ನವದೆಹಲಿ: ವಿದೇಶಕ್ಕೆ ರಫ್ತು ಆಗಬೇಕಿದ್ದ ಚೀನಾದ ವಿವೋ(Vivo) ಕಂಪನಿಯ 27 ಸಾವಿರ ಫೋನ್‌ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಕಂದಾಯ ಗುಪ್ತಚರ ವಿಭಾಗ(Revenue Intelligence Unit) ತಡೆ ಹಿಡಿದಿದೆ.
ಡಿವೈಸ್ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಹಿನ್ನೆಲೆಯಲ್ಲಿ ಡಿ.2 ರಿಂದ ಸುಮಾರು ಒಟ್ಟು 15 ದಶಲಕ್ಷ ಡಾಲರ್(123.73 ಕೋಟಿ ರೂ.)ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ತಡೆ ಹಿಡಿದ ಪ್ರಕರಣದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ವಿವೋ ಕಂಪನಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು
ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತ ಘಟಕದಿಂದ ಈ ಫೋನ್‌ಗಳನ್ನು ತಯಾರಿಸಲಾಗಿದೆ. ವಿವೋ ಮೊದಲ ಬಾರಿಗೆ ಭಾರತ-ನಿರ್ಮಿತ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಥೈಲ್ಯಾಂಡ್ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು.

ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು
ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಹದ್ದಿನ ಕಣ್ಣಿಟ್ಟಿದೆ. ಸರ್ಕಾರ ಚೀನಿ ಆಪ್‌ಗಳನ್ನು ನಿಷೇಧಗೊಂಡ ಬಳಿಕ ಚೀನಿ ಕಂಪನಿಗಳ ಮೇಲೆ ಆದಾಯ ತೆರಿಗೆ, ಇಡಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚಿತ್ತು.





















ಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.










