Tag: vishwaprasanna tirtha swamiji

  • ಹಾಸನಾಂಬೆಯ ದರ್ಶನ ಪಡೆದ ಪೇಜಾವರ ಶ್ರೀ

    ಹಾಸನಾಂಬೆಯ ದರ್ಶನ ಪಡೆದ ಪೇಜಾವರ ಶ್ರೀ

    ಹಾಸನ: ಉಡುಪಿಯ ಪೇಜಾವರ ಶ್ರೀಗಳು (Pejavara Vishwaprasanna Tirtha Swamiji) ಹಾಸನಾಂಬೆ (Hasanamba) ದರ್ಶನ ಪಡೆದಿದ್ದಾರೆ. ಈ ವೇಳೆ ಭಕ್ತರಿಗೆ ಹಾಸನಾಂಬೆ ದೇವಿ ಬದುಕಿನುದ್ದಕ್ಕೂ ರಕ್ಷಣೆ ಕೊಡಲಿ ಎಂದು ಶುಭಹಾರೈಸಿದ್ದಾರೆ.

    ಪೇಜಾವರ ಶ್ರೀಗಳಿಗೆ ಜಿಲ್ಲಾಡಳಿತದಿಂದ ಈ ವೇಲೆ ಗೌರವ ಸಮರ್ಪಣೆ ಮಾಡಲಾಯಿತು. ಬಳಿಕ ಶ್ರೀಗಳ ಕಾಲಿಗೆ ನಮಸ್ಕರಿಸಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಆಶೀರ್ವಾದ ಪಡೆದರು.

    ಶ್ರೀಗಳ ಜೊತೆ ಡಿಸಿ ಹಾಗೂ ಸಕಲೇಶಪುರದ ತಹಶೀಲ್ದಾರ್‌ ಫೋಟೋ ಕ್ಲಿಕ್ಕಿಸಿಕೊಂಡರು. ಇಷ್ಟೇ ಅಲ್ಲದೇ ಭಕ್ತರು ಸಹ ಶ್ರೀಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಕೆಲ ಭಕ್ತರ ಜೊತೆ ಶ್ರೀಗಳು ಫೋಟೋ ತೆಗೆಸಿಕೊಂಡು ಬಳಿಕ ತೆರಳಿದ್ದಾರೆ.

  • ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ – ಪೇಜಾವರ ಶ್ರೀ ಪ್ರಶ್ನೆ

    ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ – ಪೇಜಾವರ ಶ್ರೀ ಪ್ರಶ್ನೆ

    ರಾಯಚೂರು: ರಾಷ್ಟ್ರಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಪ್ರಶ್ನಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಹೋರಾಟ ನಡೆಯುತ್ತಿದೆ. ಅವರು ರೈತರೇ ಅಲ್ಲ, ರೈತರು ಹೊಲದಲ್ಲಿ ದುಡಿಯುತ್ತಿದ್ದಾರೆ ಎಂದರು. ರಾಷ್ಟ್ರ ಧ್ವಜಕ್ಕೆ ಅವಮಾನ, ಖಲಿಸ್ತಾನದ ಪರವಾಗಿ ಘೋಷಣೆ ಮಾಡಿದವರು ಹೇಗೆ ರೈತರಾಗುತ್ತಾರೆ. ರಾಷ್ಟ್ರಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ ಅಂತ ಪ್ರಶ್ನಿಸಿದರು.

    ಪ್ರಚಾರಕ್ಕಾಗಿ ದೇವರು, ಧರ್ಮದ ಬಗ್ಗೆ ಮಾತನಾಡಬಾರದು, ಚಿಂತಕ ಕೆ ಎಸ್ ಭಗವಾನ್ ಪ್ರಚೋದನಕಾರಿ ಮಾತನಾಡಿದ್ದು ತಪ್ಪು ಕೋರ್ಟಿನಲ್ಲಿ ಮಸಿ ಬಳಿದದ್ದು ಸಹ ತಪ್ಪು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಹೇಳಿದರು.

    ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಬೃಹತ್ ಯಂತ್ರಗಳು, ಶಿಲೆಗಳಿವೆ ಹೀಗಾಗಿ ವೀಕ್ಷಣೆಗೆ ಅವಕಾಶ ಮೊದಲಿನಿಂದಲೂ ನೀಡಿಲ್ಲ. ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಕೆಲವು ಕಡೆ ಮುಗಿದಿದೆ. ಸದ್ಯ 500 ಕೋಟಿಗೂ ಅಧಿಕ ನಿಧಿ ಸಂಗ್ರಹಣೆ ಆಗಿದೆ. ನಿಧಿ ಸಂಗ್ರಹಣೆ ಅಭಿಯಾನ ಇನ್ನೂ 15 ದಿನಗಳ ಕಾಲ ಮುಂದುವರೆಯಲಿದೆ. ಹಣ ನೀಡುವವರು ಸಹಾಯ ಮಾಡಬಹುದು ಎಂದರು.

    ರಾಮ ಮಂದಿರ ನಿರ್ಮಾಣ ಸಂಸ್ಕøತಿಯ ಪುನರುತ್ಥಾನದ ಪ್ರತೀಕವಾಗಿದೆ. ನಮ್ಮ ಸನಾತನ ಸಂಸ್ಕøತಿಯೂ ಮಂದಿರದ ನಿರ್ಮಾಣದ ಜೊತೆಗೆ ಪುನರ್ ನಿರ್ಮಾಣ ಆಗಬೇಕು. ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ನಡೆದಿವೆ, ಜಾತಿವಾರು ಮೀಸಲಾತಿಗಿಂತ ಆರ್ಥಿಕ ಮೀಸಲಾತಿ ನೀಡಬೇಕು. ಜಾತಿವಾರು ಮೀಸಲಾತಿ ಕೇಳುವುದು ತಪ್ಪು ಅಂತ ಪೇಜಾವರ ಮಠದ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.