https://www.youtube.com/watch?v=_vl8M2jWkx8
Tag: visit
-

ಅಹಿಂದ ಮಂತ್ರ ಜಪಿಸಲು ಮುಂದಾದ ಸಿದ್ದುಗೆ ಶಾಕ್ ಟ್ರೀಟ್‍ಮೆಂಟ್ ಕೊಡಲು `ಕೈ’ಕಮಾಂಡ್ ತಂತ್ರ
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ನಾನು ಹೇಳಿದ ಮಾತೇ ನಡೆಯಬೇಕು ಅಂತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.
ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಇರತ್ತೋ ಇಲ್ಲವೋ ಹೇಳೋಕೆ ಆಗಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಹೇಳಿದ್ದರು. ಆದ್ದರಿಂದ ಸಿದ್ದರಾಮಯ್ಯ ತಮ್ಮ ಈ ವರ್ತನೆಯ ಬಗ್ಗೆ ಈಗ ಸ್ಪಷ್ಟನೆ ನೀಡಬೇಕಿರುವುದು ಹೈಕಮಾಂಡ್ ನಾಯಕರಿಗಲ್ಲ. ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊಡಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ಖರ್ಗೆ ಬಳಿ ಚರ್ಚಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಂದೇಶ ರವಾನಿಸಿದೆಯಂತೆ.
ಇಂದು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಹತ್ವದ ಭೇಟಿ ನಡೆಯಲಿದೆ. ಭೇಟಿ ವೇಳೆ ಸಿದ್ದರಾಮಯ್ಯ ತಮ್ಮ ಅಸಮಧಾನ ಮತ್ತು ಅಸಹನೆ ಎಲ್ಲವನ್ನು ಖರ್ಗೆ ಬಳಿ ಹೇಳಿಕೊಳ್ಳಬೇಕು. ಬಳಿಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಖರ್ಗೆ ಮಾತುಕತೆ ನಡೆಸಲಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ನೀವು ಪ್ರಶ್ನಾತೀತ ನಾಯಕರಲ್ಲ. ನೀವೊಬ್ಬರೇ ಎಲ್ಲಾ ಅಲ್ಲ. ನೀವು ಮಾಡಿದ ಎಲ್ಲವೂ ಸರಿಯಲ್ಲ. ನಿಮ್ಮ ತಪ್ಪನ್ನ ತಿದ್ದೋರು ರಾಜ್ಯದಲ್ಲೇ ಇದ್ದಾರೆ ಎಂಬ ಸಂದೇಶವನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ರವಾನಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
-

ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು
ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇಂದು ದಿಢೀರ್ ಆಗಿ ಕೇಂದ್ರ ಕಾರ್ಮಿಕಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಕೆಲ ಹೊಸ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ ವೇಗದ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದು ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಕೆಲಸ ನಡೆಯಬೇಕಿದೆ. ಯಾವೆಲ್ಲ ಕೆಲಸಗಳನ್ನು ಅರ್ಥದಲ್ಲೇ ನಿಲ್ಲಿಸಲಾಗಿದೆ. ಕಾರ್ಮಿಕರಿಗೆ ಏನು ಅನುಕೂಲವಾಗಿದೆ ಎಂದು ಮಾಹಿತಿ ಪಡೆಯಲು ಆಗಮಿಸಿದ್ದಾಗಿ ತಿಳಿಸಿದರು.

ಇದೇ ವೇಳೆ ಕಾರ್ಮಿಕಭವನದ ಕೆಲ ಕುಂದುಕೊರತೆಗಳು ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳ ಹಾಜರಾತಿ, ಮೂಮೆಂಟ್ ಬುಕ್ ನಲ್ಲಿ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಅಲ್ಲದೇ ಬಾಲ ಕಾರ್ಮಿಕರ ಬಳಕೆ ಕುರಿತು ಮಾಹಿತಿ ಪಡೆದು, ಬಾಲ ಕಾರ್ಮಿರನ್ನು ಎಲ್ಲಯಾದರೂ ದುಡಿಮೆ ಮಾಡಿಕೊಳ್ಳುವ ಕುರಿತು ತಿಳಿದು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಆಯುಕ್ತೆ ಇರುಸು ಮುರುಸು: ತಮ್ಮ ದಿಢೀರ್ ಭೇಟಿ ವೇಳೆ ಸಚಿವರು ಕಾರ್ಮಿಕ ಭವನದ ಶೌಚಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯದ ಅವ್ಯವಸ್ಥೆ ಕಂಡು ಕಾರ್ಮಿಕ ಇಲಾಖೆ ಆಯುಕ್ತೆ ಚೈತ್ರಗೆ ಪುರುಷರ ಶೌಚಾಲಯ ದರ್ಶನ ಮಾಡಿಸಿದರು. ದೂರದಲ್ಲಿದ್ದ ಆಯುಕ್ತೆ ಚೈತ್ರರವರನ್ನು ಕರೆದು ಏನು ಪರಿಸ್ಥಿತಿ ಎಂದು ಪ್ರಶ್ನಿಸಿ ಶೌಚಲಯಕ್ಕೆ ಹೋಗಲು ಹೇಳಿದರು. ಇದರಿಂದ ಕೆಲ ಸಮಯ ಆಯುಕ್ತೆ ಚೈತ್ರಾ ಇರುಸು ಮುರುಸುಗೊಂಡರು. ಇನ್ನು ಇದಕ್ಕೂ ಮೊದಲು ಕಚೇರಿ ಬಂದಾಗ ಅಲ್ಲಿರುವ ನೌಕರರನ್ನು ಗುರುತು ಹಿಡಿಯಲಿಲ್ಲ. ಆಗ ಸಚಿವರು ತಮ್ಮ ರೀತಿಯಲ್ಲಿ ಮಾತನಾಡಿದ ವೇಳೆ ನೌಕರರು ಅವರ ಗುರುತು ಹಿಡಿದರು.
ಅಧಿಕಾರಿ ಸಸ್ಪೆಂಡ್: ಇದೇ ವೇಳೆ ಕೆಲಸದ ಸಮಯದಲ್ಲಿ ಸೂಕ್ತ ಕಾರಣವಿಲ್ಲದೇ ಗೈರುಹಾಜರಾಗಿದ್ದ ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ನಾಗರಾಜಯ್ಯ ರನ್ನು ಅಮಾನತು ಮಾಡುವಂತೆ ಸಚಿವರು ಆಯುಕ್ತೆಗೆ ಆದೇಶ ನೀಡಿದರು. ಬಳಿಕ ಕಚೇರಿ ಸಮಯದಲ್ಲಿ ಆಫೀಸ್ ಕೆಲಸ ಬಿಟ್ಟು ಬಿಟ್ಟು ಬೇರೆಡೆ ಹೋಗಿದ್ದು ಕುರಿತು ವಿಚಾರಣೆ ನಡೆಸಿದರು. ಬಳಿಕ ಹಾಜರಾತಿ ಇಲ್ಲದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು.
-

ಸಿಎಂ ನಿವಾಸದ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ರೈತರು!
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿಗೆ ಮೈಸೂರು ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ರೈತರು ಬಂದಿದ್ದಾರೆ.
ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಬಂದಿದ್ದಾರೆ. ರೈತರು 2002-2003 ರಲ್ಲಿ ರೈತರು ಸಾಲ ಹೆಚ್ಚು ಮಾಡಿದ್ದಾರೆ. 2002 ರಿಂದ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಇದುವರೆಗೂ ಸಾಲ ಮನ್ನಾ ಮಾಡಿಲ್ಲವಾದ್ದರಿಂದ ಮನವಿ ಮಾಡಲು ಮೈಸೂರು ಜಿಲ್ಲೆ ರೈತರು ಬಂದಿದ್ದರು.
ಸಿಎಂ ಭೇಟಿ ಮಾಡಲು ಬಿಡಿ, ಸಾಲ ಮನ್ನ ವಿಚಾರವಾಗಿ ಮಾತನಾಡಬೇಕು. ಮನವಿ ಪತ್ರ ನೀಡಲು ಬಂದಿದ್ದೇವೆ ಎಂದು ಅಧಿಕಾರಿಗಳಿಗೆ ರೈತರು ಒತ್ತಾಯ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ರೈತರ ಮನವೊಲಿಸುವ ಯತ್ನ ಮಾಡಿದ್ದರು. ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಲಾಠಿ ಚಾರ್ಜ್ ಮಾಡಿ ಬೇಕಿದ್ದರೆ, ನಾವು ಸಿಎಂ ಭೇಟಿ ಮಾಡಲೇಬೇಕು ಎಂದು ರೈತರು ಆಗ್ರಹಿಸಿದ್ದರು.
ಅಧಿಕಾರಿಗಳು ಕೊನೆಗೆ ರೈತರ ಆಗ್ರಹಕ್ಕೆ ಮಣಿದು ಕೆಲ ರೈತರನ್ನು ಸಿಎಂ ಕುಮಾರಸ್ವಾಮಿ ಭೇಟಿಗೆ ಮನೆಯೊಳಗೆ ಕಳುಹಿಸಿದ್ದಾರೆ.
-

ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?
ಸಿಂಗಾಪುರ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಂಗಾಪುರದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಆದರೆ ಎರಡು ದೇಶಗಳ ಗಣ್ಯರ ಭೇಟಿಗೆ ಸಿಂಗಾಪುರ ಆಯ್ಕೆ ಆಗಿದ್ದು ಮಾತ್ರ ಮಹತ್ವದಾಗಿದೆ.
ಸತತ 7 ದಶಕಗಳ ಬಳಿಕ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಮಾತುಕತೆ ನಡೆದಿದ್ದು, ವಿಶ್ವದ ಗಮನವನ್ನು ಸೆಳೆದಿದೆ. ಆದರೆ ಎರಡು ದೇಶಗಳ ನಾಯಕರ ಭೇಟಿಗೆ ಈ ಹಿಂದೆ ಹಲವು ರಾಷ್ಟ್ರಗಳ ಹೆಸರುಗಳು ಕೇಳಿ ಬಂದಿತ್ತು. ಅಂತಿಮವಾಗಿ ಐತಿಹಾಸಿಕ ಘಟನೆಗೆ ಸಿಂಗಾಪುರ ಸಾಕ್ಷಿಯಾಗಿದೆ.
ಈ ಮೊದಲು ದಕ್ಷಿಣ ಕೊರಿಯಾದ ಮಿಲಿಟರಿ ಚಟುವಟಿಕೆ ನಿಷೇಧಿತ ಪ್ರದೇಶವನ್ನು (Korean Demilitarized Zone) ನಾಯಕರ ಸೂಕ್ತ ಭದ್ರತೆಯ ಸ್ಥಳವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಬಳಿಕ ಈ ಪಟ್ಟಿಯಲ್ಲಿ ಸ್ವೀಡನ್, ಮಂಗೋಲಿಯಾ, ಜಿನೀವಾ ಹೆಸರು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಪಟ್ಟಿಯಲ್ಲಿ ಇಲ್ಲದ ಸಿಂಗಾಪುರ ಕಾರ್ಯಕ್ರಮದ ಜವಾಬ್ದಾರಿ ಪಡೆಯಿತು.

ಸಿಂಗಾಪುರವೇ ಯಾಕೆ?
ಸಿಂಗಾಪುರ ಭೇಟಿಯ ಹಿಂದೆ ಹಲವು ರಾಜತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ವಿಶ್ವದ ಅತ್ಯಂತ ಸುರಕ್ಷಿತಾ ಸ್ಥಳ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿತ್ತು. ಸಿಂಗಾಪುರ ಕೊರಿಯಾದೊಂದಿಗೆ ಕಳೆದ 4 ದಶಕಗಳಿಂದ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಅಲ್ಲದೇ ಅಮೆರಿಕದೊಂದಿಗೆ ಉತ್ತಮ ವ್ಯಾಪಾರಿ ಸಂಬಂಧವನ್ನು ಹೊಂದಿದ್ದು, ತಜ್ಞರ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ.ಇದೇ ಮೊದಲಲ್ಲ: ಸಿಂಗಾಪುರ ಭಾರತ ಹಾಗೂ ಚೀನಾ ನಡುವಿನ ಶಾಂಘಿಲಾ ಸಭೆಯನ್ನು ಸಹ ಯಶಸ್ವಿಯಾಗಿ ಆಯೋಜಿಸಿತ್ತು. ಅಲ್ಲದೇ 2015 ರಲ್ಲಿ ಚೀನಾ ಬದ್ಧ ವೈರಿ ತೈವಾನ್ ಅಧ್ಯಕ್ಷ ಹಾಗೂ ಕ್ಸಿ ಜಿನ್ ಪಿಂಗ್ ರ ದ್ವಿಪಕ್ಷೀಯ ಸಭೆಯನ್ನು ಏರ್ಪಡಿಸಿತ್ತು.
ಬದ್ಧ ವೈರಿಗಳಾಗಿ ಗುರುತಿಸಿಕೊಂಡಿದ್ದ ಎರಡು ರಾಷ್ಟ್ರಗಳ ನಾಯಕರ ಭೇಟಿ ಹಲವು ರಾಷ್ಟ್ರಗಳ ಗಮನಸೆಳೆದಿದೆ. ಸದ್ಯ ಸಿಂಗಾಪುರದ ಐತಿಹಾಸಿಕ ಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಿಮ್ ಜಾಂಗ್ ಉನ್ ನಮ್ಮ ಇಂದಿನ ಭೇಟಿ ಅಷ್ಟು ಸುಲಭದ ಮಾತಲ್ಲ, ಈ ಹಿಂದಿನ ಹಳೆಯ ಅಡೆತಡೆಗಳನ್ನು ಮೀರಿ ಬಂದಿದ್ದಾಗಿ ಹೇಳಿದ್ದಾರೆ.
ಇಬ್ಬರ ಮಾತುಕತೆಯ ವೇಳೆ ಅಣ್ವಸ್ತ್ರ ಯೋಜನೆಯ ಹಾಗೂ ಪರಸ್ಪರ ಸಹಕಾರ, ಆರ್ಥಿಕ ಬಂಧನ ಕುರಿತು ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದ್ದು, ನಾಲ್ಕು ಮಹತ್ವದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಕಿಮ್ ಮಹತ್ವದ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು ಅಧಿಕೃತ ಮಾಹಿತಿ ಲಭಿಸಬೇಕಿದೆ.
-

ಎಚ್‍ಡಿಡಿ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳು ಭೇಟಿ!
ಬೆಂಗಳೂರು: ಮಂತ್ರಿಗಿರಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೈಕಮಾಂಡ್ ಗೆ ದುಂಬಾಲು ಹೂಡುತ್ತಿದ್ದು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರ ಮನೆಗೆ ಲಿಂಗಾಯತ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ.
ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ತುಮಕೂರಿನ ಮತ್ತು ನೆಲಮಂಗಲ ಮಠದ ಸ್ವಾಮೀಜಿಗಳು ಆಗಮಿಸಿದ್ದಾರೆ. ಸ್ವಾಮೀಜಿಗಳು ತುಮಕೂರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೇಳಲು ಆಗಮಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಗೆ ಸಚಿವ ಸ್ಥಾನ ನೀಡುವಂತೆ ಸ್ವಾಮೀಜಿಗಳು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದಲಿಂಗೇಶ್ವರ ಮಠದ ಶಿವ ಪಂಚಾಕ್ಷರಿ ಸ್ವಾಮೀಜಿ, ಪಿರಂಗೀಶ್ವರ ಮಠದ ಶಿವ ರುದ್ರ ಶಿವಾಚಾರ್ಯ ಸ್ವಾಮೀಜಿ, ರುದ್ರ ಮುನೇಶ್ವರ್ ಮಠದ ಚಂದ್ರ ಶೇಖರ ಸ್ವಾಮೀಜಿ, ಅಳ್ಳೂರು ಮಠದ ಚೆನ್ನಬಸವ ಸ್ವಾಮೀಜಿ ಹಾಗೂ ವನಕಲ್ಲು ಮಠದ ರಮಾನಂದ ಸ್ಬಾಮೀಜಿಗಳು ದೇವೇಗೌಡರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ವನಕಲ್ಲು ಮಠದ ರಮಾನಂದ ಸ್ವಾಮೀಜಿ ಮಾತನಾಡಿ, ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಬಂದಿದ್ದೇವೆ. ಮಠದ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಲು ಬಂದಿದ್ದು, ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-

ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ಉಡುಪಿ: ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಮಂಗಳವಾರ ಉಡುಪಿಗೆ ಆಗಮಿಸುತ್ತಿದ್ದು, ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.
ನಾಳೆ ಮಧ್ಯಾಹ್ನ 2.45 ಕ್ಕೆ ಮೋದಿ ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4.30 ರ ವರೆಗೆ ನಗರಕ್ಕೆ ವಾಹನ ಪ್ರವೇಶ ನಿಷೇಧ ಮಾಡಲಾಗಿದೆ. ಎಂಜಿಎಂ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಲಿರುವ ಕಾರಣ ಕರಾವಳಿ ಜಂಕ್ಷನ್ ನಿಂದ ಇಂದ್ರಾಣಿ ಜಂಕ್ಷನ್ ವರೆಗೆ ಪೊಲೀಸರು ನೋ ವೆಹಿಕಲ್ ಝೋನ್ ನಿರ್ಮಾಣ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗದಿರಲು ನಗರದ ಹೊರ ವಲಯದ ಮೂಲಕ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಸಮಾವೇಶದಲ್ಲಿ 60 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಸಮಾವೇಶದಲ್ಲಿ ಉಡುಪಿ, ಉತ್ತರಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎಂಜಿಎಂ ಮೈದಾನ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ಪ್ರಧಾನಿ ಮೋದಿ ಆಗಮನದಿಂದ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ನಗರದಲ್ಲಿ ಮತ್ತು ಪ್ರಧಾನಿ ಸಂಚರಿಸುವ ರಸ್ತೆಗಳ ಇಕ್ಕೆಲದ ಯಾವುದೇ ಅಂಗಡಿಗಳನ್ನು ಮುಚ್ಚಿಸುವುದಿಲ್ಲ. ಸಾರ್ವಜನಿಕ ಸಭೆಯಲ್ಲಿ ಮಾತ್ರ ಮಾಧ್ಯಮಗಳು ಪಾಲ್ಗೊಳ್ಳಬಹುದು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.
ಇನ್ನು ನಗರದಲ್ಲಿ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಪ್ರವೇಶಿಸುವ ಮಾರ್ಗವನ್ನು ಬದಲಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಮತ್ತು ಕುಂದಾಪುರದಿಂದ ಉಡುಪಿಗೆ ಬರುವ ರಸ್ತೆಗಳಿಗೆ ಬದಲಿ ಮಾರ್ಗ ವ್ಯವಸ್ಥೆಗೊಳಲಾಗಿದೆ. ಜಿಲ್ಲೆಗೆ ಬರುವ ಹೊಸಬರಿಗೆ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಯ ಸುಮಾರು ಒಂದು ಸಾವಿರ ಪೊಲೀಸರು ಪ್ರಧಾನಿಗಳ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ತೊಡಗಲಿದ್ದಾರೆ. ಎಸ್ ಪಿ ಜಿ, ಬಿಎಸ್ ಎಫ್ ಅಧಿಕಾರಿಗಳು ಗಸ್ತು ಶುರು ಮಾಡಿದ್ದಾರೆ ಎಂದು ವಿವರಿಸಿದರು.
-

ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಪಕ್ಷದ ಮೊದಲ ಅಭ್ಯರ್ಥಿ ಆಗ್ತಾರಾ ನವೀನ್ ಕಿರಣ್?
ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆವಿ ಕ್ಯಾಂಪಸ್ ಗೆ ಆಗಮಿಸಿದ ನಟ ಪವನ್‍ಕಲ್ಯಾಣ್ ಅವರಿಗೆ ಅಭಿಮಾನಿಗಳು ಹೂ ಮಳೆಯನ್ನು ಸುರಿಸಿದ್ದಾರೆ.
ನಟ ಪವನ್ ರಾಜ್ಯಕ್ಕೆ ಆಗಮಿಸಿದ್ದರಿಂದ ರಾಜ್ಯದ ತೆಲುಗು ಪ್ರಭಾವ ಹೊಂದಿರುವ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಾರೆ ಎನ್ನಲಾಗಿದೆ. ಪ್ರಮುಖವಾಗಿ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನ ಪಾವಗಡ, ರಾಯಚೂರು, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಗಳ್ಲಿ ಪವನ್ ಪಾಲಿಟಿಕ್ಸ್ ಆರಂಭವಾಲಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನಸೇನಾ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆ ನಡೆಸಲಾಗುತ್ತದೆ ಎನ್ನಲಾಗಿದ್ದು ಪವನ್ ಕಲ್ಯಾಣ್ ನಡೆಯಿಂದ ರಾಷ್ಟ್ರೀಯ ಪಕ್ಷಗಳಲ್ಲಿ ತಳಮಳ ಶುರುವಾಗಿದೆ.

ಇಂದು ಸಂಜೆ ಚಿಕ್ಕಬಳ್ಳಾಪುರದ ಕೆವಿ ಕ್ಯಾಂಪಸ್ ನ ಆವರಣಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತೀರ್ಮಾನಿಸಿರುವ ಕೆವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ನವೀನ್ ಕಿರಣ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಕೆಲ ಕಾಲ ಮಾತುಕತೆ ನಡೆಸಿದರು.
ಪ್ರಸ್ತುತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರಾಗಿರುವ ಸುಧಾಕರ್ ಅವರನ್ನು ಸೋಲಿಸುವ ತಂತ್ರ ಎಂದೇ ಪವನ್ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ನವೀನ್ ಕಿರಣ್ ಅವರ ರಾಜಕೀಯ ಮಹತ್ವಕಾಂಕ್ಷಿಗೆ ಪವನ್ ಕಲ್ಯಾಣ್ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮುನ್ಸೂಚನೆಯಾಗಿದೆ.

ಪ್ರಸ್ತುತ ಪವನ್ ಕಲ್ಯಾಣ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಂತೆ ಕಾಣುತ್ತಿದ್ದು, ರಾಜಕೀಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದ ಪವನ್ ಕಲ್ಯಾಣ್ ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ಜನಸೇನಾ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.
https://www.youtube.com/watch?v=dxqHOQ9lLic







-

ದೀಪಕ್ ರಾವ್ ಮನೆಗೆ ಎಚ್‍ಡಿಡಿ ಭೇಟಿ-ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಮಾಜಿ ಪ್ರಧಾನಿ
ಮಂಗಳೂರು: ಕಾಟಿಪಳ್ಳದಲ್ಲಿ ಜನವರಿ 3 ರಂದು ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ಭೇಟಿ ನೀಡಿದರು.
ಮಂಗಳೂರಿನ ಕಾಟಿಪಳ್ಳದಲ್ಲಿರುವ ಮನೆಯಲ್ಲಿ ದೀಪಕ್ ರಾವ್ ಅವರ ತಾಯಿ ಪ್ರೇಮಾರವರ ಪರಿಸ್ಥಿತಿ ಕಂಡು ದುಖಿಃತರಾದ ದೇವೇಗೌಡ ಅವರು, ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಎಚ್‍ಡಿಡಿ ಅವರಿಗೆ ಜೆಡಿಎಸ್ ಮುಖಂಡರಾದ ಬಿ.ಎಂ. ಫಾರೂಕ್, ಮಹಮ್ಮದ್ ಕುಂಞÂ ಸಾಥ್ ನೀಡಿದರು.
ದೀಪಕ್ ಕೊಲೆಯಾದ ಬಳಿಕ ದುಷ್ಕರ್ಮಿಗಳಿಂದ ಹತ್ಯೆಯಾದ ಬಶೀರ್ ಅವರ ಮಂಗಳೂರಿನ ಆಕಾಶ ಭವನದಲ್ಲಿರುವ ಮನೆಗೂ ಎಚ್‍ಡಿಡಿ ನಾಳೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.





