Tag: Vivekananda

  • ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಮೈಸೂರು: ಡಾ. ಯತೀಂದ್ರ ವೈರಲ್ ವೀಡಿಯೋದಲ್ಲೂ ಉಲ್ಲೇಖವಾಗಿದ್ದ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಕುರಿತು ಪ್ರತಿಕ್ರಿಯಿಸಿದರು. ಆ ವಿವೇಕಾನಂದ (Vivekananda) ಬೇರೆ ಈ ವಿವೇಕಾನಂದ ಬೇರೆ. ಅವರು ಬಿಐಓ, ಇವರು ಇನ್ಸ್ ಪೆಕ್ಟರ್. ಬಿಇಓ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಅನ್ನುವುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದು ವಿವೇಕಾನಂದ ಹೆಸರಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

    ಈ ಹಿಂದೆ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದ ವಿವೇಕಾನಂದ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಯತೀಂದ್ರ (Yathindra Siddaramaiah) ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು. ವಿವೇಕಾನಂದನಾ? ಎಲ್ಲಿಗೆ? ಎಂದು ಯತೀಂದ್ರ ಪ್ರಶ್ನೆ ಮಾಡಿದ್ದರು.

    ನಾನು ಕೊಟ್ಟಿದ್ದ 4-5 ಮಾತ್ರ ಮಾಡಿ ಎಂದು ಯತೀಂದ್ರ ಹೇಳಿದ್ದರು. ಈಗ ಮೈಸೂರಲ್ಲಿ ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು ಈ ನಾಲ್ವರಲ್ಲಿ ಒಬ್ಬರ ಹೆಸರು ವಿವೇಕಾನಂದ ಆಗಿದ್ದರಿಂದ ಇವರೇನಾ ಅವರು ಎಂಬ ಪ್ರಶ್ನೆ ಎದ್ದಿತ್ತು. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

  • ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ ವರ್ಗಾವಣೆಯಾಗಿದ್ದು ಹೇಗೆ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

    ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ ವರ್ಗಾವಣೆಯಾಗಿದ್ದು ಹೇಗೆ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

    – ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‌ಆರ್‌ ಕಥೆ
    – ವರ್ಗಾವರ್ಗಿ ಬಜೆಟ್‌ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ

    ಬೆಂಗಳೂರು: ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ಪೊಲೀಸ್‌ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ಪ್ರಶ್ನಿಸಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಒಂದು ಸರ್ಕಾರ ವಿಸ್ಮಯಗಳ ಆಗರ. ಅಬ್ಬಬ್ಬಾ. ಬಾಯಿ ತೆರೆದರೆ ಭಗವದ್ಗೀತೆ. ನಾಲಿಗೆ ಮೇಲೆ ನೈತಿಕತೆಯ ನಾಟ್ಯ. ಮಾತು ಮಾತಿನಲ್ಲೂ ಮೌಲ್ಯಗಳದ್ದೇ ಮಥನ ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ. ಥೂ.. ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಡೂಪ್ಲಿಕೇಟ್‌ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‌ಆರ್‌ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

    ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ.

    ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ ‘ಸುಲಿಗೆಪುತ್ರ’ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ?

     

    ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ. ‘ಕಾಸಿಗಾಗಿ ಹುದ್ದೆ ಮತ್ತು ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ ಹೇಗಿದೆ?

    ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ ಆಂಡ್‌ ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ.

  • ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ

    ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ

    ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿವಾದಿತ ಪ್ರದೇಶವಾಗಿದ್ದ ಎನ್‍ಟಿಎಂಎಸ್ ಶಾಲೆಯ ಕಟ್ಟಡವನ್ನು ಕೊನೆಗೂ ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಮೊದಲ ಮಹಿಳಾ ಕನ್ನಡ ಶಾಲೆ ಇತಿಹಾಸ ಪುಟ ಸೇರಿದೆ.

    ರಾಜ್ಯ ಸರ್ಕಾರ ಶಾಲೆಯ ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ಇದನ್ನು ಕೆಲ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್‍ಗೆ ದಾವೆ ಹೂಡಿದ್ದವು. ಹೈಕೋರ್ಟ್‍ನಲ್ಲಿ ರಾಮಕೃಷ್ಣ ಆಶ್ರಮದ ಪರ ತೀರ್ಪು ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಶಾಲೆಯನ್ನು ಪಕ್ಕದ ಮಹಾರಾಣಿ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಇದನ್ನೂ ಓದಿ: ಜನಾರ್ದನ ರೆಡ್ಡಿ ರೀ ಎಂಟ್ರಿ ಮಾಡದಿದ್ದರೆ ರಾಮುಲು ಏಕಾಂಗಿ ಹೋರಾಟನಾ..?

    ನಿನ್ನೆ ಇಡೀ ರಾತ್ರಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ. ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕಟ್ಟಡವನ್ನು 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ತಡೆಯಲು ಬಂದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನು ಬಂಧಿಸಲಾಗಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಲಿದೆ.

  • ಗಿರೀಶ್ ಅವರನ್ನು ನೋಡ್ತಿದ್ದರೆ ವಿವೇಕಾನಂದ ನೆನಪಾಗ್ತಿದ್ರು: ಬಿ.ಟಿ ಲಲಿತಾ ನಾಯಕ್

    ಗಿರೀಶ್ ಅವರನ್ನು ನೋಡ್ತಿದ್ದರೆ ವಿವೇಕಾನಂದ ನೆನಪಾಗ್ತಿದ್ರು: ಬಿ.ಟಿ ಲಲಿತಾ ನಾಯಕ್

    ಬೆಂಗಳೂರು: ಗಿರೀಶ್ ಕಾರ್ನಾಡ್ ಅವರನ್ನು ನೋಡುತ್ತಿದ್ದರೆ ನನಗೆ ವಿವೇಕಾನಂದ ನೆನಪಾಗುತ್ತಿದ್ದರು ಎಂದು ಸಾಹಿತಿ ಬಿ.ಟಿ ಲಲಿತಾ ನಾಯಕ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಲಿತಾ ನಾಯಕ್, ಗಿರೀಶ್ ಕಾರ್ನಾಡ್ ಅವರು ಬಹಳ ಮಾತನಾಡುತ್ತಿರಲಿಲ್ಲ. ಅವರು ತುಂಬಾ ಗಂಭೀರವಾಗಿರುತ್ತಿದ್ದರು. ಅವರನ್ನು ನೋಡಿದಾಗ ನನಗೆ ವಿವೇಕಾನಂದ ನೆನಪಾಗುತ್ತಿದ್ದರು. ಆದರೆ ನಾವು ಮಾತನಾಡುತ್ತಿರುವುದನ್ನು ಹೆಚ್ಚು ಕೇಳುತ್ತಿದ್ದರು. ಕೆಲವೇ ಮಾತುಗಳಲ್ಲಿ ಅವರು ತಮ್ಮ ಮಾತನ್ನು ಮುಗಿಸುತ್ತಿದ್ದರು. ಅವರು ಕೇವಲ ಸಾಹಿತಿ ಹಾಗೂ ಪರಿಸರದ ಬಗ್ಗೆ ಮಾತನಾಡುತ್ತಿದ್ದರು. ಅದು ಹೊರತುಪಡಿಸಿ ರಾಜಕೀಯದ ಬಗ್ಗೆ ಇನ್‍ಡೈರೆಕ್ಟ್ ಆಗಿ ಮಾತನಾಡುತ್ತಿದ್ದರು ಹೇಳಿದರು. ಇದನ್ನೂ ಓದಿ: ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಶಾರದಾ ಕಾರ್ನಾಡ್

    ನಾನು ಅವರೊಬ್ಬ ನಾಟಕಗಾರ, ಸಿನಿಮಾ ಕಲಾವಿದರು ಎಂದು ಎಂದು ಹೇಳಲು ಹೆಚ್ಚಾಗಿ ಅವರನ್ನು ಒಬ್ಬ ಸಾಹಿತಿಯಾಗಿ, ಹೋರಾಟಗಾರ ಎಂದು ನೆನಪು ಮಾಡಿಕೊಳ್ಳುತ್ತೇನೆ. ಏಕೆಂದರೆ ಸಮಾಜದಲ್ಲಿ ಏನೇ ಅನ್ಯಾಯ ಆದರೂ ಅವರು ಸರ್ಕಾರ, ಧರ್ಮ-ಜಾತಿ ವಿರುದ್ಧ ಯಾವುದೇ ಮುಲಾಜಿಲ್ಲದೇ ಸಾಮಾನ್ಯರಂತೆ ಕುಳಿತು ಹೋರಾಟ ಮಾಡುತ್ತಿದ್ದರು. ಅದನ್ನು ಖಂಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದು ಬೇಸರವಾಗುತ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ

    ಗಿರೀಶ್ ಕಾರ್ನಡ್ ಅವರು ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಕಟ್ಟುಬಿದ್ದಿರಲಿಲ್ಲ. ಅವರು ನಡೆದಿದ್ದೇ ದಾರಿ. ಅವರ ಸುಮಾರು ನಾಟಕಗಳು ಹಲವರಿಗೆ ಬದಲಾವಣೆಯ ಗಾಳಿ ಬೀಸಿದೆ. ಅದರಲ್ಲಿ ನಾನು ಕೂಡ ಒಬ್ಬಳು. ಇತ್ತೀಚೆಗೆ ಕಾರ್ನಾಡ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 5-6 ತಿಂಗಳ ಹಿಂದೆ ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಬೇರೆಯವರ ಸಹಾಯದಿಂದ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಅವರು ನಮಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಅಷ್ಟು ಪರಿಸರ ಹಾಳಾಗಿದೆ ಎಂದು ಪರಿಸರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎಂದರು.

    ಗಿರೀಶ್ ಕಾರ್ನಡ್ ಅವರು ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಜನಿಸಿರುವ ಇವರು ಕರ್ನಾಟಕದ ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನಂತರ ಇಂಗ್ಲೆಂಡ್‍ನಲ್ಲಿ ರಾಜ್ಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು.

    https://www.youtube.com/watch?v=rjR2qIhqevM

  • ವಿವೇಕಾನಂದರು ಈಗ ಭಾರತದಲ್ಲಿ ಇದ್ದಿದ್ರೆ ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು- ಶಶಿತರೂರ್

    ವಿವೇಕಾನಂದರು ಈಗ ಭಾರತದಲ್ಲಿ ಇದ್ದಿದ್ರೆ ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು- ಶಶಿತರೂರ್

    ನವದೆಹಲಿ: ದೇಶದಲ್ಲಿ ಇಂದು ಸ್ವಾಮಿ ವಿವೇಕಾನಂದರು ಇದ್ದಿದ್ದರೆ ದುಷ್ಕರ್ಮಿಗಳು ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

    ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿತರೂರ್ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಸಮರ್ಪಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಶಶಿತರೂರ್ ಈ ಹೇಳಿಕೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಇಂದು ಭಾರತದಲ್ಲಿ ನೆಲೆಸಿದ್ದರೆ ದುಷ್ಕರ್ಮಿಗಳು ಅವರನ್ನು ಟಾರ್ಗೆಟ್ ಮಾಡಿ ಎಂಜಿನ್ ಆಯಿಲ್ ಬಳಿಯಲು ಪ್ರಯತ್ನಿಸುತ್ತಿದ್ದರು. ಅಲ್ಲದೇ ಅವರನ್ನು ಬೀದಿಗೆ ತಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಕಳೆದ ತಿಂಗಳು ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಅಲ್ಲದೇ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದು ಕೋಮು ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ. ಹಲವರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ನಂತರ ಮೋದಿ ಸರ್ಕಾರ ಆಡಳಿತಕ್ಕೂ ಬರುವ ಮೊದಲು 70ಕ್ಕೂ ಹೆಚ್ಚು ಹಲ್ಲೆ ಪ್ರಕರಣಗಳು ಗೋ ರಕ್ಷಣೆ ಹೆಸರಿನಲ್ಲಿ ನಡೆದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಕಳೆದ 4 ವರ್ಷಗಳಲ್ಲಿ 2,920 ಗಳು ನಡೆದಿದ್ದಾಗಿ ಕೇಂದ್ರ ಗೃಹ ಇಲಾಖೆ ನೀಡಿದೆ. ಅಂದರೆ 97% ಪ್ರಕರಣಗಳು ಕಳೆದ 4 ವರ್ಷಗಳ ಅವಧಿಯಲ್ಲಿ ನಡೆದಿದ್ದು, ಇದರಲ್ಲಿ 389 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಇಷ್ಟು ಪ್ರಕರಣಗಳು ವರದಿಯಾದರೂ ಈ ಕುರಿತು ಮಾತನಾಡಲು 68 ಅವಕಾಶಗಳು ಸಿಕ್ಕರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯಗಳ ಬಗ್ಗೆ ಮೌನ ವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ದೇಶದ ಜನತೆ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು ಒಮ್ಮೆಯೂ ಮಾತನಾಡಿಲ್ಲ ಎಂದು ದೂರಿದರು.

    ಕಳೆದ ಕೆಲ ತಿಂಗಳ ಹಿಂದೆ 2019 ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಎಂದು ಹೇಳಿಕೆ ನೀಡಿದ ಬಳಿಕ ಶಶಿತರೂರ್ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews