Tag: Vittal Gowda

  • ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಮಂಗಳೂರು: ಸೌಜನ್ಯ ಮಾವ ವಿಠಲ ಗೌಡ (Vittal Gowda) ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಎಸ್‌ಐಟಿಗೆ ದೂರು ನೀಡಿದ್ದಾರೆ.

    ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ದೂರು ಕೊಟ್ಟಿದ್ದಾರೆ. ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್ಐಟಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

    ವಿಚಾರಣೆ ಮುಗಿಸಿ ಹೊರಬಂದು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಡಿಯೋ ಹರಿಬಿಟ್ಟು ತನಿಖೆ ಹಾದಿ ತಪ್ಪಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

    ವಿಠಲ ಗೌಡನ ಹಿಂದೆ ಕೆಲ ವ್ಯಕ್ತಿಗಳು ಸೇರಿಕೊಂಡು ಷಡ್ಯಂತ್ರ ನಡೆಸುತ್ತಿದ್ದಾರೆ. ವಿಚಾರಣೆ ಮುಗಿಸಿ ಹೊರಗೆ ಬಂದ ಬಳಿಕ ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಯ ಹಾದಿ ತಪ್ಪಿಸಲು ವಿಠಲ ಗೌಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬಗ್ಗೆಯೂ ದೂರು ನೀಡಲಾಗಿದೆ. ವಿಠಲ ಗೌಡ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿರುವ ಎಸ್‌ಐಟಿ ಅಧಿಕಾರಿಗಳು ಸ್ವೀಕೃತಿ ನೀಡಿದ್ದಾರೆ.

  • ಬಿಜೆಪಿಯವ್ರ ಧರ್ಮರಕ್ಷಣೆಯ ನಾಟಕ 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ: ಪ್ರಿಯಾಂಕ್ ಖರ್ಗೆ

    ಬಿಜೆಪಿಯವ್ರ ಧರ್ಮರಕ್ಷಣೆಯ ನಾಟಕ 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ: ಪ್ರಿಯಾಂಕ್ ಖರ್ಗೆ

    – ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡ್ತಿದ್ದಾರೆ
    – ವಿಠಲ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ?

    ಬೆಂಗಳೂರು: ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಧರ್ಮಸ್ಥಳ ಚಲೋ (Dharmasthala Chalo) ಮಾಡಿದ್ದ ಬಿಜೆಪಿಯವರು (BJP) ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳ ಪ್ರಕರಣದಲ್ಲಿ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Hassan Tragedy | ಮೃತರೆಲ್ಲ ಹಳ್ಳಿಯವ್ರು, 10 ಲಕ್ಷ ಪರಿಹಾರ ಕೊಟ್ರೆ ಒಳ್ಳೆಯದು – ಸರ್ಕಾರಕ್ಕೆ ಆರ್.ಅಶೋಕ್ ಮನವಿ

    ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ? ಸೌಜನ್ಯ ಸಂಬಂಧಿ ವಿಠಲ ಗೌಡರವರು (Vittal Gowda) ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಅಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತದೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು | ಕೋರ್ಟ್ ಆವರಣದಿಂದ ಧರ್ಮಸ್ಥಳ ಯಾತ್ರೆ ಹೊರಟ ವಕೀಲರು

    ಸೌಜನ್ಯಳ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ? ವಿಠಲ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ? ಬಿಜೆಪಿ ನಾಯಕರು ತಾವು ಸೌಜನ್ಯ ಕುಟುಂಬದವರ ಪರವೋ ಅಥವಾ ಅವರು ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

  • ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ

    ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ

    ಮಂಗಳೂರು/ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ (Dharmasthala Mass Burial Case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪ್ರಕರಣದ ಸೂತ್ರಧಾರಿಗಳು ಅಂತ ಕರೆಸಿಕೊಂಡವರನ್ನು ಎಸ್‌ಐಟಿ ವಿಚಾರಣೆ ಮಾಡಿ ಕಳುಹಿಸುತ್ತಿದೆ. ಈ ನಡುವೆ ಬಂಗ್ಲೆ ಗುಡ್ಡ ಕಾಡಿನಲ್ಲಿ ಮೂರು ಅಸ್ಥಿಪಂಜರ ಪತ್ತೆಯಾಗಿದ್ದು, ಎಸ್‌ಐಟಿ ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿದೆ.

    ಬಂಗ್ಲೆ ಗುಡ್ಡ ಕಾಡಿನಲ್ಲಿ (Bangle Gudda Forest) ಮಾನವನ ಬುರುಡೆಗಳು ಪತ್ತೆಯಾಗಿವೆ. ಮೂರು ಬುರುಡೆಗಳಲ್ಲಿ 1 ಗಂಡಸಿನ ಬುರುಡೆ ಅನ್ನೋದು ಖಾತ್ರಿಯಾಗಿದೆ. ಆದಾಗ್ಯೂ ಮೂರು ಬುರುಡೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳಿಸಿ ಖಚಿತಪಡಿಸಿಕೊಳ್ಳಲು ಎಸ್‌ಐಟಿ ಸಿದ್ಧತೆ ನಡೆದಿದೆ. ಮೂರು ಬುರುಡೆಗಳು ಭೂಮಿಯ ಮೇಲ್ಪದರದಲ್ಲೇ ಪತ್ತೆಯಾದ ಕಾರಣ, ಎಸ್‌ಐಟಿ ತನಿಖೆಯನ್ನ ಇನ್ನಷ್ಟು ತೀವ್ರಗೊಳಿಸಿದೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಇಂದು ಮತ್ತೆ ಜಯಂತ್ & ಮಟ್ಟಣ್ಣನವರ್ ವಿಚಾರಣೆ
    ಇನ್ನೂ ಪ್ರಕರಣದ ಆರಂಭದಲ್ಲಿ ಚಿನ್ನಯ್ಯ ತಂದ ಬುರುಡೆ ಎಲ್ಲಿಂದ ತಂದ ಎಂಬ ಪ್ರಶ್ನೆಗೆ ಇದೀಗ ಎಸ್‌ಐಟಿ ಉತ್ತರ ಕಂಡುಹಿಡಿದಿದೆ. ಬಂಗ್ಲೆ ಗುಡ್ಡ ಕಾಡಿನಿಂದಲೇ ಚಿನ್ನಯ್ಯ ಬುರುಡೆ ತಂದಿದ್ದು ಅದಕ್ಕೆ ಸಾಕ್ಷಿ ನಾನೇ ಅಂತಾ ವಿಠಲಗೌಡ ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆ ಎಸ್‌ಐಟಿ ಮತ್ತೆ ವಿಠಲಗೌಡನನ್ನು ಕರೆದೊಯ್ದು ಬಂಗ್ಲೆ ಗುಡ್ಡ ಕಾಡಿನಲ್ಲಿ ಮಹಜರು ನಡೆಸಿತ್ತು. ಪ್ರಕರಣದ ಸೂತ್ರಧಾರಿಗಳು ಅಂತ ಕರೆಸಿಕೊಂಡವರ ವಿಚಾರಣೆಯನ್ನ ಎಸ್‌ಐಟಿ ತೀವ್ರಗೊಳಿಸಿದೆ. ಆದ್ರೆ ಯಾರ ಮೇಲೂ ಎಸ್‌ಐಟಿಗೆ ಪ್ರಬಲ ಸಾಕ್ಷ್ಯ ಲಭ್ಯವಾಗುತ್ತಿಲ್ಲ.

    ಇನ್ನು ಇಂದು ಸಹ ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್ (Girish Mattannavar) ವಿಚಾರಣೆ ನಡೆಯಲಿದೆ. ನಿನ್ನೆ ವಿಚಾರಣೆ ಮುಗಿಸಿ ಹೊರಟ ವೇಳೆ ಮಾತಾಡಿದ ಜಯಂತ್, ನನಗೆ ಎಸ್‌ಐಟಿ ಹೊಡೆದಿಲ್ಲ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಕಾನೂನು ವಿಚಾರದಲ್ಲಿ ನಾನು ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆ ಅನುಭವಿಸೋಕೆ ತಯಾರಿದ್ದೇನೆ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಹೆಣಗಳ ರಾಶಿಯೇ ಸಿಕ್ಕಿದೆ: ವಿಠಲ ಗೌಡ ಸ್ಫೋಟಕ ಹೇಳಿಕೆ

    ವಿಡಿಯೋ ರಿಲೀಸ್ ಮಾಡಿ ಸೌಜನ್ಯ ಮಾವ ಸ್ಫೋಟಕ ಹೇಳಿಕೆ
    ಇನ್ನೂ ಬುರುಡೆ ಕೇಸ್‌ಗೆ ಸೌಜನ್ಯ ಮಾವ ವಿಠಲ್‌ಗೌಡ ಸ್ಫೋಟಕ ತಿರುವು ಕೊಟ್ಟಿದ್ದಾರೆ. ಬಂಗ್ಲೆ ಗುಡ್ಡಕ್ಕೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದ ವೇಳೆ ಹೆಣಗಳ ರಾಶಿ ಸಿಕ್ಕಿದೆ. ಮೂರು ಮನುಷ್ಯರ ಕಳೆಬರಹ ಸಿಕ್ಕಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ಸುಮಂತ್ ವಿರುದ್ಧ ದೂರು; ಹಣ ಪಡೆದಿದ್ದರೆ ಸಾಬೀತು ಮಾಡಲಿ – ಯೂಟ್ಯೂಬರ್ ಅಭಿಷೇಕ್ ಸವಾಲು

  • ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    – ದಕ್ಷಿಣ ಕನ್ನಡ ಎಸ್‌ಪಿಗೆ ದೂರು ಸಲ್ಲಿಸಿದ ಸಾಮಾಜಿಕ ಹೋರಾಟಗಾರ

    ಮಂಗಳೂರು: ಸೌಜನ್ಯ ಕೊಲೆ ಮಾಡಿದ್ದು ಆಕೆಯ ಮಾವ ವಿಠಲ ಗೌಡ (Vittal Gowda) ಎಂದು ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna) ಆರೋಪಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್ ಕುಮಾರ್‌ಗೆ ದೂರು ಅರ್ಜಿ ಸಲ್ಲಿಸಿದ್ದಾರೆ.

    ಸೌಜನ್ಯಳ ಮೇಲೆ ಸೋದರಮಾವ ವಿಠಲ ಗೌಡಗೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಬಳಸಿಕೊಳ್ಳಲು ಬಹಳ ಸಮಯದಿಂದ ಹವಣಿಸುತ್ತಿದ್ದ. ಒಪ್ಪದೇ ಇದ್ದಂತ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡಕ್ಕೆ ಸೌಜನ್ಯ ಮಾವ ವಿಠಲಗೌಡನ ಕರೆದೊಯ್ದ SIT

    ಸಾಂದರ್ಭಿಕ ಸಾಕ್ಷಿಗಳನ್ನು ಇಟ್ಟುಕೊಂಡು ದಕ್ಷಿಣ ಕನ್ನಡ ಎಸ್ಪಿ ತನಿಖೆ ನಡೆಸಬೇಕೆಂದು ಸ್ನೇಹಮಯಿ ಕೃಷ್ಣ ದೂರಿನ ಮೂಲಕ ಮಂಪರು ಪರೀಕ್ಷೆ ಮಾಡಲು ಆಗ್ರಹಿಸಿದ್ದಾರೆ.

    ಸೌಜನ್ಯ ತಾಯಿ ಕುಸುಮಾವತಿಗೂ ಸಹೋದರ ವಿಠಲ ಗೌಡನ ಮೇಲೆ ಸಂಶಯವಿತ್ತು. ಸೌಜನ್ಯ ಮೃತದೇಹವನ್ನು ನೋಡಲು ಕುಸುಮಾವತಿ ಹೋಗಿರಲಿಲ್ಲ. ಸಂತೋಷ್ ರಾವ್ ಅವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿರಬಹುದು. ಈ ಬಗ್ಗೆ ನಾನು ಬಹಳ ದಿನಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೇಸ್‌| ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಉದಯ್‌ ಜೈನ್‌ ಪತ್ರ

    ಸಂಪೂರ್ಣ ಮರುತನಿಖೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ವಿಠಲ ಗೌಡನ ಮಂಪರು ಪರೀಕ್ಷೆ ಮಾಡಬೇಕು. ಮಂಪರು ಪರೀಕ್ಷೆಯಿಂದ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.