Tag: vivekanada college

  • 68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    ಉಡುಪಿ: ವೇದಿಕೆಯಲ್ಲಿ ರಾಜಕಾರಣದಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ನಮ್ಮ ಜಾಗದಲ್ಲಿ ಇರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದಕ್ಕೂ ಮುನ್ನ ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ವಿಚಾರದಲ್ಲಿ ಶಾ ಮಾತನಾಡಿದರು. ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ, ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು. ಈಗ ನವ ಭಾರತ ನಿರ್ಮಾಣಕ್ಕೆ ಯುವ ಪಡೆ ಟೊಂಕಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

    68 ವರ್ಷ ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ ದೇಶವನ್ನು ಆವರಿಸಿತ್ತು. ನಾಲ್ಕು ವರ್ಷದ ಹಿಂದೆ ಬಾಗಿಲು ತೆರೆದಿದ್ದೇವೆ. 2014 ಚುನಾವಣೆ ಸುವರ್ಣಾಕ್ಷರದಲ್ಲಿ ಬರೆದೆವು. 30 ವರ್ಷದ ನಂತರ ಒಂದೇ ಪಕ್ಷ ಬಹುಮತ ಪಡೆಯಿತು, ಕಿಚಡಿ ಸರಕಾರಗಳಿಂದ ಭಾರತಕ್ಕೆ ಮುಕ್ತಿಯಾಯ್ತು. ಬಿಜೆಪಿ ಪಕ್ಷ ಸರಕಾರ ಮಾಡಲು ಅಧಿಕಾರ ಕ್ಕೆ ಬಂದಿಲ್ಲ. ಭಾರತದ ಸದೃಢತೆಯ ನಿಲುವು ಬಿಜೆಪಿದ್ದು. ಓಟ್ ಬ್ಯಾಂಕ್ ರಾಜಕಾರಣ ನಾವು ಮಾಡಲ್ಲ. ಯಾರನ್ನು ಓಲೈಕೆ ಮಾಡುವ ಉದ್ದೇಶ ನಮಗಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

    ದೇಶದಲ್ಲಿ ಅಂಧಕಾರ ಕವಿದಿತ್ತು. ಬಡವರ ಮನೆಯಲ್ಲಿ ಒಲೆ ಉರಿಯುತ್ತಿರಲಿಲ್ಲ, ಈಗ ಮನೆಗಳಲ್ಲಿ ಬೆಳಕು ಬಂದಿದೆ. ಅಡುಗೆ ಮನೆಗೆ ಉಚಿತ ಸಿಲಿಂಡರ್ ಬಂದಿದೆ. ಮೋದಿಯ ಸ್ವಚ್ಛ ಆಡಳಿತ ಶುರುಮಾಡಿರೋದ್ರಿಂದ ದಿನಗಳು ಕಠಿಣವಾಗಿ ಕಾಣಿಸುತ್ತಿರಬಹುದು. ಭಾರತದ ಮುಂದಿನ ದಿನಗಳು ಒಳ್ಳೆಯದಿರುತ್ತದೆ. ದೇಶಾದ್ಯಂತ ಕೋಟ್ಯಾಂತರ ಶೌಚಾಲಯ ನಿರ್ಮಾಣವಾಗಿದೆ, ಮೋದಿ ಕೇರ್, ಮುಂದಿನ 4 ವರ್ಷಗಳಲ್ಲಿ ಎಲ್ಲಾ ಮನೆಗಳಲ್ಲಿ ಎಲ್ಲಾ ಸವಲತ್ತು ಇರುತ್ತದೆ ಎಂದು ಹೇಳಿದರು.

    ಉರಿಯಲ್ಲಿ 12 ಯೋಧರ ಹತ್ಯೆಯಾಯ್ತು. ಮೋದಿ ಭಾಷಣ ಮಾಡಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟರು. ಅಮೇರಿಕ, ಇಸ್ರೇಲ್ ರೀತಿ ಭಾರತೀಯ ಯೋಧರಿಗೂ ವಿಶ್ವದಲ್ಲಿ ಗೌರವವಿದೆ ಎಂದರು.

    ಯೋಧರ ಕೈಯಲ್ಲಿರುವ ಬಂದೂಕಿನ ಗೋಲಿಗೆ ಗೋಲ್ ಯಾವುದೆಂದು ಗೊತ್ತಿದೆ. ವಿರೋಧಿಗರಿಗೆ ಉತ್ತರಿಸಲು ನಮಗೆ ಗೊತ್ತಿದೆ. ನಾವು ಶಾಂತಿಯನ್ನು ಅಪೇಕ್ಷಿಸುವ ಭಾರತೀಯರು ಎಂದು ಶಾ ವಿರೋಧಿ ಪಾಕ್ ಮತ್ತು ಚೀನಾ ಕುರಿತು ಹೇಳಿದರು. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ನೆನಪಿಸಿದ ಶಾ, ಯುವಕರಿಗಾಗಿ ಕೇಂದ್ರ ಸರ್ಕಾರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.