Tag: Visite

  • ವಾರಣಾಸಿ ನಾಗ ಸಾಧುಗಳಿಂದ ಆಶೀರ್ವಾದ ಪಡೆದ ಬಿಎಸ್‍ವೈ

    ವಾರಣಾಸಿ ನಾಗ ಸಾಧುಗಳಿಂದ ಆಶೀರ್ವಾದ ಪಡೆದ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗ ಸಾಧುಗಳ ಆಶೀರ್ವಾದ ಸಿಕ್ಕಿದೆ. ನವರಾತ್ರಿಯ ದಿನವಾದ ಸೆಪ್ಟಂಬರ್ 29ರಂದು ಬಿಎಸ್‍ವೈ ನಿವಾಸಕ್ಕೆ 9 ಮಂದಿ ನಾಗ ಸಾಧುಗಳು ಭೇಟಿಯಾಗಿದ್ದರು.

    ಬಿಎಸ್ ವೈ ನಿವಾಸದಲ್ಲಿ 20 ನಿಮಿಷಗಳ ಕಾಲ ಸಮಯ ಕಳೆದ ಸಾಧುಗಳು ಬಿಎಸ್‍ವೈಗೆ ಆಶೀರ್ವಾದ ಮಾಡಿದ್ರು ಎನ್ನಲಾಗಿದೆ. ಬಿಎಸ್‍ವೈ ಕಾಣಲು ಬಂದಿದ್ದೇವೆ, ವಾರಣಾಸಿ ಕಾಡಿನಿಂದ ಬಂದಿದ್ದೇವೆ ಅಂತೇಳಿ ಮನೆಯಲ್ಲಿ ಬಂದು ಕುಳಿತಿದ್ರಂತೆ. ಹೊರಗೆ ಹೋಗಿದ್ದ ಬಿಎಸ್‍ವೈ ತಕ್ಷಣ ಮನೆಗೆ ಆಗಮಿಸಿ ನಾಗ ಸಾಧುಗಳನ್ನ ಮಾತನಾಡಿಸಿ ಆಶೀರ್ವಾದ ಪಡೆದ್ರಂತೆ. ಅಲ್ಲದೆ ಇವತ್ತು ಮತ್ತೇ ಬಿಎಸ್‍ವೈ ನಿವಾಸಕ್ಕೆ ಆಗಮಿಸಿದ ನಾಗ ಸಾಧುಗಳು ಮತ್ತೊಮ್ಮೆ ಆಶೀರ್ವಾದ ಪಡೆದ್ರು ಎನ್ನಲಾಗಿದೆ.

    ಒಂದೇ ವಾರದಲ್ಲಿ ಎರಡು ದಿನ ನಾಗ ಸಾಧುಗಳು ಬಿಎಸ್‍ವೈ ಅವರನ್ನು ಭೇಟಿ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಗ ಸಾಧುಗಳನ್ನ ಸತ್ಕರಿಸಿದ ಬಿಎಸ್‍ವೈ ಮುಂದಿನ ಭವಿಷ್ಯಕ್ಕೆ ಆಶೀರ್ವಾದ ಕೇಳಿದ್ರು ಎನ್ನಲಾಗಿದೆ. ನೀವು ಮುಂದಿನ ಸಿಎಂ ಆಗಿ, ನಿಮಗೆ ಯಾವುದೇ ಅಡೆತಡೆ ಬಾರದಿರಲಿ ಅಂತಾ ನಾಗ ಸಾಧುಗಳು ಆಶೀರ್ವಾದ ನೀಡಿದ್ರಂತೆ.