Tag: Vismaya

  • ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

    ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

    ನ್ನಡ ಚಿತ್ರರಂಗದ ಹೆಸರಾಂತ ನಟಿ ಶ್ರುತಿ ಹರಿಹರನ್ (Shruti Hariharan) ಮೀಟೂ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಸಾಕ್ಷಿಗಳು ಇಲ್ಲ ಎನ್ನುವ ಕಾರಣಕ್ಕಾಗಿ ಜನವರಿ 2022ರಂದು ಬಿ ರಿಪೋರ್ಟ್ (B Report) ಸಲ್ಲಿಸಿದ್ದರು. ಈ ರಿಪೋರ್ಟ್ ವಿರುದ್ಧ ಶ್ರುತಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದರು.

    ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಚಾಲೇಂಜ್ ಮಾಡಿದ್ದ ಶ್ರುತಿ ಹರಿಹರನ್ ಗೆ ಈಗ ಮತ್ತೆ ಪೊಲೀಸರು ನೋಟಿಸ್ (Notice) ನೀಡಿದ್ದಾರೆ. ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಬಳಿಕ ಈ ನೋಟಿಸ್  ನೀಡಲಾಗಿದೆ.

    ಏನಿದು ಪ್ರಕರಣ ?

    ಶ್ರುತಿ ಹರಿಹರನ್ ವಿಸ್ಮಯ (Vismaya) ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶ್ರುತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ (Arjun Sarja) ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಮೊದಲು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.

    ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶ್ರುತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿತಿಕೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ನಡೆಯಿತು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    `ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಶ್ರುತಿ ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ ಎಂದು ಅಂಬರೀಶ್ ಮುಂದೆ ಹೇಳಿಕೊಂಡಿದ್ದರು. ಅಂಬರೀಶ್ ನಡೆಸಿದ ಸಂಧಾನ ವಿಫಲವಾಗುತ್ತಿದ್ದಂತೆಯೇ ಶ್ರುತಿ  ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೆಲ್ಲವೂ ನಡೆದದ್ದು 2018ರಂದು.

    ಶ್ರುತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಲೈಂಗಿಕ ಕಿರುಕುಳ ಆಗಿದೆ ಎನ್ನಲಾದ ಸ್ಥಳಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜನವರಿ 2022ರಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿತ್ತು. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್‍ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿತ್ತು.

    ತನಿಖೆ ಏನೆಲ್ಲ ಆಗಿತ್ತು?

    ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿದ್ದ ಪೊಲೀಸರಿಗೆ ಯುಬಿ ಸಿಟಿಯ ಸೆಕ್ಯೂರಿಟಿ ಗಾರ್ಡ್‍ಗಳು ತಲೆನೋವಾಗಿ ಪರಿಣಮಿಸಿದ್ದರು. ಹೌದು. ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಮೊದಲಿಗೆ ನಟ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಾಕಷ್ಟು ಜನರನ್ನು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದರು.

     

    ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನನಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ರು. ಯುಬಿ ಸಿಟಿಯಲ್ಲಿ ರೂಮ್ ನಲ್ಲಿ ಒಬ್ಬನೇ ಇದೇನಿ, ಬಾ ಸ್ವಲ್ಪ ಹೊತ್ತು ಕಾಲ ಕಳೆಯೋಣ ಅಂತಾ ನನ್ನನ್ನು ಕರೆದ್ರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಯುಬಿ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನು ವಿಚಾರಣೆ ನಡೆಸೋಕೆ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಆ ಘಟನೆ ನಡೆದ ನಂತರ ಹತ್ತಾರು ಸೆಕ್ಯೂರಿಟಿ ಗಾರ್ಡ್‍ಗಳು ಕೆಲಸಬಿಟ್ಟಿರೋದಲ್ಲದೇ, ಸೆಕ್ಯೂರಿಟಿ ಏಜೆನ್ಸಿಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿದ್ದ ಕೆಲ ಸಿಬ್ಬಂದಿ ಕೂಡ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಾಯಿ ಬಿಟ್ಟಿರಲಿಲ್ಲ.

  • ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

    ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

    ತಿರುವನಂತಪುರಂ: ಇಡೀ ಕೇರಳ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ (22) ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಕೆಯ ಪತಿ ಎಸ್.ಕಿರಣ್ ಕುಮಾರ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.55 ಲಕ್ಷ ರೂ. ದಂಡ ವಿಧಿಸಿದೆ.

    ವಿಸ್ಮಯಾಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ 6 ವರ್ಷ ಜೈಲು 2 ಲಕ್ಷ ರೂ. ದಂಡ, ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕಾಗಿ 2 ವರ್ಷ ಜೈಲು, 50 ಸಾವಿರ ದಂಡ, ವರ್ದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ 6 ವರ್ಷ ಜೈಲು 10 ಲಕ್ಷ ರೂ. ದಂಡ, ವರದಕ್ಷಿಣೆ ಕಿರುಕುಳ ನೀಡಿದ ಅಪರಾಧಕ್ಕಾಗಿ 1 ವರ್ಷ ಜೈಲು ಹಾಗೂ 5 ಸಾವಿರ ದಂಡ ಸೇರಿದಂತೆ ಒಟ್ಟಾರೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ, 10 ವರ್ಷ ಅವರು ಜೈಲು ವಾಸ ಅನುಭವಿಸಬೇಕಾಗುತ್ತದೆ. ಜೊತೆಗೆ 12.55 ಲಕ್ಷ ರೂಪಾಯಿಗಳನ್ನು ವಿಸ್ಮಯಾ ಪೋಷಕರಿಗೆ ಪರಿಹಾರವಾಗಿ ನೀಡಬೇಕಾಗುತ್ತದೆ ಎಂದು ಕೊಲ್ಲಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

    ಪ್ರಕರಣದ ಏಕೈಕ ಆರೋಪಿಯಾಗಿರುವ ಕಿರಣ್‌ಗೆ ಭಾರತೀಯ ದಂಡ ಸಂಹಿತೆ(IPC)ಯ ಅನ್ವಯ 304B (ವರದಕ್ಷಿಣೆ ಸಾವು), 498 A (ವರದಕ್ಷಿಣೆ ಕಿರುಕುಳ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಈ 3 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ವಿಸ್ಮಯಾ ಸಾವಿಗೂ ಮುನ್ನ ಗಂಡ-ಹೆಂಡತಿ ನಡುವಿನ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದಲ್ಲಿ ಪ್ರಮುಖ ಪುರಾವೆಯಾಗಿ ಸಿಕ್ಕಿದ್ದನ್ನು ಆಧಾರಿಸಿ ತೀರ್ಪು ಪ್ರಕಟಿಸಿದೆ.

    ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ಸಾವಿನ ಪ್ರಕರಣದಲ್ಲಿ ಪತಿಯೇ ತಪ್ಪಿತಸ್ಥ ಎಂದು ಕೊಲ್ಲಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎನ್.ಸುಜಿತ್ ಅವರು, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.

    ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. 22 ವರ್ಷದ ವಿಸ್ಮಯಾ ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಾಮ ಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಗೆ ಒಂದು ದಿನ ಮೊದಲೇ ವಿಸ್ಮಯಾ ತನ್ನ ಸಂಬಂಧಿಕರಿಗೆ ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಳು. ಜೊತೆಗೆ ತನ್ನ ದೇಹದ ಮೇಲೆ ಗಾಯಗಳು ಹಾಗೂ ಹೊಡೆದ ಗುರುತುಗಳ ಫೋಟೋಗಳನ್ನು ಕಳುಹಿಸಿದ್ದಳು.

    2020ರಲ್ಲಿ ನಡೆದ ವಿವಾಹದ ವೇಳೆ ಕುಮಾರ್‌ಗೆ ವರದಕ್ಷಿಣೆಯಾಗಿ 10 ಲಕ್ಷ ರೂ. ಮೌಲ್ಯದ ಕಾರನ್ನು ನೀಡಿದ್ದಲ್ಲದೆ 100 ಸವರನ್ ಚಿನ್ನ ಹಾಗೂ 1 ಎಕರೆಗೂ ಹೆಚ್ಚು ಭೂಮಿ ನೀಡಲಾಗಿತ್ತು. ಆದರೆ ಕುಮಾರ್‌ಗೆ ಕಾರು ಇಷ್ಟವಾಗದೆ 10 ಲಕ್ಷ ರೂ. ನಗದು ಬೇಕೆಂದು ಬಯಸಿದ್ದ. ಅದು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆಕೆಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ ಎಂದು ವಿಸ್ಮಯಾಳ ತಂದೆ ಹೇಳಿದ್ದರು. ಈ ಪ್ರಕರಣ ಇಂದು ಅಂತ್ಯಕಂಡಿದ್ದು, ವಿಸ್ಮಯಾಳ ಪತಿಗೆ ಶಿಕ್ಷೆ ವಿಧಿಸಲಾಗಿದೆ.

  • ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಬೆಂಗಳೂರು: ಮೀಟೂ ಆರೋಪದ ಮೂಲಕವೇ ಸುದ್ದಿಯಾಗಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ.

    ಹೌದು, ನಟಿ ಶೃತಿ ಹರಿಹರನ್ ಅವರು ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎನ್ನುವ ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಗಾಂಧಿ ನಗರದಲ್ಲಿ ಸದ್ದು ಮಾಡಿತ್ತು.

    2017ರ ಜುಲೈ 27ರಂದು ತೆರೆಕಂಡ ವಿಸ್ಮಯ ಸಿನೆಮಾ, ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ ಸಖತ್ ಖದರ್ ತೋರಿದ್ದರೆ, ಅವರ ಪತ್ನಿಯಾಗಿ ನಟಿ ಶೃತಿ ಹರಿಹರನ್ ಅಭಿನಯಿಸಿದ್ದರು.

    ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹಾಗೂ ವಿತರಕರು ಸಿನಿಮಾವನ್ನು ಮತ್ತೆ ರೀ ರೀಲಿಸ್ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಚಿತ್ರ ನಿರ್ಮಾಪಕ ಉಮೇಶ್ ಮಾತನಾಡಿ, ರಾಜ್ಯೋತ್ಸವದ ನಂತರ ವಿಸ್ಮಯ ಚಿತ್ರವನ್ನು ರೀ ರಿಲೀಸ್ ಮಾಡುತ್ತೇನೆ. ಹೀಗಾಗಲೇ ಎಲ್ಲಾ ವಿತರಕರು ನಮ್ಮನ್ನು ಬಲವಂತ ಮಾಡುತ್ತಿದ್ದು ಅವರ ಆಸಕ್ತಿ ಮೇರೆಗೆ ಮತ್ತೊಮ್ಮೆ ತೆರೆಮೇಲೆ ವಿಸ್ಮಯ ಚಿತ್ರ ಮೂಡಿಬರಲಿದೆ. ಈ ಬಗ್ಗೆ ಎಲ್ಲಾ ಚಿತ್ರಮಂದಿರಗಳ ಜೊತೆ ವಿತರಕರು ಸಂಪರ್ಕ ಮಾಡುತ್ತಿದ್ದಾರೆ. ಚಿತ್ರ ರಿಲೀಸ್‍ಗೆ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಆಗಲಿ ಯಾವುದೇ ಸಂಬಂಧವಿಲ್ಲ. ಚಿತ್ರ ರೀ ರಿಲೀಸ್‍ಗೆ ಯಾವುದೇ ಅಡ್ಡಿ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

    ಇದೇ ವೇಳೆ ನಟ ಚೇತನ್ ಬಗ್ಗೆ ಮಾತನಾಡಿ, ಕನ್ನಡ ಇಂಡಸ್ಟ್ರೀಸ್‍ನಲ್ಲಿ ವಿಸ್ಮಯ ನನ್ನ ಮೊದಲನೇ ಸಿನೆಮಾ ಆಗಿದ್ದು, ಅರುಣ್ ವೈದ್ಯನಾಥನ್ ಅವರು ಅಮೆರಿಕದಿಂದ ಬಂದು ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ಚಿತ್ರೀಕರಣದ ವೇಳೆ ಖಳನಾಯಕರ ಪಾತ್ರಕ್ಕೆ ಸ್ಥಳೀಯ ಸಹ ನಿರ್ದೇಶಕರ ಸೂಚನೆ ಮೇರೆಗೆ ನಟ ಚೇತನ್ ಹಾಗೂ ಜೆಕೆ ಅವರನ್ನು ಆಯ್ಕೆಮಾಡಿಕೊಂಡು, ಚೇತನ್ ಅವರನ್ನು ಅಶೋಕ ಹೋಟೆಲ್‍ನಲ್ಲಿ ಭೇಟಿಯಾಗಿ ಮಾತನಾಡಿದ್ದೇವು. ಆದರೆ ಚೇತನ್ ರ ಸಮಯದ ಅಭಾವದಿಂದ ನಿರ್ದೇಶಕರು ಜೆಕೆಯವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv