Tag: vishwanath shetty

  • ತಾಯಿ ಕಳೆದುಕೊಂಡ ಮೂರೇ ತಿಂಗ್ಳಿಗೆ ಕೋಮು ದ್ವೇಷಕ್ಕೆ ತಂದೆ ಬಲಿ- ಅಜ್ಜಿ ಆಸರೆಯಲ್ಲಿರೋ ಯಶಸ್ ದಾನಿಗಳ ಮೊರೆ

    ತಾಯಿ ಕಳೆದುಕೊಂಡ ಮೂರೇ ತಿಂಗ್ಳಿಗೆ ಕೋಮು ದ್ವೇಷಕ್ಕೆ ತಂದೆ ಬಲಿ- ಅಜ್ಜಿ ಆಸರೆಯಲ್ಲಿರೋ ಯಶಸ್ ದಾನಿಗಳ ಮೊರೆ

    ಚಿಕ್ಕಮಗಳೂರು: ಏಳು ವರ್ಷದ ಹಿಂದೆ ಕೋಮು ದ್ವೇಷಕ್ಕೆ ಬಲಿಯಾದ ಶಿವಮೊಗ್ಗ ನಗರದ ಹಿಂದೂ ಕಾರ್ಯಕರ್ತನ ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಜ್ಜಿಯ ಆಸರೆಯಲ್ಲಿ ಕೊಪ್ಪ ಪಟ್ಟಣದಲ್ಲಿ ಬದುಕುತ್ತಿದ್ದಾನೆ.

    ಮೃತ ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ತಾಯಿಯನ್ನು ಕಳೆದುಕೊಂಡ ಮೂರೇ ತಿಂಗಳಿಗೆ ತನ್ನ ತಂದೆಯನ್ನೂ ಕಳೆದುಕೊಂಡಿದ್ದ. ತಂದೆ-ತಾಯಿ ಇಲ್ಲದೆ ತಬ್ಬಲಿಯಾಗಿದ್ದ ಮಗುವನ್ನು ಏಳು ವರ್ಷದಿಂದ ಅಜ್ಜಿ ಹಾಗೂ ಚಿಕ್ಕಮ್ಮ ಸಾಕುತ್ತಿದ್ದಾರೆ. 2015ರ ಫೆಬ್ರವರಿ 19ರಂದು ಶಿವಮೊಗ್ಗ ನಗರದಲ್ಲಿ ನಡೆದ ಪಿಎಫ್‍ಐ ರ್ಯಾಲಿ ಮುಗಿದ ಬಳಿಕ ವಿಶ್ವನಾಥ್ ಶೆಟ್ಟಿಯ ಕೊಲೆಯಾಗಿತ್ತು. ಇದನ್ನೂ ಓದಿ: ಐದು ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶದಿಂದ 42 ಕಾರ್ಮಿಕರ ಬಲಿ!

    ವಿಶ್ವನಾಥ್ ಶೆಟ್ಟಿ ಕೊಲೆಯಾದ ಬಳಿಕ ಸರ್ಕಾರ ಅವರ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನೂ ನೀಡಿತ್ತು. ಆದರೆ ಆ ಹಣ ವಿಶ್ವನಾಥ್ ಶೆಟ್ಟಿಯ ಮಗನ ಕೈ ಸೇರಲಿಲ್ಲ. ಬಡತನದಲ್ಲಿರುವ ಯಶಸ್ ಅಜ್ಜಿ ಸರಸ್ವತಿ ಹಾಗೂ ರೋಹಿಣಿ ಕೂಲಿ ಕೆಲಸ ಮಾಡಿಕೊಂಡು ತಾವು ಬದುಕುವುದರ ಜೊತೆ ಮಗುವನ್ನೂ ಸಾಕುತ್ತಿದ್ದಾರೆ.

    Hindutva is Hindu modernity - Hindustan Times

    ಕೂಲಿ ಕೆಲಸ ಮಾಡಿಕೊಂಡೇ ಮಗುವಿನ ವಿದ್ಯಾಭ್ಯಾಸವನ್ನೂ ನೋಡಿಕೊಳ್ಳುತ್ತಿದ್ದಾರೆ. ಕೊಪ್ಪ ಪಟ್ಟಣದ ತಿಲಕ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಯಶಸ್ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ನೊಂದ ಕುಟುಂಬವಿದೆ. ಯಶಸ್ ಚಿಕ್ಕಮ್ಮ ರೋಹಿನಿ, ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಯಶಸ್ ಆರು ವರ್ಷದ ಮಗುವಿದ್ದಾಗ ತಂದೆ-ತಾಯಿಯನ್ನ ಕಳೆದುಕೊಂಡಿದ್ದಾನೆ. ಅಂದಿನಿಂದ ನನ್ನ ತಾಯಿ ಸಾಕುತ್ತಿದ್ದಾರೆ. ಅವನ ಶಿಕ್ಷಣಕ್ಕೆ ದಾನಿಗಳ ಸಹಕಾರ ಸಿಕ್ಕರೆ ಒಳ್ಳೆಯದಿತ್ತು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆ ಮಾರಾಟ – ಇಬ್ಬರ ಬಂಧನ

  • ಎರಡ್ಮೂರು ತಿಂಗಳಿನಲ್ಲಿ ಕೊಡಗಿನ ವ್ಯವಸ್ಥೆ ಸರಿಯಾಗುತ್ತೆ: ನ್ಯಾ.ವಿಶ್ವನಾಥ್ ಶೆಟ್ಟಿ

    ಎರಡ್ಮೂರು ತಿಂಗಳಿನಲ್ಲಿ ಕೊಡಗಿನ ವ್ಯವಸ್ಥೆ ಸರಿಯಾಗುತ್ತೆ: ನ್ಯಾ.ವಿಶ್ವನಾಥ್ ಶೆಟ್ಟಿ

    ಮಡಿಕೇರಿ: ಕೊಡಗು ಜಿಲ್ಲೆ ಮಹಾಮಳೆಗೆ ನಲುಗಿದ್ದು ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಇನ್ನೂ ಎರಡ್ಮೂರು ತಿಂಗಳಿನಲ್ಲಿ ಕೊಡಗಿನ ವ್ಯವಸ್ಥೆ ಸರಿಯಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.

    ಮಡಿಕೇರಿಗೆ ಭೇಟಿ ನೀಡಿ ಮಾತನಾಡಿದ ಅವರು ನಾನು ಕೊಡಗಿಗೆ ಕೆಲಸವನ್ನು ವಿಮರ್ಶಿಸಲು ಬಂದಿಲ್ಲ. ಬದಲಾಗಿ ಜಿಲ್ಲಾಡಳಿತಕ್ಕೆ ನಮ್ಮ ಅನುಭವವನ್ನು ಹಂಚಿ ಯಾವ ರೀತಿ ಕೆಲಸ ಮಾಡಬಹುದು ಎಂಬ ಸಲಹೆ ನೀಡಲು ಬಂದಿದ್ದೇನೆ. ಸಮಸ್ಯೆ ಶೀಘ್ರವಾಗಿ ಪರಿಹಾರವಾಗಬೇಕು ಈ ನಿಟ್ಟಿನಲ್ಲಿ ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ಕೊಡಗು ಪ್ರವಾಸೋದ್ಯಮವಾಗಿ ಬೆಳವಣಿಗೆ ಸಾಧಿಸಿದ್ದು, ಟೂರಿಸಂನನ್ನು ನಂಬಿಕೊಂಡು ಅನೇಕ ಕುಟುಂಬಗಳಿವೆ. ಹೀಗಾಗಿ ಜಿಲ್ಲೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಸೋಶಿಯಲ್ ಮೀಡಿಯಾದ ಮೂಲಗಳಿಂದ ಜನರನ್ನು ಬೆದರಿಸುವ ಕೆಲಸವಾಗುತ್ತಿದೆ. ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಜನರು ಕೂಡ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಶೈಕ್ಷಣಿಕವಾಗಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ನೆರೆ ಜಿಲ್ಲೆಯ ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಸಹಾಯ ಪಡೆದುಕೊಳ್ಳಬೇಕು. ಮಾಧ್ಯಮದವರೂ ಕೂಡ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಲೋಕಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್- ಘಟನೆ ಬಗ್ಗೆ ಏನು ಹೇಳಲ್ಲ: ನ್ಯಾ.ವಿಶ್ವನಾಥ್ ಶೆಟ್ಟಿ

    ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್- ಘಟನೆ ಬಗ್ಗೆ ಏನು ಹೇಳಲ್ಲ: ನ್ಯಾ.ವಿಶ್ವನಾಥ್ ಶೆಟ್ಟಿ

    ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿಯೇ ಚಾಕು ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಚೇತರಿಸಿಕೊಂಡಿದ್ದಾರೆ.

    ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಅವರೆಲ್ಲರಿಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಹಲ್ಲೆಗೊಳಗಾದ ದಿನದ ಘಟನೆ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯ ಅಲ್ಲ. ನನ್ನ ಆರೋಗ್ಯದ ಬಗ್ಗೆ ಪ್ರಾರ್ಥನೆ ಮಾಡಿದವರೆಲ್ಲರಿಗೂ ಧನ್ಯವಾದ ಎಂದು ಹೇಳಿ ಅಂತ ತನ್ನ ಕಾರಿನಲ್ಲಿ ತೆರಳಿದ್ರು.

    ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ತನ್ನ ಕಚೇರಿಯಲ್ಲಿ ಮಾರ್ಚ್ 3ರಂದು ಮಧ್ಯಾಹ್ನ ಆರೋಪಿ ತೇಜರಾಜ್ ಶರ್ಮಾ ಎಂಬಾತ ಕಚೇರಿಗೆ ನುಗ್ಗಿ ಲೋಕಾಯುಕ್ತರೊಂದಿಗೆ ಮಾತುಕತೆ ನಡೆಸಿದ್ದಾನೆ. ಬಳಿಕ ಅವರ ಎದೆ, ತೊಡೆಭಾಗ, ಹೊಟ್ಟೆ ಹಾಗೂ ಕೈ ಹೀಗೆ ಮೂರು ಬಾರಿ ಇರಿದಿದ್ದಾನೆ. ಕೂಡಲೇ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇತ್ತ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

  • ಲೋಕಾಯುಕ್ತರ ಮೇಲೆ ಚೂರಿ ಇರಿತದ ಬಳಿಕ ಎಚ್ಚೆತ್ತು ಭದ್ರತೆ ಬಿಗಿಗೊಳಿಸಿದ ಸರ್ಕಾರ

    ಲೋಕಾಯುಕ್ತರ ಮೇಲೆ ಚೂರಿ ಇರಿತದ ಬಳಿಕ ಎಚ್ಚೆತ್ತು ಭದ್ರತೆ ಬಿಗಿಗೊಳಿಸಿದ ಸರ್ಕಾರ

    ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಇರಿತ ಪ್ರಕರಣದವಾದ ಬಳಿಕ ಎಚ್ಚೆತ್ತು ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಈ ಸಂಬಂಧ ಭದ್ರತೆಯನ್ನು ಬಿಗಿಗೊಳಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ

    ಸುತ್ತೋಲೆಯಲ್ಲಿ ಏನಿದೆ?
    ಪ್ರಸ್ತುತ ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಿಗೆ ಪ್ರವೇಶ ಬಯಸುವ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿ ಅವರುಗಳ ಬ್ಯಾಗ್ ಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ. ಮಾರ್ಚ್ 7ರಂದು ಲೋಕಾಯುಕ್ತರ ಕಛೇರಿಯಲ್ಲಿ ನಡೆದ ಘಟನೆಯಿಂದಾಗಿ ಭದ್ರತಾ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಆದ್ದರಿಂದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿನ ಸಚಿವಾಲಯದ ಎಲ್ಲ ಕಛೇರಿಗಳೂ ಸೇರಿದಂತೆ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಗಧಿತ ಸಂದರ್ಶಕರ ಭೇಟಿ ಸಮಯಕ್ಕೆ ಮಿತಿಗೊಳಿಸತಕ್ಕದ್ದು. ಅಷ್ಟೇ ಅಲ್ಲದೇ ಭೇಟಿ ಪಡೆಯುವ ಪ್ರತಿಯೊಬ್ಬ ಸಾರ್ವಜನಿಕರನ್ನು ಕೂಲಂಕುಷ ತಪಾಸಣೆಗೊಳಪಡಿಸಿ ಹಾಗೂ ಅವರುಗಳ ಬ್ಯಾಗೇಜ್ ಗಳನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿದ ನಂತರ ಲೋಹ ತಪಾಸಣಾ ಯಂತ್ರದ ಮೂಲಕ ಹಾದು ಹೋಗಲೇಬೇಕೆಂಬ ಪದ್ಧತಿಯನ್ನು ಅನುಸರಿಸಬೇಕು. ಈ ಬಗ್ಗೆ ಯಾವುದೇ ಲೋಪವಾದಲ್ಲಿ ಪೊಲೀಸ್ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಲಾಗುವುದು ಎಂದು ಈ ಮೂಲಕ ಸೂಚನೆಗಳಮನ್ನು ನೀಡಲಾಗಿದೆ. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್

     

  • ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು: ಉಡುಪಿಯಲ್ಲಿ ವಿಶ್ವನಾಥ ಶೆಟ್ಟಿ ಅತ್ತಿಗೆ ವಿಷಾದ

    ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು: ಉಡುಪಿಯಲ್ಲಿ ವಿಶ್ವನಾಥ ಶೆಟ್ಟಿ ಅತ್ತಿಗೆ ವಿಷಾದ

    ಉಡುಪಿ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೂಲತಃ ಉಡುಪಿ ಜಿಲ್ಲೆಯ ಉಪ್ಪೂರಿನವರಾದ ವಿಶ್ವನಾಥ ಶೆಟ್ಟಿಯವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ವಿಶ್ವನಾಥ ಶೆಟ್ಟಿ ತಮ್ಮನ ಹೆಂಡತಿ ಅಂದ್ರೆ ಅತ್ತಿಗೆ ಜಯಂತಿ ಉಡುಪಿಯಲ್ಲಿದ್ದಾರೆ. ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಅವರು ನೋವು ವ್ಯಕ್ತಪಡಿಸಿದರು. ಇದನ್ನೂ ಓದಿ: ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಸರ್ಕಾರ ಲೋಕಾಯುಕ್ತರಿಗೆ ಸೂಕ್ತ ಭಧ್ರತೆ ಕೊಡಬೇಕಿತ್ತು. ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು ಅಂತ ಪ್ರಶ್ನಿಸಿದ್ದಾರೆ. ವಿಶ್ವನಾಥ ಶೆಟ್ಟಿ ಬಹಳ ಸಾಧು ಸ್ವಭಾವದ ವ್ಯಕ್ತಿ. ಅವರು ಯಾವತ್ತೂ ಜೋರಾಗಿ ಮಾತನಾಡಿದವರೇ ಅಲ್ಲ. ಎಲ್ಲವನ್ನೂ ಸಮಾಧಾನವಾಗಿ- ಸಾವಕಾಶವಾಗಿ ತೀರ್ಮಾನ ಮಾಡುವ, ತೀರ್ಪು ಕೊಡುವವರು ಅಂತ ಅವರು ಹೇಳಿದರು.  ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ವಿಶ್ವನಾಥ ಶೆಟ್ಟರು ಕುಟುಂಬಸ್ಥರ ಜೊತೆಗೂ ಹಾಗೆಯೇ ನಡೆದುಕೊಳ್ಳುವವರು, ಬಹಳ ತಾಳ್ಮೆ ಇರುವ ವ್ಯಕ್ತಿ. ಅಂತ ಹೇಳಿದ್ದಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಹಲವು ಕಾನೂನು ರೀತಿಯ ಸಲಹೆಗಳನ್ನು ಕೊಡುತ್ತಾರೆ. ಅನ್ಯಾಯದ ವಿರುದ್ಧ ತನ್ನ ವೃತ್ತಿ ಜೀವನದಲ್ಲಿ ನಿರಂತರ ಹೋರಾಟ ಮಾಡಿದವರು ಎಂದು ಹೇಳಿದರು. ಟಿವಿ ನೋಡಿ ಅಂತ ಬೆಂಗಳೂರಿನಿಂದ ಪರಿಚಯಸ್ಥರು ಫೋನ್ ಮಾಡಿದಾಗಲೇ ಗೊತ್ತಾಯ್ತು. ಇದನ್ನೂ ಓದಿ: ಲೋಕಾಯುಕ್ತದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ

    10 ವರ್ಷ ಹೈಕೋರ್ಟಲ್ಲಿ, ನಂತರ ಸುಪ್ರೀಂ ಕೋರ್ಟ್ ನಲ್ಲಿ ವೃತ್ತಿ ಮಾಡುತ್ತಿದ್ದಾಗ ಒಂದೇ ಒಂದು ತಪ್ಪು ನಡೆಗಳನ್ನ ಇಟ್ಟವರಲ್ಲ. ಎಲ್ಲವನ್ನೂ ಅಳೆದು ತೂಗೆಯೇ ತೀರ್ಪು ಕೊಡುತ್ತಿದ್ದರು. ಕಳೆದ ತಿಂಗಳು ಉಡುಪಿಗೆ ಬಂದಿದ್ದರು. ದೇವರ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಧಾರ್ಮಿಕ ಆಚರಣೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ

  • ಲೋಕಾಯುಕ್ತದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ

    ಲೋಕಾಯುಕ್ತದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ

    ಬೆಂಗಳೂರು: ಲೋಕಾಯಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಇರಿದ ತುಮಕೂರು ಮೂಲದ ತೇಜಸ್ ಶರ್ಮಾ ಈ ಹಿಂದೆ ಅಧಿಕಾರಿಗಳು ಭ್ರಷ್ಟಚಾರ ಎಸಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ದೂರು ನೀಡಿದ್ದ. ಇದನ್ನೂ ಓದಿ: ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಅಧಿಕಾರಿಗಳಾದ ಗಿರಿಜಾ ಮತ್ತು ಉಮೇಶ್ ಎಂಬವರ ವಿರುದ್ಧ 17-05-2017ರಂದು ಲೋಕಾಯುಕ್ತಕ್ಕೆ ಈತ ದೂರು ನೀಡಿದ್ದ. ಗಿರಿಜಾ ಶಿಕ್ಷಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಹಾಗೂ ಉಮೇಶ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ತೇಜರಾಜ್ ಶರ್ಮಾ ಅವರು ದಾಖಲಿಸಿದ್ದ ಕಂಪ್ಲೆಂಟ್ ನಂಬರ್ UPLOK/BD/1238/2017 ಇದಾಗಿದ್ದು, ಇವರು 27-3-2017ರಂದು ರೆವೆನ್ಯೂ ಡಿಪಾರ್ಟಮೆಂಟ್ ಮೇಲೂ ಕೂಡ ದೂರು ದಾಖಲಿಸಿದ್ದರು. ಕಳೆದ ವರ್ಷ 1238/17, 1196/17, 719/17, 720/17 ಹಾಗೂ 904/17 ನಂಬರ್‍ನ ಒಟ್ಟು ಐದು ದೂರುಗಳು ಲೋಕಾಯುಕ್ತದಲ್ಲಿ ತೇಜಸ್ ಶರ್ಮ ದಾಖಲಿಸಿದ್ದ. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ

    ಯಾರ ವಿರುದ್ಧ ದೂರು?
    ಮಂಜುನಾಥ್ – ಉಪ ನಿರ್ದೇಶಕ, ಸಾರ್ವಜನಿಕ ಶೀಕ್ಷಣ ಇಲಾಖೆ, ತುಮಕೂರು
    ಶಿವಕುಮಾರ್ – ಎಸ್‍ಡಿಎ, ಸಾರ್ವಜನಿಕ ಶೀಕ್ಷಣ ಇಲಾಖೆ
    ದೇವರಾಜ್ – ಸಹಾಯಕ ನಿರ್ದೇಶಕ, ರೇಷ್ಮೆ ಗೂಡಿನ ಮಾರುಕಟ್ಟೆ, ಕೋಲಾರ
    ಮಹಲಿಂಗಪ್ಪ– ಕ್ಲರ್ಕ್, ಪರ್ಚೆಸ್ ಸಕ್ಷೆನ್, ಟಿಯುಎಂಪಿ ಲಿ., ತುಮಕೂರು
    ಡಾ.ಚಂದ್ರಪ್ಪ– ಮ್ಯಾನೇಜರ್, ಟಿಯುಎಂಪಿ ಲಿ., ತುಮಕೂರು
    ಎಆರ್ ಚಂದ್ರಶೇಖರ್ – ವ್ಯವಸ್ಥಾಪಕ ನಿರ್ದೇಶಕ, ತುಮಕೂರು
    ಪ್ರಭಾಕರ್ – ಜಂಟಿ ನಿರ್ದೇಶಕ , ರೇಷ್ಮೆ ವಿನಿಮಯ ಕೇಂದ್ರ, ಬೆಂಗಳೂರು
    ಕುಮಾರ್ – ಎಸ್‍ಡಿಸಿ, ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ, ತುಮಕೂರು

    https://www.youtube.com/watch?v=5fwBei0ft2Q

    https://www.youtube.com/watch?v=p9D7_SbY8aQ

     

  • ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಆರೋಪಿಯಿಂದ ಇರಿತಕ್ಕೆ ಒಳಗಾದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ತುಮಕೂರು ಮೂಲದ ತೇಜ ರಾಜ ಶರ್ಮಾ ಎಂಬಾತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದಿದ್ದ. ಕೂಡಲೇ ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

    ಘಟನೆ ಹೇಗಾಯ್ತು?
    ತುಮಕೂರಿನ ಎಸ್‍ಎಸ್‍ಪುರಂ ನಿವಾಸಿಯಾಗಿರುವ ತೇಜ ರಾಜ ಶರ್ಮಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ ಹಾಗೂ ಬಾಲಮಂದಿರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಕೊಟ್ಟಿದ್ದನು. ಅಲ್ಲದೇ ಬಾಲಮಂದಿರದಲ್ಲಿ ಬಟ್ಟೆ ಖರೀದಿಯಲ್ಲಿ ಅವ್ಯವಹಾರ ಸೇರಿದಂತೆ ಹಲವು ಹಗರಣ ವಿರುದ್ಧ ದೂರು ನೀಡಿದ್ದನು. ಅರ್ಜಿ ಲೋಕಾಯುಕ್ತದಲ್ಲಿ ವಜಾಗೊಂಡಿತ್ತು. ಈ ಅರ್ಜಿಯ ಬಗ್ಗೆ ಇಂದು ಮಧ್ಯಾಹ್ನ 12.45ಕ್ಕೆ ಆರೋಪಿ ಲೋಕಾಯುಕ್ತ ಕಚೇರಿಗೆ ಬಂದು ರಿಜಿಸ್ಟ್ರಾರ್ ನಲ್ಲಿ ಸಹಿ ಹಾಕಿ ಲೋಕಾಯುಕ್ತರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾನೆ. ಮಧ್ಯಾಹ್ನ 1.30ರ ವೇಳೆಗೆ ಲೋಕಾಯುಕ್ತರ ಭೇಟಿಗೆ ಅನುಮತಿ ಸಿಕ್ಕಿದೆ.

    ಕೊಠಡಿಯ ಹೊರಗಡೆ ಇದ್ದ ಪೊಲೀಸರು ತೇಜ ರಾಜ ಶರ್ಮಾನನ್ನು ಒಳಗಡೆ ಬಿಟ್ಟಿದ್ದಾರೆ. ಒಳಗಡೆ ಬಿಟ್ಟ ನಂತರ ಲೋಕಾಯುಕ್ತರು ಮತ್ತು ತೇಜ ರಾಜನ ನಡುವೆ ಏನು ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಮಧ್ಯಾಹ್ನ 1.45ರ ವೇಳೆಗೆ ಲೋಕಾಯಕ್ತರಿಗೆ ಆರೋಪಿ ಮೂರು ಬಾರಿ ಚಾಕು ಇರಿದಿದ್ದಾನೆ.

    ಕಿಬ್ಬೊಟ್ಟೆಗೆ 3 ಬಾರಿ ಚಾಕುವಿನಿಂದ ಇರಿದ ಪರಿಣಾಮ ಚಾಕುವೇ ಮುರಿದಿದೆ. ಘಟನೆಯಿಂದಾಗಿ ಲೋಕಾಯುಕ್ತರು ಸ್ಥಳದಲ್ಲೇ ಕುಸಿದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕೂಡಲೇ ವಿಧಾನ ಸೌಧ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ನ್ಯಾಯಮೂರ್ತಿಗಳನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಚಾಕುವಿನಿಂದ ಇರಿದ ಆರೋಪಿ ತೇಜರಾಜ ಶರ್ಮಾನನ್ನು ವಿಧಾನಸೌಧ ಠಾಣೆಯ ಪೊಲೀಸರು ಕೂಡಲೇ ಬಂಧಿಸಿದ್ದಾರೆ.

    ಲೋಕಾಯುಕ್ತ ಕಚೇರಿಯಲ್ಲಿ ಭದ್ರತಾ ಲೋಪವಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಯಾವುದೇ ಒಂದು ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡುವುದಕ್ಕೂ ಮುಂಚೆ ತಪಾಸಣೆ ಮಾಡಲಾಗುತ್ತದೆ. ಅದರಲ್ಲೂ ಸರ್ಕಾರಿ ಕಚೇರಿ ಪ್ರವೇಶಕ್ಕೂ ಮುನ್ನ ಪ್ರವೇಶದ್ವಾರದಲ್ಲಿ ಮೆಟನ್ ಸ್ಕ್ಯಾನರ್ ಅಳವಡಿಸಲಾಗುತ್ತದೆ. ಆದರೆ ಇಲ್ಲಿ ಇರುವ ತಪಸಣಾ ಯಂತ್ರ ಕೆಟ್ಟೊಗಿದ್ದು, ಅದನ್ನು ಸರಿಪಡಿಸುವ ಯತ್ನವಾಗಿಲ್ಲ. ಹೀಗಾಗಿ ಆರೋಪಿ ಈ ಕೃತ್ಯ ಎಸಗಲು ಸಾಧ್ಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ತುಮಕೂರು ಎಂ.ಜಿ ರಸ್ತೆಯ ನಿವಾಸಿ ತೇಜ್ ರಾಜ್ ಶರ್ಮಾ ಕರುನಾಡು ಸೇನೆಯ ಸದಸ್ಯನಾಗಿದ್ದ ಎನ್ನುವ ವಿವರ ಈಗ ಲಭ್ಯವಾಗಿದೆ.

    ಲೋಕಾಯುಕ್ತರ ಜೊತೆ ಒಟ್ಟು 5 ನಿಮಿಷ ಮಾತುಕತೆ ನಡೆದಿದ್ದು, ಈ ವೇಳೆ ತಾನು ಕೊಟ್ಟ ದೂರಗಳು ಬಗ್ಗೆ ಮಾತನಾಡಿದ್ದಾನೆ. ಸಾಕಷ್ಟು ಸಾಕ್ಷಿ ಒದಗಿಸಿದ್ದರೂ ದೂರನ್ನು ವಜಾ ಮಾಡಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಾನೆ. ಎಲ್ಲ ಪ್ರಶ್ನೆಗಳಿಗೆ ವಿಶ್ವನಾಥ್ ಶೆಟ್ಟಿ ಅವರು ನಗುತ್ತಾ ಉತ್ತರ ನೀಡಿದ್ದಾರೆ. ಎಷ್ಟೇ ದೂರು ಕೊಟ್ಟರೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಾಗಿ ಚಾಕು ಇರಿದಿದ್ದಾನೆ ಎಂದು ಲೋಕಾಯುಕ್ತ ಕಚೇರಿ ಸಿಬ್ಬಂದಿಯೊಬ್ಬರು ಹೇಳಿಕೆ ನೀಡಿದ್ದಾರೆ.

  • ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ

    ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ

    ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

    ಮಧ್ಯಾಹ್ನ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಶ್ವನಾಥ್ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಮೇಲ್ನೋಟಕ್ಕೆ ವಿಶ್ವನಾಥ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.

    ಆರೋಪಿ ತೇಜ ರಾಜ್ ಶರ್ಮಾ ಯಾವುದೋ ಟೆಂಡರ್‍ಗೆ ಹಾಕಿದ್ದ. ಅದು ಆತನಿಗೆ ಸಿಕ್ಕಿರಲಿಲ್ಲ. ಅಧಿಕಾರಿಯಿಂದ ಮೋಸವಾಗಿದೆ, ಈ ಬಗ್ಗೆ ತನಿಖೆ ಮಾಡಿ ಎಂದು ದೂರು ನೀಡಿದ್ದ. ಆದ್ರೆ ಅವರು ವಿಚಾರಣೆ ಮುಗಿದಿದೆ ಎಂದು ಎಂಡಾರ್ಸ್‍ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ ಆತ ಲೋಕಾಯುಕ್ತರನ್ನ ಭೇಟಿ ಮಾಡಬೇಕೆಂದು ಹೋಗಿ ಚಾಕುವಿನಿಂದ ಇರಿದಿದ್ದಾನೆ. ಕೊಲೆ ಮಾಡಲೆಂದೇ ಆತ ದಾಳಿ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಚಾಕು ಕೂಡ ದೊಡ್ಡದಾಗಿತ್ತು. ಹೀಗಾಗಿ ಇದು ಕೊಲೆ ಪ್ರಯತ್ನ ಎಂಬುದು ಸ್ಪಷ್ಟ ಎಂದು ಹೇಳಿದ್ರು.

    ಆರೋಪಿಯನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ. ಹೀಗಾಗಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲು ಡಿಜಿಪಿಗೆ ಹೇಳಿದ್ದೇನೆ. ಆರೋಪಿ ಯಾರು, ಆತನ ಹಿನ್ನೆಲೆ ಇತ್ಯಾದಿಯ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ವಿಶ್ವನಾಥ್ ಶೆಟ್ಟಿ ಅವರನ್ನು ಚೆನ್ನಾಗಿ ನೊಡಿಕೊಳ್ಳುವಂತೆ ವೈದ್ಯರಿಗೂ ಮನವಿ ಮಾಡಿದ್ದೇನೆ ಎಂದರು.

    ಭದ್ರತಾ ವೈಫಲ್ಯವಿದೆಯಾ ಎಂಬುದನ್ನು ಪರಿಶೀಲಿಸಲು ಹೇಳಿದ್ದೇನೆ. ವೈಫಲ್ಯವಿದ್ದರೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಸಾಮಾನ್ಯವಾಗಿ ಭೇಟಿ ಮಾಡಬೇಕೆಂದು ಚೀಟಿ ಕೊಡುತ್ತಾರೆ, ಅವರು ಒಳಗೆ ಕರೆದಿದ್ದಾರೆ. ಆತ ಒಳಗೆ ಹೋದಾಗ ಚಾಕು ಚುಚ್ಚಿದ್ದಾನೆ. ನನ್ನನ್ನೂ ಸಾಕಷ್ಟು ಜನ ಭೇಟಿಯಾಗಲು ಬರುತ್ತಾರೆ. ನಮಗೇನು ಗೊತ್ತಿರುತ್ತೆ ಆಯುಧ ತೆಗೆದುಕೊಂಡು ಬಂದರೆ? ಗನ್ ಮ್ಯಾನ್ ಹೊರಗೆ ಇರುತ್ತಾರೆ, ಸಿಸಿಟಿವಿ ಕೂಡ ಇರುತ್ತದೆ. ಈತ ಚೇಂಬರ್ ಒಳಗೆ ಹೋಗಿ ಈ ಕೃತ್ಯವೆಸಗಿದ್ದಾನೆ. ವಿಶ್ವನಾಥ್ ಶೆಟ್ಟಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದರು.

    ನಡೆದಿದ್ದೇನು?: ಇಂದು ಮಧ್ಯಾಹ್ನ 12.45ರ ಸುಮಾರಿಗೆ ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಗೆ ಲೋಕಾಯುಕ್ತರನ್ನ ಭೇಟಿಯಾಗಲು ಆರೋಪಿ ತೇಜ ರಾಜ್ ಶರ್ಮಾ ಬಂದಿದ್ದ. ರಿಜಿಸ್ಟರ್ ಪುಸ್ತಕದಲ್ಲಿ ತನ್ನ ಹೆಸರು, ವಾಹನ ನೋಂದಣಿ ಸಂಖ್ಯೆ ಎಲ್ಲವನ್ನೂ ಬರೆದು ಕಚೇರಿ ಒಳಗೆ ಹೋದ ಶರ್ಮಾ, ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆರೋಪಿಯನ್ನ ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ.

    ವಿಶ್ವನಾಥ್ ಶೆಟ್ಟಿ ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

  • ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

    ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

    ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

    ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿಗೆ ಒಬ್ಬ ವ್ಯಕ್ತಿ ಚಾಕು ಹಿಡಿದುಕೊಂಡು ಹೋಗಿದ್ದಾನೆಂದರೆ ಅಲ್ಲಿನ ಭದ್ರತಾ ವ್ಯವಸ್ಥೆ ಸರಿಯಲ್ಲ ಎಂದರ್ಥ ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ತಪಾಸಣೆ ಮಾಡಿಯೇ ಮಾಡುತ್ತಾರೆ. ಅಂತದ್ದರಲ್ಲಿ ಒಂದು ಲೋಕಾಯುಕ್ತ ಕಚೇರಿಗೆ ಬರುವಾಗ ವ್ಯಕ್ತಿಯೋರ್ವ ಚಾಕು ಹಿಡಿದುಕೊಂಡು ಬರುತ್ತಾನೆ ಎಂದರೆ ಇದು ವಿಪರ್ಯಾಸವೇ ಸರಿ ಅಂತ ಅವರು ಹೇಳಿದ್ರು.  

    ಏನಿದು ಘಟನೆ?: ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿಯವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ತೇಜ ರಾಜ ಶರ್ಮಾ ಎಂಬಾತ ಏಕಾಏಕಿ ಕಚೇರಿಗೆ ನುಗಿ ಲೋಕಾಯುಕ್ತರ ಕಿಬ್ಬೊಟ್ಟೆಗೆ ಮೂರು ಬಾರಿ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಲೋಕಾಯುಕ್ತ ಕೂಡಲೇ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್ ಶೆಟ್ಟಿ ಅವರನ್ನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಸ್ಪತ್ರೆಗೆ ದೌಡಾಯಿಸಿದ್ದು, ಆರೋಗ್ಯ ವಿಚಾರಿಸುತ್ತಿದ್ದಾರೆ.

  • ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕು ಇರಿತ

    ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕು ಇರಿತ

    ಬೆಂಗಳೂರು: ವ್ಯಕ್ತಿಯೊಬ್ಬ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತೇಜಸ್ ಶರ್ಮಾ ಎಂಬ ವ್ಯಕ್ತಿ ಏಕಾಏಕಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿ ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನ ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ.

    ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್ ಶೆಟ್ಟಿ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

    ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.