Tag: Vishweshwara Hegde Kageri

  • ಸೀಬರ್ಡ್ ನಿರಾಶ್ರಿತರಿಗೆ 10.47 ಕೋಟಿ ಪರಿಹಾರ ಮಂಜೂರು: ವಿಶ್ವೇಶ್ವರ ಹೆಗಡೆ ಕಾಗೇರಿ

    ಸೀಬರ್ಡ್ ನಿರಾಶ್ರಿತರಿಗೆ 10.47 ಕೋಟಿ ಪರಿಹಾರ ಮಂಜೂರು: ವಿಶ್ವೇಶ್ವರ ಹೆಗಡೆ ಕಾಗೇರಿ

    ಕಾರವಾರ: ಇಲ್ಲಿನ ಸೀಬರ್ಡ್ ನಿರಾಶ್ರಿತರಿಗೆ ಯುಗಾದಿಯ ಸಂದರ್ಭದಲ್ಲಿ ಶುಭ ಸುದ್ದಿಯಾಗಿ 2008-09ರಿಂದ ಬಾಕಿ ಉಳಿದಿದ್ದ 28/ಎ ಕೇಸ್‌ನಲ್ಲಿ 10.47 ಕೋಟಿ ರೂ. ಪರಿಹಾರ ಮಂಜೂರಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri) ತಿಳಿಸಿದರು.

    ಸೀಬರ್ಡ್ ಯೋಜನೆ ಅಡಿಯಲ್ಲಿ ಸೇನಾ ನೆಲೆ ನಿರ್ಮಾಣಕ್ಕಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರಕ್ಕೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು. ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದವು ಎಂದರು. ಇದನ್ನೂ ಓದಿ: ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ: ಶರಣಪ್ರಕಾಶ್ ಪಾಟೀಲ್

    ಈ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದು, ಅದನ್ನು ಸಂಸದನಾಗಿ ಆಯ್ಕೆ ಆದ ಮೇಲೆ ಈ ಕುರಿತು ತಕ್ಷಣ ನೌಕಾ ನೆಲೆ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಕೇಂದ್ರ ರಕ್ಷಣಾಮಂತ್ರಿಗಳ ಗಮನಕ್ಕೆ ತಂದು, ನಿರಂತರ ಪ್ರಯತ್ನದಿಂದ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ ಎಂದು ಹೇಳಿದರು. ಇದನ್ನೂ ಓದಿ: ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

    ಅಮದಳ್ಳಿ (Amadalli), ಕೊಡರ, ಹಟ್ಟಿಕೇರಿ, ಬಿಣಗ, ಚೆಂಡಿಯಾ, ಬಿರಾಡೆ ಈ ಗ್ರಾಮಗಳ ಕೆಲವು ನಿರಾಶ್ರಿತರ ಪ್ರಕರಣಗಳು ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ನಿರಂತರವಾಗಿ ಸರ್ಕಾರದ ಬಾಗಿಲು ತಟ್ಟುತ್ತಾ ಬಂದಿದ್ದರು. ಕೇಂದ್ರ ಸರ್ಕಾರದ ಈ ಆದೇಶದಿಂದ ಈಗ 10.47 ಕೋಟಿ ರೂ. ಪರಿಹಾರ ನಿಧಿಯ ಮಂಜೂರಾತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳು ದೀರ್ಘಕಾಲದ ನಿರೀಕ್ಷೆಯಿಂದ ಮುಕ್ತಿಗೊಳ್ಳಲಿದೆ ಎಂದು ನುಡಿದರು. ಇದನ್ನೂ ಓದಿ: ನಮ್ಮ ಪಕ್ಷದ ಗಾಡಿ ಫುಲ್ ಇದೆ: ಸತೀಶ್‌ ಜಾರಕಿಹೊಳಿ

    ಕೆಲವೇ ದಿನಗಳಲ್ಲಿ ಈ 57 ಪ್ರಕರಣಗಳಿಗೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಲಿದೆ. ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆದೇಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ (Rajnath Singh) ಅವರನ್ನು ಮತ್ತು ಜಿಲ್ಲಾಡಳಿತ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

  • ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ: ವಿಶ್ವೇಶ್ವರ ಹೆಗಡೆ ಕಾಗೇರಿ

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ: ವಿಶ್ವೇಶ್ವರ ಹೆಗಡೆ ಕಾಗೇರಿ

    ಬೆಂಗಳೂರು: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

    ಹಣ ಗಳಿಸುವ ಉದ್ದೇಶವನ್ನು ಕಲಿಸುವ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಯ ಹೊರತಾಗಿ, ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುವ, ಜೀವನಕ್ಕೆ ಸಾರ್ಥಕತೆಯನ್ನು ನೀಡುವಂತಹ ಶಕ್ತಿಯನ್ನು ಹೊಂದಿರುವ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಭೋಧಿಸಿದ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯ ಮೂಲ ದಾಖಲೆ ನಮ್ಮಲ್ಲಿಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

    ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಚರಣ್ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು ಎನ್ನುವಂತಹ ವಿಷಯದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆ, ಹಣವನ್ನು ಗಳಿಸುವ ಉದ್ದೇಶದ ಬ್ರಿಟಿಷ್‌ ಪದ್ಧತಿಯಾಗಿದೆ. ನನ್ನದೊಂದು ನಂಬಿಕೆ ಇದೆ. ಅದನ್ನು ಹೇಳಿದರೆ ತಪ್ಪಾಗಲಾರದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಇದೆ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.

    ಭಗವದ್ಗೀತೆಯಲ್ಲಿ ಜಾತಿ, ಉಪಜಾತಿ, ಆ ರಾಜ್ಯ, ಈ ಭಾಷೆ, ಆ ಗಡಿ, ಈ ಗಡಿ ಎನ್ನುವ ತಾರತಮ್ಯ ಇಲ್ಲ. ಯಾವ ಭೇದಭಾವ ಕೂಡ ಇಲ್ಲ. ಸೃಷ್ಟಿಯ ಸತ್ಯ ಏನಿದೆಯೋ ಅದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಸೃಷ್ಟಿಯ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಹಾಗಾಗಿ ಅದನ್ನು ತಿಳಿದುಕೊಳ್ಳುವ ಶಿಕ್ಷಣ ಭಗವದ್ಗೀತೆಯಲ್ಲಿದೆ. ಹಾಗಾಗಿ ಭಗವದ್ಗೀತೆಯ ಶಿಕ್ಷಣವನ್ನು ನಾವು ಕಲಿಸಿದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ. ಅದನ್ನು ಕಲಿಸಬೇಕೆಂಬ ಆಗ್ರಹ ನನ್ನದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

    ನಾನು ಶಿಕ್ಷಣ ಮಂತ್ರಿಯಾಗಿದ್ದಾಗ ಭಗವದ್ಗೀತಾ ಅಭಿಯಾನ ನಡೆಸಲಾಗಿತ್ತು. ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಂತಹ ಅಭಿಯಾನದಲ್ಲಿ ರಾಜ್ಯದ 20 ಲಕ್ಷ ವಿದ್ಯಾರ್ಥಿಗಳು ಭಗವದ್ಗೀತೆ ಕಲಿಯುವ ಅವಕಾಶವನ್ನು ನಾನು ಶಿಕ್ಷಣ ಮಂತ್ರಿಯಾಗಿ ಮಾಡಿಕೊಟ್ಟಿದ್ದೇನೆ. ಇಂದು ಅದು ಕಡ್ಡಾಯವಾಗಿ ಶಿಕ್ಷಣದಲ್ಲಿ ಅಳವಡಿಕೆ ಆಗಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಅದು ಬರಲಿ ಎಂದು ಆಶಿಸೋಣ. ಭಗವದ್ಗೀತೆ ಶಿಕ್ಷಣದ ಭಾಗ ಆಗಬೇಕು. ಏಕೆಂದರೆ ಅದು ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುತ್ತದೆ. ಜೀವನದ ಸಾರ್ಥಕತೆಯನ್ನು ಅದು ನೀಡುತ್ತದೆ. ಹಣಗಳಿಸುವ ಶಿಕ್ಷಣ ವ್ಯವಸ್ಥೆಯಿಂದ ನಮ್ಮ ಜೀವನ ಸಾರ್ಥಕಗೊಳಿಸುವ ಶಿಕ್ಷಣ ವ್ಯವಸ್ಥೆಯ ಕಡೆಗೆ ಹೋಗಲು ಭಗವದ್ಗೀತೆಯಂತಹ ಶಿಕ್ಷಣ ಬೇಕು. ನಾವು ಹಣಗಳಿಸುವ ವ್ಯವಸ್ಥೆಯಿಂದ ಪರಿವರ್ತನೆ ತರಬೇಕು ಎನ್ನುವುದಾದರೆ ಆಧ್ಯಾತ್ಮಿಕ ತಳಹದಿಯ ಶಿಕ್ಷಣ ನಮಗೆ ಅಗತ್ಯ. ಆಧ್ಯಾತ್ಮಿಕ ತಳಹದಿಯ ಶಿಕ್ಷಣ ಭಗವದ್ಗೀತೆಯಂತಹ ಶಿಕ್ಷಣದಲ್ಲಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ವಿಧಾನಸಭೆಯಲ್ಲಿ ಹಾಲಿ ಸ್ಪೀಕರ್‌ಗೆ ಮಾಜಿ ಸ್ಪೀಕರ್ ಸವಾಲ್ – ಸಸ್ಪೆಂಡ್ ಮಾಡ್ಬಿಡಿ ಎಂದ ರೇವಣ್ಣ

    ವಿಧಾನಸಭೆಯಲ್ಲಿ ಹಾಲಿ ಸ್ಪೀಕರ್‌ಗೆ ಮಾಜಿ ಸ್ಪೀಕರ್ ಸವಾಲ್ – ಸಸ್ಪೆಂಡ್ ಮಾಡ್ಬಿಡಿ ಎಂದ ರೇವಣ್ಣ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸವಾಲು ಹಾಕಿದ ಘಟನೆ ನಡೆಯಿತು. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿಗೆ ಸ್ಪೀಕರ್ ಕೂಡ ಗರಂ ಆಗಿದ್ದರು.

    ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಇವತ್ತು ಕೂಡ ಧರಣಿ ಮುಂದುವರಿಸಿ ಕಲಾಪಕ್ಕೆ ಅಡ್ಡಿ ಪಡಿಸಿತು. ಆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಚರ್ಚೆಯಲ್ಲಿ ಭಾಗವಹಿಸಿ, ಧರಣಿ ಕೈಬಿಡಿ. ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯಾದ ಕ್ರಮ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ಅಲ್ಲ. ಕಾಂಗ್ರೆಸ್ ಪಕ್ಷಕ್ಕೂ ಇದು ಶೋಭೆ ಅಲ್ಲ. ಹೊರಗಡೆ ಏನಾದರೂ ಮಾಡಿ, ಕಲಾಪ ನಡೆಸಲು ಅವಕಾಶ ಕೊಡಿ ಅಂತಾ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿ

    ನಮ್ಮ ಮೇಲೆ ಏಕೆ ಗೂಬೆ ಕೂರಿಸ್ತೀರಾ?: ಈ ನಡುವೆ ಸದನದ ಬಾವಿಯಿಂದ ತಮ್ಮ ಆಸನಕ್ಕೆ ಬಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸ್ಪೀಕರ್ ಕಾಗೇರಿಗೆ ಸವಾಲು ಹಾಕಿದರು. ಸಸ್ಪೆಂಡ್ ಮಾಡಲು ನಿಮಗೆ ಅವಕಾಶ ಇದೆ. ಸಸ್ಪೆಂಡ್ ಮಾಡಿ. ಸುಮ್ಮನೇ ನಮ್ಮ ಮೇಲೆ ಏಕೆ ಗೂಬೆ ಕೂರಿಸುತ್ತೀರಾ ಅಂತಾ ಸ್ಪೀಕರ್‌ಗೆ ತಿರುಗೇಟು ಕೊಟ್ಟರು. ಇದೇ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಹೆಚ್.ಡಿ.ರೇವಣ್ಣ, ಅವರೇ ಹೇಳ್ತಿದಾರಲ್ಲ, ಸಸ್ಪೆಂಡ್ ಮಾಡಿ. ಕಲಾಪ ನಡೆಸಲು ಕಾಂಗ್ರೆಸ್ ಅವರು ಅವಕಾಶ ಕೊಡಲಿ, ಇಲ್ಲದಿದ್ದರೆ ಸಸ್ಪೆಂಡ್ ಮಾಡಿ ಅಂತಾ ಒತ್ತಾಯಿಸಿದರು.

    ರಾತ್ರಿ ಇಲ್ಲೇ ಮಲಗೋಣ ಎಂದ ಸಿದ್ದರಾಮಯ್ಯ: ಆಗ ಮಧ್ಯಪ್ರವೇಶ ಮಾಡಿದ ಸ್ಪೀಕರ್, ರಮೇಶ್ ಕುಮಾರ್‌ಗೆ ಟಾಂಗ್ ಕೊಟ್ಟರು. ಸಸ್ಪೆಂಡ್ ಮಾಡಿ ಅಂತಾ ರಮೇಶ್ ಕುಮಾರ್ ಸಲಹೆ ಕೊಟ್ಟಿದ್ದಾರೆ. ಸಸ್ಪೆಂಡ್ ಮಾಡಿ ಅಂತ ರಮೇಶ್ ಕುಮಾರ್ ಬರೆದು ಕೊಡಲಿ. ಸಿದ್ದರಾಮಯ್ಯ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ಅಂತಹವರನ್ನು ಸಸ್ಪೆಂಡ್ ಮಾಡಿ ಅಂತ ರಮೇಶ್ ಕುಮಾರ್ ಸಲಹೆ ಕೊಡ್ತಿದ್ದಾರೆ ಅಂತಾ ತಿರುಗೇಟು ನೀಡಿದರು. ಇದನ್ನೂ ಓದಿ: ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಬಳಿಕವೂ ಗದ್ದಲ ಮುಂದುವರಿದಾಗ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು. ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ. ಸೋಮವಾರದವರೆಗೂ ಧರಣಿ ಮಾಡೋಣ, ಯಾರೂ ಹೋಗಬೇಡಿ, ಇಲ್ಲೇ ಕೂರಿ. ರಾತ್ರಿ ವಿಧಾನಸಭೆಯಲ್ಲಿ ಮಲಗೋಣ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸದಸ್ಯರಿಗೆ ಖಡಕ್ ಸೂಚನೆ ಕೊಟ್ಟಿದ್ದು, ಧರಣಿ ಮುಂದುವರಿದಿದೆ.

  • ಅಂಬೇಡ್ಕರ್ ಫೋಟೋ ಅಳವಡಿಕೆ –  ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಅಂಬೇಡ್ಕರ್ ಫೋಟೋ ಅಳವಡಿಕೆ – ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಬೆಳಗಾವಿ: ಸುವರ್ಣ ಸೌಧದ ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಇನ್ನೂ ಅಳವಡಿಸದ ವಿಚಾರ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

    ಬೆಳಗಾವಿ ವಿಧಾನಸಭೆಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಾಕಬೇಕು ಅಂತಾ ಹೇಳಿ ಎರಡು ವರ್ಷ ಆದ್ರೂ ಹಾಕಿಲ್ಲ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ

    ಈ ವೇಳೆ ಕುಳಿತುಕೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನ್ನದಾನಿಗೆ ಸೂಚಿಸಿದರು. ಸ್ಪೀಕರ್ ಮಾತು ಪರಿಗಣಿಸದೇ ಅನ್ನದಾನಿ ಅವರು ತಮ್ಮ ಆಸನದಿಂದ ಹೊರಗೆ ಬಂದು ನಿಂತರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಈ ವೇಳೆ ಮತ್ತೆ ಕುಳಿತುಕೊಳ್ಳುವಂತೆ ಶಾಸಕ‌ ಅನ್ನದಾನಿಗೆ ಸ್ಪೀಕರ್ ವಾರ್ನಿಂಗ್ ನೀಡಿ, ಸಂತೆಯಲ್ಲಿ ಮಾತಾಡಿದಂತೆ ಜೋರಾಗಿ ಒದರಿಕೊಂಡು ಮುಂದೆ ಬಂದರೆ ಅದು ಅಶಿಸ್ತಿನ ಪರಮಾವಧಿ ಎಂದೇ ಪರಿಗಣಿಸಬೇಕಾಗುತ್ತದೆ. ಡಾ. ಅನ್ನದಾನಿ ನೀವು ಗೌರವದಿಂದ ನಡೆದುಕೊಳ್ಳಿ ಎಂದು ಸ್ಪೀಕರ್ ಕಾಗೇರಿ ಹೇಳಿದರು.

    ಇದೇ ವೇಳೆ ಅಂಬೇಡ್ಕರ್ ಪೋಟೋ ಹಾಕುವುದಕ್ಕೆ ವಿವಾದವೇ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಕಲಾಪದಲ್ಲಿ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕಿಯೇ ಹಾಕ್ತೀವಿ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ನೂ ಯಾರದೆಲ್ಲ ಫೋಟೋ ಹಾಕಬೇಕು ಎಂದು ಪ್ರಮುಖ ನಾಯಕರ ಸಲಹೆ ಪಡೆದು ಹಾಕ್ತೀವಿ ಎಂದ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು.

    ಸದನದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಮೊದಲು ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

  • ಕಾಗೇರಿ ಕ್ಷೇತ್ರದಲ್ಲಿ ಮಕ್ಕಳಿಗಾಗಿ ಸೇತುವೆ ನಿರ್ಮಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌

    ಕಾಗೇರಿ ಕ್ಷೇತ್ರದಲ್ಲಿ ಮಕ್ಕಳಿಗಾಗಿ ಸೇತುವೆ ನಿರ್ಮಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳು ಅರಣ್ಯಮಯವಾದ್ದರಿಂದ ಸಮಸ್ಯೆಗಳು ಹೆಚ್ಚು. ಇದನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ತಮಗೆ ಸಂಬಂಧವಿಲ್ಲ ಎಂಬಂತೆ ಮೂಗು ಮುರಿಯುತ್ತಾರೆ. ಅದರೆ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸೇತುವೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

    ವಿಧಾನಸಭೆ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ್ ಹೆಗಡೆಯವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸರಿಮನೆ ಗ್ರಾಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳಿವೆ. ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ನಾಲ್ಕು ಕಿ.ಮೀ. ನಡೆದು ಹೋಗಬೇಕು. ಈ ಮಾರ್ಗದಲ್ಲಿ ಬಸರಿಮನೆ ಹೊಳೆ ಸಾಗುತ್ತದೆ. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುವುದರಿಂದ ಅಡಿಕೆ ಹಾಗೂ ಮರದ ಹಲಗೆಯಲ್ಲಿ ನಿರ್ಮಿಸಿದ ಕಾಲು ಸಂಕವೇ ಶಾಲೆಗೆ ಹೋಗುವ ಮಕ್ಕಳಿಗೆ ಜೀವರಕ್ಷಕ.

    ಮಳೆಗಾಲದಲ್ಲಿ ಈ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಹೀಗಾಗಿ ಇಲ್ಲಿನ ಶಾಸಕರು, ಸದ್ಯ ರಾಜ್ಯದ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರು.

    2019ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ಬಿಡುಗಡೆಯಾದರೂ ಸೇತುವೆ ಮಾತ್ರ ನಿರ್ಮಾಣವಾಗಲಿಲ್ಲ. ಈ ಬಗ್ಗೆ ಸ್ಪೀಕರ್ ಕಾಗೇರಿಗೆ ಹಲವು ಬಾರಿ ಮನವಿ ನೀಡಿದ್ದರು. ಆದರೆ ಕೆಲಸ ಮಾತ್ರ ಪ್ರಾರಂಭ ಆಗಲೇ ಇಲ್ಲ. ಹೀಗಾಗಿ ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್ ಆಳ್ವ ಅವರ ಗಮನಕ್ಕೆ ತಂದಿದ್ದರು.

    ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲವು ಅಡೆತಡೆಗಳು ಬಂದಿದ್ದರಿಂದ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಗಂತ ಅವರು ಸುನ್ಮನೆ ಕೂರದೆ ತಮ್ಮ ಸ್ನೇಹಿತರಾಗಿದ್ದ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಗಮನಕ್ಕೆ ತಂದು ಸಹಾಯ ಬೇಡಿದ್ದರು. ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಅರಿತ ಅವರು, ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹತ್ತು ಲಕ್ಷ ರೂ. ಹಣವನ್ನು ಮಂಜೂರು ಮಾಡಿ ಉ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

    ನಿವೇದಿತ್ ಆಳ್ವ ಸಹ ಈ ಬಗ್ಗೆ ಮುತುವರ್ಜಿ ವಹಿಸಿ ಸೇತುವೆ ನಿರ್ಮಾಣ ಆಗುವ ವರೆಗೆ ಪ್ರತಿ ಬಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತಿದ್ದರು. ಇದರ ಪ್ರತಿಫಲವಾಗಿ ಇಂದು ಸೇತುವೆ ನಿರ್ಮಾಣವಾಗಿದ್ದು, ಜನ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭಯದಲ್ಲೇ ಸಾಗುತಿದ್ದ ಮಕ್ಕಳಿಗೆ ಈ ಬಾರಿಯಿಂದ ಮಳೆಗಾಲದ ಭಯ ದೂರವಾಗಿದೆ.

  • ಸ್ಪೀಕರ್ ಹಾಗೂ ಮಾಜಿ ಸಿಎಂ ನಡುವೆ ಮುಸುಕಿನ ಗುದ್ದಾಟ

    ಸ್ಪೀಕರ್ ಹಾಗೂ ಮಾಜಿ ಸಿಎಂ ನಡುವೆ ಮುಸುಕಿನ ಗುದ್ದಾಟ

    ಬೆಂಗಳೂರು: ಸ್ಪೀಕರ್ ಆದ ದಿನದಿಂದಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಸದನದಲ್ಲೇ ಜಟಾಪಟಿ ನಡೆದಿತ್ತು. ಇದರಿಂದ ಹಟಕ್ಕೆ ಬಿದ್ದ ಸ್ಪೀಕರ್ ಶಿಷ್ಟಾಚಾರವನ್ನು ಮೀರಿ ನನಗೆ ಅವಮಾನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

    ತಮ್ಮ ಆಪ್ತರ ಮುಂದೆ ಈ ವಿಚಾರವನ್ನು ಹಂಚಿಕೊಂಡ ಸಿದ್ದರಾಮಯ್ಯ ನಾನು ವಿಪಕ್ಷ ನಾಯಕನಾಗಿ 5 ತಿಂಗಳಾದರೂ ಕಾರು ನೀಡಿಲ್ಲ. ವಿಪಕ್ಷ ನಾಯಕ ನೇಮಿಸಿಕೊಳ್ಳಬಹುದಾದ ಸಿಬ್ಬಂದಿ ನೇಮಕವು ಆಗಿಲ್ಲ. ಅಲ್ಲದೆ ಭತ್ಯೆ ವಿಚಾರದಲ್ಲೂ 5 ತಿಂಗಳಿನಿಂದ ವಿಪಕ್ಷ ನಾಯಕನಿಗೆ ನೀಡಬೇಕಾದ ಯಾವುದೇ ಭತ್ಯೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಸದನದಲ್ಲಿ ಸ್ಪೀಕರ್ ಜೊತೆಗೆ ನಡೆದ ಜಟಾಪಟಿಗೆ ಸೇಡಿನ ಕ್ರಮವಾಗಿ ಕಾಗೇರಿ ಹೀಗೆ ಶಿಷ್ಟಾಚಾರವನ್ನು ಉಲ್ಲಂಘಿಸಿ ಸತಾಯಿಸುತ್ತಿದ್ದಾರೆ ಎನ್ನುವುದು ಸಿದ್ದರಾಮಯ್ಯ ಆರೋಪ. ಕಳೆದ 20 ದಿನದ ಹಿಂದೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದಕ್ಕೂ ಮೊದಲು 4-5 ತಿಂಗಳ ಯಾವುದೇ ಭತ್ಯೆ ಹಾಗೂ ಅನುಕೂಲ ನೀಡಿಲ್ಲ ಎನ್ನುವುದು ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದೆ.