Tag: vittla

  • ವಿಟ್ಲದಲ್ಲಿ ಅಪ್ರಾಪ್ತೆ ಆತ್ಮಹತ್ಯೆ – ಇದು ಕೊಲೆ, ಲವ್‌ ಜಿಹಾದ್‌ ಎಂದ ವಿಎಚ್‌ಪಿ

    ವಿಟ್ಲದಲ್ಲಿ ಅಪ್ರಾಪ್ತೆ ಆತ್ಮಹತ್ಯೆ – ಇದು ಕೊಲೆ, ಲವ್‌ ಜಿಹಾದ್‌ ಎಂದ ವಿಎಚ್‌ಪಿ

    ಮಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್‍ಗೆ ಪುಷ್ಟಿ ನೀಡುವ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ನಡೆದ ಘಟನೆಯೂ ಸೇರಿಕೊಂಡಿದೆ.

    ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಂಪತಿಯ 14 ವರ್ಷದ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಅಪ್ರಾಪ್ತೆಯ ಸಾವಿಗೆ ಅನ್ಯಕೋಮಿನ ಯುವಕ ಕಾರಣ ಎಂದು ಬಾಲಕಿ ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ

    ಬಾಲಕಿ ಕುಟಂಬ ಕಳೆದ 2 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ಕಣಿಯೂರು ನಿವಾಸಿಯಾಗಿರುವ ಆರೋಪಿ ಶಾಹುಲ್ ಹಮೀದ್ ಬಾಲಕಿಯ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯ ಕಡೆ ಬರುತ್ತಿದ್ದ. ಬಳಿಕ ಪೋಷಕರು ಇಲ್ಲದ ಸಂದರ್ಭ ಬಾಲಕಿಯನ್ನು ಕಾಣಲು ಬರುತ್ತಿದ್ದ ಆರೋಪಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ.

    ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಸಾಹುಲ್ ಹಮೀದ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ಬಾಲಕಿಯ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಂಡ ಶಾಹುಲ್ ಹಮೀದ್ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸುತ್ತಿದ್ದ. ತನ್ನೊಂದಿಗೆ ಬರುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಇದನ್ನೂ ಓದಿ: ನಿಮಗಿಂತ ಹೆಚ್ಚಾಗಿ ತನ್ನ ದೇಶವನ್ನು ಪ್ರೀತಿಸುತ್ತಾನೆ, ಮೋದಿಯನ್ನು ಟೀಕಿಸಿದ್ದ ಕಮ್ರಾಗೆ ತಿರುಗೇಟು ನೀಡಿದ ಬಾಲಕನ ತಂದೆ 

    ಆಕೆಯ ತಲೆ ಕೂದಲನ್ನು ಕೊಂಡೊಯ್ದು, ಬಳಿಕ ಭಸ್ಮ ಮಾದರಿಯ ವಸ್ತುವನ್ನು ಆಕೆಗೆ ತಿನ್ನಲು ನೀಡಿದ್ದ ಎನ್ನಲಾಗಿದೆ. ಹೀಗಾಗಿ ಇದು ಆತ್ಮಹತ್ಯೆಯಲ್ಲ ಇದೊಂದು ವ್ಯವಸ್ಥಿತವಾದ ಕೊಲೆ, ವಾಮಚಾರ ನಡೆಸಿ ಲವ್ ಜಿಹಾದ್ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆ ವಿಎಚ್‌ಪಿ ಆರೋಪಿಸಿದೆ.

    ಆರೋಪಿ ಸಾಹುಲ್ ಹಮೀದ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 305, ಎಸ್.ಸಿ-ಎಸ್.ಟಿ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

  • 5 ಸಾವಿರ ಕೊಡಿ ಅಂತಾ ಬಂದು ಬೆತ್ತಲೆಯಾಗಿ ಹನಿಟ್ರ್ಯಾಪ್ ಮಾಡಿದ್ಳು!

    5 ಸಾವಿರ ಕೊಡಿ ಅಂತಾ ಬಂದು ಬೆತ್ತಲೆಯಾಗಿ ಹನಿಟ್ರ್ಯಾಪ್ ಮಾಡಿದ್ಳು!

    ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ದರೋಡೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಸಮೀಪದ ಕುಡ್ತಮುಗೇರು ನಿವಾಸಿ ಮಹಮ್ಮದ್ ಹನೀಫ್ ಥಳಿತಕ್ಕೊಳಗಾಗಿ ದರೋಡೆಗೆ ಒಳಗಾದವನಾಗಿದ್ದು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದ ಪಜ್ಜು ಅಲಿಯಾಸ್ ಸುಮೈಯ್ಯಾ ಎಂಬಾಕೆ ಕಳೆದ ಶನಿವಾರ ರಾತ್ರಿ ಮಹಮ್ಮದ್ ಬಳಿ 5 ಸಾವಿರ ರೂಪಾಯಿ ಬೇಕೆಂದು ಹೇಳಿ ಕುಡ್ತಮುಗೇರಿನ ಫ್ಲಾಟ್ ಗೆ ಆಗಮಿಸಿದ್ದಳು. ಆದರೆ ಇವರನ್ನು ಫಾಲೋ ಮಾಡಿಕೊಂಡು ಟವೇರಾದಲ್ಲಿ ಬಂದಿದ್ದ ಐವರ ತಂಡ ಯುವತಿಯನ್ನು ಮಹಮ್ಮದ್ ಜೊತೆ ಬೆತ್ತಲೆಯಾಗಿ ನಿಲ್ಲಿಸಿ ಫೋಟೊ ತೆಗೆದಿದ್ದಾರೆ. ಆನಂತರ 5 ಲಕ್ಷ ರೂ. ಕೊಡುವಂತೆ ಪೀಡಿಸಿದ್ದಲ್ಲದೆ ರಾತ್ರಿ 2 ಗಂಟೆಯವರೆಗೂ ಥಳಿಸಿದ್ದಾರೆ.

    ಕೊನೆಗೆ ಮನೆಯ ಕಪಾಟು ಒಡೆದು 60 ಗ್ರಾಮ್ ಚಿನ್ನಾಭರಣ, 17 ಸಾವಿರ ರೂಪಾಯಿ ನಗದು ಹಾಗೂ ಮಹಮ್ಮದ್ ಬಳಸುತ್ತಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಪರಾರಿಯಾಗಿತ್ತು. ಆ ಬಳಿಕ ಮಹಮ್ಮದ್ ಸಂಬಂಧಿಕರಿಗೆ ವಿಷಯ ತಿಳಿಸಿದ್ದು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಫೌಜಿಯಾ ಮತ್ತು ಐವರ ತಂಡ ಈ ಕೃತ್ಯ ಎಸಗಿದ್ದಾಗಿ ದೂರು ದಾಖಲಾಗಿದ್ದು ವಿಟ್ಲ ಠಾಣೆಯಲ್ಲಿ ಹನಿಟ್ರ್ಯಾಪ್ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.

    ಬಂಧಿತರು: ತೊಕ್ಕೊಟ್ಟು ಕೆಸಿ ರೋಡ್ ಕಾಲೋನಿ ನಿವಾಸಿ ಅಶ್ರಫ್ ಸಂಶೀರ್ (27), ಪರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿ ಜೈನುದ್ದೀನ್, ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮಹಮ್ಮದ್ ಇಕ್ಬಾಲ್ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ (32) ಮತ್ತು ಸಕಲೇಶಪುರ ಅರೆಹಳ್ಳಿ ಸಂತೋಷ ನಗರ ನಿವಾಸಿ ಪಜ್ಜು ಯಾನೆ ಪರ್ಝಾನ ಅಲಿಯಾಸ್ ಸುಮೈಯ್ಯ (26) ಬಂಧಿತರು. ಇವರ ಕೈಯಲ್ಲಿದ್ದ ಪಾಸ್ ಪೋರ್ಟ್, 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.50 ಲಕ್ಷ ರೂಪಾಯೊ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.