Tag: Vishwanath

  • ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್

    ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್

    – ಶಸಿಕಲಾ ಜೊಲ್ಲೆ ಹೇಳಿದ್ದೇನು..?

    ಮಡಿಕೇರಿ: ಸಿಎಂ ಬದಲಾವಣೆ ವಿಚಾರ ಇನ್ನೂ ಕೂಡ ತಣ್ಣಗೆ ಆಗಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಬಿಜೆಪಿಯ ಭಿನ್ನಭಿಪ್ರಾಯವನ್ನು ಸರಿದೂಗಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಅತೃಪ್ತಿಯ ಬೆಂಕಿ ಹೊಗೆಯಾಡುತ್ತಲೇ ಇದೆ. ಈ ನಡುವೆ ನಾನು ವ್ಯಕ್ತಿ ಪೂಜೆ ಮಾಡುವವನಲ್ಲ ಎನ್ನುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬೇಕು ಎನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾನು ಪಕ್ಷದ ಪರವಾಗಿದ್ದೇನೆ, ಪಕ್ಷದ ವಿಚಾರವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಮಾತನಾಡಿದ್ದೇನೆ. ಪಕ್ಷ ಎಂದ ಮೇಲೆ ಜಗಳಗಳು ಇದ್ದದ್ದೇ. ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಚರ್ಚೆ ಮಾಡೋದಿಲ್ಲ ಎಂದರು.

    ಶಾಸಕ ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ವಿಷಯಕ್ಕಾಗಲಿ, ಅವರ ವಿರುದ್ಧ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕಾಗಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತು ಸಿಎಂ ಬದಲಾವಣೆ ವಿಚಾರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ:
    ರಾಜ್ಯ ನಾಯಕತ್ವ ಬದಲಾವಣೆ ವಿಚಾರವಾಗಿ ಮಡಿಕೇರಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಒಂದು ಮನೆ ಎಂದ ಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಅದನ್ನು ಮನೆ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ ಎಂದರು.

    ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ವಿಚಾರ ಹಿನ್ನೆಲೆಯಲ್ಲಿ ನಿನ್ನೆ ನನ್ನ ಇಲಾಖೆಯ ಕಾರ್ಯವೈಖರಿ ಅಭಿವೃದ್ಧಿ ಕುರಿತು ವರದಿ ನೀಡಿದ್ದೇನೆ. ಬೇರೆ ರಾಜಕೀಯವಾಗಿ ನಾನು ಯಾವುದೇ ವರದಿ ನೀಡಿಲ್ಲ. ಹೆಚ್ ವಿಶ್ವನಾಥ್ ಅವರು ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ವಿಶ್ವನಾಥ್ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ ಹೈಕಮಾಂಡ್ ಎಲ್ಲಾವವನ್ನು ನಿರ್ಧಾರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

  • ಬಿಗ್‍ಬಾಸ್ ಮನೆಯ ಕಿರಿಯ ಸ್ಪರ್ಧಿ ವಿಶ್ವನಾಥ್ ಔಟ್

    ಬಿಗ್‍ಬಾಸ್ ಮನೆಯ ಕಿರಿಯ ಸ್ಪರ್ಧಿ ವಿಶ್ವನಾಥ್ ಔಟ್

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯ ಮೇಲೆ ವೀಕ್ಷಕರ ಗಮನ ಹೆಚ್ಚಾಗಿತ್ತು. ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದಾದರೆ ಬಿಗ್‍ಬಾಸ್ ಎಲಿಮಿನೇಷನ್ ಪ್ರಕ್ರೀಯೆ ಹೇಗೆ ನಡೆಯುತ್ತದೆ. ಯಾರು ಮನೆಯಿಂದ ಹೊರಗೆ ಬರುತ್ತಾರೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಬಿಗ್‍ಬಾಸ್ ಮನೆಯ ಗಾಯಕ, ಅತ್ಯಂತ ಕಿರಿಯ ಸ್ಪರ್ಧಿ ಎನಿಸಿಕೊಂಡಿರುವ ವಿಶ್ವನಾಥ್ ಮನೆಯಿಂದ ಆಚೆ ಬಂದಿದ್ದಾರೆ.

    ವಿಶ್ವನಾಥ್ ಬಿಗ್‍ಬಾಸ್ ಜರ್ನಿಯನ್ನು ಮುಗಿಸಿದ್ದಾರೆ. ವಿಶ್ವನಾಥ್ ಮೊದಲಿನಿಂದಲು ಚೆನ್ನಾಗಿ ಆಟ ಆಡಿಕೊಂಡು ಬೇರೆಯವರಿಗೆ ಸ್ಪರ್ಧೆ ಕೊಡುತ್ತಾ ಬಂದಿದ್ದರು. ಇದ್ದ 7 ವಾರಗಳ ಕಾಲವು ಉಳಿದ ಸ್ಪರ್ಧಿಗಳಿಗೆ ಸರಿ ಸಮಾನವಾಗಿ ಪೈಪೋಟಿ ಕೊಡುತ್ತಾ ಬಂದಿದ್ದರು. ಒಂದು ವಾರದ ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ ಕಳೆದ 2 ವಾರಗಳಿಂದ ಆ್ಯಕ್ಟೀವ್ ಆಗಿ ಇರಲಿಲ್ಲ ಹೀಗಾಗಿ ಬಿಗ್‍ಬಾಸ್ ಮನೆಯಿಂದ ವಿಶ್ವ ಹೊರಬಂದಿದ್ದಾರೆ.

    ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಟ್, ಚಂದ್ರಕಲಾ, ಶಂಕರ್ ಅಶ್ವಥ್ ಈ ಹಿಂದೆ ಮನೆಯಿಂದ ಹೊರಬಂದಿದ್ದರು. ಇದೀಗ ಗಾಯಕ ವಿಶ್ವನಾಥ್‍ಗೆ ಬಿಗ್‍ಬಾಸ್ ಜರ್ನಿ ಮುಕ್ತಾಯವಾಗಿದೆ. ಹಿಂದಿನ ವಾರಾ ಶಮಂತ್ ಮನೆಯಿಂದ ಆಚೆಹೋಗಬೇಕಿತ್ತು. ಆದರೆ ಅದೃಷ್ಟವಶಾತ್ ಬಚಾವ್ ಆಗಿದ್ದರು. ಆದರೆ ಎಲಿಮಿನೇಷನ್‍ನಲ್ಲಿ ಶಮಂತ್ ಹೋಗುತ್ತಾರೆ ಎನ್ನುವ ಅನುಮಾನ ಇತ್ತು. ಆದರೆ ವಿಶ್ವನಾಥ್ ಅವರಿಗೆ ಬಿಗ್‍ಬಾಸ್ ಜರ್ನಿ ಮುಕ್ತಾಯವಾಗಿದೆ.

    ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಅದಕ್ಕೆ ಬಿಗ್ ಬಾಸ್ ವಿಶೇಷ ಪ್ಲಾನ್ ಮಾಡಿದ್ದರು. ಒಂದೊಂದು ಚಟುವಟಿಕೆ ಮೂಲಕ ಒಬ್ಬೊರನ್ನು ಬಿಗ್ ಬಾಸ್ ಸೇಫ್ ಮಾಡಲಿದ್ದಾರೆ. ಕೊನೆಗೆ ಯಾವ ಸ್ಪರ್ಧಿಯ ಜರ್ನಿ ವೀಡಿಯೋ ಪ್ಲೇ ಆಗುತ್ತದೆಯೋ, ಆ ಸ್ಪರ್ಧಿ ಇಂದು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿದ್ದರು. ವಿಶ್ವನಾಥ್ ಅವರ ಜರ್ನಿ ವೀಡಿಯೋ ಪ್ಲೇ ಆಗಿದೆ.

    ವಿಶ್ವನಾಥ್ ಸಿಂಗರ್ ಅವರು ಪ್ರತಿಭೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ, ಇನ್ನಷ್ಟು ಮನರಂಜನೆಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದರೆ ವೀಕ್ಷರು ವೋಟ್ ಬರಹುದಿತ್ತು. ಒಟ್ಟಾರೆಯಾಗಿ ವಿಶ್ವಾಥ್ ಇರುವಷ್ಟು ದಿನ ಸಖತ್ ಎಂಜಾಯ್ ಮಾಡಿದ್ದಾರೆ. ಯಾರೋಂದಿಗೂ ದ್ವೇಷ ಕಟ್ಟಿಕೊಳ್ಳದೆ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಮುಂದಿನ ವಾರ ಯಾರ ಆಟವನ್ನು ಬಿಗ್‍ಬಾಸ್‍ ಮುಗಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

     

  • ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ದೊಡ್ಮನೆಯ ಸದಸ್ಯರು ನಿನ್ನೆ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕನ್ನಡಿಗರು ಹೊಸ ವರುಷವೆಂದೇ ಭಾವಿಸುವ ಯುಗಾದಿ ಹಬ್ಬ ಬಹಳ ಶ್ರೇಷ್ಠವಾದದ್ದು. ಸಾಮಾನ್ಯವಾಗಿ ಯುಗಾದಿಯಂದು ಎಣ್ಣೆ ಸ್ನಾನ ಮಾಡುವ ವಾಡಿಕೆ ಹಿಂದಿನಕಾಲದಿಂದಲೂ ಇದೆ. ಸದ್ಯ ನಿನ್ನೆ ಮನೆಯ ಪರುಷ ಸದಸ್ಯರು ಮೈಗೆ ಎಣ್ಣೆ ಹಚ್ಚಿಕೊಂಡು ಬಿಸಿಲು ಕಾಯಿಸಿದ್ದಾರೆ.

    ಈ ವೇಳೆ ಮಜಾ ಎನಾಪ್ಪಾ ಅಂದರೆ ಸಿಕ್ಸ್ ಪ್ಯಾಕ್ ಹೊಂದಿರುವ ರಾಜೀವ್ ಸಿಂಗರ್ ವಿಶ್ವ ಜೊತೆ ಕುಸ್ತಿ ಆಡಿದ್ದಾರೆ. ಈ ವೇಳೆ ಇದನ್ನು ಕಂಡು ಮಂಜು ಒಳ್ಳೆಯ ಕಾಂಪಿಟೇಟರ್ ನನ್ನು ಸೆಲೆಕ್ಟ್ ಮಡಿಕೊಂಡಿದ್ದೀಯಾ ಶಿಷ್ಯ, ರಿಟೈಡ್ ಆದ ಮೇಲೆ ಇನ್ನೂ ಮಕ್ಕಳು ಮರಿಗೆ ಹೇಳಿಕೊಡಬೇಕು. ನೀನು ಯಾಕಂದ್ರೆ ದೊಡ್ಡವರು ಯಾರು ಬರುತ್ತಾರೆ.

    ಸಣ್ಣ ಸಣ್ಣ ಮಕ್ಕಳು ಪುಟಾಣಿ ಬೇಬಿ ಸಿಟ್ಟಿಂಗ್ ಮಕ್ಕಳಿಗೆ ನಾನು ಕರೆದೆ, ಆ ಮಕ್ಕಳು ಈ ದೇಹ ನೋಡಿದ ತಕ್ಷಣ ವಾವ್ ಅಂತ ಹೇಳುತ್ತಾರೆ. ನೀನು ಅವರ ಜೊತೆಯಲ್ಲಿಯೇ ಖುಷಿಯಾಗಿ ಆಡಿಕೊಂಡು, ಖುಷಿಪಡಿಸಿಕೊಂಡು ಇರಬೇಕು ಅಷ್ಟೇ ಎಂದು ಕಾಮೆಂಟ್ರಿ ಕೊಡುತ್ತಾರೆ.

    ಕಿಡ್ಸ್ ಕೇರ್ ಓಪನ್ ಮಾಡಿ ಮಕ್ಕಳಿಗೆ ಕುಸ್ತಿ ಕಲಿಸು ಅಷ್ಟೇ. ನಿನ್ನ ಸರಿ ಸಮಾನವಾಗಿ ಆಡಲು ಯಾರ ಕೈನಲ್ಲಿಯೂ ಸಾಧ್ಯವಾಗುವುದಿಲ್ಲ. ಕೈ ನಡುಗುತ್ತದೆ, ತೊಡೆ ಅಲ್ಲಾಡುತ್ತದೆ. ಮುಗೀತು ಕಥೆ ಕ್ರಿಕೆಟ್ ಕೋಚ್, ಗರಡಿ ಕೋಚ್, ಮಸಾಜ್ ಸೆಂಟರ್ ಕಾಲು ನೋವು ಕೈ ನೋವು, ಕೀಲು ನೋವು, ಮಂಡಿ ನೋವು ಅಷ್ಟೇ ಎಂದು ಅಣುಕಿಸುತ್ತಾರೆ.

    ಮಂಜು ಕಾಂಮೆಂಟ್ರಿ ಕೇಳಿ ಮನೆ ಮಂದಿ ಫುಲ್ ನಗುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

  • ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಗೆ ಬಂದಿರೋ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಹಳೆಯ ಆಟಗಾರರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳು ಮನೆಯ ಮಂದಿ ಹೊರಗೆ ಹೇಗೆ ಬಿಂಬಿತರಾಗಿದ್ದಾರೆ ಅನ್ನೋ ವಿಷಯ ಸದ್ಯ ಅಲ್ಲಿರುವ ಚಕ್ರವರ್ತಿ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಅಂಕ ಸಹ ನೀಡಿದ್ರು. ಇದೀಗ ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.

    ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.

    ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಅಂದ ಸಮಜಾಯಿಷಿ ಕೊಟ್ರು. ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.

    ಚಕ್ರವರ್ತಿ ಚಂದ್ರಚೂಡ ಓರ್ವ ಮಾಜಿ ಪತ್ರಕರ್ತ ಮತ್ತು ಬರಹಗಾರರು. ಇತ್ತ ವಿಶ್ವನಾಥ್ ಸಹ ಒಳ್ಳೆಯ ಗಾಯಕ. ಮುಂದೆ ಈ ಜೋಡಿಯಿಂದ ಹೊಸ ಹಾಡುಗಳನ್ನ ಬಿಗ್ ಮನೆಯಲ್ಲಿ ಕೇಳುವ ಸಾಧ್ಯತೆಗಳಿವೆ.

  • ಕುದುರೆ ಅಂದರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ..

    ಕುದುರೆ ಅಂದರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ..

    ಬಿಗ್‍ಬಾಸ್ ಮನೆಯಲ್ಲಿ ಎಲ್ಲಾ ವಯೋಮಾನದವರು ಇದ್ದಾರೆ. ಆದರೆ ಅತ್ಯಂತ ಕಿರಿಯ ಸ್ಪರ್ಧಿ ಎಂದರೆ ವಿಶ್ವನಾಥ್. 3 ವಾರದ ನಾಮಿನೇಷನ್ ನಿಂದ ತಪ್ಪಿಸಿಕೊಂಡ ವಿಶ್ವನಾಥ್ ಬಗ್ಗೆ ವೀಕ್ಷಕರಿಗೆ ಮನೆಯಿಂದ ಮುಂದಿನ ಹೋಗುತ್ತಾರೆ ಎನ್ನುವ ಅಂದಾಜು ಇತ್ತು. ಆದರೆ ಇದೀಗ ವಿಶ್ವ ಮನೆಯ ಕ್ಯಾಪ್ಟನ್ ಆಗುವ ಮೂಲಕವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

    ಹೌದು.. ಕಳಪೆ ಆಟ, ಚಿಕ್ಕವನು ಎಂದು ಮನೆಯಲ್ಲಿರುವ ಕೆಲವು ಸ್ಪರ್ಧಿಗಳು ಹೇಳುತ್ತಿದ್ದರು. ಆದರೆ ಮನೆಯಯವರ ಮತ್ತು ಬಿಗ್‍ಬಾಸ್ ಸ್ಪರ್ಧಿಗಳ ನಿರ್ಧಾರ ವಿಶ್ವನ ಉತ್ತಮ ಪ್ರದರ್ಶನದಿಂದ ಬದಲಾಗಿದೆ.

    ಚದುರಂಗ ಆಟದಲ್ಲಿ ಬಿಳಿ ತಂಡ ಗೆದ್ದಿತ್ತು. ಈ ಮೂಲಕವಾಗಿ ಬಿಳಿ ತಂಡದ ಸದಸ್ಯರು ಕ್ಯಾಪ್ಟನ್ಸಿಗೆ ಅರ್ಹರಾಗಿದ್ದರು. ಗೆದ್ದ ಬಳಿಕ ತಂಡದವರಿಗೆ ಶಬ್ದವೇದಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಒಂದಷ್ಟು ಪ್ರಾಣಿಗಳ ಶಬ್ದ ಕೇಳಿ ಜೋಡಿಸ ಬೇಕಿತ್ತು. ಈ ವೇಳೆ ವಿಶ್ವನಾಥ್ 2 ಸುತ್ತುಗಳಲ್ಲಿ ಸರಿಯಾಗಿ ಜೋಡಿಸುವ ಮೂಲಕವಾಗಿ ನಾಲ್ಕನೇ ವಾರದ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ರಘು ಕದುರೆ ಎಂದರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ. ಇತ್ತ ವಿಶ್ವ ಅವರಿಗೆ ಅವರ ಅಮ್ಮನಿಂದ ಕರೆ ಬಂದಿದೆ. ಒಳ್ಳೆಯದಾಗಿ ಆಟ ಆಡು ಎಂದು ಹರಸಿದ್ದಾರೆ.

    ವಿಶ್ವನಿಗೆ ಕಳಪೆ, ಚಿಕ್ಕವನು ಎಂದವರಿಗೆ ಕ್ಯಾಪ್ಟನ್ ಅಗುವ ಮೂಲಕವಾಗಿ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ವಿಶ್ವ ಈ ವಾರದ ಆಟದ ವೈಖರಿ ಬದಲಾಯಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಸ್ಟ್ರಾಂಗ್ ಆಗಿ ನಾನು ಚಿಕ್ಕವನಾದರು ಯಾರಿಗೂ ಏನೂ ಕಮ್ಮಿ ಇಲ್ಲ ಎನ್ನುವ ಮೂಲಕ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆ. ಬಿಗ್ ಮನೆಯಲ್ಲಿ ಯಾರಿಗೆ ಬೇಕಾದರೂ ಅದೃಷ್ಟ ಕುಲಾಯಿಸ ಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ ಸಿಕ್ಕಂತಾಗಿದೆ.

  • ದೊಡ್ಮನೆಯ ಭಯಾನಕ ಸತ್ಯ ಬಿಚ್ಚಿಟ್ಟ ರಾಜೀವ್..!

    ದೊಡ್ಮನೆಯ ಭಯಾನಕ ಸತ್ಯ ಬಿಚ್ಚಿಟ್ಟ ರಾಜೀವ್..!

    ಬಿಗ್ ಬಾಸ್ ಮನೆಯಲ್ಲಿ ನಡೆದ ಭಯಾನಕ ಸತ್ಯವೊಂದನ್ನು ಸ್ಪರ್ಧಿಗಳ ಮುಂದೆ ರಾಜೀವ್ ಬಿಚ್ಚಿಟ್ಟು ಅಚ್ಚರಿಗೊಳಪಡಿಸಿದ್ದಾರೆ. ಇದ್ದಕ್ಕಿದ್ದಂತೆಯೇ ಕರೆಂಟ್ ಹೋದಾಗ ನಡೆದ ಘಟನೆ ವಿವರಿಸಿರುವ ರಾಜೀವ್, ಕೊನೆಗೆ ನಿಜಾಂಶವನ್ನು ಹೇಳುವ ಮೂಲಕ ಸ್ಪರ್ಧಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

    ಹೌದು. ಮನೆಯವರೆಲ್ಲರೂ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶುಭಾ ಪೂಂಜಾ ಅವರು ಕನಸಿನ ಬಗ್ಗೆ ಮಾತನಾಡುತ್ತಾ, ನಮ್ಮ ಕನಸಲ್ಲಿ ನಾವೇ ಬರುತ್ತಿದ್ದೇವೆ ಅಂತ ಮಾತಿಗಿಳಿದ್ರು. ಶುಭಾ ಮಾತು ಕೇಳಿಸಿಕೊಂಡ ರಾಜೀವ್ ಮನೆಯಲ್ಲಿ ನಡೆದ ನೈಜ ಘಟನೆಯನ್ನು ವಿವರಿಸಲು ಮುಂದಾದ್ರು.

    ನಾನು ದಿವ್ಯ, ವಿಶ್ವ ಕೂತ್ಕೊಂಡಿದ್ದೀವಿ. ಆಗ ಏಕಾಏಕಿಯಾಗಿ ಲೈಟ್ ಆಫ್ ಆಯ್ತು. ಟಕ್ ಅಂತ ಶಬ್ದ ಬಂತು. ಇತ್ತ ವಿಶ್ವ ಅಣ್ಣಾ.. ಅಂದ. ನೋಡಿದಾಗ ಕುಕ್ಕರ್ ಮುಚ್ಚಳ ನಿಂತಿತ್ತು. ಲೈಟ್ ಆಫ್ ಆಗ್ತಿದ್ದಂತೆ ಅದು ಮಲಕ್ಕೊಂತು ಅಂತ ರಾಜೀವ್ ತನ್ನದೇ ಶೈಲಿಯಲ್ಲಿ ವಿವರಿಸಿದರು.

    ರಾಜೀವ್ ವಿವರಣೆ ನೀಡುತ್ತಿದ್ದಂತೆಯೇ ಮೊದಲು ಇವರೇನೋ ಜೋಕ್ ಮಾಡ್ತಿದ್ದಾರೆ ಅಂತ ಅಂದುಕೊಂಡ ಮನೆ ಮಂದಿ, ಪೂರ್ತಿ ಸ್ಟೋರಿ ಕೇಳಿದ ಬಳಿಕ ಒಂದು ಬಾರಿ ದಂಗಾದ್ರು. ಅಲ್ಲದೆ ಆತಂಕಗೊಂಡು ಭಯಭೀತರಾದರು. ಈ ವೇಳೆ ವಿಶ್ವ ಅಣ್ಣಾ ಎಲ್ಲೋ ನೀರು ಜಾರಿಕೊಂಡರಬೇಕು ಅಂತ ಹೇಳಿದ. ಆಗ ನಾನು ಇರಬಹುದು ಕಣೋ ಆದರೆ ನಿಂತಿರೋ ಕುಕ್ಕರ್ ಹಿಂಗೆ ಮಲಕ್ಕೊಂಡಿರೋಕೆ ಸಾಧ್ಯ ಇಲ್ಲ ಅಂದೆ.

    ರಾಜೀವ್ ಕಥೆ ಕೇಳಿಸಿಕೊಂಡ ಬಳಿಕ ಶುಭಾ, ಏನಿದೆ ಈ ಮನೆಯಲ್ಲಿ ಅಂತ ಕೇಳಿದರು. ಅಲ್ಲದೆ ಮನೆಯಲ್ಲಿ ದೆವ್ವದ ಕಾಟ ಇದೆಯೋ ಅಂತ ಭಾವಿಸಿದರು. ಈ ವೇಳೆ ನಿಧಿ ಪ್ರಶ್ನೆಯೊಂದನ್ನು ಕೇಳಿದರು. ಆಗ ರಾಜೀವ್, ಕುಕ್ಕರ್ ತೊಳೆದುಬಿಟ್ಟು ಒರೆಸಿ ಇಟ್ಟಿರ್ತಿ ಅಲ್ವ ಅಂತ ಮತ್ತೆ ವಿವರಣೆ ನೀಡಲು ಮುಂದಾದ್ರು. ಆಗ ಶುಭಾ ಹಂಗಂದ್ರೆ ಅದು ಜಾರಿ ಬಿದ್ದಿರತ್ತೆ ಅಷ್ಟೆ ಅಂದ್ರು. ಆಗ ರಾಜೀವ್ ಹೌದು ಜಾರಿನೇ ಬಿದ್ದಿರೋದು ಅಂದ್ರೆ, ಇತ್ತ ಅರವಿಂದ್ ನೀವು ಹೇಳಿದ್ದು ಸರಿ ಅಂತ ಹೇಳಿದ್ರು. ಸತ್ಯ ಗೊತ್ತಾದಾಗ ಎಲ್ಲರೂ ನಿಟ್ಟುಸಿರು ಬಿಟ್ಟು ನಕ್ಕರು.

  • ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಬಿಗ್‍ಬಾಸ್‍ನಲ್ಲಿ ದಿನೇ ದಿನೇ ಪ್ರಶಾಂತ್ ಸಂಬರಗಿ ವಿರುದ್ಧ ಅಸಮಾಧಾನ ಸ್ಫೋಟಗೊಂಡಂತೆ ಕಾಣಿಸ್ತಿದೆ. ಮನೆಯ ಸದಸ್ಯರಿಗೆ ಪ್ರಶಾಂತ್ ಸಂಬರಗಿ ಕಿರಿಕಿರಿಯುನ್ನುಂಟು ಮಾಡ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲಿಯೇ ಅರ್ಥ ಆಗ್ತಿದೆ. ಒಂದು ವಿಶೇಷ ಅಂದ್ರೆ ಯಾರು ನೇರವಾಗಿ ಸಂಬರಗಿ ಮುಂದೆ ಹೇಳದೇ, ತಾವೇ ತಾವೇ ಮಾತಾಡಿಕೊಳ್ಳುತ್ತಿದ್ದಾರೆ.

    ಮಂಗಳವಾರ ಕಿಚನ್‍ನಲ್ಲಿ ನಿಧಿ ಸುಬ್ಬಯ್ಯ, ರಘು ಮಾತನಾಡಿಕೊಳ್ಳುತ್ತಾ ಸಂಬರಗಿ ದಡ್ಡ, ಹಾಗೆ ಹೀಗೆ ಅಂತ ಮಾತಾಡಿಕೊಂಡಿದ್ದರು. ನಿನ್ನೆ ಎಪಿಸೋಡ್ ನಲ್ಲಿ ಒಂದೆಡೆ ಕುಳಿತಿದ್ದ ವಿಶ್ವನಾಥ್, ರಘು ಮತ್ತು ಅರವಿಂದ್ ಮೂವರ ನಡುವೆಯೂ ಸಂಬರಗಿಯ ಕುರಿತಾದ ಮಾತುಗಳನ್ನಾಡುತ್ತಿದ್ದರು.

    ಪ್ರಶಾಂತ್ ಸಂಬರಗಿ ತಮಗೆ ಬೇಕಾಗಿದ್ದನ್ನ ಮಾಡ್ತಾರೆ. ಇಲ್ಲ ಅಂದ್ರೆ ಆಗಲ್ಲ ಗುರು ಅಂತ ಹೇಳ್ತಾರೆ. ತಾವು ಏನೇ ಕೆಲಸ ಮಾಡಿದ್ರೂ ಎಲ್ಲರಿಗೂ ತಿಳಿಯುವಂತೆ ಹೇಳೋದು ಅವರ ನಡವಳಿಕೆ. ಊಟ, ಟೀ ತಂದಾಗಲೂ ಅದನ್ನ ಪದೇ ಪದೇ ಹೇಳ್ತಾರೆ ಎಂದು ಅರವಿಂದ್ ಮತ್ತು ವಿಶ್ವನಾಥ್ ಅಂದ್ರು.

    ನಮ್ಮ ತಾಯಿಯ ವಿಷಯ ಹೇಳಿದಾಗ ರಘು ತಬ್ಬಲಿ ಅಲ್ಲ. ನಾವೆಲ್ಲ ಅವನ ಜೊತೆಯಲ್ಲಿದ್ದೇವೆ ಎಂದು ಸಂಬರಗಿ ಹೇಳಿದಾಗ ಬೇಜಾರ ಆಯ್ತು. ನಾನು ಯಾವಾಗಾದ್ರೂ ತಬ್ಬಲಿ ಅಂತ ಯಾರಿಗಾದ್ರೂ ಹೇಳಿದ್ನಾ? ಏನೇ ಮಾತಾಡಿದ್ರೂ ಸಂಬರಗಿ ಅವರು ಅದನ್ನ ಕಂಟೆಂಟ್ ತರ ನೋಡ್ತಾರೆ. ಯಾವುದೇ ಟಾಪಿಕ್ ಬಂದ್ರೂ ನಂದೆಲ್ಲಿಡಲಿ ಅನ್ನೋ ಜಾಯಮಾನದವರು ಅಂತ ಆಡಿಕೊಂಡ್ರು. ಇದೇ ವಿಷಯವಾಗಿ ನಿಧಿ ಸುಬ್ಬಯ್ಯ ಮುಂದೆಯೂ ರಘು ಮಾತಾಡಿದ್ರು.

  • ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    – ದಿವ್ಯ ಉರುಡುಗ ಕಾಲೆಳೆದ ಕಿಚ್ಚ

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ನಂತರ ಎಲ್ಲರ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಕಳೆದ ಒಂದು ವಾರದಿಂದ ಬಿಗ್ ಮನೆಯಲ್ಲಿ ಎಲ್ಲೆ ನೋಡಿದ್ರೂ ಈ ಜೋಡಿ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಬೀನ್ ಬ್ಯಾಗ್ ಬಗ್ಗೆಯೇ ಒಂದು ದೊಡ್ಡ ಚರ್ಚೆ ನಡೆದಿದೆ.

    ಹೌದು. ನಾನು ದಿವ್ಯಾ ಉರುಡುಗ ಜೊತೆ ಗಾರ್ಡನ್ ಏರಿಯಾದಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದೆ. ಈ ವೇಳೆ ನಾನು ಕೊಂಚ ರಿಲಾಕ್ಸ್ ಮಾಡಲೆಂದು ಮುಂದಕ್ಕೆ ಬಂದೆ. ಆದರೆ ಮತ್ತೆ ಹಿಂದೆ ತಿರುಗಿ ನೋಡಿದಾಗ ಬೀನ್ ಬ್ಯಾಗ್‍ಗೆ ಇರುವುದಿಲ್ಲ. ಬೀನ್ ಬ್ಯಾಗ್ ಎಲ್ಲಿ ಅಂತ ಹುಡುಕುತ್ತಿದ್ದಾಗ ಅರವಿಂದ್ ಅವರು ಬರುತ್ತಿರುವುದನ್ನು ಕಂಡು ದಿವ್ಯಾ ಉರುಡುಗ ಬೀನ್ ಬ್ಯಾಗ್ ಎಳೆದುಕೊಂಡು ಜಾಗ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಯಿತು ಅಂತ ವಿಶ್ವನಾಥ್ ಹೇಳಿದ್ದಾರೆ.

    ಈ ವೇಳೆ ದಿವ್ಯಾ ಉರುಡುಗ ಆ ರೀತಿ ಏನೂ ಇಲ್ಲ ಸರ್ ಎಂದು ಸುದೀಪ್‍ಗೆ ಹೇಳುತ್ತಾರೆ. ನಂತರ ಸುದೀಪ್ ಹೌದು ಆ ತರ ಏನೂ ಇಲ್ಲ. ನಮ್ಮ ಕ್ಯಾಮೆರಾ ಮ್ಯಾನ್‍ಗಳಿಗೆ ತಲೆನೇ ಇಲ್ಲ. ಸುಮ್ಮನೆ ಇಲ್ಲದೇ ಇರುವುದನ್ನೆಲ್ಲಾ ತೋರಿಸುತ್ತಿದ್ದಾರೆ. ಮೊದಲ ಬಾರಿ ಬಿಗ್‍ಬಾಸ್‍ನಲ್ಲಿ ಸಿಜಿ(ಗ್ರಾಫಿಕ್ಸ್) ಎಲ್ಲ ನಡೆಯುತ್ತಿದೆ. ಪಾಪ ಅಲ್ಲಿ ಅರವಿಂದ್‍ರವರೇ ಇಲ್ಲ ಕರೆಕ್ಟ್ ಅಲ್ವಾ? ಎಂದು ದಿವ್ಯಾ ಉರುಡುಗ ಕಾಲೆಳೆದರು.

    ಬಳಿಕ ದಿವ್ಯಾ, ಜೋಡಿ ಟಾಸ್ಕ್ ಬಳಿಕ ಅರವಿಂದ್ ಜೊತೆ ವಿಷಯಗಳನ್ನು ಹಂಚಿಕೊಳ್ಳಲು ಹಾಗೂ ಅವರೊಂದಿಗೆ ಕಂಫರ್ಟ್ ಫೀಲ್ ಹೊಂದಿದ್ದೇನೆ. ಅಷ್ಟೇ ಸರ್ ಅದಕ್ಕಿಂತ ಹೆಚ್ಚು ಬೇರೇನೂ ಇಲ್ಲ ಎಂದು ಹೇಳುತ್ತಾರೆ. ಇದಕ್ಕೆ ಸುದೀಪ್ ಕರೆಕ್ಟ್ ಆದರೆ ಬೀನ್ ಬ್ಯಾಗ್ ಏಕೆ ಎಳೆದ್ರಿ ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ದಿವ್ಯಾ ನನಗೆ ಆ ಘಟನೆ ಬಗ್ಗೆ ನೆನಪೇ ಆಗುತ್ತಿಲ್ಲ ಎಂದು ಹೇಳುತ್ತಾರೆ. ಕೆಲವೊಂದು ವಿಷಯಗಳು ಗೊತ್ತಾಗುವುದೇ ಇಲ್ಲ ಬಿಡಿ. ಇದನ್ನು ಪ್ರತಿ ಮನೆಯಲ್ಲೂ ಮಹಿಳೆಯರು ಕಲಿಯಬೇಕು. ನಾವು ಬರುವುದಕ್ಕಿಂತ ಮುಂಚೆ ಚೇರ್ ರೆಡಿ ಮಾಡಿ ಇಡಿ. ದಿವ್ಯಾ ನೋಡಿ ಕಲಿಯಿರಿ ಎಂದು ವ್ಯಂಗ್ಯ ಮಾಡುತ್ತಾರೆ.

    ಜೊತೆಗೆ ಮಂಜು ತುಲಾಭಾರ ಸಂದರ್ಭದಲ್ಲಿ ಶಮಂತ್ ಬೀನ್ ಬ್ಯಾಗ್ ಯಾಕೆ ಇಟ್ಟರು ಎಂಬ ವಿಚಾರ ನನಗೆ ಈಗ ತಿಳಿಯುತ್ತಿದೆ ಎಂದು ಕಿಚ್ಚ ಹಾಸ್ಯ ಮಾಡಿದರು. ಈ ವೇಳೆ ಮನೆ ಮಂದಿಯೆಲ್ಲಾ ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆದು ಹಾಸ್ಯದ ಹೊನಲಿನಲ್ಲಿ ತೇಲಿದ್ರು.

  • ವಿಶ್ವನಾಥ್, ದಿವ್ಯ ಸುರೇಶ್‍ಗೆ ಸಿಕ್ಕ ಪ್ರಶಸ್ತಿಯನ್ನು ಬಚ್ಚಿಟ್ಟಿದ್ದು ಎಲ್ಲಿ ಗೊತ್ತಾ?

    ವಿಶ್ವನಾಥ್, ದಿವ್ಯ ಸುರೇಶ್‍ಗೆ ಸಿಕ್ಕ ಪ್ರಶಸ್ತಿಯನ್ನು ಬಚ್ಚಿಟ್ಟಿದ್ದು ಎಲ್ಲಿ ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಯ ಆಟದ ಗಮ್ಮತ್ತು ಜೋರಾಗುತ್ತಿದ್ದಂತೆ ಬಗೆ ಬಗೆಯ ಆಟ ಹಾಗೂ ಬಹುಮಾನಗಳನ್ನು ಪಡೆಯಲು ಬಿಗ್‍ಬಾಸ್ ಸ್ಪರ್ಧಿಗಳು ಜಿದ್ದಿಗೆ ಬಿದ್ದಿದ್ದಾರೆ. ಈ ನಡುವೆ ಬಿಗ್ ಬಾಸ್ ಈ ಸಲ ಕಪ್ ನಮ್ದೇ ಎಂಬ ಹೆಸರಿನ ಟಾಸ್ಕ್ ಒಂದನ್ನು ಕೊಟ್ಟಿದ್ದಾರೆ.

    ಸ್ಪರ್ಧಿಗಳು ಈ ಟಾಸ್ಕ್‍ನಲ್ಲಿ ಕಪ್‍ಗಳನ್ನು ಸರಿಯಾಗಿ ಜೋಡಿಸಲು ನಾ ಮುಂದು ತಾ ಮುಂದು ಎಂದುಕೊಂಡು ಆಟವಾಡಿದರು. ಈ ಆಟದಲ್ಲಿ ಕೊನೆಯಲ್ಲಿ ವಿಶ್ವನಾಥ್ ಮತ್ತು ದಿವ್ಯ ಸುರೇಶ್ ಜೋಡಿ ಗೆದ್ದು ಕಪ್ ತಮ್ಮದಾಗಿಸಿಕೊಂಡರು.

    ವಿಶ್ವನಾಥ್ ದಿವ್ಯ ಸುರೇಶ್ ಜೋಡಿ ಕಪ್ ನಮ್ದೇ ಆಟ ಗೆಲ್ಲುತ್ತಿದ್ದಂತೆ ರಾಜೀವ್ ಬಹುಮಾನವನ್ನು ನೀಡಿದರು. ಬಹುಮಾನ ಪಡೆದು ಖುಷಿ ಪಟ್ಟ ವಿಶ್ವನಾಥ್ ಜೋಡಿ ಆ ಬಹುಮಾನವನ್ನು ಮತ್ತೆ ಕಾಪಾಡುವ ಮತ್ತು ಬಚ್ಚಿಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಬಿಗ್‍ಬಾಸ್ ಮನೆಯ ಇತರ ಸ್ಪರ್ಧಿಗಳಿಗೆ ಸಿಗದಂತೆ ತಮಗೆ ಸಿಕ್ಕ ಬಹುಮಾನವನ್ನು ವಿಶ್ವನಾಥ್ ಮತ್ತು ದಿವ್ಯ ಸುರೇಶ್ ಜೋಡಿ ಉಪಾಯದಿಂದ ಪೊರಕೆಯಲ್ಲಿ ಸೇರಿಸಿ ಬಚ್ಚಿಟ್ಟಿದ್ದಾರೆ ಈ ಮೂಲಕ ತಮಗೆ ಬಚ್ಚಿಡಲು ಸಿಕ್ಕಂತಹ ಅವಕಾಶವನ್ನು ಉಪಾಯದಿಂದ ಬಳಸಿಕೊಂಡಿದ್ದಾರೆ.

  • ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು

    ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು

    – ಕಾರ್ಯಕ್ರಮಕ್ಕೆ ಗೈರಾಗಿ ಆಕ್ರೋಶಕ್ಕೆ ಗುರಿಯಾದ ಸಿದ್ದರಾಮಯ್ಯ

    ಬೆಂಗಳೂರು: ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆದ ಕುರುಬ ಸಮುದಾಯದ ಸಮಾವೇಶದ ಕಿಚ್ಚು ರಾಜ್ಯ ರಾಜಧಾನಿಯಲ್ಲಿ ಇಂದು ರಂಗೇರಿತ್ತು. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಹಾಲುಮತದ ಬಾಂಧವರು ಭಾಗಿಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದರು.

    ಮಾದವಾರ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಡೆದ ಬೃಹತ್ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿ ಎಸ್ಟಿ ಮೀಸಲಾತಿ ಕೊಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು. ಕನಕ ಪೀಠದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಸಮಾವೇಶ ನಡೆಯಿತು.

    ಸಮಾವೇಶದಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಎಸ್ಟಿ ಮೀಸಲಾತಿ ಕೊಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟು, ಸಮಾವೇಶಕ್ಕೆ ಆಗಮಿಸದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಸಚಿವ ಈಶ್ವರಪ್ಪ ಮಾತನಾಡಿ ಮೋದಿ, ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಮೀಸಲಾತಿ ಮಾಡಿಸಿಕೊಂಡು ಬರುವುದಾಗಿ ಸಮಾವೇಶದಲ್ಲಿ ಭರವಸೆ ಕೊಟ್ಟರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ನಂತರ ಮಾತನಾಡಿದ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಮನವಿ ಮಾಡಿಕೊಂಡು, ಯಡಿಯೂರಪ್ಪ ಅವರು ಕೂಡಲೇ ಕುಲ ಅಧ್ಯಯನ ಶಾಸ್ತ್ರ ಮಾಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಬಳಿಕ ನಾವು ಮೋದಿ, ಅಮಿತ್ ಶಾ ಬಳಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ. ಎಲ್ಲಾ ಸ್ವಾಮೀಜಿಗಳ ತರಹ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ. ನಾವು ಸಾಯೋವರೆಗೂ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಮೋದಿ ಅವರು ಮೀಸಲಾತಿ ಕೊಟ್ಟರೆ 60 ಲಕ್ಷ ಕುರುಬರು ಮೋದಿ ಜೊತೆ ಇರುತ್ತೇವೆ ಎಂದು ಘೋಷಣೆ ಮಾಡಿದರು.