Tag: Vladimir putin

  • ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಕೀವ್: ಎರಡು ದಿನಗಳ ಹಿಂದೆಯಷ್ಟೇ ರಷ್ಯಾಕ್ಕೆ (Russia) ತಿರುಗೇಟು ನೀಡಿದ್ದ ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ (Rocket) ದಾಳಿ ಮಾಡುವ ಮೂಲಕ ರಷ್ಯಾ ಸೇಡು ತೀರಿಸಿಕೊಂಡಿದೆ.

    https://twitter.com/Ukraine66251776/status/1579347170792452096

    ರಷ್ಯಾ ಸೇನೆ ಸೋಮವಾರ ಬೆಳ್ಳಂಬೆಳಗ್ಗೆ (ಸ್ಥಳೀಯ ಸಮಯ ಬೆಳಗ್ಗೆ 8:15) ಅಬ್ಬರಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಲವು ಡೆಡ್ಲಿ ರಾಕೆಟ್‌ಗಳು ಏಕಕಾಲಕ್ಕೆ ದಾಳಿ ನಡೆದಿದ್ದು, ಹಲವು ಕಟ್ಟಡಗಳನ್ನ ಉಡೀಸ್ ಮಾಡಿದೆ. ಕೀವ್ (Kyiv) ನಗರದ ಹಲವೆಡೆ ಹೊಗೆ, ಧೂಳಿನ ಅಬ್ಬರ ಹೆಚ್ಚಾಗಿದ್ದು, ಹಲವು ಕಟ್ಟಡಗಳು ನೆಲಸಮವಾಗಿವೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ

    ಉಕ್ರೇನ್ (Ukraine) ರಾಜಧಾನಿ ಕೀವ್ (Kyiv) ಮಾತ್ರವಲ್ಲ, ಲಿವ್, ತೆರ್ನೋಪಿಲ್ ಸೇರಿದಂತೆ ಹಲವು ನಗರಗಳ ಮೇಲೆ ರಾಕೆಟ್ ದಾಳಿ ನಡೆದಿದೆ. ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಪೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕಿವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸದ್ಯ ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿಯ ಭಯಾನಕ ವೀಡಿಯೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಕಿಲೋ ಮೀಟರ್ ದೂರದಲ್ಲಿ ನಿಂತವರಿಗೂ ಸ್ಫೋಟದ ದೃಶ್ಯ ಕಂಡುಬರುತ್ತಿದೆ. ಆದರೆ ಸ್ಫೋಟದಿಂದ ಜೀವ ಹಾನಿ ಆಗಿರುವ ಬಗ್ಗೆ ಈವರೆಗೆ ವರದಿ ಲಭ್ಯವಾಗಿಲ್ಲವಾದ್ರೂ ರಕ್ಷಣಾ ಕಾರ್ಯಾಚರಣೆ ಬಳಿಕವೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

    ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್:
    ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ – ರಷ್ಯಾ ಸಂಪರ್ಕಿಸುವ ಕ್ರಿಮಿಯಾ ಸೇತುವೆಯನ್ನು (Crimean Bridge) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ಝರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.

    ದಕ್ಷಿಣ ಉಕ್ರೇನ್ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಈ ಸ್ಫೋಟ ನಡೆದಿತ್ತು.

    ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಮೇಲೆ ಪುಟಿನ್ ಅಣ್ವಸ್ತ್ರ ಬಳಸಬಹುದು: ಬೈಡನ್

    ಉಕ್ರೇನ್ ಮೇಲೆ ಪುಟಿನ್ ಅಣ್ವಸ್ತ್ರ ಬಳಸಬಹುದು: ಬೈಡನ್

    ವಾಷಿಂಗ್ಟನ್: ಶೀತಲ ಸಮರದ (Cold War) ಬಳಿಕ ಇದೀಗ ಮೊದಲ ಬಾರಿಗೆ ಪರಮಾಣು ದಾಳಿಯ ಅಪಾಯ ಹುಟ್ಟಿಕೊಂಡಿದೆ. ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್‌ನಲ್ಲಿ (Ukraine) ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡನ್ (Joe Biden) ಪುನರುಚ್ಚರಿಸಿದ್ದಾರೆ.

    ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೈಡನ್, 1962ರಲ್ಲಿ ಕೆನಡಿ ಹಾಗೂ ಕ್ಯೂಬಾದ ಬಿಕ್ಕಟ್ಟಿನ ಬಳಿಕ ಯಾವುದೇ ಅಣ್ವಸ್ತ್ರದ ಅಪಾಯ ಉಂಟಾಗಿರಲಿಲ್ಲ. ಆದರೆ ಈಗ ಪುಟಿನ್ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಅವರು ತಮಾಷೆ ಮಾಡುತ್ತಿಲ್ಲ ಎಂದು ಬೈಡನ್ ಎಚ್ಚರಿಸಿದರು. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR

    ಪರಮಾಣು ಶಸ್ತ್ರಾಸ್ತ್ರಗಳನ್ನು ಸೀಮಿತ ಪ್ರದೇಶದಲ್ಲಿ ಬಳಸಿದರೂ ಅದರ ಪರಿಣಾಮವನ್ನು ಇಡೀ ಪ್ರಪಂಚವೇ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಓಡಾಡ್ತಿದೆಯಂತೆ ಗುಜರಿ ಅಂಬುಲೆನ್ಸ್- ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!

    ಪುಟಿನ್ ಅವರನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಅವರು ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳು, ಜೈವಿಕ ಅಥವಾ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಬಗ್ಗೆ ತಮಾಷೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ಮಿಲಿಟರಿ ಸಾಮರ್ಥ್ಯ ಅಷ್ಟೊಂದು ಪ್ರಭಲವಾಗಿದೆ. ಆದರೆ ನಾವೆಲ್ಲರೂ ಅದನ್ನು ದುರ್ಬಲ ಎಂದು ಭಾವಿಸಿದ್ದೇವೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

    ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

    ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದಾರೆ.

    ಉಕ್ರೇನ್ (Ukrain) ವಿರುದ್ಧ ರಷ್ಯಾ (Russia) ನಡೆಸುತ್ತಿರುವ ಸಂಘರ್ಷದ ನಡುವೆ ಉಕ್ರೇನಿಯನ್-ಭಾರತೀಯ ಪಾಲುದಾರಿಕೆಯನ್ನು ಬಲಪಡಿಸುವ ಪ್ರಾಮುಖ್ಯತೆ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದರು. ಇದನ್ನೂ ಓದಿ: ಅಮೃತ್ ಪೌಲ್ ಹರಕೆಯ ಕುರಿ – PSI ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಸಿಎಂ ಮಗ: ದಿನೇಶ್ ಗುಂಡೂರಾವ್

    ಈ ವೇಳೆ ಉಕ್ರೇನಿಯನ್ ಪ್ರದೇಶಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುವ ಗುರಿಯನ್ನು ಹೊಂದಿದೆ. ಈ ಆಕ್ರಮಣಕಾರರ ಎಲ್ಲಾ ನಿರ್ಧಾರಗಳು ಶೂನ್ಯ ಮತ್ತು ಅನೂರ್ಜಿತವಾಗಿವೆ ಮತ್ತು ವಾಸ್ತವವನ್ನು ಬದಲಾಯಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ರಷ್ಯಾದ ಅಧ್ಯಕ್ಷರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದರು.

    ನಮ್ಮ ರಾಷ್ಟ್ರವು ಯಾವಾಗಲೂ ಮಾತುಕತೆಯ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ. ಆದರೆ ರಷ್ಯಾ ತನ್ನ ಮಾತಿನಂತೆ ನಿಲ್ಲಲಿಲ್ಲ ಮತ್ತು ಉದ್ದೇಶ ಪೂರ್ವಕವಾಗಿ ಈ ಪ್ರಕ್ರಿಯೆಯನ್ನು ದುರ್ಬಲಗೊಳಿಸಿತು. ಜನರಲ್ ಅಸೆಂಬ್ಲಿಯ ಅಧಿವೇಶನದ ವೇಳೆ ನಾನು ಭಾಷಣ ಮಾಡುವಾಗ ಶಾಂತಿಗಾಗಿ ನಮ್ಮ ಸ್ಪಷ್ಟ ಸೂತ್ರವನ್ನು ವಿವರಿಸಿದೆ. ಅದನ್ನು ಸಾಧಿಸಲು ಮತ್ತು ನಮ್ಮ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದು ಮೋದಿ ಅವರಿಗೆ ತಿಳಿಸಿದರು.

    ರಷ್ಯಾದ ಪರಮಾಣು ಬ್ಲ್ಯಾಕ್‍ಮೇಲ್ ಕೇವಲ ಉಕ್ರೇನ್‍ಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆದರಿಕೆಯಾಗಿದೆ ಎಂದರು. ಜೊತೆಗೆ ಮೋದಿಯವರಿಗೆ ಉಕ್ರೇನ್‍ಗೆ ಭೇಟಿ ನೀಡುವಂತೆ ಆಹ್ವಾನಿಸಿದರು.  ಇದನ್ನೂ ಓದಿ: ಕಳ್ಳರ ಕೃತ್ಯಕ್ಕೆ ಬೇಸತ್ತ ಗ್ರಾಮಸ್ಥರು – ಖದೀಮರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಜೊತೆಗೆ ಸನ್ಮಾನ

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನ ನಾಲ್ಕು ಪ್ರದೇಶಗಳು ರಷ್ಯಾ ವಶ – ನ್ಯಾಟೋ ಸದಸ್ಯತ್ವಕ್ಕಾಗಿ ಝೆಲೆನ್ಸ್ಕಿ ಪಟ್ಟು

    ಉಕ್ರೇನ್‍ನ ನಾಲ್ಕು ಪ್ರದೇಶಗಳು ರಷ್ಯಾ ವಶ – ನ್ಯಾಟೋ ಸದಸ್ಯತ್ವಕ್ಕಾಗಿ ಝೆಲೆನ್ಸ್ಕಿ ಪಟ್ಟು

    ‌ಮಾಸ್ಕೋ: ಉಕ್ರೇನ್‍ನ (Ukraine) ನಾಲ್ಕು ಪ್ರದೇಶಗಳನ್ನು ರಷ್ಯಾ (Russia) ವಶಪಡಿಸಿಕೊಂಡ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸದಸ್ಯತ್ವವವನ್ನು ಆದಷ್ಟೂ ಬೇಗ ಕೊಡಿ ಎಂದು ನ್ಯಾಟೋಗೆ (Nato) ಮನವಿ ಸಲ್ಲಿಸಿದ್ದಾರೆ.

    ಉಕ್ರೇನ್‍ನ ನಾಲ್ಕು ಪ್ರದೇಶಗಳಾದ ಡಾನೆಸ್ಕ್, ಖೇರ್ಸಾನ್, ಲುಹಾಂಸ್ಕ್ ಮತ್ತು ಝೆಪೋರ್‌ಝಿಯಾ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಈ ನಾಲ್ಕು ಪ್ರದೇಶಗಳನ್ನು ರಷ್ಯಾದೊಂದಿಗೆ ವಿಲೀನ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ – ಪುಟಿನ್‌ ಘೋಷಣೆ

    ಕ್ರೆಮ್ಲಿನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿಲೀನ ಪ್ರಕ್ರಿಯೆ ನಡೆಯಿತು. ಬಳಿಕ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಉಕ್ರೇನ್‍ನ ಸುಮಾರು ಶೇ.15 ರಷ್ಟು ಭೂಭಾಗವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪ್ರದೇಶಗಳು ಶಾಶ್ವತವಾಗಿ ರಷ್ಯಾ ಪಾಲಾಗಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಇತ್ತ ರಷ್ಯಾ ಈ ನಡೆಯ ಬೆನ್ನಲ್ಲೇ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವ ತ್ವರಿತವಾಗಿ ಕೊಡಬೇಕೆಂದು ಪಟ್ಟುಹಿಡಿದಿದ್ದಾರೆ. ನಾವು ಮಿತ್ರಪಕ್ಷಗಳೊಂದಿಗೆ ಮೈತ್ರಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಪಾಲಿಸಿದ್ದೇವೆ. ಹಾಗಾಗಿ ನಮಗೆ ಆದಷ್ಟೂ ಬೇಗ ಸದಸ್ಯತ್ವ ನೀಡುವಂತೆ ಕೋರಿರುವ ಅರ್ಜಿಗೆ ಸಹಿ ಹಾಕಿ ನ್ಯಾಟೋಗೆ ನೀಡಿದ್ದಾರೆ. ಈ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ರಷ್ಯಾ ವಿರುದ್ಧ ನ್ಯಾಟೋ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

    ಈ ಎಲ್ಲಾ ಬೆಳವಣಿಗೆಯ ನಡುವೆಯೇ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಝೆಪೋರ್‌ಝಿಯಾ ಪ್ರದೇಶಗಳಲ್ಲಿ ರಷ್ಯಾ ತನ್ನ ಹಿಡಿತವನ್ನು ಸಾಧಿಸಲು ರಾಕೆಟ್ ದಾಳಿ ನಡೆಸಿ ಅನೇಕ ಸಾವು, ನೋವಿಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ – ಪುಟಿನ್‌ ಘೋಷಣೆ

    ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ – ಪುಟಿನ್‌ ಘೋಷಣೆ

    ಮಾಸ್ಕೋ: ಉಕ್ರೇನ್‌ನ (Ukraine) ನಾಲ್ಕು ಪ್ರದೇಶಗಳನ್ನು ರಷ್ಯಾ (Russia) ವಶಕ್ಕೆ ಪಡೆದಿದೆ. ಈ ಪ್ರದೇಶಗಳು ಶಾಶ್ವತವಾಗಿ ರಷ್ಯಾ ಪಾಲಾಗಲಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಘೋಷಿಸಿದ್ದಾರೆ.

    ಕ್ರೆಮ್ಲಿನ್‌ ಸಭಾಂಗಣದಲ್ಲಿ ಈ ಕುರಿತು ಮಾತನಾಡಿದ ಅವರು, ಉಕ್ರೇನ್‌ನ ಸುಮಾರು ಶೇ.15 ರಷ್ಟು ಭೂಭಾಗವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದು 2ನೇ ವಿಶ್ವ ಯುದ್ಧದ ನಂತರ ಯೂರೋಪ್‌ನಲ್ಲಿಯೇ ಅತಿ ದೊಡ್ಡ ಸ್ವಾಧೀನವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    ಉಕ್ರೇನ್‌ನ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ (Volodymyr Zelenskyy), ಪುಟಿನ್ ಜೀವನಕ್ಕಿಂತ ಹೆಚ್ಚು ಯುದ್ಧವನ್ನೇ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, ಇದು ಅತ್ಯಂತ ಅಪಾಯಕಾರಿ. ವಿಶ್ವಸಂಸ್ಥೆಯ ನಿಯಮ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಝಪೊರಿಝಿಯಾದಲ್ಲಿ ರಷ್ಯಾದ ರಾಕೆಟ್ ದಾಳಿಗೆ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಇನ್ನೂ 50 ಮಂದಿ ಗಾಯಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಮಾಸ್ಕೋ/ನವದೆಹಲಿ: G-7 ರಾಷ್ಟ್ರಗಳು (G7 Countries) ಪ್ರಸ್ತಾಪಿರುವ ಬೆಲೆಯ (Price) ಮಿತಿ ನ್ಯಾಯುತವಾಗಿಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ತೈಲ ಪೂರೈಕೆಯನ್ನು ನಿಲ್ಲಿಸಲಾಗುವುದೆಂದು ರಷ್ಯಾ (Russia) ಹೇಳಿದೆ.

    ಈ ಕುರಿತು ಭಾರತದಲ್ಲಿರುವ ರಷ್ಯಾದ ರಾಯಭಾರಿ (Russia’s Ambassador) ಡೆನಿಸ್ ಅಲಿಪೋವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಅಲ್ಲದೇ ಈಚೆಗೆ ಸಮರ್‌ಕಂಡ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) `ಇದು ಯುದ್ಧದ ಯುಗವಲ್ಲ’ ಎಂದು ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರಿಗೆ ಸಲಹೆ ನೀಡಿದ್ದನ್ನೂ ಪರಿಗಣಿಸಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್- ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ

    G-7 ರಾಷ್ಟ್ರಗಳು ನಿಗದಿಪಡಿಸಿರುವ ಬೆಲೆ ನ್ಯಾಯಯುತ ಅಥವಾ ಸ್ವೀಕಾರಾರ್ಹವಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ಮತ್ತು ಯುಎಸ್ (US) ಉಪಕ್ರಮಕ್ಕೆ ಸೇರುವ ದೇಶಗಳಿಗೆ ತೈಲ ಪೂರೈಕೆ ನಿಲ್ಲಿಸುತ್ತೇವೆ ಎಂದು ಅಲಿಪೋವ್ ತಿಳಿಸಿದ್ದಾರೆ. ಇದನ್ನೂ ಓದಿ: ಕಿಸೆಯಲ್ಲಿ ಸಿಕ್ತು ಕಾಂಡೋಮ್‌ನ ರಶೀದಿ- ಮಹಿಳಾ ಪೇದೆಯಿಂದ ಗೆಳೆಯನಿಗೇ ಶೂಟೌಟ್

    RUSSIA OIL

    ರಷ್ಯಾ ತನ್ನ ವ್ಯಾಪಾರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಯಾವುದೇ ಕಾರ್ಯವಿಧಾನವನ್ನು ಅನುಸರಿಸುವುದಿಲ್ಲ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ರಷ್ಯಾದ ಮೇಲೆ ಪ್ರಭಾವ ಬೀರಲಿವೆ. ಜಿ-7 ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟವು ರಷ್ಯಾದ ಆದಾಯವನ್ನು ಮಿತಿಗೊಳಿಸುವ ಉದ್ದೇಶದಿಂದಲೇ ರಷ್ಯಾದ ಕಚ್ಚಾ ಹಾಗೂ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ತೈಲ ಬೆಲೆ ಮಿತಿಯನ್ನು ವಿಧಿಸಿವೆ. ಇದು ನಿರ್ದಿಷ್ಟವಾಗಿ ರಷ್ಯಾದ ಆದಾಯ ಕಡಿಮೆ ಮಾಡಲು ಹಾಗೂ ಉಕ್ರೇನ್ (Ukraine war) ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ನಿಧಿಯ ಸಾಮರ್ಥ್ಯವನ್ನು ತಗ್ಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

    ಈ ಬೆಲೆಯ ಮಿತಿಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲದ ತೀವ್ರ ಕೊರತೆಗೆ ಕಾರಣವಾಗುತ್ತದೆ. ಜೊತೆಗೆ ಮಾರುಕಟ್ಟೆಗಳಲ್ಲಿ ತೈಲ ಬೆಲೆ ಏರಿಕೆಗೂ ಕಾರಣವಾಗುತ್ತದೆ ಎಂದು ಅಲಿಪೋವ್ ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 18-65 ವಯಸ್ಸಿನ ಪುರುಷರಿಗೆ ಟಿಕೆಟ್ ಮಾರಾಟ ನಿಲ್ಲಿಸಲು ರಷ್ಯಾದ ಏರ್‌ಲೈನ್ಸ್ ಆದೇಶ

    18-65 ವಯಸ್ಸಿನ ಪುರುಷರಿಗೆ ಟಿಕೆಟ್ ಮಾರಾಟ ನಿಲ್ಲಿಸಲು ರಷ್ಯಾದ ಏರ್‌ಲೈನ್ಸ್ ಆದೇಶ

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಲು ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ರಷ್ಯಾದಲ್ಲಿ 18 ರಿಂದ 65 ವಯಸ್ಸಿನವರೆಗಿನ ಪುರುಷರಿಗೆ (Men) ಟಿಕೆಟ್ (Ticket) ಮಾರಾಟ ಮಾಡುವುದನ್ನು ತಡೆಯಲು ರಷ್ಯಾದ ಏರ್‌ಲೈನ್ಸ್ (Airlines) ಆದೇಶ ನೀಡಿದೆ.

    ಪುಟಿನ್ ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸಲು ಸೇನೆಯನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ ತಕ್ಷಣ ರಷ್ಯಾದಿಂದ ಹೊರಡುತ್ತಿರುವ ಎಲ್ಲಾ ವಿಮಾನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ವರದಿಯಾಗಿದೆ. ಅಲ್ಲಿನ ಜನರು ಅರ್ಮೇನಿಯಾ, ಜಾರ್ಜಿಯಾ, ಅಜರ್‌ಬೈಜಾನ್, ಕಝಾಕಿಸ್ತಾನ ಸೇರಿದಂತೆ ಹತ್ತಿರದ ದೇಶಗಳಿಗೆ ಹೋಗಲು ಮುಂದಾಗುತ್ತಿದ್ದಾರೆ.

    ಪುಟಿನ್ ಅವರ ಭಾಷಣದ ಬಳಿಕ ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರು ದೇಶದ ಸುಮಾರು 3 ಲಕ್ಷ ಪುರುಷರನ್ನು ಸೇನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದೀಗ ಸಮರ ಕಾನೂನನ್ನು ವಿಧಿಸುವ ಸಾಧ್ಯತೆಗಳ ನಡುವೆಯೇ ರಷ್ಯಾದ ವಿಮಾನಯಾನ ಸಂಸ್ಥೆ 18 ರಿಂದ 65 ವಯಸ್ಸಿನ ನಡುವಿನ ಪುರುಷರಿಗೆ ರಷ್ಯಾದಿಂದ ಹೊರ ಹೋಗಲು ಟಿಕೆಟ್ ನೀಡುವುದನ್ನು ತಡೆಹಿಡಿದಿದೆ. ಈ ವಯಸ್ಸು ರಷ್ಯಾ ಸೈನಿಕರು ಕಾರ್ಯನಿರ್ವಹಿಸುವ ವಯಸ್ಸಾಗಿರುವುದು ಗಮನಾರ್ಹ. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ

    ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆದರೂ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನೂ ಬಳಸುವ ಬಗ್ಗೆ ಸುಳಿವು ನೀಡಿದ್ದಾರೆ.

    ಆ ಕಡೆ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ಜೈಲಿನಲ್ಲಿರುವ ಕೈದಿಗಳನ್ನೂ ನೇಮಿಸಲಾಗುತ್ತಿರುವುದಾಗಿ ವರದಿಯಾಗಿದೆ. ಸೇನೆಗೆ ಸೇರುವ ಎಲ್ಲಾ ಕೈದಿಗಳಿಗೂ 6 ತಿಂಗಳ ಬಳಿಕ ಅಧ್ಯಕ್ಷೀಯ ಕ್ಷಮಾದಾನ ಹಾಗೂ ತಿಂಗಳಿಗೆ ಭಾರೀ ಮೊತ್ತದ ಸಂಬಳ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪಾಪರೆಡ್ಡಿ ಪಾಳ್ಯದಲ್ಲಿ 5 ಅಂತಸ್ತಿನ ಮನೆ ಉಡೀಸ್

    Live Tv
    [brid partner=56869869 player=32851 video=960834 autoplay=true]

  • ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

    ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

    ಮಾಸ್ಕೋ: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಸೇನೆಯನ್ನು (Military) ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ. ಈ ಆದೇಶದಿಂದಾಗಿ ರಷ್ಯಾ ಉಕ್ರೇನ್ (Ukraine) ಮೇಲಿನ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬಳಸುವ ಸುಳಿವು ನೀಡಿದ್ದಾರೆ.

    ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ರಷ್ಯಾ ಹಾಗೂ ನಮ್ಮ ಜನರನ್ನು ರಕ್ಷಿಸಲು ನಾವು ನಮ್ಮಿಂದಾಗುವ ಎಲ್ಲಾ ರೀತಿಯ ವಿಧಾನಗಳನ್ನೂ ಬಳಸುತ್ತೇವೆ ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ರಷ್ಯಾ ತನ್ನ ಎಲ್ಲಾ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಬಗ್ಗೆ ಪುಟಿನ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರು ಸಹೋದರ, ಸಹೋದರಿಯರಂತೆ ಇದ್ದೇವೆ- ಬ್ರಿಟನ್‌ನಲ್ಲಿ ಒಗ್ಗಟ್ಟಿನ ಮಂತ್ರ

    Vladimir Putin

    ಅಮೆರಿಕ, ಯುರೋಪಿಯನ್ ಯೂನಿಯನ್, ಹಾಗೂ ಬ್ರಿಟನ್ ಉಕ್ರೇನ್ ಅನ್ನು ಪ್ರೋತ್ಸಾಹಿಸುತ್ತಿದ್ದು, ರಷ್ಯಾದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಸಂಚು ರೂಪಿಸಿವೆ. ಪಶ್ಚಿಮವು ಪರಮಾಣು ಬ್ಲ್ಯಾಕ್‌ಮೇಲ್‌ನಲ್ಲಿ ತೊಡಗಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ರಷ್ಯಾದಲ್ಲಿಯೂ ಸಾಕಷ್ಟು ಶಸ್ತ್ರಾಸ್ತ್ರಗಳಿವೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶವನ್ನು ಸ್ವತಂತ್ರ್ಯಗೊಳಿಸುವ ಗುರಿಯಿದೆ. ರಷ್ಯಾದ ನಿಯಂತ್ರಣದಲ್ಲಿರುವ ಆ ಪ್ರದೇಶದಲ್ಲಿ ಹೆಚ್ಚಿನ ಜನರು ಕೀವ್‌ನಿಂದ ಆಡಳಿತ ನಡೆಯುವುದನ್ನು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಸಮರ್‌ಕಂಡ್: ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ (SCO) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ (Vladimir Putin) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

    ಮಾಸ್ಕೋದ ಪಡೆಗಳು ಉಕ್ರೇನ್ (Russia Vs Ukraine War) ಅನ್ನು ಆಕ್ರಮಿಸಿದ ನಂತರ ಉಭಯ ನಾಯಕರು ಮೊದಲಬಾರಿಗೆ ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಅವರು `ಇದು ಯುದ್ಧದ ಸಮಯವಲ್ಲ’ ಎಂದು ಪುಟಿನ್‌ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    ಬಳಿಕ ಪ್ರತಿಕ್ರಿಯಿಸಿದ ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್, ಕಳೆದ ಫೆಬ್ರುವರಿಯಲ್ಲಿ ಪ್ರಾರಂಭವಾದ ಉಕ್ರೇನ್ (Ukraine) ವಿರುದ್ಧದ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸಿದ್ದೇನೆ. ಈ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತದ ಕಳವಳ ಅರ್ಥವಾಗುತ್ತಿದೆ. ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವು, ನಿಮ್ಮ ಕಾಳಜಿಗಳು ನನಗೆ ಅರ್ಥವಾಗುತ್ತಿದೆ. ಇದನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

    ಎದುರಾಳಿ ತಂಡ, ಉಕ್ರೇನ್ ನಾಯಕತ್ವ, ಸಂಧಾನ ಪ್ರಕ್ರಿಯೆಯನ್ನು ತಿರಸ್ಕರಿಸುವುದಾಗಿ ಘೋಷಿಸಿತು ಮತ್ತು ಯುದ್ಧಭೂಮಿಯಲ್ಲಿ ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುವುದಾಗಿ ಹೇಳಿದೆ ಎಂದು ಪುಟಿನ್ ತಿಳಿಸಿದ್ದಾರೆ.

    ಬಳಿಕವೇ ಮಾತನಾಡಿದ ಪ್ರಧಾನಿ ಮೋದಿ `ಇದು ಯುದ್ಧದ ಸಮಯವಲ್ಲ’ ಎಂದು ಮನವರಿಕೆ ಮಾಡಿಕೊಟ್ಟದ್ದಾರೆ. ಇದನ್ನೂ ಓದಿ: ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

    SCO ಅಧ್ಯಕ್ಷ ಸ್ಥಾನ ಭಾರತಕ್ಕೆ ಹಸ್ತಾಂತರ: ಉಜ್ಬೇಕಿಸ್ತಾನ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಯಿತು. ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಸಮರ್ಕಂಡ್‌ನಲ್ಲಿ 22ನೇ ಎಸ್‌ಸಿಒ ಶೃಂಗಸಭೆ ಅಧ್ಯಕ್ಷತೆ ವಹಿಸಿದ್ದರು. 2023ರಲ್ಲಿ ಭಾರತ ಎಸ್‌ಸಿಒ ಶೃಂಗಸಭೆ ಆಯೋಜಿಸುತ್ತದೆ. ಈ ಜವಾಬ್ದಾರಿಯುತ ಕಾರ್ಯಕ್ರಮ ಅನುಷ್ಠಾನದಲ್ಲಿ ಭಾರತಕ್ಕೆ ಸಹಾಯ ಮಾಡಲು ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಉಜ್ಬೇಕಿಸ್ತಾನ ವಿದೇಶಾಂಗ ಸಚಿವ ವ್ಲಾಡಿಮಿರ್ ನೊರೊವ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

    ಮಾಸ್ಕೋ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ (Vladimir Putin) ಹತ್ಯೆಗೆ ಯತ್ನ ನಡೆದಿದ್ದು, ಪುಟಿನ್ ಪ್ರಯಾಣಿಸುತ್ತಿದ್ದ ಕಾರ್ ಮೇಲೆ ಬಾಂಬ್ ದಾಳಿ (Bomb Attack) ನಡೆದಿದೆ.

    ಅದೃಷ್ಟವಶಾತ್ ಪುಟಿನ್ ಅಪಾಯದಿಂದ ಪಾರಾಗಿದ್ದಾರೆ. ಪುಟಿನ್ ತಮ್ಮ ನಿವಾಸಕ್ಕೆ ವಾಪಸ್ ಆಗುವಾಗ, ಅವರು ಪ್ರಯಾಣಿಸುತ್ತಿದ್ದ ಲಿಮೋಸಿನ್ ಕಾರ್‌ನ (Car) ಮುಂದಿನ ಎಡಗಡೆಯ ಚಕ್ರ ಸ್ಫೋಟಗೊಂಡಿದೆ. ಕೂಡಲೇ ಭದ್ರತಾ ಸಿಬ್ಬಂದಿ (Security Guard) ಅಧ್ಯಕ್ಷರನ್ನು ಕಾರಿಂದ ಹೊರಗೆ ಎಳೆದು, ಬೆಂಗಾವಲು ಪಡೆಯಲ್ಲಿದ್ದ ಹೆಚ್ಚುವರಿ ಕಾರಿನಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳಿ – ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು

    ಅಧ್ಯಕ್ಷರ ಭದ್ರತೆ ವಿಚಾರದಲ್ಲಿ ರಾಜಿಯಾದ ಆರೋಪದ ಮೇಲೆ ಪುಟಿನ್ ಭದ್ರತಾ ಪಡೆಯ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಸಂಗ – ಪ್ರಿಯಕರನಿಂದ ಮಹಿಳೆ ಹತ್ಯೆ

    ಇದೇ ಹೊತ್ತಲ್ಲಿ, ಕಾಕತಾಳಿಯ ಎಂಬಂತೆ ಉಕ್ರೇನ್ ಅಧ್ಯಕ್ಷರ ಕಾರು ಅಪಘಾತಕ್ಕೀಡಾಗಿದೆ. ಅಧ್ಯಕ್ಷರ ಕಾರಿಗೆ ಪ್ಯಾಸೆಂಜರ್ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಝೆಲೆನ್ಸ್ಕಿ (Volodymyr Zelensky) ಪಾರಾಗಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]