Tag: Vishwanath

  • ಟಿಪ್ಪು ಕುರಿತ ವಿಶ್ವನಾಥ್ ಹೇಳಿಕೆ ವೈಯಕ್ತಿಕ, ಬಿಜೆಪಿ ಅಭಿಪ್ರಾಯವಲ್ಲ: ಸುರೇಶ್ ಕುಮಾರ್

    ಟಿಪ್ಪು ಕುರಿತ ವಿಶ್ವನಾಥ್ ಹೇಳಿಕೆ ವೈಯಕ್ತಿಕ, ಬಿಜೆಪಿ ಅಭಿಪ್ರಾಯವಲ್ಲ: ಸುರೇಶ್ ಕುಮಾರ್

    ಚಾಮರಾಜನಗರ: ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ವಿಶ್ವನಾಥ್ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ ಅಭಿಪ್ರಾಯವಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ, ಆದರೆ ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷ ನಿಲುವೇನು ಎಂಬುದನ್ನು ಯೋಚಿಸಬೇಕು ಅವರು ಎಂಎಲ್ ಸಿ ಹೆಚ್.ವಿಶ್ವನಾಥ್ ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.

    ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ ಇಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಹೆಚ್.ವಿಶ್ವನಾಥ್ ಪ್ರಬುದ್ಧರಿದ್ದಾರೆ. ಈ ರೀತಿ ಮಾತನಾಡುವಾಗ ಯಾವ ಪಕ್ಷದಲ್ಲಿದ್ದೇನೆ ಅನ್ನುವುದನ್ನು ಯೋಚನೆ ಮಾಡಿ ಮಾತನಾಡಿದರೆ ಒಳಿತು ಎಂದು ಪರೋಕ್ಷವಾಗಿ ವಿಶ್ವನಾಥ್‍ಗೆ ಎಚ್ಚರಿಕೆ ಕೊಟ್ಟರು. ವಿಶ್ವನಾಥ್ ಅವರ ಸ್ವಭಾವವೇ ಹಾಗೇ ಯಾವುದಾದರೂ ವಿಚಾರ ಬಂದರೆ ಮುನ್ನುಗ್ಗಿ ಮಾತನಾಡುತ್ತಾರೆ. ಅವರ ಯಾವುದೋ ಒಂದು ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲ ಎಂದರು.

    ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿಶ್ಚನಾಥ್ ಅವರಿಗೆ ಅನುಭವವಿದೆ. ಆದರೆ ಅವರು ಸಚಿವರಾಗುವುದು ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪಂಡಿತರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಸಚಿವ ವಿಶ್ವನಾಥ್ ಗೆ ಮಂತ್ರಿಗಿರಿ ಸಿಗುವುದಕ್ಕೆ ಕಾನೂನು ತೊಡಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

  • ಟಿಪ್ಪು ಕಾಲದಲ್ಲಿದ್ದ ಮತಾಂತರ, ದೌರ್ಜನ್ಯವನ್ನು ಬಿಜೆಪಿ ಮರೆಯಲ್ಲ: ಅಶೋಕ್

    ಟಿಪ್ಪು ಕಾಲದಲ್ಲಿದ್ದ ಮತಾಂತರ, ದೌರ್ಜನ್ಯವನ್ನು ಬಿಜೆಪಿ ಮರೆಯಲ್ಲ: ಅಶೋಕ್

    – ವಿಶ್ವನಾಥ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ

    ಯಾದಗಿರಿ: ಟಿಪ್ಪುವಿನ ಕಾಲದಲ್ಲಿದ್ದ ಮತಾಂತರ ದೌರ್ಜನ್ಯ, ಕಗ್ಗೊಲೆ ಜೊತೆಗೆ ಕೊಡಗಿನಲ್ಲಿ ಮತಾಂತರ ಮಾಡಿದ್ದು ಇನ್ನೂ ನಮ್ಮ ಕಣ್ಮುಂದೆ ಇದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ಇದೇ ವೇಳೆ ಟಿಪ್ಪು ಬಗ್ಗೆ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪುವಿಗೆ ಯಾವಾಗಲೂ ನಮ್ಮ ವಿರೋಧವಿದೆ. ನಮ್ಮ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಪಕ್ಷ ಹಿಂದೆ ಏನ್ ಹೇಳಿದೆ ಅದಕ್ಕೆ ಈಗಲೂ ಬದ್ಧವಾಗಿದೆ. ವಿಶ್ವನಾಥ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದರು.

    ಜೊತೆಗೆ ಸಿಎಂ ಪುತ್ರ ವಿಜಯೇಂದ್ರ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆ ರೀತಿ ಏನೂ ನಡೆದಿಲ್ಲ. ಸುಮ್ಮನೆ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡೋದು ಸರಿಯಲ್ಲ. ಸಾಕ್ಷ್ಯಾಧಾರ ಇಲ್ಲದೆ ಮಾತಾಡೋದು ತಪ್ಪು ಎಂದು ಹೇಳಿದರು.

  • ಅನ್ನಭಾಗ್ಯ ನಿಮ್ಮ ಸಾಧನೆಯಲ್ಲ, ಅದ್ರ ಕಲ್ಪನೆ ಕೊಟ್ಟಿದ್ದು ನಾನು: ಸಿದ್ದು ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಅನ್ನಭಾಗ್ಯ ನಿಮ್ಮ ಸಾಧನೆಯಲ್ಲ, ಅದ್ರ ಕಲ್ಪನೆ ಕೊಟ್ಟಿದ್ದು ನಾನು: ಸಿದ್ದು ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಮೈಸೂರು: ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ. ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಟೀಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೇಲೆ ವಿಪಕ್ಷಗಳು ಮಾಡಿರುವ ಪದ ಪ್ರಯೋಗ ದೇಶದ ಜನರು ಮೆಚ್ಚಲ್ಲ. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಾಧನೆ ಏನು, ಮೋದಿ ಸಾಧನೆ ಏನು ಎಂದು ಪ್ರಶ್ನಿಸಿದರು.

    ದೊಡ್ಡ ದೊಡ್ಡವರೆಲ್ಲಾ ಅಪ್ರಬುದ್ಧರಾಗಿ ಮಾತಾಡುತ್ತಿದ್ದಾರೆ. ದೇವರಾಜ ಅರಸ್ ಅವರನ್ನು ಮೋದಿಯಲ್ಲಿ ಕಾಣುತ್ತಿದ್ದೇನೆ. ಅಹಿಂದ ಪ್ರಧಾನಿಯನ್ನು ಈ ರೀತಿ ಟೀಕೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

    ರಾಹುಲ್ ಗಾಂಧಿ ಈ ಪ್ರಧಾನಿಗೂ ಗೌರವ ಕೊಡಲ್ಲ. ಕಾಂಗ್ರೆಸ್ಸಿನಲ್ಲಿಯೇ ಪ್ರಧಾನಿಯಾದವರಿಗೂ ಗೌರವ ಕೊಟ್ಟಿಲ್ಲ. ನೀವು ಗೌರವ ಕೊಡುವುದನ್ನೇ ಕಲಿತಿಲ್ಲ ಎಂದರು.

    ಸಿದ್ದರಾಮಯ್ಯ ಪ್ರಧಾನಿಯನ್ನು ಅನ್‍ಫಿಟ್ ಅಂತಾರೆ. ಹಾಗಾದರೆ ನೀವು ಸಿಎಂ ಆಗುವುದಕ್ಕೆ ಫಿಟ್ ಆಗಿದ್ರಾ..?, ಮೋದಿ ಅವರದ್ದು ಗುಜರಾತ್ ಮಾಡೆಲ್ ಇದೆ, ನಿಮ್ಮ ಮಾಡೆಲ್ ಏನಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಹಿಟ್ ಅಂಡ್ ರನ್ ಮಾಡಬೇಡಿ. ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಆರೋಪ ಇದ್ದರೆ ದಾಖಲೆ ಕೊಡಿ. ಸುಮ್ಮನೆ ಮಾತಾಡಬೇಡಿ ಎಂದು ವಿಪಕ್ಷಗಳ ವಿರುದ್ಧ ಗರಂ ಆದರು.

  • ಸದ್ಯದ ಪರಿಸ್ಥಿತಿಯಲ್ಲಿ ವಿಶ್ವನಾಥ್‍ಗೆ ಪರಿಷತ್ ಸ್ಥಾನ ಸಾಧ್ಯವಿಲ್ಲ: ಅಪ್ಪಚ್ಚು ರಂಜನ್

    ಸದ್ಯದ ಪರಿಸ್ಥಿತಿಯಲ್ಲಿ ವಿಶ್ವನಾಥ್‍ಗೆ ಪರಿಷತ್ ಸ್ಥಾನ ಸಾಧ್ಯವಿಲ್ಲ: ಅಪ್ಪಚ್ಚು ರಂಜನ್

    ಮಡಿಕೇರಿ: ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್. ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡುವಂತಹ ಸಾಧ್ಯತೆಗಳು ಕಡಿಮೆ ಇದ್ದು ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುವರು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು, ಸಮ್ಮಿಶ್ರ ಸರ್ಕಾರದ ಪತನದ ಬಳಿಕ ನಡೆದ ಮಧ್ಯಂತರ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪ್ರಸ್ತುತ ಪಕ್ಷದಿಂದ 4 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಇನ್ನುಳಿದ ರಾಜಕೀಯ, ಶಿಕ್ಷಣ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಿಂದ ಪರಿಷತ್‍ಗೆ ನಾಮ ನಿರ್ದೇಶನ ಮಾಡಬೇಕಾಗಿರುವುದರಿಂದ ಅಲ್ಲಿ ಅವರಿಗೆ ಸ್ಥಾನ ಸಿಗುವ ನಿರೀಕ್ಷೆಗಳಿವೆ. ಇದನ್ನೂ ಓದಿ: ಎಲ್ಲರೂ ಈಜಿ ದಡ ಸೇರಿದರು, ನಾನು ಸೇರಿಲ್ಲ: ಎಚ್.ವಿಶ್ವನಾಥ್

    ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಪ್ರಮುಖವಾಗಿ ಹೆಚ್ ವಿಶ್ವನಾಥ್ ಅವರು ಮುಂಚೂಣಿಯಲ್ಲಿ ಇದ್ದರು. ಇವರ ಜೊತೆ ಬಂದವರು ಎಲ್ಲಾ ದಡ ಸೇರಿದ್ರು. ತಮಗೆ ಇನ್ನೂ ದಡ ಸೇರುವುದಕ್ಕೆ ಅಗಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸದ ವಿಶ್ವನಾಥ್ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಅದೃಷ್ಟ ಏನೂ ಮಾಡುವುದಕ್ಕೆ ಅಗೋದಿಲ್ಲ ಎಂದರು.

  • ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಪ್ರಿಯಾಂಕಾಗೆ ಮಾತ್ರ: ಮಾಜಿ ಸಚಿವ ವಿಶ್ವನಾಥ್

    ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಪ್ರಿಯಾಂಕಾಗೆ ಮಾತ್ರ: ಮಾಜಿ ಸಚಿವ ವಿಶ್ವನಾಥ್

    ಹಾಸನ: ರಾಹುಲ್ ಗಾಂಧಿಗೆ ನಿಮ್ಮಿಂದ ಇದು ಆಗಲ್ಲ. ಒಂದು ವೇಳೆ ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಅಂತ ನೇರವಾಗಿ ಹೇಳಿದ್ದೆ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದರು.

    ಮಾಜಿ ಸಚಿವ ವಿಶ್ವನಾಥ್ ಚನ್ನರಾಯಪಟ್ಟಣದಲ್ಲಿ ಹಾಸನದ ಉಸ್ತುವಾರಿ ಸಚಿವ ಗೋಪಾಲಯ್ಯ ಅವರನ್ನು ಭೇಟಿ ಮಾಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ನಾನು ಇಲ್ಲೇ ಕೆ.ಆರ್ ನಗರದಲ್ಲಿ ಇದ್ದೆ. ಹೀಗಾಗಿ ಸಚಿವ ಗೋಪಾಲಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅದರಲ್ಲಿ ಬೇರೆ ಉದ್ದೇಶವಿಲ್ಲ ಎಂದು ತಿಳಿಸಿದರು.

    ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್‍ನಲ್ಲಿ ಇಂದು ಯಾವ ಲೀಡರ್‌ಗಳೂ ಇಲ್ಲ. 2020ರ ಕೊನೆಯ ಭಾಗದ ಹೊತ್ತಿಗೆ ರಾಜಕೀಯ ಧ್ರುವೀಕರಣ ಬಹಳ ದೊಡ್ಡಮಟ್ಟಕ್ಕೆ ಆಗುವ ಸೂಚನೆಗಳಿವೆ. ಈ ಹಿಂದೆಯೇ ರಾಹುಲ್ ಗಾಂಧಿಗೆ ನಿಮ್ಮಿಂದ ಇದು ಆಗಲ್ಲ. ಒಂದು ವೇಳೆ ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಅಂತ ನೇರವಾಗಿ ಹೇಳಿದ್ದೆ ಎಂದರು.

    ಇನ್ನೂ ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಅವರು ರಾಜ್ಯಸಭೆಗೆ ಬರುವ ಮೂಲಕ ಅವರ ಅನುಭವವನ್ನು ನೀಡಬೇಕು. ಅವರ ಆಯ್ಕೆ ಆಗಬೇಕು ಎಂದು ತಿಳಿಸಿದರು.

  • ಶಂಕರ್, ವಿಶ್ವನಾಥ್, ಎಂಟಿಬಿಗೆ ಎಂಎಲ್‍ಸಿ ಸ್ಥಾನ ನೀಡ್ಬೇಕು: ಸಚಿವ ನಾಗೇಶ್

    ಶಂಕರ್, ವಿಶ್ವನಾಥ್, ಎಂಟಿಬಿಗೆ ಎಂಎಲ್‍ಸಿ ಸ್ಥಾನ ನೀಡ್ಬೇಕು: ಸಚಿವ ನಾಗೇಶ್

    ಕೋಲಾರ: ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಅಬಕಾರಿ ಸಚಿವ ಎಚ್.ನಾಗೇಶ್ ತಮ್ಮ ಆಪ್ತರ ಪರವಾಗಿ ಬ್ಯಾಟ್ ಬೀಸಿದ್ದಾರೆ.

    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮನ್ವಂತರ ಪ್ರಕಾಶನ ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಲು ಈ ಮೂವರು ಕಾರಣರಾಗಿದ್ದಾರೆ ಎಂದರು.

    ಎಂಟಿಬಿ ನಾಗರಾಜ್ ಸೇರಿದಂತೆ ಈ ಮೂವರು ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅಲ್ಲದೆ ನಾನು ಸೇರಿದಂತೆ 18 ಜನರು ಕಷ್ಟಕಾಲದಲ್ಲಿದ್ದಾಗ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ ಪರವಾಗಿ ಎಂ.ಎಲ್.ಸಿ ಸ್ಥಾನ ನೀಡಬೇಕೆಂದು ಒತ್ತಾಯ ಮಾಡುವುದಾಗಿ ತಿಳಿಸಿದರು.

    ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಹಾಗೂ ಆಡಳಿತದಲ್ಲಿರುವುದಕ್ಕೆ ಕಾರಣ ಇವರು. ಇಲ್ಲವಾದಲ್ಲಿ ವಿರೋಧ ಪಕ್ಷದಲ್ಲಿರಬೇಕಿತ್ತು. ಯಡಿಯೂರಪ್ಪ ಅವರು ಮಾತು ಕೊಟ್ಟರೆ ಯಾವತ್ತೂ ತಪ್ಪುವುದಿಲ್ಲ, ಅವರದ್ದು ಮಾತು ಕೊಟ್ಟರೆ ನಡೆದುಕೊಳ್ಳುವಂತಹ ಗುಣ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ ನಾಯಕ ಅವರು ಎಂದರು.

    ಈಗಾಗಲೇ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ನೀಡಲಾಗಿದೆ. ಉಳಿದಂತೆ ಪಬ್‍ಗಳು ಓಪನ್ ಮಾಡಲು ಇದೆ 8 ರಂದು ತೀರ್ಮಾನ ಮಾಡಲಾಗುವುದು.

  • ಯಾರೋ ಹಂಚುವ ಕಿಟ್ ಜೊತೆ ಫೋಟೋ ತೆಗ್ಸಿಕೊಳ್ಳೋದಲ್ಲ – ಡಿಕೆಶಿಗೆ ಟಾಂಗ್ ಕೊಟ್ಟ ಸಿಎಂ ರಾಜಕೀಯ ಕಾರ್ಯದರ್ಶಿ

    ಯಾರೋ ಹಂಚುವ ಕಿಟ್ ಜೊತೆ ಫೋಟೋ ತೆಗ್ಸಿಕೊಳ್ಳೋದಲ್ಲ – ಡಿಕೆಶಿಗೆ ಟಾಂಗ್ ಕೊಟ್ಟ ಸಿಎಂ ರಾಜಕೀಯ ಕಾರ್ಯದರ್ಶಿ

    ಬೆಂಗಳೂರು: ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ಏನು ಮಾಡಿದ್ದೀರಿ? ಯಾರೋ ಕೊಡುವ ಕಿಟ್ ಜೊತೆ ಫೋಟೋ ತೆಗೆಸಿಕೊಳ್ಳೋದಲ್ಲ, ನೀವೇ ಸ್ವತಃ ಸಹಾಯ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಅವರು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ  ಟಾಂಗ್ ಕೊಟ್ಟಿದ್ದಾರೆ.

    ಸಚಿವ ಸುಧಾಕರ್ ರಾಜೀನಾಮೆ ನೀಡಲು ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, ಮನೆಯಲ್ಲಿ ಮಕ್ಕಳ ಜೊತೆ ಇರೋದು ತಪ್ಪಾ? ಈ ಕಾಂಗ್ರೆಸ್ ನಾಯಕರು ರಾತ್ರಿ ಏನು ಮಾಡುತ್ತಾರೆ? ಸಿಗದೇ ಇರುವ ವಸ್ತುಗಳು ಹೇಗೆ ಸಿಗುತ್ತದೆ? ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿ ನೀವು ಏನು ಮಾಡಿದ್ದೀರಿ? ಕಾರ್ಯಕರ್ತರು ಕೊಡುವ ಕಿಟ್ ಹತ್ತಿರ ಹೋಗಿ ಫೋಟೋ ತಗಿಸೋದು ಎಷ್ಟು ಸರಿ ಎಂದು ಡಿಕೆಶಿಗೆ ವಿಶ್ವನಾಥ್ ಟಾಂಗ್ ನೀಡಿದರು. ಇದನ್ನೂ ಓದಿ: ಡಿಕೆಶಿ ತರ ಕೆಳಹಂತದ ರಾಜಕಾರಣ ಮಾಡಿ ಅಭ್ಯಾಸ ಇಲ್ಲ: ಸುಧಾಕರ್

    ಗ್ರಾಮಸ್ಥರಿಗೆ ದಿನಸಿ ಸಾಮಗ್ರಿಯನ್ನು ವಿಶ್ವನಾಥ್ ಅವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮಸ್ಥರಿಗೆ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಸ್ಥಳೀಯ ಭವಾನಿ ಶಂಕರ್ ಗ್ರೂಪ್ಸ್ ವತಿಯಿಂದ 1,000 ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು. ಇದನ್ನೂ ಓದಿ: ವೈದ್ಯಕೀಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ಬೇಕು: ಡಿಕೆಶಿ ಆಗ್ರಹ

    ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ಊಟ ಸ್ಥಗಿತ ವಿಚಾರದ ಬಗ್ಗೆ ವಿಶ್ವನಾಥ್ ಅವರು ಪ್ರತಿಕ್ರಿಯಿಸಿ, ಅಧಿಕಾರಿಗಳು ಹಾಗೂ ಸ್ವಾಮೀಜಿ ಜೊತೆ ಚೆರ್ಚೆ ಮಾಡುತ್ತೇನೆ. ಎಂದಿನಂತೆ ಊಟ ತಯಾರಿ ಮಾಡಿ ಬಡವರಿಗೆ ಹಂಚಿಕೆ ಮಾಡುವಂತೆ ಮನವಿ ಮಾಡುತ್ತೇನೆ. ಲಾಕ್‍ಡೌನ್ ಸಮಯದಲ್ಲಿ ನೆಲಮಂಗಲ ಶಾಸಕರು ರಾಜಕೀಯ ಮಾಡಬಾರದು, ಬಡವರಿಗಾಗಿ ಜನರು, ಸ್ವಯಂ ಸೇವಕರು, ಮಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಮಠದಲ್ಲಿ ಆಹಾರ ತಯಾರಿ ಸ್ಥಗಿತ ವಿಚಾರ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊರೊನಾ ವೈರಸ್ ಹರಡಿ ಎಲ್ಲೆಡೆ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವೇಳೆ ರಾಜಕೀಯ ಮಾಡುವುದು ಸರಿಯಲ್ಲ. ಈ ಕೊರೊನಾ ವೈರಸ್ ಹಾವಳಿ ಮುಗಿಯಲಿ, ಆಮೇಲೆ ಒಬ್ಬರನೊಬ್ಬರು ಟೀಕಿ ಮಾಡಿ. ಈಗ ನಾವೆಲ್ಲರು ಜೊತೆಗೂಡಿ ಕೆಲಸ ಮಾಡೋಣ, ನಾವೆಲ್ಲರೂ ಒಂದೇ, ಟೀಕೆ-ವ್ಯಂಗ್ಯವನ್ನು ಆಮೇಲೆ ಮಾಡೋಣ ಎಂದು ಕಿವಿ ಮಾತು ಹೇಳಿದರು. ಈ ವೇಳೆ ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ಭವಾನಿ ಗ್ರೂಪ್ಸ್ ನ ಬೈರೇಗೌಡ, ಅಂದಾನಪ್ಪ, ಮಂಜುನಾಥ್, ಗ್ರಾಮಸ್ಥರು ಉಪಸ್ಥಿತರಿದ್ದರು.

  • ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ಧಾರವಾಡ: ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ಬಜೆಟ್ ವಿಶ್ಲೇಷಣೆ ಮಾಡಬೇಕಿದೆ ಎಂದು ಹೇಳಿರುವ ಮಾಜಿ ಸಚಿವ ಎಚ್.ವಿಶ್ವನಾಥ್, ಸಚಿವ ಶ್ರೀರಾಮುಲು ಪುತ್ರಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರನ ಆಡಂಬರದ ಮದುವೆಯ ಬಗ್ಗೆ ಕೊಂಕು ಮಾತನಾಡಿದ್ದಾರೆ.

    ನಗರದ ಸಾಧನಕೆರೆಯ ಬೇಂದ್ರೆ ಭವನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರದ ವಿಚಾರಗಳನ್ನು ಸತ್ಯದ ರೂಪದಲ್ಲಿ ಹೇಳಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎನ್ನುತ್ತ ಆಡಂಬರದ ಮದುವೆ ಪ್ರಸ್ತಾಪ ಮಾಡಿದರು. ಬಜೆಟ್ ಮಂಡನೆ ದಿನವೇ ಶ್ರೀರಾಮುಲು ಮನೆ ಮದುವೆ ಆಯಿತು. 7 ದಿನದ ಮದುವೆ, ಬಳ್ಳಾರಿಯಿಂದ ಹಿಡಿದು ಬೆಂಗಳೂರವರೆಗಿನ ಮದುವೆಯಾಗಿದೆ ಎಂದರು.

    ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆಗಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್ ಎಂಗೇಜ್‍ಮೆಂಟ್‍ಗೆ ಬೇರೆ ದೇಶದಿಂದ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್ ಎಂಗೇಜ್‍ಮೆಂಟ್‍ಗೆ ಬೇರೆ ದೇಶದ ಹಾರವೇ ಬೇಕಾಗಿತ್ತಾ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.

    ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೀನಿ ಎಂದು ಎಚ್‍ಡಿಕೆ ಹೇಳುತ್ತಿದ್ದಾರೆ. ಜನ ಅವಕಾಶ ಕೊಟ್ಟಾಗ ಸಿಎಂ ಆಗಿದ್ರಲ್ವಾ ಆಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಅರ್ಥಿಕ ಬಲ ಮಾಡಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.

    ಬಜೆಟ್ ಬಗ್ಗೆ ಮಾತು:
    ಬಜೆಟ್ ಪ್ರಸ್ತಾಪ ಮಾಡಿದ ವಿಶ್ವನಾಥ್, ಎರಡೂವರೆ ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದರೂ 4 ಲಕ್ಷ ಕೋಟಿ ರೂ. ಹತ್ತಿರಕ್ಕೆ ಸಾಲ ತಂದಿದ್ದೇವೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ ಎಂಬ ಬಗ್ಗೆ ವಿಚಾರ ಮಾಡಬೇಕಿದೆ ಎಂದರು.

    ಅಧಿಕಾರಿಗಳ, ನೌಕರರ ಸಂಬಳಕ್ಕೆ 24 ಸಾವಿರ ಕೋಟಿ ರೂ. ಹೋಗುತ್ತಿದೆ. ನನ್ನ ಹತ್ತಿರ ಇರುವುದೇ ಹತ್ತು ರೂಪಾಯಿ ಅಂತ ಹೇಳುವ ನಾಯಕರು ಬೇಕಿದೆ. ದೆಹಲಿ ಸಿಎಂ ಬಸ್, ವಿದ್ಯುತ್, ನೀರು ಎಲ್ಲ ಉಚಿತ ಕೊಟ್ಟಿದ್ದಾರೆ. ಇಂತಹ ಕೆಲಸಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರ ಗಮನಹರಿಸಬೇಕು. ಹೀಗಾಗಿ ದುಂದು ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರ ಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು.

    ತಾವು ಪಕ್ಷ ಬದಲಿಸಿದ್ದು ಮಾರಾಟವಲ್ಲ. ಹೋರಾಟ ಎಂದ ವಿಶ್ವನಾಥ್, ರಾಜ್ಯದಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿ ಬಹಳ ದಿನವಾಯಿತು. ಇಲ್ಲಿ ಕುಟುಂಬ, ವ್ಯಕ್ತಿ ಜಾತಿ, ಗುಂಪು ರಾಜಕಾರಣ ಆಗುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮನ್ನೆಲ್ಲ ಮಾರಾಟ ಅಂದ್ರು. ಆದರೆ ಅದು ಅವರ ದುರ್ನಡತೆ ವಿರುದ್ಧ ನಡೆದ ಹೋರಾಟ. ನಾನು ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಿದವನಲ್ಲ, ಸಚಿವ ಸ್ಥಾನ ಕೊಡುವುದು ಬಿಡುವುದು ಬಿಎಸ್‍ವೈಗೆ ಬಿಟ್ಟಿದ್ದು, ಸೋತವರಿಗೆ ಕೊಡಬಾರದು ಅಂತಿಲ್ಲ, ಈಗ ಸೋತವರೇ ಡಿಸಿಎಂ ಆಗಿದ್ದಾರೆ. ಕನ್ನಡ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ಏಕೈಕ ನಾಯಕ ಯಡಿಯೂರಪ್ಪ ಮಾತ್ರ. ಕುಮಾರಸ್ವಾಮಿ ಎಂದಿಗೂ ಇಲ್ಲ. ಯಡಿಯೂರಪ್ಪ ಬಗ್ಗೆ ಮಾತ್ರ ನಮಗೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸರಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಆಗಿರೋ ಶಾಸಕ ಮಹೇಶ್ ಕುಮಟಳ್ಳಿ ಸಿಎಂಗೆ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಕೊಡದೆ ಇದ್ದರೂ ಪರವಾಗಿಲ್ಲ. ಸಿ.ಪಿ ಯೋಗೇಶ್ವರ್ ಹಾಗೂ ವಿಶ್ವನಾಥ್‍ಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಈ ಸರ್ಕಾರ ಬರಲು 17 ಜನರು ಕಾರಣ. ಅದರಲ್ಲಿ ಎರಡನೇ ರನ್ನರ್ ಅಪ್ ನಾನೇ. ನನಗೆ ಸ್ಥಾನ ಕೊಡದೆ ಇದ್ದರೆ ಅನ್ಯಾಯ ಆಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ನನಗೆ ಸ್ಥಾನ ಕೊಡದೆ ಹೋದರೂ ಪರವಾಗಿಲ್ಲ ಸಿ.ಪಿ ಯೋಗೇಶ್ವರ್, ವಿಶ್ವನಾಥ್‍ಗೆ ಸ್ಥಾನ ಕೊಡಿ ಎಂದು ಸಿಎಂ ಯಡಿಯೂರಪ್ಪಗೆ ಡಿಮ್ಯಾಂಡ್ ಮಾಡಿದ್ದಾರೆ.

    ಯೋಗೇಶ್ವರ್ ಬಿಜೆಪಿ ಸರ್ಕಾರ ಬರಲು ಕಾಣಿಕೆ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳುವಾಗ ನಮ್ಮ ಜೊತೆ ಇದ್ದವರು ಯೋಗೇಶ್ವರ್. ಬಿಜೆಪಿಗೆ ಅವರ ಕೊಡುಗೆ ಇದೆ. ಈ ಸರ್ಕಾರಕ್ಕೂ ಅವರ ಕೊಡುಗೆ ಇದೆ. ಹೀಗಾಗಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಬೇಕು. ಅದೇ ರೀತಿ ಈ ಸರ್ಕಾರಕ್ಕೆ ವಿಶ್ವನಾಥ್ ಕೊಡುಗೆ ಇದೆ. ಸೋತರು ಅಂತ ಅವರನ್ನು ಕೈ ಬಿಡಬೇಡಿ. ಅವರಿಗೂ ಮಂತ್ರಿ ಸ್ಥಾನ ಕೊಡಿ ಎಂದು ಒತ್ತಾಯ ಮಾಡಿದರು.

    ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಟಳ್ಳಿ, ನನಗೆ ಸಿಎಂ ಸಚಿವ ಸ್ಥಾನ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಸಿಎಂ ಯಡಿಯೂರಪ್ಪ ಯಾವತ್ತು ಕೊಟ್ಟ ಮಾತು ತಪ್ಪಿಲ್ಲ. ಗೆದ್ದ 11 ಜನರ ಪೈಕಿ ನನಗೆ ಯಾಕೆ ಕೊಡಲ್ಲ ಅಂತ ಸುದ್ದಿ ಬರುತ್ತಿದಿಯೋ ನನಗೆ ಗೊತ್ತಿಲ್ಲ. ಸಿಎಂ ಮಾತು ಕೊಟ್ಟಿದ್ದರು. ಹೀಗಾಗಿ ನಾನು ಮಂತ್ರಿ ಆಗುತ್ತೀನಿ ಎಂಬ ವಿಶ್ವಾದ ಇದೆ. ಮಂತ್ರಿ ಮಾಡುತ್ತಾರೆ ಅಂತ ನಂಬಿಕೆ ಇದೆ. ಒಂದು ವೇಳೆ ನನ್ನ ಹೆಸರು ಬಿಟ್ಟರೆ ನನಗೆ ಅನ್ಯಾಯವಾಗುತ್ತೆ. ಆದರೂ ಸಿಎಂ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ. ಕೊನೆ ಘಳಿಗೆಯಲ್ಲಿ ಸ್ಥಾನ ತಪ್ಪಿದರು ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೀನಿ ಎಂದು ತಿಳಿಸಿದರು.

  • ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ – ಧ್ರುವನಾರಾಯಣ್ ವ್ಯಂಗ್ಯ

    ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ – ಧ್ರುವನಾರಾಯಣ್ ವ್ಯಂಗ್ಯ

    ಮೈಸೂರು: ಮೈತ್ರಿ ಸರ್ಕಾರದ ಪತನದ ಕುರಿತು ಎಚ್. ವಿಶ್ವನಾಥ್ ಪುಸ್ತಕ ಬರೆಯುವ ವಿವಾದಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ ಎಂದು ವ್ಯಂಗ್ಯವಾಡಿದ್ದಾರೆ.

    ವಿಶ್ವನಾಥ್‍ಗೆ ಯಾವುದೇ ನೈತಿಕತೆಯಿಲ್ಲ. ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿತ್ತು. ಸಚಿವರನ್ನಾಗೂ ಕೂಡ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಜೆಡಿಎಸ್‍ಗೆ ಹೋಗಿದ್ದರು. ಜೆಡಿಎಸ್ ಪಕ್ಷ ಕೂಡ ಶಾಸಕರಾಗಿ ಮಾಡಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿತ್ತು. ಆದರೆ ಅವರಿಗೂ ಕೂಡ ಮೋಸ ಮಾಡಿ ಬಿಜೆಪಿಗೆ ಹೋದರು. ಈಗ ಬಿಜೆಪಿಯಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಿಜೆಪಿಯವರಿಗೂ ಯಾವುದೇ ಸಿದ್ಧಾಂತಗಳಿಲ್ಲ. ಯಡಿಯೂರಪ್ಪರವರಿಗೆ ಉತ್ತಮ ಆಡಳಿತ ನೀಡಲು ಸುವರ್ಣ ಅವಕಾಶವಿದೆ. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲು ಕೂಡ ಅವರಿಗೆ ಸ್ವತಂತ್ರ ನೀಡುತ್ತಿಲ್ಲ ಎಂದರು.