Tag: Vladimir putin

  • ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಕೀವ್/ಮಾಸ್ಕೋ: ಇನ್ಮುಂದೆ ಉಕ್ರೇನ್ ವಿರುದ್ಧ ಯುದ್ಧ (Russia Ukraine War)) ಮಾಡುವುದಿಲ್ಲ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರವೂ ರಷ್ಯಾ ಅಟ್ಟಹಾಸ ಮುಂದುವರಿದಿದೆ.

    ಉಕ್ರೇನಿನ ಡ್ನಿಪ್ರೊ ನಗರದ 9 ಅಂತಸ್ತಿನ ಕಟ್ಟಡದ ಮೇಲೆ ಮತ್ತೆ ಭೀಕರ ಕ್ಷಿಪಣಿ ದಾಳಿ (Missile Strike) ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸತತ ದಾಳಿಯಿಂದ ರಷ್ಯಾ, ಉಕ್ರೇನಿನ ಮೂಲ ಸೌಕರ್ಯಗಳನ್ನ (Ukraine Infrastructure) ನಾಶಪಡಿಸಿದೆ. ಇದೀಗ ದಾಳಿಯ ಹೊಸ ಅಲೆ ಮುಂದುವರಿಸಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಡ್ನಿಪ್ರೊ ನಗರ ಹೊರತುಪಡಿಸಿ, ಕೀವ್ ಹಾಗೂ ಇತರ ಸ್ಥಳಗಳಲ್ಲಿ ನಿರ್ಣಾಯಕ ಮೂಲ ಸೌಕರ್ಯಗಳನ್ನು ದಮನ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಕ್ರೇನ್‌ನಲ್ಲಿ ವಿದ್ಯುತ್, ನೀರು ಹಾಗೂ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದೆ ಎಂದು ಉಕ್ರೇನಿನ ಇಂಧನ ಸಚಿವರು ಎಚ್ಚರಿಸಿದ್ದಾರೆ.

    ರಷ್ಯಾದ ದಾಳಿಯಲ್ಲಿ ಉಕ್ಕಿನ ತಯಾರಿಕಾ ನಗರವಾದ ಕ್ರಿವಿ ರಿಹ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿದ್ದರು. ಅಲ್ಲದೇ ಝಲೆನ್ಸ್ಕಿ (Volodymyr Zelenskyy) ತವರು ನಗರದಲ್ಲಿ 6 ಮನೆಗಳು ಹಾನಿಗೊಳಗಾದವು.

    ಇದೀಗ ಡ್ನಿಪ್ರೊ ಅಪಾರ್ಟ್ಮೆಂಟ್ ದಾಳಿಯಲ್ಲಿ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅದಕ್ಕಾಗಿ ಉಕ್ರೇನ್ ತನ್ನ ನಾಗರಿಕರ ಮೇಲಿನ ದಾಳಿ ಕೊನೆಗೊಳಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳಿಗಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದೆ. ಇದನ್ನೂ ಓದಿ: Exclusive- ‘ಮೇರುನಟ’ ವಿಷ್ಣುವರ್ಧನ್ ಸಮಾಧಿ ನೆಲಸಮ ಆಗತ್ತಾ? ಆತಂಕ ಹೊರಹಾಕಿದ ಅಭಿಮಾನಿ

    ಇತ್ತೀಚೆಗೆ “ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಲ್‌ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದರು. ಆದರೆ ಉಕ್ರೇನ್ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ಹೇಳಿ ಆರೋಪ ತಳ್ಳಿಹಾಕಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯುದ್ಧ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್

    ಯುದ್ಧ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್

    ಮಾಸ್ಕೋ: ನಾವು ಉಕ್ರೇನ್ (Ukraine) ಮೇಲೆ ಹೆಚ್ಚಿನ ದಾಳಿ ನಡೆಸುತ್ತಿದ್ದರೂ ನಾವಿದನ್ನು ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿಕೆ ನೀಡಿದ್ದಾರೆ.

    ಭಾನುವಾರ ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡಿದ ಪುಟಿನ್, ನಾವು ಉಕ್ರೇನ್‌ನೊಂದಿಗೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಲು ಮಾತುಕತೆಗೆ ಸಿದ್ಧರಾಗಿದ್ದೇವೆ. ಮಾತುಕತೆಗೆ ಮುಂದಾಗುವ ಎಲ್ಲರೊಂದಿಗೂ ನಾವು ಸ್ವೀಕಾರಾರ್ಹ ಫಲಿತಾಂಶದ ಬಗ್ಗೆಯೇ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.

    ಮಾತುಕತೆಯನ್ನು ನಿರಾಕರಿಸುತ್ತಿರುವುದು ನಾವಲ್ಲ, ಬದಲಿಗೆ ಅವರೇ. ನಾವು ಸರಿಯಾದ ಮಾರ್ಗದಲ್ಲೇ ಸಾಗುತ್ತಿದ್ದೇವೆ ಎಂಬುದನ್ನು ನಾವು ನಂಬುತ್ತೇವೆ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು, ನಮ್ಮ ನಾಗರಿಕರು, ನಮ್ಮ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದರು.

    10 ತಿಂಗಳುಗಳಿಂದ ಉಕ್ರೇನ್‌ನಲ್ಲಿ ನಡೆಸುತ್ತಿರುವ ಆಕ್ರಮಣವನ್ನು ಶೀಘ್ರವೇ ನಿಲ್ಲಿಸುವುದಾಗಿ ಕೆಲ ದಿನಗಳ ಹಿಂದೆ ಪುಟಿನ್ ಹೇಳಿದ್ದರು. ಉಕ್ರೇನ್‌ನೊಂದಿಗಿನ ನಮ್ಮ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಶ್ರಮಿಸುತ್ತೇವೆ. ಆದಷ್ಟು ಬೇಗ ಎಲ್ಲವನ್ನೂ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದರು. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಈ ವರ್ಷ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. 10 ತಿಂಗಳುಗಳಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ತನ್ನ ಆಕ್ರಮಣದ ವೇಗವನ್ನು ಕಡಿಮೆಗೊಳಿಸುತ್ತಿರುವುದಾಗಿ ಹೇಳಿದೆ. ಇದನ್ನೂ ಓದಿ: ಬೆಂಗಳೂರು-ತುಮಕೂರು ದಶಪಥ ಹೆದ್ದಾರಿ 2025ರ ಆಗಸ್ಟ್ ವೇಳೆಗೆ ಸಿದ್ಧ: ಗಡ್ಕರಿ

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಜೊತೆಗಿನ ಯುದ್ಧವನ್ನು ಶೀಘ್ರವೇ ನಿಲ್ಲಿಸುತ್ತೇವೆ: ಪುಟಿನ್

    ಉಕ್ರೇನ್ ಜೊತೆಗಿನ ಯುದ್ಧವನ್ನು ಶೀಘ್ರವೇ ನಿಲ್ಲಿಸುತ್ತೇವೆ: ಪುಟಿನ್

    ಮಾಸ್ಕೋ: ಕಳೆದ 10 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಭೀಕರ ಯುದ್ಧವನ್ನು (War) ಶೀಘ್ರವೇ ನಿಲ್ಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತಿಳಿಸಿದ್ದಾರೆ.

    ಉಕ್ರೇನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ, ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಆದಷ್ಟು ಬೇಗ ಎಲ್ಲವನ್ನೂ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskiy) ಯುದ್ಧ ಪ್ರಾರಂಭವಾದಾಗಿನಿಂದ ಮೊದಲ ಬಾರಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಗಣ್ಯರೊಂದಿಗಿನ ಭೇಟಿಯ ಬಳಿಕ ಅಮೆರಿಕ ಪೇಟ್ರಿಯಾಟ್ ಕ್ಷಿಪಣಿಯನ್ನು ಉಕ್ರೇನ್‌ಗೆ ನೀಡಿದೆ.

    ಅಮೆರಿಕ ಉಕ್ರೇನ್‌ಗೆ ನೀಡಿರುವ ಮಿಲಿಟರಿ ಸಹಾಯದಿಂದ ಯುದ್ಧವನ್ನು ನಿಲ್ಲಿಸಲು ಅಥವಾ ಮಾಸ್ಕೋ ತನ್ನ ಗುರಿಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ. ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಶಕ್ತಿಶಾಲಿ ಹಾಗೂ ಸುಧಾರಿತ ಎಂದು ಪರಿಗಣಿಸಲಾಗುತ್ತದೆಯಾದರೂ ಅದು ತುಂಬಾ ಹಳೆಯದು ಎಂದು ಪುಟಿನ್ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ‘ಸಂಜೀವಿನಿ’ ಕೊರತೆ – ಬೂಸ್ಟರ್‌ ಡೋಸ್‌ ಬಳಕೆಗೆ ಜಾಗೃತಿ

    ಇದರ ಬೆನ್ನಲ್ಲೇ ಮಾಧ್ಯಮದೊಂದಿಗೆ ಮಾತನಾಡಿರುವ ಪುಟಿನ್, ರಷ್ಯಾ ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಇದು ಅನಿವಾರ್ಯ ರಾಜತಾಂತ್ರಿಕ ಪರಿಹಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

    ಈ ವರ್ಷ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. 10 ತಿಂಗಳುಗಳಿAದ ನಡೆಯುತ್ತಿರುವ ಯುದ್ಧದಲ್ಲಿ ಸಾಕಷ್ಟು ಸಾವು ನೋವುಗಳು ಉಂಟಾಗಿವೆ. ಇದನ್ನೂ ಓದಿ: ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ – ರಷ್ಯಾದಿಂದ 2 ಲಕ್ಷ ಸಾಮರ್ಥ್ಯದ ಸೇನೆ ಸಿದ್ಧ

    ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ – ರಷ್ಯಾದಿಂದ 2 ಲಕ್ಷ ಸಾಮರ್ಥ್ಯದ ಸೇನೆ ಸಿದ್ಧ

    ಕೀವ್: ಮುಂಬರುವ ಹೊಸ ವರ್ಷ ಉಕ್ರೇನ್ (Ukraine) ಪಾಲಿಗೆ ಕಹಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ರಷ್ಯಾ-ಉಕ್ರೇನ್ ಯುದ್ಧ (Russia Ukraine War)  ಮತ್ತೊಮ್ಮೆ ಭೀಕರ ಸ್ವರೂಪಕ್ಕೆ ತಿರುಗುವುದು ಖಚಿವಾಗಿದೆ. 2023ರ ಹೊಸ ವರ್ಷದ ಆರಂಭದಲ್ಲಿ ರಷ್ಯಾದಿಂದ ಮತ್ತೆ ದಾಳಿ ಎದುರಾಗುವ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್ ಮುಖ್ಯಸ್ಥ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ರಷ್ಯಾ, ಉಕ್ರೇನ್ (Russia-Ukraine) ಮೇಲಿನ ತನ್ನ ದಾಳಿಯನ್ನು ಮುಂದುವರಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಸುಮಾರು 2 ಲಕ್ಷ ಸೈನಿಕರನ್ನು ಒಳಗೊಂಡ ಹೊಸ ಸೇನಾಪಡೆಯನ್ನು ಸಿದ್ಧಪಡಿಸುತ್ತಿದೆ. ಕೀವ್‌ನಲ್ಲಿ (Kyiv) ಅಟ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು

    ಉಕ್ರೇನ್ ಸಹ ದಾಳಿಯ ಬಗ್ಗೆ ಎಲ್ಲಾ ಲೆಕ್ಕಾಚಾರ ಮಾಡಿಕೊಂಡಿದೆ. ನಮಗೆ ಎಷ್ಟು ಯುದ್ಧ ಟ್ಯಾಂಕರ್‌ಗಳು ಬೇಕು? ಫಿರಂಗಿಗಳು ಬೇಕು ಎಲ್ಲ ರೀತಿಯ ಲೆಕ್ಕಾಚಾರ ಮಾಡಿದ್ದೇವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಉಕ್ರೇನ್ ಈಶಾನ್ಯದಲ್ಲಿರುವ ಖಾರ್ಕೀವ್ ಪ್ರದೇಶದಿಂದ ರಷ್ಯನ್ ಪಡೆಗಳನ್ನು ಹಿಂದಕ್ಕೆ ಸರಿಸಿತ್ತು. ಆನಂತರದಲ್ಲಿ ರಷ್ಯಾ, ಉಕ್ರೇನಿನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿತ್ತು. ನಿರಂತರ ಕ್ಷಿಪಣಿ (Missile), ಡ್ರೋನ್ (Drone) ದಾಳಿಯಿಂದ ಇಂಧನ ಸಂಪನ್ಮೂಲ ಹಾಗೂ ಇತರ ಮೂಲಸೌಕರ್ಯಗಳನ್ನು ನಾಶಪಡಿಸಿತು. ಇದರಿಂದ ಈಗಾಗಲೇ ದೇಶಾದ್ಯಂತ ಭಾರೀ ವಿದ್ಯುತ್ ಅಭಾವವನ್ನುಂಟು ಮಾಡಿದೆ ಎಂದು ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.

    ಸದ್ಯ ಉಕ್ರೇನ್‌ಗೆ ರಷ್ಯಾ ಪಡೆಗಳನ್ನು ಎದುರಿಸಲು 300 ಟ್ಯಾಂಕರ್‌ಗಳು, 600 ರಿಂದ 700 ಇನ್ಫಾಂಟರಿ ಫೈಟಿಂಗ್ ವೆಹಿಕಲ್ (ಪದಾತಿದಳದ ಹೋರಾಟದ ವಾಹನಗಳು) ಹಾಗೂ 500 ಹೊವಿಟ್ಜರ್‌ಗಳು ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

    ಕೆಲ ದಿನಗಳ ಹಿಂದೆಯಷ್ಟೇ ಉಕ್ರೇನ್ ರಷ್ಯಾದ ತೂಗು ಸೇತುವೆಯನ್ನು ಧ್ವಂಸಗೊಳಿಸಿದ ನಂತರ ಉಕ್ರೇನ್ ಭೀಕರ ದಾಳಿಗೆ ತುತ್ತಾಗಿತ್ತು. ರಷ್ಯಾ ಏಕಾಏಕಿ 100 ಕ್ಷಿಪಣಿಗಳು, ಇರಾನಿ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು.

    Live Tv
    [brid partner=56869869 player=32851 video=960834 autoplay=true]

  • ಮನೆಯ ಟೆರೇಸ್‍ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿದ ಪುಟಿನ್

    ಮನೆಯ ಟೆರೇಸ್‍ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿದ ಪುಟಿನ್

    ಮಾಸ್ಕ್: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮಾಸ್ಕೋದಲ್ಲಿರುವ ತಮ್ಮ ಮನೆಯ (Home) ಟೆರೇಸ್‍ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿರುವುದಾಗಿ ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ.

    ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿರುವ 70 ವರ್ಷದ ಪುಟಿನ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾಸ್ಕೋದಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೆಟ್ಟಿಲಿನಿಂದ ಬಿದ್ದಿದ್ದಾರೆ. 5 ಮೆಟ್ಟಿಲುಗಳಲ್ಲಿ ಬಿದ್ದು ಹೊರಳಾಡಿರುವ ಪುಟಿರನ್ನು ಸಿಬ್ಬಂದಿ ಎಬ್ಬಿಸಿ ಬಳಿಕ ಕೂರಿಸಿದ್ದಾರೆ ಎಂದು ವೀಡಿಯೋ ಒಂದನ್ನು ನ್ಯೂಯಾರ್ಕ್‍ನ ಟೆಲಿಗ್ರಾಮ್‌ ಚಾನಲ್ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ಗುಜರಾತ್‌ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ

    putin

    ಪುಟಿನ್ ಕಳೆದ ತಿಂಗಳು ಅವರ ಕ್ಯೂಬನ್ ಕೌಂಟರ್ಪಾರ್ಟ್ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯನ್ನು ಆರೋಗ್ಯ ಸಮಸ್ಯೆಯಿಂದ ರದ್ದುಪಡಿಸಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಪುಟಿನ್ ಕೈನಡುಗುತ್ತಿರುವುದು ಮತ್ತು ಕಾಲುಗಳಲ್ಲಿ ನಿಲ್ಲಲಾಗದೆ ಕುಸಿದು ಬಿದ್ದಿರುವುದು ಗೋಚರಿಸಿದ್ದು, ಇದೀಗ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

    ಕ್ಯಾನ್ಸರ್ (Cance) ಕಾಯಿಲೆಯಿಂದ ಬಳಲುತ್ತಿರುವ ಪುಟಿನ್ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‍ಎಸ್‍ಬಿ ಈ ಹಿಂದೆ ವರದಿ ಮಾಡಿತ್ತು. ಪುಟಿನ್ 2014 ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ಬಿತ್ತರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್‌

    ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್‌

    ಮಾಸ್ಕೋ: ಜಿ20(G20) ಶೃಂಗಸಭೆಯಲ್ಲಿ ಭಾಗವಹಿಸದೇ ಇರಲು ರಷ್ಯಾ ಅಧ್ಯಕ್‌ ವ್ಲಾದಿಮಿರ್‌ ಪುಟಿನ್‌(Vladimir Putin) ನಿರ್ಧರಿಸಿದ್ದಾರೆ.

    ಇಂಡೋನೇಷ್ಯದ(Indonesia) ಬಾಲಿಯಲ್ಲಿ ನ.15 ಮತ್ತು 16 ರಂದು ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ತನ್ನ ಹತ್ಯೆ ಮಾಡಬಹುದು ಎಂಬ ಕಾರಣಕ್ಕೆ ಭಾಗವಹಿಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದಾರೆ.

    Russia-UkraineWar

    ಅಮೆರಿಕ, ಯುಕೆ ಅಥವಾ ಉಕ್ರೇನ್‌ ಪುಟಿನ್‌ ಹತ್ಯೆಗೆ ಸಂಚು ರೂಪಿಸಿದೆ ಎಂದು ರಷ್ಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಯಲ್ಲಿ ಪುಟಿನ್‌ ಶೃಂಗಸಭೆಗೆ ತೆರಳುತ್ತಿಲ್ಲ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

    ಈ ಸಭೆಯಲ್ಲಿ ಪುಟಿನ್‌ ಅವರನ್ನು ಅವಮಾನ ಮಾಡುವ ಸಾಧ್ಯತೆಯಿದೆ. ಉದಾಹರಣೆಗೆ ಕೆಲವು ಅಂಗವಿಕಲ ಸಾಮಾಜಿಕ ಕಾರ್ಯಕರ್ತರು ಪುಟಿನ್ ಅವರನ್ನು ಕೆಳಗೆ ಬೀಳಿಸುತ್ತಾರೆ. ಇದಕ್ಕೆ ವಿಶ್ವದ ಮಾಧ್ಯಮಗಳು ಕೆಳಗೆ ಬಿದ್ದ ಪುಟಿನ್‌ ಎಂದು ವರದಿ ಮಾಡುತ್ತವೆ. ಹುಚ್ಚು ಪಾಶ್ಚಾತ್ಯ ಮಾಧ್ಯಮಗಳು ಈ ರೀತಿಯ ಸುದ್ದಿ ಮಾಡಲು ಪ್ಲಾನ್‌ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಪುಟಿನ್‌ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತವನ್ನು ನೋಡಿ.. ಅಲ್ಲಿ ಪ್ರತಿಭಾವಂತರಿದ್ದಾರೆ: ಪುಟಿನ್ ಬಣ್ಣನೆ

    ಭಾರತವನ್ನು ನೋಡಿ.. ಅಲ್ಲಿ ಪ್ರತಿಭಾವಂತರಿದ್ದಾರೆ: ಪುಟಿನ್ ಬಣ್ಣನೆ

    ಮಾಸ್ಕೋ: ಭಾರತೀಯರು ಪ್ರತಿಭಾನ್ವಿತರಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಭಾರತವು ಉತ್ತಮ ಫಲಿತಾಂಶ ಸಾಧಿಸುತ್ತದೆ ಎಂದು ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೊಗಳಿದರು.

    ರಷ್ಯಾದ ಏಕತಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತ ಹಾಗೂ ಇಲ್ಲಿನ ನಿವಾಸಿಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಸಂದೇಹವಿಲ್ಲ. ಭಾರತವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

    ನಾವು ಭಾರತವನ್ನು (India) ನೋಡೋಣ. ಆಂತರಿಕ ಅಭಿವೃದ್ಧಿ ಸಾಧಿಸಲು ಭಾರತದ ಜನರು ಪ್ರತಿಭಾವಂತರಿದ್ದಾರೆ. ಭಾರತ ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶವನ್ನು ಸಾಧಿಸುತ್ತದೆ. ಅಲ್ಲಿನ ಶತಕೋಟಿ ಜನರಿಂದ ಇದು ಸಂಭಾವ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನಲ್ಲಿ ಬಾಣಂತಿ, ನವಜಾತ ಶಿಶುಗಳ ಮರಣ ಪ್ರಕರಣ – ಸಚಿವ ಸುಧಾಕರ್ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

    ಈ ವೇಳೆ ಪುಟಿನ್ ಆಫ್ರಿಕಾದಲ್ಲಿಯ ವಸಾಹತುಶಾಹಿ ಹಾಗೂ ರಷ್ಯಾದಲ್ಲಿರುವ ವಿಶಿಷ್ಟ ನಾಗರಿಕತೆ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ರಷ್ಯಾವು ಬಹುರಾಷ್ಟ್ರೀಯ ದೇಶವಾಗಿದೆ. ಇದು ವಿವಿಧ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. ಆದರೂ ರಷ್ಯಾ ಯುರೋಪಿಯನ್ ಸಂಸ್ಕೃತಿಯ ಮತ್ತು ಧರ್ಮದ ಭಾಗವಾಗಿದ್ದು. ಈ ಮೂಲಕ ಯೂರೋಪ್‍ನೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ನಿಧನ

    Live Tv
    [brid partner=56869869 player=32851 video=960834 autoplay=true]

  • ಇಂಜೆಕ್ಷನ್ ತೆಗೆದುಕೊಳ್ಳಲು ದೇಹದ ಭಾಗಗಳು ಸ್ಪಂದಿಸುತ್ತಿಲ್ಲ – ಪುಟಿನ್ ಆರೋಗ್ಯ ಮತ್ತಷ್ಟು ಕ್ಷೀಣ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಸಮರ ಸಾರಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆರೋಗ್ಯ (Health) ಮತ್ತಷ್ಟು ಕ್ಷೀಣಿಸುತ್ತಿದೆ. ದೇಹದ ಇತರ ಭಾಗಗಳು ಚುಚ್ಚುಮದ್ದು ತೆಗೆದುಕೊಳ್ಳಲು ಸ್ಪಂದಿಸದಂತಾಗಿದೆ ಎಂಬುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ಪುಟಿನ್ ದೇಹದ ಮೇಲೆ ವಿಚಿತ್ರ ಗುರುತುಗಳು ಪತ್ತೆಯಾಗಿದ್ದು, ಈ ಕುರಿತ ಫೋಟೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಇದು ಆರೋಗ್ಯ ಕ್ಷೀಣಿಸಿರುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಚಿತ್ರಗಳು ಅವರು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದನ್ನೂ ಸೂಚಿಸುತ್ತದೆ. ಅವರ ಕೈಗಳ ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಗುರುತುಗಳು ಕಾಣುತ್ತಿವೆ. ಅಲ್ಲದೇ ಪುಟಿನ್ ದೇಹದ ಇತರ ಭಾಗಗಳು ಇಂಜೆಕ್ಷನ್ (Injection) ತೆಗೆದುಕೊಳ್ಳಲು ಸ್ಪಂದಿಸುತ್ತಿಲ್ಲ. ಪುಟಿನ್ ಆರೋಗ್ಯವಾಗಿದ್ದಾರೆ, ಆದರೂ ಅವರ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ರಿಚರ್ಡ್ ಡಾನಾಟ್ ಅವರು ಹೇಳಿದ್ದಾರೆ.

    ಕ್ಯಾನ್ಸರ್ (Cancer) ಕಾಯಿಲೆಯಿಂದ ಬಳಲುತ್ತಿರುವ ರಷ್ಯಾ ಅಧ್ಯಕ್ಷ (Russia President) ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಕೆಲ ದಿನಗಳ ಹಿಂದೆ ಹೇಳಿತ್ತು. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

    ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದವು. ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ಮೋದಿ ನಿಜವಾದ ದೇಶಭಕ್ತ- `Make In India’ ಪರಿಕಲ್ಪನೆ ಹೊಗಳಿದ ರಷ್ಯಾ

    ಮೋದಿ ನಿಜವಾದ ದೇಶಭಕ್ತ- `Make In India’ ಪರಿಕಲ್ಪನೆ ಹೊಗಳಿದ ರಷ್ಯಾ

    ಮಾಸ್ಕೋ: ಮೋದಿ (Narendra Modi) ನಿಜವಾದ ದೇಶಭಕ್ತ ಎಂದಿರುವ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ.

    ಮಾಸ್ಕೋ ಮೂಲದ ಚಿಂತಕರ ಚಾವಡಿಯ ವಾಲ್ಡೈ ಚರ್ಚಾ ಕ್ಲಬ್‌ನ ವಾರ್ಷಿಕ ಭಾಷಣದಲ್ಲಿ ಮಾತನಾಡಿದ ಪುಟಿನ್, ಮೋದಿ ನಿಜವಾದ ದೇಶಭಕ್ತ. ತಮ್ಮ ನಾಯಕತ್ವದಲ್ಲಿ ದೇಶಕ್ಕೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕವಾಗಿ ಮುಖ್ಯವಾಗಿದೆ. ಅಲ್ಲದೇ ಭಾರತದ ಬೆಳವಣಿಗೆಯು ಬ್ರಿಟಿಷ್ ವಸಾಹತುಗಳ ಅಭಿವೃದ್ಧಿಯ ಫಲಿತಾಂಶವನ್ನು ನೀಡುತ್ತದೆ ಎಂದರಲ್ಲದೇ ಭಾರತ (India) ಮತ್ತು ರಷ್ಯಾ (Russia) ನಡುವಿನ ಸಂಬಂಧವನ್ನು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ಭಾರತದ ಕೃಷಿಗೆ (Agriculture) ಬಹಳ ಮುಖ್ಯವಾದ ರಸಗೊಬ್ಬರ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ. ನಾವೂ 7.6 ರಷ್ಟು ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಇದರಿಂದ ಕೃಷಿ ಉತ್ಪನ್ನಗಳ ವ್ಯಾಪಾರವು ದ್ವಿಗುಣಗೊಂಡಿದೆ. ಇದು ಭಾರತ ಮತ್ತು ರಷ್ಯಾ ನಡುವಿನ ಹಲವು ದಶಕಗಳ ನಿಕಟ ಮಿತ್ರ ಸಂಬಂಧದಿಂದ ಆಧಾರವಾಗಿದೆ. ನಾವು ಎಂದಿಗೂ ಯಾವುದೇ ಕಷ್ಟಕರ ಸಮಸ್ಯೆಗಳನ್ನು ಹೊಂದಿರಲಿಲ್ಲ. ಬದಲಾಗಿ ಪರಸ್ಪರ ಬೆಂಬಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಭಾರತೀಯರು ಸೇರಿದಂತೆ 20 ಮಂದಿ ಸಾವು

    ರಷ್ಯಾ ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ತನ್ನ ಪ್ರಾಬಲ್ಯ ಸಾಧಿಸುವುದಕ್ಕೆ ಮುಂದಾಯಿತು. ಆದರೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅಸ್ತಿತ್ವಕ್ಕಾಗಿ ಅಪಾಯಕಾರಿ ಹಾದಿ ಹಿಡಿಯುತ್ತಿವೆ. ಇದು ಮುಂದೆ ರಕ್ತಸಿಕ್ತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಇನ್ನುಮುಂದೆ ಸಾಮೂಹಿಕ ಕ್ಷಿಪಣಿ ದಾಳಿ (Missile Strikes) ನಡೆಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಹೇಳಿದ್ದಾರೆ.

    ತನ್ನ ಕನಸಿನ ಕ್ರಿಮಿಯಾ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿದ ಬಳಿಕ ಡೆಡ್ಲಿ ರಾಕೆಟ್‌ಗಳ ಮೂಲಕ ಸತತ ದಾಳಿ ನಡೆಸಿದ ರಷ್ಯಾ ಇದೀಗ ಕ್ಷಿಪಣಿ ದಾಳಿ ನಡೆಸುವುದಿಲ್ಲ. ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಕ್ರೆಮ್ಲಿನ್ (Kremlin) ಉದ್ದೇಶವಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯು ಉಕ್ರೇನ್‌ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ನೀಡಿದೆ. ಅಲ್ಲದೇ ಅಮಾಯಕರ ಪ್ರಾಣ ಬಲಿ ತೆಗೆದುಕೊಂಡಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಉಕ್ರೇನ್ ನಗರವು ಕತ್ತಲೆಯಲ್ಲಿ ಕಳೆಯುವಂತಾಗಿದೆ. ರಷ್ಯಾದ ಮಿಲಿಟರಿ ದಾಳಿಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದರು. ಇದರಿಂದ ರಷ್ಯಾ ತನ್ನ ಕ್ಷಿಪಣಿ (Missile) ದಾಳಿಯಿಂದ ಹಿಂದೆ ಸರಿದಿದೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿ, ಉಕ್ರೇನ್ ವಿರುದ್ಧ ವ್ಯಾಪಕ ದಾಳಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ-ರಷ್ಯಾ ಸಂಪರ್ಕಿಸುವ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.

    ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

    ಸೇತುವೆ ಧ್ವಂಸಗೊಳಿಸಿದ ಬಳಿಕ ಕೆರಳಿದ ರಷ್ಯಾ ಪ್ರತಿಯಾಗಿ 75 ಕ್ಷಿಪಣಿ ಹಾಗೂ 5 ಡೆಡ್ಲಿ ರಾಕೆಟ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಇರಾನಿ ಡ್ರೋನ್‌ಗಳ (Iranian Drones) ಮೂಲಕ ಅಟ್ಯಾಕ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]