Tag: Vishweshwar Hegde Kageri

  • ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆಯಾಗಿದೆ – ಸ್ಪೀಕರ್ ಕಾಗೇರಿ

    ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆಯಾಗಿದೆ – ಸ್ಪೀಕರ್ ಕಾಗೇರಿ

    ಧಾರವಾಡ: ಬೆಳಗಾವಿಯಲ್ಲೇ 10 ದಿನ ಚಳಿಗಾಲದ ಅಧಿವೇಶನ (Belagavi Winter Session) ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದ್ದು, ಅಂತಿಮವಾಗಿ ಕ್ಯಾಬಿನೆಟ್ ನಿಗದಿಪಡಿಸಿದ ದಿನಗಳವರೆಗೆ ಅಧಿವೇಶನ ನಡೆಸಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದ್ದಾರೆ.

    ಧಾರವಾಡದಲ್ಲಿ (Dharawada) ಮಾತನಾಡಿದ ಅವರು, ಅಧಿವೇಶನದ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಕ್ಯಾಬಿನೆಟ್‌ನಲ್ಲಿ ಸಿಎಂ ನಿರ್ಧರಿಸಿ ಹೇಳಬೇಕಿದೆ. ಅದಕ್ಕಾಗಿ ನಾವೂ ಕಾಯುತ್ತಿದ್ದೇವೆ. 10 ದಿನ ಅಧಿವೇಶನ ಮಾಡಬಹುದು ಎಂದು ಚರ್ಚೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು, ಮಂಗಳೂರು ಸೇರಿ ರಾಜ್ಯದ 6 ಕಡೆ ಹೊಸ ನಗರಗಳ ನಿರ್ಮಾಣ – ಬೊಮ್ಮಾಯಿ

    ಅಧಿವೇಶನಕ್ಕೆ 10 ದಿನ ಸಾಕಾಗುವುದಿಲ್ಲ. ಚರ್ಚೆ ಮಾಡಲು ಸಮಯ ಸಾಕಾಗುವುದಿಲ್ಲ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರು ಅಧಿವೇಶನ ಹೆಚ್ಚು ದಿನ ನಡೆಸಲು ಮನವಿ ಮಾಡಿದ್ದಾರೆಂದು ಸರ್ಕಾರಕ್ಕೆ ಹೇಳುತ್ತೇನೆ. ಕೊನೆಗೆ ಸರ್ಕಾರ ಕ್ಯಾಬಿನೆಟ್‌ನಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದರಂತೆ ಮಾಡುತ್ತೇವೆ. ಈ ಬಾರಿಯ ಅಧಿವೇಶನವನ್ನು ಒಳ್ಳೆಯದಾಗಿ ಮಾಡೋಣ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ಬೆಂಗಳೂರು: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಅಭಿಯಾನ ವಿಚಾರವಾಗಿ ಶಾಸಕ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾರಿಕೆ ಉತ್ತರ ನೀಡಿದ್ದಾರೆ.

    ಅಭಿಯಾನದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊದಲಿನಿಂದಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಇದೆ. ಈಗಾಗಲೇ ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇನೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಜೊತೆಯೂ ಮಾತುಕತೆ ಮಾಡುತ್ತಿದ್ದೇವೆ. ಸುಧಾಕರ್ ಕೂಡ ಸಿಎಂ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಸರ್ಕಾರವು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನಕ್ಕೆ ಫಲ ಸಿಗುತ್ತದೆ ಎಂದರು.

    ಅತಿ ಹೆಚ್ಚು ಬಾರಿ ಶಾಸಕರಾಗಿದರೂ, ಮಂತ್ರಿ ಆಗಿದರೂ ಆಸ್ಪತ್ರೆ ಕಟ್ಟಿಸಲು ಆಗಿಲ್ಲವಲ್ಲಾ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದರು. ಈಗ ಸಚಿವ ಸುಧಾಕರ್ ಜೊತೆ ಮಾತಾಡಿದ್ದೇನೆ. ಅವರು ಸಿಎಂ ಜೊತೆ ಮಾತಾಡುತ್ತೇನೆ ಎಂದಿದ್ದಾರೆ. ನಾವು ನಮ್ಮ ಪ್ರಯತ್ನ ಮಾಡುತ್ತೇವೆ ಎಂದರು. ಸರ್ಕಾರ ಯಾವಾಗ ಒಪ್ಪಿಗೆ ಕೊಡುತ್ತೋ, ಆಗ ಆಸ್ಪತ್ರೆ ಆಗುತ್ತದೆ ಎಂದು ಹಾರಿಕೆ ಉತ್ತರ ಕೊಟ್ಟರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್

    ಪತ್ರಕರ್ತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೇ ಕೈ ಮುಗಿದು ಹೋದರು. ಆಸ್ಪತ್ರೆ ಕಟ್ಟಲು ಇನ್ನೆಷ್ಟು ವರ್ಷ ಬೇಕೆನ್ನುವ ಪ್ರಶ್ನೆಗೆ ಉತ್ತರ ಕೊಡದೇ ಮತ್ತದೇ ಹಾರಿಕೆ ಉತ್ತರ ಕೊಟ್ಟರು. ನಾವು ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರದಲ್ಲಿ ಮಂಜೂರು ಆದಾಗ ಆಸ್ಪತ್ರೆ ಆಗುತ್ತದೆ. ಈಗ ಅಗತ್ಯ ಪ್ರಯತ್ನ ಮಾಡೋದಾಗಿ ಹೇಳಿದರು. 

    ಲಿಟಿ ಆಸ್ಪತ್ರೆಗೆ ಪ್ರಯತ್ನ ಮಾಡುತ್ತಿದ್ದೇವೆ, ನಿರಂತರವಾಗಿ ಪ್ರಯತ್ನ ನಡೆಯಲಿದೆ. ಆಸ್ಪತ್ರೆ ಸಿಗುವವರೆಗೂ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತೇವೆ ಎಂದ ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ:  ಆಸ್ಪತ್ರೆಗಾಗಿ ಟ್ಟಿಟ್ಟರ್ ಅಭಿಯಾನ – ದೇಶದ 35 ಟಾಪ್ ಹ್ಯಾಷ್‌ಟ್ಯಾಗ್‌ನಡಿ ಟ್ರೆಂಡಿಂಗ್

    Live Tv
    [brid partner=56869869 player=32851 video=960834 autoplay=true]

  • ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

    ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

    ಬೆಂಗಳೂರು: ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುವಾಗ ಆರ್‌ಎಸ್‍ಎಸ್‍ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಜಮೀರ್ ಒಂದು ಮಾತು ಹೇಳ್ತೀನಿ, ಮುಂದೆ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

    ಚರ್ಚೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್, ಆಮೇಲೆ ಬಿಜೆಪಿ, ಆರ್‌ಎಸ್‍ಎಸ್‍, ಕಾಂಗ್ರೆಸ್ ಎಲ್ಲಾ ಎಂದು ತಿವಿದರು. ಆಗ ಮಧ್ಯಪ್ರವೇಶ ಮಾಡಿದ ಅಶೋಕ್ ಮತ್ತೆ ಆರ್‌ಎಸ್‍ಎಸ್‍ಗೆ ಹೋಗ್ತೀರಲ್ಲಾ ಸಾರ್..? ಎಂದು ತಿರುಗೇಟು ನೀಡಿದರು.

    ಆ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ನೀವು ಯಾಕೆ ನಮ್ಮ ಆರ್‌ಎಸ್‍ಎಸ್‍ ಬಗ್ಗೆ ಅಷ್ಟು ಬೇಸರ ಮಾಡ್ಕೊಳ್ತೀರಿ? ಎಂದು ಹೇಳಿದರು. ಆಗ ಸಿದ್ದರಾಮಯ್ಯ ಮಾತನಾಡಿ, ಬೇಸರನೇ ಮಾಡ್ಕೊಂಡಿಲ್ಲಾ, ಆರ್‌ಎಸ್‍ಎಸ್‍ ಎನ್ನುವುದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಆರ್‍ಎಸ್‍ಎಸ್ ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸ್ಪೀಕರ್ ಹೇಳಿದರು.

    ಆರ್‌ಎಸ್‍ಎಸ್‍ ಬಗ್ಗೆ ಸ್ಪೀಕರ್ ಮಾತನಾಡುತ್ತಿದ್ದಂತೆ ಎದ್ದು ನಿಂತ ಜಮೀರ್ ಅಹಮದ್ ಪೀಠ ಮೇಲೆ ಕೂತ್ಕೊಂಡು ನಮ್ಮ ಆರ್‍ಎಸ್‍ಎಸ್ ಅಂತೀರಾ ತಾವು? ಎಂದು ಟಾಂಗ್ ಕೊಟ್ಟರು. ಆಗ ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ, ಇನ್ನೇನು ಮತ್ತೆ? ನಮ್ಮ ಅರ್‍ಎಸ್‍ಎಸ್ಸೆ!. ಆರ್‍ಎಸ್‍ಎಸ್ ನಮ್ದೇ ರೀ. ಜಮೀರ್ ಒಂದು ಮಾತು ಹೇಳ್ತೀನಿ, ಇವತ್ತಲ್ಲಾ ನಾಳೆ ನಮ್ಮ ದೇಶದಲ್ಲಿ ನೀವೂ ಸಹ ನಮ್ಮ ಆರ್‍ಎಸ್‍ಎಸ್ ಎಂದು ಹೇಳಬೇಕಾಗುತ್ತದೆ. ಖಂಡಿತವಾಗಿ ಹೇಳಬೇಕಾಗುತ್ತದೆ ಎಂದು ಜಮೀರ್ ಗೆ ಸ್ಪೀಕರ್ ತಿವಿದರು.

    ಆ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಜಮೀರ್ ಹೋಗಲಿ, ನಾನೇ ತೀರ್ಮಾನಕ್ಕೆ ಬಂದಿದ್ದೇನೆ, ಆರ್‌ಎಸ್‍ಎಸ್‍ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕೆ ವಿರೋಧ ಮಾಡುತ್ತೇವೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

    ಈ ನಡುವೆ ಆರ್.ಅಶೋಕ್ ಎದ್ದು ನಿಂತು, ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ. ಈಗ ಸರ್ವವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್‌ಎಸ್‍ಎಸ್‍, ಪ್ರಧಾನಿ ಆರ್‌ಎಸ್‍ಎಸ್‍, ಉಪರಾಷ್ಟ್ರಪತಿ ಆರ್‌ಎಸ್‍ಎಸ್‍, ಮುಖ್ಯಮಂತ್ರಿಗಳು ಆರ್‌ಎಸ್‍ಎಸ್‍, ಒಪ್ಪಿಕೊಳ್ಳಲೇಬೇಕು ಈಗ ಎಂದು ಅಶೋಕ್ ಹೇಳಿದಾಗ ಇದು ದುರಾದೃಷ್ಟ ಅಂತಾ ರಾಮಲಿಂಗಾರೆಡ್ಡಿ ಕೆಣಕಿದರು.

    ಆಗ ಅಶೋಕ್ ದುರಾದೃಷ್ಟ ಅಲ್ಲ ಇದು, ಅದೃಷ್ಟ ಎಂದು ಮತ್ತೆ ಟಾಂಗ್ ಕೊಟ್ಟರು. ಆಗ ಜಮೀರ್ ಮತ್ತೆ ಮಧ್ಯಪ್ರವೇಶಿಸಿ ಅಶೋಕ್ ಅವರೇ ನೀವು ಬಿಜೆಪಿ ಎಂದು ಯಾಕೆ ಹೇಳುತ್ತೀರಾ, ಆರ್‌ಎಸ್‍ಎಸ್‍ ಪಕ್ಷ ಎಂದು ಹೇಳಿ, ಬಿಜೆಪಿ ತೆಗೆದು ಬಿಡಿ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

    ತಕ್ಷಣವೇ ಎದ್ದ ಈಶ್ವರಪ್ಪ ಈ ದೇಶದ ಎಲ್ಲಾ ಮುಸಲ್ಮಾನರು, ಎಲ್ಲಾ ಕ್ರಿಶ್ಚಿಯನ್ನರು ಇವತ್ತಲ್ಲಾ ನಾಳೆ ಆರ್‌ಎಸ್‍ಎಸ್‍ ಆಗ್ತಾರೆ ಯಾವ ಅನುಮಾನವೂ ಇಲ್ಲ, ನಾನು ಆರ್‌ಎಸ್‍ಎಸ್‍ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಎಂದು ನೀವೇ ಹೇಳ್ತೀರಾ ಎಂದರು. ಆಗ ಕೆ.ಜೆ. ಜಾರ್ಜ್ ಮಾತನಾಡಿ, ಅದು ಆಗುವುದಿಲ್ಲ, ಸಾಧ್ಯವೇ ಇಲ್ಲ, ನೀವೇ ಇರೋದಿಲ್ಲ ಎಂದು ತಿರುಗೇಟು ಕೊಟ್ಟರು.

    ಈ ನಡುವೆ ಶಾಸಕ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶ ಮಾಡಿ ಇದೇ ಪೀಠದಲ್ಲಿ ಕುಳಿತು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆ ಎಂದು ನೀವೇ ಹೇಳಿದ್ದೀರಿ, ಅಂದು ಪೀಠದಲ್ಲಿ ಕುಳಿತು ಸಂವಿಧಾನ ಪರವಾಗಿ ಇದ್ದೀರಿ ಎಂದು ಹೇಳಿದ್ದೀರಿ, ಈಗ ಅದೇ ಪೀಠದಲ್ಲಿ ಕುಳಿತು ನೀವು ಆರ್‌ಎಸ್‍ಎಸ್‍ ಪರವಾಗಿ ಇದ್ದೀರಿ ಎಂದು ಹೇಳ್ತಿದ್ದೀರಿ, ಇದೇ ಆರ್‍ಎಸ್‍ಎಸ್‍ನವರು ರಾಮಲೀಲಾ ಮೈದಾನದಲ್ಲಿ ನೂರೈವತ್ತು ಬಾರಿ ಪ್ರತಿಭಟನೆ ಮಾಡಿ ಸಂವಿಧಾನ ಸುಟ್ಟಿದ್ದಾರೆ ಎಂದಾಗ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಹೇ ಎಲ್ಲೆಲ್ಲೋ ಹೋಗ್ತಿದ್ದೀರಿ ಪ್ರಿಯಾಂಕ್, ಸುಮ್‍ಸುಮ್ಮನೇ ಏನೇನೋ ಮಾತಾಡಬಾರದು, ಸರಿಯಲ್ಲ ಇದು, ನಿಮ್ಮ ರಾಜಕೀಯ ಇದ್ದರೆ ಹೊರಗೆ ಮಾತಾಡಿ ಎಂದು ಚರ್ಚೆಗೆ ಇತಿಶ್ರೀ ಹಾಡಿ ಭೋಜನಕ್ಕೆ ಕಲಾಪ ಮುಂದೂಡಿದರು.

  • ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

    ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ರಾಗಿ, ರಾಗಿ ಎಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಘೋಷಣೆ ಕೂಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶಕ್ಕೆ ಗುರಿಯಾದರು.

    ಶೂನ್ಯವೇಳೆಗೂ ಮುಂಚೆ ಎದ್ದು ನಿಂತ ಡಾ. ರಂಗನಾಥ್ ರಾಗಿ ಖರೀದಿ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದ್ರು. ಅಷ್ಟೇ ಅಲ್ಲ ರಾಗಿ, ರಾಗಿ ಎಂದು ಘೋಷಣೆ ಕೂಗಿದರು. ಆಗ ರಂಗನಾಥ್ ವರ್ತನೆಗೆ ಸ್ಪೀಕರ್ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಅಸಭ್ಯವಾಗಿ ನಡೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ರಾಗಿ ವಿಚಾರ ಪ್ರಮುಖವಾದದ್ದು ಎಂದು ಗೊತ್ತಿದೆ. ಅಸಭ್ಯವಾಗಿ ಅಸಹ್ಯವಾಗಿ ವರ್ತನೆ ಮಾಡಬೇಡಿ. ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಮೂರು ಲಕ್ಷ ಟನ್ ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಉತ್ತರ ಬೇಕೆಂದರೆ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು. ಬಳಿಕ ರಂಗನಾಥ್ ಸುಮ್ಮನಾದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇನ್ನೊಂದೆಡೆ ಶೂನ್ಯವೇಳೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ರಾಶಿಯಂತ್ರಕ್ಕೆ ಸಿಲುಕಿ ಸರಣಿ ಸಾವುಗಳಾಗುತ್ತಿವೆ ಎಂದು ಶಾಸಕ ಈಶ್ವರ್ ಖಂಡ್ರೆ ಪ್ರಸ್ತಾಪಿಸಿದರು. ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ರಾಶಿ ಯಂತ್ರ ಅಂದ್ರೆ, ಕಡಲೆ, ತೊಗರಿ ಕಟವ್ ಮಾಡುವ ಯಂತ್ರವನ್ನು ರೈತರು ಖರೀದಿ ಮಾಡ್ತಾರೆ ಆದ್ರೆ ರೈತರಿಗೆ ಈ ಯಂತ್ರ ಉಪಯೋಗ ಮಾಡಲು ಬರಲ್ಲ. ಕೆಲದಿನಗಳ ಹಿಂದೆ ಮಹಿಳೆಯ ಕೂದಲು ಹಾಗೂ ಚೂಡಿದಾರದ ದುಪ್ಪಟ ಸಿಲುಕಿ ಸಾವಿಗೀಡಾಗಿದ್ದಾರೆ. ಈ ಯಂತ್ರ ಉಪಯೋಗಕ್ಕೆ ಯಾವುದೇ ರೀತಿಯ ತರಬೇತಿ, ಜಾಗೃತಿ ಇಲ್ಲ. ಇದಕ್ಕೆ ತರಬೇತಿ ಕೊಡಬೇಕು. ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡುವಂತೆ ಈಶ್ವರ ಖಂಡ್ರೆ ಮನವಿ ಮಾಡಿಕೊಂಡರು.

    ಈ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ಯಂತ್ರಗಳನ್ನು ನೋಡಿದ್ರೆ ಎಲ್ಲ ತಮಿಳುನಾಡಿನಿಂದ ಬರ್ತಿವೆ ಅನ್ಸುತ್ತೆ? ಎಲ್ಲ ತಮಿಳುನಾಡಿನವು ಅಲ್ವಾ ಎಂದು ಪ್ರಶ್ನಿಸಿದ್ರು. ಬಳಿಕ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತರಿಗೆ ತರಬೇತಿ ಕೊಡುವ ಕೆಲಸವನ್ನು ಕೃಷಿ ಇಲಾಖೆಯಿಂದಲೇ ಮಾಡುತ್ತೇವೆ. ಸಾವಿಗೀಡಾದವರಿಗೆ ಪರಿಹಾರ ನೀಡುವ ಬಗ್ಗೆ ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

    ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

    ಬೆಂಗಳೂರು: ನಾಳೆ ಸಂಜೆ 6.45ಕ್ಕೆ ಮಂತ್ರಿ ಮಾಲ್‌ನ ಸ್ಕ್ರೀನ್‌ನಲ್ಲಿ ಬಾಲಿವುಡ್‌ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸದನದಲ್ಲೇ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಹ್ವಾನ ನೀಡಿದ್ದಾರೆ. ಆದರೆ ಸ್ಪೀಕರ್‌ ಆಹ್ವಾನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.

    ಏನದು ಸಿನಿಮಾ? ನಾನು ಸಿನಿಮಾ ನೋಡಲು ಹೋಗ್ತಾ ಇಲ್ಲ. ಆಸಕ್ತಿ ಇರುವವರು ಹೋಗುತ್ತಾರೆ ಅನಿಸುತ್ತೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡ ಕುರಿತ ಚಿತ್ರ ʻದಿ ಕಾಶ್ಮೀರ್ ಫೈಲ್ಸ್ʼ ವೀಕ್ಷಣೆಗೆ ನಾಳೆ ವಿಧಾನಸಭೆ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿಧಾನಸಭೆ ಕಲಾಪದಲ್ಲಿಂದು ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿಗೆ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದರು.

    ನಾಳೆ ಸಂಜೆ 6.45 ಕ್ಕೆ ಮಂತ್ರಿ ಮಾಲ್‌ನಲ್ಲಿ ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವಿಧಾನಸಭೆ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸ್ಪೀಕರ್ ಕಾಗೇರಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಶಾಸಕರು ಹಾಗೂ ಸಚಿವರು ಸಿನಿಮಾ ವೀಕ್ಷಿಸಲು ಬರಬೇಕು. ಎಲ್ಲರೂ ಜೊತೆಗೂಡಿ ನೋಡೋಣ. ವಿರೋಧ ಪಕ್ಷಗಳ ಸದಸ್ಯರೂ ಸಿನಿಮಾ ನೋಡಲು ಬರಬೇಕು ಎಂದು ಸ್ಪೀಕರ್ ಆಹ್ವಾನ ನೀಡಿದರು. ನಿನ್ನೆಯಷ್ಟೇ ಸಿಎಂ‌ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ‌ ಸಹ ಸಿನಿಮಾ ವೀಕ್ಷಣೆ ಮಾಡಿದರು. ಬಳಿಕ‌ ಸಿಎಂ ಈ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ ಘೋಷಣೆ ಮಾಡಿದರು.

  • ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ನಾಳೆ ಸಂಜೆ 6.45ಕ್ಕೆ ಮಂತ್ರಿ ಮಾಲ್ ನ ಸ್ಕೀನ್ ನಲ್ಲಿ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸದನದಲ್ಲೇ ಶಾಸಕರಿಗೆ ಆಹ್ವಾನ ನೀಡಿದ್ದಾರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ. ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಮಂತ್ರಿ ಮಾಲ್ ನ ಸ್ಕ್ರೀನ್ ನಂ 6ರಲ್ಲಿ ಎಲ್ಲ ಶಾಸಕರಿಗಾಗಿ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ  ಚಿತ್ರ  ವೀಕ್ಷಣೆಗೆ ಬರಬೇಕು ಎಂದು  ಸ್ಪೀಕರ್  ಕಾಗೇರಿ ಮನವಿ ಮಾಡಿದರು. ಜೊತೆಗೆ ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ವಿಪಕ್ಷ ಶಾಸಕರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಸಿನಿಮಾದ ಬಗ್ಗೆ ಪರ ಮತ್ತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಡೆ ಭಾರೀ ಅಚ್ಚರಿಗೆ ಕಾರಣವಾಗಬಹುದು. ನೆನ್ನೆಯಷ್ಟೇ ಈ ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಹಲವು ಮಂತ್ರಿಗಳು ವೀಕ್ಷಿಸಿದ್ದರು. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಸಿನಿಮಾ ಮುಗಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚಿತ್ರದ ಬಗ್ಗೆ ತಕ್ಷಣವೇ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬಾ ಭಾವುಕನಾಗಿದ್ದೇನೆ. ಕಾಶ್ಮೀರದಲ್ಲಿ ಪಂಡಿತರ ಮೇಲೆ ಯಾವ ರೀತಿ ದಾಳಿ ನಡೆಯಿತು ಎಂದು ತೋರಿಸಿದ್ದಾರೆ’ ಎಂದಿದ್ದರು. ಆನಂತರ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರು.

  • ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ

    ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ

    ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗಿ 4 ದಿನ ಆಗಿದೆ. ನಿನ್ನೆ ಮೊನ್ನೆಯಿಂದ ನಾನು ಗಮನಿಸ್ತಿದೀನಿ ಸದನಕ್ಕೆ ಬಂದರೂ, ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಕೆಲವು ಸಚಿವರಲ್ಲಿ ಇದೆ. ಇದು ಶೋಭೆ ತರಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು.

    ಸದನದಲ್ಲಿ ಮಾತನಾಡಿದ ಅವರು, ಸದನ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಆಯಿತು. ಪ್ರಶೋತ್ತರ ಮತ್ತು ಇತರ ಸಂದರ್ಭಗಳಲ್ಲಿ ಸದನದಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಇದೆ. ಆದರೆ ನಿನ್ನೆ ಮೊನ್ನೆ ಮತ್ತು ಇಂದಿನ ಪರಿಸ್ಥಿತಿ ನೋಡಿದರೆ, ಸದನಕ್ಕೆ ಬಂದರೂ ತೊಂದರೆ ಇಲ್ಲ, ಬರದಿದ್ದರೂ ತೊಂದರೆ ಇಲ್ಲ ಎಂಬ ಮನಸ್ಥಿತಿ ಸದಸ್ಯರಲ್ಲಿ, ಸಚಿವರಲ್ಲಿ ಬಂದರೆ ಈ ವ್ಯವಸ್ಥೆ ಕುಸಿತ ಕಾಣುತ್ತದೆ. ಸಚಿವರಿಗೆ ಇದಕ್ಕಿಂತ ಇನ್ನಿತರ ಕಾರ್ಯಕ್ರಮ ಮುಖ್ಯವೆನಿಸಿದೆ. ಈ ಭಾವನೆಯಿಂದ ಹೊರಬನ್ನಿ. ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗ್ತಾರೆ ಎಂದು ಸಚಿವರ ಮೇಲೆ ಅಸಮಾಧಾನಗೊಂಡರು. ‌ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಈ ವೇಳೆ ಸಚಿವರು ಸದನಕ್ಕೆ ಬರುವಂತೆ ನೀವೇ ಏನಾದ್ರೂ ರೂಲಿಂಗ್ ಕೊಡಬೇಕು ಸಚಿವರು ಇಲ್ಲದಿದ್ದ ಮೇಲೆ ಮತ್ಯಾಕೆ ಸದನ ನಡೆಸ್ತೀರಿ ಎಂದು ಸ್ಪೀಕರ್‌ಗೆ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಗೈರು:
    ಬಿಜೆಪಿ – 25, ಕಾಂಗ್ರೆಸ್ – 13 ಮತ್ತು ಜೆಡಿಎಸ್‌ನ 7 ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

  • ಸದನದಲ್ಲಿ ಸದ್ದು ಮಾಡಿದ ರೈತ ಮಹಿಳೆ ವಿಷ ಕುಡಿದ ಪ್ರಕರಣ

    ಸದನದಲ್ಲಿ ಸದ್ದು ಮಾಡಿದ ರೈತ ಮಹಿಳೆ ವಿಷ ಕುಡಿದ ಪ್ರಕರಣ

    ಬೆಂಗಳೂರು: ಮುಂಡರಗಿ ತಾಲೂಕಿನಲ್ಲಿ ರೈತ ಮಹಿಳೆಯರು ವಿಷ ಕುಡಿದ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅರಣ್ಯ ಇಲಾಖೆಯ ಕಿರುಕುಳದಿಂದ ವಿಷ ಕುಡಿದ ಪ್ರಕರಣವನ್ನು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಶಾಸಕ ಎಚ್‍ಕೆ ಪಾಟೀಲ್ ಪ್ರಸ್ತಾಪ ಮಾಡಿ ಗಂಭೀರತೆಯನ್ನು ವಿವರಿಸಿದರು.

    ಇದೇ ವೇಳೆ ಎಚ್.ಕೆ. ಪಾಟೀಲ್ ಬೆಂಬಲಕ್ಕೆ ಮಾಜಿ ಸಿಎಂ ಯಡಿಯೂರಪ್ಪ ನಿಂತರು. ಇದೊಂದು ಗಂಭೀರವಾದ ಪ್ರಕರಣ. ಎಚ್.ಕೆ. ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಸಿಎಂ ಆದಷ್ಟು ಬೇಗ ಕ್ರಮವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಅಗತ್ಯ ಬಿದ್ದರೆ ಸದನ ಸಮಿತಿ ರಚಿಸಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

    ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿ ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಮುಂದಾಗಬೇಕು. ಅರಣ್ಯಾಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೇ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹಾರ ಮಾಡಲು ಆಗ್ರಹಿಸಿದರು.

    ಇದೇ ವೇಳೆ ಸ್ಪೀಕರ್ ಕಾಗೇರಿ ಸೇರಿದಂತೆ ಬಹುತೇಕ ಹಿರಿಯ ಸದಸ್ಯರಿಂದ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ:  ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಇನ್ನು ಅರಣ್ಯ ಸಚಿವ ಉಮೇಶ್ ಕತ್ತಿಗೆ ಸದನದಲ್ಲಿ ಆಡಳಿತ ಪಕ್ಷದ ಶಾಸಕ ಕಳಕಪ್ಪ ಬಂಡಿ ಟಕ್ಕರ್ ಕೊಟ್ಟರು. ಅರಣ್ಯ ಇಲಾಖೆ ಬ್ರಿಟಿಷರ ಪಳೆಯುಳಿಕೆಯಾಗಿದೆ. ಅರಣ್ಯ ಸಚಿವರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲ, ಅವರು ಬಯಲು ಸೀಮೆಯವರು ಅಂತಾ ಕಳಕಪ್ಪ ಬಂಡಿ ಕಿಡಿಕಾರಿದರು.

    ಆಗ ಸ್ಪೀಕರ್ ಮಧ್ಯಪ್ರವೇಶ ಮಾಡಿ ಇಲ್ಲ, ಅವರು ಖಾನಾಪುರ ಕಡೆ ಅರಣ್ಯ ನೋಡಿದ್ದಾರೆ ಎಂದರು. ಅಂತಿಮವಾಗಿ ಪ್ರಕರಣದ ಬಗ್ಗೆ ಸದನಕ್ಕೆ ಸಚಿವ ಮಾಧುಸ್ವಾಮಿ ಉತ್ತರ ಕೊಟ್ಟರು. ರೈತರಿಗೆ ಸಮಸ್ಯೆ ಆಗುತ್ತಿದೆ ನಿಜ. ಅರಣ್ಯ ಕಾಯ್ದೆಗೆ ತಿದ್ದುಪಡಿ ಕಾಯ್ದೆ ತರುವ ಕೆಲಸ ಮಾಡುತ್ತೇವೆ. ಅರಣ್ಯ ಇಲಾಖೆ ಕಟಾವು ಮಾಡಿರುವ ರೈತರ ಬೆಳೆಗೆ ಪರಿಹಾರ ಕೊಡುತ್ತೇವೆ. ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

  • ಸ್ಪೀಕರ್ ಕಾಗೇರಿಗೆ ವೆರಿಗುಡ್ ಎಂದ ಸಿದ್ದರಾಮಯ್ಯ

    ಸ್ಪೀಕರ್ ಕಾಗೇರಿಗೆ ವೆರಿಗುಡ್ ಎಂದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಹೇಳಿದ್ದಾರೆ.

    ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದು ತಿಳಿಸಿದರು. ಆಗ ಸಿದ್ದರಾಮಯ್ಯ ಅವರು, ಸ್ಪೀಕರ್‌ಗೆ ವೆರಿ ಗುಡ್.. ಗುಡ್ ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ನೀವು ಗುಡ್ ಅನ್ನಲೇಬೇಕು ಅಲ್ಲವಾ ಎಂದು ತಮಾಷೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಹೌದು.. ಹೌದು ಯು ಆರ್ ಮೈ ಗುಡ್ ಫ್ರೆಂಡ್ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಎದ್ದ ವೇಳೆ ಕಂದಾಯ ಸಚಿವ ಅಶೋಕ್ ಸದನದಿಂದ ಹೊರ ನಡೆಯಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಎ.ಮುನಿರತ್ನ, ಅಶೋಕ್ ಕೂತ್ಕೊಳ್ರಪ್ಪ ಎಂದು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ನಾನು ನೀರು ಕುಡಿಯೋಕೆ ಹೋಗ್ತಿದ್ದೇನೆ ಎಂದು ಉತ್ತರಿಸಿದರು. ಆಗ ಸಿದ್ದರಾಮಯ್ಯ ಅವರು ಇಲ್ಲಿಗೇ ನೀರು ಕೊಡ್ತಾರೆ ಕೂತ್ಕೊಳಪ್ಪ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಈ ರೀತಿ ಹೇಳುತ್ತಲೇ ಅಲ್ಲೇ ಅಶೋಕ್ ಕುಳಿತಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಈ ವೇಳೆ ಬಿಎಸ್‍ವೈ ಮಧ್ಯಪ್ರವೇಶಿಸಿ, ಅವರು ಸುಮ್ಮನೆ ಹೊರಗೆ ಹೋಗ್ತಿದ್ರು, ನೀರು ಕುಡಿಯಲು ಹೋಗ್ತಿರಲಿಲ್ಲ. ನೀವು ಹೇಳಿದ್ಮೇಲೆ ಅಶೋಕ್ ಕೂತ್ಕೊಂಡ್ರು ಎಂದು ಕಿಚಾಯಿಸಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನೀವು ಹಿಂದೆ ಕುಳಿತಿದ್ದೀರಿ, ಇಂತದ್ದನ್ನೆಲ್ಲ ಗಮನಿಸುತ್ತೀರಿ ಅಂತಾ ಗೊತ್ತು ಎಂದು ಕಾಲೆಳೆದರು.

    ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಇಡೀ ಸದನ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಪರೀಕ್ಷೆ ನಡೆಸಿ ಕರ್ನಾಟಕದ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟ್‌ ನೀಡಿ: ಎಚ್‌ಡಿಕೆ

  • ಶಾಸಕಾಂಗ ಇಂದು ರಂಜನೀಯ ವಿಷಯವಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ

    ಶಾಸಕಾಂಗ ಇಂದು ರಂಜನೀಯ ವಿಷಯವಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ

    ರಾಯಚೂರು: ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯ, ಆದರ್ಶಗಳು ಅಧಃಪತನವಾಗುತ್ತಿದ್ದು, ಶಾಸಕಾಂಗ ಇಂದು ರಂಜನೀಯ ವಿಷಯವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.

    ಕೃಷಿ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸುಧಾರಣಾ ಕ್ರಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಚರ್ಚೆ ನೋಡಿದಾಗ ಇಂದಿನ ಸರ್ಕಾರಗಳು ಉಳ್ಳವರ ಪರ ಸರ್ಕಾರವಾಗಿವೆ ಎಂದು ಸ್ಪಷ್ಟವಾಗುತ್ತಿದೆ. ಹಿಂದೆ ಬಡವರ ಕಷ್ಟ, ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಯುತ್ತಿತ್ತು. ಆದರೆ ಇಂದು ಜನರ ಆಶೋತ್ತರಗಳನ್ನು ಈಡೇರಿಸಲಾಗದ ಸ್ಥಿತಿಯಲ್ಲಿದೆ. ಕಾರ್ಯಾಂಗ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದ ಅವರು, ವಿಳಂಬ ನೀತಿ, ಬ್ರಿಟಿಷ್ ವ್ಯವಸ್ಥೆಯಿಂದ ಹೊರಬರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೌಲ್ಯಗಳ ಆದರ್ಶಗಳ ಅಧಃಪತನಕ್ಕೆ ಚುನಾವಣೆಗಳು ಮುಖ್ಯ ಪಾತ್ರ ವಹಿಸುತ್ತಿದೆ. ಮೇಲ್ಮನೆ ಚುನಾವಣೆಯಲ್ಲೂ ನೋವಿನ ಸಂಗತಿಗಳು ನಡೆದಿವೆ. ನ್ಯಾಯ ಸಮ್ಮತವಾದ ಚುನಾವಣೆ ನಡೆಸಬೇಕು. ಚರ್ಚೆಗಳು, ಸಂವಾದಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ದೋಷ ಸರಿಪಡಿಸಬೇಕಿದೆ. ಹಣಬಲ, ತೋಳ್ಬಲ, ಜಾತಿ, ಪಕ್ಷಾಂತರದಿಂದ ಸಮರ್ಥ ಆಡಳಿತ ಕೊಡಲು ಸಾಧ್ಯವಿಲ್ಲದಂತಾಗಿದೆ. ಇದರಿಂದಾಗಿ ಚುನಾವಣಾ ಆಯೋಗ ವರ್ಷಪೂರ್ತಿ ಕ್ರಿಯಾಶೀಲ ಆಗಬೇಕಿದೆ ಎಂದರು. ಇದನ್ನೂ ಓದಿ: ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಭ್ರಷ್ಟ, ಅಸಮರ್ಥ ಜನಪ್ರತಿನಿಧಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ನೀಡಬೇಕು. ಚುನಾವಣೆ ಭ್ರಷ್ಟಾಚಾರ ತಡೆಯಬೇಕು ಎಂದು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಸಲಹೆ ನೀಡಿದರು. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ