Tag: Vistara Flights

  • ಸೆಪ್ಟೆಂಬರ್ 3 ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ

    ಸೆಪ್ಟೆಂಬರ್ 3 ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ

    ನವದೆಹಲಿ: ವಿಸ್ತಾರಾ (Vistara) ಮತ್ತು ಏರ್ ಇಂಡಿಯಾ (Air India) ನಡುವಿನ ಬಹು ನಿರೀಕ್ಷಿತ ವಿಲೀನವು ನವೆಂಬರ್ 11 ಮಧ್ಯರಾತ್ರಿ 12ರ ವೇಳೆಗೆ ಅಂತಿಮಗೊಳ್ಳಲಿದೆ. ಸಿಂಗಾಪುರ್ ಏರ್‌ಲೈನ್ಸ್ (Singapore Airlines) ವಿದೇಶಿ ನೇರ ಹೂಡಿಕೆಗೆ ಭಾರತ ಸರ್ಕಾರದಿಂದ ಅನುಮೋದನೆ ಪಡೆದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆಯುತ್ತಿದೆ.

    ನ.11ರ ಬಳಿಕ ವಿಸ್ತಾರಾ ವಿಮಾನಗಳು ಏರ್ ಇಂಡಿಯಾ ಬ್ರ‍್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸೆ.3ರಿಂದ ವಿಸ್ತಾರಾ ಫ್ಲೈಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ವಿಸ್ತಾರಾ ಫ್ಲೈಟ್‌ಗಳ ಬುಕಿಂಗ್ ಅನ್ನು ಏರ್ ಇಂಡಿಯಾದ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ನ.11ರವರೆಗೆ ಮಾತ್ರ ವಿಸ್ತಾರ ಸಾಮಾನ್ಯ ವಿಮಾನಗಳು ಕಾರ್ಯಾನಿರ್ವಹಿಸಲಿವೆ.ಇದನ್ನೂ ಓದಿ: ನಿವಿ ಈಗ ಚಂದನ್‌ನ ಮುದ್ದು ರಾಕ್ಷಸಿ

    ಈ ವಿಲೀನದ ಕುರಿತು ಮಾತನಾಡಿದ ವಿಸ್ತಾರಾ ಸಿಇಒ ವಿನೋದ್ ಕಣ್ಣನ್ (Vinod Kannan) ಅವರು, ಈ ಸಮಯದಲ್ಲಿ ಗ್ರಾಹಕರಿಗೆ ಸುಗಮ ಸಂವಹನ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡೂ ಏರ್‌ಲೈನ್‌ಗಳು ಬದ್ಧವಾಗಿರುತ್ತವೆ. ನಮ್ಮ ಗ್ರಾಹಕರಿಗೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ತಿಳಿಯಲು ನಮ್ಮ ತಂಡಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

    ಮೊದಲ ಬಾರಿಗೆ ನವೆಂಬರ್ 2022ರಲ್ಲಿ ಘೋಷಿಸಲಾದ ವಿಲೀನವು ಏರ್ ಇಂಡಿಯಾವನ್ನು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದನ್ನಾಗಿಸಲಿದೆ. ಹೆಚ್ಚು ವ್ಯಾಪಕವಾದ ನೆಟ್‌ವರ್ಕ್ ಮತ್ತು ವರ್ಧಿತ ಸೇವಾ ಕೊಡುಗೆಗಳನ್ನು ನೀಡುವ ಕಾರ್ಯತಂತ್ರದ ಕಾರಣದಿಂದಾಗಿ ಈ ವಿಲೀನ ಮಾಡಲಾಗಿದೆ.ಇದನ್ನೂ ಓದಿ: ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್

    ಪ್ರಸ್ತುತ ಟಾಟಾ ಗ್ರೂಪ್‌ನ ವಿಸ್ತಾರ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿದೆ. ಭಾರತ ಸರ್ಕಾರದ ಅನುಮತಿಯೊಂದಿಗೆ ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ವಿಸ್ತರಿಸಿದ ಏರ್ ಇಂಡಿಯಾದಲ್ಲಿ ಶೇ.25.1 ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಏರ್ ಇಂಡಿಯಾ ಜೊತೆ ಸಿಂಗಾಪೂರ್ ಏರ್‌ಲೈನ್ಸ್ ಹೂಡಿಕೆ ಮಾಡುವುದರಿಂದ ಏರ್ ಇಂಡಿಯಾವನ್ನು ದೇಶಿಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಮಾನಯಾನ ಕಂಪನಿಯನ್ನಾಗಿ ಬೆಳೆಸಲಿದೆ.

  • ದಿನಕ್ಕೆ 25-30 ವಿಮಾನಗಳ ಹಾರಾಟ ಸ್ಥಗಿತ: ವಿಸ್ತಾರ ಏರ್‌ಲೈನ್ಸ್‌

    ದಿನಕ್ಕೆ 25-30 ವಿಮಾನಗಳ ಹಾರಾಟ ಸ್ಥಗಿತ: ವಿಸ್ತಾರ ಏರ್‌ಲೈನ್ಸ್‌

    ನವದೆಹಲಿ: ಪೈಲಟ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ದಿನಕ್ಕೆ 25-30 ವಿಮಾನಗಳ ಹಾರಾಟ ರದ್ದುಗೊಳಿಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ (Vistara airlines) ಭಾನುವಾರ ತಿಳಿಸಿದೆ.

    ಪರಿಸ್ಕೃತ ವೇತನದ ವಿರುದ್ಧ ಅಸಮಾಧಾನಗೊಂಡಿರುವ ಪೈಲಟ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್‌ನಲ್ಲಿ ಪೈಲಟ್‌ಗಳ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ವಿಸ್ತಾರದಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಕಡಿತಗೊಳಿಸಿರುವ ಬಗ್ಗೆ ಘೋಷಣೆ ಹೊರಬಿದ್ದಿದೆ.

    ರದ್ದತಿಗಳನ್ನು ಹೆಚ್ಚಾಗಿ ದೇಶೀಯ ನೆಟ್‌ವರ್ಕ್‌ನಲ್ಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಏರ್‌ಲೈನ್ ತಿಳಿಸಿದೆ.

    ದಿನಕ್ಕೆ ಸುಮಾರು 25-30 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಲಾಗಿದೆ. ಅಂದರೆ ನಾವು ಕಾರ್ಯನಿರ್ವಹಿಸುತ್ತಿದ್ದ ಸಾಮರ್ಥ್ಯದ ಸರಿಸುಮಾರು 10% ಕಡಿತಗೊಳಿಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ ಮಾಹಿತಿ ನೀಡಿದೆ.

    ಮಾರ್ಚ್‌ 31 ರಿಂದ ಆರಂಭವಾಗಿರುವ ಬೇಸಿಗೆ ವೇಳಾಪಟ್ಟಿ ಪ್ರಕಾರ, ವಿಸ್ತಾರ ನಿತ್ಯ 300 ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುತ್ತಿದೆ.