Tag: VISL

  • VISL ಮುಚ್ಚದಂತೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದ ನಿಯೋಗದಿಂದ ಮನವಿ

    VISL ಮುಚ್ಚದಂತೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದ ನಿಯೋಗದಿಂದ ಮನವಿ

    ನವದೆಹಲಿ: ಭದ್ರಾವತಿಯ (Bhadravati) ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (Visvesvaraya Iron and Steel Plant) ಮುಚ್ಚುವ ಕ್ರಮವನ್ನು ಸ್ಥಗಿತಗೊಳಿಸುವಂತೆ ಸಂಸದ ಬಿ.ವೈ ರಾಘವೇಂದ್ರ (BY Raghavendra) ನೇತೃತ್ವದ ನಿಯೋಗ ಭಾರತೀಯ ಉಕ್ಕು ಪ್ರಾಧಿಕಾರದ ನೂತನ ಅಧ್ಯಕ್ಷ ಅಮರೆಂದು ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದೆ.

    ಉಕ್ಕುಸ್ಥಾವರವನ್ನು ಪುನಶ್ಚೇತನಗೊಳಿಸಲು ಅಗತ್ಯ ಬಂಡವಾಳ ಹೂಡುವಂತೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ವಿಐಎಸ್‍ಎಲ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಕೈ ಬಿಡಬೇಕು. ಸ್ಥಗಿತಗೊಂಡಿರುವ ಎಲ್ಲಾ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ಕಳೆದ ಫೆಬ್ರವರಿಯಲ್ಲಿ ಭದ್ರಾವತಿಯ ಕಾರ್ಖಾನೆಯನ್ನು ಮುಚ್ಚುವುದಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿತ್ತು. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸರ್ಕಾರದಿಂದ ಈ ಪ್ರತಿಕ್ರಿಯೆ ಬಂದಿತ್ತು. ಇದಾದ ಬಳಿಕ ಕೇಂದ್ರದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

    ಮನವಿ ಸಲ್ಲಿಸುವ ವೇಳೆ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್‍ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮತ್ತಿತರರು ಹಾಜರಿದ್ದರು. ಇದನ್ನೂ ಓದಿ: ಭದ್ರಾವತಿ VISL ಮುಚ್ಚುತ್ತೇವೆ: ಕೇಂದ್ರದಿಂದ ಅಧಿಕೃತ ಉತ್ತರ

  • ಭದ್ರಾವತಿ VISL ಮುಚ್ಚುತ್ತೇವೆ: ಕೇಂದ್ರದಿಂದ ಅಧಿಕೃತ ಉತ್ತರ

    ಭದ್ರಾವತಿ VISL ಮುಚ್ಚುತ್ತೇವೆ: ಕೇಂದ್ರದಿಂದ ಅಧಿಕೃತ ಉತ್ತರ

    ನವದೆಹಲಿ: ಚುನಾವಣೆ ಸನಿಹದಲ್ಲಿ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಮುಚ್ಚುವುದಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿದೆ.

    ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದ್ದೇವೆ ಎಂದು ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ. ಈ ಬಗ್ಗೆ ಕರ್ನಾಟಕ ಮೂಲದವರೇ ಆದ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ (Jairam Ramesh) ಟ್ವೀಟಿಸಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆಲ್ಲಿಸುವ ಸುಪಾರಿ ಸಿದ್ದರಾಮಯ್ಯ ಪಡೆದಿದ್ರು: ಹೆಚ್‌ಡಿಕೆ

    ಇಂದು ರಾಜ್ಯಸಭೆಯಲ್ಲಿ (Rajya Sabha) ಸರ್ಕಾರ, ಭದ್ರಾವತಿಯ ವಿಐಎಸ್‍ಎಲ್ ಅನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಹೇಳಿದೆ. ಕಾರ್ಖಾನೆ ಕಬ್ಬಿಣದ ಅದಿರಿನ ಮೂಲ ಇಲ್ಲ ಎಂಬ ಕಾರಣವನ್ನು ನೀಡಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ, ಎಸ್‍ಎಐಎಲ್‍ಗೆ ಗಣಿಗಳಿಲ್ಲ ಎಂಬುದು ಆಶ್ಚರ್ಯ. ವಿಐಎಸ್‍ಎಲ್‍ಗೆ ಗಣಿ ಪರವಾನಗಿಯನ್ನು 2011ರಲ್ಲಿ ನೀಡಿದರೂ ಮೋದಿ ಸರ್ಕಾರ ಈವರೆಗೂ ಏನನ್ನೂ ಮಾಡಿಲ್ಲ ಎಂದು ಜೈರಾಂ ರಮೇಶ್ ಕಿಡಿಕಾರಿದ್ದಾರೆ.

    ಮೂರು ದಿನಗಳ ಹಿಂದೆ ಪ್ರತಿಭಟನಾನಿರತ ವಿಐಎಸ್‍ಎಲ್ ಕಾರ್ಮಿಕರನ್ನು ಭೇಟಿ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾರ್ಖಾನೆ ಉಳಿಸುವ ಮಾತುಗಳನ್ನು ಆಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k