Tag: Vistara Airlines

  • ದಿನಕ್ಕೆ 25-30 ವಿಮಾನಗಳ ಹಾರಾಟ ಸ್ಥಗಿತ: ವಿಸ್ತಾರ ಏರ್‌ಲೈನ್ಸ್‌

    ದಿನಕ್ಕೆ 25-30 ವಿಮಾನಗಳ ಹಾರಾಟ ಸ್ಥಗಿತ: ವಿಸ್ತಾರ ಏರ್‌ಲೈನ್ಸ್‌

    ನವದೆಹಲಿ: ಪೈಲಟ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ದಿನಕ್ಕೆ 25-30 ವಿಮಾನಗಳ ಹಾರಾಟ ರದ್ದುಗೊಳಿಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ (Vistara airlines) ಭಾನುವಾರ ತಿಳಿಸಿದೆ.

    ಪರಿಸ್ಕೃತ ವೇತನದ ವಿರುದ್ಧ ಅಸಮಾಧಾನಗೊಂಡಿರುವ ಪೈಲಟ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್‌ನಲ್ಲಿ ಪೈಲಟ್‌ಗಳ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ವಿಸ್ತಾರದಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಕಡಿತಗೊಳಿಸಿರುವ ಬಗ್ಗೆ ಘೋಷಣೆ ಹೊರಬಿದ್ದಿದೆ.

    ರದ್ದತಿಗಳನ್ನು ಹೆಚ್ಚಾಗಿ ದೇಶೀಯ ನೆಟ್‌ವರ್ಕ್‌ನಲ್ಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಏರ್‌ಲೈನ್ ತಿಳಿಸಿದೆ.

    ದಿನಕ್ಕೆ ಸುಮಾರು 25-30 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಲಾಗಿದೆ. ಅಂದರೆ ನಾವು ಕಾರ್ಯನಿರ್ವಹಿಸುತ್ತಿದ್ದ ಸಾಮರ್ಥ್ಯದ ಸರಿಸುಮಾರು 10% ಕಡಿತಗೊಳಿಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ ಮಾಹಿತಿ ನೀಡಿದೆ.

    ಮಾರ್ಚ್‌ 31 ರಿಂದ ಆರಂಭವಾಗಿರುವ ಬೇಸಿಗೆ ವೇಳಾಪಟ್ಟಿ ಪ್ರಕಾರ, ವಿಸ್ತಾರ ನಿತ್ಯ 300 ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುತ್ತಿದೆ.

  • ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ನವದೆಹಲಿ: ವಿಮಾನದಲ್ಲಿ (Flight) ವ್ಯಕ್ತಿಯೊಬ್ಬ ಫೋನ್‌ನಲ್ಲಿ ಬಾಂಬ್ (Bomb) ಕುರಿತು ಸಂಭಾಷಣೆ ಮಾಡಿದ್ದಕ್ಕೆ ಆತನನ್ನು ಬಂಧಿಸಿರುವ ಘಟನೆ ದೆಹಲಿಯ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport)  ನಡೆದಿದೆ.

    ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಸ್ತಾರ ವಿಮಾನ (Vistara Airlines) ಸಂಖ್ಯೆ ಯುಕೆ-981ರಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಆತ ತನ್ನ ಫೋನ್‌ನಲ್ಲಿ ಬಾಂಬ್ ಕುರಿತು ಮಾತನಾಡುತ್ತಿದ್ದ. ಇದನ್ನು ಸಹ ಪ್ರಯಾಣಿಕರೊಬ್ಬರು ಕೇಳಿಸಿಕೊಂಡಿದ್ದಾರೆ.

    ಆರೋಪಿ ಬಾಂಬ್ ಕುರಿತು ವಿಮಾನದಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ತಕ್ಷಣ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿ ಆರೋಪಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (CIF) ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ – ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರಿಗೆ?

    ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಫೋನ್‌ನಲ್ಲಿ ಆತ ಬಾಂಬ್ ಕುರಿತು ಸಂಭಾಷಣೆ ಮಾಡುತ್ತಿದ್ದುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 27 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ: ಮೊದಲಾಗಿದ್ದು ಬೆಂಗಳೂರಿನಲ್ಲಿ

  • ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    ಮುಂಬೈ: ಅಬುಧಾಬಿಯಿಂದ ಮುಂಬೈಗೆ (Mumbai) ಆಗಮಿಸಿದ ವಿಸ್ತಾರಾ ವಿಮಾನದಲ್ಲಿ (Vistara Airlines) ಸೋಮವಾರ ಇಟಲಿಯ ಮಹಿಳಾ (Italian Woman) ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆ ಎಕನಾಮಿ ಟಿಕೆಟ್ ಪಡೆದಿದ್ದರೂ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾಳೆ. ಇದನ್ನು ತಡೆಯಲು ಪ್ರಯತ್ನಿಸಿದ ಕ್ಯಾಬಿನ್ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೇ ತಾನು ಧರಿಸಿದ್ದ ಕೆಲವು ಬಟ್ಟೆಗಳನ್ನು ಕಳಚಿ ಅರೆಬೆತ್ತಲಾಗಿ ಓಡಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳ ಮೇಲೆ ಐಟಿ ದಾಳಿ

     

    ವಿಮಾನದಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆ ಇಟಲಿಯ ಪಾವೊಲಾ ಪೆರುಸಿಯೋ ಎಂದು ಗುರುತಿಸಲಾಗಿದೆ. ಆಕೆ ಕುಡಿದ ಮತ್ತಿನಲ್ಲಿದ್ದಳು ಎನ್ನಲಾಗಿದೆ. ಆಕೆಯ ವಿರುದ್ಧ ಏರ್ ವಿಸ್ತಾರ ಯುಕೆ-256 ವಿಮಾನದಲ್ಲಿದ್ದ ಸಿಬ್ಬಂದಿ ದೂರು ನೀಡಿದ್ದಾರೆ. ಮಹಿಳೆಯ ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಮಹಿಳೆಯ ಬಂಧನದ ಬಳಿಕ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ನವದೆಹಲಿ: 2024ರ ಮಾರ್ಚ್ ವೇಳೆಗೆ ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ (Air India) ವಿಸ್ತಾರಾ ಏರ್‌ಲೈನ್ಸ್ (Vistara Airlines) ಅನ್ನು ವಿಲೀನಗೊಳಿಸುವುದಾಗಿ ಟಾಟಾ ಸಮೂಹ (TaTa Groups) ಅಧಿಕೃತವಾಗಿ ಘೋಷಿಸಿದೆ.

    ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ  ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೌಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗಾಪುರ ಏರ್‌ಲೈನ್ಸ್ (Singapore Airlines) ಕಳೆದ ಅಕ್ಟೋಬರ್‌ನಲ್ಲೇ ತಿಳಿಸಿತ್ತು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ಪ್ರಸ್ತುತ ವಿಸ್ತಾರಾದಲ್ಲಿ (Vistara Airlines) ಟಾಟಾ ಸಮೂಹವು ಶೇ.51ರಷ್ಟು ಪಾಲು ಹೊಂದಿದೆ. ಉಳಿದ ಶೇ.49 ಷೇರು ಸಿಂಗಾಪುರ ಏರ್‌ಲೈನ್ಸ್‌ನಲ್ಲೇ ಇದೆ. ಇದೀಗ ವಹಿವಾಟಿನ ಭಾಗವಾಗಿ ಎಸ್‌ಐಎ, ಏರ್ ಇಂಡಿಯಾದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?

    ಈಗಾಗಲೇ ಏರ್ ಇಂಡಿಯಾದ ಪೂರ್ಣ ಮಾಲೀಕತ್ವ ಹೊಂದಿರುವ ಟಾಟಾ ಸಮೂಹ, ಏರ್‌ಏಷ್ಯಾ ಇಂಡಿಯಾ (AirAsia India) ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಹೂಡಿಕೆಯ ಭಾಗವಾಗಿ ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತು.

    ಸದ್ಯ 2024ರ ಮಾರ್ಚ್ ತಿಂಗಳೊಳಗೆ ವಿಲೀನಗೊಳಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕತಾರ್ ವಿಶ್ವದ ಬೆಸ್ಟ್ ಏರ್‌ಲೈನ್ – ಟಾಪ್ 20 ಸಂಸ್ಥೆಗಳಲ್ಲಿ ಕತಾರ್‌ಗೆ No-1 ಸ್ಥಾನ

    ಕತಾರ್ ವಿಶ್ವದ ಬೆಸ್ಟ್ ಏರ್‌ಲೈನ್ – ಟಾಪ್ 20 ಸಂಸ್ಥೆಗಳಲ್ಲಿ ಕತಾರ್‌ಗೆ No-1 ಸ್ಥಾನ

    ರಿಯಾದ್: ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ (Skytrax World Airline) ಸಂಸ್ಥೆ ನಡೆಸಿದ ಗ್ರಾಹಕರ ಆನ್‌ಲೈನ್ ಸಮೀಕ್ಷೆಯಲ್ಲಿ ಸೌದಿ ಅರೇಬಿಯಾದ (Soudi Arabia) ಕತಾರ್ ಏರ್‌ವೇಸ್ (Qatar Airways) ಅತ್ಯುತ್ತಮ ಏರ್‌ಲೈನ್ ಸಂಸ್ಥೆ ಎಂದು ಗುರುತಿಸಿಕೊಂಡಿದ್ದು, ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಅವಾರ್ಡ್ಸ್ 2022 ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

    ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್, ಜಪಾನೀಸ್ ಮತ್ತು ಚೈನೀಸ್ ಭಾಷೆಗಳಲ್ಲಿ 2021 ಸೆಪ್ಟೆಂಬರ್‌ನಿಂದ 2022 ಆಗಸ್ಟ್ ವರೆಗೆ ನಡೆಸಿದ ವರ್ಲ್ಡ್ ಏರ್‌ಲೈನ್ (World Airline) ಗ್ರಾಹಕರ ಸಮೀಕ್ಷೆಯಲ್ಲಿ ಕತಾರ್‌ಗೆ ಬೆಸ್ಟ್ ಏರ್‌ಲೈನ್ ಸಂಸ್ಥೆ ಎಂಬ ಫಲಿತಾಂಶ ಬಂದಿದೆ.

    ಅಂತಿಮ ಸುತ್ತಿನಲ್ಲಿ 350ಕ್ಕೂ ಹೆಚ್ಚು ಏರ್‌ಲೈನ್ ಸಂಸ್ಥೆಗಳನ್ನು ಪಟ್ಟಿ ಮಾಡಲಾಗಿತ್ತು. ಅವುಗಳಲ್ಲಿ ಟಾಪ್-20 ಸಂಸ್ಥೆಗಳನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಪೈಕಿ ಕತಾರ್ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ಸಿಂಗಾಪುರ್ ಏರ್‌ಲೈನ್ಸ್ (Singapore Airlines) ಲಿಮಿಟೆಡ್ ಮತ್ತು ಎಮಿರೇಟ್ಸ್ (Emirates) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಆದರೆ ಕಳೆದ ವರ್ಷದ 6ನೇ ಸ್ಥಾನದಲ್ಲಿದ್ದ ಕ್ಯಾಥೆ ಪೆಸಿಫಿಕ್ ಏರ್‌ಲೈನ್ಸ್ 16ನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ

    ಕೋವಿಡ್ ಸಾಂಕ್ರಾಮಿಕದ (Covid-19) ಸಂದರ್ಭದಲ್ಲಿ ಹಾಗೂ ಅದರ ನಂತರ ಸತತವಾಗಿ ಹಾರಾಟ ನಡೆಸಿದ ಕತಾರ್ ವಿಶ್ವದಾದ್ಯಂತ ಸುಮಾರು 30 ಸಂಸ್ಥೆಗಳನ್ನು ಒಳಗೊಂಡಿದೆ. ಜೊತೆಗೆ ಕತಾರ್ ವಿಮಾನಯಾನವನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ ಎಂದು ಸ್ಕೈಟ್ರಾಕ್ಸ್ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ್ದಕ್ಕೆ ತರಗತಿಗೆ ಪ್ರವೇಶ ನಿಷೇಧ – ವ್ಯಾಪಕ ಪ್ರತಿಭಟನೆ ಬಳಿಕ ಶಾಲೆ ಬಿಡಿಸಿದ ಪೋಷಕರು

    ಟಾಪ್-20 ಏರ್‌ಲೈನ್ಸ್ ಯಾವುವು?
    ಕತಾರ್ ಏರ್‌ವೇಸ್, ಸಿಂಗಾಪುರ್ ಏರ್‌ಲೈನ್ಸ್, ಎಮಿರೇಟ್ಸ್, ನಿಪ್ಪಾನ್ ಏರ್‌ವೇಸ್, ಕ್ವಾಂಟಾಸ್ ಏರ್‌ವೇಸ್, ಜಪಾನ್ ಏರ್‌ಲೈನ್ಸ್, ಟರ್ಕ್ ಹವಾ ಯೊಲ್ಲರಿ (ಟರ್ಕಿಶ್ ಏರ್‌ಲೈನ್ಸ್), ಏರ್ ಫ್ರಾನ್ಸ್, ಕೊರಿಯನ್ ಏರ್, ಸ್ವಿಸ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್, ಇತಿಹಾದ್ ಏರ್‌ವೇಸ್, ಚೀನಾ ಸೌತ್‌ರನ್, ಹೈನಾನ್ ಏರ್‌ಲೈನ್ಸ್, ಲುಫ್ಥಾನ್ಸ, ಕ್ಯಾಥೆ ಪೆಸಿಫಿಕ್, ಕೆಎಲ್‌ಎಂ, ಇವಿಎ ಏರ್, ವರ್ಜಿನ್ ಅಟ್ಲಾಂಟಿಕ್, ವಿಸ್ತಾರಾ ಏರ್‌ಲೈನ್ ಕ್ರಮವಾಗಿ 1 ರಿಂದ 20 ಸ್ಥಾನಗಳಲ್ಲಿವೆ.

    Live Tv
    [brid partner=56869869 player=32851 video=960834 autoplay=true]