Tag: Vishwanath

  • ಹೆಚ್. ವಿಶ್ವನಾಥ್ ಬಹುತೇಕವಾಗಿ ಸತ್ಯ ಹೇಳುತ್ತಾರೆ: ಕರಂದ್ಲಾಜೆ

    ಹೆಚ್. ವಿಶ್ವನಾಥ್ ಬಹುತೇಕವಾಗಿ ಸತ್ಯ ಹೇಳುತ್ತಾರೆ: ಕರಂದ್ಲಾಜೆ

    ಕಲಬುರಗಿ: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಬಹುತೇಕವಾಗಿ ಸತ್ಯ ಹೇಳುತ್ತಾರೆ. ಸಿದ್ದರಾಮಯ್ಯ ಅವರ ಕುರಿತು ಸತ್ಯವಾದ ಮತು ಹೇಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ದಳ ನಾಯಕನ ಪರ ನಿಂತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಳಿಕ ವಿಶ್ವನಾಥ್ ಅವರು ಬಹುತೇಕವಾಗಿ ಸತ್ಯ ಹೇಳುತ್ತಾರೆ. ಸಿದ್ದರಾಮಯ್ಯ ಅವರ ಕುರಿತು ಸತ್ಯ ಹೇಳಿದ್ದಾರೆ. ಅಲ್ಲದೆ ಹಿಂದುಳಿದ ವರ್ಗದ ಚಾಂಪಿಯನ್ ಅಂತ ಸಿದ್ದರಾಮಯ್ಯ ಸಿಎಂ ಆದರು, ನಂತರ ಜಾತಿ ಜಾತಿಯಲ್ಲಿ ಜಗಳ ಹಚ್ಚಿದ್ರು. ನಿಮ್ಮ ಮೊಸಳೆ ಕಣ್ಣೀರಿನಿಂದ ಕೆಲಸ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಜೆಡಿಎಸ್ ನಾಯಕ ವಿಶ್ವನಾಥ್ ಸಮ್ಮಿಶ್ರ ಸರ್ಕಾರದ ಒಳಬೇಗುದಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ವಿಶ್ವನಾಥ್ ಹೇಳಿಕೆ ಸಾಕ್ಷಿಯಾಗಿದೆ. ಎಲ್ಲಿ ಕೂಡ ಹೊಂದಾಣಿಕೆ ಪ್ರಚಾರ ನಡೆಯಲಿಲ್ಲ. ಜೆಡಿಎಸ್‍ನವರು ಏಳು ಕ್ಷೇತ್ರದಲ್ಲಿ ಮಾತ್ರ ಪ್ರಚಾರಕ್ಕೆ ಸಿಮಿತವಾದವರು. ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹೋದ ಮೈತ್ರಿ ನಾಯಕರಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಯಾವುದೇ ಬಿಜೆಪಿ ನಾಯಕರು ಕರೆ ಕೊಟ್ಟಿಲ್ಲ. ಸಮಿಶ್ರ ಸರ್ಕಾರದ ಒಳ ಬೇಗುದಿಯಿಂದ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರದ ಒಳಜಗಳಕ್ಕೆ ರಾಜ್ಯದ ಜನರು ಕಷ್ಟ ಪಡುತ್ತಿದ್ದಾರೆ. ಸರ್ಕಾರಕ್ಕೆ ಸ್ಪರ್ಶ ಜ್ಞಾನ ಇಲ್ಲ ಕಣ್ಣು ಕಾಣಲ್ಲ, ಕಿವಿ ಕೇಳಿಸೊದಿಲ್ಲ. ಸರ್ಕಾರ ಗಾಢ ನಿದ್ರೆಗೆ ಜಾರಿದ್ದು, ಕುಮಾರಸ್ವಾಮಿ ರೆಸಾರ್ಟ್ ಸೇರಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಿಲ್ಲ. ಅಧಿಕಾರಿಗಳಿಗೆ ಕುಡಿಯುವ ನೀರಿನ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲೋಕ್ಕೆ ಮುಂದಾಗಿದ್ದಾರೆ. ಸರ್ಕಾರದ ವಿರುದ್ಧದ ಭಾವನೆ ಜನರ ಮನಸ್ಸಲ್ಲಿ ನಿರ್ಮಾಣವಾಗಿದೆ. ರೆಸಾರ್ಟ್ ನಲ್ಲಿ ಮಲಗಿದ ಮುಖ್ಯಮಂತ್ರಿ ರಾಜ್ಯದ ಸಿಎಂ ಆಗಿ ಮುಂದುವರೆಯಬಾರದು. ಹಾಗೆಯೇ ಕುಂದುಗೊಳ ಮತ್ತು ಚಿಂಚೋಳಿಯಲ್ಲಿ ಡಿ.ಕೆ ಶಿವಕುಮಾರ್ ಎಷ್ಟೇ ದುಡ್ಡು ಹಂಚಿದರು ಯಾರನ್ನು ಕೂಡ ಕೊಂಡುಕೊಳ್ಳೊಕೆ ಆಗಲ್ಲ ಎಂದು ಹರಿಹಾಯ್ದರು.

    ಖರ್ಗೆ ಅವಮಾನಕರ ರೀತಿಯಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಾರೆ ಇದು ಸರಿಯಲ್ಲ. ನಮಗೆ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗುತ್ತಾರೆ. ನೇಣಿನ ಬಗ್ಗೆ ಮಾತನಾಡುವ ಖರ್ಗೆ ಕ್ಷಮೆ ಕೇಳಬೇಕು. ಕೂಡಲೇ ಅವರ ಮೇಲೆ ಕೇಸ್ ದಾಖಲಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ವಿಶ್ವನಾಥ್‍ಗೆ ಹೊಟ್ಟೆ ಕಿಚ್ಚು, ಆತನಿಗೆ ಏನು ಗೊತ್ತಿಲ್ಲ: ಏಕವಚನದಲ್ಲೇ ಸಿದ್ದರಾಮಯ್ಯ ತಿರುಗೇಟು

    ವಿಶ್ವನಾಥ್‍ಗೆ ಹೊಟ್ಟೆ ಕಿಚ್ಚು, ಆತನಿಗೆ ಏನು ಗೊತ್ತಿಲ್ಲ: ಏಕವಚನದಲ್ಲೇ ಸಿದ್ದರಾಮಯ್ಯ ತಿರುಗೇಟು

    ಕಲಬುರಗಿ: ವಿಶ್ವನಾಥ್‍ಗೆ ಹೊಟ್ಟೆಕಿಚ್ಚು ಇದ್ದು, ಆತನಿಗೆ ಏನು ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಏಕ ವಚನದಲ್ಲೇ ತಿರುಗೇಟು ನೀಡಿದ್ದಾರೆ.

    ಚಿಂಚೋಳಿಯ ಕೊಡದುರ ಗ್ರಾಮದಲ್ಲಿ ಕೈ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳು ನೀವು ಜನಪ್ರಿಯ ಸಿಎಂ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ ಎಂದಾಗ, ಜನಪ್ರಿಯ ಸಿಎಂ ಎಂದು ನಾನು ಹೇಳಿಲ್ಲ. ಜನ ಈ ಹೇಳಿಕೆ ನೀಡಿದ್ದಾರೆ. ವಿಶ್ವನಾಥ್‍ಗೆ ಹೊಟ್ಟೆ ಕಿಚ್ಚು. ಆತನಿಗೆ ಏನು ಗೊತ್ತಿಲ್ಲ. ಆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದರು.ಇದನ್ನೂ ಓದಿ:ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

    ಉತ್ತಮ ಆಡಳಿತ ನೀಡಿದ್ರೆ 78 ಸ್ಥಾನ ಯಾಕೆ ಬಂತು ಎಂದು ವಿಶ್ವನಾಥ್ ಹೇಳಿಕೆಗೆ, ಬಿಜೆಪಿಯವರ ಅಪ ಪ್ರಚಾರದಿಂದ ನಮಗೆ ಕಡಿಮೆ ಸ್ಥಾನ ಬಂದಿದೆ. ಎಸ್‍ಎಂ ಕೃಷ್ಣ ಅವಧಿಯಲ್ಲಿ ವಿಶ್ವನಾಥ್ ಮಂತ್ರಿ ಆಗಿದ್ದರು. ನಂತರದ ಚುನಾವಣೆಯಲ್ಲಿ 65 ಸ್ಥಾನ ಯಾಕೆ ಬಂತು ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.

    ಆರಂಭದಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ನಂತರ ಮಾಧ್ಯಮಗಳು ವಿಶ್ವನಾಥ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದಾಗ ಏಕವಚನದಲ್ಲೇ ಆತನಿಗೆ ಹೊಟ್ಟೆ ಕಿಚ್ಚು ಎಂದು ಹೇಳಿ ತಿರುಗೇಟು ಕೊಟ್ಟರು.

  • ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ – ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

    ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ – ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ, ಜೆಡಿಎಸ್ ವರಿಷ್ಠ ದೇವೇಗೌಡ, ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಜೆಪಿ ಭವನದಲ್ಲಿ ಇಂದು ಸಭೆ ನಡೆಯಲಿದೆ.

    ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸೀಟು ಹಂಚಿಕೆ, ಮೈತ್ರಿ ವಿಚಾರ ಕುರಿತು ಮುಖಂಡರ ಅಭಿಪ್ರಾಯವನ್ನ ಜೆಡಿಎಸ್ ವರಿಷ್ಠ ದೇವೇಗೌಡ ಸಂಗ್ರಹಿಸಲಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ : ಎಚ್‍ಡಿಡಿ

    ಇದೇ ವೇಳೆ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ವಿಚಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ಎಚ್.ವಿಶ್ವನಾಥ್ ಮನವಿ ಮಾಡಿದ್ದು, ಇದಕ್ಕೆ ದೇವೇಗೌಡರು ಒಪ್ಪುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ನೀವೇ ಮಂದುವರಿಯಿರಿ ಎಂದು ವಿಶ್ವನಾಥ್ ಅವರಿಗೆ ದೇವೇಗೌಡರು ಸಲಹೆ ನೀಡುವ ಸಾಧ್ಯತೆಯೇ ಹೆಚ್ಚಿದೆ.

    ಈ ಹಿಂದೆಯೇ ಪ್ರಜ್ವಲ್ ರೇವಣ್ಣ ಕಳೆದ ಎಂಟು ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಿದ್ದಾನೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನ ಆತನಿಗೆ ಬಿಟ್ಟುಕೊಡುತ್ತೇನೆ ಎಂದು ಎಚ್.ಡಿ ದೇವೇಗೌಡ ಈ ಹಿಂದೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷಕ್ಕೆ ದ್ರೋಹ ಬಗೆದ್ರೆ ಹೆತ್ತತಾಯಿಗೆ ದ್ರೋಹ ಬಗೆದಂತೆ- ಡಿಕೆಶಿನ ಸೋಲಿಸೋದೆ ನನ್ನ ಗುರಿ ಅಂದ್ರು ಜೆಡಿಎಸ್ ಮುಖಂಡ

    ಪಕ್ಷಕ್ಕೆ ದ್ರೋಹ ಬಗೆದ್ರೆ ಹೆತ್ತತಾಯಿಗೆ ದ್ರೋಹ ಬಗೆದಂತೆ- ಡಿಕೆಶಿನ ಸೋಲಿಸೋದೆ ನನ್ನ ಗುರಿ ಅಂದ್ರು ಜೆಡಿಎಸ್ ಮುಖಂಡ

    ರಾಮನಗರ: ನಾನು ಜೆಡಿಎಸ್ ಪಕ್ಷ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ ಈ ಬಾರಿಯ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‍ರನ್ನ ಸೋಲಿಸುವುದೇ ನನ್ನ ಗುರಿ ಎಂದು ಕನಕಪುರ ಜೆಡಿಎಸ್ ಮುಖಂಡ ಡಿ.ಎಂ ವಿಶ್ವನಾಥ್ ಇಂದು ತಿಳಿಸಿದ್ರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನನ್ನ ಹೆತ್ತ ತಾಯಿ ಇದ್ದ ಹಾಗೇ. ಪಕ್ಷಕ್ಕೆ ದ್ರೋಹ ಬಗೆದ್ರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಹೀಗಾಗಿ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.

    ಬಿಜೆಪಿ ಪಕ್ಷದಿಂದ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ರು. ಬಿಜೆಪಿಯಿಂದ ಕಣಕ್ಕಿಳಿದ್ರೆ ಆರ್ಥಿಕ ಸಹಾಯದ ಜೊತೆಗೆ ಅಧಿಕಾರದ ಆಸೆ ತೋರಿದ್ರು. ಆದ್ರೆ ನಾನು ಜೆಡಿಎಸ್ ಪಕ್ಷ ಬಿಟ್ಟು ಬರುವುದಿಲ್ಲ ಎಂದೇ ತಿಳಿಸಿದ್ದೆ. ನನ್ನ ಆರ್ಥಿಕ ಸಮಸ್ಯೆಯಿಂದಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಅಷ್ಟೇ ವಿನಃ ಬೇರೇನೂ ಇಲ್ಲ. ಪಕ್ಷದೊಳಗಿನ ಸ್ಥಳೀಯ ಮುಖಂಡರೇ ಇಲ್ಲಸಲ್ಲದ ಆರೋಪ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆಲ್ಲಾ ಉತ್ತರಿಸೋದಾಗಿ ತಿಳಿಸಿದ್ರು.

    ಜೆಡಿಎಸ್‍ನ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಡಿ.ಎಂ ವಿಶ್ವನಾಥ್‍ಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿ ನಾರಾಯಣಗೌಡರಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ತಾರೆ ಎನ್ನಲಾಗ್ತಿತ್ತು. ರಾಜಕೀಯ ವಲಯದಲ್ಲಿ ತಮ್ಮ ಬಗ್ಗೆ ಹುಟ್ಟಿಕೊಂಡಿದ್ದ ಎಲ್ಲ ಪ್ರಶ್ನೆಗಳಿಗೆ ಡಿ.ಎಂ.ವಿಶ್ವನಾಥ್ ಉತ್ತರಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

  • ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

    ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

    ಮೈಸೂರು: ಸಿದ್ದರಾಮಯ್ಯಗೆ ಏಕವಚನವು ಗೊತ್ತಿಲ್ಲ ಹಾಗೂ ಬಹುವಚನವು ಗೊತ್ತಿಲ್ಲ. ಅಂತಹ ವ್ಯಕ್ತಿ ಸಂಧಿ ಪಾಠ ಮಾಡಲು ಬರುತ್ತಾರೆ ಎಂದು ಸಿಎಂ ವ್ಯಾಕರಣದ ಕುರಿತು ಮಾಜಿ ಸಂಸದ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ. ಆ ಸಂಧಿ ಯಾವುದು ಅಂತ ನನಗೆ ಗೊತ್ತಿಲ್ಲಪ್ಪ ಎಂದು ಪ್ರತಿಕ್ರಿಯಿಸಿದರು.

    ವಿಶ್ವನಾಥ್ ಒಬ್ಬ ಹುಚ್ಚ ಅಂತಾ ಸಿಎಂ ಖಾಸಗಿ ಮಾತುಕತೆಯಲ್ಲಿ ಹೇಳಿದ್ದಾರೆ. ಇದು ಸರಿಯಲ್ಲ, ಇಷ್ಟು ಲಘುವಾಗಿ ಮಾತಾಡಬೇಡಿ. ನೀವು ಸಿಎಂ ಇರಬಹುದು, ನಾನು ಸಿಎಂ ಅಲ್ಲದೇ ಇರಬಹುದು. ಆದರೆ ಶಾಸಕನಾಗಿ, ಮಂತ್ರಿಯಾಗಿ ಸಂಸದನಾಗಿ ಜನ ಮೆಚ್ಚುವಂತಹ ಕೆಲಸ ಮಾಡಿದ್ದೇನೆ. ಅನ್ನಭಾಗ್ಯದಂತಹ ಯೋಜನೆ ನಿಮಗೆ ಕೊಟ್ಟಿದ್ದು ಇದೇ ವಿಶ್ವನಾಥ್ ನೆನಪಿರಲಿ. ನೀವು ಒಂದು ಪಕ್ಷದಿಂದ ಹೊರಬಂದಾಗ ಇದೇ ವಿಶ್ವನಾಥ್ ನಿಮ್ಮ ನೆರವಿಗೆ ಬಂದಿದ್ದು ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.

    ನಿಮ್ಮ ಗನ್ ಮ್ಯಾನ್ ಥರ ನಾನು ಎಲ್ಲರ ಮನೆಗೆ ಕರೆದುಕೊಂಡು ಹೋಗಿ ಹೂವಿನ ಬೊಕ್ಕೆ ಕೊಟ್ಟು ಬಂದಿದ್ದು ನೆನಪಿಲ್ವಾ? ಯಾರು ನಿಮಗೆ ಸಹಾಯ ಮಾಡುತ್ತಾರೋ ಅವರನ್ನು ಸಾಯಿಸಿ ಅನ್ನೋದು ನಿಮ್ಮ ಜಾತಕದಲ್ಲಿ ಇರಬೇಕು. ನನಗೆ ಮತ ಹಾಕಬೇಡಿ ಅನ್ನೋಕೆ ನೀವೇನೂ ಕುರುಬ ಸಮಾಜದ ಮನೆ ನಡೆಸುವ ವ್ಯಕ್ತಿಯೇ? ನಿಮಗೆ ದುಡಿದೆ, ಅಧಿಕಾರ ಇದೆ, ದರ್ಪ ಇದೆ. ಆದರೆ ಕಾಮನ್ ಸೆನ್ಸ್ ಇಲ್ಲ ಎಂದು ಸಿಎಂ ವಿರುದ್ಧ ವಿಶ್ವನಾಥ್ ತಮ್ಮ ಆಕ್ರೋಶವನ್ನು ಹೊರಹಾಕಿದರು.

    ನನಗೆ ಫ್ಹೀರಾನ್ ಅನ್ನೋ ವ್ಯಕ್ತಿ ದೆಹಲಿಯಲ್ಲಿ ಸಹಾಯ ಮಾಡಿದ ಅಂತಾ ಹೇಳುತ್ತಿರಲ್ಲವಾ? ಈ ಫ್ಹೀರಾನ್ ಒಬ್ಬ ಹಣದ ದಂಧೆ ಮಾಡೋ ವ್ಯಕ್ತಿ. ಇಡೀ ಕುರುಬರೆಲ್ಲಾ ನನ್ನ ಜೊತೆ ಇದ್ದಾರೆ ಅಂತಾ ಅಂದುಕೊಂಡಿದ್ದೀರಾ. ಹಿಂದೆ ಆ ಕಾಲ ಇತ್ತು. ಆದರೆ ಈಗ ಹಾಗಿಲ್ಲ. ನಿಮ್ಮ ಜೊತೆ ಕುರುಬರು ಇಲ್ಲ. ಈ ರಾಜ್ಯದ ಒಬ್ಬ ಕಿಕ್ ಬ್ಯಾಕ್ ಸಿಎಂ ಅಂದರೆ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

    ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಎದರಿಸೋಕೆ ಹೀಗೆ ಹೇಳುತ್ತಿದ್ದಾರೆ. ಚುನಾವಣೆಗೆ ಒಂದು ತಿಂಗಳು ಮುಂಚೆ ನಾನು ಎಲ್ಲೂ ಚುನಾವಣೆಗೆ ನಿಲ್ಲಲ್ಲ ಅಂತಾ ಹೇಳುತ್ತಾರೆ. ನೋಡ್ತಾ ಇರಿ ಎಂದರು.

  • ಅಮಿತ್ ಶಾ ವಿರುದ್ಧ ಮಾಜಿ ಸಚಿವ ಎಚ್ ವಿಶ್ವನಾಥ್ ಕಿಡಿ

    ಅಮಿತ್ ಶಾ ವಿರುದ್ಧ ಮಾಜಿ ಸಚಿವ ಎಚ್ ವಿಶ್ವನಾಥ್ ಕಿಡಿ

    ಮಂಡ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಸ್ಕೃತಿ ಇಲ್ಲದವರು ಅಂತಾ ಮಾಜಿ ಸಚಿವ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.

    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಎದುರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತ ವಿಚಾರವಾಗಿ ಮಂಡ್ಯ ಜಿಲ್ಲೆ ಕೆಆರ್‍ಪೇಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯವ್ರು ದೇಶಭಕ್ತಿ ರಾಷ್ಟ್ರ ಭಕ್ತಿ ಅಂತಾರೆ. ನಾವು ಸೇರಿದಂತೆ ಯಾರಾದ್ರೂ ಜಗದ್ಗುರು ಎದುರು ಹಾಗೇ ಕುಳಿತುಕೊಳ್ತಾರ ಎಂದು ಪ್ರಶ್ನೆ ಮಾಡಿದ್ರು.

    ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಬಗ್ಗೆಯೂ ಮಾತನಾಡಿದ ಅವರು, ಇಬ್ಬರೂ ಶೂ ಹಾಕಿಕೊಂಡು ಪೂಜೆ ಮಾಡುವ ಬಗ್ಗೆ ವ್ಯಂಗ್ಯವಾಡಿದ್ರು. ಜೊತೆಗೆ ಮಾಧ್ಯಮಗಳಲ್ಲಿ ರಾಷ್ಟ್ರಾದ್ಯಂತ ಜನರು ನಮ್ಮನ್ನು ನೋಡುತ್ತಿರುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ರಾಜಕಾರಣಿಗಳಿಗೆ ವಿಶ್ವನಾಥ್ ಕಿವಿಮಾತು ಹೇಳಿದ್ರು.

  • `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    ಕೆ.ಪಿ.ನಾಗರಾಜ್
    ಮೈಸೂರು: ಪತ್ರಕರ್ತ ಕಂ ಸಂಸದ ಆಗಿರೋ ಪ್ರತಾಪ್ ಸಿಂಹಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಕೀಲ ಕಂ ರಾಜಕಾರಣಿ ಆಗಿರೋ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗುತ್ತಾರಾ..?. ಇಂಥದ್ದೊಂದು ಪ್ರಶ್ನೆ ಈಗ ಮೈಸೂರು – ಕೊಡಗು ಭಾಗದಲ್ಲಿ ಹುಟ್ಟಿಕೊಂಡಿದೆ. ಯಾವಾಗ ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಮನೆ ಸೇರಿದ್ರೋ ಅಲ್ಲಿಗೆ ಕಾಂಗ್ರೆಸ್‍ನಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯೋರು ಯಾರು ಎಂಬ ಚರ್ಚೆ ಶುರುವಾಗಿದೆ. ಆರಂಭಿಕ ಚರ್ಚೆಯಲ್ಲಿ ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿರುವ ಮೊದಲ ಹೆಸರೇ ಬ್ರಿಜೇಶ್ ಕಾಳಪ್ಪ..!

    ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಸುಪ್ರೀಂಕೋರ್ಟ್‍ನಲ್ಲಿ ವಕೀಲರು. ಕಾಂಗ್ರೆಸ್ ಜೊತೆ ಬಹು ವರ್ಷದ ಸಾಂಗತ್ಯ ಬೆಳೆಸಿಕೊಂಡಿರೋ ಬ್ರಿಜೇಶ್, ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ. ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯದ ನದಿ ನೀರಿನ ವಿವಾದ ಕೇಸ್ ಗಳ ವಕೀಲರ ಟೀಂನಲ್ಲಿ ಸಕ್ರಿಯರಾಗಿದ್ದು ಕೊಂಡೇ ಎಐಸಿಸಿಯ ಮಾಧ್ಯಮ ವಕ್ತಾರರಾಗಿದ್ದಾರೆ. ಕಾಂಗ್ರೆಸ್ ಎಷ್ಟೇ ಇರುಸು ಮುರಿಸಿನ ಸ್ಥಿತಿಯಲ್ಲಿದ್ದರೂ ಪಕ್ಷವನ್ನು ಮಾಧ್ಯಮಗಳಲ್ಲಿ ಸಮರ್ಥಿಸುತ್ತಾ ಹೈಕಮಾಂಡ್ ಕಣ್ಣಿಗೂ ಹತ್ತಿರವಾಗಿದ್ದಾರೆ.

    ಯಾವಾಗ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್, ಪ್ರತಾಪ್ ಸಿಂಹ ಎದುರು ಸೋತರೋ ಅವತ್ತಿನಿಂದಲೇ ಬ್ರಿಜೇಶ್ ಕಾಳಪ್ಪ, ತಮ್ಮ ಒಂದು ಕಣ್ಣನ್ನು ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಇಟ್ಟಿದ್ದರು. ಬ್ಯಾಕ್ ಟು ಬ್ಯಾಕ್ ಮೈಸೂರಿಗೆ ಬರುತ್ತಾ ಇಲ್ಲಿನ ಕಾರ್ಯಕರ್ತರ ಜೊತೆ ಸ್ನೇಹ ಬೆಳೆಸಿಕೊಂಡು ಮಾಧ್ಯಮದಲ್ಲೂ ಕಾಣಿಸಿಕೊಳ್ಳೋಕೆ ಶುರು ಮಾಡಿದ್ದರು. ಈಗ, ವಿಶ್ವನಾಥ್ ಅವರೇ ಪಕ್ಷದಿಂದ ಹೊರ ಹೋಗಿರೋ ಕಾರಣ ಬ್ರಿಜೇಶ್ ಕಾಳಪ್ಪ ಹಾದಿ ಸುಲಭವಾದಂತೆ ಕಾಣುತ್ತಿದೆ.

    60 ವರ್ಷಗಳ ಹಿಂದೆ ಕೊಡಗು ಮೂಲದ ಸಿ.ಎಂ. ಪೊನ್ನಚ್ಚ ಅವರಿಗೆ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆನಂತರ, ಕೊಡಗು ಮೂಲದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. 2009ರ ಚುನಾವಣೆಯಲ್ಲೇ ಬ್ರಿಜೇಶ್ ಕಾಳಪ್ಪ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಎಚ್. ವಿಶ್ವನಾಥ್ ಅವರು 2009ರ ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ, ಒಂದು ಹಂತದಲ್ಲಿ ಬ್ರಿಜೇಶ್ ಕ್ಷೇತ್ರದ ಆಸೆಯೇ ಬಿಟ್ಟು ರಾಜ್ಯಸಭಾ ಸ್ಥಾನದ ಕಡೆ ಕಣ್ಣಿಟ್ಟು ಕುಳಿತಿದ್ದರು. ಈಗ, ಯಾರು ಅವರ ಟಿಕೆಟ್‍ಗೆ ಬಲವಾದ ಅಡ್ಡಿಯಾಗಿದ್ದರೋ ಅವರೇ ಪಕ್ಷ ತೊರೆದಿರೋ ಕಾರಣ ಮತ್ತೆ ಅಖಾಡ ಪ್ರವೇಶಕ್ಕೆ ಮುಂದಾಗಿದ್ದಾರೆ.

    ಹೈಕಮಾಂಡ್ ಗೂ ಹತ್ತಿರ ಹತ್ತಿರ: ಕಾಂಗ್ರೆಸ್ ಹೈಕಮಾಂಡ್ ಜೊತೆ ಅದರಲ್ಲೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್‍ನ ಘಟಾನುಘಟಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಬ್ರಿಜೇಶ್ ಕಾಳಪ್ಪ, ಲೋಕಸಭಾ ಕ್ಷೇತ್ರದ ಟಿಕೆಟ್ ಸುಲಭವಾಗಿಯೇ ಗಿಟ್ಟಿಸುತ್ತಾರೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲಿದೆ. ಅಲ್ಲದೆ, ಲೋಕಸಭಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರು ಕೂಡಾ ಇದುವರೆಗೂ ಕ್ಷೇತ್ರದಲ್ಲಿ ಓಡಾಡದೆ ಇರೋದು ಕೂಡ ಬ್ರಿಜೇಶ್ ಕಾಳಪ್ಪಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ.

    ಈ ಎಲ್ಲಾ ಲೆಕ್ಕಚಾರ ಸರಿಯಾದರೆ ಪ್ರತಾಪ್ ಸಿಂಹಗೆ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗೋದು ನಿಶ್ಚಿತ. ಟಿವಿ ಡಿಬೇಟ್ ಗಳಲ್ಲಿ ಪರಸ್ಪರ ಮುಖಾಮುಖಿಯಾಗಿ ನಾನೋ ನೀನೋ ಎಂಬಂತೆ ವಾದಿಸುವ ಈ ಇಬ್ಬರು ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರೆ ಅದರ ಖದರ್ ಇನ್ನೂ ಹೆಚ್ಚಾಗುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಕೊಡಗು. ಅದೇ ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಅಖಾಡ ಪ್ರವೇಶ ಮಾಡಿದರೆ ಅಲ್ಲಿನ ಮತದಾರನ ಪ್ರೀತಿ ಯಾರ ಮೇಲೆ ಇರುತ್ತೆ ಅನ್ನೋ ಕೂತುಹಲ ಕೂಡಾ ಇರುತ್ತೆ.

    ಇದರ ಜೊತೆಗೆ ಜೆಡಿಎಸ್ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕೂಡ ಮುಖ್ಯ. ಎಚ್. ವಿಶ್ವನಾಥ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿರೋ ಜೆಡಿಎಸ್ ಸದ್ಯಕ್ಕೆ ವಿಧಾನಸಭಾ ಚುನಾವಣೆಗೆ ಮಾತ್ರ ರಣತಂತ್ರ ಸಿದ್ಧ ಮಾಡುತ್ತಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಗ್ಗೆ ಇಲ್ಲಿ ಇನ್ನೂ ಎಳೆಯಷ್ಟು ಚರ್ಚೆ ಕೂಡಾ ಶುರುವಾಗಿಲ್ಲ. ಎಚ್. ವಿಶ್ವನಾಥ್ ಪಕ್ಷ ಬಿಟ್ಟ ಕಾರಣ ಕಾಂಗ್ರೆಸ್ ನಲ್ಲಿ ಖಾಲಿಯಾದ ಲೋಕಸಭಾ ಚುನಾವಣಾ ಅಭ್ಯರ್ಥಿ ಸೀಟಿಗೆ ಚರ್ಚೆ ಶುರುವಾಗಿ ಚುನಾವಣೆಗೆ ಇನ್ನೂ ಎರಡು ವರ್ಷ ಮುಂಚೆಯೇ ಲೆಕ್ಕಚಾರಗಳು ಆರಂಭವಾಗಿಬಿಟ್ಟಿವೆ. ಇವತ್ತು ಇರೋ ರಾಜಕಾರಣ ನಾಳೆ ಇರಲ್ಲ. ಅಂತಹದರಲ್ಲಿ ಇದು ಇನ್ನೂ ಎರಡು ವರ್ಷದ ನಂತರದ ಮಾತು. ಅಷ್ಟರಲ್ಲಿ ಇನ್ನೂ ಯಾರ್ಯಾರು ಯಾವ ಯಾವ ಪಕ್ಷ ಸೇರುತ್ತಾರೋ, ಯಾರ್ಯಾರೂ ಆಕಾಂಕ್ಷಿಗಳಾಗಿ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕೆ ಮಾತ್ರ ದೂರದ ದೆಹಲಿಯಲ್ಲಿ ಕಪ್ಪು ಕೋಟು ಹಾಕಿ ಕುಳಿತಿರೋ ಬ್ರಿಜೇಶ್ ಕಾಳಪ್ಪ ಮಾತ್ರ ಮೈಸೂರು – ಕೊಡಗಿನ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.