Tag: Vishwambhara

  • ‘ಭಗವಂತ ಕೇಸರಿ’ ನಿರ್ದೇಶಕನ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಗ್ರೀನ್ ಸಿಗ್ನಲ್

    ‘ಭಗವಂತ ಕೇಸರಿ’ ನಿರ್ದೇಶಕನ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಗ್ರೀನ್ ಸಿಗ್ನಲ್

    ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಸಿನಿಮಾದ ಬಗ್ಗೆ ಬಿಗ್ ನ್ಯೂಸ್ ಸಿಕ್ಕಿದೆ. ‘ಭಗವಂತ ಕೇಸರಿ’ ಡೈರೆಕ್ಟರ್ ಅನಿಲ್ ರವಿಪುಡಿ (Anil Ravipudi) ಜೊತೆ ಸಿನಿಮಾ ಮಾಡಲು ಚಿರಂಜೀವಿ ಕೈಜೋಡಿಸಿದ್ದಾರೆ.

    ಸಿನಿಮಾ ಸಮಾರಂಭವೊಂದರಲ್ಲಿ ಮುಂದಿನ ಸಿನಿಮಾ ಬಗ್ಗೆ ಚಿರಂಜೀವಿ ಮಾತನಾಡಿ, ಅನಿಲ್ ರವಿಪುಡಿ ಜೊತೆ ಸಿನಿಮಾ ಮಾಡುತ್ತಿರೋದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ವಿಭಿನ್ನ ಕಥೆಯಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ರಂಜಿತ್‌

    ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ನಟಿಸುತ್ತಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗುತ್ತಿದೆ. ಹಾಗಂತ ಫ್ಯಾನ್ಸ್‌ಗೆ ಅವರ ಮೇಲಿರುವ ಕ್ರೇಜ್ ಹಾಗೂ ಅವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಬಿಗ್ ಬಜೆಟ್ ಸಿನಿಮಾಗಳೇ ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರು ಸ್ಟಾರ್ ನಿರ್ದೇಶಕ ಅನಿಲ್ ರವಿಪುಡಿ ಚಿತ್ರಕ್ಕೆ ಚಿರಂಜೀವಿ ಓಕೆ ಎಂದಿದ್ದಾರೆ.

    ಅಂದಹಾಗೆ, ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ವಿಶ್ವಂಭರ’ ಚಿತ್ರವು ಮೇ 9ರಂದು ರಿಲೀಸ್ ಆಗಲಿದೆ. ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ಮೀನಾಕ್ಷಿ, ಆಶಿಕಾ ರಂಗನಾಥ್, ರಾವ್ ರಮೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನೂ ಈ ಸಿನಿಮಾದ ಜೊತೆ ನಾನಿ ನಿರ್ಮಾಣದ ಸಿನಿಮಾ ಕೂಡ ಚಿರಂಜೀವಿ ಒಪ್ಪಿಕೊಂಡಿದ್ದಾರೆ.

  • ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್‌ಗೆ ಸಿಹಿಸುದ್ದಿ

    ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್‌ಗೆ ಸಿಹಿಸುದ್ದಿ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್‌ಗೂ ಮುನ್ನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ವಿಶ್ವಂಭರ ಒಂದೇ ಸಿನಿಮಾ ಅಲ್ಲ, ಬೇರೇ ಬಿಗ್ ಪ್ರಾಜೆಕ್ಟ್‌ಗಳು  ಚಿರಂಜೀವಿ ಕೈಯಲ್ಲಿವೆ ಎಂದು ರಾಮ್ ಚರಣ್ ರಿವೀಲ್ ಮಾಡಿದ್ದಾರೆ.

    ವಿಶ್ವ ಅಪ್ಪಂದಿರ (ಜೂನ್ 16) ಪ್ರಯುಕ್ತ ಚಿರಂಜೀವಿಗೆ ಪುತ್ರ ರಾಮ್ ಚರಣ್ (Ram Charan) ವಿಶೇಷ ಸಂದರ್ಶನವನ್ನು ಮಾಡಿದ್ದಾರೆ. ಚಿರಂಜೀವಿ 4 ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ರಾಮ್ ಚರಣ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಜಾಗಕ್ಕೆ ‘ಡಬಲ್‌ ಇಸ್ಮಾರ್ಟ್‌’ ಎಂಟ್ರಿ- ರಿಲೀಸ್ ಡೇಟ್ ಫಿಕ್ಸ್

    ಇದೀಗ ನಾನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆದರೆ ತಂದೆ, 4 ಸಿನಿಮಾ ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾರ ನಿರ್ದೇಶನ, ಟೈಟಲ್ ಏನು ಎಂಬುದರ ಬಗ್ಗೆ ರಾಮ್ ಚರಣ್ ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಚಿತ್ರಗಳ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    ಸದ್ಯ ಚಿರಂಜೀವಿ ‘ವಿಶ್ವಂಭರ’ ಸಿನಿಮಾದ ಕೆಲಸ ನಡೆಯುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ಜೊತೆ ತ್ರಿಷಾ, ಕನ್ನಡದ ನಟಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.

  • ‘ವಿಶ್ವಂಭರ’ ಶೂಟಿಂಗ್ ಸ್ಥಳಕ್ಕೆ ಪವನ್ ಕಲ್ಯಾಣ್: ಬರಮಾಡಿಕೊಂಡ ತ್ರಿಷಾ

    ‘ವಿಶ್ವಂಭರ’ ಶೂಟಿಂಗ್ ಸ್ಥಳಕ್ಕೆ ಪವನ್ ಕಲ್ಯಾಣ್: ಬರಮಾಡಿಕೊಂಡ ತ್ರಿಷಾ

    ಲೋಕಸಭಾ ಚುನಾವಣೆಯ ಬ್ಯುಸಿ ನಡುವೆಯೂ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ‘ವಿಶ್ವಂಭರ’ ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ್ದಾರೆ. ಚಿತ್ರೀಕರಣ ಸ್ಥಳಕ್ಕೆ ಬಂದ ಪವನ್ ಕಲ್ಯಾಣ್ ಅವರನ್ನು ತ್ರಿಷಾ  (Trisha) ಬರಮಾಡಿಕೊಂಡಿದ್ದಾರೆ. ಜೊತೆಗೆ ಚಿರಂಜೀವಿ (Chiranjeevi) ಕೂಡ ಇದ್ದಾರೆ. ಚಿರು ಜೊತೆ ಮಾತನಾಡುವುದಕ್ಕಾಗಿ ಪವನ್ ಕಲ್ಯಾಣ್ ಬಂದಿದ್ದರು ಎಂದು ಹೇಳಲಾಗುತ್ತಿದೆ.

    ಇದು ಚಿರು ನಟಿಸುತ್ತಿರುವ 156ನೇ ಸಿನಿಮಾವಾಗಿದ್ದು, ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾದ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವಂಭರ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

    ವಿಶ್ವಂಭರ (Vishwambhara) ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

     

    ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನಕಾರರು. ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

  • ಮೆಗಾಸ್ಟಾರ್, ಕೀರವಾಣಿ ಜೊತೆಗಿನ ಫೋಟೋ ಹಂಚಿಕೊಂಡು ದೈವಿಕ ಕ್ಷಣ ಎಂದ ತ್ರಿಷಾ

    ಮೆಗಾಸ್ಟಾರ್, ಕೀರವಾಣಿ ಜೊತೆಗಿನ ಫೋಟೋ ಹಂಚಿಕೊಂಡು ದೈವಿಕ ಕ್ಷಣ ಎಂದ ತ್ರಿಷಾ

    ಸೌತ್ ಬ್ಯೂಟಿ ತ್ರಿಷಾ (Trisha) ಅವರು ವಿಜಯ್ ಜೊತೆ ‘ಲಿಯೋ’ ಚಿತ್ರದಲ್ಲಿ ನಟಿಸಿದ ನಂತರ ಸದ್ಯ ‘ವಿಶ್ವಾಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿರಂಜೀವಿ (Megastar Chiranjeevi) ಮತ್ತು ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಜೊತೆ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ.

    ‘ವಿಶ್ವಾಂಭರ’ (Vishwambhara) ಸಿನಿಮಾದ ಚಿತ್ರೀಕರಣದಲ್ಲಿ ನಟಿ ತ್ರಿಷಾ ಅವರು ಚಿರಂಜೀವಿ ಜೊತೆ ಭಾಗಿಯಾಗಿದ್ದಾರೆ. ಈ ವೇಳೆ, ಎಂ.ಎಂ ಕೀರವಾಣಿ ಮತ್ತು ಚಿರಂಜೀವಿ ಜೊತೆ ತ್ರಿಷಾ ಫೋಟೋ ಕ್ಲಿಕ್ಕಿಸಿಕೊಂಡು ಇದೊಂದು ದೈವಿಕ ಮತ್ತು ಪೌರಾಣಿಕ ಮುಂಜಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತ್ರಿಷಾ ಅಡಿಬರಹ ನೀಡಿದ್ದಾರೆ.

    ‘ವಿಶ್ವಾಂಭರ’ ಸಿನಿಮಾ ಬಿಗ್ ಬಜೆಟ್ ಸಿನಿಮಾವಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ. ಚಿತ್ರಕ್ಕೆ ಮಲ್ಲಿಡಿ ವಸಿಷ್ಠ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅದಷ್ಟೇ ಅಲ್ಲ, ತ್ರಿಷಾ ಅವರು ಈ ಸಿನಿಮಾದಲ್ಲಿ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕೋಲಾರದಲ್ಲಿ ಆಸ್ತಿ ಖರೀದಿ ಮಾಡಿದ ಬಹುಭಾಷಾ ನಟ ಪ್ರಭುದೇವ

    ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ನಟಿಸಿರುವ ಸಿನಿಮಾಗಳು ಮಕಾಡೆ ಮಲಗಿವೆ. ‘ವಿಶ್ವಾಂಭರ’ ಸಿನಿಮಾ ಮೂಲಕ ಸಕ್ಸಸ್ ರುಚಿಯನ್ನು ಸವಿಯಲು ಮೆಗಾಸ್ಟಾರ್ ಕಾಯ್ತಿದ್ದಾರೆ.

  • ಚಿರಂಜೀವಿ ಚಿತ್ರಕ್ಕೆ ತ್ರಿಷಾ ನಾಯಕಿ: ‘ವಿಶ್ವಂಭರ’ ಟೀಮ್ ಸೇರಿಕೊಂಡ ನಟಿ

    ಚಿರಂಜೀವಿ ಚಿತ್ರಕ್ಕೆ ತ್ರಿಷಾ ನಾಯಕಿ: ‘ವಿಶ್ವಂಭರ’ ಟೀಮ್ ಸೇರಿಕೊಂಡ ನಟಿ

    ಕ್ಷಿಣದ ಬಹುಬೇಡಿಕೆಯ ನಟಿ ತ್ರಿಷಾ (Trisha) ಮತ್ತೆ ಚಿರಂಜೀವಿ (Chiranjeevi)ಸಿನಿಮಾಗೆ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ಚಿತ್ರತಂಡವೇ ತಮ್ಮ ನಾಯಕಿಯನ್ನು ಘೋಷಿಸಿದೆ. ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ದಿನದಂದು ವಿಶ್ವಂಭರ ಟೈಟಲ್ ಟೀಸರ್ (Title Teaser) ಮೂಲಕ ಸುಗ್ಗಿ ಸಂಭ್ರಮವನ್ನು ಚಿತ್ರತಂಡ ಹೆಚ್ಚಿಸಿತ್ತು.

    ಇದು ಚಿರು ನಟಿಸುತ್ತಿರುವ 156ನೇ ಸಿನಿಮಾವಾಗಿದ್ದು, ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾದ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವಂಭರ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

    ವಿಶ್ವಂಭರ (Vishwambhara) ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

     

    ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನಕಾರರು. ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

  • ಚಿರು ನಟನೆಯ 156ನೇ ಸಿನಿಮಾದ ಟೈಟಲ್ ಟೀಸರ್ ರಿಲೀಸ್

    ಚಿರು ನಟನೆಯ 156ನೇ ಸಿನಿಮಾದ ಟೈಟಲ್ ಟೀಸರ್ ರಿಲೀಸ್

    ವಾಲ್ಟೇರ್ ವೀರಯ್ಯ ಸಿನಿಮಾ ಮೂಲಕ ಕಳೆದ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆ ಬಾಡೂಟ ಬಡಿಸಿದ್ದ ಮೆಗಾಸ್ಟಾರ್ ಚಿರಂಜೀವಿ (Chiranjeevi), ಈ ವರ್ಷ ವಿಶ್ವಂಭರ ಟೈಟಲ್ ಟೀಸರ್ (Title Teaser) ಮೂಲಕ ಸುಗ್ಗಿ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಚಿರು ನಟಿಸುತ್ತಿರುವ 156ನೇ ಸಿನಿಮಾದ ಟೈಟಲ್ ಟೀಸರ್ ಸಂಕ್ರಾಂತಿ ವಿಶೇಷವಾಗಿ ನಿನ್ನೆ ಬಿಡುಗಡೆಯಾಗಿದೆ.

    ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾದ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವಂಭರ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

    ವಿಶ್ವಂಭರ (Vishwambhara) ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನಕಾರರು. ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.