Tag: vishwaprasanna theertha swamiji

  • ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

    ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

    ಮಂಗಳೂರು: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ (Vishawa Prasanna Theertha Swamij) ತಂದೆ ವಿಧಿವಶರಾಗಿದ್ದಾರೆ.

    ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣಭಟ್ಟ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಬಳಿಯ ಪಕ್ಷಿಕೆರೆಯಲ್ಲಿ ನಿಧನ ಹೊಂದಿದ್ದಾರೆ. ಇವರಿಗೆ 103 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಬಾಗಿಲಿಲ್ಲದ ದೇವಾಲಯಕ್ಕೆ ನುಗ್ಗಿ ಕಾಣಿಕೆ ಡಬ್ಬಿ, 100 ಘಂಟೆಗಳನ್ನು ದೋಚಿದ ಕಳ್ಳರು

    ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃ. ಇವರು ಐವರು ಪುತ್ರರು, ಆರು ಪುತ್ರಿಯರು ಬಂಧುವರ್ಗವನ್ನು ಅಗಲಿದ್ದಾರೆ.

     

  • ಬಾವಿಗಿಳಿದು ಬೆಕ್ಕನ್ನು ರಕ್ಷಣೆ ಮಾಡಿದ ಪೇಜಾವರ ಶ್ರೀ

    ಬಾವಿಗಿಳಿದು ಬೆಕ್ಕನ್ನು ರಕ್ಷಣೆ ಮಾಡಿದ ಪೇಜಾವರ ಶ್ರೀ

    ಉಡುಪಿ: ಪೇಜಾವರ ಶ್ರೀ (Pejawar Sri) ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯ (Cat) ರಕ್ಷಣೆ ಮಾಡಿದ ಘಟನೆ ಉಡುಪಿಯ (Udupi) ಮುಚ್ಲಕೋಡು ಬಳಿ ನಡೆದಿದೆ. ಸ್ವತಃ ಸ್ವಾಮೀಜಿ ಬಾವಿಗೆ ಇಳಿದಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಉಡುಪಿ ನಗರದ ಹೊರವಲಯದಲ್ಲಿರುವ ಮುಚ್ಲಕೋಡು ದೇವಸ್ಥಾನಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Theertha Swamiji) ತೆರಳಿದ್ದರು. ಈ ಸಂದರ್ಭದಲ್ಲಿ ಬೆಕ್ಕೊಂದು ಬಾವಿಗೆ ಬಿದ್ದ ವಿಷಯ ತಿಳಿದ ಸ್ವಾಮೀಜಿ, ತಾವೇ ಸ್ವತಃ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳನ್ನ ತಂದಿದೆ: ದಿನೇಶ್ ಗುಂಡೂರಾವ್

    ಕೂಡಲೇ ಹಿಂದೆ ಮುಂದೆ ನೋಡದೆ ಹಗ್ಗದ ಸಹಾಯದಿಂದ ಸ್ವಾಮೀಜಿ ಬಾವಿಗಿಳಿದಿದ್ದಾರೆ. ಗೋವಿನ ರಕ್ಷಣೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಪೇಜಾವರ ಸ್ವಾಮೀಜಿ ಹಾವು, ಹದ್ದು ಹೀಗೆ ಸಕಲ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡುತ್ತಿರುತ್ತಾರೆ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಈ ಪ್ರಾಣಿ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

  • ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರ: ಅಯೋಧ್ಯೆ (Ayodhya) ರಾಮಮಂದಿರ (RamMandir) ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಅರ್ಪಿಸಲಾಗುತ್ತಿದೆ.

    ಬೆಳ್ಳಿ ಇಟ್ಟಿಗೆಗೆ ರಾಮನ ಭಕ್ತರಿಂದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಬಿಜೆಪಿ (BJP) ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    2024ಕ್ಕೆ ರಾಮಮಂದಿರ ಪೂರ್ಣ: ಇತ್ತೀಚೆಗೆ ರಾಮಜನ್ಮಭೂಮಿಯ ಟ್ರಸ್ಟ್ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

    ಸಮಿತಿ ಸದಸ್ಯರೂ ಈ ಬಗ್ಗೆ ಮಾಹಿತಿ ನೀಡಿ, ಆಶಿಷ್ ಸೋಂಪುರ ಅವರು ಮಂದಿರದ ವಾಸ್ತುಶಿಲ್ಪಿಯಾಗಿದ್ದು, ನಿರ್ಮಾಣ ಸಮಿತಿಗೆ ನೃಪೇಂದ್ರ ಮಿಶ್ರಾ, ಪ್ರದೀಪ್ ಕುಮಾರ್ ಹಾಗೂ ಪ್ರೊ.ಗೋಪಾಲ ಕೃಷ್ಣನ್ ಇತರರು ಸದಸ್ಯರಿದ್ದಾರೆ. ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

    ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

    ಉಡುಪಿ: ಹಿಂದೂ ಸಮಾಜ ಬಹಳ ಕಾಲದಿಂದ ನೋವನ್ನು ಉಂಡಿದೆ. ಹಲವಾರು ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ಬಹಳ ನೋವಿನಲ್ಲಿದೆ. ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನೇರ ಸಂದೇಶ ರವಾನೆ ಮಾಡಿದ್ದಾರೆ.

    ಉಡುಪಿ ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ಮುಸಲ್ಮಾನ ವರ್ತಕರು, ಮುಸ್ಲಿಂ ಮುಖಂಡರುಗಳು, ಕ್ರೈಸ್ತ ಧರ್ಮಗುರುಗಳು ಪೇಜಾವರ ಶ್ರೀಗಳನ್ನು ಭೇಟಿಯಾಗಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದರು. ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ. ನಿರಂತರವಾಗಿ ಅನ್ಯಾಯವಾದಾಗ ಬೇಸರ ನೋವು ಸ್ಫೋಟವಾಗುತ್ತದೆ. ಇದನ್ನೂ ಓದಿ: ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

    ಹಿಂದೂ ಸಮಾಜ ನೋವು ಉಂಡು ಉಂಡು ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಮುಸಲ್ಮಾನರು ಮತ್ತು ಕ್ರೈಸ್ತ ಮುಖಂಡರು ವ್ಯಾಪಾರ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಸಮಾಜದಲ್ಲಿ ಶಾಂತಿ-ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯವಾಗಿ ಬೇಕು. ಆದರೆ ಅದು ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ಹಿಂದೂ ಸಮಾಜಕ್ಕೆ ನೋವಾಗುವ ಯಾವುದೇ ಘಟನೆಗಳು ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು. ಉಡುಪಿಯ ಗ್ರಾಮವೊಂದರ ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು ಕಳವು ಮಾಡಲಾಗಿದೆ. ಹಸುಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ. ನಾವು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇನೆ. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.

    ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲಸಲು ಯಾರ ಮಧ್ಯಸ್ಥಿಕೆಯ ಬೇಡ. ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು. ತಪ್ಪು ಮಾಡಿದವರನ್ನು ಆ ಸಮಾಜದಲ್ಲಿ ಶಿಕ್ಷಿಸಲಿ. ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ. ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

  • ಸಕಲ ಸಂತ ಸಮುದಾಯಕ್ಕೆ ಸಿಕ್ಕ ಪದ್ಮ ವಿಭೂಷಣ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಸಕಲ ಸಂತ ಸಮುದಾಯಕ್ಕೆ ಸಿಕ್ಕ ಪದ್ಮ ವಿಭೂಷಣ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಉಡುಪಿ: ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟವಾಗಿದ್ದು, ಇದು ಸಕಲ ಸಂತ ಸಮುದಾಯಕ್ಕೆ ಸಿಕ್ಕ ಮನ್ನಣೆ, ಗೌರವ ಅಂತ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಣ್ಣಿಸಿದ್ದಾರೆ.

    ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ಗುರುಗಳಿಗೆ ಪ್ರಶಸ್ತಿ ಬಂದ ವಿಚಾರ ಕೇಳಿ ಸಂತೋಷವಾಗಿದೆ. ಗುರುಗಳು ಯಾವುದೇ ಬಗೆಯ ವಿಭೂಷಣವನ್ನು ಬದುಕಿನಲ್ಲಿ ಧರಿಸಿದವರಲ್ಲ. ಆದರೆ ಸರ್ಕಾರ ಇಂದು ವಿಭೂಷಣವನ್ನು ಸಮರ್ಪಿಸಿದೆ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

    ಗುರುಗಳ ಜೀವಿತಾವಧಿಯಲ್ಲೇ ಈ ಸುಯೋಗ ಬಂದಿದ್ದರೆ ಮತ್ತಷ್ಟು ಸಂತೋಷ ಆಗುತ್ತಿತ್ತು. ಶ್ರೀ ಮಠ ಈ ಪ್ರಶಸ್ತಿಯನ್ನು ಸ್ವಾಗತಿಸುತ್ತದೆ. ಇದು ಸಂತ ಸಮಾಜಕ್ಕೆ ದೊರಕಿದ ಗೌರವ. ಈ ಪುರಸ್ಕಾರ ಸಂತ ಸಮಾಜದ ಜವಾಬ್ದಾರಿ ಹೆಚ್ಚಿಸಿದೆ ಎಂದರು.

    ಪ್ರಶಸ್ತಿ ಘೋಷಣೆಯಾಗುವಾಗ ಪೇಜಾವರ ಶ್ರೀಗಳು ಮುಳುಬಾಗಿಲಿನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿದ್ದ ನೂರಾರು ಜನ ಜಯಘೋಷ ಕೂಗಿದರು.

    ಗಣತಂತ್ರದ ಮುನ್ನಾ ದಿನವಾದ ಶನಿವಾರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡೀಸ್ ಮತ್ತು ಇತ್ತೀಚಿಗಷ್ಟೇ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ಎರಡನೇ ಅತ್ಯುಚ್ಛ ಪುರಸ್ಕಾರ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬಾಕ್ಸಿಂಗ್ ತಾರೆ ಮೇರಿಕೂಮ್‍ಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಗೋವಾದ ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್, ಪಿವಿ ಸಿಂಧೂಗೆ ಪದ್ಮಭೂಷಣ ಘೋಷಣೆಯಾಗಿದೆ.

    ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಆಗಿದ್ದ ಉತ್ತರ ಕನ್ನಡ ಜಿಲ್ಲೆ ಆಂಕೋಲ ತಾಲೂಕಿನ ಹೊನ್ನಳ್ಳಿಯ ಅರಣ್ಯ ಪ್ರೇಮಿ ಹಾಲಕ್ಕಿ ಸಮುದಾಯದ ತುಳಸಿ ಗೌಡ, ಅಕ್ಷರ ಸಂತ ದಕ್ಷಿಣ ಕನ್ನಡದ ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಹರೇಕಳದ ನ್ಯೂಪಡ್ಪು ಗ್ರಾಮದಲ್ಲಿ ಶಾಲೆ ಕಟ್ಟಿಸಿದ ಹಾಜಬ್ಬ, ವಿಜಯ ಸಂಕೇಶ್ವರ್, ಕೆ ವಿ ಸಂಪತ್ ಕುಮಾರ್, ಕ್ರೀಡಾಪಟು ಎಂಪಿ ಗಣೇಶ್ ಸೇರಿ 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

  • ಪೇಜಾವರ ಶ್ರೀಗಳು ನಾಳೆ ಮಠಕ್ಕೆ ಶಿಫ್ಟ್

    ಪೇಜಾವರ ಶ್ರೀಗಳು ನಾಳೆ ಮಠಕ್ಕೆ ಶಿಫ್ಟ್

    ಉಡುಪಿ: ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭಾನುವಾರ ಮಠಕ್ಕೆ ಶಿಫ್ಟ್ ಮಾಡಲಾಗುತ್ತದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣವಾಗುತ್ತಿದ್ದು, ಚೇತರಿಕೆಯ ಯಾವ ಲಕ್ಷಣ ಕಾಣುತ್ತಿಲ್ಲ. ಶ್ರೀಗಳನ್ನು ನಾಳೆ ಮಠಕ್ಕೆ ಸ್ಥಳಾಂತರ ಮಾಡುತ್ತೇವೆ. ಶ್ರೀಗಳ ಅಂತಿಮ ಆಸೆಯೂ ಅದೇ ಆಗಿತ್ತು. ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಠದಲ್ಲೇ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಆಸ್ಪತ್ರೆಯವರ ಕೆಲ ಕಾರ್ಯವಿಧಾನಗಳು ಬಾಕಿಯಿದೆ. ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡುತ್ತೇವೆ. ಪೇಜಾವರ ಮಠಕ್ಕೆ ಭಕ್ತರ ಭೇಟಿ ಸದ್ಯ ಬೇಡ. ಎಲ್ಲರೂ ಇದ್ದಲ್ಲಿಂದ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸವಿದೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಳೆದ ರಾತ್ರಿ ಎಂಆರ್‍ಐ ಸ್ಕ್ಯಾನ್‍ಗೆ ಒಳಪಡಿಸಲಾಗಿದೆ. ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನಿಂದ ಆಗಮಿಸಿರುವ ಇಬ್ಬರು ತಜ್ಞ ವೈದ್ಯರು ಮತ್ತು ಕೆಎಂಸಿಯ ಏಳು ವೈದ್ಯರ ತಂಡ ಪೇಜಾವರಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಉಡುಪಿ: ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಎಂಸಿಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಗಳ ಎದೆಯಲ್ಲಿರುವ ಕಫ ನೀರಾಗುತ್ತಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೇಜಾವರ ಕಿರಿಯಶ್ರೀ, ಕೃಷ್ಣಾಪುರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಯೋ ಸಹಜದಿಂದಾಗಿ ನಿಧಾನವಾಗಿ ಗುಣಮುಖರಾಗಲು ಆಗುತ್ತಿದ್ದಾರೆ. ಭಕ್ತರು ಯಾರು ಕೂಡ ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಅಲ್ಲಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದರು. ವೆಂಟಿಲೇಟರ್ ನಲ್ಲೆ ಉಸಿರಾಟ ಮುಂದುವರಿಸಲಾಗಿದೆ. ನಾವೂ ಪೂಜೆ ಮಾಡುತ್ತಿದ್ದೇವೆ. ಕರ್ನಾಟಕ ಅಲ್ಲದೇ ಇತರ ರಾಜ್ಯಗಳಲ್ಲೂ ಪ್ರಾರ್ಥನೆ ನಡೆಯುತ್ತಿದೆ ಎಂದು ತಿಳಿಸಿದರು.

    ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀಗಳ ಆರೋಗ್ಯ ವಿಚಾರಿಸಿ, ಚೇತರಿಕೆ ನಿಧಾನವಾಗಿ ಆಗುತ್ತಿದೆ. ಬೇಗ ಚೇತರಿಕೆ ಆಗುವಂತೆ ದೇವರು ಮಾಡಲಿ. ಮತ್ತೆ ಅವರು ಬಂದು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು. ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಬಂದು ಪೇಜಾವರಶ್ರೀ ಆರೋಗ್ಯದ ಕಾಳಜಿ ತೋರಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶ್ರೀಂದ್ರ ತೀರ್ಥ, ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭ ಶ್ರೀ, ಅದಮಾರು ಮಠದ ವಿಶ್ವಪ್ರಿಯ ಮತ್ತು ಈಶಪ್ರಿಯ ತೀರ್ಥ ಸ್ವಾಮೀಜಿಗಳು ಬಂದು ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

  • ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಉಡುಪಿ: ಹಾರೆ ಹಿಡಿದು ಹೊರಟರೆ ಕೃಷಿಕ. ಮುಂಡಾಸು ಕಟ್ಟಿ ನಿಂತರೆ ಗೋಪಾಲಕ. ಆರತಿ ಹಚ್ಚಿ ಕುಳಿತರೆ ಶ್ರೀಕೃಷ್ಣನ ಸೇವಕ. ಹೌದು. ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಮ್ಮ ಪಬ್ಲಿಕ್ ಹೀರೋ.

    ಮೂರು ಹೊತ್ತು ಪೂಜೆ ಮಾಡೋದು, ಭಕ್ತರು ಸೇರಿದಾಗ ಪ್ರವಚನ ಮಾಡಿ ನಾಲ್ಕು ಸದ್ವಿಚಾರಗಳನ್ನು ಹೇಳಿ ಧರ್ಮಪ್ರಚಾರ ಮಾಡೋದು ಸ್ವಾಮೀಜಿಗಳ ಕೆಲಸ. ಆದ್ರೆ ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತುಂಬಾ ವಿಭಿನ್ನ. ಡಿಗ್ರಿ ಮುಗಿದ ಬಳಿಕ ಸಂಸಾರದ ಕೊಂಡಿ ಕಳಚಿಕೊಂಡು ಮಠ ಸೇರಿದ್ರು. ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೇ ಈ 53ರ ವಯಸ್ಸಲ್ಲೂ 23ರ ಯುವಕರಂತೆ ಚುರುಕಿನಿಂದ ಕೆಲಸ ಮಾಡ್ತಾರೆ. ಪೀಠಾಧಿಕಾರ ಪಡೆದ ನಂತರವೂ ಕೃಷಿಕರಾಗಿದ್ದಾರೆ. 2004ರಲ್ಲಿ ಉಡುಪಿಯಿಂದ 20 ಕಿಲೋಮೀಟರ್ ದೂರವಿರುವ ನೀಲಾವರ ಎಂಬಲ್ಲಿ 37 ಎಕ್ರೆ ಜಮೀನು ಖರೀದಿ ಮಾಡಿ ಗೋಶಾಲೆಯನ್ನು ಆರಂಭಿಸಿದರು. ಹೀಗಾಗಿ ಇವತ್ತು ಈ ನೀಲಾವರದಲ್ಲಿ 1,280ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳೆಂದ್ರೆ ಸ್ವಾಮೀಜಿಗೆ-ಸ್ವಾಮೀಜಿ ಅಂದ್ರೆ ಗೋವುಗಳಿಗೆ ಅಷ್ಟು ಪ್ರೀತಿ.

    ಗೋವುಗಳಿಗೆ ಆಹಾರದ ಸಮಸ್ಯೆ ಬರದಂತೆ ತಾವೇ ಮೇವನ್ನು ಬೆಳೆದು ಕಟಾವು ಮಾಡುತ್ತಾರೆ. ಸಾವಿರಾರು ಗೋವುಗಳಿದ್ದರೂ ಇಲ್ಲಿ ಸಿಗುತ್ತಿರೋದು ಕೇವಲ 22 ಲೀಟರ್ ಹಾಲು ಮಾತ್ರ. ಪ್ರತೀ ದಿನ ಸುಮಾರು 50 ಸಾವಿರ ರೂಪಾಯಿ ಗೋಶಾಲೆಗೆ ಖರ್ಚಾಗುತ್ತದೆ. ಸರ್ಕಾರ ಗೋಶಾಲೆಗೆ ಕೊಡೋ ನೆರವು ಕೂಡಾ ಕಡಿಮೆಯಾಗಿದೆ. ಆದ್ರೆ ಎಲ್ಲವನ್ನೂ ಪೇಜಾವರ ಕಿರಿಯ ಶ್ರೀಗಳೇ ಭರಿಸುತ್ತಾರೆ.

    ಇಷ್ಟೇ ಅಲ್ಲ ಬುದ್ದಿಮಾಂಧ್ಯ ಮಕ್ಕಳಿಗಾಗಿ ಪಕ್ಕದಲ್ಲೇ ಒಂದು ವಿಶೇಷ ಶಾಲೆ ತೆರೆದಿದ್ದಾರೆ. ಮೂವರು ಸಿಬ್ಬಂದಿಯನ್ನಿಟ್ಟು ಎಲ್ಲರ ಪೋಷಣೆ ಮಾಡುತ್ತಾರೆ. ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡಿರುವ ಸ್ವಾಮೀಜಿ, ಹೋದಲೆಲ್ಲಾ ಪ್ರವಚನ ಮಾಡಿ ಹಣ ಸಂಗ್ರಹ ಮಾಡಿ ಅದನ್ನು ಗೋಶಾಲೆ ಹಾಗೂ ವಿಶೇಷ ಶಾಲೆಗೆ ಬಳಸುತ್ತಾರೆ. ಇದೆಲ್ಲದರ ಜೊತೆ ಮಠದ ದೊಡ್ಡ ಜವಾಬ್ದಾರಿ ಕೂಡಾ ನಿರ್ವಹಿಸುತ್ತಿದ್ದಾರೆ.