Tag: Vistara

  • ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

    ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

    ನವದೆಹಲಿ: ಏರ್ ಇಂಡಿಯಾ (Air India) ಹಾಗೂ ವಿಸ್ತಾರ (Vistara) ವಿಮಾನಯಾನ ಸಂಸ್ಥೆಗಳ ವಿಲೀನದ ಬಳಿಕ ಮೊದಲ ವಿಮಾನ ಹಾರಾಟಗೊಂಡಿದೆ.

    ಎ12286 ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ವಿಮಾನವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 10:07ಕ್ಕೆ ಕತಾರ್‌ನ ದೋಹಾದಿಂದ ಮುಂಬೈಗೆ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಮುಂಬೈಗೆ ತಲುಪಲಿದೆ. ಟಾಟಾ ಗ್ರೂಪ್ಸ್‌ನ (TATA Groups) ಭಾಗವಾಗಿರುವ ಎರಡು ಸಂಸ್ಥೆಗಳು ವಿಲೀನಗೊಂಡಿದ್ದು, ವಿಲೀನವಾದ ಬಳಿಕ ಮೊದಲ ಅಂತರರಾಷ್ಟ್ರೀಯ ವಿಮಾನ ಹಾರಾಟಗೊಂಡಿದೆ. ಇನ್ನೂ ಭಾರತದಲ್ಲಿ ಮಂಗಳವಾರ ನಸುಕಿನ ಜಾವ 01:30 ಗಂಟೆಗೆ ಮುಂಬೈನಿಂದ (Mumbai) ದೆಹಲಿಗೆ (Delhi) ಮೊದಲ ವಿಮಾನ ಹಾರಾಟಗೊಂಡಿದೆ.ಇದನ್ನೂ ಓದಿ: ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

    ವಿಲೀನದ ನಂತರ ಏರ್ ಇಂಡಿಯಾ ನಿರ್ವಹಿಸುತ್ತಿರುವ ವಿಸ್ತಾರ ವಿಮಾನಗಳಿಗಾಗಿ ‘ಎ12ಎಕ್ಸ್ಎಕ್ಸ್ಎಕ್ಸ್’ ಕೋಡ್‌ನ್ನು ಬಳಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಬುಕ್ಕಿಂಗ್ ಸಮಯದಲ್ಲಿ ವಿಸ್ತಾರ ವಿಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ.

    ಟಾಟಾ ಗ್ರೂಪ್‌ನ ಭಾಗವಾಗಿರುವ ಎರಡೂ ವಿಮಾಯಾನ ಸಂಸ್ಥೆಗಳ ವಿಲೀನವು ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಬಲವರ್ಧನೆಯನ್ನು ಸೂಚಿಸುತ್ತದೆ. ವಿಸ್ತಾರ ಇದು ಟಾಟಾಸ್ ಮತ್ತು ಸಿಂಗಾಪುರ್ ಏರಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದ್ದು, ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರಲೈನ್ಸ್ (Singapore Airlines) ಏರ್ ಇಂಡಿಯಾದ 25.1 ಶೇಕಡಾ ಪಾಲನ್ನು ಪಡೆಯುತ್ತದೆ.ಇದನ್ನೂ ಓದಿ: ಪಿಜಿ ಆಯುಷ್‌ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ

  • ಇಂಡಿಗೋ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಸೇರಿ ಮತ್ತೆ 95 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

    ಇಂಡಿಗೋ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಸೇರಿ ಮತ್ತೆ 95 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

    ನವದೆಹಲಿ: ವಿಮಾನಗಳಿಗೆ ಬಾಂಬ್‌ ಬೆದರಿಕೆ (Flight Bomb Threat) ಕರೆಗಳ ತಲೆನೋವು ಹೆಚ್ಚಾಗಿದೆ. ಇಂದು ಒಂದೇ ದಿನ ಮತ್ತೆ 95 ಫ್ಲೈಟ್‌ಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ.

    25 ಆಕಾಶ ಏರ್ ವಿಮಾನಗಳು, ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್‌ ಮತ್ತು ವಿಸ್ತಾರದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ 10 ದಿನಗಳಲ್ಲಿ 250 ಕ್ಕೂ ಅಧಿಕ ವಿಮಾನಗಳಿಗೆ ಹೀಗೆ ಬೆದರಿಕೆ ಕರೆಗಳು ಬಂದಿವೆ. ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತಿಸುತ್ತಿರುವ ಹೊತ್ತಲ್ಲೂ ಬೆದರಿಕೆ ಕರೆಗಳು ನಿಂತಿಲ್ಲ. ಇದನ್ನೂ ಓದಿ: ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾವು

    ಈ ಮೊದಲು ದಿನ ಬಿಟ್ಟು ದಿನ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬಂದಿವೆ. ಅವು ವಂಚನೆ ಕರೆಗಳು ಎಂದು ನಂತರ ಸ್ಪಷ್ಟವಾಯಿತು. ಬೆದರಿಕೆ ಕರೆ ಹಿನ್ನೆಲೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿ ನೂರಾರು ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ಅರೆಸೇನಾ ಸಿಬ್ಬಂದಿ ಮತ್ತು ವಾಯುಯಾನ ಅಧಿಕಾರಿಗಳಿಗೆ ಭದ್ರತೆಯು ತಲೆನೋವಾಗಿ ಪರಿಣಮಿಸಿದೆ.

    ಬಾಂಬ್ ಬೆದರಿಕೆಯ ಸುಳ್ಳು ಕರೆಗಳಲ್ಲಿ ಭಾಗಿಯಾಗಿರುವವರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲು ಸರ್ಕಾರ ಯೋಜಿಸಿದೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್‌

    ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಕ್ಸ್‌ ಖಾತೆಗಳಲ್ಲಿ ಅನಾಮಧೇಯ ಪೋಸ್ಟ್‌ಗಳ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ನವದೆಹಲಿ: ದೆಹಲಿಯಿಂದ (Delhi) ಪುಣೆಗೆ (Pune) ಹೊರಟಿದ್ದ ವಿಸ್ತಾರಾ UK971 ವಿಮಾನಕ್ಕೆ (Flight) ಬಾಂಬ್ ಬೆದರಿಕೆ ಕರೆ (Bomb Threat Call)ಬಂದಿದೆ. ಬೆಳಗ್ಗೆ 7:30ರ ಸುಮಾರಿಗೆ ಬೋರ್ಡಿಂಗ್ ಪ್ರಗತಿಯಲ್ಲಿದ್ದಾಗ ಜಿಎಂಆರ್ ಕಾಲ್ ಸೆಂಟರ್‌ಗೆ ಕರೆ ಮಾಡಿರುವ ಅಪರಿಚಿತರು ಬಾಂಬ್ ಬೆದರಿಕೆ ಒಡ್ಡಿದ್ದಾರೆ.

    ಕರೆ ಬೆನ್ನಲ್ಲೆ ಬೋರ್ಡಿಂಗ್ ನಿಲ್ಲಿಸಿ, ಪ್ರತ್ಯೇಕವಾದ ಸ್ಥಳದಲ್ಲಿ ವಿಮಾನದ ತಪಾಸಣೆ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಭದ್ರತಾ ತಂಡಗಳು ವಿಮಾನ ಪರಿಶೀಲನೆ ಮಾಡಿದ್ದು ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

    ಈ ನಡುವೆ ಎಲ್ಲಾ ಪ್ರಯಾಣಿಕರು ಮತ್ತು ಅವರ ಲಗೇಜುಗಳನ್ನು ಸುರಕ್ಷಿತವಾಗಿಡಲಾಗಿದೆ. ಪ್ರಯಾಣಿಕರಿಗೆ ಉಪಹಾರ ನೀಡುವುದು ಸೇರಿದಂತೆ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]