Tag: Visva-Bharati University

  • ಭಯೋತ್ಪಾದನೆ, ಗಲಭೆಕೋರರಲ್ಲಿ ಬಹುತೇಕರು ಶಿಕ್ಷಿತರು: ಮೋದಿ

    ಭಯೋತ್ಪಾದನೆ, ಗಲಭೆಕೋರರಲ್ಲಿ ಬಹುತೇಕರು ಶಿಕ್ಷಿತರು: ಮೋದಿ

    – ಇದು ಸಿದ್ಧಾಂತವಲ್ಲ, ಮನಸ್ಥಿತಿಯಾಗಿದೆ

    ನವದೆಹಲಿ: ವಿಶ್ವದಲ್ಲಿ ಭಯೋತ್ಪಾದನೆ ಹಾಗೂ ಗಲಭೆ ಸೃಷ್ಟಿಸುತ್ತಿರುವವರಲ್ಲಿ ಬಹುತೇಕರು ಸುಶಿಕ್ಷಿತರೇ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

    ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ವಿಶ್ವದಲ್ಲಿ ಭಯೋತ್ಪಾದನೆ ಹಾಗೂ ಗಲಭೆ ಎಬ್ಬಿಸುತ್ತಿರುವವರಲ್ಲಿ ಬಹುತೇಕರು ಸುಶಿಕ್ಷಿತರೇ ಆಗಿದ್ದಾರೆ. ಇನ್ನೊಂದೆಡೆ ಕೊರೊನಾ ಸಮಯದಲ್ಲಿ ಜನರನ್ನು ಕಾಪಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಸಹ ಇದ್ದಾರೆ. ಇದು ಸಿದ್ಧಾಂತವಲ್ಲ, ಅವರ ಮನಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ.

    ಶಿಕ್ಷಣದ ಮೂಲಕ ಉಗ್ರವಾದವನ್ನು ಹತ್ತಿಕ್ಕಬಹುದು ಎಂದು ನಾಗರಿಕ ಸಮಾಜ ಹೇಳುತ್ತಿದ್ದರೆ, ಇನ್ನೊಂದೆಡೆ ಜಸ್ಟ್ ಸೆಕ್ಯುರಿಟಿಯ ವರದಿ ಪ್ರಕಾರ ಭಯೋತ್ಪಾದಕರಲ್ಲಿ ಬಹುತೇಕರು ಸುಶಿಕ್ಷತರೇ ಆಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಸಹ ಇದನ್ನೇ ಉಚ್ಚರಿಸಿದ್ದು, ಭಯೋತ್ಪಾದಕರ ಪೈಕಿ ಬಹುತೇಕರು ಶಿಕ್ಷಿತರು ಎಂದು ಹೇಳಿದ್ದಾರೆ.

  • ದಿಢೀರ್ ಶೇ.20ರಷ್ಟು ಶುಲ್ಕ ಹೆಚ್ಚಳ – ವಿವಿಯ 200 ಸಿಬ್ಬಂದಿಯನ್ನು ಕೂಡಿ ಹಾಕಿದ ವಿದ್ಯಾರ್ಥಿಗಳು

    ದಿಢೀರ್ ಶೇ.20ರಷ್ಟು ಶುಲ್ಕ ಹೆಚ್ಚಳ – ವಿವಿಯ 200 ಸಿಬ್ಬಂದಿಯನ್ನು ಕೂಡಿ ಹಾಕಿದ ವಿದ್ಯಾರ್ಥಿಗಳು

    ಕೋಲ್ಕತ್ತಾ: ಕಾಲೇಜು ಶುಲ್ಕವನ್ನು ದಿಢೀರ್ ಶೇ.20ರಷ್ಟು ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರೂ ಸೇರಿದಂತೆ 200 ಜನ ಸಿಬ್ಬಂದಿಯನ್ನು ಕೂಡಿ ಹಾಕಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಬಿರ್ಭಮ್‍ನ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾದ ಉಪನ್ಯಾಸಕರು ಸಭಾಂಗಣದಲ್ಲಿ ಕುಳಿತು ಕಾಲ ಕಳೆಯುವಂತಾಗಿದೆ. ವಿಶ್ವವಿದ್ಯಾಲಯದ ಎಲ್ಲಾ ಗೇಟ್‍ಗಳಿಗೆ ವಿದ್ಯಾರ್ಥಿಗಳು ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಉಪಕುಲಪತಿ ಅವರು, ವಿದ್ಯಾರ್ಥಿಗಳ ವರ್ತನೆಯಿಂದ ದುಃಖಿತನಾಗಿದ್ದೇನೆ. ಅವರೊಂದಿಗೆ 5 ಗಂಟೆಗಳ ಚರ್ಚೆ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.