸಿಗುವ ಸಾಧ್ಯತೆಯ ಬಗ್ಗೆ ಪುಟಿನ್ ಭಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಮಲ, ಮೂತ್ರವನ್ನೂ ಅಂಗರಕ್ಷಕರು ಸಂಗ್ರಹಿಸಿ, ವಿಲೇವಾರಿಗೆ ಮಾಸ್ಕೋಗೆ ಸೂಟ್‌ಕೇಸ್‌ನಲ್ಲಿ ರವಾನಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪುಟಿನ್‌ ಅಧಿಕಾರದ ಬದಲಾವಣೆಗೆ ಸಂಬಂಧಿಸಿದ ಯಾವುದೇ ಅವ್ಯವಸ್ಥೆಯನ್ನು ತಡೆಯಲು ಮತ್ತು ಅನಿರ್ದಿಷ್ಟವಾಗಿ ರಷ್ಯಾವನ್ನು ಆಳುತ್ತಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಡಿಐಎ ಗುಪ್ತಚರ ಅಧಿಕಾರಿ ರೆಬೆಕಾ ಕಾಫ್ಲರ್ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ಪುಟಿನ್‌ ದೇಹದ ತ್ಯಾಜ್ಯವನ್ನು ವಿಶೇಷ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ತವರಿಗೆ ಪ್ರಯಾಣಕ್ಕಾಗಿ ಮೀಸಲಾದ ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ರಷ್ಯಾದ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಕಳೆದ ಒಂದು ದಶಕದಿಂದ ರಷ್ಯಾದಲ್ಲಿ ಬೀಡುಬಿಟ್ಟಿರುವ ಮಿಖಾಯಿಲ್ ರೂಬಿನ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಮಲವಿಸರ್ಜನೆಯ ಸಂಗ್ರಹದ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಪುಟಿನ್ ಅವರು 2017 ಮೇ 29ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಹಾಗೂ 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಹೀಗೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

    ಉಕ್ರೇನ್‌ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್‌ ಆರೋಗ್ಯದ ವಿಚಾರದ ಬಗ್ಗೆಯೂ ಪ್ರಮುಖ ಚರ್ಚೆಗಳಾಗುತ್ತಿವೆ. ಪುಟಿನ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅವರ ಆಪ್ತರಾದ ಒಲಿಗಾರ್ಚ್‌ ಈಚೆಗೆ ತಿಳಿಸಿದ್ದರು.

  • ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿ ಕಳುಹಿಸಿದರೆ ಪರಿಣಾಮ ನೆಟ್ಟಗಿರಲ್ಲ: ಪುಟಿನ್ ಎಚ್ಚರಿಕೆ

    ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿ ಕಳುಹಿಸಿದರೆ ಪರಿಣಾಮ ನೆಟ್ಟಗಿರಲ್ಲ: ಪುಟಿನ್ ಎಚ್ಚರಿಕೆ

    ಮಾಸ್ಕೋ: ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿಗಳನ್ನು ಅಮೆರಿಕ ಪೂರೈಸಿತು ಎಂದಾದರೆ, ನಾವು ಕೂಡಾ ಒಂದು ಸೂಕ್ತ ನಿರ್ಧಾರ ಮಾಡಿ, ಹೊಸದೊಂದು ಗುರಿಯನ್ನೇ ಹೊಡೆಯುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

    ಉಕ್ರೇನ್‌ಗೆ ಅಮೆರಿಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ವಿತರಿಸುವ ನಿರ್ಧಾರವನ್ನು ಖಂಡಿಸಿದ ಪುಟಿನ್, ಯುದ್ಧವನ್ನು ಇನ್ನೂ ಹೆಚ್ಚಿನ ಕಡೆಗೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ನಾವು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು, ನಮ್ಮ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ ಹಾಗೂ ಇಲ್ಲಿಯವರೆಗೂ ಹೊಡೆದಿರದ ಗುರಿಗಳನ್ನು ಹೊಡೆಯುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    Vladimir Putin

    ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಪುಟಿನ್ ಇದೀಗ ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುವುದನ್ನು ವಿರೋಧಿಸಿ, ಬೆದರಿಕೆ ಒಡ್ಡಿದ್ದಾರೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ರಷ್ಯಾ ಅಧ್ಯಕ್ಷ ಹೊಸ ಗುರಿಗಳನ್ನು ಹೊಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಿಖರವಾಗಿ ಯಾವ ಗುರಿ, ವ್ಯಾಪ್ತಿ ಅಥವಾ ಉಕ್ರೇನ್ ಹೊರತುಪಡಿಸಿ ಇತರ ದೇಶವೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ.

  • ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಮಾಸ್ಕೋ: ಕಳೆದ 2 ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಕ್ಯಾನ್ಸರ್ ಕಾಯಿಲೆಯಿಂದ ನಿರಂತರ ಆರೋಗ್ಯ ಸಮಸ್ಯೆಯಲ್ಲಿರುವ ಪುಟಿನ್‌ಗೆ ಡೆಡ್‌ಲೈನ್ ಫಿಕ್ಸ್ ಆಗಿದೆ.

    ಏಕೆಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಿರಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಹೇಳಿದೆ.

    69 ವರ್ಷದ ರಷ್ಯಾದ ಅಧ್ಯಕ್ಷ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿವೆ.

    ಗುಪ್ತಚರ ಸಂಸ್ಥೆಯ ವರದಿಯನ್ನು ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ. ತನ್ನ ಕೆಳಗೆ ಕೆಲಸ ಮಾಡುವವರ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪುಟಿನ್ ಇದೇ ತಿಂಗಳಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ವೈದರ ಸಲಹೆ, ಚಿಕಿತ್ಸೆಯಿಂದ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ರಷ್ಯಾದ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

  • ಕ್ಷಣಮಾತ್ರದಲ್ಲಿ ಎದುರಾಳಿಯನ್ನು ಹೊಡೆದುರಳಿಸಬಲ್ಲ ರಷ್ಯಾದ ಕ್ಷಿಪಣಿ – ಉಡಾವಣೆ ಯಶಸ್ವಿ

    ಕ್ಷಣಮಾತ್ರದಲ್ಲಿ ಎದುರಾಳಿಯನ್ನು ಹೊಡೆದುರಳಿಸಬಲ್ಲ ರಷ್ಯಾದ ಕ್ಷಿಪಣಿ – ಉಡಾವಣೆ ಯಶಸ್ವಿ

    ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಈ ಮಧ್ಯೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರಂತರವಾಗಿ ನಿರ್ಬಂಧನೆಗಳನ್ನು ವಿಧಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಿಂಚಿನ ವೇಗದ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯನ್ನು ರಷ್ಯಾ ಉಡಾಯಿಸಿದ್ದು, ದೃಶ್ಯಾವಳಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾ ಹಂಚಿಕೊಂಡಿರುವ ಈ ಫೋಟೋ ಎದುರಾಳಿ ದೇಶಗಳ ಮೇಲೆ ಒಂದೇ ಹೊಡೆತದಲ್ಲಿ ದಾಳಿ ನಡೆಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ.

    ಶ್ವೇತ ಸಮುದ್ರದಿಂದ ಯುದ್ಧನೌಕೆ ಉಡಾವಣೆ: ಮ್ಯಾಕ್ 9 `ಜಿರ್ಕಾನ್’ ಅಥವಾ `ಸಿರ್ಕಾನ್’ ಹೆಸರಿನ ಈ ಕ್ಷಿಪಣಿಯನ್ನು ಬಿಳಿ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಉಡಾವಣೆ ಮಾಡಲಾಗಿದೆ. ಯುದ್ಧದ ನಡುವೆಯೇ ಈ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಒಂದು ವೇಳೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ನಂತರ ಈ ಪರಮಾಣು ಕ್ಷಿಪಣಿಗಳನ್ನು ಬಳಸಲಾಗುವುದು ಎಂಬುದನ್ನು ರಷ್ಯಾ ತೋರಿಸಿದೆ. ಇದನ್ನೂ ಓದಿ: ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?

    ಮಿಂಚಿನ ವೇಗ: ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿ ಎಂದು ಘೋಷಿಸಿದ್ದರು. ಇದೇ ವರ್ಷ ಈ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಬಳಿ ಈ ಕ್ಷಿಪಣಿಗಳಿಗೆ ಯಾವುದೇ ಉತ್ತರವಿಲ್ಲ ಎಂದು ರಷ್ಯಾ ತಜ್ಞರು ಹೇಳುತ್ತಾರೆ. ರಷ್ಯಾದ ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯ ನಂತರ ಅದರ ರಹಸ್ಯ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ ಎಂದು ರಷ್ಯಾ ಮಾಧ್ಯಮಗಳು ಮಾಹಿತಿ ಪ್ರಸಾರ ಮಾಡಿವೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

    ಹೀಗಿದೆ ವೇಗದ ಮಿತಿ: ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯು ಶ್ವೇತ ಸಮುದ್ರದಲ್ಲಿ ಸುಮಾರು 1,000 ಕಿಮೀ ದೂರದಲ್ಲಿರುವ ನೌಕೆಯನ್ನು ಉಡಾಯಿಸುವ ಗುರಿ ಹೊಂದಿದೆ. ಕ್ಷಿಪಣಿಯು ಶಬ್ದದ ವೇಗಕ್ಕಿಂತ 9 ಪಟ್ಟು ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.